Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೈಪುರದ ಪ್ರಸಿದ್ಧ ‘ಗುಲಾಬಿ ಆನೆ’ ಸಾವು: ವೈರಲ್ ಫೋಟೋಶೂಟ್‌ಗಾಗಿ ಬಣ್ಣ ಬಳಿದಿದ್ದೇ ಮುಳುವಾಯಿತೇ? ಪ್ರಾಣಿ ಪ್ರೇಮಿಗಳ ಆಕ್ರೋಶ!

31/03/2026 12:09 PM

SHOCKING : ಭಾರತದ ಈ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮದ್ಯ ಸೇವಿಸುತ್ತಾರೆ : ವರದಿ

31/03/2026 12:03 PM

ವಯಸ್ಕರಿಗೆ ತಮ್ಮಿಷ್ಟದಂತೆ ಬದುಕುವ ಹಕ್ಕಿದೆ: ಲಿವ್-ಇನ್ ಜೋಡಿಗೆ ಹೈಕೋರ್ಟ್ ರಕ್ಷಣೆ; ಕುಟುಂಬದ ಬೆದರಿಕೆಗೆ ನ್ಯಾಯಾಲಯದ ಬ್ರೇಕ್!

31/03/2026 11:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ‘ನರ್ಸಿಂಗ್ ಕಾಲೇಜು’ಗಳ ಶುಲ್ಕ ನಿಯಂತ್ರಣಕ್ಕೆ ಪ್ರಾಧಿಕಾರ ರಚನೆ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್
KARNATAKA

ರಾಜ್ಯದಲ್ಲಿ ‘ನರ್ಸಿಂಗ್ ಕಾಲೇಜು’ಗಳ ಶುಲ್ಕ ನಿಯಂತ್ರಣಕ್ಕೆ ಪ್ರಾಧಿಕಾರ ರಚನೆ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

By kannadanewsnow0903/09/2024 7:01 PM

ಬೆಂಗಳೂರು: ರಾಜ್ಯದ ನರ್ಸಿಂಗ್‌ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ. ಇದರಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ಹೊರೆ ಆಗುವುದನ್ನು ತಪ್ಪಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ.

ರಾಜ್ಯದ ನರ್ಸಿಂಗ್‌ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ನಮ್ಮ ಕಚೇರಿಗೆ ಹಲವಾರು ದೂರುಗಳು ಸಲ್ಲಿಕೆಯಾಗಿವೆ. ಇದರಿಂದ ವಿದ್ಯಾರ್ಥಿಗಳ ಹಣಕಾಸಿನ ಹೊರೆಯನ್ನು ಹೊರಬೇಕಾಗಿದೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ 5 ಜನ ಸದಸ್ಯರುಗಳ “ಶುಲ್ಕ ನಿಯಂತ್ರಣ ಪ್ರಾಧಿಕಾರವನ್ನು” ರಚಿಸಲಾಗುವುದು. ನರ್ಸಿಂಗ್‌ ಕಾಲೇಜುಗಳ ಶುಲ್ಕಗಳನ್ನ ಪರಿಶೀಲಿಸುವ ಕಾರ್ಯವನ್ನು ಈ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಸರಕಾರ ನಿಗದಿಪಡಿಸಿರುವ ಶುಲ್ಕಕ್ಕೂ ಹೆಚ್ಚು ಶುಲ್ಕವನ್ನು ವಸೂಲು ಮಾಡುತ್ತಿರುವ ಸಂಸ್ಥೆಗಳ ಎಸೆನ್ಶಿಯಲ್‌ ಸರ್ಟಿಫಿಕೇಟ್‌ ಹಾಗೂ ಫೀಸಿಬಲಿಟಿ ಸರ್ಟಿಫಿಕೇಟ್‌ ನ್ನ ರದ್ದುಗೊಳಿಸುವಂತೆಯೂ ಅಧಿಕಾರಿಗಳಿಗೆ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌ ಸೂಚನೆ ನೀಡಿದರು .

ರಾಜ್ಯದ ನರ್ಸಿಂಗ್‌ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ. ಇದರಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ಹೊರೆ ಆಗುವುದನ್ನು ತಪ್ಪಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್… pic.twitter.com/FQitbTU8zJ

— DIPR Karnataka (@KarnatakaVarthe) September 3, 2024

ಪ್ರಸ್ತುತ ಸರಕಾರಿ ಕೋಟಾದ ಅಡಿಯಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳಿಗೆ 10,000. ಮ್ಯಾನೇಜ್‌ ಮೆಂಟ್‌ ಕೋಟಾದ ಅಡಿಯಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳಿಗೆ 1 ಲಕ್ಷ ಮತ್ತು ನಾನ್‌-ಕರ್ನಾಟಕ ವಿದ್ಯಾರ್ಥಿಗಳಿಗೆ 1.40 ಲಕ್ಷ ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ 611 ನರ್ಸಿಂಗ್‌ ಕಾಲೇಜುಗಳಿದ್ದು 35,000 ಸೀಟ್‌ ಗಳು ಲಭ್ಯವಿವೆ. ಅಲ್ಲದೇ, ಈ ಶುಲ್ಕವನ್ನು ಶೇಕಡಾ 20 ರಷ್ಟು ಹೆಚ್ಚಿಸುವಂತೆ ನರ್ಸಿಂಗ್‌ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನೀಧಿಗಳು ಇತ್ತೀಚೆಗೆ ಮಾಡಿದ ಮನವಿಯನ್ನು ಸಚಿವ ಶರಣ ಪ್ರಕಾಶ್‌ ಪಾಟೀಲ್‌ ತಿರಸ್ಕರಿಸಿದ್ದಾರೆ.

ಈ ಸಮಿತಿಯು ಬಿಎಸ್ಸಿ, ನರ್ಸಿಂಗ್‌ ಹಾಗೂ ಜನರಲ್‌ ನರ್ಸಿಂಗ್‌ ಮತ್ತು ಮಿಡ್‌ವೈಪ್ರೀ (ಜಿಎನ್‌ಎಂ) ಡಿಪ್ಲಮೋ ಪ್ರೋಗ್ರಾಂ ಗಳ ಶುಲ್ಕದ ಬಗ್ಗೆಯೂ ನಿಗಾವಹಿಸಲಿದೆ.

ಹಾಗೆಯೇ, ಜಿಲ್ಲಾಧಿಕಾರಿಗಳ ಸಭೆಯನ್ನು ಆಯೋಜಿಸಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಜಿಎನ್‌ಎಂ ನರ್ಸಿಂಗ್‌ ಕಾಲೇಜುಗಳಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಒಂದು ತಿಂಗಳ ಒಳಗಾಗಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲು ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿಗಳಾದ ಮೊಹಮ್ಮದ್‌ ಮೋಶಿನ್‌ ಅವರಿಗೆ ಸೂಚನೆ ನೀಡಿದರು.

ಬಿಎಸ್‌ಸಿ ನರ್ಸಿಂಗ್‌ ಕಾಲೇಜುಗಳಿಗೆ ಸಂಬಂಧಿಸಿದಂತೆ ಒಂದು ಪರಿಶೀಲನಾ ತಂಡವನ್ನು ರಚಿಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಬಿ.ಎಲ್‌ ಸುಜಾತಾ ಅವರಿಗೆ ಸೂಚನೆ ನೀಡಿದರು.

ನರ್ಸಿಂಗ್‌ ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯಗಳು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು, ಲ್ಯಾಬೋರೋಟರಿಗಳು, ಗ್ರಂಥಾಲಯಗಳು ಹಾಗೂ ಹೈಜೀನ್‌ ಸ್ಟಾಂರ್ಡ್‌ಡ್‌ ಇಲ್ಲದೇ ಇರುವ ಬಗ್ಗೆ ಹಲವು ದೂರುಗಳು ನಮ್ಮ ಕಚೇರಿಗೆ ಸಲ್ಲಿಕೆಯಾಗಿವೆ. ಹೆಚ್ಚು ಶುಲ್ಕವನ್ನು ತಗೆದುಕೊಳ್ಳುವುದರ ಹೊರತಾಗಿಯೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಸ್ಥೆಗಳು ವಿಫಲವಾಗಿವೆ. ಅಗತ್ಯ ಸೌಲಭ್ಯಗಳನ್ನು ಹೊಂದಿರದೇ ಇರುವ ನರ್ಸಿಂಗ್‌ ಕಾಲೇಜುಗಳ ಅನುಮತಿಯನ್ನ ಹಿಂದಕ್ಕೆ ಪಡೆಯಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

BIG NEWS: ಸೆಪ್ಟೆಂಬರ್.22ರಂದು 402 ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ ಹುದ್ದೆಗಳಿಗೆ ‘ಲಿಖಿತ ಪರೀಕ್ಷೆ’ | PSI Recruitment

BIG NEWS : ಏನ್ರಿ ಮೀಡಿಯಾ?…ಎಂದಿದ್ದ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಟಿವಿ ಬೇಕೆ ಬೇಕಂತೆ!

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ

Share. Facebook Twitter LinkedIn WhatsApp Email

Related Posts

ಜನಸಾಮಾನ್ಯರಿಗೆ ಬಿಗ್ ಶಾಕ್ : ನಾಳೆಯಿಂದ ನೀರು, ವಿದ್ಯುತ್, ಟೋಲ್ ದರ ಏರಿಕೆ.!

31/03/2026 11:30 AM2 Mins Read

ಸಾಮಾನ್ಯ ಜನರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ನಾಳೆಯಿಂದ ವಿದ್ಯುತ್, ಟೋಲ್, ನೀರಿನ ದರ ಏರಿಕೆ.!

31/03/2026 11:24 AM2 Mins Read

ದೇಶದಲ್ಲಿ ಈ ವರ್ಷ ಉತ್ತಮ ಮಳೆ-ಬೆಳೆ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಅತಿವೃಷ್ಟಿ : ಗವಿಮಠದ ಪಂಚಾಂಗ ಭವಿಷ್ಯ.!

31/03/2026 10:50 AM1 Min Read
Recent News

ಜೈಪುರದ ಪ್ರಸಿದ್ಧ ‘ಗುಲಾಬಿ ಆನೆ’ ಸಾವು: ವೈರಲ್ ಫೋಟೋಶೂಟ್‌ಗಾಗಿ ಬಣ್ಣ ಬಳಿದಿದ್ದೇ ಮುಳುವಾಯಿತೇ? ಪ್ರಾಣಿ ಪ್ರೇಮಿಗಳ ಆಕ್ರೋಶ!

31/03/2026 12:09 PM

SHOCKING : ಭಾರತದ ಈ ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮದ್ಯ ಸೇವಿಸುತ್ತಾರೆ : ವರದಿ

31/03/2026 12:03 PM

ವಯಸ್ಕರಿಗೆ ತಮ್ಮಿಷ್ಟದಂತೆ ಬದುಕುವ ಹಕ್ಕಿದೆ: ಲಿವ್-ಇನ್ ಜೋಡಿಗೆ ಹೈಕೋರ್ಟ್ ರಕ್ಷಣೆ; ಕುಟುಂಬದ ಬೆದರಿಕೆಗೆ ನ್ಯಾಯಾಲಯದ ಬ್ರೇಕ್!

31/03/2026 11:39 AM

ಜನಸಾಮಾನ್ಯರಿಗೆ ಬಿಗ್ ಶಾಕ್ : ನಾಳೆಯಿಂದ ನೀರು, ವಿದ್ಯುತ್, ಟೋಲ್ ದರ ಏರಿಕೆ.!

31/03/2026 11:30 AM
State News
KARNATAKA

ಜನಸಾಮಾನ್ಯರಿಗೆ ಬಿಗ್ ಶಾಕ್ : ನಾಳೆಯಿಂದ ನೀರು, ವಿದ್ಯುತ್, ಟೋಲ್ ದರ ಏರಿಕೆ.!

By kannadanewsnow5731/03/2026 11:30 AM KARNATAKA 2 Mins Read

ಬೆಂಗಳೂರು: ಹೊಸ ಆರ್ಥಿಕ ವರ್ಷದ ಆರಂಭದ ದಿನವಾದ ಏಪ್ರಿಲ್ 1ರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ. ವಿದ್ಯುತ್, ನೀರು ಮತ್ತು…

ಸಾಮಾನ್ಯ ಜನರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ನಾಳೆಯಿಂದ ವಿದ್ಯುತ್, ಟೋಲ್, ನೀರಿನ ದರ ಏರಿಕೆ.!

31/03/2026 11:24 AM

ದೇಶದಲ್ಲಿ ಈ ವರ್ಷ ಉತ್ತಮ ಮಳೆ-ಬೆಳೆ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಅತಿವೃಷ್ಟಿ : ಗವಿಮಠದ ಪಂಚಾಂಗ ಭವಿಷ್ಯ.!

31/03/2026 10:50 AM

BREAKING : ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ | 1st PUC Result 2026

31/03/2026 10:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.