Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ಪೌರ ಸಂಸ್ಥೆಗಳಾಗಿ ಮೇಲ್ದರ್ಜೇಗಿಸಲಾದ ಪಂಚಾಯಿತಿಗಳ ವ್ಯಾಪ್ತಿಯ ಅನಧಿಕೃತ ಆಸ್ತಿಗಳ ಮಾಲೀಕರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರವು ಗ್ರಾಮಪಂಚಾಯತಿ ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಮುಂದುವರೆಸಲು ಆದೇಶ ಹೊರಡಿಸಲಾಗಿದೆ. ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಹೊರಭಾಗದಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳು ಪೂರ್ವದಲ್ಲಿ ತೆರೆದಿರುವ ಖಾತೆಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಮುಂದುವರೆಸಲು ಹಾಗೂ ಸ್ಥಳೀಯ ಯೋಜನಾ ವ್ಯಾಪ್ತಿಯ ಹೊರಭಾಗದಲ್ಲಿ ಬರುವ ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿದ ತರುವಾಯ ಈ ಹಿಂದ ಗ್ರಾಮ ಪಂಚಾಯಿತಿಗಳು, ಇ-ಸ್ವತ್ತು ತಂತ್ರಾಂಶದಡಿಯಲ್ಲಿ ನಿರ್ವಹಿಸಿದ ಖಾತೆಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ದಾಖಲಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ (ಬಿ.ಬಿ.ಎಂ.ಪಿ. ಹೊರತುಪಡಿಸಿ) ನಿರ್ದೇಶನ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇ-ಸ್ವತ್ತು ಮತ್ತು ನಗರ ಪ್ರದೇಶಗಳಲ್ಲಿ ಇ-ಖಾತಾ ನೀಡುವ ಕುರಿತು ಪರಾಮರ್ಶಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯ ಸಭೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಉಲ್ಲೇಖ (3) ರ ಸರ್ಕಾರದ ದಿನಾಂಕ 22.03.2017 ರ ಸುತ್ತೋಲೆ ಹೊರಡಿಸುವ ಪೂರ್ವದಲ್ಲಿ ತೆರೆದಿರುವ ಖಾತಾಗಳನ್ನು ಇ-ಆಸ್ತಿ ತಂತ್ರಾಂಶದಡಿ…
ವಿಜಯನಗರ : ವಿಧಾನಸೌಧದ ಗೋಡೆಗಳೇ 40 % ಎಂದು ಪಿಸುಗುಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ (BJP) ವಿರುದ್ಧ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಸುದ್ದಿಗಾರರ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿಗೆ 40 % ಕೊಡಬೇಕು ಎಂದು ವಿಧಾನಸೌಧದ ಗೋಡೆಗಳೇ ಪಿಸುಗುಡುತ್ತಿದೆ ಎಂದು ವ್ಯಂಗ್ಯವಾಡಿದರು. ರಾಜ್ಯ ಬಿಜೆಪಿ ಬರೀ ಸುಳ್ಳು ಹೇಳುತ್ತಿದೆ. ರಾಜ್ಯವನ್ನು ಉಳಿಸಬೇಕಾದರೆ ಕಾಂಗ್ರೆಸ್ ನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಹೇಳಿದರು. ಲಿಂಬಾವಳಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ ತಾವು ನಂಬಿದ್ದ ಸ್ನೇಹಿತರಿಂದ ಹಣಕಾಸಿನ ವಿಚಾರದಲ್ಲಿ ಮೋಸಹೋಗಿ ಹಣಕಳೆದುಕೊಂಡು ಹತಾಷರಾಗಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಪ್ರದೀಪ್ ಅವರು ತಮ್ಮ ಡೆತ್ ನೋಟ್ ನಲ್ಲಿ ಮಾಜಿ ಶಾಸಕ ಮತ್ತು ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರನ್ನು ಕೂಡ ಪ್ರಸ್ತಾಪಿಸಿರುವುದರಿಂದ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಬೇಕು ಮತ್ತು ಪ್ರದೀಪ್ ಅವರ ಪತ್ನಿಗೆ ಹಣ ವಾಪಸ್ಸು ಕೊಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. https://kannadanewsnow.com/kannada/if-everything-is-a-small-issue-for-the-bjp-whats-the-bigger-idea/ https://kannadanewsnow.com/kannada/j-7-to-1-week-lavish-chikkaballapur-utsav-minister-sudhakar-inspected-the-readiness/ https://kannadanewsnow.com/kannada/bjp-national-president-jp-nadda-to-tour-the-state-from-january-5-heres-the-complete-list-of-tours/ https://kannadanewsnow.com/kannada/businessman-pradeep-suicide-case-congress-insists-on-the-arrest-of-bjp-mla-arvind-limbavali/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಸಂಯೋಜಿತ ಹೈಯರ್ ಸೆಕೆಂಡರಿ (10 + 2) ಮಟ್ಟದ ಪರೀಕ್ಷೆ (SSC CHSL 2022) ಅಧಿಸೂಚನೆಯ ಅರ್ಜಿ ಪ್ರಕ್ರಿಯೆಯು ನಾಳೆ ಜನವರಿ 04, 2023 ರಂದು ಕೊನೆಗೊಳ್ಳುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಸೈಟ್ssc.nic.in ಮೂಲಕ ಅರ್ಜಿಗಳನ್ನ ಸಲ್ಲಿಸಬಹುದು. ಇನ್ನು ಈ ಅಧಿಸೂಚನೆಯ ಮೂಲಕ ಲೋವರ್ ಡಿವಿಷನ್ ಕ್ಲರ್ಕ್, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 27 ವರ್ಷದೊಳಗಿನವರಾಗಿರಬೇಕು. ಈ ಅಧಿಸೂಚನೆಯ ಮೂಲಕ 4500 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಈ ನೇಮಕಾತಿ ಡ್ರೈವ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ತೇರ್ಗಡೆ ಹೊಂದಿರಬೇಕು. ಇನ್ನು DEO (ಡೇಟ್ ಎಂಟ್ರಿ ಆಪರೇಟರ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ, CAG ವಿಜ್ಞಾನದ ಸ್ಟ್ರೀಮ್ನಿಂದ 12 ನೇ ತೇರ್ಗಡೆಯಾಗಿರಬೇಕು. ಇದಲ್ಲದೇ, ವಿದ್ಯಾರ್ಥಿಯು…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹಾಲು ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್ ಗಳು ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಹಾಲಿನ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. ಇದು ಉರಿಯೂತದ, ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇಂದಿನ ದಿನಗಳಲ್ಲಿ ದೇಹದ ತೂಕ ಹೆಚ್ಚಳ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಹೊರ ಬರುಲು ಜನರು ಸಾಕಷ್ಟು ಕಸರತ್ತು ಮಾಡುತ್ತಾರೆ. ಇದನ್ನು ಶೀಘ್ರವಾಗಿ ಪರಿಹರಿಸಲು ಹಾಲಿಗೆ ಜೇನುತುಪ್ಪ ಬೆರಿಸಿ ಕುಡಿಯಬಹುದು. ಇದು ಈ ಸಮಸ್ಯೆಯೂ ಬೇಗನೆ ನಿವಾರಣೆ ಮಾಡುತ್ತದೆ. ಮಲಗುವ ಮುನ್ನ ಹಾಲನ್ನು ಜೇನುತುಪ್ಪದೊಂದಿಗೆ ಕುಡಿದರೆ ನಿಮ್ಮ ಆರೋಗ್ಯವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ. ಸ್ಥೂಲಕಾಯದಿಂದ ಬಳಲುತ್ತಿರುವವರು ತಿಂಗಳುಗಟ್ಟಲೆ ತೂಕವನ್ನು ನಿಯಂತ್ರಿಸಲು ಸಾಧ್ಯವಾಗದವರು ಇದನ್ನು ಪ್ರಯತ್ನಿಸಬಹುದು. ತೂಕ ನಷ್ಟ ಹಾಲು ನಿಮ್ಮ ದೇಹವನ್ನು ಸದೃಢಗೊಳಿಸಲು ಸಹಾಯ ಮಾಡುತ್ತದೆ. ಹಾಲಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ, ಜೇನುತುಪ್ಪವು ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಗಳನ್ನು…
ಬೆಂಗಳೂರು: ರಸ್ತೆ, ಚರಂಡಿ, ರಸ್ತೆಗುಂಡಿಗಳ ಸಣ್ಣ ವಿಚಾರ, ರಸ್ತೆ ಗುಂಡಿಗಳಿಂದ ಜನ ಸತ್ತಿದ್ದೂ ಸಣ್ಣ ವಿಚಾರ, ಭ್ರಷ್ಟಾಚಾರ, ಕಮಿಷನ್ ಸಣ್ಣ ವಿಚಾರ, ಗುತ್ತಿಗೆದಾರರು ಸತ್ತಿದ್ದೂ ಸಣ್ಣ ವಿಚಾರ, 54 ಸಾವಿರ PSI ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗಿದ್ದೂ ಸಣ್ಣ ವಿಚಾರ. ಯುವಕರ ನಿರುದ್ಯೋಗವೂ ಸಣ್ಣ ವಿಚಾರ. ಹಾಗಾದರೇ ಬಿಜೆಪಿಗೆ ( BJP Karnataka ) ದೊಡ್ಡ ವಿಚಾರ ಯಾವುದು? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ. https://twitter.com/INCKarnataka/status/1610256365263650817 ಈ ಬಗ್ಗೆ ಇಂದು ಟ್ವಿಟ್ ಮಾಡಿದ್ದು, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೇ, ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ. ಬಿಟ್ ಕಾಯಿನ್ ಹಗರಣ, PSI ಅಕ್ರಮ, ಕೆಪಿಟಿಸಿಎಲ್ ಅಕ್ರಮ, ಸಾಲು ಸಾಲು ನೇಮಕಾತಿ ಅಕ್ರಮಗಳು, ಗುತ್ತಿಗೆದಾರರ ಆತ್ಮಹತ್ಯೆ, ರಸ್ತೆ ಗುಂಡಿಯ ಸಾವುಗಳು, ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ. ಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ ಎಂದು ಹೇಳಿದೆ. https://twitter.com/INCKarnataka/status/1610252024909824006 ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಾಲು ಸಾಮಾನ್ಯವಾಗಿ ಬಿಳಿಯಾಗಿರುತ್ತದೆ. ಆದ್ರೆ, ಹಸುವಿನ ಹಾಲು ಕೊಂಚ ಹಳದಿ ಬಣ್ಣದಲ್ಲಿರುತ್ತದೆ. ಅದ್ರಂತೆ, ಕೆಲವು ಪ್ರಾಣಿಗಳ ಹಾಲು ಬಿಳಿಯಾಗಿದ್ದರೆ, ಕೆಲವು ಪ್ರಾಣಿಗಳ ಹಾಲು ಬೇರೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಾಣಿಗಳ ಹಾಲು ಬೆಳ್ಳಗಿರುವುದಿಲ್ಲ ಎನ್ನುವುದಕ್ಕೆ ವಿಶೇಷ ಕಾರಣವಿದೆ. ಹಸುವಿನ ಹಾಲಿನಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್ ಇರುತ್ತದೆ. ಅದಕ್ಕಾಗಿಯೇ ಹಾಲು ತಿಳಿ ಹಳದಿ ಬಣ್ಣವನ್ನ ಹೊಂದಿರುತ್ತದೆ. ಅದೇ ಎಮ್ಮೆ ಹಾಲಿನಲ್ಲಿ ಆ ವಸ್ತು ಇಲ್ಲದಿರುವುದರಿಂದ ಹಾಲು ಬೆಳ್ಳಗಾಗುತ್ತದೆ. ಚಿಕ್ಕ ಮಕ್ಕಳಿಗೆ ಯಾವ ಹಾಲು ಒಳ್ಳೆಯದು.? ಚಿಕ್ಕ ಮಕ್ಕಳಿಗೆ ಎಮ್ಮೆಯ ಹಾಲಿಗಿಂತ ಹಸುವಿನ ಹಾಲು ಉತ್ತಮ. ಅವು ಕಡಿಮೆ ಕೊಬ್ಬಿನಂಶವನ್ನ ಹೊಂದಿರುತ್ತವೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಅಧಿಕವಾಗಿರುವುದು ಮುಖ್ಯ ಕಾರಣ. ಹಸುವಿನ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಅವುಗಳಲ್ಲಿ, ಬಿ-ಕ್ಯಾರೋಟಿನ್’ನ್ನ ವಿಟಮಿನ್ ಎ ಆಗಿ ಪರಿವರ್ತಿಸಲಾಗುತ್ತದೆ ಮತ್ತು ಮಕ್ಕಳಿಗೆ ಉಪಯುಕ್ತವಾಗಿದೆ. ಹಾಲಿನಲ್ಲಿರುವ ವಿವಿಧ ಪದಾರ್ಥಗಳ ಅನುಪಾತದಲ್ಲಿನ ವ್ಯತ್ಯಾಸಗಳನ್ನ ಅವಲಂಬಿಸಿ, ಪ್ರಾಣಿಗಳ ಹಾಲಿನ ಬಣ್ಣಗಳಲ್ಲಿ ಬದಲಾವಣೆಗಳಿವೆ. ಕೊಬ್ಬಿನಂಶದ ಶೇಕಡಾವಾರು ; ಹಸುವಿನ…
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷಗಳು ಕಳೆದಿದ್ದು, ಜನವರಿ 7ರಿಂದ ಜಿಲ್ಲೆಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂಭ್ರಮಿಸುವ ಉತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ . ಚಿಕ್ಕಬಳ್ಳಾಪುರ ಉತ್ಸವ-2023’ಕ್ಕೆ ನಡೆದಿರುವ ಸಿದ್ಧತೆಗಳನ್ನು ಪರಿಶೀಲನೆ ನಡೆಸುವ ಸಲುವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಸಚಿವ ಸುಧಾಕರ್ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ, ಉತ್ಸವಕ್ಕೆ ಯಾವುದೇ ಕುಂದುಕೊರತೆಗಳು ಆಗದಂತೆ ಯಶಸ್ವಿಯಾಗಿ ನಡೆಸಲು ಬೇಕಾದ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಅದೇ ರೀತಿ ಜನವರಿ 7ರಿಂದ 14ರ ವರೆಗೆ ನಡೆಯುವ ‘ಚಿಕ್ಕಬಳ್ಳಾಪುರ ಉತ್ಸವ-2023’ರ ಕ್ರೀಡೋತ್ಸವದ ಆರಂಭಿಕ ಹಂತದ ಕ್ರೀಡಾ ಸ್ಪರ್ಧೆಗಳಿಗೆ ಇಂದಿನಿಂದ ಚಾಲನೆ ದೊರೆತಿದ್ದು, ಕ್ರೀಡಾ ಸ್ಪರ್ಧೆಗಳಿಗಾಗಿ ಸಿದ್ಧಗೊಂಡಿರುವ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಪೂರೈಸುತ್ತಿದೆ. ಅಲ್ಲದೆ 20 ವರ್ಷಗಳ ನಂತರ ಜಿಲ್ಲೆಯ ಎಲ್ಲ ಕೆರೆಗಳೂ ತುಂಬಿ ಕೋಡಿ ಹರಿದಿವೆ,…
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜ.5 ಮತ್ತು 6ರಂದು ಕರ್ನಾಟಕ ರಾಜ್ಯ ಪ್ರವಾಸ ಮಾಡಲಿದ್ದಾರೆ. 4ರಂದು ಸಂಜೆ ಬೆಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವ ಅವರು ಬಳಿಕ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ಕೊಡಲಿದ್ದಾರೆ. ನಂತರ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕುಮಾರಕೃಪ ಗೆಸ್ಟ್ ಹೌಸಿಗೆ ತೆರಳುವರು. 5ರಂದು ತುಮಕೂರಿನಲ್ಲಿ ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸುವರು. ಸಂಜೆ ಚಿತ್ರದುರ್ಗದಲ್ಲಿ ಎಸ್‍ಸಿ, ಎಸ್‍ಟಿ, ಒಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಬಳಿಕ ದಾವಣಗೆರೆ ವಿಭಾಗದ ಸಂಸದರು, ಶಾಸಕರು, ಎಂಎಲ್‍ಸಿಗಳು ಮತ್ತು ಜಿಲ್ಲಾ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸುವರು. 6ರಂದು ಅವರು ದಾವಣಗೆರೆ ದಕ್ಷಿಣದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ ಅವರು ತುಮಕೂರು ಜಿಲ್ಲೆಯ ಸಿರಾದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಬಳಿಕ ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. https://kannadanewsnow.com/kannada/gauribidanur-circle-polices-move-gets-a-lot-of-appreciation-read-this-news-to-know-why/ https://kannadanewsnow.com/kannada/big-shock-for-group-c-employees-of-education-department-programme-test-scheduled-for-permanent-pre-service-period/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದು ಭಾರತ್ ಜೋಡೋ ಯಾತ್ರೆ ಯುಪಿಗೆ ಕಾಲಿಟ್ಟಿದ್ದು, ಕಾಂಗ್ರೆಸ್ ನಾಯಕಿ ಮತ್ತು ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಅದಕ್ಕೆ ಸೇರಿಕೊಂಡರು. ಈ ವೇಳೆ ವೇದಿಕೆ ಮೇಲೆಯೇ ಸಹೋದರಿ ಪ್ರಿಯಾಂಕಾ ಗಾಂಧಿಯನ್ನ ರಾಹುಲ್ ಅಪ್ಪಿ ಮುತ್ತಿಟ್ಟಿದ್ದು, ವಿಡಿಯೋ ಸಧ್ಯ ವೈರಲ್ ಆಗ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಅವರನ್ನ ಆತ್ಮೀಯವಾಗಿ ಸ್ವಾಗತಿಸಿದರು. ಇಬ್ಬರೂ ನಾಯಕರು ಒಟ್ಟಿಗೆ ವೇದಿಕೆ ಹಂಚಿಕೊಂಡು ಜನರನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿಯನ್ನ ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟರು. https://twitter.com/INCIndia/status/1610222430043406337?s=20&t=c6K8kC3Hdqg_bwfiZJelMA ಭಾರತ್ ಜೋಡೋ ಯಾತ್ರೆಯ ಒಂಬತ್ತು ದಿನಗಳ ಚಳಿಗಾಲದ ವಿರಾಮದ ನಂತರ, ಅದು ಉತ್ತರ ಪ್ರದೇಶಕ್ಕೆ ಪ್ರಯಾಣಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ತಮ್ಮ ಸಹೋದರ ಮತ್ತು ಪಕ್ಷದ ಸಂಸದ ರಾಹುಲ್ ಗಾಂಧಿಯನ್ನ ಹೊಗಳಿದ್ದಾರೆ. ಯಾತ್ರೆಯು ಯುಪಿ ಪ್ರವೇಶಿಸಿದ ನಂತ್ರ ಲೋನಿ ಗಡಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ…
ಬೆಂಗಳೂರು: ರಾಜ್ಯದ ಎಲ್ಲಾ ಬೋಧಕೇತರ ವೃಂದದ ಗ್ರೂಪ್-ಸಿ ನೌಕರರಿಗೆ ಖಾಯಂ ಪೂರ್ವ ಸೇವಾವಧಿ ತೃಪ್ತಿಕರವೆಂದು ಘೋಷಿಸಲು, ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿ ಪರೀಕ್ಷೆಯನ್ನು ನಡೆಸೋದಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆಯ ಗ್ರೂಪ್ –ಸಿ ನೌಕರರಿಗೆ ಬಿಗ್ ಶಾಕ್ ನೀಡಲಾಗಿದೆ. ಈ ಕುರಿತಂತೆ ಸಮಗ್ರ ಶಿಕ್ಷಣ-ಕರ್ನಾಟಕ ಬೆಂಗಳೂರು ಹಾಗೂ ಪರೀಕ್ಷಾ ಪ್ರಾಧಿಕಾರಿ ಸಹ ನಿರ್ದೇಶಕರು ಆದೇಶ ಹೊರಡಿಸಿದ್ದು, ಬೆಂಗಳೂರು ವಿಭಾಗದ ಸಿ ದರ್ಜೆಯ ನೌಕರರ ಕಾರ್ಯಕ್ಷಮೆತೆ ಹಾಗೂ ವಿಷಯ ಪರಿಣಿತಿಯ ಕುರಿತು ಲಿಖಿತ ಪರೀಕ್ಷೆ ನಡೆಸಲು ನಿರ್ಧರಿಸಿರೋದಾಗಿ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಬೋಧಕೇತರ ವೃಂದದ ಗ್ರೂಪ್ ಸಿ ನೌಕರರ ಖಾಯಂ ಪೂರ್ವ ಸೇವಾ ಅವಧಿ ತೃಪ್ತಿಕರವೆಂದು ಘೋಷಿಸಲು ಬಾಕಿ ಇರುವ ನೌಕರರುಗಳಿಗೆ ಕಾರ್ಯಕ್ರಮತೆ ಹಾಗೂ ವಿಷಯ ಪರಿಣಿತಿಯ ಕುರಿತು ಪ್ರತಿ ಮಾಹೆ 100 ಅಂಕಗಳಿಗೆ ಪರೀಕ್ಷೆ ನಡೆಸಲು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ಸಂಬಂಧ ಪಟ್ಟಂತೆ ಡಯಟ್ ಪ್ರಾಂಶುಪಾಲರು ಡಯಟ್ ವತಿಯಿಂದ ಆಯಾ…