ಮಂಡ್ಯ: ಜಿಲ್ಲೆಯಲ್ಲಿ ಆಟೋಗಳನ್ನು ಕದಿಯುತ್ತಿದ್ದ ಕಳ್ಳರನ್ನು ಗ್ಯಾಂಗ್ವೊಂದು ಹಲಗೂರು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಕನಕಪುರ, ಸಾತನೂರು, ಮೈಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವು ಕಡೆ ಕಳ್ಳತನ ಮಾಡುತ್ತಿದ್ದರು.
BIGG NEWS: ಕರ್ನಾಟಕ- ಮಹಾರಾಷ್ಟ್ರದ ಗಡಿ ವಿವಾದ; ಕೋಲ್ಲಾಪುರದಲ್ಲಿ ನೀಷೇಧಾಜ್ಞೆ ಜಾರಿ
ಅರುಣ್, ಜಿ.ಆರ್. ಗಿರೀಶ್, ಪಿ.ಸಚಿನ್ ಬಂಧಿತ ಆರೋಪಿಗಳು.ಇವರಿಂದ 15 ಲಕ್ಷ ಮೌಲ್ಯದ ಏಳು ಆಟೋ, ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಮಳವಳ್ಳಿ ಮತ್ತು ಹಲಗೂರು ವ್ಯಾಪ್ತಿಯಲ್ಲಿ ಸರಣಿ ಆಟೋ ಮತ್ತು ಸ್ಕೂಟರ್ ಕಳ್ಳತನವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ರಾತ್ರಿ ಗಸ್ತು ಹೆಚ್ಚು ಮಾಡುವಂತೆ ಆದೇಶಿಸಿದ್ದಾರೆ. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ. ಈ ತಂಡ ಮಂಡ್ಯ ಅಲ್ಲದೇ ಹೊರ ಜಿಲ್ಲೆಗಳಲ್ಲೂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.