Author: KNN IT TEAM

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಪ್ರಥಮ ಎನ್ನುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಪೊಲೀಸರು ಕುವೆಂಪು ವಿರಚಿತ ಸ್ಮಶಾನ ಕುರುಕ್ಷೇತ್ರಂನ ಕೌರವ ನಾಟಕವನ್ನು ಹಾಡುವ ಮೂಲಕ ಹೊಸ ನಾಂದಿ ಹಾಡಿದ್ದಾರೆ. ಈ ಮೂಲಕ ಕಾನೂನು ಪಾಲನೆಗೂ ಸೈ, ನಾಟಕವಾಡಿ ಜನರ ಪ್ರೀತಿ ಗಳಿಸೋದಕ್ಕೂ ಜೈ ಎಂದಿದ್ದಾರೆ. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಮೂರು ಠಾಣೆಯ ಪೊಲೀಸರು ಇಂತಹ ವಿನೂತನ ಪ್ರಯೋಗವನ್ನು ಮಾಡಿದ್ದಾರೆ. ಪೊಲೀಸರೇ ನಟಿಸಿ, ನಾಟಕವನ್ನು ಪ್ರದರ್ಶನ ಮಾಡಿದ್ದಾರೆ. ಪೊಲೀಸರೇ ಪ್ರದರ್ಶಿಸಿದಂತ ನಾಟಕದ ನಟನೆಯನ್ನು ಕಂಡಂತ ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. https://twitter.com/KicchaSudeep/status/1610181088231718912 ಅಂದಹಾಗೇ ಹೀಗೆ ನಾಟಕವಾಡಿ, ಜನಸ್ನೇಹಿ ಪೊಲೀಸ್ ನಡೆಯನ್ನು ತೋರಿದ್ದು ಗೌರಿಬಿದನೂರು ನಗರ, ಗ್ರಾಮಾಂತರ ಹಾಗೂ ಮಂಚನಬೆಲೆ ಠಾಣೆಯ ಪೊಲೀಸರಾಗಿದ್ದಾರೆ. ಈ ನಾಟಕವನ್ನು ಭಾನುಪ್ರಕಾಶ್ ನಿನಾಸಂ ನಿರ್ದೇಶಿಸಿದ್ದಾರೆ. ಕೌರವನ ಪಾತ್ರದಲ್ಲಿ ಗೌರಿಬಿದನೂರು ಸಿಪಿಐ ಕೆ.ಪಿ ಸತ್ಯನಾರಾಯಣ ಹರಿಯಬ್ಬೆ ಕಾಣಿಸಿಕೊಂಡಿದ್ದರೇ, ಇತರೆ ಪಾತ್ರಗಳಲ್ಲಿ ಗೌರಿಬಿದನೂರು ವೃತ್ತದ ಮೂರು ಠಾಣೆಯ ಪೊಲೀಸ್ ಸಿಬ್ಬಂದಿಗಳು ಕಾಣಿಸಿಕೊಂಡಿದ್ದಾರೆ. ಪೊಲೀಸರೇ ನಾಟಕವನ್ನು…

Read More

ಆಂಧ್ರಪ್ರದೇಶ :  ವಿಜಯನಗರಂ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡುತ್ತಿದೆ. ಆಸ್ಟ್ರೇಲಿಯಾದಿಂದ ಹಿಂದಿರುಗಿದ ಮಹಿಳೆಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. https://kannadanewsnow.com/kannada/rs-500-in-mangalore-face-value-rs-4-50-lakh-trafficking-of-fake-notes-two-arrested/ ಆಂಧ್ರಪ್ರದೇಶ  ವಿಜಯನಗರಂ ಜಿಲ್ಲೆಯ ಬೊಂಡಪಲ್ಲಿ ಮಂಡಲ ಮೂಲದ ಈ ದಂಪತಿಗಳು ಈ ತಿಂಗಳ 1 ರಂದು ಆಸ್ಟ್ರೇಲಿಯಾದಿಂದ ಸಿಂಗಾಪುರ್ ಮೂಲಕ ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ದಂಪತಿಯನ್ನು ಕರೋನವೈರಸ್ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಮಹಿಳೆಗೆ ಪಾಸಿಟಿವ್ ಬಂದಿದೆ. ಆಕೆಯ ಪತಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ನೆಗೆಟಿವ್ ಬಂದಿದೆ. ಅವರು ಪ್ರಸ್ತುತ ಬೊಂಡಾಪಲ್ಲಿಯಲ್ಲಿ ಹೋಮ್ ಐಸೋಲೇಷನ್ನಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. https://kannadanewsnow.com/kannada/rs-500-in-mangalore-face-value-rs-4-50-lakh-trafficking-of-fake-notes-two-arrested/ ಇಬ್ಬರೂ ದಂಪತಿಗಳು ಲಸಿಕೆಯ ಮೂರು ಡೋಸ್ಗಳನ್ನು ತೆಗೆದುಕೊಂಡಿದ್ದಾರೆ ಎಂದು ಆದಾಗ್ಯೂ, ಮಹಿಳೆಯ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ವಿಜಯವಾಡಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ರಮಣ ಕುಮಾರಿ ತಿಳಿಸಿದ್ದಾರೆ. https://kannadanewsnow.com/kannada/rs-500-in-mangalore-face-value-rs-4-50-lakh-trafficking-of-fake-notes-two-arrested/ ವಿಜಯವಾಡ ಪ್ರಯೋಗಾಲಯದಿಂದ ವರದಿಯನ್ನು ಸ್ವೀಕರಿಸಿದ ನಂತರ, ಅದು ಯಾವ ರೂಪಾಂತರ ಎಂದು ನಮಗೆ ತಿಳಿಯುತ್ತದೆ. ಗಂಡ…

Read More

ಬಳ್ಳಾರಿ : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳ್ಳಾರಿ ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇಂದು ಸಿಎಂ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳ್ಳಾರಿ ಜಿಲ್ಲೆಯ ಜನರಿಗೆ ಈ ಆಸ್ಪತ್ರೆಯಿಂದ ಅನುಕೂಲ ಆಗಲಿದೆ. ರಾಜ್ಯದಲ್ಲಿ ಇದೇ ಮೊದಲು ನಾಲ್ಕು ಬೆಡ್, ತಾಯಿ ಮಕ್ಕಳ ಅಸ್ಪತ್ರೆ ಆರಂಭವಾಗಿದೆ ಎಂದು ಹೇಳಿದರು. ತಾಯಿ ಹಾಗೂ ಮಕ್ಕಳಲ್ಲಿ ಪೌಷ್ಟಿಕ ಆಹಾರದ ಕೊರತೆ ಕಾಣುತ್ತಿದ್ದು, ವಿಶೇಷ ಅನುದಾನವನ್ನು ನೀಡುವುದರ ಮೂಲಕ  ತಾಯಿ ಹಾಗೂ ಮಕ್ಕಳ ಆರೋಗ್ಯಕ್ಕೆ ನಾವು ಹೆಚ್ಚು ಒತ್ತು ನೀಡಿದ್ದೇವೆ ಎಂದಿದ್ದಾರೆ. ಬಳ್ಳಾರಿ ಹೊಸಪೇಟೆ ರಸ್ತೆ ಕಾಮಗಾರಿ ವಿಚಾರವಾಗಿ ನಾನು ನಿತಿನ್ ಗಡ್ಕರಿಯವರ ಜೊತೆ ಮಾತನಾಡಿದ್ದೇನೆ. ಮರು ಟೆಂಡರ್ ಮಾಡಲು ಮನವಿ ಮಾಡಿದ್ದೇನೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಎಂದರು. https://kannadanewsnow.com/kannada/people-will-give-a-befitting-reply-to-siddaramaiah-cm-bommai/ https://kannadanewsnow.com/kannada/former-cm-sm-krishna-announced-his-retirement-from-politics/

Read More

ನವದೆಹಲಿ : ಅಮೆರಿಕ-ದೆಹಲಿ ಏರ್‌ ಇಂಡಿಯಾ ವಿಮಾನದ ಬಿಸಿನೆಸ್‌ ಕ್ಲಾಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಂಬಂಧ ಏರ್ ಇಂಡಿಯಾ ಕ್ರಮ ಕೈಗೊಂಡಿದೆ. ಆಂತರಿಕ ಸಮಿತಿಯ ನಿರ್ಧಾರದವರೆಗೆ ತಪ್ಪಿತಸ್ಥ ಪ್ರಯಾಣಿಕನಿಗೆ  ಏರ್‌ ಇಂಡಿಯಾದಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ, ನಿಯಂತ್ರಣ ಮಾರ್ಗಸೂಚಿಗಳ ಪ್ರಕಾರ ಅಶಿಸ್ತಿನ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ 70 ವರ್ಷದ ಮಹಿಳೆ ಮೇಲೆ ಕುಡಿದಿದ್ದ ಪ್ರಯಾಣಿಕನೋರ್ವ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದ ನಂತರ , ವ್ಯಕ್ತಿಯ ವಿರುದ್ಧ ವಿಮಾನಯಾನ ಸಂಸ್ಥೆ ಕ್ರಮ ಕೈಗೊಂಡಿದೆ. ಇತ್ತ ಪೊಲೀಸ್ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ. https://kannadanewsnow.com/kannada/drunk-man-urinates-on-woman-in-business-class-of-us-india-air-india-flight/ https://kannadanewsnow.com/kannada/former-cm-sm-krishna-announced-his-retirement-from-politics/ https://kannadanewsnow.com/kannada/people-will-give-a-befitting-reply-to-siddaramaiah-cm-bommai/

Read More

ಮಂಗಳೂರು : ನಗರದ ನಂತೂರು ಬಳಿ ದ್ವಿಚಕ್ರ ವಾಹನದಲ್ಲಿ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/former-cm-sm-krishna-announced-his-retirement-from-politics/  ನಂತೂರು ಬಳಿ ದ್ವಿಚಕ್ರ ವಾಹನದಲ್ಲಿ 500 ರು. ಮುಖಬೆಲೆಯ 4.50 ಲಕ್ಷ ರು. ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ ಬಂಟ್ವಾಳದ ಬಿ.ಸಿ.ರೋಡ್‌ ನಿವಾಸಿ ನಿಜಾಮುದ್ದೀನ್‌,  ಮಂಗಳೂರು ಜೆಪ್ಪು ನಿವಾಸಿ ರಜೀಮ್‌ ಯಾನೆ ರಫಿ ಬಂಧಿತರಾಗಿದ್ದಾರೆ ಎಂದು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಮಾಹಿತಿ ನೀಡಿದ್ದಾರೆ. https://kannadanewsnow.com/kannada/former-cm-sm-krishna-announced-his-retirement-from-politics/ ನಗರದ  ನಂತೂರು ಬಳಿ ವಾಹನ ತಪಾಸಣೆ ವೇಳೆ ಪೊಲೀಸರನ್ನು ಕಂಡು ಇಬ್ಬರು ವೇಗವಾಗಿ ತಮ್ಮ ದ್ವಿಚಕ್ರ ವಾಹನದಲ್ಲಿ ಮುಂದೆ ಸಾಗಿಸರು ಅನುಮಾನ ಪಟ್ಟು ಪೊಲೀಸರು ಬೆನ್ನಟ್ಟಿದ್ದಾರೆ. ಆಗ 4.50 ಲಕ್ಷ ರು. ಖೋಟಾ ನೋಟುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ https://kannadanewsnow.com/kannada/former-cm-sm-krishna-announced-his-retirement-from-politics/

Read More

ಬೆಂಗಳೂರು : ಮಾಜಿ ಸಿಎಂ ಎಸ್.ಎಂ ಕೃಷ್ಣ ( S.M Krishna) ರಾಜಕೀಯ ನಿವೃತ್ತಿ ಘೋಷಣೆ  ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಎಸ್ ಎಂ ಕೃಷ್ಣ ನಾನು ಹೆಚ್ಚಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. 90 ವರ್ಷದ ವಯಸ್ಸಿನಲ್ಲಿ 50 ವರ್ಷದ ವ್ಯಕ್ತಿ ಹಾಗೆ ನಟಿಸೋಕೆ ಆಗುತ್ತಾ..? ಆದ್ದರಿಂದ ರಾಜಕೀಯ ಜೀವನಕ್ಕೆ ಗುಡ್ ಬೈ ಹೇಳುವ ಬಗ್ಗೆ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ವಯಸ್ಸಿನ ಕಾರಣದಿಂದ ಸಾರ್ವಜನಿಕ ಜೀವನದಿಂದ ದೂರ ಇದ್ದೇನೆ, ಹಾಗಾಗಿ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಎಸ್.ಎಂ ಕೃಷ್ಣ 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯು ಸಹ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್…

Read More

ಬಳ್ಳಾರಿ : ಸಿದ್ದರಾಮಯ್ಯ ಹೇಳಿಕೆಗೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳ ವಿರುದ್ಧ ಸಿದ್ದರಾಮಯ್ಯ ಅವರು ನಾಯಿ ಮರಿ ಪದ ಬಳಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ಹೇಳಿಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ತೋರಿಸುತ್ತದೆ. ನಾಯಿ ನಿಯತ್ತಿನ ಪ್ರಾಣಿ. ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ. ನಿಯತ್ತನ್ನ ಜನರ ಪರವಾಗಿ ಉಳಿಸಿಕೊಂಡು ಹೋಗುವೆ ಎಂದರು. ದೌರ್ಭಾಗ್ಯ ನೀಡಿಲ್ಲ ಅವರ ಹಾಗೆ ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಸೌಭಾಗ್ಯ ಕೊಡುತ್ತೇವೆ ಎಂದು ಹೇಳಿ ದೌರ್ಭಾಗ್ಯ ನೀಡಿಲ್ಲ . ಈ ರೀತಿಯ ಕೆಲಸ ನಾವು ಮಾಡಿಲ್ಲ ಎಂದರು. ರಾಜಕೀಯವಾಗಿ ಹೇಳಿಕೆ ಸಲ್ಲದು ಬಹಿರಂಗ ಚರ್ಚೆಗೆ ಸಿದ್ದರಾಮಯ್ಯ ಆಹ್ವಾನ ನೀಡಿರುವ ಹಿನ್ನಲೆಯಲ್ಲಿ ಮಾತನಾಡಿ ವಿಧಾನಸಭೆಗಿಂತ ದೊಡ್ಡ ವೇದಿಕೆ ಯಾವುದೂ ಇಲ್ಲ. 15 ದಿನಗಳ ಕಾಲ ಸದನ ನಡೆಯಿತು. ಅದಕ್ಕಿಂತಲೂ ಹಿಂದೆಯೂ ನಡೆದಿದೆ. ವೇದಿಕೆ ಇದ್ದಾಗ ಚರ್ಚೆ ಮಾಡದೆ, ಹೊರಗೆ…

Read More

ನೊಯ್ಡಾ :  ಕರ್ನಾಟದಲ್ಲಿ ಚಿರತೆ ಪ್ರತ್ಯಕ್ಷ ಬೆನ್ನಲ್ಲೆ ಇದೀಗ ನೊಯ್ಡಾದಲ್ಲಿ  ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿ  ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದ್ದು ಆತಂಕ ಸೃಷ್ಟಿಯಾಗಿದೆ. ಬಳಿಕ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿದ್ದಾರೆ.  https://kannadanewsnow.com/kannada/murugh-sri-poxo-case-2/ ನಿರ್ಮಾಣ ಹಂತದ ಕಟ್ಟಡದ ಮಹಡಿಯ  ಬಳಿ ಚಿರತೆ ಓಡುತ್ತಿರುವ  ದೃಶ್ಯಗಳು ಸೆರೆಯಾಗಿದ್ದು, ಚಿರತೆ ಓಡಾಟದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ (ಎಫ್‌ಡಿಒ) ಪ್ರಮೋದ್ ಶ್ರೀವಾಸ್ತವ ಖಚಿತಪಡಿಸಿ ಮಾಹಿತಿ ನೀಡಿದ್ದಾರೆ. https://kannadanewsnow.com/kannada/murugh-sri-poxo-case-2/ ಇದೀಗ   ಆನ್‌ಲೈನ್‌ನಲ್ಲಿ ವಿಡಿಯೋ ವೈರಲ್‌ ಕೂಡ ಆಗಿದೆ. ಈ ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿ ವಸತಿ ಪ್ರದೇಶದಲ್ಲಿ ಚಿರತೆ ಸೆರೆಯಾಗಿ ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಮೀರತ್‌ನ ತಜ್ಞರನ್ನು ಸಹ ನಿಯೋಜನೆ ಮಾಡಲಾಗಿದೆ. ಅರಣ್ಯ ಇಲಾಖೆಯಿಂದ ಚಿರತೆ ಸೆರೆ ಹಿಡಿಯಲು ಬೋನು ಇಡೋದಕ್ಕೆ ಆದೇಶ ಕೂಡಾ ನೀಡಲಾಗಿದೆ. ಶೋಧಕಾರ್ಯ ಮುಂದುವರಿಸಿದ್ರು, ಅರಣ್ಯಾಧಿಕಾರಿಗಳಿಂದ ಚಿರತೆ ಸೆರೆ ಹಿಡುಯುವಾಗ ತಪ್ಪಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. https://twitter.com/Mamtagusain5/status/1610311407836467200?ref_src=twsrc%5Etfw%7Ctwcamp%5Etweetembed%7Ctwterm%5E1610311407836467200%7Ctwgr%5Eb2879093db69ff919a19c748c74bc572982ef2ce%7Ctwcon%5Es1_c10&ref_url=https%3A%2F%2Ftv9kannada.com%2Fnational%2Fleopard-seen-again-in-noida-ajnara-le-garden-society-rescue-operation-on-sct-au49-495613.html

Read More

ಮಂದಮರ್ರಿ: ಮಂದಮರ್ರಿ ಟೋಲ್ ಬೂತ್‌ನಲ್ಲಿ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ಶಾಸಕ ದುರ್ಗಂ ಚಿನ್ನಯ್ಯ ಟೋಲ್​​​ ಪ್ಲಾಜಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಚಿನ್ನಯ್ಯ ಕಾರಿಗೆ ಗೇಟ್ ತೆರೆಯದ ಕಾರಣಕ್ಕೆ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ದುರ್ಗಂ ಚಿನ್ನಯ್ಯ ಅವರು ತೆಲಂಗಾಣದ ಬೆಳ್ಳಂಪಲ್ಲೆ ಶಾಸಕರಾಗಿದ್ದಾರೆ. ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಘಟನೆ ನಿನ್ನೆ (ಮಂಗಳವಾರ) ರಾತ್ರಿ ನಡೆದಿದೆ. ವೀಡಿಯೊದಲ್ಲಿ, ಟೋಲ್ ಪ್ಲಾಜಾ ಉದ್ಯೋಗಿಯ ಅಸಭ್ಯ ವರ್ತನೆಯನ್ನು ನಿಯಂತ್ರಿಸಲು ಸಿಬ್ಬಂದಿ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಶಾಸಕ ವ್ಯಕ್ತಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. #WATCH | Telangana | BRS MLA Durgam Chinnaiah allegedly assaults a toll plaza staff at Mandamarri toll plaza We have seen the video on social media. We have…

Read More

ಬೀದರ್ : ಜ. 7 ರಂದು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಜಿಲ್ಲಾ ಕೌಶಲ ಅಭಿವೃದ್ಧಿ ಕಚೇರಿ ಬೀದರ್ ಮತ್ತು ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಭೂಮರೆಡ್ಡಿ ಕಾಲೇಜು ಆವರಣ, ಬೀದರ್ ನಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9480842995, 9008736661, 9071000027 ಕರೆ ಮಾಡಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಉದ್ಯೋಗ ಮೇಳದಲ್ಲಿ ಎಸ್ಎಸ್ಎಲ್ಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ ಅಭಿವೃದ್ಧಿ ಕಚೇರಿ, ನೌಬಾದ ಬೀದರ್ ಇವರನ್ನು ಸಂಪರ್ಕಿಸಬಹುದಾಗಿದೆ. https://kannadanewsnow.com/kannada/doctor-leaves-towel-inside-womans-stomach-in-up-probe-launched/ https://kannadanewsnow.com/kannada/murugh-sri-poxo-case-2/

Read More