Author: KNN IT TEAM

ಬೆಂಗಳೂರು : ಓಲಾ, ಊಬರ್ ದರ ನಿಗದಿಗೊಳಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಓಲಾ, ಉಬರ್ ಕ್ಯಾಬ್ ಗಳಿಗೆ ಮಿನಿಮಮ್ ಚಾರ್ಜ್ ಜೊತೆಗೆ ಶೇ. 5 ರಷ್ಟು ದರ ಫಿಕ್ಸ್ ಮಾಡಿ ರಾಜ್ಯ ಸಾರಿಗೆ ಇಲಾಖೆ ನ.25 ರಂದು ಆದೇಶ ಹೊರಡಿಸಿತ್ತು. ಸರ್ಕಾರದ ಕ್ರಮವನ್ನು ಓಲಾ, ಊಬರ್ , ಆಟೋ ಚಾಲಕರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಇದೀಗ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ.25 ರಂದು ಓಲಾ, ಉಬರ್ ಗಳಿಗೆ ಮಿನಿಮಮ್ ಚಾರ್ಜ್ ಜೊತೆಗೆ ಶೇ. 5 ರಷ್ಟು ದರ ಫಿಕ್ಸ್ ಮಾಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಮಿನಿಮಮ್ ಚಾರ್ಜ್ 30,40, 60 ರೂ. ಇದ್ದರೆ ಶೇ. 5 ರಷ್ಟು ಹೆಚ್ಚಿಸುವುದರ ಜೊತೆಗೆ ಶೇ. 5 ರಷ್ಟು ಜಿಎಸ್ ಟಿ ಸೇರಿಸಲು ರಾಜ್ಯ ಸಾರಿಗೆ ಇಲಾಖೆ ಸೂಚನೆ ನೀಡಿತ್ತು. ಓಲಾ, ಉಬರ್ ಗಳಿಗೆ ಮಿನಿಮಮ್ ಚಾರ್ಜ್ ಜೊತೆಗೆ ಶೇ. 5…

Read More

ಬಿಹಾರ : ಬಿಹಾರ ಸ್ಟಾಫ್ ಸೆಲೆಕ್ಷನ್ ಕಮಿಷನ್ (BSSC) CGL ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆಕಾಂಕ್ಷಿಗಳ ಮೇಲೆ ಬಿಹಾರ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪಟ್ನಾದ ಡಾಕ್ ಬಂಗಲೆ ಚೌರಾಹಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದರು. ಪೇಪರ್ ಸೋರಿಕೆಯ ವರದಿಗಳು ಸಾರ್ವಜನಿಕವಾಗಿ ಹೊರಹೊಮ್ಮಿದ ನಂತರ ಬಿಹಾರ ಸಿಬ್ಬಂದಿ ಆಯ್ಕೆ ಆಯೋಗದ (ಬಿಎಸ್‌ಎಸ್‌ಸಿ) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿಹಾರ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. https://twitter.com/ANI/status/1610548896195043329 ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಕೆಲವರು ಹಿಂಸಾಚಾರ ಮತ್ತು ವಿಧ್ವಂಸಕತೆ ನಡೆಸಲು ಮುಂದಾದರು. ಅವರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕಾಯಿತು. ಅದರಲ್ಲಿ ಕೆಲವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪಾಟ್ನಾದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎಂಎಸ್ ಖಾನ್ ಹೇಳಿದ್ದಾರೆ. https://twitter.com/ANI/status/1610553399027863553 https://kannadanewsnow.com/kannada/india-approves-rs-19744-crore-incentive-plan-for-green-hydrogen-industry/ https://kannadanewsnow.com/kannada/five-security-personnel-injured-as-street-vendors-clash-at-delhis-india-gate/

Read More

ನವದೆಹಲಿ: ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಈ ಕ್ಷೇತ್ರದಲ್ಲಿ ಪ್ರಮುಖ ರಫ್ತುದಾರನಾಗಲು ಹಸಿರು ಹೈಡ್ರೋಜನ್ ಅನ್ನು ಉತ್ತೇಜಿಸಲು ಭಾರತವು 19,744 ಕೋಟಿ ರೂ.ಗಳ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಮಾಹಿತಿ ಸಚಿವ ಅನುರಾಗ್ ಠಾಕೋರ್ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಹಸಿರುಮನೆ ಅನಿಲ ಹೊರಸೂಸುವ ದೇಶಗಳಲ್ಲಿ ಒಂದಾದ ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸಲು ಸಹಾಯ ಮಾಡುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದರು. ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಗೆ ( National Green Hydrogen Mission ) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತವು ಹಸಿರು ಜಲಜನಕದ ಜಾಗತಿಕ ಕೇಂದ್ರವಾಗಲಿದೆ. https://twitter.com/ANI/status/1610576551418159106

Read More

ನವದೆಹಲಿ : ಪ್ರಧಾನಿ ಮೋದಿ ಅವ್ರ ಅಧ್ಯಕ್ಷತೆಯಲ್ಲಿ ಬುಧವಾರ ಕೇಂದ್ರ ಸಚಿವ ಸಂಪುಟದ ಸಭೆ ನದಿದ್ದು,. ಅನೇಕ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳಲಾಯಿತು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಕೇಂದ್ರ ಸಚಿವ ಸಂಪುಟ ಇಂದು ಅನುಮೋದಿಸಿದೆ ಎಂದರು. ಭಾರತವು ಹಸಿರು ಜಲಜನಕದ ಜಾಗತಿಕ ಕೇಂದ್ರವಾಗಲಿದ್ದು, ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸಲಾಗುವುದು. ಈ ಯೋಜನೆಯ ಅಡಿಯಲ್ಲಿ, 2030 ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸಲಾಗುವುದು ಎಂದು ಸಚಿವರು ಹೇಳಿದರು. ಇನ್ನು ಖರೀದಿದಾರರು ಮತ್ತು ಮಾರಾಟಗಾರರನ್ನ ಒಂದೇ ಸೂರಿನಡಿ ತರಲು ಹಸಿರು ಹೈಡ್ರೋಜನ್ ಕೇಂದ್ರವನ್ನ ಅಭಿವೃದ್ಧಿಪಡಿಸಲಾಗುವುದು. ದೇಶದಲ್ಲಿ ಎಲೆಕ್ಟ್ರೋಲೈಜರ್ ತಯಾರಿಕೆಗೆ ಐದು ವರ್ಷಗಳವರೆಗೆ ಪ್ರೋತ್ಸಾಹಧನ ಇರುತ್ತದೆ ಎಂದರು. https://kannadanewsnow.com/kannada/bjp-congress-dog-fight-i-am-a-dog-that-protects-peoples-interests-says-cm-bommai/ https://kannadanewsnow.com/kannada/bjp-congress-dog-fight-i-am-a-dog-that-protects-peoples-interests-says-cm-bommai/ https://kannadanewsnow.com/kannada/bengaluru-jal-board-has-assigned-the-ccb-to-investigate-the-case-of-theft-of-water-bill-by-staff-bwssb-bill-scam/

Read More

ಬೆಂಗಳೂರು : ನಾಯಿಯಷ್ಟು ನಿಯತ್ತಿನ ಪ್ರಾಣಿ ಮತ್ತೊಂದು ಇಲ್ಲ ಎಂದು ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ವಸತಿ ಸಚಿವ ವಿ. ಸೋಮಣ್ಣ ಮಾತನಾಡಿದ್ದು, ಸಿಎಂ ಬೊಮ್ಮಾಯಿಯನ್ನು ನಾಯಿಗೆ ಹೋಲಿಸಿರುವ ಸಿದ್ದರಾಮಯ್ಯ ನಡೆಗೆ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. ನಾಯಿಯಷ್ಟು ನಿಯತ್ತಿನ ಪ್ರಾಣಿ ಮತ್ತೊಂದು ಇಲ್ಲ, ಮನುಷ್ಯರಿಗೆ ಕೂಡ ಅಷ್ಟು ನಿಯತ್ತಿರುವುದಿಲ್ಲ ಎಂದು ಸಚಿವ ಸೋಮಣ್ಣ ಕಿಡಿಕಾರಿದ್ದಾರೆ. ಬೊಮ್ಮಾಯಿ ಬಿಜೆಪಿಗೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಸಿಎಂ, ಬೊಮ್ಮಾಯಿ ರಾಜ್ಯದ ಆರೂವರೆ ಕೋಟಿ ಜನರ ಮುಖ್ಯಮಂತ್ರಿ, ಸಿಎಂ ಬಗ್ಗೆ ಇಂತಹ ನೀಡುವುದು ಸರಿಯಲ್ಲ, ಸಿದ್ದರಾಮಯ್ಯ ತಮ್ಮ ಭಾಷೆಯನ್ನು ಕಂಟ್ರೋಲ್ ಮಾಡಲಿ, 2023 ಕ್ಕೆ ಮತ್ತೆ ಬೊಮ್ಮಾಯಿ ಸಿಎಂ ಆಗಲಿದ್ದಾರೆ , ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಇನ್ನೊಬ್ಬ ಸಿಎಂ ಬಗ್ಗೆ ಹೀಗೆ ಮಾತನಾಡುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ. https://kannadanewsnow.com/kannada/bengaluru-jal-board-has-assigned-the-ccb-to-investigate-the-case-of-theft-of-water-bill-by-staff-bwssb-bill-scam/ https://kannadanewsnow.com/kannada/first-list-of-150-candidates-to-be-announced-by-end-of-this-month-siddaramaiah/ https://kannadanewsnow.com/kannada/five-security-personnel-injured-as-street-vendors-clash-at-delhis-india-gate/

Read More

ನವದೆಹಲಿ: ದೆಹಲಿಯ ಶಹಜಹಾನ್ ರಸ್ತೆಯ ಚಿಲ್ಡ್ರನ್ ಪಾರ್ಕ್ನಲ್ಲಿ ಮಂಗಳವಾರ ಬೀದಿ ಬದಿ ವ್ಯಾಪಾರಿಗಳ ಗಲಾಟೆ  ನಡೆದ ಸಂರ್ಭದಲ್ಲಿ  ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. https://kannadanewsnow.com/kannada/may-sonia-gandhi-get-well-soon-siddaramaiah-tweeted/ ಎಎನ್ಐ ಪ್ರಕಾರ, ಇಂಡಿಯಾ ಗೇಟ್  ಬಳಿ  ಮಾರಾಟವಿಲ್ಲದ ವಲಯವಾಗಿರುವುದರಿಂದ ಖಾಸಗಿ ಭದ್ರತಾ ಸಿಬ್ಬಂದಿ ಅವರಿಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ನೀಡದ ಕಾರಣ ಜಗಳ ಪ್ರಾರಂಭವಾಯಿತು. https://kannadanewsnow.com/kannada/may-sonia-gandhi-get-well-soon-siddaramaiah-tweeted/ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (NDMC) ಟ್ರಕ್ ಮಾರಾಟಗಾರರ ಸಾಮಗ್ರಿಗಳನ್ನು ಲೋಡ್ ಮಾಡಲು ಪ್ರಾರಂಭಿಸಿದಾಗ, ಉದ್ರೇಕಗೊಂಡ ಮಾರಾಟಗಾರರು ಗಾರ್ಡ್‌ಗಳ ಮೇಲೆ ನಿರ್ಮಾಣ ಸಾಮಗ್ರಿಗಳು ಮತ್ತು ಕೋಲುಗಳನ್ನು ಎಸೆಯಲು ಪ್ರಾರಂಭಿಸಿದರು, ಅವರಲ್ಲಿ ಐವರು ಗಾಯಗೊಂಡರು. https://twitter.com/ANI/status/1610507129907204096?ref_src=twsrc%5Etfw%7Ctwcamp%5Etweetembed%7Ctwterm%5E1610507129907204096%7Ctwgr%5Ece4150743cedc49754bbf4b86ffab7258a11fe5f%7Ctwcon%5Es1_c10&ref_url=https%3A%2F%2Fnews.abplive.com%2Fnews%2Findia%2Fdelhi-five-security-guards-injured-scuffle-vendors-children-park-india-gate-stretch-1573578 ಐಎಎನ್ಎಸ್ ಪ್ರಕಾರ, ಶಹಜಹಾನ್ ರಸ್ತೆಯ ಚಿಲ್ಡ್ರನ್ಸ್ ಪಾರ್ಕ್ನಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಕರೆ ಬಂದಿದ್ದು, ನಂತರ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಉಪ ಪೊಲೀಸ್ ಆಯುಕ್ತ (ನವದೆಹಲಿ) ಪ್ರಣವ್ ತಯಾಲ್ ತಿಳಿಸಿದ್ದಾರೆ. “ಇಂಡಿಯಾ ಗೇಟ್ ವಿಸ್ತರಣೆ ಯಾವುದೇ ಮಾರಾಟ ವಲಯವಲ್ಲ. ಮಧ್ಯಾಹ್ನ…

Read More

ತುಮಕೂರು: ಈಗಾಗಲೇ ಜೆಡಿಎಸ್ ಪಕ್ಷದಿಂದ (JDS Party) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 2ನೇ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದ ( Congress Party ) ಈ ತಿಂಗಳ ಅಂತ್ಯಕ್ಕೆ 150 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ಈ ಬಗ್ಗೆ ತುಮಕೂರಿನ ತುರುವೇಕೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರು, ಈ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಮೊದರ ಪಟ್ಟಿಯಲ್ಲಿ 150 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವುದಾಗಿ ಹೇಳಿದರು. ಇನ್ನೂ ಸಿದ್ದರಾಮಯ್ಯ ಆಪ್ತ ಕೆ ಆರ್ ಪಿಪಿ ಸೇರ್ಪಡೆಯ ವಿಚಾರವಾಗಿ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರಲ್ಲಿ ಯಾರೋ ಒಬ್ಬರು ಹೋದರೇ ಹೋಗಲಿ ಎಂದರು. ಸಿಎಂ ಬೊಮ್ಮಾಯಿಯವರು ನರೇಂದ್ರ ಮೋದಿಯವರ ಮುಂದೆ ನಾಯಿ ಮರಿ ಇದ್ದಂತೆ ಇರುತ್ತಾರೆ. ಮೋದಿ ಮುಂದೆ ಗಡಗಡ ನಡುಗುತ್ತಾರೆ ಎಂಬುದಾಗಿ ಸಿಎಂ ಬಗ್ಗೆ…

Read More

ಬೆಂಗಳೂರು: ಬೆಂಗಳೂರು ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್   ಬಿಲ್ ಗೆ ಕನ್ನ ಹಾಕಿರುವ ಪ್ರಕರಣವನ್ನು ಬೆಂಗಳೂರು ಜಲ ಮಂಡಳಿ ಸಿಸಿಬಿ (CCB) ತನಿಖೆಗೆ ವಹಿಸಿದೆ. ಗ್ರಾಹಕರು ಕಟ್ಟಿದ ಹಣವನ್ನು ಜಲಮಂಡಳಿಗೆ ನೀಡಿದೆ ವಂಚನೆ ಮಾಡಿರುವ ಘಟನೆ ನಡೆದಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರ ಸೇರಿದಂತೆ ಒಟ್ಟು 9 ಜನರ ಬಂಧನವಾಗಿದೆ. ರೆವಿನ್ಯೂ ಮ್ಯಾನೇಜರ್ ಆಗಿರುವ ಎಫ್ಡಿಎ ನೌಕರ, ಗ್ರೂಪ್ ಡಿ ನೌಕರ, ಐವರು ಗುತ್ತಿಗೆದಾರರನ್ನು ಬೊಮ್ಮನಹಳ್ಳಿ ಪೊಲೀಸರು ಪ್ರಕರಣದ ಸಂಬಂಧ ಬಂಧಿಸಿದ್ದಾರೆ. ಒಂದೂವರೆ ಕೋಟಿ ರೂ ವಂಚನೆಯಾಗಿದೆ ಎನ್ನಲಾಗಿದೆ. ವರದರಾಜು, ಕಿರಣ್ ಕುಮಾರ್, ನಿರ್ಮಲ್ ಕುಮಾರ್, ಚೌಡೇಶ್, ಮಂಜುನಾಥ್, ಮಹದೇವಸ್ವಾಮಿ, ಉಮೇಶ್, ಬಸವರಾಜು ಬಂಧಿತರು. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ್ದಾರೆ. 2018ರಿಂದ 2022ರವರೆಗೆ ಈ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ. https://kannadanewsnow.com/kannada/siddaramaiah-what-are-you-in-front-of-dk-minister-ashok-vagdhali/ https://kannadanewsnow.com/kannada/provide-compensation-for-the-loss-of-farmers-due-to-deforestation-protect-the-villagers-dksh-urges-cm-bommai/

Read More

ಬೆಂಗಳೂರು : ಬೆಂಗಳೂರಿನ ಕನಕಪುರದ ಕೆಬ್ಬಳ್ಳಿ,ನಾರಾಯಣಪುರ,ಬೆಟ್ಟೆಗೌಡನದೊಡ್ಡ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.  ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟ್ವೀಟ್‌ ಮೂಲಕ  ರೈತರಿಗೆ ಹರಿಹಾರ ನೀಡುವಂತೆ  ಸಿಎಂ ಬಸವರಾಜ ಬೊಮ್ಮಾಯಿಗೆ  ಮನವಿ ಮಾಡಿದ್ದಾರೆ https://kannadanewsnow.com/kannada/may-sonia-gandhi-get-well-soon-siddaramaiah-tweeted/ ಕಾಡಾನೆಗಳ ದಾಳಿಯಿಂದ ಕನಕಪುರದ ಕೆಬ್ಬಳ್ಳಿ,ನಾರಾಯಣಪುರ,ಬೆಟ್ಟೆಗೌಡನದೊಡ್ಡ, ಶ್ರೀನಿವಾಸಪುರ ರೈತರ ಬೆಳೆಗಳು ನಾಶವಾಗಿದ್ದು ಅರಣ್ಯ ಇಲಾಖೆ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಸರ್ಕಾರ ರೈತರ ಹಿತಕಾಯುವಲ್ಲಿ ವಿಫಲವಾಗಿದೆ. ರೈತರಿಗಾದ ನಷ್ಟಕ್ಕೆ ಪರಿಹಾರ ಒದಗಿಸಿ, ಗ್ರಾಮಸ್ಥರಿಗೆ ರಕ್ಷಣೆನೀಡಬೇಕೆಂದು  ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದ ಟ್ವೀಟ್‌ ಮಾಡಿದ್ದಾರೆ https://twitter.com/DKShivakumar/status/1610299139593760768?s=20&t=gEX0hhYpi67iVYNHXQlHDg https://kannadanewsnow.com/kannada/may-sonia-gandhi-get-well-soon-siddaramaiah-tweeted/

Read More

ನವದೆಹಲಿ : ದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ ಪ್ಯಾರಿಸ್’ಗೆ ಹೊರಟಿದ್ದ ವಿಮಾನವೊಂದು ಐಜಿಐ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಿದೆ. ಇನ್ನು ಈ ವಿಮಾನದಲ್ಲಿ 218 ಪ್ರಯಾಣಿಕರಿದ್ದು, ವಿಮಾನ ಹಿಂತಿರುಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಏಮ್ಸ್ ಆಸ್ಪತ್ರೆ, ಅಗ್ನಿಶಾಮಕ ಇಲಾಖೆ ಮತ್ತು ದೆಹಲಿಯ ಎಲ್ಲಾ ಭದ್ರತಾ ಏಜೆನ್ಸಿಗಳಿಗೆ ತುರ್ತು ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ತುರ್ತು ಭೂಸ್ಪರ್ಶಕ್ಕಾಗಿ ಐಜಿಐ ವಿಮಾನ ನಿಲ್ದಾಣದ ಒಂದು ಭಾಗವನ್ನು ಮುಚ್ಚಲಾಗಿದೆ. ಐಜಿಐ ವಿಮಾನ ನಿಲ್ದಾಣ ಜಿಲ್ಲಾ ಡಿಸಿಪಿ ರವಿ ಕುಮಾರ್ ಸಿಂಗ್ ತುರ್ತು ಭೂಸ್ಪರ್ಶವನ್ನ ಖಚಿತಪಡಿಸಿದ್ದಾರೆ. ಪ್ಯಾರಿಸ್ ನಿಂದ ಹಿಂದಿರುಗುವ ವಿಮಾನವು ಶೀಘ್ರದಲ್ಲೇ ತುರ್ತು ಭೂಸ್ಪರ್ಶ ಮಾಡಲಿದೆ. ಆದಾಗ್ಯೂ, ತುರ್ತು ಭೂಸ್ಪರ್ಶವನ್ನು ಏಕೆ ನಡೆಸಲಾಗುತ್ತಿದೆ ಮತ್ತು ಅದನ್ನು ಗೌಪ್ಯವಾಗಿಡಲಾಗುತ್ತಿದೆ ಎಂದು ಜಿಲ್ಲಾ ಡಿಸಿಪಿ ಹೇಳಲಿಲ್ಲ. https://kannadanewsnow.com/kannada/breaking-news-former-congress-president-sonia-gandhis-health-deteriorates-hospitalised-sonia-gandhi-hospitalised/ https://kannadanewsnow.com/kannada/dks-response-to-siddaramaiahs-statement-naai-narayana-is-a-dear-animal/ https://kannadanewsnow.com/kannada/bjp-congress-dog-fight-i-am-a-dog-that-protects-peoples-interests-says-cm-bommai/

Read More