Subscribe to Updates
Get the latest creative news from FooBar about art, design and business.
Author: KNN IT TEAM
ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇಂದ್ರದ ಮೋದಿ ಸರ್ಕಾರವು ಕೃಷಿ ಕ್ಷೇತ್ರವನ್ನ ಉತ್ತೇಜಿಸಲು ರೈತರಿಗೆ ಅನೇಕ ಯೋಜನೆಗಳನ್ನ ಲಭ್ಯಗೊಳಿಸಿದೆ. ಇದರ ಭಾಗವಾಗಿ, ರೈತರಿಗೆ ಸಹಾಯ ಮಾಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನ 2019ರಲ್ಲಿ ಪ್ರಾರಂಭಿಸಲಾಯಿತು. ವರ್ಷಕ್ಕೆ 6 ಸಾವಿರ ರೂಪಾಯಿಯಂತೆ, ಮೂರು ಕಂತುಗಳಲ್ಲಿ ವರ್ಷಕ್ಕೆ 2 ಸಾವಿರ ರೂಪಾಯಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದ್ರೆ, ಇದುವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ಕಂತುಗಳು ರೈತರಿಗೆ ಬಂದಿವೆ. ಈಗ 13ನೇ ಕಂತು ಪಿಎಂ ಕಿಸಾನ್ರೈತರು ಹಣಕ್ಕಾಗಿ ಕಾಯುತ್ತಿರುವ ಈ ಹೊತ್ತಿನಲ್ಲಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರವು ರೈತರ ನೋಂದಣಿ ಪ್ರಕ್ರಿಯೆಯನ್ನ (Pm Kisan Yojana Registration) ಹೆಚ್ಚು ಸುಲಭಗೊಳಿಸಿದೆ. ಇದಕ್ಕಾಗಿ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಲಭ್ಯವಾಗಿದ್ದು, ರೈತರು ಮನೆಯಲ್ಲಿ ಕುಳಿತು ಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಪಿಎಂ ಕಿಸಾನ್ ಮೊಬೈಲ್ ಆಪ್ ಡೌನ್ಲೋಡ್ ಮಾಡಿ.! ರೈತರನ್ನು ಕೃಷಿಯೊಂದಿಗೆ ಮಾತ್ರವಲ್ಲದೆ ತಂತ್ರಜ್ಞಾನದೊಂದಿಗೆ…
ಶಿವಮೊಗ್ಗ : ಮಹಿಳಾ ಅಭ್ಯರ್ಥಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಿಹಿಸುದ್ದಿ ನೀಡಿದ್ದು, ಪೊಲೀಸ್ ನೇಮಕಾತಿಯಲ್ಲಿ ಶೇ.25ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬುಧವಾರ ಶಿವಮೊಗ್ಗದಲ್ಲಿ ಜಿಲ್ಲಾ ಒಕ್ಕಲಿಗ ಮಹಿಳಾ ವೇದಿಕೆ ಆಯೋಜಿಸಿದ್ದ ಮಲೆನಾಡು ಮೇಳವನ್ನು ಉದ್ಘಾಟಿಸಿ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು. ಮಹಿಳಾ ಸಬಲೀಕರಣದ ಉದ್ದೇಶದಿಂದ ಮಹಿಳಾ ಅಭ್ಯರ್ಥಿಗಳಿಗೆ ಪೊಲೀಸ್ ನೇಮಕಾತಿಯಲ್ಲಿ ಶೇ.25ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.ಇದೇ ವೇಳೆ ಮಾತನಾಡಿದ ಸಚಿವರು ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರದಿಂದ 650 ಕೋಟಿ ರೂಪಾಯಿ ಮೀಸಲಿಡಲಾಗಿದೆ. ನಗರ ವ್ಯಾಪ್ತಿಯಲ್ಲಿ 3,000 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಶಾಸಕ ಅರವಿಂದ ಲಿಂಬಾವಳಿಯನ್ನು ತನಿಖೆಗೆ ಒಳಪಡಿಸಲಾಗುತ್ತದೆ ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿ ಬಂಧನಕ್ಕೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ .ಇದೀಗ ಈ ಕುರಿತು ಗೃಹ…
ಶಿವಮೊಗ್ಗ : ಮಹಿಳಾ ಅಭ್ಯರ್ಥಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಿಹಿಸುದ್ದಿ ನೀಡಿದ್ದು, ಪೊಲೀಸ್ ನೇಮಕಾತಿಯಲ್ಲಿ ಶೇ.25ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದಾರೆ. ಬುಧವಾರ ಶಿವಮೊಗ್ಗದಲ್ಲಿ ಜಿಲ್ಲಾ ಒಕ್ಕಲಿಗ ಮಹಿಳಾ ವೇದಿಕೆ ಆಯೋಜಿಸಿದ್ದ ಮಲೆನಾಡು ಮೇಳವನ್ನು ಉದ್ಘಾಟಿಸಿ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು. ಮಹಿಳಾ ಸಬಲೀಕರಣದ ಉದ್ದೇಶದಿಂದ ಮಹಿಳಾ ಅಭ್ಯರ್ಥಿಗಳಿಗೆ ಪೊಲೀಸ್ ನೇಮಕಾತಿಯಲ್ಲಿ ಶೇ.25ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.ಇದೇ ವೇಳೆ ಮಾತನಾಡಿದ ಸಚಿವರು ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರದಿಂದ 650 ಕೋಟಿ ರೂಪಾಯಿ ಮೀಸಲಿಡಲಾಗಿದೆ. ನಗರ ವ್ಯಾಪ್ತಿಯಲ್ಲಿ 3,000 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಶಾಸಕ ಅರವಿಂದ ಲಿಂಬಾವಳಿಯನ್ನು ತನಿಖೆಗೆ ಒಳಪಡಿಸಲಾಗುತ್ತದೆ ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿ ಬಂಧನಕ್ಕೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ .ಇದೀಗ ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಶಾಸಕ ಅರವಿಂದ ಲಿಂಬಾವಳಿಯನ್ನು ತನಿಖೆಗೆ…
BIG NEWS: ‘ಮಾಜಿ ಸಚಿವ ಜನಾರ್ಧನ ರೆಡ್ಡಿ’ಗೆ ಮತ್ತೊಂದು ಸಂಕಷ್ಟ: ‘ಆಸ್ತಿ ಜಪ್ತಿ’ಗೆ ‘ಹೈಕೋರ್ಟ್’ ಮೆಟ್ಟಿಲೇರಿದ ಸಿಬಿಐ
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರ ಆಸ್ತಿ ಜಪ್ತಿ ಮಾಡುವ ಸಂಬಂಧ ರಾಜ್ಯ ಸರ್ಕಾರದ ಅನುಮತಿಗಾಗಿ ಸಿಬಿಐ ಕೋರಿತ್ತು. ಆದ್ರೇ ಸರ್ಕಾರ ಮಾತ್ರ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಈ ಸಂಬಂಧ ಸಿಬಿಐ ಈಗ ಹೈಕೋರ್ಟ್ ಮೆಟ್ಟಿಲೇರಿ, ಈ ವಿಚಾರವನ್ನು ಪ್ರಶ್ನಿಸಿದೆ. ಹೀಗಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿದ್ದರು. ಪ್ರತಿ ಜಿಲ್ಲೆಯಲ್ಲೂ ತಮ್ಮ ಪಕ್ಷದ ಅಭ್ಯರ್ಥಿಯನ್ನು ಮುಂಬರುವ ಚುನಾವಣೆಯಲ್ಲಿ ಕಣಕ್ಕೆ ಇಳಿಸೋದಾಗಿಯೂ ಘೋಷಿಸಿದ್ದರು. ಇಂತಹ ಅವರ ಆಸ್ತಿ ಜಪ್ತಿಗೆ ಸಿಬಿಐ ಕರ್ನಾಟಕ ಸರ್ಕಾರದ ಅನುಮತಿ ಕೋರಿತ್ತು. ಸಿಬಿಐ ರಾಜ್ಯ ಸರ್ಕಾರಕ್ಕೆ ಜನಾರ್ಧನ ರೆಡ್ಡಿಗೆ ಸಂಬಂಧಿಸಿದಂತ ಆಸ್ತಿ ಜಪ್ತಿ ಮಾಡೋದಕ್ಕೆ ಮಾತ್ರ ಕಳೆದ ಆಗಸ್ಟ್ 30, 2022ರಂದು ಅನುಮತಿ ಕೋರಿತ್ತು. ಆದ್ರೇ ಈವರೆಗೆ ಅನುಮತಿಯನ್ನು ನೀಡದೇ ಮೀನಾಮೇಷವನ್ನು ಎಣಿಸುತ್ತಿದೆಯಂತೆ. ಹೀಗಾಗಿ ಹೈಕೋರ್ಟ್ ನಲ್ಲಿ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆರ್ಥಿಕ ವೆಚ್ಚ ಕಡಿತಗೊಳಿಸುವ ಹಿನ್ನೆಲೆಯಲ್ಲಿ ಸೇಲ್ಸ್‌ಫೋರ್ಸ್ ಇಂಕ್ (Salesforce Inc) ಕಂಪನಿಯು ಬುಧವಾರ ತನ್ನ ಸುಮಾರು ಶೇ. 10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಅದರ ಕೆಲವು ಕಚೇರಿಗಳನ್ನು ಮುಚ್ಚಲಿದೆ ಎಂದು ವರದಿಯಾಗಿದೆ. ಕ್ಲೌಡ್-ಆಧಾರಿತ ಸಾಫ್ಟ್‌ವೇರ್ ಕಂಪನಿಯ ಕ್ರಮಗಳು ಐಟಿ ಸಲಹಾ ಸಂಸ್ಥೆಯಾದ ಆಕ್ಸೆಂಚರ್ ಅನ್ನು ಅನುಸರಿಸುತ್ತವೆ. ಕಳೆದ ತಿಂಗಳು ಗ್ರಾಹಕರು ವ್ಯಾಪಾರ ಸುಧಾರಣೆ ಯೋಜನೆಗಳನ್ನು ಮುಂದೂಡುತ್ತಿರುವುದರಿಂದ ಅದರ ಸಲಹಾ ವ್ಯವಹಾರದಲ್ಲಿನ ನಿಧಾನಗತಿಯ ಬಗ್ಗೆ ಎಚ್ಚರಿಕೆ ನೀಡಿತು, ವಿಶೇಷವಾಗಿ ಚಿಲ್ಲರೆ ವ್ಯಾಪಾರದಲ್ಲಿ. ಕಂಪನಿಯ ಪರಿಸ್ಥಿತಿಯು ಸವಾಲಿನಿಂದ ಕೂಡಿದೆ. ನಮ್ಮ ಗ್ರಾಹಕರು ತಮ್ಮ ಖರೀದಿ ನಿರ್ಧಾರಗಳಿಗೆ ಹೆಚ್ಚು ಅಳತೆ ವಿಧಾನವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಸಹ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಬೆನಿಯೋಫ್ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗದ ಮೂಲಕ ನಮ್ಮ ಆದಾಯವು ವೇಗಗೊಂಡಂತೆ, ನಾವು ಈಗ ಎದುರಿಸುತ್ತಿರುವ ಈ ಆರ್ಥಿಕ ಕುಸಿತದ ಸಮಯದಲ್ಲಿ ಹಲವಾರು ಜನರನ್ನು ನಾವು ನೇಮಿಸಿಕೊಂಡಿದ್ದೇವೆ. ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಬೆನಿಯೋಫ್…
ಬೆಂಗಳೂರು: ಮೋದಿಯವರು ಕಾಂಗ್ರೆಸ್ ಮಾಡಿದ ಸಾಲ ತೀರಿಸುತ್ತಿದ್ದಾರೆ ಎಂದು BJP ಭಕ್ತರು, ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಹರಡುತ್ತಿದ್ದಾರೆ. ವಾಸ್ತವವಾಗಿ 2014 ರವರೆಗೆ ಇದ್ದ ದೇಶದ ಒಟ್ಟು ಸಾಲದ ಮೊತ್ತವೇ 76 ಲಕ್ಷ ಕೋಟಿ. ಆದರೆ ಮೋದಿ 8 ವರ್ಷದಲ್ಲಿ 98 ಲಕ್ಷ ಕೋಟಿ ಹೆಚ್ಚವರಿ ಸಾಲ ಮಾಡಿದ್ದಾರೆ. ಹೀಗಿರುವಾಗ ಮೋದಿ ಯಾರ ಸಾಲ ತೀರಿಸುತ್ತಿದ್ದಾರೆ? ಎಂಬುದಾಗಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. https://twitter.com/dineshgrao/status/1610490351848128512 ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ. ಕಳೆದ 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯವರ ಸಾಧನೆ. UPA ಆಡಳಿತದ ಅಂತ್ಯಕ್ಕೆ ಭಾರತದ ಸಾಲ 63,583 ಕೋಟಿ ಇತ್ತು. ಆದರೆ ಮೋದಿಯವರು ಕೇವಲ 8 ವರ್ಷದಲ್ಲಿ ಸಾಲದ ಪ್ರಮಾಣ 1.40 ಲಕ್ಷ ಕೋಟಿಗೆ ಏರಿಸಿದ್ದಾರೆ. ಈ ಸಾಲ ಮಾಡಿರುವುದು ಯಾರ ಉದ್ಧಾರಕ್ಕೆ? ಎಂದು ಕೇಳಿದ್ದಾರೆ. https://twitter.com/dineshgrao/status/1610488244973768704 ಸಾಲ ಮಾಡಿ ತುಪ್ಪ ತಿನ್ನುವಂತೆ ಮೋದಿ…
ಬೆಂಗಳೂರು : ದೈವದ ಕುರಿತು ಪೋಸ್ಟ್ ಮಾಡಿದ ಹಿನ್ನೆಲೆ ನಟ ಕಿಶೋರ್ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಲಾಗಿತ್ತು, ಆದರೆ ಇದಕ್ಕೆ ಅಸಲಿ ಕಾರಣವೇ ಬೇರೆಯಿದೆ. ಈ ಬಗ್ಗೆ ಕಿಶೋರ್ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನನ್ನ ಟ್ವಿಟರ್ ಖಾತೆ ಯಾವ ಪೋಸ್ಟ್ ನಿಂದಲೂ ಸಸ್ಪೆಂಡ್ ಆಗಿಲ್ಲ, ಡಿ.20 2022 ರಂದು ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಟ್ವಿಟರ್ ಭರವಸೆ ನೀಡಿದೆ ಎಂದು ಹೇಳಿದ್ದಾರೆ. ಟ್ವಿಟರ್ ಖಾತೆ ಮೇಲೆ ಹ್ಯಾಕರ್ಗಳ ಕಣ್ಣು ಬಿದ್ದಿದ್ದು, ಅಕೌಂಟ್ ಸಸ್ಪೆಂಡ್ ಆಗಲು ಇದು ಮುಖ್ಯ ಕಾರಣ ಎಂದು ಅವರು ತಿಳಿಸಿದ್ದಾರೆ. ‘ಕಾಂತಾರ’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಚಿತ್ರ. ಈ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಕಿಶೋರ್ ಇದೀಗ ಸುದ್ದಿಯಲ್ಲಿದ್ದಾರೆ. ಇನ್ನೂ, ತಮಗೆ ಅನಿಸಿದ್ದು ತೋಚಿದ್ದನ್ನು ಕಿಶೋರ್ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪರ ವಿರೋಧ ಕಮೆಂಟ್ ಗಳು ಬಂದಿದೆ. ಏನಿದು…
ನವದೆಹಲಿ: ಕೇಂದ್ರ ಸರ್ಕಾರದ ಸಚಿವ ಸಂಪುಟವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಗೆ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಮಾಹಿತಿಯನ್ನು ನೀಡಿದರು. ಇದೇ ವೇಳೆ ಅವರು ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಗೆ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ, ಭಾರತವು ಹಸಿರು ಜಲಜನಕದ ಜಾಗತಿಕ ಕೇಂದ್ರವಾಗಲಿದೆ. ಈ ಮಿಷನ್ ಅಡಿಯಲ್ಲಿ, 2030 ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸಲಾಗುವುದು. ಖರೀದಿದಾರರು ಮತ್ತು ಮಾರಾಟಗಾರರನ್ನು ಒಂದೇ ಸೂರಿನಡಿ ತರಲು ಹಸಿರು ಹೈಡ್ರೋಜನ್ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಗ್ರೀನ್ ಹೈಡ್ರೋಜನ್ ಮಿಷನ್ ಅಡಿಯಲ್ಲಿ 19,744 ಕೋಟಿ ರೂ ಆಗಿದೆ ಅಂತ ತಿಳಿಸಿದರು. ಇನ್ನೂ ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಠಾಕೂರ್ ಹೇಳಿದರು. 2021 ರಲ್ಲಿ ಗ್ಲ್ಯಾಸ್ಗೋದಲ್ಲಿ ಹೇಳಲಾದ ಭಾಷಣ ಮತ್ತು ಕೆಂಪು ಕೋಟೆಯಲ್ಲಿ ಘೋಷಿಸಲಾದ ಹಸಿರು…
ಬಳ್ಲಾರಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ನಿರ್ಮಿಸಲು ಉದ್ದೇಶಿಸಿರುವ 400 ಹಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಇಡೀ ಕರ್ನಾಟಕದಲ್ಲಿ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಲ್ಲೂ ಇಲ್ಲ. ಇಲಾಖೆಯಿಂದ ನಿರ್ಮಾಣ ಮಾಡುವಾಗ ಸಾಮಾನ್ಯವಾಗಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾವಾಗುತ್ತದೆ. ಆದರೆ ಇಂದು ನಾಲ್ಕು ಪಟ್ಟು ಹೆಚ್ಚಾಗಿದೆ. ಜಿಂದಾಲ್ ಸಂಸ್ಥೆ ಕಟ್ಟಿಕೊಡಲು ಒಪ್ಪಿದ್ದು, ಸರ್ಕಾರ ಸಲಕರಣೆಗಳನ್ನು ಒದಗಿಸಲಿದೆ. 400 ಹಾಸಿಗೆಗಳ ಆಸ್ಪತ್ರೆ, ಸಮಗ್ರ ಬಳ್ಳಾರಿ ಜಿಲ್ಲೆಯ ಮಕ್ಕಳಿಗೆ ಹಾಗೂ ತಾಯಂದಿರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಿದೆ ಎನ್ನುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದರು. ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನ ನಮ್ಮ ದೇಶದಲ್ಲಿ ಪೌಷ್ಠಿಕತೆ ಮುಖ್ಯವಾದ ಸವಾಲು ಪೌಷ್ಟಿಕತೆಯ ಕೊರತೆಯಿಂದ ಮಕ್ಕಳ ಬೆಳವಣಿಗೆ ಸರಿಯಾಗುವುದಿಲ್ಲ. ಪದೇ ಪದೇ ಕಾಯಿಲೆಗೆ ಒಳಪಡುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ…
ಮುಂಬೈ : ಶ್ರೀಲಂಕಾ ವಿರುದ್ಧ ಗುರುವಾರ ನಡೆಯಲಿರುವ ಮೂರು ಟಿ20 ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಭಾರಿ ಹಿನ್ನಡೆ ಅನುಭವಿಸಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದಾರೆ. ಸಂಜು ಸ್ಯಾಮ್ಸನ್ ಅವರ ಮೊಣಕಾಲಿಗೆ ಗಾಯವಾಗಿದ್ದು, ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದ್ರೆ, ಎರಡನೇ ಟಿ20 ಪಂದ್ಯಕ್ಕೆ ಸಂಜು ಆಯ್ಕೆಗೆ ಲಭ್ಯವಿರುವುದಿಲ್ಲ ಎಂಬುದು ಖಚಿತವಾಗಿದೆ. ಆದ್ರೆ, ಬಿಸಿಸಿಐ ಅಧಿಕೃತವಾಗಿ ಯಾವುದನ್ನೂ ಪ್ರಕಟಿಸಿಲ್ಲ. ಮುಂಬೈನ ವಾಂಖೆಡೆಯಲ್ಲಿ ಶ್ರೀಲಂಕಾ ತಂಡದ ಇನ್ನಿಂಗ್ಸ್’ನ ಮೊದಲ ಓವರ್ನಲ್ಲಿ ಡೈವ್ ಮಾಡುವ ಮೂಲಕ ಕ್ಯಾಚ್ ಹಿಡಿಯುವಾಗ ಸ್ಯಾಮ್ಸನ್ ಗಾಯಗೊಂಡರು. ಚೆಂಡು ನೆಲದ ಮೇಲೆ ಬೀಳುವಾಗ ಅವರ ಕೈಯಿಂದ ಹೊರಗೆ ಹೋಯಿತು. ಪಂದ್ಯದ ಸಮಯದಲ್ಲಿ, ಅವರಿಗೆ ಗಾಯದ ಬಗ್ಗೆ ತಿಳಿದಿರಲಿಲ್ಲ. ಪಂದ್ಯ ಮುಗಿದ ನಂತರ ಸ್ಯಾಮ್ಸನ್ ಊತವನ್ನ ಅನುಭವಿಸಿದರು. ಈ ಕಾರಣಕ್ಕಾಗಿ, ಅವುಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ನಂತ್ರವಷ್ಟೇ ಗಾಯದ ತೀವ್ರತೆ ತಿಳಿಯಲಿದೆ. https://kannadanewsnow.com/kannada/isnt-salary-enough-working-as-a-part-time-lic-agent-and-making-money-easily-you-can-also-apply/ https://kannadanewsnow.com/kannada/bjp-ministers-contact-with-santro-ravi-hdk-reveals-explosive-information/ https://kannadanewsnow.com/kannada/to-save-money-in-new-year-know-all-details/