Subscribe to Updates
Get the latest creative news from FooBar about art, design and business.
Author: KNN IT TEAM
ನೋಯ್ಡಾ: ಕಾರೊಂದು ಡಿಕ್ಕಿ ಹೊಡೆದು ಸುಮಾರು 500 ಮೀಟರ್ ವರೆಗೆ ಎಳೆದೊಯ್ದ ಪರಿಣಾಮ ಡೆಲಿವರಿ ಏಜೆಂಟ್ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ಭಾನುವಾರ ನಡೆದಿದೆ. ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಕೌಶಲ್ ಹೊಸ ವರ್ಷದ ರಾತ್ರಿ ಆರ್ಡರ್ ಡೆಲಿವರಿಗೆಂದು ಹೊರಟಿದ್ದಾಗ ನೋಯ್ಡಾ ಸೆಕ್ಟರ್ 14ರ ಫ್ಲೈಓವರ್ ಬಳಿ ಕಾರೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸುಮಾರು 500 ಮೀಟರ್ ವರೆಗೆ ಎಳೆದೊಯ್ದಿದೆ. ಕೌಶಲ್ ಶವ ಕಳಚಿ ಬಿದ್ದದ್ದನ್ನು ಕಂಡ ಚಾಲಕ ದೇವಸ್ಥಾನದ ಬಳಿ ಕಾರನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭಾನುವಾರ ಮಧ್ಯರಾತ್ರಿ 1 ಗಂಟೆಗೆ ಕೌಶಲ್ ಅವರ ಸಹೋದರ ಅಮಿತ್ ಕರೆ ಮಾಡಿದಾಗ ದಾರಿಹೋಕರೊಬ್ಬರು ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ತಿಳಿಸಿದ್ದಾರೆ. ಅಮಿತ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/young-men-are-not-finding-brides-because-of-unemployment-sharad-pawar/ https://kannadanewsnow.com/kannada/delhi-horror-new-footage-shows-anjalis-friend-returning-home-from-accident-watch/ https://kannadanewsnow.com/kannada/young-men-are-not-finding-brides-because-of-unemployment-sharad-pawar/ https://kannadanewsnow.com/kannada/delhi-horror-new-footage-shows-anjalis-friend-returning-home-from-accident-watch/
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ನಡುವೆಯೂ ಅವುಗಳನ್ನು ನಿಯಂತ್ರಿಸುವಂತ ಕೆಲಸವನ್ನು ಬೆಂಗಳೂರು ನಗರ ಪೊಲೀಸರು ಮಾಡುತ್ತಿದ್ದಾರೆ. ಹಾಗಾದ್ರೇ 2022ರಲ್ಲಿ ಬೆಂಗಳೂರು ಸಿಟಿಯಲ್ಲಿ ದಾಖಲಾದಂತ ಕ್ರೈಂಗಳ ಸಂಖ್ಯೆ ಎಷ್ಟು? ಅವುಗಳಲ್ಲಿ ಪತ್ತೆ ಹಚ್ಚಿ, ಬಗೆ ಹರಿಸಿದಂತ ಪ್ರಕರಣಗಳು ಎಷ್ಟು ಎನ್ನುವ ಬಗ್ಗೆ ಸಂಪೂರ್ಣ ಕ್ರೈಂ ರಿಪೋರ್ಟ್ ಮುಂದೆ ಓದಿ. ಈ ಬಗ್ಗೆ ಮಾಹಿತಿ ನೀಡಿರುವಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, 2022ರ ವರ್ಷದಲ್ಲಿ ನಗರದಲ್ಲಿ ಡ್ರಗ್ ಸೇವಿಸಿದಂತ ಪ್ರಕರಣಗಳಲ್ಲಿ 3,448 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಿಂದ 3,746 ಕೆಜಿ ಗಾಂಜಾ, 167 ಕೆಜಿ ಡ್ರಗ್ ಸೇರಿದಂತೆ ಒಟ್ಟು 89.53 ಕೋಟಿ ಮೌಲ್ಯದ ಡ್ರಗ್ ವಶ ಪಡೆಸಿಕೊಳ್ಳಲಾಗಿದೆ. ನಗರದಲ್ಲಿ ವಾಹನ ಸವಾರರಿಂದ 179 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದರು. 2022ರ ವರ್ಷದಲ್ಲಿ 34 ವಿದೇಶಿಗರನ್ನು ಬಂಧಿಸಲಾಗಿದೆ. 172 ಕೊಲೆ ಕೇಸ್ ದಾಖಲಾಗಿದ್ದು, ಎಲ್ಲಾ ಕೇಸ್ ಪತ್ತೆ ಹಚ್ಚಿದ್ದೇವೆ. 478…
ಪುಣೆ: ನಿರುದ್ಯೋಗದ ವಿಷಯದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರಗಳನ್ನು ಟೀಕಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ʻಮದುವೆಯ ವಯಸ್ಸಿನ ಯುವಕರಿಗೆ ವಧುಗಳು ಸಿಗುತ್ತಿಲ್ಲʼ ಎಂದು ಬುಧವಾರ ಹೇಳಿದ್ದಾರೆ. ಇಲ್ಲಿ ಎನ್‌ಸಿಪಿಯ ಜನ ಜಾಗರ್ ಯಾತ್ರೆ ಅಭಿಯಾನಕ್ಕೆ ಚಾಲನೆ ನೀಡುವ ಮೊದಲು ಮಾತನಾಡಿದ ಪವಾರ್, ಸಮುದಾಯಗಳ ನಡುವೆ ಬಿರುಕು ಮೂಡಿಸಲಾಗುತ್ತಿದೆ ಮತ್ತು ಹಣದುಬ್ಬರ ಮತ್ತು ನಿರುದ್ಯೋಗದಂತಹ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. “ಒಮ್ಮೆ ನಾನು ಪ್ರಯಾಣ ಮಾಡುವಾಗ 25 ರಿಂದ 30 ವರ್ಷದೊಳಗಿನ 15 ರಿಂದ 20 ಪುರುಷರು ಹಳ್ಳಿಯ ಸಾರ್ವಜನಿಕ ಚೌಕದಲ್ಲಿ ಸುಮ್ಮನೆ ಕುಳಿತಿರುವುದನ್ನು ನಾನು ಕಂಡು ಅವರೊಂದಿಗೆ ಮಾತನಾಡಿದೆ. ಈ ವೇಳೆ ನೀವೆಲ್ಲರೂ ಮದುವೆಯಾಗಿದ್ದೀರಾ ಎಂದು ಕೇಳಿದ್ಕೆ, ಅದಕ್ಕೆ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಅಲ್ಲಿದ್ದವರು ಕೆಲವರು ಪದವೀಧರರು, ಕೆಲವರು ಸ್ನಾತಕೋತ್ತರ ಪದವೀಧರರಾಗಿರುವುದಾಗಿ ಹೇಳಿಕೊಂಡಿದ್ದು, ನಮಗೆ ಉದ್ಯೋಗವಿಲ್ಲದ ಕಾರಣ ಯಾರೂ ವಧುಗಳನ್ನು ನೀಡಲು ಸಿದ್ಧರಿಲ್ಲ ಎಂದರು” ಎಂದು ಪವಾರ್ ಹೇಳಿದರು. ರಾಜ್ಯದ…
ಬೆಳಗಾವಿಯ : ಬೆಳಗಾವಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 6 ಜನ ಮೃತಪಟ್ಟ ಘಟನೆ ನಡೆದಿದೆ. ಮರಕ್ಕೆ ಬೊಲೆರೊ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ 6 ಮಂದಿ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಚುಂಚನೂರ ಬಳಿ ನಡೆದಿದೆ. ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಮೃತರನ್ನು ಹನುಮವ್ವ, ದೀಪಾ, ಸವಿತಾ, ಸುಪ್ರಿತಾ, ಮಾರುತಿ, ಇಂದಿರವ್ವ ಎಂದು ಗುರುತಿಸಲಾಗಿದೆ. ಸವದತ್ತಿ ಯಲ್ಲಮನ ದರ್ಶನಕ್ಕೆ ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಎಸ್ ಪಿ ಡಾ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಭೀಕರ ಅಪಘಾತಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. https://kannadanewsnow.com/kannada/kannada-sahitya-sammelan-in-haveri-from-tomorrow-schedule-time-to-address-the-guests-along-with-the-cm/ https://kannadanewsnow.com/kannada/a-terrible-road-accident-in-belgaum-in-the-morning-of-belgaum-6-people-died/
ಬೆಳಗಾವಿಯ : ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 6 ಜನ ಮೃತಪಟ್ಟ ಘಟನೆ ನಡೆದಿದೆ. ಮರಕ್ಕೆ ಬೊಲೆರೊ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ 6 ಮಂದಿ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಚುಂಚನೂರ ಬಳಿ ನಡೆದಿದೆ. ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಹನುಮವ್ವ, ದೀಪಾ, ಸುಪ್ರಿತಾ, ಮಾರುತಿ, ಇಂದಿರವ್ವ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. ಸವದತ್ತಿ ಯಲ್ಲಮನ ದರ್ಶನಕ್ಕೆ ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://kannadanewsnow.com/kannada/kannada-sahitya-sammelan-in-haveri-from-tomorrow-schedule-time-to-address-the-guests-along-with-the-cm/ https://kannadanewsnow.com/kannada/delhi-horror-new-footage-shows-anjalis-friend-returning-home-from-accident-watch/
ನವದೆಹಲಿ: ಸುಮಾರು 12 ಕಿಮೀವರೆಗೆ ಕಾರಿನಿಂದ ಎಳೆದೊಯ್ದು 20 ವರ್ಷದ ಯುವತಿ ಸಾವನ್ನಪ್ಪಿದ ಪ್ರಕರಣದಲ್ಲಿ ಪ್ರತಿದಿನ ಹೆಚ್ಚಿನ ವಿವರಗಳು ಬಹಿರಂಗಗೊಳ್ಳುತ್ತಿವೆ. ಯುವತಿ ಯ ಸ್ನೇಹಿತೆ ನಿಧಿ ಅಪಘಾತದ ಸ್ಥಳದಿಂದ ಪರಾರಿಯಾದ ನಂತರ ಮನೆಗೆ ತಲುಪುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗುತ್ತಿವೆ. ಇದರೊಂದಿಗೆ ಅಂಜಲಿಯ ಸ್ನೇಹಿತೆಯ ಸಿಸಿಟಿವಿ ಕೂಡ ಬಯಲಿಗೆ ಬಂದಿದೆ. ಮೃತ ಅಂಜಲಿಯ ಸ್ನೇಹಿತೆ ನಿಧಿ ಅಪಘಾತದ ನಂತರ ರಾತ್ರಿ 2.30 ರ ಸುಮಾರಿಗೆ ತನ್ನ ಮನೆಯೊಳಗೆ ಪ್ರವೇಶಿಸುತ್ತಿದ್ದಾರೆ. ನಿಧಿ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದಾಳೆ. ಬಹಳ ಹೊತ್ತು ಮನೆಯ ಹೊರಗೆ ನಿಂತಿದ್ದರು. ಬಾಗಿಲು ಬಡಿಯುತ್ತಲೇ ಇದ್ದಳು. ಆಗ ಯಾರೋ ಬಾಗಿಲು ತೆರೆದಿದ್ದು, ಆದ ನಿಧಿ ಒಳಗೆ ಹೋದಳು. ಸಿಸಿಟಿವಿ ಸೆರೆಯಾಗಿರುವ ಮನೆಯ ಪ್ರಕಾರ, ಅವರ ಸಿಸಿಟಿವಿಯ ಸಮಯದ ಸೆಟ್ಟಿಂಗ್‌ನಲ್ಲಿ ಸುಮಾರು 45 ನಿಮಿಷಗಳ ವ್ಯತ್ಯಾಸವಿದೆ. ಅಂದರೆ, ರಾತ್ರಿ 2.30ರ ಸುಮಾರಿಗೆ ಅಂಜಲಿ ತನ್ನ ಮನೆಗೆ ಬಂದಿದ್ದಾಳೆ. #WATCH सुल्तानपुरी केस में घटना की चश्मदीद निधि…
ಹಾವೇರಿ : ಹಾವೇರಿ ನಗರದಲ್ಲಿ ಜನವರಿ 06, 07, ಮತ್ತು 08 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ದತೆ ನಡೆಸಲಾಗಿದೆ. ಇದೀಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಸೇರಿ ಅತಿಥಿಗಳಿಗೆ ಭಾಷಣ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಸಮಯ ನಿಗದಿಗೊಳಿಸಿದೆ. ಸಿಎಂ ಬೊಮ್ಮಾಯಿ ಸೇರಿ ಎಲ್ಲಾ ಅತಿಥಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಉದ್ಘಾಟನಾ ಭಾಷಣ ಮಾಡಲು ಮುಖ್ಯಮಂತ್ರಿಗಳಿಗೆ 30 ನಿಮಿಷ ಸಮಯ ನಿಗದಿ, ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರ ಭಾಷಣಕ್ಕೆ 45 ನಿಮಿಷ ನಿಗದಿ, ಬಿಎಸ್ವೈ, ಹೆಚ್ಡಿಕೆ ಸೇರಿ ಗಣ್ಯರಿಗೆ 10 ನಿಮಿಷ ಸಮಯ ನಿಗದಿ ಮಾಡಲಾಗಿದೆ. ಈ ಸಮಯದೊಳಗೆ ಭಾಷಣ ಮಾಡಿ ಮುಗಿಸಬೇಕೆಂಬ ನಿಯಮವನ್ನು ಕನ್ನಡ ಸಾಹಿತ್ಯ ಪರಿಷತ್ ತಂದಿದೆ. ಸಮ್ಮೇಳನ ನಡೆಯುವ ಹಿನ್ನೆಲೆ ಹಾವೇರಿ ಜಿಲ್ಲೆಯಾದ್ಯಂತ ಎಲ್ಲಾ ಪಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.ಹಾವೇರಿ ಜಿಲ್ಲೆಯಾದ್ಯಂತ ಎಲ್ಲಾ ಪಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ದಿನಾಂಕ: 06-01-2023…
ಅಗರ್ತಲಾ/ಗುವಾಹಟಿ: ದಟ್ಟ ಮಂಜಿನಿಂದಾಗಿ ಕಳಪೆ ಗೋಚರತೆಯಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ರಾತ್ರಿ ಗುವಾಹಟಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ವಿಮಾನ ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ವಿಮಾನವನ್ನು ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. Honoured to receive Adarniya Griha Mantri Shri @AmitShah ji at LGBI Airport, Guwahati ahead of his visit to Tripura tomorrow. We’ve always been blessed by the generous guidance of Hon HM. pic.twitter.com/sn6cszosZo — Himanta Biswa Sarma (@himantabiswa) January 4, 2023 ಅಮಿತ್ ಶಾ ಬುಧವಾರ ರಾತ್ರಿ ಅಗರ್ತಲಾಗೆ ಆಗಮಿಸಬೇಕಿತ್ತು. ಮರುದಿನ ಈಶಾನ್ಯ ರಾಜ್ಯದಲ್ಲಿ ಎರಡು ರಥಯಾತ್ರೆಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲಿ ಈ ವರ್ಷದ…
ತುಮಕೂರು: ಈಗಾಗಲೇ ಜೆಡಿಎಸ್ ಪಕ್ಷದಿಂದ (JDS Party) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 2ನೇ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದ ( Congress Party ) ಈ ತಿಂಗಳ ಅಂತ್ಯಕ್ಕೆ 150 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ಈ ಬಗ್ಗೆ ತುಮಕೂರಿನ ತುರುವೇಕೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರು, ಈ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಮೊದರ ಪಟ್ಟಿಯಲ್ಲಿ 150 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವುದಾಗಿ ಹೇಳಿದರು. ಇನ್ನೂ ಸಿದ್ದರಾಮಯ್ಯ ಆಪ್ತ ಕೆ ಆರ್ ಪಿಪಿ ಸೇರ್ಪಡೆಯ ವಿಚಾರವಾಗಿ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರಲ್ಲಿ ಯಾರೋ ಒಬ್ಬರು ಹೋದರೇ ಹೋಗಲಿ ಎಂದರು. ಸಿಎಂ ಬೊಮ್ಮಾಯಿಯವರು ನರೇಂದ್ರ ಮೋದಿಯವರ ಮುಂದೆ ನಾಯಿ ಮರಿ ಇದ್ದಂತೆ ಇರುತ್ತಾರೆ. ಮೋದಿ ಮುಂದೆ ಗಡಗಡ ನಡುಗುತ್ತಾರೆ ಎಂಬುದಾಗಿ ಸಿಎಂ ಬಗ್ಗೆ…
ಬೆಂಗಳೂರು: ನಮ್ಮ ಮೆಟ್ರೋ ( Namma Metro ) ಪ್ರಯಾಣಿಕರ ಅನುಕೂಲಕ್ಕಾಗಿ, ಬೆಂಗಳೂರಿನ ಕೆಲ ಮೆಟ್ರೋ ನಿಲ್ದಾಣಗಳ ಬಳಿಯಲ್ಲಿ ಪೂರ್ವ ನಿಶ್ಚಿತ ಆಟೋ ರಿಕ್ಷಾ ( auto rickshaw ) ದರದ ಕೌಂಟರ್ ಗಳನ್ನು ಇಂದಿನಿಂದ ಆರಂಭಿಸಲಾಗುತ್ತಿದೆ. ಈ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ನಿವಾಸಗಳಿಗೆ ಆಟೋದಲ್ಲಿ ಪೂರ್ವ ನಿಗಧಿತ ದರದಲ್ಲಿ ತಲುಪುವಂತ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಿಎಂಆರ್ ಸಿಎಲ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಸಹಯೋಗದೊಂದಿಗೆ ಪೂರ್ವ ನಿಶ್ಚಿತ ಆಟೋ ರಿಕ್ಷಾ ದರದ ಕೌಂಟರ್ ಗಳನ್ನು ಇಂದು ಎಂ.ಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಪ್ರಾರಂಭಿಸಿರುವುದಾಗಿ ತಿಳಿಸಿದೆ. ಇನ್ನೂ ಈ ಕೌಂಟರ್ ಗಳನ್ನು ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ನಾಗಸಂದ್ರದ 2 ಸ್ಥಳಗಳಲ್ಲಿ ಮೆಟ್ರೋ ನಿಲ್ದಾಣಗಳ ಆಗಮನ, ನಿರ್ಗಮನ ದ್ವಾರಗಳಲ್ಲಿ ಪ್ರಾರಂಭಿಸಲಾಗುವುದು. ಪ್ರಯಾಣಿಕರು ಮೊದಲು ಮತ್ತು ಕೊನೆಯ ಮೈಲಿ ಸಂಪರ್ಕ ಭಾಗವಾಗಿ ಮತ್ತು ಬೆಂಗಳೂರಿನ ನಾಗರೀಕರು…