Author: KNN IT TEAM

ನವದೆಹಲಿ : ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕೂ ಹೆಚ್ಚು ಸಮಯವಿದ್ದರೂ, ಬಿಜೆಪಿ ಸಿದ್ಧತೆಗಳನ್ನ ಪ್ರಾರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ‘ಮಿಷನ್ 2024’ ವಹಿಸಿಕೊಂಡಿದ್ದಾರೆ. ಈ ತಿಂಗಳಿಂದಲೇ ತಮ್ಮ ಕಾರ್ಯತಂತ್ರವನ್ನ ಜಾರಿಗೆ ತರಲು ಪ್ರಾರಂಭಿಸಿದ್ದು, ಮಾಹಿತಿ ಪ್ರಕಾರ, ಶಾ ಈ ತಿಂಗಳು 11 ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಪಿಟಿಐ ವರದಿ ಪ್ರಕಾರ, ಲೋಕಸಭೆ ಪ್ರವಾಸ ಕಾರ್ಯಕ್ರಮದಡಿ ಅಮಿತ್ ಶಾ ಅವರು ಈ ತಿಂಗಳು 11 ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಪಕ್ಷದ ಸ್ಥಳೀಯ ಮುಖಂಡರನ್ನ ಭೇಟಿ ಮಾಡಿ 2024ಕ್ಕೆ ಹೋಮ್ ವರ್ಕ್ ನೀಡಲಿದ್ದಾರೆ. 2024ರಲ್ಲಿ ಮತ್ತೊಮ್ಮೆ ಮೋದಿ ಸರಕಾರವನ್ನ ತರುವುದು ಅವರ ಕಾರ್ಯಕ್ರಮದ ಗುರಿಯಾಗಿದೆ. ಈ ರಾಜ್ಯಗಳಿಗೆ ಶಾ ಭೇಟಿ.! ಪಕ್ಷದ ಮೂಲಗಳನ್ನ ಉಲ್ಲೇಖಿಸಿ, ಶಾ ಅವ್ರು ಈ ತಿಂಗಳು ಸಾಕಷ್ಟು ಬೆವರು ಹರಿಸಲಿದ್ದಾರೆ ಎಂದು ಪಿಟಿಐ ಹೇಳಿದೆ. ಜನವರಿ 5 ರಂದು ಅವರು ತ್ರಿಪುರಾಕ್ಕೆ ಭೇಟಿ ನೀಡಲಿದ್ದಾರೆ, ನಂತರ ಮರುದಿನ ಅಂದರೆ ಜನವರಿ 6 ರಂದು…

Read More

ವಿಜಯಪುರ :   ನಡೆದಾಡುವ ದೇವರು , ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.  ಇನ್ನೂ, ಆವರಣದಲ್ಲಿ ವೇದಿಕೆಯೊಂದನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಬ್ಬಿಣದ ರಾಡ್ ಬಳಸಿ ವೇದಿಕೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಸ್ವಾಮೀಜಿ ವಿಶ್ರಾಂತಿ ಕೊಠಡಿಯ ಕೆಳಗೆ ವೇದಿಕೆ ನಿರ್ಮಾಣ ಕಾರ್ಯ  ಆರಂಭಿಸಲಾಗಿದೆ. ಆಶ್ರಮದ ಸುತ್ತಾಮುತ್ತಾ ಪೊಲೀಸರು ಲೈಟ್‍ ಅಳವಡಿಕೆ ಮಾಡಿದ್ದು, ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಎಲ್ಲಾ ಕಡೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.  ಶ್ರೀಗಳನ್ನು ನೋಡಲು ಆಶ್ರಮಕ್ಕೆ ಭಕ್ತರ ದಂಡೇ ಹರಿದು ಬರಿದು ಬಂದಿತ್ತು. ಇದೀಗ ಪೊಲೀಸರು ಅಲರ್ಟ್ ಆಗಿದ್ದು, ಆಶ್ರಮದ ಆವರಣದಿಂದ ಭಕ್ತರನ್ನು ಹೊರಕ್ಕೆ ಕಳುಹಿಸುತ್ತಿದ್ದಾರೆ. ಹಾಗೂ ಆಶ್ರಮದ ಸುತ್ತಮುತ್ತಾ ಭಾರೀ ಭದ್ರತೆ ಒದಗಿಸಿದ್ದಾರೆ. ಆಶ್ರಮಕ್ಕೆ ವಿಐಪಿ, ಮಠಾಧೀಶರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆಶ್ರಮದ ಮೊದಲ ಮಹಡಿಯಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳ ನಾಡಿಮಿಡಿತದಲ್ಲಿ ಸ್ವಲ್ಪ ಏರುಪೇರು ಆಗಿದೆ. ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತಿದೆ. ಹೀಗಾಗಿ ಆಕ್ಸಿಜನ್ ಕೊಡಲಾಗುತ್ತಿದೆ. ಸಿದ್ದೇಶ್ವರ ಸ್ವಾಮೀಜಿಯವರ ಪಲ್ಸ್, ಬಿಪಿ,…

Read More

ಬೆಂಗಳೂರು: ವಿಜಯಪುರದಲ್ಲಿ ಜನವರಿ 9 ಮತ್ತು 10ರಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ 37ನೇ ರಾಜ್ಯ ಪತ್ರಕರ್ತರ ಸಮ್ಮೇಳವನ್ನು ನಡೆಸಲು ನಿಗದಿ ಪಡಿಸಲಾಗಿತ್ತು. ಈ ಸಮ್ಮೇಳನವನ್ನು ಮುಂದೂಡಿಕೆ ಮಡಾಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಆರೋಗ್ಯ ಏರುಪೇರಾಗಿದೆ. ಅವರ ಆರೋಗ್ಯ ಸುಧಾರಿಸುತ್ತದೆ ಎನ್ನುವ ನಮ್ಮೆಲ್ಲರ ನಿರೀಕ್ಷೆ ಫಲಿಸುತ್ತಿಲ್ಲ. ಶ್ರೀಗಳ ಆರೋಗ್ಯ ದಿನೇ ದಿನೇ ಬಿಗಡಾಯಿಸುತ್ತಿದೆ ಎಂಬುದಾಗಿ ಕಳವಳ, ಆತಂಕ ವ್ಯಕ್ತ ಪಡಿಸಿದ್ದಾರೆ. ಪೂಜ್ಯನೀಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆರೋಗ್ಯ ಏರುಪೇರಾಗಿರುವ ಕಾರಣದಿಂದ ವಿಜಯಪುರದದಲ್ಲಿ ಜನವರಿ 9 ಮತ್ತು 10ರಂದು ನಡೆಯಲಿರುವ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಮುಂದೂಡಿಕೆ ಮಾಡಲಾಗಿರೋದಾಗಿ ತಿಳಿಸಿದ್ದಾರೆ. https://kannadanewsnow.com/kannada/team-india-new-jersey-team-india-launches-new-jersey-for-sri-lanka-series-do-you-know-how-it-is-the-new-look-of-the-players/ https://kannadanewsnow.com/kannada/breaking-news-centre-orders-detailed-project-report-of-23-km-tunnel-at-shirdi-ghat/

Read More

ನವದೆಹಲಿ: ಮಕ್ಕಳ ಲೈಂಗಿಕ ಶೋಷಣೆ ಮತ್ತು ಸನಗ್ನತೆಯನ್ನು ಉತ್ತೇಜಿಸಿದ್ದಕ್ಕಾಗಿ ಎಲೋನ್ ಮಸ್ಕ್ ನೇತೃತ್ವದ ಟ್ವಿಟರ್ ಅಕ್ಟೋಬರ್ 26 ಮತ್ತು ನವೆಂಬರ್ 25 ರ ನಡುವೆ ಭಾರತದಲ್ಲಿ 45,589 ಖಾತೆಗಳನ್ನು ನಿಷೇಧಿಸಿದೆ ಎನ್ನಲಾಗಿದೆ. ಹೊಸ ಐಟಿ ನಿಯಮಗಳು, 2021 ರ ಅನುಸರಣೆಯಲ್ಲಿ ಟ್ವಿಟರ್ ತನ್ನ ಮಾಸಿಕ ವರದಿಯಲ್ಲಿ, ತನ್ನ ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳ ಮೂಲಕ ಅದೇ ಸಮಯದಲ್ಲಿ ಭಾರತದ ಬಳಕೆದಾರರಿಂದ 755 ದೂರುಗಳನ್ನು ಸ್ವೀಕರಿಸಿದೆ ಮತ್ತು ಆ 121 ಯುಆರ್ಎಲ್ಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಭಾರತದಲ್ಲಿ ವರದಿ ಮಾಡುವ ಅವಧಿಯಲ್ಲಿ ಟ್ವಿಟರ್ 48,624 ಖಾತೆಗಳನ್ನು ನಿಷೇಧಿಸಿದೆ. ಭಾರತದಿಂದ ಹೆಚ್ಚಿನ ದೂರುಗಳು ದುರುಪಯೋಗ / ಕಿರುಕುಳ (681), ನಂತರ ಐಪಿ-ಸಂಬಂಧಿತ ಉಲ್ಲಂಘನೆ (35), ದ್ವೇಷಪೂರಿತ ನಡವಳಿಕೆ (20), ಮತ್ತು ಗೌಪ್ಯತೆ ಉಲ್ಲಂಘನೆ (15) ಬಗ್ಗೆ ಇದ್ದವು. ಟ್ವಿಟರ್ ತನ್ನ ಹೊಸ ವರದಿಯಲ್ಲಿ ತಿಳಸಿದ್ದು, ಖಾತೆ ಅಮಾನತುಗಳಿಗೆ ಮೇಲ್ಮನವಿ ಸಲ್ಲಿಸುವ 22 ಕುಂದುಕೊರತೆಗಳನ್ನು ಸಹ ಪ್ರಕ್ರಿಯೆಗೊಳಿಸಿದೆ ಎಂದು ಹೇಳಿದೆ. “ಇವೆಲ್ಲವನ್ನೂ ಪರಿಹರಿಸಲಾಯಿತು ಮತ್ತು…

Read More

ವಿಜಯಪುರ : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಶ್ರೀಗಳನ್ನು ನೋಡಲು ಆಶ್ರಮಕ್ಕೆ ಭಕ್ತರ ದಂಡೇ ಹರಿದು ಬರಿದು ಬಂದಿದೆ. ಈ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದು, ಆಶ್ರಮದ ಆವರಣದಿಂದ ಭಕ್ತರನ್ನು ಹೊರಕ್ಕೆ ಕಳುಹಿಸುತ್ತಿದ್ದಾರೆ. ಹಾಗೂ ಆಶ್ರಮದ ಸುತ್ತಮುತ್ತಾ ಭಾರೀ ಭದ್ರತೆ ಒದಗಿಸಿದ್ದಾರೆ. ಆಶ್ರಮಕ್ಕೆ ವಿಐಪಿ, ಮಠಾಧೀಶರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆಶ್ರಮದ ಮೊದಲ ಮಹಡಿಯಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳ ನಾಡಿಮಿಡಿತದಲ್ಲಿ ಸ್ವಲ್ಪ ಏರುಪೇರು ಆಗಿದೆ. ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತಿದೆ. ಹೀಗಾಗಿ ಆಕ್ಸಿಜನ್ ಕೊಡಲಾಗುತ್ತಿದೆ. ಸಿದ್ದೇಶ್ವರ ಸ್ವಾಮೀಜಿಯವರ ಪಲ್ಸ್, ಬಿಪಿ, ಸ್ವಲ್ಪ ಕಡಿಮೆಯಾಗಿದೆ. ಅವರು ಬೆಳಗ್ಗೆಯಿಂದಲೂ ಆಹಾರವನ್ನು ಸೇವಿಸಿಲ್ಲ ಎಂದು ಹೇಳಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಸಿದ್ದೇಶ್ವರ ಶ್ರೀಗಳು ಬೇಗನೇ ಗುಣಮುಖರಾಗಲಿ ಎಂದು ಭಕ್ತರು ಹಲವು ಕಡೆ ಪೂಜೆ, ವಿವಿಧ ಹರಕೆ ಸಲ್ಲಿಸುತ್ತಿದ್ದಾರೆ. https://kannadanewsnow.com/kannada/cm-bommai-launches-booth-vijay-abhiyan-calls-for-working-together-to-empower-booths/ https://kannadanewsnow.com/kannada/bjps-contribution-to-fraud-and-death-activists-congress-lashed-out-in-a-tweet/

Read More

ನವದೆಹಲಿ: ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (Bureau of Energy Efficiency – BEE) ಯ ಪರಿಷ್ಕೃತ ಮಾನದಂಡಗಳು ಈ ವರ್ಷದ ಜನವರಿ 1 ರಿಂದ ಅನ್ವಯವಾಗುವುದರಿಂದ ರೆಫ್ರಿಜರೇಟರ್ ಗಳ ( refrigerators ) ಬೆಲೆಗಳು ಶೇಕಡಾ 5 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗೋದ್ರೇಜ್ ಅಪ್ಲೈಯನ್ಸಸ್ ( Godrej Appliances ), ಹೈಯರ್ ಮತ್ತು ಪ್ಯಾನಸೋನಿಕ್ನಂತಹ ತಯಾರಕರ ಪ್ರಕಾರ, ಹೊಸ ನಿಯಮಗಳ ಅನುಷ್ಠಾನವು ಮಾದರಿಗಳನ್ನು ಅವಲಂಬಿಸಿ ಗ್ರಾಹಕರ ಮೇಲೆ ಶೇಕಡಾ 2-5 ರಷ್ಟು ಹೆಚ್ಚುವರಿ ಹೊರೆಯನ್ನು ಹಾಕಬಹುದು. ಲೇಬಲಿಂಗ್ ಅನ್ನು ಬಿಗಿಗೊಳಿಸುವುದರ ಜೊತೆಗೆ, ಹೊಸ ಮಾನದಂಡಗಳು ಫ್ರೀಜರ್ಗಳು ಮತ್ತು ಹಿಮ-ಮುಕ್ತ ಮಾದರಿಗಳ ರೆಫ್ರಿಜರೇಟರ್ ಒದಗಿಸುವ ಘಟಕಗಳಿಗೆ (ಶೇಖರಣಾ ಭಾಗ) ಪ್ರತ್ಯೇಕ ಸ್ಟಾರ್ ಲೇಬಲಿಂಗ್ ಅನ್ನು ಕಡ್ಡಾಯಗೊಳಿಸುತ್ತವೆ. “ಈಗ, ನಾವು ಎರಡಕ್ಕೂ ಲೇಬಲಿಂಗ್ ಅನ್ನು ಘೋಷಿಸಬೇಕಾಗಿದೆ. ಇದು ಹೊಸ ಬದಲಾವಣೆಯಾಗಿದೆ” ಎಂದು ಗೋದ್ರೇಜ್ ಅಪ್ಲೈಯನ್ಸ್ ಬಿಸಿನೆಸ್ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಮಲ್ ನಂದಿ ಪಿಟಿಐಗೆ ತಿಳಿಸಿದ್ದಾರೆ. https://kannadanewsnow.com/kannada/team-india-new-jersey-team-india-launches-new-jersey-for-sri-lanka-series-do-you-know-how-it-is-the-new-look-of-the-players/ https://kannadanewsnow.com/kannada/cm-bommai-launches-booth-vijay-abhiyan-calls-for-working-together-to-empower-booths/ https://kannadanewsnow.com/kannada/breaking-news-centre-orders-detailed-project-report-of-23-km-tunnel-at-shirdi-ghat/

Read More

ನವದೆಹಲಿ : ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ಸ್ವಯಂ-ನಿಯಂತ್ರಕ ವ್ಯವಸ್ಥೆಯನ್ನ ರಚಿಸುವ ಪ್ರಸ್ತಾಪವನ್ನ ಮೋದಿ ಸರ್ಕಾರ ಸೋಮವಾರ ಸಿದ್ಧಪಡಿಸಿದೆ. ಅಲ್ಲದೇ, ಭಾರತದಲ್ಲಿರುವ ಅವರ ವಿಳಾಸದ ಪರಿಶೀಲನೆಯನ್ನ ಕಡ್ಡಾಯಗೊಳಿಸುವ ನಿಬಂಧನೆಯನ್ನ ನಿಯಮಗಳಲ್ಲಿ ಸೇರಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಆನ್ಲೈನ್ ಗೇಮಿಂಗ್ ಕಂಪನಿಗಳನ್ನ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ (IT Rules) ಅಡಿಯಲ್ಲಿ ತರಲಾಗುವುದು. ಆದಾಗ್ಯೂ, ಈ ನಿಯಮಗಳನ್ನ 2021ರಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನೀಡಲಾಗಿದೆ. ಏನಿದು ಐಟಿ ಕಾನೂನು.? ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Ministry of Electronics and Information Technology-MEITY) ಆನ್ ಲೈನ್ ಗೇಮಿಂಗ್ ಕಂಪನಿಗಳು ಭಾರತದಲ್ಲಿ ಅನ್ವಯವಾಗುವ ಕಾನೂನುಗಳನ್ನ ಅನುಸರಿಸಲು ಅಗತ್ಯವಿರುವ ನಿಯಮಗಳನ್ನ ರೂಪಿಸಿದೆ. ಜೂಜು ಅಥವಾ ಬೆಟ್ಟಿಂಗ್’ಗೆ ಸಂಬಂಧಿಸಿದ ಕಾನೂನುಗಳು ಈ ಕಂಪನಿಗಳಿಗೆ ಅನ್ವಯವಾಗುತ್ತವೆ ಎಂದು ಎಂಇಐಟಿವೈ ಹೇಳಿದೆ. “ಕರಡು ತಿದ್ದುಪಡಿಗಳು ಆನ್ಲೈನ್ ಗೇಮಿಂಗ್ ಚಟುವಟಿಕೆಗಳ ಬೆಳವಣಿಗೆಯನ್ನ ಖಚಿತಪಡಿಸಿಕೊಳ್ಳಲು ಮತ್ತು ಅವುಗಳನ್ನ ಜವಾಬ್ದಾರಿಯುತ ರೀತಿಯಲ್ಲಿ ನಡೆಸುವ ಗುರಿಯನ್ನ ಹೊಂದಿರಬೇಕು. ಆಟಗಳಲ್ಲಿ ಗೆದ್ದ ಮೊತ್ತವನ್ನ ತಿಳಿಸಬೇಕಾಗುತ್ತೆ.! ಕರಡು ನಿಯಮಗಳು…

Read More

ಬೆಂಗಳೂರು : ಬೂತ್ ಸಶಕ್ತಗೊಳಿಸಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿವಾಜಿನಗರ ಕ್ಷೇತ್ರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಶಿವಾಜಿನಗರ ವಿಧಾನಸಭಾ ಕ್ಷೇತ್ರ ವಸಂತನಗರ ವಾರ್ಡ್ ಬೂತ್ ನಂ. 50 ಇಲ್ಲಿಂದ ವಿಜಯ ಸಂಕಲ್ಪ ಪ್ರಾರಂಭವಾಗುತ್ತಿದೆ. ಬೂತ್ ಮಟ್ಟದ ವಿಜಯ ಸಾಧ್ಯವಾಗಿಸಲು ಬೂತ್ ಮಟ್ಟದ ಅಭಿಯಾನವನ್ನು ಕೈಗೊಳ್ಳಲು ರಾಷ್ಟ್ರ ಮತ್ತು ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಚಾಲನೆಯನ್ನು ನೀಡಲಾಗಿದೆ. ಅತ್ಯಂತ ಕಷ್ಟವಾದ ಕ್ಷೇತ್ರ ಎನಿಸಿರುವ ಶಿವಾಜಿನಗರದಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಶಿವಾಜಿನಗರ ಒಂದು ಕಾಲದಲ್ಲಿ ಬಿಜೆಪಿ ಗೆದ್ದಿತ್ತು. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹಿಂದೆ ಗೆದ್ದಿದ್ದರು. ನಿರ್ಮಲ್ ಕುಮಾರ್ ಸುರಾನಾ ಚಿಕ್ಕಪೇಟೆಯಲ್ಲಿ ಪಿಸಿ ಮೋಹನ್ ಗೆದ್ದಿದ್ದರು. ಶಿವಾಜಿನಗರ ಕ್ಷೇತ್ರದ ವಿಜಯಕ್ಕಾಗಿ ಇಲ್ಲಿ ಬಂದಿದೇನೆ. ಇದಕ್ಕೆ ಹೆಚ್ಚಿನ ಸಮಯವನ್ನು ಕೊಡುತಿದ್ದು, ಕರೆದಾಗ ಬಂದು ಕೆಲಸ ಕಾರ್ಯಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನವನ್ನು ನೀಡಲಾಗುವುದು ಎಂದರು. ಗೆಲ್ಲಲು ಬೂತ್ ಸಶಕ್ತವಾಗಬೇಕು. ಶಿವಾಜಿನಗರದಲ್ಲಿ ಬಿಜೆಪಿ ಗೆದ್ದರೆ, ಕರ್ನಾಟಕದಲ್ಲಿ 130…

Read More

ಬೆಂಗಳೂರು : ವಂಚನೆ , ಸಾವು ಕಾರ್ಯಕರ್ತರಿಗೆ ಬಿಜೆಪಿ ಕೊಡುತ್ತಿರುವ ಕೊಡುಗೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ. ಈಶ್ವರಪ್ಪರನ್ನ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ – ಬಿಜೆಪಿ ಕಾರ್ಯಕರ್ತ ಅರವಿಂದ್ ಲಿಂಬಾವಳಿಯಿಂದ ವಂಚನೆಗೊಳಗಾದ ಸತ್ತಿರುವ ಪ್ರದೀಪ್ – ಬಿಜೆಪಿ ಕಾರ್ಯಕರ್ತ ರೌಡಿಗಳಿಗೆ ಕೆಂಪುಹಾಸು ಹಾಸುವ ಬಿಜೆಪಿ ಕಾರ್ಯಕರ್ತರಿಗೆ ಕೊಡುತ್ತಿರುವ ಕೊಡುಗೆ – ವಂಚನೆ ಹಾಗೂ ಸಾವು! ಕಾರ್ಯಕರ್ತರನ್ನೇ ಬಿಡದ ಬಿಜೆಪಿ ಜನರನ್ನ ಬಿಡುವುದೇ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ. https://twitter.com/INCKarnataka/status/1609923845284139010?ref_src=twsrc%5Etfw%7Ctwcamp%5Etweetembed%7Ctwterm%5E1609923845284139010%7Ctwgr%5E737e106965c4c4912d24fa6026cec86d95d710eb%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fwp-admin%2Fpost-new.php https://kannadanewsnow.com/kannada/may-siddheshwar-get-well-soon-aicc-president-mallikarjuna-kharge-tweet/ https://kannadanewsnow.com/kannada/do-you-know-what-congress-leaders-said-in-the-mahadayi-water-jan-andolan/

Read More

ಹುಬ್ಬಳ್ಳಿ: ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಹದಾಯಿ ಜಲ-ಜನ ಆಂದೋಲನ ನಡೆಸಲಾಯಿತು. ಈ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದಂತ ಕಾಂಗ್ರೆಸ್ ನಾಯಕರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿಯನ್ನೇ ನಡೆಸಿದರು. ಹಾಗಾದ್ರೇ ಯಾರು ಏನು ಮಾತನಾಡಿದರು ಅಂತ ಮುಂದೆ ಓದಿ. ಮಹದಾಯಿ ಜಲ ಜನ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದಂತ ಕಾಂಗ್ರೆಸ್ ನ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಮಹದಾಯಿ ಜಲಾಂದೋಲನದ ಅನಿವಾರ್ಯತೆ ಯಾಕೆ ಬಂತು? ದೆಹಲಿ ಹಾಗೂ ಬೆಂಗಳೂರಿನಲ್ಲಿ ಅಧಿಕಾರದಲ್ಲಿ ಕೂತಿರುವವರು ಈ ಭಾಗದ ಜನರಿಗೆ ದ್ರೋಹ ಬಗೆದಿದ್ದಾರೆ. ಇವರ ಚರಿತ್ರೆಯೋ ದ್ರೋಹದ ಮೇಲೆ ನಿಂತಿದೆ. ಕುಡಿಯುವ ನೀರಾಗಲಿ, ಕೃಷಿಗೆ ಬೇಕಾದ ನೀರಾಗಲಿ ಅದನ್ನು ಈ ಭಾಗದ ಜನರಿಗೆ ಸಿಗದಂತೆ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇವರು ಯೋಜನೆಗೆ ಅಡ್ಡಿ ಮಾಡಿ ಸುಳ್ಳಿನ ಉತ್ಸವ ಮಾಡುತ್ತಾರೆ. ದೆಹಲಿಯಲ್ಲಿ 8 ವರ್ಷಗಳಿಂದ, ರಾಜ್ಯದಲ್ಲಿ 3 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಇವರು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವರೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು…

Read More