ಬೆಂಗಳೂರು : ಇರಾನ್ ಇಸ್ರೇಲ್ ಯುದ್ಧದ ಪರಿಣಾಮದಿಂದ ಇದೀಗ ಭಾರತದ ಡಿಫೆನ್ಸ್ ಹಾಗೂ ರೈಲ್ವೆ ವಲಯಕ್ಕೂ ಯುದ್ಧದ ಎಫೆಕ್ಟ್ ತಟ್ಟಿದೆ. ಕಚ್ಚಾ ವಸ್ತು ಸರಬರಾಜು ಮಾಡುತ್ತಿದ್ದ ಆಟೋಮೊಬೈಲ್ ಇಂಡಸ್ಟ್ರಿ ಬಂದ್ ಮಾಡಲಾಗಿದೆ. ಬೆಂಗಳೂರಿನ ಪೀಣ್ಯದಲ್ಲಿರುವ ಶ್ರೀ ಲಕ್ಷ್ಮಿ ಪ್ರೊಫೈಲ್ ಇಂಡಸ್ಟ್ರಿ ಇದೀಗ ಬಂದಾಗಿದೆ.
ಡಿಫೆನ್ಸ್ ವಾಹನಗಳ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು. ವಿಪ್ರೊ ಸೇರಿದಂತೆ ಹಲವು ಇಂಡಸ್ಟ್ರಿಗಳಿಗೆ ಕಚ್ಚಾ ವಸ್ತು ಸಿದ್ಧಪಡಿಸಿ ಸರಬರಾಜು ಮಾಡಲಾಗುತ್ತಿತ್ತು. ಕಳೆದ ಒಂದು ವಾರದಿಂದ ಎಲ್ಪಿಜಿ ಗ್ಯಾಸ್ ಸಿಗುತ್ತಿಲ್ಲ. ಪೈಲ್ ಇಂಡಸ್ಟ್ರಿಗೆ ಪ್ರತಿನಲ್ಲಿ 8 ರಿಂದ 10 ಎಲ್ಪಿಜಿ ಸಿಲಿಂಡರ್ ಗಳು ಬೇಕು. ಆದರೆ ಸಿಲಿಂಡರ್ ಗಳು ಕೊರತೆಯಿಂದ ಇದೀಗ ಆಟೋಮೊಬೈಲ್ ಇಂಡಸ್ಟ್ರಿ ಬಂದ್ ಆಗಿದೆ.
ಒಂದು ವಾರದಿಂದ ಇಂಡಿಯನ್ ಆಯಿಲ್ ಕಂಪನಿ ಸಿಲಿಂಡರ್ ನೀಡುತ್ತಿಲ್ಲ. ಗ್ಯಾಸ್ ಇಲ್ಲದೆ ಇಂಡಸ್ಟ್ರಿ ಸಂಪೂರ್ಣ ಮಾಡಲಾಗಿದೆ ಕೆಲಸ ಹಾಗೂ ವೇತನ ಕಡಿತದ ಆತಂಕದಲ್ಲಿ ಉದ್ಯೋಗಗಳು ಇದ್ದಾರೆ. ಕಮರ್ಷಿಯಲ್ ಸಿಲಿಂಡರ್ ಕೊರತೆ ಹಿನ್ನೆಲೆ ಇಂಡಸ್ಟ್ರಿಗಳು ಬಂದ್ ಆಗಿವೆ. ಇದೇ ರೀತಿ ಮುಂದುವರೆದರೆ ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕೆಲಸ ಕಳೆದು ಕೊಂಡು ಬೀದಿಗೆ ಬರುವ ಪರಿಸ್ಥಿತಿ ಎದುರಾಗಲಿದೆ.








