Subscribe to Updates
Get the latest creative news from FooBar about art, design and business.
Author: KNN IT TEAM
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜನತೆಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಚಿಕ್ಕಬಳ್ಳಾಪುರಕ್ಕೂ ಇನ್ಮುಂದೆ ಬಿಎಂಟಿಸಿ ಬಸ್ ಗಳು ಸಂಚಾರ ನಡೆಸಲಿವೆ. https://kannadanewsnow.com/kannada/the-people-of-hubballi-are-in-a-power-shock-power-cut-in-these-areas-from-january-5-to-january-14/ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಬಹುನಿರೀಕ್ಷಿತ ಬೇಡಿಕೆಯಾಗಿದ್ದ ಬಿಎಂಟಿಸಿ ಬಸ್ಸುಗಳನ್ನ ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸಿದೆ. ಈ ಮೂಲಕ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿ ಹೊಸ ವರ್ಷದ ಕೊಡುಗೆಯಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸಲಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಸಂಚಾರ ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಗೂ ವಿಸ್ತರಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜನತೆಗೆ ಸಿಹಿಸುದ್ದಿ ಕೊಟ್ಟಿದೆ. https://kannadanewsnow.com/kannada/bigg-news-important-information-for-group-c-employees-of-education-department-programme-test-scheduled-for-pre-permanent-service-period/
ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 175 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಸಂಖ್ಯೆ 2,570 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ನವೀಕರಿಸಿದ ದತ್ತಾಂಶ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ದಿನದಲ್ಲಿ 12 ರಷ್ಟು ಕಡಿಮೆಯಾಗಿದೆ ಮತ್ತು ಈಗ ಒಟ್ಟು ಸೋಂಕಿನ ಶೇಕಡಾ 0.01 ರಷ್ಟಿದೆ ಎಂದು ಅಂಕಿಅಂಶಗಳು ತೋರಿಸಿವೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕೋಟಿಯಾಗಿದ್ದು, ಸಾವಿನ ಸಂಖ್ಯೆ 5,30,707 ಆಗಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ದತ್ತಾಂಶಗಳು ತಿಳಿಸಿವೆ. ದೈನಂದಿನ ಪಾಸಿಟಿವಿಟಿ ದರವು ಶೇಕಡಾ 0.09 ರಷ್ಟಿದ್ದರೆ, ಸಾಪ್ತಾಹಿಕ ಪಾಸಿಟಿವಿಟಿ ಶೇಕಡಾ 0.12 ರಷ್ಟಿದೆ. ರಾಷ್ಟ್ರೀಯ ಕೋವಿಡ್ -19 ಚೇತರಿಕೆ ದರವು ಶೇಕಡಾ 98.80 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ವೆಬ್ಸೈಟ್ ತಿಳಿಸಿದೆ.
ಬೆಂಗಳೂರು : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ಯಾತ್ರೆಯಲ್ಲಿ ಭಾಗವಹಿಸಬೇಕಾಗಿದ್ದ ಪ್ರಿಯಾಂಕಾ ಗಾಂಧಿ ಅವರು , ‘ನಾ ನಾಯಕಿ’ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. https://kannadanewsnow.com/kannada/the-people-of-hubballi-are-in-a-power-shock-power-cut-in-these-areas-from-january-5-to-january-14/ ಮಹಿಳಾ ಕಾಂಗ್ರೆಸ್ ರಾಜ್ಯಾದ್ಯಂತ ಆಯೋಜಿಸಿದ್ದ ‘ನಾ ನಾಯಕಿ’ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಸುಮಾರು 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಂಗ್ರೆಸ್‌ನ ನೂತನ ಕಚೇರಿ ಉದ್ಘಾಟನೆಗಾಗಿ ಆಗಮಿಸಲಿದ್ದಾರೆ.. https://kannadanewsnow.com/kannada/the-people-of-hubballi-are-in-a-power-shock-power-cut-in-these-areas-from-january-5-to-january-14/ ಜ. 6ರಂದು ಬೆಂಗಳೂರಿನ ನಗರಕ್ಕೆ ‘ಭಾರತ್ ಜೋಡೋ ಭವನ’ ಉದ್ಘಾಟನೆಗಾಗಿ ಕಾಂಗ್ರೆಸ್ ವರಿಷ್ಠೆ ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದಾರೆ. https://kannadanewsnow.com/kannada/the-people-of-hubballi-are-in-a-power-shock-power-cut-in-these-areas-from-january-5-to-january-14/ ಜ.9ರಂದು ಬೆಳಗ್ಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಸುಮಾರು ಆರು ವರ್ಷಗಳ ದೀರ್ಘ ಅವಧಿಯಲ್ಲಿ 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತ ಜೋಡೋ ಭವನವನ್ನು ಉದ್ಘಾಟಿಸಲಿದ್ದಾರೆ. ಈ ಬೃಹತ್ ಕಟ್ಟಡವು ಮೂರು ಅಂತಸ್ತುಗಳನ್ನು ಹೊಂದಿದ್ದು, ನೆಲ ಹಾಗೂ ಮೊದಲ ಮಹಡಿ ಒಗ್ಗೂಡಿ ಬೃಹತ್ ಆಡಿಟೋರಿಯಂ ಹೊಂದಿದೆ. ಎರಡನೇ…
ಗೋಮತಿ (ತ್ರಿಪುರಾ): ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರ ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರದಲ್ಲಿರುವ ಪೂರ್ವಜರ ಮನೆಯ ಮೇಲೆ ಮಂಗಳವಾರ ತಡರಾತ್ರಿ ಅಪರಿಚಿತರು ದಾಳಿ ನಡೆಸಿದ್ದು, ಅಲ್ಲಿದ್ದ ಅರ್ಚಕರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಉದಯಪುರದ ಜಮ್ಜುರಿ ಪ್ರದೇಶದ ರಾಜನಗರದಲ್ಲಿರುವ ದೇಬ್ ಅವರ ನಿವಾಸಕ್ಕೆ ಪುರೋಹಿತರ ಗುಂಪು ಆಗಮಿಸಿದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ದೇಬ್ ಅವರ ತಂದೆಯ ವಾರ್ಷಿಕ ಶ್ರಾದ್ಧ ಸಮಾರಂಭದಲ್ಲಿ ಯಜ್ಞ ಮಾಡಲು ಅರ್ಚಕರು ಬಂದಿದ್ದರು. ಈ ವೇಳೆ ದೇಬ್ ಅವರ ನಿವಾಸಕ್ಕೆ ದುಷ್ಕರ್ಮಿಗಳು ನುಗ್ಗಿ ಹಲ್ಲೆ ನಡೆಸಿದ್ದಾರೆ. Former #Tripura CM #BiplabDeb’s ancestral house in Udaipur, Tripura ransacked & torched by miscreants. His house was attacked today ahead of a ‘yagna’ scheduled to be held tomorrow to mark his father’s death anniversary. pic.twitter.com/5qD26pRbzb — Pooja Mehta (@pooja_news)…
ಹುಬ್ಬಳ್ಳಿ : ನಗರದ ಜನತೆ ವಿದ್ಯುತ್ ಶಾಕ್ ಎದುರಾಗಿದ್ದು, ಫೀಡರ್‌ಗಳ ತುರ್ತು ನಿರ್ವಹಣಾ ಕಾರ್ಯ ನಿರ್ವಹಣೆ ಹಿನ್ನೆಲೆ.5 ರಿಂದ ಜ.14 ರವರೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. https://kannadanewsnow.com/kannada/do-you-want-to-look-like-a-20-year-old-girl-even-at-the-age-of-40-follow-these-simple-food-style-tips/ ಜಿಲ್ಲೆಯಾದ್ಯಂತ 10 ದಿನಗಳ ಕಾಲ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಪವರ್ ಕಟ್ ಸಂಭವಿಸಲಿದೆ ಮುಂಜಾಗೃತ ಕ್ರಮವಾಗಿ ಸೂಚನೆ ನೀಡಲಾಗಿದೆ ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ https://kannadanewsnow.com/kannada/do-you-want-to-look-like-a-20-year-old-girl-even-at-the-age-of-40-follow-these-simple-food-style-tips/ ಜ. 5ರಂದು ವರೂರ, ಅರಳಿಕಟ್ಟಿ, ಅಗಡಿ, ಶೆರೆವಾಡ, ತಿರುಮಲ ಕೊಪ್ಪ, ಪಾಲಿಕೊಪ್ಪ, ಕಂಪ್ಲಿಕೊಪ್ಪ, ಕುರಡಿಕೇರಿ, ಕರಡಿಕೊಪ್ಪ, ಪಾಳೆ. ಜ. 6 ರಂದು ದೇವರಗುಡಿಹಾಳ, ರೇವಡಿ ಹಾಳ, ಪರಸಾಪುರ. ಜ. 7ರಂದು ಕೊಟಗುಂಡಹುನಸಿ, ಕುಂದಗೋಳ ಅದರಗುಂಚಿ, ನೂಲ್ವಿ, ಶೆರೆವಾಡ. ಜ. 8ರಂದು ರಾಯನಾಳ, ಗಂಗಿವಾಳ, ಅಂಚಟಗೇರಿ, ದೇವರ ಗುಡಿಹಾಳ, ರೇವಡಿಹಾಳ, ಪರಸಾಪುರ ಹಾಗೂ ಕೈಗಾರಿಕಾ ಪ್ರದೇಶ. ಜ. 9ರಂದು ಬ್ಯಾಹಟ್ಟಿ, ಎಲ್‌ಫಿನ್ ಬಡಾವಣೆ, ಸುಳ್ಯ. https://kannadanewsnow.com/kannada/do-you-want-to-look-like-a-20-year-old-girl-even-at-the-age-of-40-follow-these-simple-food-style-tips/ ಜ. 10ರಂದು ಕುಸುಗಲ್, ಹೆಬಸೂರ, ಕಿರೇಸೂರ, ಮಾರುತಿ…
ಬೆಂಗಳೂರು: ರಾಜ್ಯದ ಎಲ್ಲಾ ಬೋಧಕೇತರ ವೃಂದದ ಗ್ರೂಪ್-ಸಿ ನೌಕರರಿಗೆ ಖಾಯಂ ಪೂರ್ವ ಸೇವಾವಧಿ ತೃಪ್ತಿಕರವೆಂದು ಘೋಷಿಸಲು, ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿ ಪರೀಕ್ಷೆಯನ್ನು ನಡೆಸೋದಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆಯ ಗ್ರೂಪ್ –ಸಿ ನೌಕರರಿಗೆ ಬಿಗ್ ಶಾಕ್ ನೀಡಲಾಗಿದೆ. https://kannadanewsnow.com/kannada/bigg-news-hassan-mixie-bomb-blast-case-accused-anoop-kumar-arrested/ ಈ ಕುರಿತಂತೆ ಸಮಗ್ರ ಶಿಕ್ಷಣ-ಕರ್ನಾಟಕ ಬೆಂಗಳೂರು ಹಾಗೂ ಪರೀಕ್ಷಾ ಪ್ರಾಧಿಕಾರಿ ಸಹ ನಿರ್ದೇಶಕರು ಆದೇಶ ಹೊರಡಿಸಿದ್ದು, ಬೆಂಗಳೂರು ವಿಭಾಗದ ಸಿ ದರ್ಜೆಯ ನೌಕರರ ಕಾರ್ಯಕ್ಷಮೆತೆ ಹಾಗೂ ವಿಷಯ ಪರಿಣಿತಿಯ ಕುರಿತು ಲಿಖಿತ ಪರೀಕ್ಷೆ ನಡೆಸಲು ನಿರ್ಧರಿಸಿರೋದಾಗಿ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಬೋಧಕೇತರ ವೃಂದದ ಗ್ರೂಪ್ ಸಿ ನೌಕರರ ಖಾಯಂ ಪೂರ್ವ ಸೇವಾ ಅವಧಿ ತೃಪ್ತಿಕರವೆಂದು ಘೋಷಿಸಲು ಬಾಕಿ ಇರುವ ನೌಕರರುಗಳಿಗೆ ಕಾರ್ಯಕ್ರಮತೆ ಹಾಗೂ ವಿಷಯ ಪರಿಣಿತಿಯ ಕುರಿತು ಪ್ರತಿ ಮಾಹೆ 100 ಅಂಕಗಳಿಗೆ ಪರೀಕ್ಷೆ ನಡೆಸಲು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ಸಂಬಂಧ ಪಟ್ಟಂತೆ ಡಯಟ್ ಪ್ರಾಂಶುಪಾಲರು ಡಯಟ್ ವತಿಯಿಂದ…
ಹಾಸನ : ಹಾಸನದಲ್ಲಿ ಮಿಕ್ಸರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಬಡಾವಣೆ ಠಾಣೆ ಪೊಲೀಸರು ಇದೀಗ ಆರೋಪಿ ಅನೂಪ್ ನನ್ನು ಬಂಧಿಸಿದ್ದಾರೆ. ಪ್ರೀತಿ ನಿರಾಕರಿಸಿದ ಮಹಿಳೆಯ ಹತ್ಯೆಗಾಗಿ ಡಿ.16 ರಂದು ಮಹಿಳೆಗೆ ಬೆಂಗಳೂರಿನಿಂದ ಪಾರ್ಸೆಲ್ ಕಳುಹಿಸಿದ್ದ ಆರೋಪಿ ಅನೂಪ್ ಮಿಕ್ಸಿಯಲ್ಲಿ ಸ್ಪೋಟಕ ವಸ್ತು ಇಟ್ಟು ಬ್ಲಾಸ್ಟ್ಗೆ ಯತ್ನ ಮಾಡಿದ್ದ ಆರೋಪಿ ಬೆಂಗಳೂರಿನ ತಲಘಟ್ಟಪುರದ ಅನೂಪ್ ಕುಮಾರ್ ನನ್ನು ಬಂಧಿಸಲಾಗಿದೆ. ರಾಮನಗರದ ಕ್ವಾರಿಯೊಂದರಿಂದ ಎರಡು ಡೆಟೊನೆಟರ್ ತಂದಿದ್ದ ಆರೋಪಿ, ಬಾಂಬ್ ತಯಾರಿಕೆ ಬಗ್ಗೆ ಇಂಟರ್ನೆಟ್ನಲ್ಲಿ ಸರ್ಚ್ ಮಾಡಿ ನಂತರ ಮಿಕ್ಸಿಯಲ್ಲಿ ಡಿಟೊನೇಟರ್ ಫಿಕ್ಸ್ ಮಾಡಿದ್ದಾನೆ. ಡಿಸೆಂಬರ್ 17 ರಂದು ಮಹಿಳೆ ಮನೆ ತಲುಪಿದ್ದ ಕೊರಿಯರ್ ಡಿ.26 ರಂದು ಕುವೆಂಪು ನಗರ ಎರಡನೇ ಹಂತ ಮುಖ್ಯ ರಸ್ತೆಯಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡು ಇದೀಗ ಆರೋಪಿಯನ್ನ ಬಂಧಿಸಿ ತನಿಖೆ ನಡೆಸಿದ್ದಾರೆ. https://kannadanewsnow.com/kannada/when-to-see-next-full-moon-calendar-dates-for-2023/
ನವದೆಹಲಿ: ಏರ್ ಇಂಡಿಯಾದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಡುಕನೊಬ್ಬ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನವೆಂಬರ್‌ನಲ್ಲಿ ನಡೆದಿತ್ತು. ಇದೀಗ ಆತನನ್ನು ʻನೊ ಫ್ಲೈ ಲಿಸ್ಟ್ʼಗೆ ಸೇರಿಸಲು ಏರ್‌ಲೈನ್ಸ್ ತಿಳಿಸಿದೆ. ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ 70 ವರ್ಷದ ಮಹಿಳೆ ಮೇಲೆ ಕುಡುಕ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಊಟದ ನಂತರ ಲೈಟ್ ಡಿಮ್ ಮಾಡಿದಾಗ ಈ ಘಟನೆ ನಡೆದಿದೆ. ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದ ನಂತರ ವಿಮಾನಯಾನ ಸಂಸ್ಥೆ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ ಮತ್ತು ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಏರ್ ಇಂಡಿಯಾ ಆಂತರಿಕ ಸಮಿತಿಯನ್ನು ರಚಿಸಿದ್ದು, ಈ ಕುಡುಕ ಪ್ರಯಾಣಿಕನನ್ನು ‘ನೊ-ಫ್ಲೈ ಲಿಸ್ಟ್’ಗೆ ಸೇರಿಸಲು ಶಿಫಾರಸು ಮಾಡಿದೆ. ಈ ವಿಷಯವು ಸರ್ಕಾರದ ಸಮಿತಿಯ ಅಡಿಯಲ್ಲಿದೆ ಮತ್ತು ನಿರ್ಧಾರಕ್ಕಾಗಿ ಕಾಯುತ್ತಿದೆ” ಎಂದು…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಪ್ರ ತಿಯೊಬ್ಬರು ತಾನು ಇತರರಿಗಿಂತ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಆಸೆ ಪಡುವುದು ಸಹಜ.. ಆದರಲ್ಲೂ 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತಮ್ಮ ನೋಟದ ಬಗ್ಗೆ ಚಿಂತಿತರಾಗಿದ್ದಾರೆ. ನೀವು ವಯಸ್ಸಾದಂತೆ. ಸುಕ್ಕುಗಳು, ಬಿಳಿ ಕೂದಲು, ಕಲೆಗಳು ಮತ್ತು ಮುಖದ ಮೇಲೆ ಚರ್ಮದ ಹೊಳಪಿನ ಕೊರತೆಯಂತಹ ಸಮಸ್ಯೆಗಳು ಎದುರಿಸುತ್ತಿದ್ದೀರಾ? ಹೆಚ್ಚುತ್ತಿರುವ ವಯಸ್ಸನ್ನು ನಿಲ್ಲಿಸಲು ಸಾಧ್ಯವಿಲ್ಲ ಆದರೆ ಅದರ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿದೆ. ನೀವು 40 ರ ವಯಸ್ಸಿನಲ್ಲಿಯೂ ಸಹ ನಟಿಯಂತೆ ಕಾಣಲು ಬಯಸಿದರೆ, ನೀವು ಯಾವ ಆಹಾರವನ್ನು ಸೇವಿಸಬೇಕು ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದ ಓದಿ https://kannadanewsnow.com/kannada/when-to-see-next-full-moon-calendar-dates-for-2023/ ಪಪ್ಪಾಯಿ ನಿಮ್ಮ ಚರ್ಮವನ್ನು ದೀರ್ಘಕಾಲದವರೆಗೆ ಯೌವ್ವನದಿಂದ ಇಡಲು ನೀವು ಬಯಸಿದರೆ, ಪ್ರತಿದಿನ ಪಪ್ಪಾಯಿಯನ್ನು ಸೇವಿಸಿ. ಏಕೆಂದರೆ ಇದು ಆಂಟಿ-ಏಜಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಚರ್ಮದ ಆರೈಕೆಗಾಗಿ ಪಪ್ಪಾಯಿ ತಿನ್ನುವುದು ಉತ್ತಮ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ವೃದ್ಧಾಪ್ಯದ ವಿರುದ್ಧ ಹೋರಾಡುತ್ತದೆ. ದಾಳಿಂಬೆ ದಾಳಿಂಬೆಯಲ್ಲಿ ಪುನಿಕಲಾಗಿನ್ ಎಂಬ ಸಂಯುಕ್ತವಿದೆ.…
ನವದೆಹಲಿ: ಪ್ರತೀ ತಿಂಗಳು ಅಮವಾಸ್ಯೆ ಮತ್ತು ಹುಣ್ಣಿಮೆಗಳು ಸಂಭವಿಸುವುದು ಸಾಮಾನ್ಯ. ಆದ್ರೆ, ಅವುಗಳು ಯಾವ ದಿನಗಳಂದು ಸಂಭವಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ, 2023ರಲ್ಲಿ ಯಾವ್ಯಾವ ದಿನಾಂಕದಂದು ಹುಣ್ಣಿಮೆ ಸಂಭವಿಸುತ್ತದೆ ಎಂದು ನೋಡೋಣ ಬನ್ನಿ… 2023 ರ ಮೊದಲ ಹುಣ್ಣಿಮೆ ಯಾವಾಗ? 2023 ರ ಮೊದಲ ಹುಣ್ಣಿಮೆಯು ಶುಕ್ರವಾರ ಅಂದ್ರೆ, ಜನವರಿ 6 ರಂದು (5:18 AM IST)ಸಂಭವಿಸುತ್ತದೆ. ಆದ್ರೆ, ಕೆಲವೊಂದು ರಾಷ್ಟ್ರಗಳಲ್ಲಿ ಜನವರಿ 5 ಮತ್ತು 7 ರಂದು ಚಂದ್ರನು ಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ. ಜನವರಿ ಹುಣ್ಣಿಮೆಯನ್ನು ಸಾಮಾನ್ಯವಾಗಿ ಪೂರ್ಣ ತೋಳ ಚಂದ್ರ ಎಂದು ಕರೆಯಲಾಗುತ್ತದೆ. ಇದು ಡಿಸೆಂಬರ್ ಅಯನ ಸಂಕ್ರಾಂತಿಯ ಸಮೀಪದಲ್ಲಿರುವುದರಿಂದ ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಹೆಚ್ಚು ಹುಣ್ಣಿಮೆಯಾಗಿದೆ. 2023 ರಲ್ಲಿ ಬರುವ ಹುಣ್ಣಿಮೆಗಳ ಕ್ಯಾಲೆಂಡರ್ ದಿನಾಂಕಗಳ ಪಟ್ಟಿ ಇಲ್ಲಿದೆ ಪ್ರತಿ ಹುಣ್ಣಿಮೆಗೆ ನೀಡಲಾದ ಸಮಯವು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಇರುವ ನಿಖರವಾದ ಅವಧಿಯಾಗಿದೆ. ಖಗೋಳಶಾಸ್ತ್ರದ ಉತ್ಸಾಹಿಗಳಿಗೆ, ಚಂದ್ರನನ್ನು ಅದರ ಪೂರ್ಣ ವೈಭವದಲ್ಲಿ ವೀಕ್ಷಿಸಲು…