Author: KNN IT TEAM

ನವದೆಹಲಿ : ಕೇವಲ ಸರ್ಕಾರದ ಪ್ರಯತ್ನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಜಲ ಸಂರಕ್ಷಣೆ ಅಭಿಯಾನಗಳಲ್ಲಿ ಜನರ ಪಾಲ್ಗೊಳ್ಳುವಿಕೆಯ ಮಹತ್ವವನ್ನ ಗುರುವಾರ ಒತ್ತಿ ಹೇಳಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯ ಜಲ ಸಚಿವರ ಮೊದಲ ರಾಷ್ಟ್ರೀಯ ಸಮ್ಮೇಳನವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನೀರು ರಾಜ್ಯಗಳ ನಡುವೆ ಸಹಕಾರ ಮತ್ತು ಸಮನ್ವಯದ ವಿಷಯವಾಗಿರಬೇಕು ಮತ್ತು ನಗರೀಕರಣದ ತ್ವರಿತ ಗತಿಯನ್ನ ಪರಿಗಣಿಸಿ, ಅದನ್ನ ಮುಂಚಿತವಾಗಿ ಯೋಜಿಸಬೇಕು ಎಂದು ಹೇಳಿದರು. ಸಮಾಜ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು.! ಹಲವು ರಾಜ್ಯಗಳ ನಡುವೆ ನೀರಿನ ಹಂಚಿಕೆ ಕುರಿತು ದಶಕಗಳಿಂದ ವಿವಾದವಿದ್ದು, ಅವರ ಹೇಳಿಕೆಗೆ ಹಲವು ಅರ್ಥಗಳಿವೆ. MNREGA ಅಡಿಯಲ್ಲಿ, ನೀರಿನ ಮೇಲೆ ಗರಿಷ್ಠ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಸಾರ್ವಜನಿಕರು, ಸಾಮಾಜಿಕ ಸಂಘಟನೆಗಳು ಮತ್ತು ನಾಗರಿಕ ಸಮಾಜವು ಜಲ ಸಂರಕ್ಷಣೆ ಅಭಿಯಾನದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಭಾರತೀಯ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಿದರು.! ಯಾವುದೇ ಪ್ರಚಾರದಲ್ಲಿ…

Read More

ಮಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದಂತ ಆಟೋದಲ್ಲಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ಐಎ ಚುರುಕುಗೊಳಿಸಿದೆ. ಇಂದು ಈ ಸಂಬಂಧ ನಗರದಲ್ಲಿನ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟಕ ಪ್ರಕರಣ ಸಂಬಂಧ ಉಗ್ರ ಶಾರಿಕ್ ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆತ ನೀಡಿದಂತ ಮಾಹಿತಿಯ ಆಧಾರ ಮೇಲೆ ಇಂದು ಪಿ ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೀಗ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹಲವು ಮಹತ್ವದ ಮಾಹಿತಿಯನ್ನು ಕಲೆಹಾಕುವ ಕೆಲಸದಲ್ಲಿ ಎನ್ಐಎ ಅಧಿಕಾರಿಗಳು ನಿರತರಾಗಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/there-should-be-a-temporary-stop-for-passengers-on-dasapatha-road-former-minister-c-p-yogeshwar/ https://kannadanewsnow.com/kannada/haveri-sahitya-sammelana-joshi-insults-writers-h-l-pushpa-sparks/ https://kannadanewsnow.com/kannada/hatred-is-the-model-for-state-bjp-congress/

Read More

ರಾಮನಗರ : ಕರ್ನಾಟಕದಲ್ಲಿ ಬೆಂಗಳೂರು -ಚೆನ್ನೈ ಎಕ್ಸ್​ಪ್ರೆಸ್​ವೇ  ಕಾಮಗಾರಿಯ  ವೈಮಾನಿಕ ಸಮೀಕ್ಷೆ ನಡೆಸಲು  ಕೇಂದ್ರ ಸಚಿವ ನಿತಿನ್ ಗಡ್ಕರಿ  ಆಗಮಿಸಿದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.  https://kannadanewsnow.com/kannada/there-should-be-a-temporary-stop-for-passengers-on-dasapatha-road-former-minister-c-p-yogeshwar/ ಸುದ್ದಿಗಾರರೊಂದಿಗೆ ಕೆಂಪೇಗೌಡನ ದೊಡ್ಡಿಯಲ್ಲಿ ಮಾತನಾಡಿದ ಅವರು,  ದಶಪಥ ಹೆದ್ದಾರಿ ಕಳಪೆ ಗುಣಮಟ್ಟದ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿವೆ.  3- 4 ಬಾರಿ ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಿ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಸಚಿವರಿಗೆ ಸರಿಯಾದ ಮಾಹಿತಿ ಪಡೆದಿದ್ದಾರೆ. https://kannadanewsnow.com/kannada/there-should-be-a-temporary-stop-for-passengers-on-dasapatha-road-former-minister-c-p-yogeshwar/ ಈಗ ಜಿಲ್ಲೆ, ತಾಲೂಕು ಸಂಪರ್ಕ ಮಾಡಲು ಅನುಮತಿ ಕೊಟ್ಟಿದ್ದಾರೆ. ದಶಪಥ ಹೆದ್ದಾರಿಯಲ್ಲಿ ಕೆಲವೆಡೆ ಕಳಪೆ ಇರುವುದು ಎದ್ದುಕಾಣುತ್ತಿವೆ. ಅಂಡರ್ ಬ್ರಿಡ್ಜ್ ನಿಂದ ಹಳ್ಳಿ ಜನರಿಗೆ ತೊಂದರೆ ಯಾಗುವುದನ್ನ ಸರಿಪಡಿಸುವ ಒತ್ತಾಯ ನಮ್ಮದು. ಆ್ಯಕ್ಸಿಡೆಂಟ್ ಆಗಿರುವ ಬಗ್ಗೆ ಅಧಿಕಾರಿಗಳು ಗಮನಕ್ಕೆ ತರಬೇಕು. ನಾವು ರಾಜಕಾರಣಿಗಳು, ನಾವು ಹೇಳಿದ್ರೆ ರಾಜಕಾರಣ ಮಾಡುತ್ತೇವೆ ಅನ್ನುತ್ತಾರೆ. ಇಂದು ಕೇಂದ್ರ ಸಚಿವರು ಬರುತ್ತಾರೆ. ಅವರ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ. 

Read More

ನವದೆಹಲಿ : ಈ ವರ್ಷದ ಸೆಪ್ಟೆಂಬರ್’ನಲ್ಲಿ ನಡೆಯಲಿರುವ ಏಷ್ಯಾಕಪ್ 2023ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಗುರುವಾರ ಘೋಷಿಸಿದ್ದಾರೆ. ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನದೊಂದಿಗೆ ಹಾಲಿ ಚಾಂಪಿಯನ್ ಶ್ರೀಲಂಕಾ ಒಂದು ಗುಂಪಿನಲ್ಲಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಅರ್ಹತಾ ತಂಡಗಳಿವೆ. ಏಷ್ಯಾಕಪ್ 2023 ವಿಶ್ವಕಪ್ ನಿರ್ಮಾಣದ ಭಾಗವಾಗಿ 50 ಓವರ್’ಗಳ ಮಾದರಿಯಲ್ಲಿ ನಡೆಯಲಿದೆ. ಆದ್ರೆ, ಈ ಏಷ್ಯಾಕಲ್ ಪಂದ್ಯಾವಳಿ ಎಲ್ಲಿ ನಡಯಲಿದೆ.? ಯಾವಾಗ ನಡೆಯಲಿದೆ ಅನ್ನೋದನ್ನ ಬಹಿರಂಗ ಪಡೆಸಿಲ್ಲ. ಈ ಕುರಿತು ಟ್ವೀಟ್ ಮಾಡಿದ ಜಯ್ ಶಾ, “2023 ಮತ್ತು 2024 ರ @ACCMedia1 ಮಾರ್ಗ ರಚನೆ ಮತ್ತು ಕ್ರಿಕೆಟ್ ಕ್ಯಾಲೆಂಡರ್ ಪ್ರಸ್ತುತ ಪಡಿಸುತ್ತಿದ್ದೇನೆ. ಇದು ಈ ಆಟವನ್ನ ಹೊಸ ಎತ್ತರಕ್ಕೆ ಕೊಂಡೊಯ್ಯುವ ನಮ್ಮ ಸಾಟಿಯಿಲ್ಲದ ಪ್ರಯತ್ನಗಳು ಮತ್ತು ಉತ್ಸಾಹವನ್ನ ಸಂಕೇತಿಸುತ್ತದೆ. ದೇಶಾದ್ಯಂತದ ಕ್ರಿಕೆಟಿಗರು ಅದ್ಭುತ ಪ್ರದರ್ಶನಗಳಿಗೆ ಸಜ್ಜಾಗುತ್ತಿರುವುದರಿಂದ, ಇದು ಕ್ರಿಕೆಟ್’ಗೆ ಉತ್ತಮ ಸಮಯವಾಗಿದೆ ಎಂದು ಭರವಸೆ ನೀಡುತ್ತದೆ” ಎಂದಿದ್ದಾರೆ. ಇದಕ್ಕೂ ಮುನ್ನ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಡಿಸೆಂಬರ್ 24 ಮತ್ತು ಜನವರಿ 3 ರ ನಡುವೆ ಆಗಮಿಸಿದ ವಿದೇಶಿ ಪ್ರಯಾಣಿಕರಲ್ಲಿ ಹನ್ನೊಂದು ಹೊಸ ಕೋವಿಡ್ ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿವೆ. ಕೊರೊನಾ ಪರೀಕ್ಷ ನಡೆಸಿದ 19,227 ಪ್ರಯಾಣಿಕರಲ್ಲಿ 124 ಸಕಾರಾತ್ಮಕ ಫಲಿತಾಂಶಗಳನ್ನು ಹೊಂದಿದ್ದವು ಎಂದು ಮೂಲಗಳು ರಾಯಿಟರ್ಸ್‌ಗೆ ಬಹಿರಂಗಪಡಿಸಿವೆ. ಹೊಸ ಕೋವಿಡ್ ರೂಪಾಂತರವ ಎಕ್ಸ್‌ಬಿಬಿ (XBB) 1.5 ಭಾರತಕ್ಕೆ ಅಷ್ಟೊಂದು ಅಪಾಯಕಾರಿಯಾಗಿಲ್ಲ. ಈಗಾಗಲೇ  ಶೇ. 30-40% ಅರ್ಹ ಜನಸಂಖ್ಯೆಗೆ ಬೂಸ್ಟರ್ ಡೋಸ್‌ಗಳನ್ನು ನೀಡಲಾಗಿದೆ. ಅವರಲ್ಲಿ 90% ಜನರು ವ್ಯಾಕ್ಸಿನೇಷನ್ ಸ್ವೀಕರಿಸಿದ್ದಾರೆ ಎಂದು ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯ ಡಾ ಎಂ ವಾಲಿ ಹೇಳಿದ್ದಾರೆ. ಕೋವಿಡ್ ರೂಪಾಂತರಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ವಯಸ್ಸಾದ ಮತ್ತು ಚಿಕ್ಕ ಮಕ್ಕಳ ಕಡೆ ಹೆಚ್ಚಿನ ಗಮನ ಹರಿಸಬೇಕು. ಕಾರಣವಿಲ್ಲದೆ ಹೊರಗೆ ಹೋಗಬೇಡಿ. ಜನರು ಕೋವಿಡ್-ಸೂಕ್ತ ರೀತಿಯಲ್ಲಿ ವರ್ತಿಸುವಂತೆ ಮತ್ತು ಅತ್ಯಂತ ಅಗತ್ಯವಾಗಿ ಮಾಸ್ಕ್ ಧರಿಸುವಂತೆ  ಡಾ. ವಾಲಿ ಜನರಿಗೆ ಸಲಹೆ ನೀಡಿದ್ದಾರೆ.…

Read More

ನವದೆಹಲಿ : ಈ ವರ್ಷದ ಸೆಪ್ಟೆಂಬರ್’ನಲ್ಲಿ ನಡೆಯಲಿರುವ ಏಷ್ಯಾಕಪ್ 2023ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಗುರುವಾರ ಘೋಷಿಸಿದ್ದಾರೆ. ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನದೊಂದಿಗೆ ಹಾಲಿ ಚಾಂಪಿಯನ್ ಶ್ರೀಲಂಕಾ ಒಂದು ಗುಂಪಿನಲ್ಲಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಅರ್ಹತಾ ತಂಡಗಳಿವೆ. ಏಷ್ಯಾಕಪ್ 2023 ವಿಶ್ವಕಪ್ ನಿರ್ಮಾಣದ ಭಾಗವಾಗಿ 50 ಓವರ್’ಗಳ ಮಾದರಿಯಲ್ಲಿ ನಡೆಯಲಿದೆ. ಈ ಕುರಿತು ಟ್ವೀಟ್ ಮಾಡಿದ ಜಯ್ ಶಾ, “2023 ಮತ್ತು 2024 ರ @ACCMedia1 ಮಾರ್ಗ ರಚನೆ ಮತ್ತು ಕ್ರಿಕೆಟ್ ಕ್ಯಾಲೆಂಡರ್ ಪ್ರಸ್ತುತ ಪಡಿಸುತ್ತಿದ್ದೇನೆ. ಇದು ಈ ಆಟವನ್ನ ಹೊಸ ಎತ್ತರಕ್ಕೆ ಕೊಂಡೊಯ್ಯುವ ನಮ್ಮ ಸಾಟಿಯಿಲ್ಲದ ಪ್ರಯತ್ನಗಳು ಮತ್ತು ಉತ್ಸಾಹವನ್ನ ಸಂಕೇತಿಸುತ್ತದೆ. ದೇಶಾದ್ಯಂತದ ಕ್ರಿಕೆಟಿಗರು ಅದ್ಭುತ ಪ್ರದರ್ಶನಗಳಿಗೆ ಸಜ್ಜಾಗುತ್ತಿರುವುದರಿಂದ, ಇದು ಕ್ರಿಕೆಟ್’ಗೆ ಉತ್ತಮ ಸಮಯವಾಗಿದೆ ಎಂದು ಭರವಸೆ ನೀಡುತ್ತದೆ” ಎಂದು ಶಾ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ದುಬೈನಲ್ಲಿ ನಡೆದ ಟಿ20 ಏಷ್ಯಾ ಕಪ್ 2022 ಫೈನಲ್’ನಲ್ಲಿ ಶ್ರೀಲಂಕಾ…

Read More

ಮಂಗಳೂರು: ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಯಿ ಮರಿ ಎಂಬುದಾಗಿ ಹೇಳಿಲ್ಲ. ಕೇಂದ್ರದಿಂದ ಅನುದಾನ ತರಬೇಕು ಅಂದರೇ ನಾಯಿ ತರ ಧೈರ್ಯ ಇರಬೇಕು. ಆದ್ರೇ ಆ ಧೈರ್ಯವಿಲ್ಲದೇ ಮೋದಿ ಮುಂದೆ ನಾಯಿ ಮರಿ ತರ ಇರುತ್ತಾರೆ ಬೊಮ್ಮಾಯಿ ಎಂದು ಹೇಳಿದ್ದೇನೆ ಅಷ್ಟೇ. ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನನ್ನನ್ನು ಟಗರು, ಹುಲಿಯಾ ಅಂತಾರೆ. ಯಡಿಯೂರಪ್ಪನನ್ನು ರಾಜಾಹುಲಿ ಎನ್ನುತ್ತಾರೆ. ಹಾಗೆ ಅನ್ನೋದು ಅಸಂವಿಧಾನಿಕ ಪದವಾಗುತ್ತದೆಯೇ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಯೂಟರ್ನ್ ಹೊಡೆದಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಕೇಂದ್ರದಿಂದ ಅನುದಾನ ತರಲು ಧೈರ್ಯಬೇಕು ಎಂದು ಹೇಳುವಾಗ ಸಿಎಂ ಬೊಮ್ಮಾಯಿ, ಮೋದಿ ಮುಂದೆ ನಾಯಿ ಮರಿ ಇದ್ದಂತ ಇರುತ್ತಾರೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೇನೆ ಹೊರತು, ಬೊಮ್ಮಾಯಿ ಅವರನ್ನು ನಾಯಿ ಮರಿ ಎಂಬುದಾಗಿ ಹೇಳಿಲ್ಲ ಎಂದರು. ನನ್ನನ್ನು ಟಗರು, ಹುಲಿಯಾ ಅಂತಾರೆ. ಬಿಎಸ್ ವೈಗೆ ರಾಜಾಹುಲಿ ಅಂದು ಹೇಳುತ್ತಾರೆ. ಅದು ಹೇಗೆ ಅಸಂವಿಧಾನಿಕ ಪದ ಆಗುತ್ತದೆ? ಎಂದ ಸಿದ್ಧರಾಮಯ್ಯ ಅವರು, ನಾಯಿ…

Read More

ಭೋಪಾಲ್: ಭೋಪಾಲ್‌ನ ಸರ್ಕಾರಿ ಸ್ವಾಮ್ಯದ ಗಾಂಧಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಹಾಸ್ಟೆಲ್‌ನಲ್ಲಿ 24 ವರ್ಷದ ಯುವ ವೈದ್ಯೆಯೊಬ್ಬರು ಅರಿವಳಿಕೆ ಔಷಧವನ್ನು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತಳನ್ನು ಆಕಾಂಶಾ ಮಹೇಶ್ವರಿ ಎಂದು ಗುರುತಿಸಲಾಗಿದ್ದು, ಬುಧವಾರ ಸಂಜೆ ಅವರ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಆಕೆಯ ಕೊಠಡಿಯಿಂದ ಖಾಲಿ ಇಂಜೆಕ್ಷನ್ ಬಾಟಲುಗಳು ಮತ್ತು ಸಿರಿಂಜ್ ಅನ್ನು ವಶಪಡಿಸಿಕೊಂಡಿದ್ದಾರೆ. ವೈದ್ಯೆ ತಲಾ 2.5 ಮಿಲಿಯ ನಾಲ್ಕು ಡೋಸ್ ಅರಿವಳಿಕೆಯನ್ನು ಚುಚ್ಚಿಕೊಂಡಿದ್ದಾರೆ ಎಂದು ಕೋಹ್-ಇ-ಫಿಜಾ ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ಸಿಸೋಡಿಯಾ ತಿಳಿಸಿದ್ದಾರೆ. ವೈದ್ಯೆ ಸಾವಿಗೀಡಾದ ಕೊಠಡಿಯಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ʻತನಗೆ ಮಾನಸಿಕವಾಗಿ ಬಲವಿಲ್ಲ ಮತ್ತು ಕೆಲಸದೊತ್ತಡ ತಾಳಲಾಗುತ್ತಿಲ್ಲʼ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ದೇ, ವೈದ್ಯೆ ತನ್ನ ಪೋಷಕರಿಗೆ ಕ್ಷಮೆಯಾಚಿಸುವುದಾಗಿ ಬರೆದಿದ್ದಾರೆ. ವೈದ್ಯೆ ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕಾಂಶಾ ಮಹೇಶ್ವರಿ ಅವರು ಸರ್ಕಾರಿ ಜಿಎಂಸಿಯಿಂದ ಪೀಡಿಯಾಟ್ರಿಕ್ಸ್ ಸ್ಟ್ರೀಮ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು ಮತ್ತು ಕೋರ್ಸ್‌ನ…

Read More

ಬೆಂಗಳೂರು: ಜನವರಿ ಮೊದಲ ವಾರದಿಂದ ಆರಂಭಗೊಳ್ಳುತ್ತಿರುವಂತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಮಹೇಶ್ ಜೋಶಿಯವರು ಲೇಖಕಿಯರಿಗೆ ಅವಮಾನ ಮಾಡಿರುವುದಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೆಚ್ ಎಲ್ ಪುಷ್ಪಾ ಕಿಡಿಕಾರಿದ್ದಾರೆ. ಈ ಕುರಿತಂತೆ ಸುಧೀರ್ಘ ಪತ್ರವನ್ನು ಕಸಾಪ ಅಧ್ಯಕ್ಷರಿಗೆ ಬರೆದಿರುವಂತ ಅವರು, ಹಾವೇರಿಯಲ್ಲಿ ಜನವರಿ ಮೊದಲವಾರ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದಿಲ್ಲದ ವಿವಾದಕ್ಕೆ ಸಿಲುಕಿದೆ. ಎಂದಿನ ಸಂಭ್ರಮವಾಗಲೀ, ಸಂತೋಷವಾಗಲೀ ಸಾಹಿತ್ಯ, ಸಂಸ್ಕೃತಿಯ ವಾತಾವರಣದಲ್ಲಿ ಕಂಡುಬರುತ್ತಿಲ್ಲ. ಬರೀ ಆಕ್ಷೆಪಣೆ, ದೂರು ದುಮ್ಮಾನಗಳೆ ಕೇಳಿ ಬರುತ್ತಿವೆ. ಸಾಹಿತ್ಯ ಪರಿಷತ್ತು ತನ್ನ ಘನತೆಯನ್ನು, ಜವಾಬ್ದಾರಿಯನ್ನು ಮರೆತುಬಿಟ್ಟಿದೆಯೇ? ಯಾಕೆ ಇಷ್ಟು ವಿವಾದ ನಡೆಯುತ್ತಿದೆ? ಏನಾಗಿದೆ ರಾಜ್ಯಾಧ್ಯಕ್ಷರಿಗೆ? ಎಂದು ಪ್ರಶ್ನಿಸಿದ್ದಾರೆ. ಇಡೀ ಆಹ್ವಾನ ಪತ್ರಿಕೆಯನ್ನು ಓದಿದರೆ ಕನ್ನಡ ಸಾಹಿತ್ಯದಲ್ಲಿ ಸಾಧನೆ ಮಾಡಿದ ಬೆರಳೆಣಿಕೆಯ ಮಹಿಳೆಯರು ಮಾತ್ರ ಅಲ್ಲಿ ಕಾಣುತ್ತಿದ್ದಾರೆ. ಮಹಿಳಾ ಸಾಹಿತ್ಯದಲ್ಲಿ ಎಷ್ಟೊಂದು ಪ್ರತಿಭಾವಂತ ಲೇಖಕಿಯರು ಹೊಸಬರು, ಹಳಬರನ್ನು ಒಳಗೊಂಡಂತೆ ಬರೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡ ಸಂಖ್ಯೆಯಲ್ಲಿ ಬರೆಯುತ್ತಿರುವ ಲೇಖಕಿಯರನ್ನು ಒಳಗೊಳ್ಳಬೇಕೆಂಬ ವಿವೇಚನೆಯನ್ನು ಮರೆಯಿತೆ?…

Read More

ರಾಮನಗರ : ಕರ್ನಾಟಕದಲ್ಲಿ ಬೆಂಗಳೂರು -ಚೆನ್ನೈ ಎಕ್ಸ್​ಪ್ರೆಸ್​ವೇ  ಕಾಮಗಾರಿಯ  ವೈಮಾನಿಕ ಸಮೀಕ್ಷೆ ನಡೆಸಲು  ಕೇಂದ್ರ ಸಚಿವ ನಿತಿನ್ ಗಡ್ಕರಿ  ಆಗಮಿಸಿದ ಬಗ್ಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.  https://kannadanewsnow.com/kannada/union-minister-nitin-gadkaris-response-to-the-states-problems-is-commendable-minister-ashwath-narayan/ ಸುದ್ದಿಗಾಗರೊಂದಿಗೆ ಕೆಂಪೇಗೌಡನ ದೊಡ್ಡಿಯಲ್ಲಿ ಮಾತನಾಡಿದ ಅವರು, ದಶಪಥ ಹೆದ್ದಾರಿಗೆ ಮೂಲ ಭೂತ ಸೌಲಭ್ಯ ಆಗಬೇಕು. ಕೆಲವೆಡೆ ಸರ್ವೀಸ್ ರಸ್ತೆ ಆಗಬೇಕು. ದಶಪಥ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ನಿಲುಗಡೆ ಆಗಬೇಕು. ರಾಮನಗರ, ಚನ್ನಪಟ್ಟಣ ಸೇರಿದಂತೆ ಹಲವು ತಾಲೂಕಿಗೆ ಬರಲು ಜಾಗ ಇಲ್ಲ. ಅಪಘಾತ ಆದಾಗ ಪೊಲೀಸರು, ಅಂಬುಲೆನ್ಸ್ ಬರಲು ಜಾಗ ಇಲ್ಲ. ಪೆಟ್ರೋಲ್ ಖಾಲಿಯಾದ ಸಮಯದಲ್ಲಿ ಇಲ್ಲಿ ಪ್ರಯಾಣಿಕರು ಕಷ್ಟ ಪಡುತ್ತಾರೆ. https://kannadanewsnow.com/kannada/union-minister-nitin-gadkaris-response-to-the-states-problems-is-commendable-minister-ashwath-narayan/ .ಈ ಬಗ್ಗೆ ಕೇಂದ್ರ  ಸಚಿವ ನಿತಿನ್ ಗಡ್ಕರಿ ಗಮನ ಸೆಳೆಯುತ್ತೇವೆ. ದಶಪಥ ಹೆದ್ದಾರಿಯಲ್ಲಿ ವೈಜ್ಞಾನಿಕವಾಗಿ ರಸ್ತೆ ಬಿಡಬೇಕು. 2 ನೇ ಹಂತದಲ್ಲಿ ಕ್ರಮ ಕೈಗೊಳ್ಳುತ್ತೇವೆ,  ಲೋಪದೋಷಗಳ ಬಗ್ಗೆ ಸಚಿವರ ಬಳಿ ಮಾತನಾತ್ತೇವೆ ಎಂದು  ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ. https://kannadanewsnow.com/kannada/union-minister-nitin-gadkaris-response-to-the-states-problems-is-commendable-minister-ashwath-narayan/

Read More