Author: KNN IT TEAM

ಬೆಂಗಳೂರು: ಲವ್ ಜಿಹಾದ್ ( Love Jihad ) ಎಂಬುದಕ್ಕೆ ಪುರಾವೆಗಳಿಲ್ಲ – NIA. ಲವ್ ಜಿಹಾದ್ ಬಗ್ಗೆ ಕಾನೂನಾತ್ಮಕ ವಿವರಣೆ ಇಲ್ಲ – ಕೇಂದ್ರ ಸರ್ಕಾರ. ಲವ್ ಜಿಹಾದ್ ಬಗ್ಗೆ ಸರ್ಕಾರ ಚಿಂತಿಸಿಲ್ಲ – ಬಸವರಾಜ ಬೊಮ್ಮಾಯಿ.  ಸರ್ಕಾರಕ್ಕೆ ಸರ್ಕಾರಗಳಿಗೆ, ತನಿಖಾ ಸಂಸ್ಥೆಗಳಿಗೆ ತಿಳಿಯದ ಲವ್ ಜಿಹಾದ್, ನಳೀನ್ ಕುಮಾರ್ ಕಟೀಲ್ ( Nalin Kumar Kateel ) ಅವರಿಗೆ ತಿಳಿದಿದ್ದು ಹೇಗೆ? “ನಿಶಿತಾ ಪೂಜಾರಿ” ತಿಳಿಸಿದರೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ. https://twitter.com/INCKarnataka/status/1610634653714595842 ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಕಾಮಿಡಿ ಕಿಲಾಡಿ ನಳೀನ್ ಕುಮಾರ್ ಕಟೀಲ್ ಅವರೇ, 8 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ, ಮೂರುವರೆ ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಆಡಳಿತ, ದಕ್ಷಿಣ ಕನ್ನಡದ ಸಂಸದರೂ ತಾವೇ. ಹೀಗಿದ್ದೂ ದ.ಕ ಜಿಲ್ಲೆ ಆತಂಕದಲ್ಲಿದೆ ಎಂದರೆ ಅದಕ್ಕೆ ಬಿಜೆಪಿಯೇ ಕಾರಣ ಅಲ್ಲವೇ? ಜನವಿರೋಧದ ಆತಂಕವಿರುವುದರಿಂದ ತಾವು ‘ಆತಂಕವಾದಿಗಳಾಗುತ್ತಿದ್ದೀರಿ ಅಲ್ಲವೇ? ಎಂದಿದೆ. https://twitter.com/INCKarnataka/status/1610630205483225088 ಕಾಂಗ್ರೆಸ್‌ನಲ್ಲಿ…

Read More

ಹಾಸನ : ರಾಜ್ಯದ ಹಲವು ಕಡೆ ಕಾಡಾನೆ ಹಾವಳಿ ಜೋರಾಗಿದ್ದು, ಅದರಲ್ಲೂ ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಕಾಡಾನೆ ಜನರ ನಿದ್ದೆಗೆಡಿಸಿತ್ತು. ಇದೀಗ ಒಂದಲ್ಲ, ಎರಡಲ್ಲ ಹಾಸನದಲ್ಲಿ 25 ಕಾಡಾನೆ ಪ್ರತ್ಯಕ್ಷವಾಗಿದ್ದು, ಇದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ., ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಿರೆಹಳ್ಳೆ ಬಳಿ ಕಾಡಾನೆ ಗುಂಪು ಪ್ರತ್ಯಕ್ಷವಾಗಿದೆ. ಬರೋಬ್ಬರಿ 25 ಆನೆಗಳ ಹಿಂಡು ರಸ್ತೆಯಲ್ಲಿ ಸಾಗುತ್ತಿದ್ದು, ಇದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಕಾಡಾನೆ ಭಯದಿಂದ ಜನರು ತಮ್ಮ ತೋಟಗಳಿಗೆ ಹೋಗದೇ ಮನೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ, ಕೂಲಿ ಕಾರ್ಮಿಕರು ಕೂಡ ತೋಟಗಳಿಗೆ ಕೆಲಸಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆನೆಗಳನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕಳಸದಲ್ಲಿ ಮನೆ ಬಾಗಿಲಿಗೆ ಕಾಡಾನೆ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಜೋರಾಗಿದೆ. ಕೂಲಿ ಕಾರ್ಮಿಕರು, ರೈತರು ಜಮೀನಿಗೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕಾಡಾನೆ ಜನರ ನಿದ್ದೆಗೆಡಿಸಿದೆ. ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಹಾರದ ರುಚಿಯನ್ನು ಹೆಚ್ಚಿಸಲು ಶುಂಠಿಯನ್ನು ಬಳಸಲಾಗುತ್ತದೆ. ಇದರಲ್ಲಿ ಹಲವು ಔಷಧೀಯ ಗುಣಗಳಿವೆ. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದನ್ನು ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯ. ಶುಂಠಿಯು ಬೆಚ್ಚಗಾಗುವ ಪರಿಣಾಮವನ್ನು ಹೊಂದಿದೆ. ಚಳಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲು ಸಲಹೆ ನೀಡಲಾಗುತ್ತದೆ. ಇದರ ಬಳಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೀವು ಆಹಾರದಲ್ಲಿ ಶುಂಠಿಯನ್ನು ಯಾವ ರೀತಿಯಲ್ಲಿ ಸೇರಿಸಿಕೊಳ್ಳಬಹುದು ಎಂಬುದನ್ನು ತಿಳಿಯಿರಿ. ಶುಂಠಿ ಸೂಪ್ ಚಳಿಗಾಲದಲ್ಲಿ ಶುಂಠಿ ಸೂಪ್ ಮಾಡಲು ನೀವು ಅದರೊಂದಿಗೆ ಇತರ ತರಕಾರಿಗಳನ್ನು ಸೇರಿಸಬಹುದು. ಇದರಿಂದಾಗಿ ಈ ಸೂಪ್ ಇನ್ನಷ್ಟು ಆರೋಗ್ಯಕರವಾಗುತದೆ. ಇದನ್ನು ಸೇವಿಸುವುದರಿಂದ ಋತುಮಾನದ ಕಾಯಿಲೆಗಳಿಂದ ದೂರವಿರಬಹುದು. ಜಿಂಜರ್ ಐಸ್ ಕ್ರೀಮ್ ಶುಂಠಿ ಬರ್ಫಿ ತುಂಬಾ ರುಚಿಕರವಾಗಿರುತ್ತದೆ. ನೀವು ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಮೊದಲು ಶುಂಠಿಯನ್ನು ತೊಳೆದು ಒಣಗಿಸಿ, ನಂತರ ಅದನ್ನು ತುಂಡುಗಳಾಗಿ ಕತ್ತರಿಸಿ. ಮಿಕ್ಸಿಯಲ್ಲಿ ಹಾಕಿ, ಹಾಲು ಸೇರಿಸಿ ಮಿಶ್ರಣ ಮಾಡಿ ಮಿಕ್ಸಿ ಮಾಡಬೇಕು. ನಂತರ ಅದನ್ನು ಬಿಸಿ ತುಪ್ಪದಲ್ಲಿ…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಅದ್ರಂತೆ, ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸಲಾಡ್ ಕೂಡ ಇದೆ. ಸಲಾಡ್ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವು ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಒಂದು ಲೋಟ ಸಲಾಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೇ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. ಇದರಿಂದ ನಮಗೆ ಆಗುವ ಲಾಭಗಳೇನು ಅನ್ನೋದನ್ನ ತಿಳಿಯೋಣ. ಫೈಬರ್ ; ಸಲಾಡ್ಗಳು ಫೈಬರ್ ಅಂಶದಲ್ಲಿ ಸಮೃದ್ಧವಾಗಿವೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕಡಿಮೆ ಮಾಡಲು ಇದು ತುಂಬಾ ಸಹಾಯಕವಾಗಿದೆ, ಇದನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ. ಸಲಾಡ್ನ ಬೌಲ್ನಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಫೈಬರ್ ಅಂಶವಿದೆ. ಪೋಷಕಾಂಶಗಳ ಸಂಯೋಜನೆ.! ವಿವಿಧ ಹಣ್ಣುಗಳು ಮತ್ತು ತರಕಾರಿ ಸಲಾಡ್ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಅವ್ರು ಪೌಷ್ಟಿಕಾಂಶದ ಕೊರತೆಯನ್ನ ನಿವಾರಿಸುತ್ತಾರೆ. ನೀವು ಯಾವ ಅಗತ್ಯಗಳನ್ನು ಪೂರೈಸಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸಲಾಡ್ನಲ್ಲಿ ಯಾವ ತರಕಾರಿಗಳನ್ನ ಬೆಳೆಯಬೇಕೆಂದು ನೀವು ಆಯ್ಕೆ…

Read More

ಬೆಂಗಳೂರು : ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಆರಗ ಜ್ಷಾನೇಂದ್ರ ಇಂದು ಮಹತ್ವದ ಸಭೆ ನಡೆಸಿದ್ದು, ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಗೃಹ ಇಲಾಖೆಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಸಚಿವರು ‘ ಸಭೆಯಲ್ಲಿ ಗೃಹ ಇಲಾಖೆಗೆ ಸಂಬಂಧಪಟ್ಟ ವಿಧೇಯಕಗಳ ಅನುಷ್ಟಾನದ ಬಗ್ಗೆ ಚರ್ಚೆ ನಡೆಸಲಾಗಿದೆ. ಗೃಹ ಇಲಾಖೆಗೆ ಹೊಸ ವಾಹನ ಖರೀದಿ ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಖರೀದಿಸುವ ಬಗ್ಗೆ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ ಎಂದರು. 2022 ರಲ್ಲಿ ಗೃಹ ಇಲಾಖೆಗೆ ಬಹಳಷ್ಟು ಸವಾಲುಗಳು ಎದುರಾಗಿತ್ತು, ಅದನ್ನು ಪೊಲೀಸ್ ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಪೊಲೀಸರ ಕೆಲಸದ ಬಗ್ಗೆ ನನಗೆ ತೃಪ್ತಿ ಎಂದು ಸಚಿವರು ಹೇಳಿದರು. https://kannadanewsnow.com/kannada/twitter-account-suspended-for-posting-about-god-actor-kishore-gave-a-legitimate-reason/ https://kannadanewsnow.com/kannada/what-did-arun-singh-say-about-the-expansion-of-the-state-cabinet/ https://kannadanewsnow.com/kannada/tragic-accident-at-rtps-in-raichur-three-labourers-injured-after-falling-down-condition-critical/

Read More

ರಾಯಚೂರು: ಜಿಲ್ಲೆಯ ಆರ್ ಟಿಪಿಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದು ಮೂವರು ಕಾರ್ಮಿಕರು ಗಾಯಗೊಂಡಿರೋ ಘಟನೆ ನಡೆದಿದೆ. ಅಲ್ಲದೇ ಅವರ ಸ್ಥಿತಿ ಗಂಭೀರವಾಗಿರೋದಾಗಿ ಹೇಳಲಾಗುತ್ತಿದೆ. ರಾಯಚೂರಿನ ಶಕ್ತಿ ನಗರದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದ 1ನೇ ಘಟಕದಲ್ಲಿ 50 ಮೀಟರ್ ಎತ್ತರದಲ್ಲಿ ಸ್ಕ್ರ್ಯಾಬ್ ಕಟ್ಟಿಂಗ್ ಕೆಲಸದಲ್ಲಿ ಮೂವರು ಕಾರ್ಮಿಕರು ಇಂದು ನಿರತರಾಗಿದ್ದರು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ಕಾರ್ಮಿಕರನ್ನು ಮಹದೇವ (32), ಸೋನುಕುಮಾರ್ (28) ಮತ್ತು ರಾಮ ಪ್ರೀತ್ (29) ಎಂದು ತಿಳಿದು ಬಂದಿದೆ. ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದೀಗ ಅವರ ಸ್ಥಿತಿ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. https://kannadanewsnow.com/kannada/twitter-account-suspended-for-posting-about-god-actor-kishore-gave-a-legitimate-reason/ https://kannadanewsnow.com/kannada/good-news-for-bengalurus-it-employees-metro-services-to-whitefield-electronic-city-to-begin-soon/ https://kannadanewsnow.com/kannada/good-news-farmers-are-you-roaming-around-the-authorities-for-pm-kisan-money-thats-not-necessary-its-enough-to-do-so/

Read More

ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅರುಣ್ ಸಿಂಗ್ ಇಷ್ಟೊತ್ತಿಗೆ ಸಂಪುಟ ವಿಸ್ತರಣೆ ಆಗಬೇಕಿತ್ತು, ಆದರೆ ಇನ್ನೂ ಕೂಡ ಆಗಿಲ್ಲ, ಸಂಪುಟ ವಿಸ್ತರಣೆ ಸದ್ಯದಲ್ಲೇ ಆಗಲಿದೆ ಎಂದರು. ಈ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ರಸ್ತೆ, ಚರಂಡಿ ಅಭಿವೃದ್ದಿ ಬಿಟ್ಟು ಲವ್ ಜಿಹಾದ್ ಕಡೆ ಗಮನ ಕೊಡಿ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್ ಕಟೀಲ್ ಅವರಿಂದ ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು. https://kannadanewsnow.com/kannada/bjp-people-dont-know-how-to-make-love-they-talk-like-fake-boys-cm-ibrahim/ https://kannadanewsnow.com/kannada/good-news-farmers-are-you-roaming-around-the-authorities-for-pm-kisan-money-thats-not-necessary-its-enough-to-do-so/ https://kannadanewsnow.com/kannada/bjp-people-dont-know-how-to-make-love-they-talk-like-fake-boys-cm-ibrahim/

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜೀವನದಲ್ಲಿ ಉತ್ತಮ ಜೀವನ ಸಂಗಾತಿಯನ್ನು ಹೊಂದುವುದು ಬಹಳ ಮುಖ್ಯ. ನೀವು ಸರಿಯಾದ ಜೀವನ ಸಂಗಾತಿಯ ಬೆಂಬಲದಿಂದಾಗಿ ವ್ಯಕ್ತಿಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಾನೆ. ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಸಂತೋಷದ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಇವುಗಳನ್ನು ಪಾಲಿಸಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ, ಉತ್ತಮ ದಾಂಪತ್ಯ ಜೀವನಕ್ಕಾಗಿ, ಮದುವೆಗೆ ಮೊದಲು ಜೀವನ ಸಂಗಾತಿಯ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಕೋಪವು ಯಾವುದೇ ಮನುಷ್ಯನನ್ನು ನಾಶಪಡಿಸುತ್ತದೆ. ಇದರಿಂದಾಗಿ ಮಿತ್ರರೂ ಶತ್ರುಗಳಾಗುತ್ತಾರೆ. ವ್ಯಕ್ತಿಯು ಯೋಚಿಸದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಕೋಪವು ಯಾವುದೇ ವೈವಾಹಿಕ ಜೀವನವನ್ನು ನರಕವಾಗಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮದುವೆಯ ಮೊದಲು ನಿಮ್ಮ ಸಂಗಾತಿಯ ಕೋಪವನ್ನು ಪರೀಕ್ಷಿಸುವುದು ಅವಶ್ಯಕ. ಚಾಣಕ್ಯ ನೀತಿ ಶಾಸ್ತ್ರದ ಪ್ರಕಾರ, ಯಾವುದೇ ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ಇದು ವ್ಯಕ್ತಿಯು ಯಾವುದೇ ನಿರ್ಣಾಯಕ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆಯುತ್ತದೆ. ಹಾಗಾಗಿ…

Read More

ಬೆಂಗಳೂರು: ನಗರದ ಐಟಿ ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸೋದಕ್ಕಾಗಿ ನಮ್ಮ ಮೆಟ್ರೋ ರೈಲು ವೈಟ್ ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ 2ನೇ ಹಂತದಲ್ಲಿ ಸಂಚಾರ ಆರಂಭಿಸಲಿದೆ. ಈ ಮೂಲಕ ಟೆಕ್ಕಿಗಳಿಗೆ ಮೆಟ್ರೋ ರೈಲಿನಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಆಫೀಸ್ ಗೆ ತೆರಳೋದಕ್ಕೆ ಸಹಕಾರಿಯಾಗಲಿದೆ.  ಈ ಬಗ್ಗೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (Bengaluru Metro Rail Corporation Ltd -BMRCL) ಎರಡನೇ ಹಂತದ ಅಡಿಯಲ್ಲಿ 40 ಕಿ.ಮೀ ಉದ್ದದ ಮಾರ್ಗಗಳನ್ನು ಸಾರ್ವಜನಿಕರಿಗೆ ತೆರೆಯಲು ಯೋಜಿಸುತ್ತಿದೆ. ವೈಟ್ ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಎಂಬ ಎರಡು ಪ್ರಮುಖ ಐಟಿ ಕಾರಿಡಾರ್ ಗಳಿಗೆ ಶೀಘ್ರದಲ್ಲೇ ಮೆಟ್ರೋ ಸೇವೆಗಳೊಂದಿಗೆ ಸಂಪರ್ಕಿಸಲಾಗುವುದು. ನಮ್ಮ ಜನರಿಗೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. https://twitter.com/BSBommai/status/1610646978312163329 ‘ನಮ್ಮ ಮೆಟ್ರೋ ಈ ನಿಲ್ದಾಣಗಳಲ್ಲಿ ‘ಆಟೋ ರಿಕ್ಷಾ ಕೌಂಟರ್’ ಓಪನ್ ನಮ್ಮ ಮೆಟ್ರೋ ( Namma Metro ) ಪ್ರಯಾಣಿಕರ ಅನುಕೂಲಕ್ಕಾಗಿ,…

Read More

ಬೆಂಗಳೂರು : ಬಿಜೆಪಿಯವ್ರಿಗೆ ಲವ್ ಮಾಡಿ ಗೊತ್ತಿಲ್ಲ, ನಳೀನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡ್ತಾರೆ ಎಂದು ಜೆಡಿಎಸ್ (JDS) ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ ಕಟೀಲ್ ರಸ್ತೆ, ಚರಂಡಿ ಅಭಿವೃದ್ದಿ ಬಿಟ್ಟು ಲವ್ ಜಿಹಾದ್ ಕಡೆ ಗಮನ ಕೊಡಿ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ಬಿಜೆಪಿಯಲ್ಲಿ ಹಲವರಿಗೆ ಮದ್ವೆನೇ ಆಗಿಲ್ಲ, ಇನ್ನು ಲವ್ ಬಗ್ಗೆ ಏನು ಗೊತ್ತು? ಮೊದಲು ಯುಪಿ ಸಿಎಂಗೆ ಲವ್ ಮಾಡೋಕೆ ಹೇಳಿ, ಆಮೇಲೆ ಜಿಹಾದ್ ಮಾತನಾಡಿ ಎಂದು ಕಿಡಿಕಾರಿದ್ದಾರೆ.ನಳೀನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡ್ತಾರೆ, ಮುಂದೆ ಬೆಳೆಯೋ ಮಕ್ಕಳಿಗೆ ರಾಜ್ಯಾಧ್ಯಕ್ಷರು ಯಾವ ರೀತಿ ಸಂದೇಶ ನೀಡಿದ್ದಾರೆ. ಇಂತಹವರನ್ನು ಚುನಾವಣೆಯಲ್ಲಿ ಜನರು ಒದ್ದು ಹೊರಗೆ ಹಾಕಬೇಕು ಎಂದು ತಿರುಗೇಟು ನೀಡಿದ್ದಾರೆ. https://kannadanewsnow.com/kannada/good-news-for-women-candidates-25-reservation-in-police-recruitment-2/ https://kannadanewsnow.com/kannada/good-news-for-women-candidates-25-reservation-in-police-recruitment/

Read More