Author: KNN IT TEAM

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ದಂಪತಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ರದ್ದತಿಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಮೇಲೆ ದೂರು ನೀಡಲು ಪ್ರಚೋದಿಸಿದ ಆರೋಪ ಹೊರಿಸಲಾಗಿದೆ, ಇದು ಸುಳ್ಳು ಆರೋಪವಾಗಿದೆ. ದೂರಿನಲ್ಲಿ ಹುರುಳಿಲ್ಲವೆಂದು ಎಫ್ ಐ ಆರ್ ರದ್ದತಿಗೆ ಎಸ್.ಕೆ.ಬಸವರಾಜನ್ ದಂಪತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಗೆ ಇತ್ತೀಚೆಗೆ ಜಾಮೀನು ಸಿಕ್ಕಿದ್ದು, ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ಇದೀಗ ಎಫ್ ಐ ಆರ್ ರದ್ದತಿಗೆ ಎಸ್.ಕೆ.ಬಸವರಾಜನ್ ದಂಪತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಬಾಲಕಿಯರಿಗೆ ದೂರು ನೀಡಲು ಪ್ರಚೋದಿಸಿ ಮುರುಘಾಶ್ರೀ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿ ಬಸವಪ್ರಭು ಸ್ವಾಮೀಜಿ ಅವರು, ಬಸವರಾಜನ್ ವಿರುದ್ಧ ದೂರು ನೀಡಿದ್ದರು. https://kannadanewsnow.com/kannada/doctor-leaves-towel-inside-womans-stomach-in-up-probe-launched/ https://kannadanewsnow.com/kannada/bigg-news-krpp-announces-candidates-after-january-16-janardhana-reddy/ https://kannadanewsnow.com/kannada/cricketer-rishabh-pant-airlifted-to-mumbai-hospital/

Read More

ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟ್‌ ತಾರೆ ರಿಷಬ್ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ  ಏರ್‌ಲಿಫ್ಟ್‌ ಮಾಡಲಾಗಿದೆ. https://kannadanewsnow.com/kannada/bigg-news-krpp-announces-candidates-after-january-16-janardhana-reddy/ ಇದೀಗ  ಹೆಚ್ಚಿನ ಚಿಕಿತ್ಸೆಗಾಗಿ  ಡೆಹ್ರಾಡೂನ್‌ ಆಸ್ಪತ್ರೆಯಿಂದ ಮುಂಬೈ ಆಸ್ಪತ್ರೆಗೆ ಕ್ರಿಕೆಟಿಗ ರಿಷಬ್‌ ಪಂತ್‌ ಏರ್‌ಲಿಫ್ಟ್‌  ಮಾಡಲಾಗಿದೆ. https://kannadanewsnow.com/kannada/bigg-news-krpp-announces-candidates-after-january-16-janardhana-reddy/ ದೆಹಲಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಪಂತ್ ಅವರ ಕಾರು ರೈಲಿಂಗ್ ಗೆ ಡಿಕ್ಕಿ ಹೊಡೆದಿದೆ. ರೂರ್ಕಿಯ ನರ್ಸನ್ ಗಡಿಯಲ್ಲಿರುವ ಹಮ್ಮದ್ಪುರ್ ಝಾಲ್ ಬಳಿ   ಈ ಅಪಘಾತ ಸಂಭವಿಸಿತ್ತು,  ಡಿಕ್ಕಿ ಹೊಡೆದು ಕಾರು ಸಂಪೂರ್ಣವಾಗಿ ಬೆಂಕಿಗೆ ಅಹುತಿಯಾಗಿದೆ.. ಇದೇ ವೇಳೆ ಅವರನ್ನು ಸ್ತಳೀಯ ಜನರು ಜನರು ಕಾಪಾಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. https://kannadanewsnow.com/kannada/bigg-news-krpp-announces-candidates-after-january-16-janardhana-reddy/

Read More

ಮಂಗಳೂರು :  ‘ರಸ್ತೆ, ಒಳಚರಂಡಿಯಂತಹ ಸಮಸ್ಯೆ ಬಿಟ್ಟು ಲವ್ ಜಿಹಾದ್‌‌ ಬಗ್ಗೆ ಯೋಜಿಸಿ, ಲವ್ ಜಿಹಾದ್‌‌ ತಡೆಯೋದಕ್ಕೆ ಮುಖ್ಯವಾಗಿ  ಭಾರತಿಯ ಜನತಾ ಪಕ್ಷ ಬೇಕು ‘  ಎಂದು ನಳಿನ್ ಕುಮಾರ್‌ ಕಟೀಲ್‌ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತು ಟ್ವೀಟರ್ ನಲ್ಲಿ ಕಿಡಿಕಾರಿರುವ ಕಾಂಗ್ರೆಸ್, ಲವ್ ಜಿಹಾದ್ ವಿಚಾರದ ಬಗ್ಗೆ ಮಾತಾಡುವುದನ್ನು ಬಿಡಿ, ಮೊದಲು ಡಾಲರ್ ಬಗ್ಗೆ ಮಾತಾಡಿ ನಳಿನ್ ಕುಮಾರ್ ಅವರೇ. ಅಮೆರಿಕದ ಡಾಲರ್ ಎದಿರುವ ನಮ್ಮ ರೂಪಾಯಿ ಮೌಲ್ಯವು ಇದೇ ಮೊದಲ ಬಾರಿಗೆ ₹ 83ಕ್ಕೆ ಕುಸಿದಿದೆ. ಹೀಗಿರುವಾಗ “ಡಾಲರ್ ಮತ್ತು ರೂಪಾಯಿ” ಬಗ್ಗೆ ಮಾತನಾಡಲು ಹಿಂಜರಿಕೆ ಏಕೆ ತಮಗೆ? ತಮ್ಮ ಸರ್ಕಾರದ ವೈಫಲ್ಯಗಳ ಬಗೆಗಿನ ಪ್ರಶ್ನೆಗಳನ್ನು ನಿಮ್ಮಿಂದ ಎದುರಿಸಲು ಆಗುತ್ತಿಲ್ಲವೇ? ಈ ಕಾರಣಕ್ಕಾಗಿಯೇ ಲವ್ ಜಿಹಾದ್ ಮೊರೆ ಹೋಗ್ತಿದೀರಾ?  ಅಭಿವೃದ್ಧಿ, ನಿರುದ್ಯೋಗ,  ಆರ್ಥಿಕ ಸಂಕಷ್ಟ, ಬೆಲೆ ಏರಿಕೆ, ರಸ್ತೆ ಗುಂಡಿಯ ಸಾವುಗಳು, ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ನೇಮಕಾತಿ ಹಗರಣಗಳು,ಇವೆಲ್ಲಾ ಬಿಜೆಪಿಗೆ ಸಣ್ಣ ವಿಷಯಗಳು! ನಿರುದ್ಯೋಗ ದಾಖಲೆ ಮಟ್ಟಕ್ಕೆ…

Read More

ಅಮ್ರೋಹಾ: ಉತ್ತರ ಪ್ರದೇಶದ ಅಮ್ರೋಹಾದ ಬನ್ಸ್ ಖೇರಿ ಗ್ರಾಮದಲ್ಲಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ ಶಸ್ತ್ರಚಿಕಿತ್ಸೆ ನಂತ್ರ, ಆಕೆಯ ಹೊಟ್ಟೆಯೊಳಗೆ ʻಟವೆಲ್ʼ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ರಾಜೀವ್ ಸಿಂಘಾಲ್ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ʻಅಮ್ರೋಹಾದ ನೌಗಾವಾನಾ ಸಾದತ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ವಹಿಸುತ್ತಿದ್ದ ಸೈಫೀ ನರ್ಸಿಂಗ್ ಹೋಮ್‌ನಲ್ಲಿ ಮಹಿಳೆ ನಜ್ರಾನಾ ಶಸ್ತ್ರಚಿಕಿತ್ಸೆ ನಡೆಸಿದ ನಂತರ, ವೈದ್ಯ ಮತ್ಲೂಬ್ ನಜ್ರಾನಾ ಹೊಟ್ಟೆಯಲ್ಲಿ ಟವೆಲ್ ಬಿಟ್ಟಿದ್ದಾನೆʼ ಎಂದು ಸಿಎಂಒ ಹೇಳಿಕೊಂಡಿದೆ. ಮಹಿಳೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಬಂದಾಗ ಆಕೆಯನ್ನು ಐದು ದಿನಗಳ ಕಾಲ ಹೆಚ್ಚುವರಿಯಾಗಿ ಆಸ್ಪತ್ರೆಯಲ್ಲಿ ಇರಿಸಲಾಯಿತು. ನಂತ್ರ, ಮನೆಗೆ ಮರಳಿದ ನಂತರ ಆಕೆಯ ಸ್ಥಿತಿ ಸುಧಾರಿಸದಿದ್ದಾಗ ಪತಿ ಶಂಶೇರ್ ಅಲಿ ಆಕೆಯನ್ನು ಅಮ್ರೋಹಾದಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಹಿಳೆಯನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಟವೆಲ್ ಕಂಡು ಬಂದಿದ್ದು, ಅದನ್ನು ಹೊರ ತೆಗೆಯಲಾಗಿದೆ. “ನಾನು ಮಾಧ್ಯಮ ವರದಿಗಳ ಮೂಲಕ…

Read More

ಕೊಪ್ಪಳ : ರಾಜ್ಯದಲ್ಲಿ ಮಾತ್ರ ಅಲ್ಲ, ಇಡಿ ದೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಒಂದು ಪ್ರಮುಖ ಪಕ್ಷವಾಗಿ ಬೆಳೆಯಲಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ. https://kannadanewsnow.com/kannada/leopard-scare-again-in-mysore-sighting-at-school-in-cftri-premises/ ಸುದ್ದಿಗಾರರೊಂದಿಗೆ ಮಾತಾಡುವಾಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಗ್ಗೆ ಬೇರೆ ಬೇರೆ ಪಕ್ಷಗಳ ನಾಯಕರು ಏನು ಮಾತಾಡುತ್ತಾರೆ, ಯಾವ ಟೀಕೆಗಳು ಮಾಡುತ್ತಾರೆ ಅನ್ನೋದರ ಬಗ್ಗೆ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಆದರೆ ಜನರ ಮೇಲೆ ವಿಶ್ವಾಸವಿದೆ, ಅವರು ಕೈಬಿಡುವುದಿಲ್ಲ ಅಂತ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು. ಜನೆವರಿ 16 ರ ನಂತರ ಪಕ್ಷದ ಪ್ರಣಾಳಿಕೆ ಮತ್ತು ಅಭ್ಯರ್ಥಿಗಳ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಒಎಂಸಿ ಎಂಡಿ ಬಿ.ವಿ. ಶ್ರೀನಿವಾಸ ರೆಡ್ಡಿ ಕೊಪ್ಪಳ, ರಾಯಚೂರು, ಕಲಬುರಗಿಯ ಸೇಡಂ ಪೈಕಿ ಒಂದು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಉತ್ತರ ಕರ್ನಾಟಕದ 64 ಮತ್ತು ದಕ್ಷಿಣ ಕರ್ನಾಟಕದ 38 ಕ್ಷೇತ್ರಗಳಲ್ಲಿ ಕೆಆರ್‌ಪಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜ.16ರಂದು ಉತ್ತರ ಕರ್ನಾಟಕದ 25…

Read More

ಮೈಸೂರಿನಲ್ಲಿ ಮತ್ತೆ ಚಿರತೆ ಆತಂಕ ಸೃಷ್ಟಿಯಾಗಿದ್ದು, ಕೇಂದ್ರೀಯ ಆಹಾರ ಸಂಶೋಧನಾಲಯದ ಆವರಣಕ್ಕೆ ಚಿರತೆ ಎಂಟ್ರಿ ಕೊಟ್ಟಿದೆ. ಸಿಎಫ್‌ಟಿಆರ್‌ಐನ ಆವರಣದಲ್ಲಿರುವ ಶಾಲೆಯ ಬಳಿ ಚಿರತೆ ಪ್ರತ್ಯಕ್ಷಗೊಂಡಿದೆ. https://kannadanewsnow.com/kannada/pakistan-to-close-wedding-halls-malls-early-stop-production-of-bulbs-fans-to-save-money/ ಚಿರತೆ ನೋಡುತ್ತಿದ್ದಂತೆ ಶಿಕ್ಷಕರು ಎಚ್ಚೆತ್ತಕೊಂಡಿದ್ದಾರೆ. ಎಲ್ಲಾ ಮಕ್ಕಳನ್ನು ವಾಪಾಸ್‌ ಮನೆಗಳಿಗೆ ಕಳುಹಿಸಿದ್ದಾರೆ. ಒಂಟಿಕೊಪ್ಪಲು, ಪಡುವಾರಹಳ್ಳಿ, ನಿವಾಸಿಗಳಲ್ಲೂ ಆತಂಕ ಹೆಚ್ಚಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. https://kannadanewsnow.com/kannada/pakistan-to-close-wedding-halls-malls-early-stop-production-of-bulbs-fans-to-save-money/

Read More

ಪಾಕಿಸ್ತಾನ: ಪ್ರಸ್ತುತ ಭೀಕರ ಆರ್ಥಿಕ ಬಿಕ್ಕಟ್ಟಿನ ಮೂಲಕ ಸಾಗುತ್ತಿರುವ ಪಾಕಿಸ್ತಾನ ಸರ್ಕಾರ ಮಂಗಳವಾರ ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪ್ರತಿಯಾಗಿ ಬೊಕ್ಕಸದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ಪ್ರಕಟಿಸಿದೆ. ಹೆಚ್ಚುತ್ತಿರುವ ಸಾಲವನ್ನು ನಿಯಂತ್ರಣದಲ್ಲಿಡಲು ಮದುವೆ ಹಾಲ್‌ಗಳನ್ನು 10 ಗಂಟೆಗೆ ಹಾಗೂ ಮಾರುಕಟ್ಟೆ ಮತ್ತು ಮಾಲ್‌ಗಳು ರಾತ್ರಿ 8:30ಕ್ಕೆ ಮುಚ್ಚಲಾಗುವುದು ಎಂದು ಸರ್ಕಾರ ನಿರ್ಧರಿಸಿದೆ. “ಈ ಯೋಜನೆಯು ರಾಷ್ಟ್ರದ ಒಟ್ಟಾರೆ ಜೀವನಶೈಲಿ ಮತ್ತು ಅಭ್ಯಾಸದ ಮಾದರಿಯನ್ನು ಬದಲಾಯಿಸುತ್ತದೆ ಮತ್ತು ನಮಗೆ $ 26 ಮಿಲಿಯನ್ (Pkr 60 ಶತಕೋಟಿ) ಉಳಿಸುತ್ತದೆ” ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ ಎಂದು ವರದಿಯಾಗಿದೆ. ಅದೇ ರೀತಿ ಮುಂದಿನ ತಿಂಗಳಿನಿಂದ ಬಲ್ಬ್‌ಗಳ ತಯಾರಿಕೆಯನ್ನು ನಿಲ್ಲಿಸಲಾಗುವುದು. ಏತನ್ಮಧ್ಯೆ, ಸರ್ಕಾರವು ಕೋನಿಕಲ್ ಗೀಸರ್‌ಗಳ ಬಳಕೆಯನ್ನು ಕಡ್ಡಾಯಗೊಳಿಸುತ್ತದೆ ಮತ್ತು ವೇತನ ಬಿಲ್ ಅನ್ನು ಮತ್ತಷ್ಟು ಕಡಿತಗೊಳಿಸಲು ಬೀದಿದೀಪಗಳ ಪರ್ಯಾಯ ಬಳಕೆಯನ್ನು ಬಳಸಿಕೊಳ್ಳುತ್ತದೆ. ದೇಶವು ‘ನಿರ್ಣಾಯಕ’ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಪ್ರಸ್ತುತ ಮಟ್ಟದ ವಿದ್ಯುತ್…

Read More

ಮಡಿಕೇರಿ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/pms-seniority-respect-culture-of-this-country-siddaramaiahs-statement-against-cm-sudhakar-hits-back/ ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ. ಮಂಡಳಿಯ ಅರ್ಹ ಕಾರ್ಮಿಕರು ಅರ್ಜಿ ಸಲ್ಲಿಸಬಹುದು. ನೋಂದಣಿಯ ಹಿರಿತನದ ಅಧಾರದಲ್ಲಿ ಟ್ಯಾಬ್ ವಿತರಿಸಲಾಗುವುದು. 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿಯ ಒಂದು ಮಗುವಿಗೆ ಮೊದಲ ಪ್ರಾಶಸ್ತ್ಯ. ಕೊನೆಯ ದಿನಾಂಕ ಮುಗಿದ ನಂತರ ಬರುವ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ನಮೂನೆಯೊಂದಿಗೆ ನೋಂದಾಯಿತ ಕಾರ್ಮಿಕರ ಗುರುತಿನ ಚೀಟಿಯ ಪ್ರತಿ ಹಾಗೂ ನವೀಕರಣ ಗುರುತಿನ ಚೀಟಿಯ ಪ್ರತಿ, ಫಲಾನುಭವಿ ಹಾಗೂ ಮಗುವಿನ ಆಧಾರ್ ಕಾರ್ಡ್ ಪ್ರತಿ. ವಿದ್ಯಾರ್ಥಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಮೂಲ ವ್ಯಾಸಂಗ ಪ್ರಮಾಣ ಪತ್ರ. ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ಇದುವರೆಗೂ ಟ್ಯಾಬ್ ಪಡೆಯದಿರುವ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಯವರ ಕಚೇರಿ ಹಾಗೂ…

Read More

ಬೆಂಗಳೂರು : ಮೋದಿ ಕಂಡ್ರೆ ಬೊಮ್ಮಾಯಿ ಗಡಗಡ ನಡುಗ್ತಾರೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ ವಿಚಾರವಾಗಿ ಸಚಿವ ಡಾ. ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ. https://kannadanewsnow.com/kannada/bigg-news-moral-education-for-school-children-education-minister-b-c-nagesh-to-chair-crucial-meeting-on-jan-9/ ಸುದ್ದಿಗಾರರೊಂದಿಗೆ  ಸಚಿವ ಡಾ. ಸುಧಾಕರ್‌ ಮಾತನಾಡಿ,  ಸಿಎಂ ಗಡಗಡ ನಡುಗಿರೋದು ಯಾವಾಗ ನೋಡಿದ್ದಾರೆ? ಸಿದ್ದರಾಮಯ್ಯ ಹೇಳಿಕೆ ಸುಧಾಕರ್‌ ತಿರುಗೇಟು ನೀಡಿದ್ದಾರೆ. ವಯಸ್ಸು ಅನುಭವ, ಸ್ಥಾನಮಾನದಲ್ಲಿ ಪ್ರಧಾನಿ ಹಿರಿಯರು. ಅವರಿಗೆ ಗೌರವ ಕೊಡುವು ಈ ದೇಶದ ಸಂಸ್ಕೃತಿ. ಯಾವ ಸ್ಥಾನಮಾನ ಇಲ್ಲ.. ರಾಹುಲ್‌ ಹಿಂದೆ ಯಾಕ್‌ ಓಡ್ತೀರಿ? ಅವರ ವಯಸ್ಸು..ಅನುಭವ..ಸ್ಥಾನಮಾನ ಏನು? ನಿಮ್ಮ ವಯಸ್ಸು..ಅನುಭವ.. ಸ್ಥಾನಮಾನ ಏನು? ಎಂದು ಸುಧಾಕರ್‌ ಪ್ರಶ್ನಿಸಿದ್ದಾರೆ. https://kannadanewsnow.com/kannada/bigg-news-moral-education-for-school-children-education-minister-b-c-nagesh-to-chair-crucial-meeting-on-jan-9/

Read More

ಬೆಂಗಳೂರು : ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ನೀಡಿದ್ದು, ಅನ್ನಭಾಗ್ಯ ಯೋಜನೆಯಡಿ ಹಂಚಿಕೆಯಾಗುತ್ತಿದ್ದ 10 ಕೆಜಿ ಅಕ್ಕಿಯ ಬದಲಿಗೆ ಇನ್ಮುಂದೆ ಕೇವಲ 6 ಕೆಜಿ ಅಕ್ಕಿ ಮಾತ್ರ ಸಿಗಲಿದೆ. ಕೋವಿಡ್ ಹಿನ್ನಲೆಯಲ್ಲಿ 2020-21 ರ ಮೇ ತಿಂಗಳಿನಿಂದ 2022 ರ ಡಿಸೆಂಬರ್ 31 ರವರೆಗೆ ಕೇಂಧ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಸಾರ್ವಜನಿಕ ವಿತರಣ ಪದ್ಧತಿಯಲ್ಲಿ ರಾಜ್ಯದ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿಯನ್ನು ವಿತರಿಸುತ್ತಿತ್ತು. ರಾಜ್ಯ ಸರ್ಕಾರವು 5 ಕೆಜಿ ಅಕ್ಕಿ ವಿತರಿಸುತ್ತಿತ್ತು. ರಾಜ್ಯ ಸರ್ಕಾರವು ಕೇಂದ್ರದ ಪಾಲಿನ ಜೊತೆಗೆ ಹೆಚ್ಚುವರಿಯಾಗಿ ಕೇವಲ 1 ಕೆಜಿ ಅಕ್ಕಿಯನ್ನು ಮಾತ್ರ ವಿತರಿಸಲು ಆದೇಶ ಹೊರಡಿಸಿದೆ. ಹೊಸ ಆದೇಶ ಫೆಬ್ರವರಿಯಿಂದ ಜಾರಿಗೆ ಬರಲಿದೆ. ರಾಜ್ಯದಲ್ಲಿ ಪ್ರಸ್ತುತ 10,91,508 ಅಂತ್ಯೋದಯ ಕಾರ್ಡ್ ಗಳಿದ್ದು, 44,83,745 ಮಂದಿ ಫಲಾನುಭವಿಗಳಿದ್ದಾರೆ. ಹಾಗೆಯೇ 1,15,93,227 ಬಿಪಿಎಲ್ ಕಾರ್ಡ್ ಗಳಿದ್ದು, ಒಟ್ಟು 3,87,79,975 ಮಂದಿ ಫಲಾನುಭವಿಗಳಿದ್ದಾರೆ. ರಾಷ್ಟ್ರೀಯ…

Read More