Subscribe to Updates
Get the latest creative news from FooBar about art, design and business.
Author: KNN IT TEAM
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಯಾವುದೇ ಹೊಸ ಕೊರೊನಾ ತಳಿ ಪತ್ತೆಯಾಗಿಲ್ಲ ಆತಂಕಪಡುವುದು ಬೇಡ ಎಂದು ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್ ರಾಜ್ಯದಲ್ಲಿ ಯಾವುದೇ ಹೊಸ ಕೊರೊನಾ ತಳಿ ಪತ್ತೆಯಾಗಿಲ್ಲ. ಕೊರೊನಾ ಹೊಸತಳಿ ಜನರ ಮೇಲೆ ಗಂಭೀರ ಪರಿಣಾ,ಮ ಬೀರಲ್ಲ, ಈಗಾಗಲೇ 85 ರಷ್ಟು ಮಂದಿಗೆ ಕೊರೊನಾ ಬಂದು ಹೋಗಿದೆ. ತಜ್ಞರು ಅಧ್ಯಯನ ನಡೆಸಿ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ. ಒಮಿಕ್ರಾನ್ ಎಕ್ಸ್ ಬಿಬಿ 1.5 ಯಿಂದ ಯಾವುದೇ ಆತಂಕ ಇಲ್ಲ ಎಂದು ಸುಧಾಕರ್ ಹೇಳಿದ್ದಾರೆ. ಇನ್ನೂ, ಗ್ರಾಮೀಣ ಮಕ್ಕಳ ಆರೋಗ್ಯ ರಕ್ಷಣೆಗೆ ಆರೋಗ್ಯನಂದನದ ಮೂಲಕ ಮಕ್ಕಳ ವೈದ್ಯರೊಂದಿಗೆ ಆರ್.ಬಿ.ಎಸ್.ಕೆ ತಂಡ ಪ್ರತಿದಿನ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದ್ದು, 1.7 ಕೋಟಿ ಪೈಕಿ 69,21,179 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಎಲ್ಲ ಜಿಲ್ಲೆಗಳು ಮತ್ತು 167 ಕೇಂದ್ರಗಳಲ್ಲಿ ಡಯಾಲಿಸಿಸ್ ಸೇವೆಗಳು ದೊರೆಯುತ್ತಿವೆ ಎಂದು ಡಾ.ಕೆ.ಸುಧಾಕರ್ ಹೇಳಿದರು. https://kannadanewsnow.com/kannada/cabinet-approves-naming-of-airport-at-goas-mopa-after-manohar-parrikar/ https://kannadanewsnow.com/kannada/siddaramaiah-again-defends-the-puppy-statement-against-the-cm-today/
ದಕ್ಷಿಣಕನ್ನಡ : ಸುಳ್ಯದಲ್ಲಿ ಮತ್ತೆ ಧರ್ಮ ದಂಗಲ್ ಶುರುವಾಗಿದ್ದು, ಚೆನ್ನಕೇಶವ ದೇವಸ್ಥಾನ ಜಾತ್ರ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗುತ್ತದೆ ಎಂದು ನಿನ್ನೆಯ ದಿಢೀರ್ ಸಭೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ನಿರ್ಧಾರಿಸಲಾಗಿದೆ. https://kannadanewsnow.com/kannada/siddaramaiah-again-defends-the-puppy-statement-against-the-cm-today/ ಜ.2 ತಾರೀಕಿನಂದು ದೇವಸ್ಥಾನ ಆಡಳಿತ ಮಂಡಳಿಯ ಸಭೆ ನಡೆಯಿತು. ಆ ಸಂದರ್ಭದಲ್ಲಿ ಜಾತ್ರ ಸಮಯದಲ್ಲಿಎಲ್ಲರಿಗೂ ಅವಕಾಶ ನೀಡುವಂತೆ ಚರ್ಚೆ ನಡೆಸಲಾಗಿತ್ತು. ಆದ್ರೆ ನಿನ್ನೆ ದಿಢೀರ್ ನಡೆದ ಸಭೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ನಿರ್ಬಂಧ ಎಂದು ಮಾಹಿತಿ ತಿಳಿಸಲಾಗಿದೆ. ಜನವರಿ 12ರವರೆಗೆ ಜಾತ್ರಮಹೋತ್ಸವ ನಡೆಯಲಿದೆ. https://kannadanewsnow.com/kannada/siddaramaiah-again-defends-the-puppy-statement-against-the-cm-today/ ಇದೀಗ ಬಂದಂತಹ ಸುದ್ದಿಯಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ಅಪ್‌ಡೇಟ್ ಮಾಡಲಾಗುತ್ತದೆ.
ಬೆಂಗಳೂರು : ಪ್ರಧಾನಿ ಮೋದಿ ಮುಂದೆ ಬೊಮ್ಮಾಯಿ ನಾಯಿಮರಿಯಂತೆ ಇರ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೀಗ ತಮ್ಮ ಹೇಳಿಕೆಗೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತೆ ಸಮರ್ಥನೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಧೈರ್ಯದಿಂದ ಇರಬೇಕು ಎಂದು ಅಷ್ಟೇ ಹೇಳಿದ್ದೆ, ರಾಜ್ಯದ ಹಿತದೃಷ್ಟಿಯಿಂದ ಧೈರ್ಯದಿಂದ ಇರಬೇಕು ಎಂದು ನಾನು ಸದುದ್ದೇಶದಿಂದ ಹೇಳಿದ್ದೆ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಮುಖ್ಯಮಂತ್ರಿಗಳು ಧೈರ್ಯದಿಂದ ಇರಬೇಕು ಎಂದು ಹೇಳಿದ್ದೆ, ಅನುದಾನ ವಿಚಾರದಲ್ಲಿ ಹೇಳಿದ್ದೇನೆ ಅಷ್ಟೇ, ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದರು. ಸೋನಿಯಾ ಗಾಂಧಿ, ರಾಹುಲ್ ಮುಂದೆ ಸಿದ್ದರಾಮಯ್ಯ ಇಲಿ ತರ ಇರುತ್ತಾರೆ ಎಂಬ ಸಚಿವ ಶ್ರೀರಾಮುಲು ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅವನೊಬ್ಬ ಪೆದ್ದ , ಆತನ ಬಗ್ಗೆ ಮಾತನಾಡೋಲ್ಲ ಎಂದರು.ಸಿಎಂ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿಲ್ಲ, ನಮ್ಮ ಹಳ್ಳಿ ಭಾಷೆಯಲ್ಲಿ ಹಾಗೆ ಮಾತನಾಡುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು, ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು…
ಗೋವಾ: ಗೋವಾದ ಮೊಪಾದಲ್ಲಿರುವ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಗೋವಾದ ಮುಖ್ಯಮಂತ್ರಿ ಆಗಿದ್ದ ಮನೋಹರ್ ಪರಿಕ್ಕರ್ (Manohar Parrikar) ಅವರ ಹೆಸರಿಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮನೋಹರ್ ಪರಿಕ್ಕರ್ ಅವರ ಗೌರವ ಸೂಚಕವಾಗಿ ಗೋವಾದ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ʻಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣʼ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. #Cabinet gives ex-post facto approval for naming of Greenfield International Airport Mopa, Goa as ‘Manohar International Airport – Mopa, Goa’, as a mark of tribute to Late Shri Manohar Parrikar, Ex-Defence Minister and Four-time Goa Chief Ministerhttps://t.co/UOSbw5IISs — PIB India (@PIB_India) January 4, 2023 “ಗೋವಾ ರಾಜ್ಯದ ಜನತೆಯ ಆಕಾಂಕ್ಷೆಗಳನ್ನು ಈಡೇರಿಸಲು, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ…
ಬೆಂಗಳೂರು : ಸ್ಯಾಂಟ್ರೋ ರವಿ ಜತೆ ಬಿಜೆಪಿ ಸಂಪರ್ಕದಲ್ಲಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಆರಗ ಜ್ಞಾನೇಂದ್ರ ಟಾಂಗ್ ನೀಡಿದ್ದಾರೆ. ಕುಮಾರಸ್ವಾಮಿ ಹೇಳಿದಾಗಲೇ ರವಿ ವಿಷಯ ಗೊತ್ತಾಗಿದ್ದು, ಹೆಚ್ಡಿಕೆ ಸಿಎಂ ಆಗಿದ್ದಾಗಲೇ ಆತ ಹೆಚ್ಚು ವ್ಯವಹಾರ ನಡೆಸಿದ್ದನು ಎಂದು ಗೃಹ ಸಚಿವರು ಟಾಂಗ್ ನೀಡಿದ್ದಾರೆ. ಸ್ಯಾಂಟ್ರೋ ರವಿ ಜತೆ ಬಿಜೆಪಿ ಸಂಪರ್ಕದಲ್ಲಿದೆ : ಹೆಚ್ಡಿಕೆ ಬಾಂಬ್ 2018ರ ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಯಾರನ್ನೆಲ್ಲ ಬಳಕೆ ಮಾಡಿಕೊಳ್ಳಲಾಯಿತು? ಬಾಂಬೆಗೆ ಹೋದವರ ಮೋಜು ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದರು ಯಾರು? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದರು.ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿ ಅವರು ಮೈಸೂರು ಪೊಲೀಸರು ಎಫ್ ಐ ಆರ್ ದಾಖಲು ಮಾಡಿರುವ ಸಾಂಟ್ರೋ ರವಿ ಹಾಗೂ ರಾಜ್ಯ ಬಿಜೆಪಿ ಸರಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಅನೇಕ ಜನರು ತಮ್ಮ ಬ್ಯಾಂಕ್ ಖಾತೆ, ವಿವಿಧ ಪಾವತಿ ಅಪ್ಲಿಕೇಶನ್ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಪಾಸ್ವರ್ಡ್ಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಆದಾಗ್ಯೂ, ಪಾಸ್ ವರ್ಡ್ ಗಳನ್ನು ಇಟ್ಟುಕೊಳ್ಳುವ ಮೊದಲು ಯಾರಿಗೂ ತಿಳಿದಂತಹ ಪಾಸ್ ವರ್ಡ್ ಗಳನ್ನು ಬಳಸುವುದು ಬಹಳ ಮುಖ್ಯವಾಗಿದೆ https://kannadanewsnow.com/kannada/emotional-reunion-of-ukrainian-soldier-and-his-pregnant-wife-goes-viral/ ಇತ್ತಿಚಿನ ಕಾಲ ಘಟದಲ್ಲಿ ಸ್ವಲ್ಪ ಯಾಮಾರಿದ್ರೂ ನಿಮ್ಮ ಖಾತೆಯ ಹಣ ಎಗರಿಸುವ ಸೈಬರ್ ಅಪರಾಧಗಳು ಹೆಚ್ಚಾಗಿವೆ. ಸುಲಭವಾದ ಪಾಸ್ ವರ್ಡ್ ಗಳನ್ನು ಹೊಂದಿರುವುದು ನಿಮ್ಮ ಖಾತೆಯನ್ನು ಹ್ಯಾಕರ್ ಗಳು ಹ್ಯಾಕ್ ಮಾಡುವ ಅಪಾಯಕ್ಕೆ ಸಿಲುಕುವು ಗ್ಯಾರಂಟಿ . ನಿಮ್ಮ ವೈಯಕ್ತಿಕ ವಿವರಗಳೊಂದಿಗೆ ಬ್ಯಾಂಕಿನಲ್ಲಿರುವ ಎಲ್ಲಾ ಹಣವನ್ನು ಎಗರಿಸಬಹುದು. ಅದಕ್ಕಾಗಿಯೇ ಟೆಕ್ ತಜ್ಞರು ಪಾಸ್ವರ್ಡ್ಗಳನ್ನು ಹಾಕುವ ಮೊದಲು ಇತರರಿಗೆ ತಿಳಿಯದೇ ಇರುವಂತಹ ಕಷ್ಟಕರವಾದ ಪಾಸ್‌ವರ್ಡ್ ಹಾಕುವುದು ಮುಖ್ಯ ಎಂದು ಹೇಳುತ್ತಾರೆ. ಸುಲಭ ಪಾಸ್ವರ್ಡ್ಗಳನ್ನು ಇಟ್ಟುಕೊಳ್ಳುವುದು ಅಪಾಯ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ. ಇವು ಸಾಮಾನ್ಯವಾಗಿ ಬಳಸುವ ಪಾಸ್ ವರ್ಡ್ ಗಳಾಗಿವೆ. 123456, ಪಾಸ್ ವರ್ಡ್ 1,…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ, ಗರ್ಭಿಣಿ ಪತ್ನಿ ಮತ್ತು ಆಕೆಯ ಪತಿ ಉಕ್ರೇನ್ ಸೈನಿಕನ ಭಾವನಾತ್ಮಕ ಪುನರ್ಮಿಲನದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ. ಆಂಟನ್ ಗೆರಾಶ್ಚೆಂಕೊ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಗರ್ಭಿಣಿ ಮಹಿಳೆ ತನ್ನ ಪತಿಯನ್ನು ಭೇಟಿಯಾಗಲು ಸಾಗುತ್ತಿರುವುದನ್ನು ನೋಡಬಹುದು. ನಂತ್ರ, ಆಕೆ ತನ್ನ ಸೈನಿಕ ಪತಿಯನ್ನು ನೋಡಿ ತಕ್ಷಣ ಓಡಿಹೋಗಿ ಅವನನ್ನು ತಬ್ಬಿ ಕಣ್ಣೀರಿಡುವುದನ್ನು ನೋಡಬಹುದು. This is what we’re fighting for. They haven’t seen each other for 30 weeks. 📹: yanina_sham/Instagram pic.twitter.com/vVrkdlRAln — Anton Gerashchenko (@Gerashchenko_en) January 3, 2023 ವೀಡಿಯೋ ಜೊತೆಗೆ, “ಅವರು 30 ವಾರಗಳಿಂದ ಒಬ್ಬರನ್ನೊಬ್ಬರು ನೋಡಿಲ್ಲ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋವನ್ನು 24,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. https://kannadanewsnow.com/kannada/country-with-rich-culture-has-bright-future-karnataka-cm/ https://kannadanewsnow.com/kannada/bigg-news-businessman-pradeep-suicide-case-accused-raghava-bhat-explosive-information-revealed-during-interrogation/ https://kannadanewsnow.com/kannada/country-with-rich-culture-has-bright-future-karnataka-cm/ https://kannadanewsnow.com/kannada/bigg-news-businessman-pradeep-suicide-case-accused-raghava-bhat-explosive-information-revealed-during-interrogation/
ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಪ್ರಕರಣದ ಆರೋಪಿ ರಾಘವಭಟ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದ್ದು, ಪ್ರದೀಪ್ ಜೊತೆ 10 ಲಕ್ಷ ರೂಪಾಯಿ ವ್ಯವಹಾರ ನಡೆದಿರುವುದು ತಿಳಿದು ಬಂದಿದೆ ಎನ್ನಲಾಗಿದೆ. ಯಾವುದೋ ವ್ಯವಹಾರದಲ್ಲಿ ಉದ್ಯಮಿ ಪ್ರದೀಪ್ ಜೊತೆಗಿನ 10 ಲಕ್ಷ ಡೀಲ್ ಕುದುರಿಸಲಾಗಿದ್ದು, ರಾಘವ ಭಟ್ ನಗದು ಮೂಲಕ 3 ಲಕ್ಷ ವಾಪಸ್ ಕೊಟ್ಟಿದ್ದಾನೆ. ಉಳಿದ 7 ಲಕ್ಷವನ್ನು ಚೆಕ್ ಮೂಲಕ ನೀಡಿದ್ದಾನೆ. ಆದರೆ ಪ್ರದೀಪ್ಗೆ ರಾಘವ ಭಟ್ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, . ಈ ಹಿನ್ನೆಲೆ ಪ್ರದೀಪ್ ನ್ಯಾಯಾಲಯದಲ್ಲಿ ಚೆಕ್ಬೌನ್ಸ್ ಕೇಸ್ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಯುತ್ತಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನೂ, ಡೆತ್ ನೋಟ್ ನಲ್ಲಿ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ ಹೆಸರು ಕೂಡ ಉಲ್ಲೇಖವಾಗಿದ್ದು, ಕಗ್ಗಲಿಪುರ ಠಾಣಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಮೂವರು ಕೂಡ ವಿಚಾರಣೆಗೆ ಹಾಜರಾಗಿಲ್ಲ.…
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru )ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ಪಿಎಫ್‌ಐ (PFI) ಕಾರ್ಯಕರ್ತರನ್ನು ಪತ್ತೆ ಪತ್ತೆಹಚ್ಚಿ ಕೊಟ್ಟವರಿಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (NIA ) ನಗದು ಬಹುಮಾನ ಘೋಷಿಸಿದೆ. https://kannadanewsnow.com/kannada/country-with-rich-culture-has-bright-future-karnataka-cm/ ಹತ್ಯೆ ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡ ಶಂಕೆ ಹಿನ್ನೆಲೆ ನೊಟೀಸಿನ ಪ್ರತಿಗಳನ್ನು ಕಲ್ಲಿಕೋಟೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಅಡಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (National Investigation Agency ) ತಮ್ಮ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. https://kannadanewsnow.com/kannada/country-with-rich-culture-has-bright-future-karnataka-cm/ ಈ ನಿಟ್ಟಿನಲ್ಲಿ ಸುಳ್ಯ ಬುದು ಹೌಸ್‌ನ ಎಸ್. ಮುಹಮ್ಮದ್ ಮುಸ್ತಫ ಯಾನೆ ಮುಸ್ತಫ ಪೈಚಾರ್ ಮತ್ತು ಮಡಿಕೇರಿಯ ಎಂ.ಎಚ್. ತೌಫಲ್ ಕುರಿತು ಮಾಹಿತಿ ನೀಡುವವರಿಗೆ ತಲಾ 5 ಲಕ್ಷ ರೂ. ನೀಡಲಾಗುವುದು. ದಕ್ಷಿಣ ಕನ್ನಡದ ಕಲ್ಲುಮುಟ್ಟಲು ವೀಟಿಲ್ ಎಂ.ಆರ್. ಉಮ್ಮರ್ ಫಾರೂಕ್ ಯಾನೆ ಉಮ್ಮರ್, ಸಿದ್ದಿಕ್ ಯಾನೆ ಪೈಂಟರ್ ಸಿದ್ದಿಕ್ ಯಾನೆ ಗುಜರಿ ಸಿದ್ದಿಕ್ ಕುರಿತು ಮಾಹಿತಿ ನೀಡುವವರಿಗೆ ತಲಾ 2 ಲಕ್ಷ ರೂ. ಬಹುಮಾನ…
ಬೆಂಗಳೂರು: ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ಸಿಎಂ ಬಸವರಾಜ ಬೊಮ್ಮಾಯಿ, ʻಶ್ರೀಮಂತ ಸಂಸ್ಕೃತಿ ಹೊಂದಿರುವ ಯಾವುದೇ ದೇಶವು ಉಜ್ವಲ ಭವಿಷ್ಯವನ್ನು ಹೊಂದಿರುತ್ತದೆʼ ಎಂದು ಹೇಳಿದ್ದಾರೆ. ಬುಧವಾರ ಆಯೋಜಿಸಿದ್ದ ಸ್ವದೇಶಿ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ವಿದೇಶಿ ವಸ್ತುಗಳನ್ನು ಖರೀದಿಸಿ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಶ್ರೀಮಂತ ಸಂಸ್ಕೃತಿ ಹೊಂದಿರುವ ಯಾವುದೇ ದೇಶಕ್ಕೆ ಉಜ್ವಲ ಭವಿಷ್ಯವನ್ನು ಹೊಂದಿರುತ್ತದೆʼ ಎಂದಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಸ್ವದೇಶಿ ಉತ್ಪನ್ನಗಳ ಸಂಖ್ಯೆ ಹೆಚ್ಚಾಗಿದೆ. ವಸ್ತ್ರ ಉತ್ಪನ್ನಗಳ ರಫ್ತಿನಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿದೆ. ಕೋವಿಡ್ -19 ಗಾಗಿ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಮತ್ತು ವಿವಿಧ ದೇಶಗಳಲ್ಲಿ ವಿತರಿಸಲಾಗಿದೆ ಎಂದರು. https://kannadanewsnow.com/kannada/centre-to-deploy-1800-paramilitary-soldiers-to-jammu-after-terror-attacks/ https://kannadanewsnow.com/kannada/bigg-news-businessman-pradeep-suicide-case-ex-minister-arvind-limbavali-is-in-trouble-notice-issued/ https://kannadanewsnow.com/kannada/centre-to-deploy-1800-paramilitary-soldiers-to-jammu-after-terror-attacks/ https://kannadanewsnow.com/kannada/bigg-news-businessman-pradeep-suicide-case-ex-minister-arvind-limbavali-is-in-trouble-notice-issued/