Author: KNN IT TEAM

ಅಯೋಧ್ಯೆ: ಅಯೋಧ್ಯೆಯ ರಾಮಜನ್ಮಭೂಮಿ ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರವೊಂದನ್ನು ಬರೆದಿದ್ದು, ʻತಮ್ಮ ಆಶೀರ್ವಾದʼವನ್ನು ತಿಳಿಸಿದ್ದಾರೆ. ʻದೇಶಕ್ಕಾಗಿ ನೀವು ಮಾಡುವ ಯಾವುದೇ ಕೆಲಸವು ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ನನ್ನ ಆಶೀರ್ವಾದ ನಿಮ್ಮ ಮೇಲಿದೆ. ರಾಮನ ಆಶೀರ್ವಾದ ನಿಮ್ಮೊಂದಿಗೆ (ರಾಹುಲ್ ಗಾಂಧಿ) ಇರಲಿʼ ಎಂದು ದಾಸ್ ಪತ್ರದಲ್ಲಿ ಬರೆದು ಅದನ್ನು ಯುವ ಕಾಂಗ್ರೆಸ್ ನಾಯಕ ಗೌರವ್ ತಿವಾರಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಹನುಮಾನ್ ಗರ್ಹಿ ಅರ್ಚಕ ರಾಜು ದಾಸ್, ʻಇದು ಆಚಾರ್ಯ ಸತ್ಯೇಂದ್ರ ದಾಸ್ ಅವರ ವೈಯಕ್ತಿಕ ಅಭಿಪ್ರಾಯ. ಸತ್ಯೇಂದ್ರ ದಾಸ್ ಅವರ ಮಾತನ್ನು ನಾವು ಒಪ್ಪುವುದಿಲ್ಲ. ಕಾಂಗ್ರೆಸ್ ಯಾವಾಗಲೂ ಹಿಂದೂ ವಿರೋಧಿಯಾಗಿದೆʼ ಎಂದು ಹೇಳಿದ್ದಾರೆ. ಇಂದು ‘ಭಾರತ್ ಜೋಡೋ ಯಾತ್ರೆ’ ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. https://kannadanewsnow.com/kannada/video-of-pakistanis-storing-cooking-gas-in-plastic-balloons-goes-viral-internet-concerned/ https://kannadanewsnow.com/kannada/after-wifes-death-due-to-covid-kolkata-man-spends-rs-2-5-lakh-on-her-silicone-statue/ https://kannadanewsnow.com/kannada/video-of-pakistanis-storing-cooking-gas-in-plastic-balloons-goes-viral-internet-concerned/ https://kannadanewsnow.com/kannada/after-wifes-death-due-to-covid-kolkata-man-spends-rs-2-5-lakh-on-her-silicone-statue/

Read More

ಬೆಂಗಳೂರು : ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಸಂಬಂಧ ಚರ್ಚೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜನವರಿ 9 ರಂದು ಸಮಾಜದ ಎಲ್ಲ ಧರ್ಮಗಲು, ಮಠಾಧೀಶರು, ಮುಖಂಡರ ಸಭೆ ಕರೆಯಲಾಗಿದೆ. https://kannadanewsnow.com/kannada/video-of-pakistanis-storing-cooking-gas-in-plastic-balloons-goes-viral-internet-concerned/ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಆದಿಚುಂಚನಗಿರಿ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ಸೇರಿ ಎಲ್ಲ ಧರ್ಮಗಳ ಪ್ರಮುಖ ಧರ್ಮ ಗುರುಗಳು, ಮುಖಂಡರಿಗೆ ಆಹ್ವಾನ ಕಳಿಸಲಾಗಿದೆ. ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಆರಂಭಿಸುವುದಾಗಿ ಶಿಕ್ಷಣ ಇಲಾಖೆ ಕೆಲ ತಿಂಗಳ ಹಿಂದೆಯೇ ಘೋಷಣೆ ಮಾಡಿತ್ತು. ಹೀಗಾಗಿ ಈ ಸಂಬಂಧ ಸಮಾಜದ ಧರ್ಮಗುರುಗಳು, ಮಠಾಧೀಶರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ಸಭೆ ಆಯೋಜಿಸಲಾಗಿದೆ. https://kannadanewsnow.com/kannada/bigg-news-important-information-for-those-who-were-waiting-for-zp-tp-elections-draft-list-for-delimitation-of-constituencies-released/

Read More

ಪಾಕಿಸ್ತಾನ: ಪಾಕಿಸ್ತಾನದಲ್ಲಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ಅಡುಗೆ ಅನಿಲವನ್ನು ಸಂಗ್ರಹಿಸಲು ಜನರು ಹತಾಶ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ, ಸ್ಥಳೀಯರು ಅಡುಗೆ ಅನಿಲ(LPG)ವನ್ನು ಸಂಗ್ರಹಿಸಲು ಬೃಹತ್ ಪ್ಲಾಸ್ಟಿಕ್ ಬಲೂನ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. DW.com ಪ್ರಕಾರ, ಈ ಪ್ಲಾಸ್ಟಿಕ್ ಬಲೂನ್‌ಗಳನ್ನು ದೇಶದ ಅನಿಲ ಪೈಪ್‌ಲೈನ್ ಜಾಲಕ್ಕೆ ಸಂಪರ್ಕ ಹೊಂದಿದ ಅಂಗಡಿಗಳಲ್ಲಿ ನೈಸರ್ಗಿಕ ಅನಿಲದಿಂದ ತುಂಬಿಸಲಾಗುತ್ತದೆ. ಈ ಅನಿಲ ಸೋರಿಕೆಯನ್ನು ತಪ್ಪಿಸಲು, ಮಾರಾಟಗಾರರು ನಳಿಕೆ ಮತ್ತು ಕವಾಟವನ್ನು ಬಹಳ ಜಾಗರೂಕರಾಗಿ ಬಳಸುತ್ತಾರೆ. ನಂತರ ಬಲೂನ್‌ಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತಿದೆ. ನಮತ್ರ, ಜನರು ಸಣ್ಣ ವಿದ್ಯುತ್ ಹೀರಿಕೊಳ್ಳುವ ಪಂಪ್‌ನ ಸಹಾಯದಿಂದ ಅನಿಲವನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ಮೂರರಿಂದ ನಾಲ್ಕು ಕೆಜಿ ಗ್ಯಾಸ್ ತುಂಬಲು ಅಂದಾಜು ಒಂದು ಗಂಟೆ ಬೇಕಾಗುತ್ತದೆ ಎಂದು ತಿಳಿದುಬಂದಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ʻಪಾಕಿಸ್ತಾನದಲ್ಲಿ ಅಡುಗೆಗೆ ಸಿಲಿಂಡರ್‌ಗಳ ಬದಲಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದ ಗ್ಯಾಸ್…

Read More

ಧಾರವಾಡ : ಧಾರವಾಡದಲ್ಲಿ ಜವಳಿ ಪಾರ್ಕ ನಿರ್ಮಾಣಕ್ಕೆ ತಿರ್ಮಾನಿಸಿದ್ದು, ಶೀಘ್ರದಲ್ಲೆ ಅನುಷ್ಠಾನಗೊಳಿಸಲಾಗುವುದೆಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. ಕೆಸಿ ಪಾರ್ಕ ಹತ್ತಿರದ ಸಿಂದೂರ ಭವನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆರಂಭಗೊಂಡ ವಿಶೇಷ ಕೈಮಗ್ಗ ಮೇಳ “ವಸ್ತ್ರ ಭಂಡಾರ”ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಈಗಿನ ಸರ್ಕಾರವು ನೇಕಾರರಿಗೆ ಹಾಗೂ ನೇಕಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಯೋಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನೇಕಾರರ ಆರ್ಥಿಕ ಅಭಿವೃದ್ಧಿಗೆ 2 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ ಎಂದರು.  ಇಂತಹ ಕೈಮಗ್ಗ ಮೇಳಗಳು ಬೆಂಗಳೂರು ಹೊರತಾಗಿ ಬೆರೇ ಜಿಲ್ಲೆಗಳಲ್ಲಿ ಮಾಡುವುದರಿಂದ ಅನೇಕ ಕೈಮಗ್ಗ ನೇಕಾರರಿಗೆ ಉಪಯೋಗವಾಗಲಿದೆ. ಇಂತಹ ಮೇಳಗಳಿಂದ ನೇಕಾರರು ತಮ್ಮ ವಿಶೀಷ್ಟ ವೈವಿದ್ಯಮಯ ಉತ್ಪನ್ನಗಳೊಂದಿಗೆ ಗ್ರಾಹಕರೊಂಧಿಗೆ ನೇರ ಸಂಪರ್ಕಕ್ಕೆ ಬರುವುದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ತಮ್ಮನ್ನು ಆರ್ಥಿಕವಾಗಿ ಉನ್ನತಿಕರಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಧಾರವಾಡದಲ್ಲಿ ಜರಗುತ್ತಿರುವ ಮೇಳದಲ್ಲಿ ಒಟ್ಟು ರಾಜ್ಯದ ವಿವಿದೆಡೆಯಿಂದ…

Read More

ಬೆಂಗಳೂರು : ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತ್ ಕ್ಷೇತ್ರಗಳ ಸದಸ್ಯರ ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಗೊಳಿಸಿದ್ದು, ಕರಡು ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಸೀಮಾ ಆಯೋಗವು ರಾಜ್ಯದ 31 ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಸದಸ್ಯರ ಸಂಖ್ಯೆ ಮತ್ತು ಕ್ಷೇತ್ರಗಳು ಒಳಗೊಂಡಿರುವ ಗ್ರಾಮಗಳ ವಿವರ, ಗಡಿ ಇತ್ಯಾದಿಗಳೊಂದಿಗೆ ಕರಡು ಗೆಜೆಟ್ ಪ್ರಕಟಿಸಲಾಗಿದೆ. ಸದಸ್ಯರ ಸಂಖ್ಯೆ ಹಾಗೂ ಚುನಾವಣೆ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಜನವರಿ 16 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಆನ್ ಲೈನ್ ಮೂಲಕ ಅಥವಾ ಖುದ್ದಾಗಿ  ಅಂಚೆಯ ಮೂಲಕ ಸಲ್ಲಿಸಬಹುದು. ನಿಗದಿತ ದಿನಾಂಕದ ನಂತರ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. https//rdpr.karnataka.gov.in/rdc/public/ ನಲ್ಲಿ ಮುಖಪುಟದ ಎಡ ಭಾಗದಲ್ಲಿರುವ ಸಾರ್ವಜನಿಕರ ಸಲಹೆಗಳು ಎಂಬ ಶೀರ್ಷಿಕೆ ಕ್ಲಿಕ್ ಮಾಡಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಇಲ್ಲವೇ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, ಮೂರನೇ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬದ ಸದಸ್ಯರಿಗೆ ಐದು ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದೀಗ ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಐದು ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ವಿತರಿಸಲಿದೆ. ಈ ಮೂಲಕ ಹೊಸ ವರ್ಷಕ್ಕೆ ರಾಜ್ಯ ಸರ್ಕಾರದಿಂದ ಬಿಗ್ ಗಿಫ್ಟ್ ನೀಡಲಾಗಿದೆ. ಈ ಸಂಬಂಧ ಆಹಾರ, ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಆ ಆದೇಶದಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಡಿಸೆಂಬರ್ 2022ಕ್ಕೆ ಅಂತ್ಯಗೊಂಡ ಹಿನ್ನಲೆಯಲ್ಲಿ, ರಾಜ್ಯದಲ್ಲಿರುವ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುತ್ತಿರುವ ಐದು ಕೆಜಿ ಆಹಾರ ಧಾನ್ಯದೊಂದಿಗೆ ಪ್ರತಿ ತಿಂಗಳು 1 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲು ಉದ್ದೇಶಿಸಿದೆ ಎಂದಿದ್ದಾರೆ. ಈ ಹಿನ್ನಲೆಯಲ್ಲಿ ಜನವರಿ 2023ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿರುವ ಆದ್ಯತಾ ಪಡಿತರ ಚೀಟಿಗಳ (…

Read More

ಕೋಲ್ಕತ್ತಾ: ಕೋಲ್ಕತ್ತಾದ 65 ವರ್ಷದ ವ್ಯಕ್ತಿಯೊಬ್ಬರು 2021 ರಲ್ಲಿ ಕೋವಿಡ್‌ನಿಂದ ನಿಧನರಾದ ತನ್ನ ಪತ್ನಿಯ ಸಿಲಿಕೋನ್ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ನಿವೃತ್ತ ಸರ್ಕಾರಿ ನೌಕರ ತಪಸ್ ಸ್ಯಾಂಡಿಲ್ಯ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ತಮ್ಮ ಪತ್ನಿ ಇಂದ್ರಾಣಿಯನ್ನು ಕಳೆದುಕೊಂಡರು. ಹೀಗಾಗಿ ಆಕೆಯ ಆಸೆಗಳನ್ನು ಪೂರೈಸಲು ಈ ಪ್ರತಿಕೃತಿಯನ್ನು ಸ್ಥಾಪಿಸಿದ್ದಾರೆ. 2.5 ಲಕ್ಷ ರೂಪಾಯಿ ವೆಚ್ಚದ ಈ ಪ್ರತಿಮೆಯು 30 ಕೆಜಿ ತೂಗುತ್ತದೆ. ಇದನ್ನು ಮನೆಯಲ್ಲಿನ ಪತ್ನಿಯ ನೆಚ್ಚಿನ ಕೋಣೆಯಲ್ಲಿ ಸೋಫಾದಲ್ಲಿ ಇರಿಸಲಾಗಿದೆ. ಇನ್ನೂ, ಪ್ರತಿಮೆಯನ್ನು ಮಹಿಳೆ ತನ್ನ ಮಗನ ಮದುವೆಯ ಆರತಕ್ಷತೆಯಲ್ಲಿ ಧರಿಸಿದ್ದ ಅಸ್ಸಾಮಿ ರೇಷ್ಮೆ ಸೀರೆ ಹಾಗೂ ಚಿನ್ನಾಭರಣಗಳಿಂದ ಅಲಂಕರಿಸಲಾಗಿದೆ. https://kannadanewsnow.com/kannada/bigg-news-train-passengers-noticed-hubballi-bengaluru-trains-to-be-disrupted-from-today/ https://kannadanewsnow.com/kannada/apple-suppliers-created-50000-direct-jobs-in-india/ https://kannadanewsnow.com/kannada/bigg-news-train-passengers-noticed-hubballi-bengaluru-trains-to-be-disrupted-from-today/ https://kannadanewsnow.com/kannada/apple-suppliers-created-50000-direct-jobs-in-india/

Read More

ಬೆಂಗಳೂರು : ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ:09-01-2023 ರ ಸೋಮವಾರ ಬೆಳಗ್ಗೆ 11-30 ಗಂಟೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ವಿಡಿಯೋ ಕಾನ್ಸರನ್ ಮೂಲಕ ಸ್ಥಳನಿಯುಕ್ತಿ ಕೌನ್ಸೆಲಿಂಗ್‌ ನಡೆಸಲು ನಿರ್ಧರಿಸಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳ ಮಾಹಿತಿಯನ್ನು ಇಲಾಖಾ ಜಾಲತಾಣ www.pue.karnataka.gov.in ಈ ಲಿಂಕ್‌ನಲ್ಲಿ ಪ್ರಕಟಿಸಲಾಗುವುದು, ಅಭ್ಯರ್ಥಿಗಳು ಸ್ಥಳನಿಯುಕ್ತಿ ಕೌನ್ಸೆಲಿಂಗ್‌ ಸಮಯದಲ್ಲಿ ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ: ಅಭ್ಯರ್ಥಿಗಳು ದಿನಾಂಕ: 09-01-2023 ರಂದು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಒಂದು ಗಂಟೆ ಮುಂಚಿತವಾಗಿ ಹಾಜರಾಗಿ ಜಿಲ್ಲಾ ಉಪನಿರ್ದೇಶಕರಲ್ಲಿ ವರದಿ ಮಾಡಿಕೊಳ್ಳುವುದು. ಆಯ್ಕೆಗೊಂಡ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ (ನೈಜತೆ ಪ್ರಮಾಣ ಪತ್ರ ಸ್ವೀಕೃತವಾದ ಅಥವಾ ಸ್ವೀಕೃತವಾಗದೇ ಇರುವ) ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯಂತೆ ಜೇಷ್ಠತೆಯ ಅನುಸಾರ ಕಲ್ಪಿಸಲಾಗುವುದು,…

Read More

ನವದೆಹಲಿ : ನಾವು 2023ಕ್ಕೆ ಪ್ರವೇಶಿಸಿದ್ದೇವೆ. ಇದರೊಂದಿಗೆ ಕೆಲವು ನಿಯಮಗಳು ಸಹ ಕಟ್ಟುನಿಟ್ಟಾಗಿದ್ದು, ಇದನ್ನ ಸಾಮಾನ್ಯ ಜನರು ಅನುಸರಿಸ್ಲೇಬೇಕಾಗುತ್ತೆ. ಅದ್ರಂತೆ, ವಾಹನಗಳಲ್ಲಿನ ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನ ಡಿಸೆಂಬರ್ 31, 2022 ರೊಳಗೆ ಪೂರ್ಣಗೊಳಿಸಬೇಕಾಗಿತ್ತು. ಆದ್ರೆ, ಇದನ್ನ ನಿರ್ಲಕ್ಷಿಸಿದವ್ರಿಗೆ ಇನ್ಮುಂದೆ 5,000 ರೂ.ಗಳಿಂದ 10,000 ರೂ.ವರೆಗೆ ದಂಡ ವಿಧಿಸಬಹುದು. ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳ ಪ್ರಕಾರ, ಸರ್ಕಾರವು ಎಲ್ಲಾ ವಾಹನಗಳಿಗೆ ಹೆಚ್ಚಿನ ಭದ್ರತೆಯ ನೋಂದಣಿ ಫಲಕಗಳು (HSRP) ಮತ್ತು ಬಣ್ಣ-ಕೋಡೆಡ್ ಸ್ಟಿಕ್ಕರ್ಗಳನ್ನ ಕಡ್ಡಾಯಗೊಳಿಸಿದೆ. ಡಿಸೆಂಬರ್ 31ರ ಗಡುವು ಮುಗಿದ ನಂತ್ರ ಏಪ್ರಿಲ್ 1, 2019ಕ್ಕಿಂತ ಮೊದಲು ನೋಂದಾಯಿಸಿದ ಎಲ್ಲಾ ವಾಹನಗಳು ಈಗ ಹೆಚ್ಚಿನ ಭದ್ರತೆಯ ನಂಬರ್ ಪ್ಲೇಟ್ಗಳು ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್ಗಳನ್ನ ಹೊಂದಿರಬೇಕು. ಈ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನ ಹೊಂದಿರದ ವಾಹನಗಳಿಗೆ ಭಾರಿ ದಂಡ ವಿಧಿಸಬಹುದು. ಇನ್ನು ಪೆಟ್ರೋಲ್ ಮತ್ತು ಸಿಎನ್ಜಿ ವಾಹನಗಳ ಮೇಲೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್, ಡೀಸೆಲ್ ವಾಹನಗಳಿಗೆ ಕಿತ್ತಳೆ ಸ್ಟಿಕ್ಕರ್,…

Read More

ನವದೆಹಲಿ: ಕಳೆದ ವರ್ಷ ಆಗಸ್ಟ್‌ನಿಂದ ಭಾರತದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ (PLI) ಯೋಜನೆ ಜಾರಿಗೆ ಬಂದ ನಂತರ ಯುಎಸ್ ಟೆಕ್ ದೈತ್ಯ ಆಪಲ್‌(Apple)ನ ಗುತ್ತಿಗೆ ತಯಾರಕರು ಮತ್ತು ಘಟಕ ಪೂರೈಕೆದಾರರಿಂದ 50,000 ನೇರ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ನೇರ ಉದ್ಯೋಗಗಳಲ್ಲದೇ, ಆಪಲ್ ಉತ್ಪಾದನೆಯು ಸುಮಾರು 1,00,000 ಪರೋಕ್ಷ ಉದ್ಯೋಗಗಳನ್ನು ಸಹ ಸೃಷ್ಟಿಸಬಹುದು ಎಂದು ಕಂಪನಿಗಳು ಸಲ್ಲಿಸಿದ ಡೇಟಾವನ್ನು ಉಲ್ಲೇಖಿಸಿದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. PLI ಯೋಜನೆಯು ಫಲಾನುಭವಿಗಳು ಉದ್ಯೋಗದ ಡೇಟಾವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ತ್ರೈಮಾಸಿಕ ಆಧಾರದ ಮೇಲೆ ಸಲ್ಲಿಸುವ ಅಗತ್ಯವಿದೆ. ಆಪಲ್ ಐಫೋನ್‌ಗಳನ್ನು ಭಾರತದಲ್ಲಿ ಮೂರು ಕಂಪನಿಗಳಾದ ʻಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ʼ ತಯಾರಿಸುತ್ತವೆ. ಘಟಕ ಪೂರೈಕೆದಾರರಲ್ಲಿ ಸನ್ವೊಡಾ, ಅವರಿ, ಫಾಕ್ಸ್‌ಲಿಂಕ್ ಮತ್ತು ಸಾಲ್ಕಾಂಪ್ ಕೂಡ ಸೇರಿವೆ. ಆಪಲ್ ಹೊರತುಪಡಿಸಿ, ದಕ್ಷಿಣ ಕೊರಿಯಾದ ಕಂಪನಿ ಸ್ಯಾಮ್‌ಸಂಗ್ ಸಹ ಪ್ರೋತ್ಸಾಹಕ ಯೋಜನೆಯ ಫಲಾನುಭವಿಯಾಗಿದೆ ಮತ್ತು ಅದರ ನೋಯ್ಡಾ ಘಟಕದಲ್ಲಿ 11,500 ಕ್ಕೂ ಹೆಚ್ಚು ಜನರನ್ನು…

Read More