Author: KNN IT TEAM

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ನಿಟ್ಟಿನಲ್ಲಿ, ಹಿರಿಯ ಐಎಎಸ್ ಮೇಜರ್ ಮಣಿವಣ್ಣನ್ ಸೇರಿದಂತೆ ಮೂವರನ್ನು ವರ್ಗಾವಣೆಗೊಳಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದಂತ ಮೇಜರ್ ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿ, ಅಲ್ವ ಸಂಖ್ಯಾತ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದೆ. ಬೆಂಗಳೂರಿನ ಬಿಬಿಎಂಪಿಯ ಸ್ಪೆಷಲ್ ಕಮೀಷನರ್ ಆಗಿದ್ದಂತ ಡಾ. ರಾಮ್ ಪ್ರಶಾಂತ್ ಮನೋಹರ್ ವಿ ಅವರನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಇನ್ನೂ ಬೆಳಗಾವಿ ವಿಭಾಗದ ಪ್ರಾದೇಶಿಕ ಕಮೀಷನರ್ ಆಗಿದ್ದಂತ ಹಿರೇಮಠ್ ಎಂ.ಜಿ ಅವರನ್ನು ಕೆಆರ್ ಐಡಿಎಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಿಸಿದೆ. https://kannadanewsnow.com/kannada/good-news-the-amazing-discovery-of-scientists-there-will-be-no-death-due-to-heart-attack-in-future/ https://kannadanewsnow.com/kannada/major-achievements-in-the-health-sector-in-2022-reduction-in-neonatal-mortality-rate-increase-in-sex-ratio/

Read More

ಮೈಸೂರು : ಮೈಸೂರಿನಲ್ಲಿ ಭಾರೀ ಆತಂಕ ಮೂಡಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರು ತಾಲೂಕಿನ ಇಲವಾಲಾ ಬಳಿ ಆರ್ ಎಮ್ ಪಿ ಆವರಣದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಚಿರತೆ ಬೋನಿಗೆ ಬಿದ್ದ ಹಿನ್ನೆಲೆ ತಾಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. https://kannadanewsnow.com/kannada/these-computers-will-not-get-chrome-support-from-15-january/ https://kannadanewsnow.com/kannada/accident-while-returning-from-sabari-hill-ayyappa-garlanded-boy-dies-family-members-are-shocked/ https://kannadanewsnow.com/kannada/if-congress-comes-to-power-we-will-give-10-kg-of-rice-siddaramaiahs-announcement/

Read More

ತುಮಕೂರು : ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ರಾಜ್ಯದ ಬಡ ಜನರು ನೆಮ್ಮದಿಯಿಂದ ಊಟ ಮಾಡಬೇಕು, ಹಾಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ನಾಯಿ ಮರಿಯಂತೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತುರುವೇಕೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿಲ್ಲ, ನಮ್ಮ ಹಳ್ಳಿ ಭಾಷೆಯಲ್ಲಿ ಹಾಗೆ ಮಾತನಾಡುವುದು, ಪ್ರಧಾನಿ ಮೋದಿ ಮುಂದೆ ಬೊಮ್ಮಾಯಿ ನಾಯಿಮರಿಯಂತೆ ಇರ್ತಾರೆ ಅಷ್ಟೇ ಎಂದು ಹೇಳಿದೆ ಎಂದು ಸ್ಪಷ್ಟನೆ ನೀಡಿದರು. ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಸಿಎಂ ಬಸವರಾಜ ಬೊಮ್ಮಾಯಿಗೆ ಧೈರ್ಯವಿದ್ರೆ ಅಭಿವೃದ್ಧಿ ಬಗ್ಗೆ ಚರ್ಚೆಗೆ…

Read More

ತುಮಕೂರು: ಇಂದು ತುರುವೆಕೆರೆಯಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ಧಾಳಿ ನಡೆಸಿದರು.  ತುಮಕೂರಿನ ಈ ಕಾಂಗ್ರೆಸ್ ಸಮಾವೇಶದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಇಡೀ ರಾಜ್ಯ ಹಾಗೂ ದೇಶಕ್ಕೆ ಒಂದು ಸಂದೇಶ ರವಾನಿಸಲಾಗುತ್ತಿದೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹೊಸ ಆಶಾಕಿರಣ ಮೂಡುತ್ತಿದ್ದು, ಕಾಂಗ್ರೆಸ್ ಬೆಳಕು ಹರಿಯುತ್ತಿದ್ದು, ಬಿಜೆಪಿ ಸರ್ಕಾರ ಮುಳುಗುತ್ತಿದೆ ಎಂದರು. ಕಾಂತರಾಜ್ ಅವರು ಜೆಡಿಎಸ್ ನಿಂದ ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಿದ್ದಾರೆ. ಇಲ್ಲಿ ಸಾಕಷ್ಟು ಮಂದಿ ಕಾಂಗ್ರೆಸ್ ನಾಯಕರು ಕಷ್ಟದ ಸಮಯದಲ್ಲಿ ಪಕ್ಷದ ಪರ ನಿಂತಿದ್ದಾರೆ. ಇಲ್ಲಿ ಬೇರೆಯವರಿಗೆ ಶಕ್ತಿ ಇಲ್ಲ ಎಂದು ಹೇಳುವುದಿಲ್ಲ. ಎಲ್ಲರೂ ಶಕ್ತಿವಂತರು. ಆದರೆ ರಾಜಕಾರಣದಲ್ಲಿ 49 ಶೂನ್ಯವಾದರೆ, 51 ನೂರಕ್ಕೆ ಸಮನಾಗುತ್ತದೆ. ಹಿಂದೆ ರುದ್ರಪ್ಪನವರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿದ್ದಿರಿ. ನಂತರ ಜಗ್ಗೇಶ್ ಅವರನ್ನು ಗೆಲ್ಲಿಸಿದ್ದಿರಿ.…

Read More

ಧಾರವಾಡ : ಶಬರಿ ಮಲೆಗೆ ಹೋಗಿ  ದೇವರ ದರ್ಶನ ಪಡೆದು ಬರುವಾಗ ಅಫಘಾತ ಸಂಭವಿಸಿದ್ದು,  ಧಾರವಾಡ ಜಿಲ್ಲೆಯ 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ https://kannadanewsnow.com/kannada/these-computers-will-not-get-chrome-support-from-15-january/ ಕೇರಳದ ಮನಪುರಂನ ಯಡಪ್ಪಾಲ ಎಂಬಲ್ಲಿ ಅಪಘಾತ ಸಂಭವಿಸಿ ಸುಮಿತ್ ಪಾಂಡೆ (10) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.  ಜ.1 ರಂದು ಸೈದಾಪುರದಿಂದ ಶಬರಿಮಲೆಗೆ ಟಾಟಾ ಏಸ್‌ ವಾಹನದಲ್ಲಿ ಅಯ್ಯಪ್ಪ ಮಾಲೆಧಾರಿಗಳು ತೆರಳಿದ್ದರು.  ಇನ್ನುಳಿದ . ಸೂರಜ್ ಪಾಡೆ, ನಿಖಿಲ್ ಪಾಂಡೆ ಹಾಗೂ ಸುಶಾಂತ್ ಪಾಂಡೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಸುಮಿತ್ ಪಾಂಡೆ ಪಾರ್ಥಿವ ಶರೀರವನ್ನು ಧಾರವಾಡಕ್ಕೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ.  ಮಗುವಿನ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. https://kannadanewsnow.com/kannada/these-computers-will-not-get-chrome-support-from-15-january/

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ವರ್ಷದ ಆರಂಭದೊಂದಿಗೆ ತಂತ್ರಜ್ಞಾನ ಲೋಕದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಫೆಬ್ರವರಿ 7 ರಂದು ತನ್ನ ಕ್ರೋಮ್ 110  (Chrome 110) ಅನ್ನು ಬಿಡುಗಡೆ ಮಾಡಲು ಗೂಗಲ್  (Google) ಸಿದ್ಧವಾಗಿದೆ. ಹೀಗಾಗಿ ಕಂಪನಿಯು ಕ್ರೋಮ್ (Chrome)ನ ಹಳೆಯ ಆವೃತ್ತಿಗಳಿಗೆ ತನ್ನ ಸೇವೆಯನ್ನು ಕೊನೆಗೊಳಿಸುತ್ತದೆ. ಈ ಬಗ್ಗೆ ಗೂಗಲ್ ಮಾಹಿತಿ ನೀಡಿದ್ದು, ಕ್ರೋಮ್ 109 (Chrome 109) ಎರಡು ಹಳೆಯ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್‌ ಗಳಾದ ವಿಂಡೋಸ್ 7 ಮತ್ತು ವಿಂಡೋಸ್ 8/8.1 ನಲ್ಲಿ ಕ್ರೋಮ್(Chrome) ಬೆಂಬಲವನ್ನು ಕೊನೆಗೊಳಿಸಲಿದೆ ಎಂದೇಳಿದೆ. ಜನವರಿ 15, 2023 ರೊಳಗೆ Chrome ನ ಹಳೆಯ ಆವೃತ್ತಿಗಳಿಗೆ Google ಬೆಂಬಲವನ್ನು ಕೊನೆಗೊಳಿಸುತ್ತದೆ. ಆದ್ದರಿಂದ, Chrome ನ ಹೊಸ ಆವೃತ್ತಿ ಅಂದರೆ Chrome 110 ಮೊದಲ ಆವೃತ್ತಿಯಾಗಿದೆ. ಇದಕ್ಕೆ ವಿಂಡೋಸ್ 10 (Windows) 10 ಅಥವಾ ನಂತರದ ಅಗತ್ಯವಿದೆ. ಟೆಕ್ ದೈತ್ಯ ಪ್ರಕಾರ, ಬಳಕೆದಾರರು ಕ್ರಾಸ್-ಪ್ಲಾಟ್‌ಫಾರ್ಮ್ ವೆಬ್ ಬ್ರೌಸರ್ Chrome ಅನ್ನು ಬಳಸುವುದನ್ನು ಮುಂದುವರಿಸಲು Windows 10…

Read More

ಬೆಂಗಳೂರು: ನಮ್ಮ ಮೆಟ್ರೋ ( Namma Metro ) ಪ್ರಯಾಣಿಕರ ಅನುಕೂಲಕ್ಕಾಗಿ, ಬೆಂಗಳೂರಿನ ಕೆಲ ಮೆಟ್ರೋ ನಿಲ್ದಾಣಗಳ ಬಳಿಯಲ್ಲಿ ಪೂರ್ವ ನಿಶ್ಚಿತ ಆಟೋ ರಿಕ್ಷಾ ( auto rickshaw ) ದರದ ಕೌಂಟರ್ ಗಳನ್ನು ಇಂದಿನಿಂದ ಆರಂಭಿಸಲಾಗುತ್ತಿದೆ. ಈ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ನಿವಾಸಗಳಿಗೆ ಆಟೋದಲ್ಲಿ ಪೂರ್ವ ನಿಗಧಿತ ದರದಲ್ಲಿ ತಲುಪುವಂತ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಿಎಂಆರ್ ಸಿಎಲ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಸಹಯೋಗದೊಂದಿಗೆ ಪೂರ್ವ ನಿಶ್ಚಿತ ಆಟೋ ರಿಕ್ಷಾ ದರದ ಕೌಂಟರ್ ಗಳನ್ನು ಇಂದು ಎಂ.ಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಪ್ರಾರಂಭಿಸಿರುವುದಾಗಿ ತಿಳಿಸಿದೆ. ಇನ್ನೂ ಈ ಕೌಂಟರ್ ಗಳನ್ನು ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ನಾಗಸಂದ್ರದ 2 ಸ್ಥಳಗಳಲ್ಲಿ ಮೆಟ್ರೋ ನಿಲ್ದಾಣಗಳ ಆಗಮನ, ನಿರ್ಗಮನ ದ್ವಾರಗಳಲ್ಲಿ ಪ್ರಾರಂಭಿಸಲಾಗುವುದು. ಪ್ರಯಾಣಿಕರು ಮೊದಲು ಮತ್ತು ಕೊನೆಯ ಮೈಲಿ ಸಂಪರ್ಕ ಭಾಗವಾಗಿ ಮತ್ತು ಬೆಂಗಳೂರಿನ ನಾಗರೀಕರು…

Read More

ರಾಯಚೂರು : ಹೊಸ ವರ್ಷದ ಹಿನ್ನೆಲೆ ಕುಡಿದ ಮತ್ತಿನಲ್ಲಿದ್ದ ಕಿಡಿಗೇಡಿಗಳ ಗುಂಪೊಂದು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಲ್ಲಿನ ಲಿಂಗಸನಗೂರು ಹೊರ ವಲಯದ ಕರಡಕಲ್ ಬಳಿ ನಡೆದಿದೆ. ಹೊಸ ವರ್ಷಕ್ಕೆ ಪಾರ್ಟಿ ಮಾಡಿ ಕುಡಿತದ ಅಮಲಿನಲ್ಲಿದ್ದ 10 ಮಂದಿ 2 ಹಾಸ್ಟೆಲ್ ಗೆ ಏಕಾಏಕಿ ನುಗ್ಗಿದೆ. ಸಿಕ್ಕ ಸಿಕ್ಕ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತಿಮ್ಮನಗೌಡ, ವೆಂಕಟೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲ್ಲೆ ನಡೆಸಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. https://kannadanewsnow.com/kannada/reduction-in-neonatal-mortality-rate-sex-ratio-to-rise-in-state-minister-sudhakar/ https://kannadanewsnow.com/kannada/does-eating-raisins-lead-to-sugar-do-you-know-the-opinions-of-experts-read-on-to-know-the-information/

Read More

Good News : ಸಾರ್ವಜನಿಕರಿಗೆ ‘ಕೇಂದ್ರ ಸರ್ಕಾರ’ದಿಂದ ಬಂಪರ್ ಆಫರ್ ; ಕುಳಿತಲ್ಲೇ ‘ಒಂದು ಲಕ್ಷ’ ಸಂಪಾದಿಸ್ಬೋದು, ಇಲ್ಲಿದೆ ಡಿಟೈಲ್ಸ್ನವದೆಹಲಿ : ಕೇಂದ್ರ ಸರ್ಕಾರವು ದೇಶದ ಜನರನ್ನ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಇತ್ತಿಚಿಗಷ್ಟೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ ಚಿರತೆಗಳ ಹೆಸರುಗಳನ್ನ ಸೂಚಿಸುವಂತೆ ಅವ್ರು ದೇಶದ ಜನರನ್ನ ಒತ್ತಾಯಿಸಿದ್ದರು. ಇದಕ್ಕಾಗಿ, ನಗದು ಬಹುಮಾನವನ್ನ ಸಹ ನೀಡಲಾಯ್ತು. ಊಗ ಇದರ ಭಾಗವಾಗಿ, ಭಾರತ ಸರ್ಕಾರವು ಇತ್ತೀಚೆಗೆ ದೇಶದ ಜನರಿಗೆ ಮತ್ತೊಂದು ಬಂಪರ್ ಕೊಡುಗೆಯನ್ನ ಘೋಷಿಸಿದೆ. ಆಯುಷ್ಮಾನ್ ಭಾರತ್ ಯೋಜನೆಗೆ ಹೊಸ ಲೋಗೋ ವಿನ್ಯಾಸವನ್ನ ಸೂಚಿಸಲು ಜನರಿಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರವು ದೇಶದ ಬಡ ಜನರಿಗೆ ಉಚಿತ ಆರೋಗ್ಯ ವಿಮೆಯನ್ನ ಒದಗಿಸುತ್ತಿದೆ. ಅಕ್ಟೋಬರ್ 25, 2021ರಂದು, ಆಯುಷ್ಮಾನ್ ಭಾರತ್ ಯೋಜನೆಯನ್ನ ಪ್ರಾರಂಭಿಸಲಾಯಿತು. ಇದರ ಭಾಗವಾಗಿ, ಅರ್ಹ ಜನರು 5 ಲಕ್ಷ ರೂಪಾಯಿವರೆಗಿನ ವೈದ್ಯಕೀಯ ಸೌಲಭ್ಯವನ್ನ ಉಚಿತವಾಗಿ ಒದಗಿಸಲಾಗುವುದು. ಈಗ ಸರ್ಕಾರವು ಈ ಯೋಜನೆಗಾಗಿ ಹೊಸ ಲೋಗೋವನ್ನು ವಿನ್ಯಾಸಗೊಳಿಸಲು ಜನರನ್ನ ಕೇಳಿದೆ.…

Read More

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಸಿಹಿತಿಂಡಿಗಳನ್ನು ತಯಾರಿಸುವಾಗ, ಅದಕ್ಕೆ ಹೆಚ್ಚಿನ ಪೋಷಕಾಂಶಗಳಿಂದ ಕೂಡಿರೋದಕ್ಕೆ ಒಣದ್ರಾಕ್ಷಿಗಳನ್ನು ಸೇರಿಸಲಾಗಿದೆ. ಇದನ್ನು ಸೇವಿಸುವಾಗ  ಮಧುಮೇಹದಿಂದ ಬಳಲುತ್ತಿರುವ ಜನರು ಸ್ವಲ್ಪ ಯೋಚಿಸುತ್ತಾರೆ. ಏಕೆಂದರೆ ಒಣದ್ರಾಕ್ಷಿ ತಿನ್ನುವುದರಿಂದ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು? ಅದರ ಭಯವು ಅವರನ್ನು ಕಾಡುತ್ತದೆ. ನೀವು ಮಧುಮೇಹದೊಂದಿಗೆ ಯಾವುದೇ ತೊಂದರೆಯಿಲ್ಲದೆ  ಒಣದ್ರಾಕ್ಷಿ ಗಳನ್ನು ತಿನ್ನಬಹುದು ಎಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ. https://kannadanewsnow.com/kannada/breaking-news-the-central-government-has-taken-an-important-decision-1800-additional-crpf-personnel-deployed-in-two-districts-of-jammu-and-kashmir/ ಒಣದ್ರಾಕ್ಷಿ ಸಾಮಾನ್ಯ ಹಣ್ಣುಗಳಂತೆಯೇ ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ. ಒಣದ್ರಾಕ್ಷಿಯಲ್ಲಿರುವ ನಾರಿನಂಶ, ಜೀವಸತ್ವಗಳು ಮತ್ತು ಖನಿಜಗಳು ಸಹ ದೇಹಕ್ಕೆ ಒಳ್ಳೆಯದು ಎಂದೆನ್ನುತ್ತಾರೆ ಒಣದ್ರಾಕ್ಷಿ ಗಳನ್ನು  ತಿನ್ನುವುದು ಒಳ್ಳೆಯದು, ಆದರೆ ಅದನ್ನು ಮಿತವಾಗಿ ತಿನ್ನಲು ಶಿಫಾರಸು ಮಾಡಲಾಗುತ್ತದೆ. ಒಣದ್ರಾಕ್ಷಿ ಗಳನ್ನು ತಿಂದ ನಂತರ ಕಾರ್ಬೋಹೈಡ್ರೇಟ್ ಗಳ ಶೇಕಡಾವಾರು ಪ್ರಮಾಣವನ್ನು ಸಹ ಲೆಕ್ಕಹಾಕಬೇಕು ಎಂದು ಸಹ ಹೇಳಲಾಗುತ್ತದೆ. ಒಣದ್ರಾಕ್ಷಿಯ ಇತರ ಪ್ರಯೋಜನಗಳ ಬಗ್ಗೆಯೂ ಕಲಿಯೋಣ. ಹೆಚ್ಚಿನ ಪೋಷಕಾಂಶಗಳು ಒಣದ್ರಾಕ್ಷಿ ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ನೀವು…

Read More