Author: KNN IT TEAM

ನವದೆಹಲಿ: ಭಾರತದಲ್ಲಿ ಕೋವಿಡ್-19 ಅಲೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚುವ ಬಗ್ಗೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ತಳ್ಳಿಹಾಕಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಇಂತಹ ಸುದ್ದಿಗಳನ್ನು “ಬೋಗಸ್” ಎಂದು ಬ್ಯೂರೋ ಉಲ್ಲೇಖಿಸಿದೆ.  ಕಳೆದ ಕೆಲವು ದಿನಗಳಲ್ಲಿ ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳ ದಾಳಿಯು ದೇಶದಲ್ಲಿ ಹೊಸ ಸರಣಿ ಲಾಕ್ಡೌನ್  ಮತ್ತು ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ನಕಲಿ ಸುದ್ದಿಗಳಿಗೆ ತುಪ್ಪ ಸುರಿದಿದೆ. ನಕಲಿ ಸುದ್ದಿಗಳನ್ನು ತಳ್ಳಿಹಾಕಿದ ಪಿಐಬಿ, ಕೋವಿಡ್ -19 ಗೆ ಸಂಬಂಧಿಸಿದ ಪರಿಶೀಲಿಸದ ಸಂಗತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. ಈ ನಡುವೆ ಏತನ್ಮಧ್ಯೆ, ಸೂಕ್ತ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಉತ್ತಮ ನೈರ್ಮಲ್ಯ ಇತ್ಯಾದಿಗಳೊಂದಿಗೆ ಕೋವಿಡ್ ಪ್ರೋಟೋಕಾಲ್ ಅನ್ನು ಅಭ್ಯಾಸ ಮಾಡಲು ಜನರಿಗೆ ಸೂಚಿಸಲಾಗಿದೆ.

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ :  ಹೊಸ ವರ್ಷ ಆರಂಭವಾಗಿದೆ. ಅದೇ ಸಮಯದಲ್ಲಿ, ಹೊಸ ವರ್ಷದಲ್ಲಿ, ಜನರು ಉಳಿತಾಯಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಮುಂಬರುವ ಭವಿಷ್ಯಕ್ಕಾಗಿ ಹಣದ ಉಳಿತಾಯ ಅತ್ಯಗತ್ಯವಾಗಿದೆ. ಹಣವನ್ನು ಉಳಿತಾಯ ಮಾಡುಲು ಈ ಸಲಹೆಗಳನ್ನು ಅನುಸರಿಸಬಹುದು. ಬಜೆಟ್ ಮಾಡಿ ತಿಂಗಳ ಆರಂಭದಲ್ಲಿಯೇ ನೀವು ಪ್ರತಿ ತಿಂಗಳು ಎಷ್ಟು ಖರ್ಚು ಮಾಡಬೇಕು ಎಂಬುದನ್ನು ಬಜೆಟ್ ಲೆಕ್ಕ ಮಾಡಿ ಇಟ್ಟುಕೊಳ್ಳಿ. ಅದರಂತೆ ಇಡೀ ತಿಂಗಳು ಕಳೆಯಿರಿ. ಬಜೆಟ್‌ಗೆ ಅನುಗುಣವಾಗಿ ವೆಚ್ಚಗಳಿದ್ದರೆ, ಅನಗತ್ಯ ವೆಚ್ಚಗಳನ್ನು ತಪ್ಪಿಸಬಹುದು ಮತ್ತು ಒಂದು ತಿಂಗಳಲ್ಲಿ ಹಣವನ್ನು ಉಳಿಸಬಹುದು. ಉಳಿತಾಯ ನಿಧಿ ಹಣವನ್ನು ಉಳಿಕೆ ಮಾಡಲು ಪ್ರತ್ಯೇಕ ಉಳಿತಾಯ ನಿಧಿ ಮಾಡಬೇಕು. ಆ ನಿಧಿಯಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಕನಿಷ್ಠ ಮೊತ್ತವನ್ನು ಹಾಕಬೇಕು. ಉಳಿತಾಯ ನಿಧಿಯ ಮೂಲಕ ನೀವು ಆ ನಿಧಿಯಲ್ಲಿ ತಿಂಗಳ ನಿಗದಿತ ಮೊತ್ತವನ್ನು ಇರಿಸಬಹುದು. ಇದು ಹಣವನ್ನು ಉಳಿಸಲು ಸುಲಭವಾದ ಮಾರ್ಗವಾಗಿದೆ. ನಿರ್ಧಿಷ್ಟ ಗುರಿ ಸದಾ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕು. ಉಳಿತಾಯದ ವಿಷಯದಲ್ಲೂ ಗುರಿ ಇಟ್ಟುಕೊಳ್ಳಿ. 3 ತಿಂಗಳು,…

Read More

ಬೆಂಗಳೂರು: ಅಕ್ರಮ ಪಿಎಸ್ಐ ನೇಮಕಾತಿ ಪರೀಕ್ಷೆ ( PSI Recruitment Scam ) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಧಿಕಾರಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಂಡಿದೆ. ಅಕ್ರಮ ಪಿಎಸ್ಐ ನೇಮಕಾತಿ ಪರೀಕ್ಷೆ ಸಂಬಂಧ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿದ್ದಂತ ನೇಮಕಾತಿ ವಿಭಾಗದ ಹೊಣೆ ಹೊತ್ತಿದ್ದ ಆರೋಪಿತ ಅಧಿಕಾರಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿತ್ತು. ಅವರೀಗ ಕಾನೂನು ಬಂಧನದಲ್ಲಿದ್ದಾರೆ. ಇಂತಹ ಆರೋಪಿತ ಅಧಿಕಾರಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇಂದು ಪಿಎಸ್ಐ ನೇಮಕಾತಿ ಅಕ್ರಮ ನಡೆಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವಂತ ಆರೋಪಿತ ಅಧಿಕಾರಿ ಅಮೃತ್ ಪಾಲ್ ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ಬೆಂಗಳೂರಿನ 24ನೇ ಸಿಸಿ ಹೆಚ್ ಕೋರ್ಟ್, ಜಾಮೀನು ಅರ್ಜಿಯನ್ನು ಮತ್ತೆ ವಜಾಗೊಳಿಸಿದೆ. ತನಿಖೆ ಸಂಪೂರ್ಣವಾಗಿಲ್ಲ, ಕೆಲ ಆಯಾಮಗಳ ತನಿಖೆ ಮಾತ್ರ ಮುಂದುವರೆದಿದೆ, ಜಾಮೀನು ನೀಡದಂತೆ ವಕೀಲ ಪ್ರಸನ್ನ ಕುಮಾರ್ ಭಟ್ ವಾದ ಮಂಡಿಸಿದ್ದರು. ಈ ಹಿನ್ನೆಲೆ ಜಾಮೀನು…

Read More

ಬೆಂಗಳೂರು: ಅಕ್ರಮ ಪಿಎಸ್ಐ ನೇಮಕಾತಿ ಪರೀಕ್ಷೆ ( PSI Recruitment Scam ) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಧಿಕಾರಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಂಡಿದೆ. ಅಕ್ರಮ ಪಿಎಸ್ಐ ನೇಮಕಾತಿ ಪರೀಕ್ಷೆ ಸಂಬಂಧ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿದ್ದಂತ ನೇಮಕಾತಿ ವಿಭಾಗದ ಹೊಣೆ ಹೊತ್ತಿದ್ದ ಆರೋಪಿತ ಅಧಿಕಾರಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿತ್ತು. ಅವರೀಗ ಕಾನೂನು ಬಂಧನದಲ್ಲಿದ್ದಾರೆ. ಇಂತಹ ಆರೋಪಿತ ಅಧಿಕಾರಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇಂದು ಪಿಎಸ್ಐ ನೇಮಕಾತಿ ಅಕ್ರಮ ನಡೆಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವಂತ ಆರೋಪಿತ ಅಧಿಕಾರಿ ಅಮೃತ್ ಪಾಲ್ ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ಬೆಂಗಳೂರಿನ 24ನೇ ಸಿಸಿ ಹೆಚ್ ಕೋರ್ಟ್, ಜಾಮೀನು ಅರ್ಜಿಯನ್ನು ಮತ್ತೆ ವಜಾಗೊಳಿಸಿದೆ. ತನಿಖೆ ಸಂಪೂರ್ಣವಾಗಿಲ್ಲ, ಕೆಲ ಆಯಾಮಗಳ ತನಿಖೆ ಮಾತ್ರ ಮುಂದುವರೆದಿದೆ, ಜಾಮೀನು ನೀಡದಂತೆ ವಕೀಲ ಪ್ರಸನ್ನ ಕುಮಾರ್ ಭಟ್ ವಾದ ಮಂಡಿಸಿದ್ದರು. ಈ ಹಿನ್ನೆಲೆ ಜಾಮೀನು…

Read More

ಬೆಂಗಳೂರು : ಬೆಂಗಳೂರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿದ್ದು, ಸಿಎಂ ಬೊಮ್ಮಾಯಿ ಕೇಂದ್ರ ಸಚಿವರನ್ನು ಸ್ವಾಗತಿಸಿದರು. ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಅವರನ್ನು ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಸಿಎಂ ಬರಮಾಡಿಕೊಂಡರು. ನಾಳೆ ರಾಮನಗರ ಜಿಲ್ಲೆಯಲ್ಲಿ ನಿತಿನ್ ಗಡ್ಕರಿ ದಶಪಥ ಹೆದ್ದಾರಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಸಿಎಂ ಬೊಮ್ಮಾಯಿ, ಸಚಿವ ಅಶ್ವಥ್ ನಾರಾಯಣ್ ಸಚಿವ ಸಿಸಿ ಪಾಟೀಲ್ ಮತ್ತಿತರರು ಸಾಥ್ ನೀಡಲಿದ್ದಾರೆ. ಹೆಲಿಕಾಪ್ಟರ್ ಮೂಲಕ ರಾಮನಗರ ಹೊರವಲಯದ ಕೆಂಪೇಗೌಡನದೊಡ್ಡಿ ಬಳಿ ಬಂದು ಇಳಿಯಲಿದ್ದಾರೆ, ನಂತರ ಚನ್ನಪಟ್ಟಣ ಕಡೆಗೆ ತೆರಳಿ ನಂತರ ಬಂದು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. https://kannadanewsnow.com/kannada/neglect-of-muslim-dalits-in-haveri-kannada-sahitya-sammelan/ https://kannadanewsnow.com/kannada/cm-bommai-speech-on-bengalore/ https://kannadanewsnow.com/kannada/neglect-of-muslim-dalits-in-haveri-kannada-sahitya-sammelan/

Read More

ಹಾವೇರಿ : ಹಾವೇರಿ ನಗರದಲ್ಲಿ ಜನವರಿ 06, 07, ಮತ್ತು 08 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ. ಇದರ ನಡುವೆ ಬಿಜೆಪಿ ಎಂಎಲ್ಸಿ (MLC) ಹೆಚ್ ವಿಶ್ವನಾಥ್ ಆರೋಪವೊಂದನ್ನು ಮಾಡಿದ್ದು, ಸಮ್ಮೇಳನದಲ್ಲಿ ಮುಸ್ಲಿಂ ಹಾಗೂ ದಲಿತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ 85 ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಆದರೆ ಇದರಲ್ಲಿ ಮುಸ್ಲಿಂ ಮತ್ತು ದಲಿತರನ್ನು ಕಡೆಗಣಿಸಲಾಗಿದೆ. ಇದರಲ್ಲೂ ರಾಜಕೀಯ ನಡೆದಿದೆ ಎಂದು ಕಿಡಿಕಾರಿದರು. ಸಮ್ಮೇಳನಕ್ಕೆ ಸರ್ಕಾರ 20 ಕೋಟಿ ರೂ. ಬಿಡುಗಡೆ ಮಾಡಿದ್ದು, ಹಣ ಕೊಟ್ಟು ಸಭೆ ಮಾಡದೆ ಮೌನವಾಗಿರುವುದು ಸರಿಯಲ್ಲ , ದಿಕ್ಕುದೆಸೆ ಇಲ್ಲದ ಡೋಂಗಿ ಸಾಹಿತ್ಯ ಸಮ್ಮೇಳನವನ್ನು ಧಿಕ್ಕರಿಸುತ್ತೇವೆ ಎಂದರು. ಸಮ್ಮೇಳನದ ಹಿನ್ನೆಲೆ ಪಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ರಜೆ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲೆಯಾದ್ಯಂತ ಎಲ್ಲಾ ಪಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಹಾವೇರಿ ಜಿಲ್ಲೆಯಾದ್ಯಂತ ಎಲ್ಲಾ ಪಾಥಮಿಕ ಮತ್ತು…

Read More

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಶೀತದ ಅಲೆ ಮುಂದುವರಿದಿದೆ. ಇಂದು ಈ ಋತುವಿನ ಅತ್ಯಂತ ಚಳಿಯ ದಿನವನ್ನು ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿ ಮಾಹಿತಿ ನೀಡಿದ್ದಾರೆ. ಇಂದು ಈ ಋತುವಿನ ಅತ್ಯಂತ ಚಳಿಯ ದಿನವಾಗಿದೆ. ಇಂದು ಸಫ್ದರ್‌ಜಂಗ್ ಮತ್ತು ಐಎನ್‌ಎ 4.4 ಡಿಗ್ರಿ ಸೆಲ್ಸಿಯಸ್‌ನ ಕನಿಷ್ಠ ತಾಪಮಾನವನ್ನು ದಾಖಲಿಸಿದೆ. ಡಿಸೆಂಬರ್ 25-27 ರ ನಡುವಿನ ಚಳಿಯಂತೆಯೇ ತಾಪಮಾನ ದಾಖಲಾಗಿದೆ ಎಂದು ಐಎಂಡಿ ವಿಜ್ಞಾನಿ ಡಾ.ಆರ್.ಕೆ.ಜೆನಮನಿ ಮಾಹಿತಿ ನೀಡಿದ್ದಾರೆ. ಮುಂಬರುವ ವೆಸ್ಟರ್ನ್ ಡಿಸ್ಟರ್ಬನ್ಸ್ (ಡಬ್ಲ್ಯೂಡಿ) ನಿಂದಾಗಿ ನಗರದಲ್ಲಿ ಮುಂದಿನ 24-48 ಗಂಟೆಗಳ ಕಾಲ ಶೀತದ ಸ್ಥಿತಿ ಇರುತ್ತದೆ. ಮುಂದಿನ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಡಾ.ಜೆನಮಣಿ ತಿಳಿಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಶೀತ ಅಲೆಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದ್ದು, ನಂತರದಲ್ಲಿ ಶೀತದ ತೀವ್ರತೆಯು ಕಡಿಮೆಯಾಗಲಿದೆ ಎಂದು ತಿಳಿದು ಬಂದಿದೆ. https://kannadanewsnow.com/kannada/technical-officer-recritment-postpone/ https://kannadanewsnow.com/kannada/corona-viruse-karnataka-report/ https://kannadanewsnow.com/kannada/good-news-an-important-scheme-of-the-central-government-free-dish-tv-gift-to-7-lakh-households-facility-for-these-people/

Read More

ಬಳ್ಳಾರಿ: ಆರು ಸಾವಿರ ಕೋಟಿ ರೂ.ಗಳನ್ನು ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದ್ದು, ಬೆಂಗಳೂರಿನ ಫೆರಿಫೆರಲ್ ರಸ್ತೆ ಹಾಗೂ ಕೆರೆಗಳ ಅಭಿವೃದ್ಧಿಗೆ ನಾವು ಕ್ರಮ ವಹಿಸಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಕೆಆರ್ ಡಿ ಬಿಯಾಗಲಿ ಬಜೆಟ್ ಅನುದಾನವಾಗಲಿ ಯಾವುದಕ್ಕೂ ಕಡಿಮೆ ಮಾಡಿಲ್ಲ ಎಂದರು. ಹೊಸ ಕಾಮಗಾರಿಗಳ ಉದ್ಘಾಟನೆ ಬಗ್ಗೆ ಚಿಂತನೆ ಇದೆಯೇ ಎಂಬ ಬಗ್ಗೆ ಪಕ್ಷದ ಮಟ್ಟದಲ್ಲಿ ಚಿಂತನೆ ಮಾಡಿ ಹೇಳಿದ್ದಾರೆ. ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ. ಅವರ ಬಳಿ ಚರ್ಚೆ ಮಾಡಿ ಸರ್ಕಾರದ ನಿಲುವನ್ನು ತಿಳಿಸಲಾಗುವುದು. ಸಿದ್ದರಾಮಯ್ಯನ ಕಾಲದಲ್ಲಿ 15 ನೇ ಹಣಕಾಸಿನ ಆಯೋಗ ತೀರ್ಮಾನವಾಗಿದೆ. ರಾಜ್ಯ ಸರ್ಕಾರದ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಸರಿಯಾದ ಮಾಹಿತಿಗಳನ್ನು ನೀಡಿ, ದೃಷ್ಟಿಯಲ್ಲಿ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಯೋಗಕ್ಕೆ ತಿಳಿಸುವಲ್ಲಿ ಇದು ಅಂದಿನ ಸರ್ಕಾರದ ವಿಫಲವಾಗಿದೆ ಎಂದರು. ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಈಗಿರುವ ಮುಖ್ಯ…

Read More

ನವದೆಹಲಿ : ಸುದ್ದಿ ಮತ್ತು ಮನರಂಜನಾ ವಾಹಿನಿಗಳಾದ ದೂರದರ್ಶನ (Doordarshan – DD) ಮತ್ತು ಆಲ್ ಇಂಡಿಯಾ ರೇಡಿಯೋ (All India Radio – AIR)ಗಳ ಸ್ಥಿತಿಯನ್ನ ಸುಧಾರಿಸಲು ಕೇಂದ್ರ ಸರ್ಕಾರ 2,539 ಕೋಟಿ ರೂಪಾಯಿಗಳನ್ನ ಖರ್ಚು ಮಾಡಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬ್ರಾಡ್ ಕಾಸ್ಟಿಂಗ್ ಮೂಲಸೌಕರ್ಯ ಮತ್ತು ನೆಟ್ವರ್ಕ್ ಡೆವಲಪ್ಮೆಂಟ್ ಅಂಡ್ ನೆಟ್ವರ್ಕ್ ಡೆವಲಪ್ಮೆಂಟ್ (BIND) ಅಡಿಯಲ್ಲಿ, ಜನರಿಗೆ ಸರಿಯಾದ ಸುದ್ದಿ, ಶಿಕ್ಷಣ ಮತ್ತು ಮನರಂಜನೆಯನ್ನ ತರುವುದು ಸರ್ಕಾರದ ಉದ್ದೇಶವಾಗಿದೆ. 2021-22 ರಿಂದ 2025-26 ರವರೆಗೆ ಸರ್ಕಾರದ ಆರ್ಥಿಕ ವ್ಯವಹಾರಗಳ ಸಮಿತಿಯು ಬಿಂಡ್ ಬಿಡುಗಡೆ ಮಾಡಿದೆ. ಇದರ ಮೂಲಕ ಅನೇಕ ಪರೋಕ್ಷ ಉದ್ಯೋಗಾವಕಾಶಗಳನ್ನ ಸಹ ಸೃಷ್ಟಿಸಲಾಗುವುದು ಎಂದು ಸರ್ಕಾರ ಹೇಳಿದೆ. ದೂರದರ್ಶನ ಮತ್ತು ಆಕಾಶವಾಣಿಯನ್ನ ಪ್ರಸಾರ ಭಾರತಿ ನಿರ್ವಹಿಸುತ್ತದೆ. ಬದಲಾದ ಪ್ರಸಾರ ತಂತ್ರಜ್ಞಾನದೊಂದಿಗೆ ದೂರದರ್ಶನ ಮತ್ತು ಆಕಾಶವಾಣಿಯ ಮೂಲಸೌಕರ್ಯಗಳನ್ನ ಸಹ ಆಧುನೀಕರಿಸಬೇಕೆಂದು ಸರ್ಕಾರ ಬಯಸುತ್ತದೆ. ಇನ್ಫ್ರಾವನ್ನ ನವೀಕರಿಸಲು ಸರ್ಕಾರ 2,539 ಕೋಟಿ ರೂಪಾಯಿ ಮೀಸಲಿರಿಸಿದೆ. ಅನೇಕ…

Read More

ಶಿವಮೊಗ್ಗ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿ.ಎಲ್.ಎಲ್ ಪ್ರಯೋಗಾಲಯಕ್ಕೆ ಅವಶ್ಯವಿರುವ ಟೆಕ್ನಿಕಲ್ ಆಫೀಸರ್ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಪಡೆಯುವ ಬಗ್ಗೆ ದಿನಾಂಕ: 05.01.2023 ರಂದು ನೇರ ನೇಮಕಾತಿಯನ್ನು, ಏರ್ಪಡಿಸಲಾಗಿದ್ದು, ಈ ನೇರ ಸಂದರ್ಶನವನ್ನು ಆಡಳಿತಾತ್ಮಕ ಕಾರಣಗಳಿಂದ ದಿನಾಂಕ: 06.01.2023 ರಂದು 3.00 ಗಂಟೆಗೆ ಮುಂದೂಡಲಾಗಿದೆ ಎಂದು ನಿರ್ದೇಶಕರು, ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಇವರು ತಿಳಿಸಿದ್ದಾರೆ. ರಾಜ್ಯ ಮಟ್ಟದ ಪುಸ್ತಕ ಆಯ್ಕೆಗೆ ಪುಸ್ತಕ ಆಹ್ವಾನ 2022 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕನ್ನಡ, ಆಂಗ್ಲ, ಭಾರತೀಯ ಇತರೆ ಭಾಷೆಗಳ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2022 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ದಿನಾಂಕ: 31-01-2023 ರೊಳಗೆ ಕಾಪಿರೈಟ್ ಮಾಡಿಸಿರತಕ್ಕದ್ದು. ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು(ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ…

Read More