Author: KNN IT TEAM

ನವದೆಹಲಿ: ಶಿರಾಡಿ ಘಾಟ್‌ನಲ್ಲಿ 23 ಕಿ.ಮೀ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಂಸದ ನಳೀನ್‌ ಕುಮಾರ್ ಕಟೀಲ್‌ ಟ್ವಿಟ್ ಮಾಡಿದ್ದು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾರನಹಳ್ಳಿ-ಅಡ್ಡಹೊಳೆ(ಶಿರಾಡಿ ಘಾಟ್) ಭಾಗದ ಚತುಷ್ಪತ ರಸ್ತೆ ಕಾಮಗಾರಿಗೆ 1976 ಕೋಟಿ ರೂ. ಮೊತ್ತದ ಬಿಡ್ ಆಹ್ವಾನಿಸಿದೆ. ಶಿರಾಡಿ ಘಾಟ್‌ನಲ್ಲಿ 15,000 ಕೋಟಿ ಮೊತ್ತದ 23 ಕಿ.ಮೀ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿಗೆ ಆದೇಶಿಸಿದೆ ಅಂತ ಹೇಳಿದ್ದಾರೆ. ಇದೇ ವೇಳೇ ಅವರು ಇದರ ಜತೆಗೆ, ಬೆಂಗಳೂರು-ಮಂಗಳೂರು ಹೆದ್ದಾರಿ ಭಾಗವಾದ ಸಕಲೇಶಪುರದಿಂದ ಮಾರನಹಳ್ಳಿವರೆಗಿನ ರಸ್ತೆ ಭಾಗದ ದುರಸ್ತಿಗೂ ನಿತಿನ್‌ ಗಡ್ಕರಿ ಅವರು ಆದೇಶಿಸಿದ್ದಾರೆ. ಈ ಎಲ್ಲ ಕಾಮಗಾರಿಗಳಿಂದ ಬೆಂಗಳೂರು-ಮಂಗಳೂರು ರಸ್ತೆ ಸಂಚಾರ ಆರಾಮದಾಯಕವಾಗಲಿದೆ ಅಂತ ತಿಳಿಸಿದ್ದಾರೆ. ಬೆಂಗಳೂರು-ಮಂಗಳೂರು ಸಂಚಾರದ ಅವಧಿ ಕಡಿಮೆಯಾಗಿ, ಪ್ರಯಾಣ ಸುಗಮವಾಗಲಿದೆ. ಇದಕ್ಕೆ ಅನುವು ಮಾಡಿಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.…

Read More

ವಿಜಯಪುರ : ಜ್ಞಾನಯೋಗಾಶ್ರಮದ ಪೂಜ್ಯ ಶ್ರೀಗಳಾದ ಸಿದ್ಧೇಶ್ವರ ಸ್ವಾಮಿಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.  ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜಕ್ಕೆ ಚಿಕಿತ್ಸಕ ಮಾರ್ಗದರ್ಶನ ನೀಡಿದ ಶ್ರೇಷ್ಠ ಸಂತರಾದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀಗಳಾದ ಸಿದ್ಧೇಶ್ವರ ಸ್ವಾಮಿಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ. ಅವರ ಪಾಂಡಿತ್ಯ, ಆಧ್ಯಾತ್ಮಿಕ ಮಾರ್ಗದರ್ಶನ, ಸ್ಪೂರ್ತಿದಾಯಕ ಪ್ರವಚನಗಳು ಜನತೆ ಇನ್ನಷ್ಟು ಸಿಗಬೇಕೆಂದು ಆಶಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ. https://twitter.com/kharge/status/1609886232439582721 https://kannadanewsnow.com/kannada/writer-dr-chandrasekhar-kambara-files-police-complaint-against-sambasiva-prahasana-drama/ https://kannadanewsnow.com/kannada/vvs-laxman-named-indias-next-head-coach-dravid-to-be-replaced-by-laxman/ https://kannadanewsnow.com/kannada/big-twist-in-priyapatnam-church-attack-case-one-arrested-for-non-payment-of-salary/

Read More

ಮೈಸೂರು : ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ವರದಿಯಾಗಿತ್ತು. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ. ವಿಚಾರಣೆ ವೇಳೆ ಆರೋಪಿ ಸಂಬಳ ನೀಡದಿದ್ದಕ್ಕೆ ಕಳ್ಳತನ ಮಾಡಲಾಗಿದೆ ಎಂದು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದು, ವಿಶ್ವ ಎಂಬ ಪೌರ ಕಾರ್ಮಿಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಎರಡು ತಿಂಗಳಿನಿಂದ ಚರ್ಚ್ನಲ್ಲಿ ಸಂಬಳ ಕೊಟ್ಟಿರಲಿಲ್ಲ. ಕ್ರಿಸ್ ಮಸ್ ಹಬ್ಬದ ವೇಳೆ ಫಾದರ್ ಜೊತೆ ಮಾತನಾಡಲು ಚರ್ಚ್ಗೆ ಬಂದಿದ್ದ. ಈ ವೇಳೆ ಫಾದರ್ ಭೇಟಿಯ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಹುಂಡಿ ಕಳ್ಳತನ ಮಾಡಲು ನಿರ್ಧಾರ ಮಾಡಿದ್ದನು, ಅಂದಾಜು 2 ರಿಂದ 3 ಸಾವಿರ ಹಣ ಕಳ್ಳತನ ಮಾಡಿದ್ದಾನೆ ಎಂದು ಹೇಳಿದ್ದಾರೆ. ಕಾಣಿಕೆ ಹುಂಡಿ ಕಳ್ಳತನ ಮಾಡಿ ಬಾಲ ಏಸುವಿನ ಮೂರ್ತಿ, ತೊಟ್ಟಿಲು ಧ್ವಂಸ ಮಾಡಲಾಗಿತ್ತು. ಚರ್ಚ್ ಹೊರಗಿದ್ದ…

Read More

ಬೆಂಗಳೂರು: ಡಾ.ಚಂದ್ರಶೇಖರ ಕಂಬಾರ ಅವರ ಸಾಂಬಶಿವ ಪ್ರಹಸನ ನಾಟಕವನ್ನು ಅಸಹ್ಯಕರವಾಗಿ ತಿರುಚಿ ಪ್ರದರ್ಶನ ಸಂಬಂಧ, ಇದೀಗ ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಕ್ಕಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಮೈಸೂರು ಪೊಲೀಸ್ ಕಮೀಷನರ್ ಅವರಿಗೆ ಪತ್ರ ಬರೆದಿರುವಂತ ಡಾ.ಚಂದ್ರಶೇಖರ ಕಂಬಾರ ಅವರು, ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬಾ ವಿಷಾಧವಾಗಿದೆ. ನನ್ನ ಅನುಮತಿ ಕೇಳದೇ ನಾಚಕವನ್ನು ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾಧಕರ. ನನ್ನ ಯಾವುದೇ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇರುವುದು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ, ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಹಾಗೂ ಈ ಅಹಿತರಕ ವಾತಾವರಣಕ್ಕೆ ಕಾರಣರಾದ ಸಂಬಂಧಪಟ್ಟ ಎಲ್ಲರ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

Read More

ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶ್ವಕಪ್ ವರ್ಷದಲ್ಲಿ ಸಕ್ರಿಯ ಮೋಡ್’ನಲ್ಲಿದೆ. ಇನ್ನು ಈ ವರ್ಷದ ಕೊನೆಯಲ್ಲಿ ನಡೆಯಲಿರುವ 50 ಓವರ್ಗಳ ಪಂದ್ಯಾವಳಿಯ ಯೋಜನೆಯನ್ನ ಈಗಾಗಲೇ ಪ್ರಾರಂಭಿಸಿದೆ. ಜನವರಿ 1ರ ಪರಿಶೀಲನಾ ಸಭೆಯು ಮುಂದಿನ ಹಾದಿಗೆ ಅಡಿಪಾಯ ಹಾಕಿದ್ದು, ಮುಖ್ಯ ತರಬೇತುದಾರನ ಕಡೆಗೆ ಗಮನ ತಿರುಗುವ ಸಾಧ್ಯತೆಯಿದೆ. ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದವು 2023ರ ವಿಶ್ವಕಪ್ ವರೆಗೆ ಇದ್ದು, ಅವರು ವಿಸ್ತರಣೆಯನ್ನು ಪರಿಗಣಿಸದಿದ್ದರೆ, ಟೀಂ ಇಂಡಿಯಾ ಮುಂದಿನ ಮುಖ್ಯ ತರಬೇತುದಾರರಾಗಿ ಭಾರತೀಯ ಕ್ರಿಕೆಟ್ ಮಂಡಳಿಯು ಎನ್ಸಿಎಯ ಕ್ರಿಕೆಟ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನ ಆಯ್ಕೆ ಮಾಡಲಿದೆ ಎಂದು ವಿಶ್ವಾಸಾರ್ಹ ಮೂಲಗಳು ವರದಿ ಮಾಡಿವೆ. https://kannadanewsnow.com/kannada/bank-owned-by-minister-sasikala-jolle-robbed-20-lakhs-in-cash-40-lakhs-worth-of-gold-jewelery-by-khadeems/ https://kannadanewsnow.com/kannada/team-india-new-jersey-team-india-launches-new-jersey-for-sri-lanka-series-do-you-know-how-it-is-the-new-look-of-the-players/ https://kannadanewsnow.com/kannada/good-news-for-ksrtc-driving-staff-incentives-announced-for-those-on-duty-on-casual-contract/

Read More

ಬೆಂಗಳೂರು : ನಾಳೆ ವಿಜಯಪುರಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದು, ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀಗಳನ್ನು ಭೇಟಿ ಮಾಡಿದ್ದಾರೆ. ನಾಳೆ ನಾಳೆ ವಿಜಯಪುರಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದು, ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇನ್ನೂ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರ ವಾಗಿದೆ ಎಂದು ವೈದ್ಯ ಮೂಲಿಮನಿ ಮಾಹಿತಿ ನೀಡಿದ್ದಾರೆ. ಸಿದ್ದೇಶ್ವರ ಶ್ರೀಗಳ ನಾಡಿಮಿಡಿತದಲ್ಲಿ ಸ್ವಲ್ಪ ಏರುಪೇರು ಆಗಿದೆ. ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತಿದೆ. ಹೀಗಾಗಿ ಆಕ್ಸಿಜನ್ ಕೊಡಲಾಗುತ್ತಿದೆ. ಸಿದ್ದೇಶ್ವರ ಸ್ವಾಮೀಜಿಯವರ ಪಲ್ಸ್, ಬಿಪಿ, ಸ್ವಲ್ಪ ಕಡಿಮೆಯಾಗಿದೆ. ಅವರು ಬೆಳಗ್ಗೆಯಿಂದಲೂ ಆಹಾರವನ್ನು ಸೇವಿಸಿಲ್ಲ ಎಂದು ಹೇಳಿದ್ದಾರೆ. https://kannadanewsnow.com/kannada/good-news-for-ksrtc-driving-staff-incentives-announced-for-those-on-duty-on-casual-contract/ https://kannadanewsnow.com/kannada/telephone-call-to-mla-ut-khader-in-the-name-of-rahul-gandhi-p-a-attempt-to-defraud/

Read More

ಬೆಂಗಳೂರು: ಸಾಂದರ್ಭಿಕ ಒಪ್ಪಂದದ ಮೇಲೆ ಕರ್ತವ್ಯ ನಿರ್ವಹಿಸುವಂತೆ ಚಾಲನಾ ಸಿಬ್ಬಂದಿಗಳಿಗೆ ಪ್ರೋತ್ಸಾಹಧನವನ್ನು ನೀಡುವುದಾಗಿ ಕೆಎಸ್ ಆರ್ ಟಿಸಿ ಘೋಷಿಸಿದೆ. ಈ ಮೂಲಕ ಚಾಲನಾ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಸಾರಿಗೆ ಬಸ್ ಗಳನ್ನು ಸಾಂಧರ್ಬಿಕ ಒಪ್ಪಂದದ ಮೇಲೆ ಒದಗಿಸಲಾಗುತ್ತಿದೆ. ಹೀಗೆ ತೆರಳುವಂತ ಚಾಲನಾ ಸಿಬ್ಬಂದಿಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ದಿನಾಂಕ 24-12-2022ರಂದು ನಡೆದ ಸಿಸಿಜಿ ಸಭೆಯಲ್ಲಿ ಚರ್ಚಿಸಿಂದೆತ ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ. ದಿನಾಂಕ 01-01-2023ರಿಂದ ಜಾರಿಗೆ ಬರುವಂತೆ ಸಾಂದರ್ಭಿಕ ಒಪ್ಪಂದದ ಮೇಲೆ ತೆರಳುವ ಚಾಲನಾ ಸಿಬ್ಬಂದಿಗಳಿಗೆ ಎಲ್ಲಾ ವರ್ಗದ ಬಸ್ಸುಗಳಿಗೆ ದಿನ ಒಂದಕ್ಕೆ ರೂ.100 ಪ್ರೋತ್ಸಾಹ ಧನ ಭತ್ಯೆ ನೀಡಿ ಆದೇಶಿಸಿದೆ.

Read More

ಮಂಗಳೂರು : ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಗೆ ( UT Khadar) ವಂಚಿಸಲು ಯತ್ನ ನಡೆಸಲಾಗಿದ್ದು, ವ್ಯಕ್ತಿಯೊಬ್ಬ ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 8146006626 ಸಂಖ್ಯೆಯಿಂದ ಶಾಸಕ ಖಾದರ್ ಗೆ ಎರಡು ಬಾರಿ ಕರೆ  ಬಂದಿದ್ದು, ಕರೆ ಸ್ವೀಕರಿಸದಿದ್ದಕ್ಕೆ ವ್ಯಕ್ತಿ ನಾನು ರಾಹುಲ್ ಪಿ ಎ ಕಾನಿಷ್ಕ ಸಿಂಗ್ ಎಂದು ಮೆಸೇಜ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಶಾಸಕ ಖಾದರ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/arvind-limbavali-is-not-involved-in-businessman-pradeeps-suicide-case-cm-bommai-clarifies/ https://kannadanewsnow.com/kannada/bigg-news-important-decision-by-central-government-happy-news-for-pakistani-hindus/ https://kannadanewsnow.com/kannada/oil-kicks-off-new-year-rs-25-crore-in-a-single-day-in-mysore-sale-of-alcohol-worth/

Read More

ಮೈಸೂರು : ಮೈಸೂರಿನಲ್ಲೂ ಮದ್ಯ ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದು, ಭರ್ಜರಿ ಎಣ್ಣೆ ಸೋಲ್ಡ್ ಸೌಟ್ ಆಗಿದೆ. ಹೌದು. ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಭರ್ಜರಿ ಮದ್ಯ ಮಾರಾಟವಾಗಿದ್ದು, ಡಿ.31 ರಂದು 25 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ‘ಮದ್ಯ’ ಮಾರಾಟವಾಗಿದೆ. ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಡಿಸೆಂಬರ್ 31ರಂದು 25 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ, ಇಯರ್ ಎಂಡ್ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿತ್ತು, ಅಬಕಾರಿ ಇಲಾಖೆಗೆ ಭಾರೀ ಆದಾಯ ತಂದುಕೊಟ್ಟಿದೆ. ಡಿಸೆಂಬರ್ 27 ರಂದು 3.57 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 28 ರಂದು 2.31 ಲಕ್ಷ ಲೀಟರ್ ಮದ್ಯ , 1.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಮದ್ಯ, 1.93 ಲಕ್ಷ ಲೀಟರ್…

Read More

ಕೊಪ್ಪಳ: ಮಾಜಿ ಸಚಿವ ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆಯ ನಂತ್ರ ಬಿಜೆಪಿಯಲ್ಲಿ ತಳಮಳ ಆರಂಭಗೊಂಡಿದೆ. ಈ ಬೆನ್ನಲ್ಲೇ ಸಚಿವ ಆನಂದ್ ಸಿಂಗ್, ಜನಾರ್ಧನ ರೆಡ್ಡಿಯೇ ನನ್ನನ್ನು ರಾಜಕೀಯಕ್ಕೆ ತರೆತಂದಿದ್ದು ಎನ್ನುವ ಮೂಲಕ ಅಚ್ಚರಿಯನ್ನು ಹುಟ್ಟುಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಆತ್ಮೀಯ ಸ್ನೇಹಿತರದಲ್ಲಿ ಜನಾರ್ಧನ ರೆಡ್ಡಿಯೂ ಒಬ್ಬರಾಗಿದ್ದಾರೆ. ನಾನು ರಾಜಕೀಯಕ್ಕೆ ಬರೋದಕ್ಕೆ ಕಾರಣವೇ ಅವರಾಗಿದ್ದಾರೆ ಎಂದರು. ನಾನು 2008ರ ಚುನಾವಣೆಯಲ್ಲಿ ನಿಲ್ಲಬಾರದು ಎಂದು ನಿರ್ಧರಿಸಿದ್ದೆನು. ಆಗ ನನಗೆ ಧೈರ್ಯ ತುಂಬಿ, ಚುನಾವಣೆಗೆ ನಿಲ್ಲುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದೇ ಜನಾರ್ಧನರೆಡ್ಡಿ ಅವರು ಎಂದು ನೆನಪು ಮಾಡಿಕೊಂಡರು. https://kannadanewsnow.com/kannada/budget-session-to-begin-on-31-jan-union-budget-to-be-presented-on-1-feb/ https://kannadanewsnow.com/kannada/good-news-for-government-employees-fitment-including-da-dr-increase-salary-hike/ https://kannadanewsnow.com/kannada/team-india-new-jersey-team-india-launches-new-jersey-for-sri-lanka-series-do-you-know-how-it-is-the-new-look-of-the-players/

Read More