ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅಂತಹ ಘಟನೆಯೊಂದು ನಗರದ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.
BIGG NEWS: ಇಂದಿನಿಂದ 10 ದಿನಗಳ ಕಾಲ ಮಳೆಗಾಲ ಅಧಿವೇಶನ; ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭ
ಇಲ್ಲೊಬ್ಬ ವ್ಯಕ್ತಿ ನೀರು ಕೊಡು ಸ್ವಲ್ಪ ಅಂದಿದಕ್ಕೆ ಕೊಲೆಯೇ ನಡೆದು ಹೋಯ್ತು.
ಹೌದು ಆಟೋ ಚಾಲಕನೊಬ್ಬ ಬೇರೆ ಆಟೋ ಚಾಲಕನಿಗೆ ಮಗಾ ಸ್ವಲ್ಪ ನೀರು ಇದ್ದರೆ ಕೊಡು ಅಂತಾ ಕೇಳಿದ್ದನೆ. ಇದಕ್ಕೆ ಕೋಪಗೊಂಡು ಆತ ಕೊಲೆ ಮಾಡಿರುವ ಘಟನೆ ಜಾಲಹಳ್ಳಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.
25 ವರ್ಷದ ಸಿದ್ದಿಕ್ ಕೊಲೆಯಾದ ಯುವಕ. ಈತ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ನಿನ್ನೆ ಜಾಲಹಳ್ಳಿ ಕ್ರಾಸ್ ಕಡೆ ಬಂದಿದ್ದಾನೆ.
BIGG NEWS: ಇಂದಿನಿಂದ 10 ದಿನಗಳ ಕಾಲ ಮಳೆಗಾಲ ಅಧಿವೇಶನ; ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭ
ಈ ವೇಳೆ ಮತ್ತೊಬ್ಬ ಆಟೋ ಚಾಲಕ ಅಜಯ್ ಜೊತೆ ನೀರು (Water) ಕೇಳಿದ್ದಾನೆ. ಏನೋ ಮಗಾ ನೀರು ಇದ್ರೆ ಕೊಡು ಎಂದಿದ್ದಾನೆ. ಇಷ್ಟಕ್ಕೆ ಅಜಯ್ ರೊಚ್ಚಿಗೆದ್ದು, ಏನೋ ಮಗಾ ಅಂತೀಯಾ ಎನ್ನುತ್ತಲೇ ಸಿದ್ದಿಕ್ಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆತನಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಿಕ್ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.