Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ರಾಜ್ಯದಲ್ಲಿ ಇಂದು 34 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಧೃಡವಾಗಿದ್ದು, ಬೆಂಗಳೂರಿನಲ್ಲಿ 24 ಜನರಿಗೆ ಸೋಂಕು ತಗುಲಿದೆ. ವಿದೇಶದಿಂದ ಬಂದ ಪ್ರಯಾಣಿಕರು ಸೇರಿದಂತೆ ರಾಜ್ಯದಲ್ಲಿ ಇಂದು 34 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸದ್ಯ 309 ಸಕ್ರಿಯ ಪ್ರಕರಣಗಳಿದೆ, ಪಾಸಿಟಿವಿಟಿ ದರ ಶೇ 0.32 ರಷ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. https://kannadanewsnow.com/kannada/isnt-salary-enough-working-as-a-part-time-lic-agent-and-making-money-easily-you-can-also-apply/ https://kannadanewsnow.com/kannada/forest-official-stops-traffic-to-let-tiger-and-baby-cross-road-in-maharashtras-tadoba-national-park/ https://kannadanewsnow.com/kannada/bjp-ministers-contact-with-santro-ravi-hdk-reveals-explosive-information/
ಬಳ್ಳಾರಿ: ಬಳ್ಳಾರಿಯಲ್ಲಿ ಯೋಜನಾಬದ್ಧ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಂದು ಉದ್ಘಾಟಿಸಲಾಗಿದೆ. ತಾಯಿ ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು, ಹಕ್ಕುಪತ್ರ ವಿತರಣೆ ಸುಮಾರು 600 ಕೋಟಿ ರೂ. ಗಿಂತಲೂ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಮಧ್ಯ ಕರ್ನಾಟಕದಲ್ಲಿ ಬಳ್ಳಾರಿ ಬಹಳ ಪ್ರಾಮುಖ್ಯತೆ ಪಡೆದಿರುವ ಊರು ಮತ್ತು ಜಿಲ್ಲೆ. ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ವಿಶೇಷ ಅಭಿವೃದ್ದಿ ಯೋಜನೆಯನ್ನು ರೂಪಿಸಲಾಗುವುದು ಎಂದರು. ಕಾರ್ಖಾನೆ ಸ್ಥಾಪನೆಗೆ ಕ್ರಮ ಕೆಕೆಆರ್ ಡಿಬಿಯಿಂದ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಆಗಿದ್ದರೂ, ರೈತರಿಗೆ ಪರಿಹಾರ ದೊರೆತಿಲ್ಲ. 10-12 ವರ್ಷಗಳ ಹಿಂದೆ ಪ್ರತಿಷ್ಠಿತ ಸ್ಟೀಲ್ ಮತ್ತು ವಿದ್ಯುತ್ ಕ್ಷೇತ್ರದ ಕಾರ್ಖಾನೆಗಳನ್ನು ಸ್ಥಾಪಿಸಲು ಮುಂದೆ ಬಂದಿದ್ದರೂ, ಅದನ್ನು ಕಾರ್ಯಗತ ಮಾಡಿಲ್ಲ. ಈಗಾಗಲೇ ಅವರಿಗೆ ಈ ಬಗ್ಗೆ ನೋಟೀಸ್ ನೀಡಲಾಗಿದೆ. ಅವರಿಂದ ಸ್ವಾಧೀನವಾಗಿರುವ ಭೂಮಿಯನ್ನು ಮರಳಿಪಡೆದು, ಅದೇ ಉದ್ದೇಶದ ಬೇರೆ ಸಂಸ್ಥೆಗೆ ನೀಡಲಾಗುವುದು…
ಬೆಂಗಳೂರು: 2018ರ ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಯಾರನ್ನೆಲ್ಲ ಬಳಕೆ ಮಾಡಿಕೊಳ್ಳಲಾಯಿತು? ಬಾಂಬೆಗೆ ಹೋದವರ ಮೋಜು ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದರು ಯಾರು? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿ ಅವರು; ಮೈಸೂರು ಪೊಲೀಸರು ಎಫ್ ಐ ಆರ್ ದಾಖಲು ಮಾಡಿರುವ ಸಾಂಟ್ರೋ ರವಿ ಹಾಗೂ ರಾಜ್ಯ ಬಿಜೆಪಿ ಸರಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ ಏನು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲೆಬೇಕು ಎಂದು ಆಗ್ರಹಪಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆವರು ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾರೆ, ಇಲ್ಲಿ ಅವರು ದಮ್ಮು ತಾಕತ್ತು ತೋರಿಸಲಿ ಎಂದು ಟಾಂಗ್ ನೀಡಿದರು ಮಾಜಿ ಮುಖ್ಯಮಂತ್ರಿಗಳು.ಕರ್ನಾಟಕವನ್ನು ಉಳಿಸುವುದು, ರಕ್ಷಣೆ ಮಾಡುವುದು ಜೆಡಿಎಸ್ ಪಕ್ಷದಿಂದ ಸಾಧ್ಯ ಇಲ್ಲ ಎಂದು ಹೇಳಿಕೆ ನೀಡಿರುವ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದ ಬಳಿಯ ಹೆದ್ದಾರಿ ಸಿಗ್ನಲ್‌ನಲ್ಲಿ ಕಾಡು ಹುಲಿ ಮತ್ತು ಮರಿಯನ್ನು ರಸ್ತೆ ದಾಟಲು ಅರಣ್ಯ ಅಧಿಕಾರಿಯೊಬ್ಬರು ಸಂಚಾರವನ್ನು ಸ್ಥಗಿತಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ವನ್ಯಜೀವಿ ಜೀವಶಾಸ್ತ್ರಜ್ಞ ಮಿಲಿಂದ್ ಪರಿವಾಕಂ ಎಂಬುವವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. 11 ಸೆಕೆಂಡ್‌ಗಳಿರುವ ಕಿರು ವಿಡಿಯೋ ಕ್ಲಿಪ್ ನಲ್ಲಿ ಹುಲಿ ಮತ್ತು ಅದರ ಮರಿ ಕಾಡಿನ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುತ್ತಿದ್ದು, ಆ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಜನರ ದೊಡ್ಡ ಗುಂಪು ತಾಳ್ಮೆಯಿಂದ ಕಾಯುತ್ತಿರುವುದನ್ನು ಕಾಣಬಹುದು. https://twitter.com/MilindPariwakam/status/1610453223978176513 ಈ ವಿಡಿಯೋ 17,000 ವೀಕ್ಷಣೆಗಳನ್ನು ಹಾಗೂ ಬಳಕೆದಾರರಿಂದ ಹಲವು ಕಾಮೆಂಟ್‌ಗಳನ್ನು ಪಡೆದಿದೆ. ಇನ್ನು ಅರಣ್ಯಾಧಿಕಾರಿಯ ಕಾರ್ಯಕ್ಕೆ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/good-news-if-the-train-is-delayed-the-passengers-will-get-the-full-money-back-minister-ashwini-vaishnaw-announcement-indian-railways/ https://kannadanewsnow.com/kannada/isnt-salary-enough-working-as-a-part-time-lic-agent-and-making-money-easily-you-can-also-apply/ https://kannadanewsnow.com/kannada/it-raid-on-former-minister-h-anjaneyas-house-in-chitradurga-it-raid/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಭಾರತದಲ್ಲಿನ ವಿಮಾ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗಿದ್ದು, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಅತಿದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಎಲ್ಐಸಿ ನೆಟ್ವರ್ಕ್ ಪ್ರತಿ ಹಳ್ಳಿಗೂ ವಿಸ್ತರಿಸಿದ್ದು, ಎಲ್ಐಸಿ ಏಜೆಂಟ್ಗಳು ಪ್ರತಿ ಹಳ್ಳಿಯಲ್ಲೂ ಇದ್ದಾರೆ. ಅದ್ರಂತೆ, ದೇಶಾದ್ಯಂತ 13 ಲಕ್ಷಕ್ಕೂ ಹೆಚ್ಚು ಎಲ್ಐಸಿ ಏಜೆಂಟ್ಗಳಿದ್ದಾರೆ. ನೀವು ಸಹ LIC ಏಜೆಂಟ್ ಆಗಿ ವೃತ್ತಿಯನ್ನ ಮಾಡಲು ಬಯಸುವಿರಾ.? LIC ಏಜೆಂಟ್ ಆಗಲು ಬಯಸುವಿರಾ.? ತುಂಬಾ ಸರಳ. ಇದಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ರೆ ಸಾಕು. ಅಂದ್ಹಾಗೆ, ಇದಕ್ಕೂ ಮೊದಲು ಎಲ್ಐಸಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಿತ್ತು. ಅಥ್ವಾ ಎಲ್ಐಸಿ ಅಭಿವೃದ್ಧಿ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಬೇಕು. ಈಗ ಎಲ್ಐಸಿ ಆನ್ಲೈನ್ನಲ್ಲಿ ಅರ್ಜಿಗಳನ್ನ ಸ್ವೀಕರಿಸುತ್ತಿದೆ. ಭಾರತದಲ್ಲಿ ವಿಮಾ ವಲಯದ ವಿಸ್ತರಣೆಗೆ ಹಲವು ಅವಕಾಶಗಳಿವೆ. ಹಲವಾರು ವರ್ಷಗಳವರೆಗೆ ವಿಸ್ತರಿಸುವ ಸಾಮರ್ಥ್ಯ ಹೊಂದಿರುವ ವಿಮಾ ವಲಯದಲ್ಲಿ ಎಲ್ ಐಸಿ ಮಿಂಚುವುದು ಖಚಿತ. ಅದಕ್ಕಾಗಿಯೇ ಅವರು ಎಲ್ಐಸಿ ಏಜೆಂಟ್ ಆಗಲು ಪೈಪೋಟಿ…
ಚಿತ್ರದುರ್ಗ : ಮಾಜಿ ಸಚಿವ ಹೆಚ್. ಆಂಜನೇಯ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಪಾಡಿಗಟ್ಟೆ ಗ್ರಾಮದ ಮಾಜಿ ಸಚಿವ ಹೆಚ್. ಆಂಜನೇಯ ಆಪ್ತ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ್ ಹಾಗೂ ಸಹೋದರ ತಿಪ್ಪೇಸ್ವಾಮಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ಮಿರಿ ಆಸ್ತಿ ಗಳಿಕೆ ಹಿನ್ನೆಲೆ ಹುಬ್ಬಳ್ಳಿಯಿಂದ ಐಟಿ ಅಧಿಕಾರಿಗಳು ಆಗಮಿಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ತಿಪ್ಪೇಸ್ವಾಮಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರೆ, ಸುರೇಶ್ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಶೀಘ್ರದಲ್ಲೇ ಅಪ್ ಡೇಟ್ ಆಗಲಿದೆ. https://kannadanewsnow.com/kannada/follow-these-tips-for-making-homemade-skin-toner/ https://kannadanewsnow.com/kannada/good-news-if-the-train-is-delayed-the-passengers-will-get-the-full-money-back-minister-ashwini-vaishnaw-announcement-indian-railways/
ಚಿತ್ರದುರ್ಗ : ಮಾಜಿ ಸಚಿವ ಹೆಚ್. ಆಂಜನೇಯ ಆಪ್ತನ ಮನೆ ಮೇಲೆ ಐಟಿ (Income Tax) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಪಾಡಿಗಟ್ಟೆ ಗ್ರಾಮದ ಮಾಜಿ ಸಚಿವ ಹೆಚ್. ಆಂಜನೇಯ ಆಪ್ತ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ್ ಹಾಗೂ ಸಹೋದರ ತಿಪ್ಪೇಸ್ವಾಮಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ಮಿರಿ ಆಸ್ತಿ ಗಳಿಕೆ ಹಿನ್ನೆಲೆ ಹುಬ್ಬಳ್ಳಿಯಿಂದ ಐಟಿ ಅಧಿಕಾರಿಗಳು ಆಗಮಿಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ತಿಪ್ಪೇಸ್ವಾಮಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರೆ, ಸುರೇಶ್ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಶೀಘ್ರದಲ್ಲೇ ಅಪ್ ಡೇಟ್ ಆಗಲಿದೆ. https://kannadanewsnow.com/kannada/when-did-dk-siddaramaiah-learn-astrology-minister-somashekhar-irony/ https://kannadanewsnow.com/kannada/follow-these-tips-for-making-homemade-skin-toner/
ನವದೆಹಲಿ : ನೀವು ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ರೆ ಅಥವಾ ರೈಲು ಟಿಕೆಟ್ ಬುಕ್ ಮಾಡಿದ್ರೆ, ನಿಮಗಿದು ಮುಖ್ಯ ಮಾಹಿತಿಯಾಗಲಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪ್ರಯಾಣಿಕರಿಗೆ ಹಲವು ಮಾಹಿತಿ ನೀಡಿದ್ದಾರೆ. ಅದ್ರಂತೆ, ರೈಲು ತಡವಾಗಿ ಬರುವುದು ಮತ್ತು ಅಂತಹ ಪರಿಸ್ಥಿತಿಯಲ್ಲಿ ಟಿಕೆಟ್ ರದ್ದು ಮಾಡಿದ ನಂತರವೂ ಹಣ ಕಡಿತಗೊಳಿಸುವುದನ್ನ ನಾವು ಅನೇಕ ಬಾರಿ ನೋಡಿದ್ದೇವೆ. ಆದ್ರೆ, ಇನ್ಮುಂದೆ ಅಂತಹ ಸಂದರ್ಭದಲ್ಲಿ ಟಿಕೆಟ್ ರದ್ದುಗೊಳಿಸಿದ್ರೆ ಸಂಪೂರ್ಣ ಹಣ ನಿಮಗೆ ಹಿಂತಿರುಗಿಸಲಾಗುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಗಂಟೆಗಟ್ಟಲೆ ತಡ ಮಾಡುವ ರೈಲುಗಳು.! ಚಳಿಗಾಲದಲ್ಲಿ ಹಲವು ಬಾರಿ ಮಂಜಿನಿಂದಾಗಿ ರೈಲುಗಳು ಗಂಟೆಗಟ್ಟಲೆ ತಡವಾಗಿ ಓಡುತ್ತವೆ, ಇದರಿಂದ ಪ್ರಯಾಣಿಕರು ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಆದ್ರೆ, ಸಧ್ಯ ರೈಲ್ವೆ ಅನೇಕ ಸೌಲಭ್ಯಗಳನ್ನ ಉಚಿತವಾಗಿ ನೀಡುತ್ತಿದ್ದು, ಇದರೊಂದಿಗೆ, ಮರುಪಾವತಿಯ ಪೂರ್ಣ ಮೊತ್ತವನ್ನ ಸಹ ಹಿಂತಿರುಗಿಸಲಾಗುತ್ತದೆ. ರದ್ದತಿಯ ಮೇಲೆ ಸಂಪೂರ್ಣ ಮರುಪಾವತಿ.! ಮಂಜಿನಿಂದಾಗಿ ನಿಮ್ಮ ರೈಲು 3 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಳಂಬವಾದ್ರೆ, ಪ್ರಯಾಣಿಕರು ಟಿಕೆಟ್…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕಿತ್ತಳೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ವಿಟಮಿನ್-ಸಿ ಯ ಸಮೃದ್ಧ ಮೂಲವಾಗಿದೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯಕ್ಕೆ ಹಾಗೂ ತ್ವಚೆಗೆ ತುಂಬಾ ಪ್ರಯೋಜನಕಾರಿ. ನೀವು ಕಿತ್ತಳೆ ಸಿಪ್ಪೆಯನ್ನು ಬಳಸಿ ಫೇಸ್ ಟೋನರ್ ತಯಾರಿಸಬಹುದು. ಇದರಿಂದ ನಿಮ್ಮ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದರ ನಿಯಮಿತ ಬಳಕೆಯಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು. ಕಿತ್ತಳೆ ಜೊತೆ ಸ್ಕಿನ್ ಟೋನರ್ ಮಾಡುವುದು ಹೇಗೆ ಮೊದಲು ಬಾಣಲೆಯಲ್ಲಿ ನೀರನ್ನು ಹಾಕಿ, ಅದಕ್ಕೆ ಕಿತ್ತಳೆ ಸಿಪ್ಪೆಗಳನ್ನು ಸೇರಿಸಬೇಕು. ಸ್ವಲ್ಪ ಕುದಿದ ಬಳಿಕತಣ್ಣಗಾಗಲು ಬಿಡಬೇಕು. ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ಫ್ರಿಜ್ನಲ್ಲಿ ಇರಿಸಿ. ನೀವು ನಿಯಮಿತವಾಗಿ ಅಪ್ ಆರೆಂಜ್ ಸ್ಕಿನ್ ಟೋನರ್ ಅನ್ನು ಬಳಸಬಹುದು. ಇದರ ನಿಯಮಿತ ಬಳಕೆಯಿಂದ ಮಖದಲ್ಲಿ ಕಾಂತಿ ಹೆಚ್ಚಾಗುತ್ತದೆ. ಕಿತ್ತಳೆ ರಸ- ಬಾದಾಮಿ ಎಣ್ಣೆ ಟೋನರ್ ಈ ಟೋನರ್ ಅನ್ನು ಬಳಸುವುದರಿಂದ ಚರ್ಮವು ತೇವಾಂಶವನ್ನು ಪಡೆಯುತ್ತದೆ. ಚಳಿಗಾಲದಲ್ಲಿ ಈ ಟೋನರ್ ಬಳಸಿ ಒಣ…
ಮೈಸೂರು : ಡಿ.ಕೆ ಶಿವಕುಮಾರ್ -ಸಿದ್ದರಾಮಯ್ಯ ಜ್ಯೋತಿಷ್ಯ ಯಾವಾಗ ಕಲಿತರು ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಸ್.ಟಿ ಸೋಮಶೇಖರ್ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಸಿದ್ದರಾಮಯ್ಯ-ಡಿಕೆಶಿ ಹೇಳಿಕೆಗೆ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ಜ್ಯೋತಿಷ್ಯ ಯಾವಾಗ ಕಲಿತರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ , ನಾವು 150 ಸ್ಥಾನಗಳ ಟಾರ್ಗೆಟ್ ಇಟ್ಟುಕೊಂಡಿದ್ದೇವೆ, ಇದಕ್ಕೆ ಯಡಿಯೂರಪ್ಪ ಭದ್ರ ಬುನಾದಿ ಹಾಕಿದ್ದಾರೆ, ಸಿಎಂ ಬೊಮ್ಮಾಯಿ 1 ವರ್ಷ ಪ್ಲಾನ್ ಮಾಡಿದ್ದಾರೆ..ಏನೇ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ. https://kannadanewsnow.com/kannada/if-congress-comes-to-power-we-will-give-10-kg-of-rice-siddaramaiahs-announcement/ https://kannadanewsnow.com/kannada/major-surgery-from-state-government-to-administrative-machinery-three-including-senior-ias-officer-manivannan-transferred/