Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ವಿಧಾನ ಸೌಧದ ಪಶ್ವಿಮ ದ್ವಾರದಲ್ಲಿ ಅನಧಿಕೃತ 10.5 ಲಕ್ಷ ನಗದು ಹಣ ಪತ್ತೆಯಾಗಿದ್ದು ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಬಳಿ ಇದ್ದ ಹಣ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆನ್ನಲ್ಲೆ ಈ ಬೆನ್ನಲ್ಲೆ ಇದೀಗ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್ ವಾರ್ ಶುರು ಮಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಬಿಜೆಪಿ ಆಡಳಿತದಲ್ಲಿ ವಿಧಾನಸೌಧ ಶಾಪಿಂಗ್ ಮಾಲ್‌ನಂತಾಗಿದೆ ಎಂದು ಕಿಡಿಕಾರಿದ್ದಾರೆ. ಇಲ್ಲಿ ಸಚಿವರೆಲ್ಲರೂ ಅಂಗಡಿ ತೆರೆದು ಕುಳಿತಿದ್ದಾರೆ, ‘40% ಕಮಿಷನ್ ಕಡ್ಡಾಯ’ದೊಂದಿಗೆ ಇಲ್ಲಿ ಎಲ್ಲವೂ ಮಾರಾಟಕ್ಕಿದೆ. ಈ ಶಾಪಿಂಗ್ ಮಾಲಿನಲ್ಲಿ ಲಕ್ಷ, ಕೋಟಿಗಳ ವ್ಯವಹಾರಗಳು ಸಲೀಸಾಗಿ ನಡೆಯುತ್ತಿವೆ. ಸಿಕ್ಕಿಬಿದ್ದ 10 ಲಕ್ಷ ಇದೆಲ್ಲದಕ್ಕೂ ಸಾಕ್ಷಿಯಾಗಿದೆ ನಿಂತಿದೆ ಎಂದು ಬರೆಯಲಾಗಿದೆ. https://twitter.com/INCKarnataka/status/1610937103755665408?s=20&t=qcns5VqTotfOHf7DMOFpYw ಕರ್ನಾಟಕ ಬಿಜೆಪಿ ಸರ್ಕಾರದ ಆಡಳಿತ ಇಡೀ ದೇಶದಲ್ಲೇ ಅತ್ಯಂತ ‘ಭ್ರಷ್ಟ ಆಡಳಿತ’ ಎನ್ನುವ ಹೆಗ್ಗಳಿಕೆ ಪಡೆದಿದೆ! ಪಂಚಾಯಿತಿಯಿಂದ ವಿಧಾನಸೌಧದ ವರೆಗೂ ಲಂಚವಿಲ್ಲದೇ ಯಾವ ಕೆಲಸಗಳೂ ಆಗುತ್ತಿಲ್ಲ. ವಿಧಾನಸೌಧದಲ್ಲೇ ಸೆಟಲ್‌ಮೆಂಟ್‌ಗಳು ನಡೆಯುತ್ತಿವೆ, ಸರ್ಕಾರದಲ್ಲಿ…
ಬೆಂಗಳೂರು: ರಾಷ್ಟ್ರೀಯ ಇ-ವಿಧಾನಸೌಧ (national e-vidhan application scheme -NeVA ) ಯೋಜನೆ ಜಾರಿಯಾಗದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest litigation -PIL) ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ( High Court of Karnataka ) ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರದಿಂದ ಒಂದು ದೇಶ, ಒಂದು ಡಿಜಿಟಲ್ ಫ್ಲಾಟ್ ಫಾರಂ ಯೋಜನೆ ಜಾರಿಗೊಳಿಸಲಾಗಿತ್ತು. ಆದ್ರೇ ಈ ಯೋಜನೆಯ ಬದಲಿಗೆ ರಾಜ್ಯ ಸರ್ಕಾರವು ತನ್ನದೇ ಆದ ಇ-ವಿಧಾನ್ ಯೋಜನೆಯನ್ನು ಮುಂದುವರಿಸಿತು. ಇದನ್ನು ಪ್ರಶ್ನಿಸಿ ಮಾಜಿ ಎಂಎಲ್ಸಿ ರಮೇಶ್ ಬಾಬು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಲೆ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಸಂಸತ್ತು, ವಿಧಾನಸಭೆಗಳು ಮತ್ತು ಪರಿಷತ್ತುಗಳ ಉಭಯ ಸದನಗಳ ಕಾರ್ಯನಿರ್ವಹಣೆಗೆ ವೇದಿಕೆಯನ್ನು ಒದಗಿಸಲು ಡಿಜಿಟಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಎನ್ಇವಿಎ ಹೊಂದಿದೆ. ಕಿಯೋನಿಕ್ಸ್ ಸಲ್ಲಿಸಿದ ವರದಿಯ ಆಧಾರದ ಮೇಲೆ ಕರ್ನಾಟಕವು ತನ್ನ ಸ್ವಂತ ಯೋಜನೆಯನ್ನು 253 ಕೋಟಿ ರೂ.ಗಳ ವೆಚ್ಚದಲ್ಲಿ ಜಾರಿಗೆ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಬ್ಯಾಂಕ್ಗಳು ಜನರಿಗೆ ತುಂಬಾ ಹತ್ತಿರವಾಗಿವೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನ ಹೊಂದಿರುತ್ತಾನೆ. ಪ್ರಧಾನ ಮಂತ್ರಿಯವರ ಜನ್ ಧನ್ ಖಾತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರ ಬ್ಯಾಂಕ್ ಖಾತೆಗಳು ಹಳ್ಳಿಗಳಲ್ಲಿಯೂ ತೆರೆಯಲ್ಪಡುತ್ತವೆ. ಬ್ಯಾಂಕ್ಗಳು ತಮ್ಮ ಕಾರ್ಯಚಟುವಟಿಕೆಯಲ್ಲಿ ಹಲವು ಬದಲಾವಣೆಗಳನ್ನ ತಂದಿವೆ. ಇನ್ನು ಹೆಚ್ಚುತ್ತಿರುವ ಡಿಜಿಟಲೀಕರಣದ ಯುಗದಲ್ಲಿ, ನೆಟ್ ಬ್ಯಾಂಕಿಂಗ್, ಎಟಿಎಂ ಕಾರ್ಡ್ ಇತ್ಯಾದಿಗಳಿಂದ ಬ್ಯಾಂಕ್ ಖಾತೆಯನ್ನ ನಿರ್ವಹಿಸುವುದು ತುಂಬಾ ಸುಲಭ. ಜನರು ತಮ್ಮ ಎಲ್ಲಾ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಮಾಡುತ್ತಿದ್ದಾರೆ. ಗ್ರಾಹಕರ ಅನುಕೂಲಕ್ಕಾಗಿ, ಬ್ಯಾಂಕ್ಗಳು ಆನ್ಲೈನ್ ಖಾತೆ ತೆರೆಯುವಿಕೆ ಮತ್ತು ವೀಡಿಯೋ ಕರೆ ಮೂಲಕ ಕೆವೈಸಿ ಸೌಲಭ್ಯವನ್ನ ಸಹ ಪರಿಚಯಿಸಿವೆ. ಹೆಚ್ಚಿನ ಬ್ಯಾಂಕ್ ಖಾತೆಗಳನ್ನ ಹೊಂದಿರುವುದು ಅದರ ಪ್ರಯೋಜನಗಳನ್ನ ಹೊಂದಿದೆ. ಆದ್ರೆ, ಸರಿಯಾಗಿ ನಿರ್ವಹಿಸದಿದ್ರೆ, ಲಾಭದ ಬದಲಿಗೆ, ನೀವು ನಷ್ಟವನ್ನ ಸಹ ಅನುಭವಿಸಬಹುದು. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವಾಗ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನ ತಿಳಿಯಿರಿ. ಕನಿಷ್ಠ ಸಮತೋಲನವನ್ನ ಕಾಯ್ದುಕೊಳ್ಳಬೇಕು.! ಪ್ರತಿ ಬ್ಯಾಂಕ್…
ಬಳ್ಳಾರಿ: ನಗರದ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಇಬ್ಬರು ಮಹಿಳಾ ಕಾರ್ಯಕರ್ತರ ಗಲಾಟೆ ತೀವ್ರಗೊಂಡು ಮಾರಾಮಾರಿ ನಡೆದಿತ್ತು. ಈ ಪ್ರಕರಣ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ ̤ https://kannadanewsnow.com/kannada/tamil-actress-makes-serious-allegations-against-former-ips-officer-annamalai/ ವಿಜಯನಗರ ಜಿಲ್ಲೆಯ ಹೊಸಪೇಟೆಯ ಖಾಸಗಿ ಹೋಟೆಲ್‍ನಲ್ಲಿ ಜನವರಿ 3 ರಂದು ಕಾಂಗ್ರೆಸ್ ಪಕ್ಷದ ಸಭೆಯೊಂದು ನಡೆಸಲಾಗಿತು ಈ ಸಂದರ್ಭದಲ್ಲಿ ಹೊಸಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಯೋಗಲಕ್ಷ್ಮಿ ಮತ್ತು ಕಲ್ಯಾಣ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಶಿಲ್ಪಾ ನಡುವೆ ಕೈಕೈ ಮಿಲಾಯಿಸಿಕೊಂಡರು. ಬಳಿಕ ಶಿಲ್ಪಾ, ಮತ್ತು ಯೋಗಲಕ್ಷ್ಮಿ ಹಾಗೂ ಸಂದೀಪ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಕೂಡಾ ಜೋರಾಗಿತ್ತು. https://kannadanewsnow.com/kannada/tamil-actress-makes-serious-allegations-against-former-ips-officer-annamalai/ ಆ ಬಳಿಕ ಶಿಲ್ಪಾ ಅವರು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯೋಗಲಕ್ಷ್ಮಿ ಮತ್ತು ಇತರರ ವಿರುದ್ಧ ದೂರು ಸಲ್ಲಿಸಿ, ಜಾತಿನಿಂದನೆ ಮತ್ತು ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೆ ಇದೀಗ ಮಹಿಳಾ ಕಾರ್ಯಕರ್ತೆಯ ಮಾರಾಮಾರಿ ನಡೆದ ನಿಟ್ಟಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ಇಳಿದು ಬಂದಿದೆ ̤ https://kannadanewsnow.com/kannada/tamil-actress-makes-serious-allegations-against-former-ips-officer-annamalai/
ರಾಮನಗರ: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ಮಾಣಕ್ಕೆ ತಾಲ್ಲೂಕಿನ ಜಿಗೇನಹಳ್ಳಿ ಮತ್ತು ಬಿಳಗುಂಬ ಗ್ರಾಮಗಳಲ್ಲಿ ಕಾಯ್ದಿರಿಸಿರುವ ಜಾಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಗುರುವಾರ ಪರಿಶೀಲಿಸಿದರು. ಸಚಿವ ಗೋಪಾಲಯ್ಯ ಅವರೊಡನೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಸಂಬಂಧಿಸಿದ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ಸ್ನಾತಕೋತ್ತರ ಕೇಂದ್ರದ ನಿರ್ಮಾಣಕ್ಕೆ ಒಟ್ಟು 9 ಎಕರೆ 35 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಈ ಜಮೀನು ಸರಕಾರದ್ದೇ ಆಗಿರುವುದರಿಂದ ಯಾವ ಸಮಸ್ಯೆಯೂ ಇಲ್ಲ. ಹೀಗಾಗಿ ಸ್ನಾತಕೋತ್ತರ ಕೇಂದ್ರದ ನಿರ್ಮಾಣ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು. ಸ್ನಾತಕೋತ್ತರ ಕೇಂದ್ರಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಸೂಕ್ತ ಸಂಪರ್ಕ ಕಲ್ಪಿಸಲಾಗುವುದು. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವಿನಾಶ್, ಜಿಪಂ ಸಿಇಒ ದಿಗ್ವಿಜಯ್ ಘೋಡ್ಕೆ, ಎಸ್ಪಿ ಸಂತೋಷ್ ಬಾಬು, ಉಪ ವಿಭಾಗಾಧಿಕಾರಿ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು. https://kannadanewsnow.com/kannada/haveri-sahitya-sammelana-joshi-insults-writers-h-l-pushpa-sparks/ https://kannadanewsnow.com/kannada/there-should-be-a-temporary-stop-for-passengers-on-dasapatha-road-former-minister-c-p-yogeshwar/…
BIGG NEWS: ‘ಅನಿಶ್ಚಿತ ಆರ್ಥಿಕತೆ’ : 18 ಸಾವಿರಕ್ಕೂ ಹೆಚ್ಚು ಉದ್ಯೋಗ ಕಡಿತಕ್ಕೆ ಅಮೆಜಾನ್ ನಿರ್ಧಾರ | Amazon Layoff
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನಿಶ್ಚಿತ ಆರ್ಥಿಕತೆ, ಕೋವಿಡ್ ಹೊಡೆತದಿಂದಾಗಿ ಆನ್ ಲೈನ್ ಶಾಂಪಿಂಗ್ ದೈತ್ಯ ಕಂಪನಿ ಅಮೆಜಾನ್ ಸುಮಾರು 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ. ಈ ಕುರಿತಂತೆ ಸಿಇಒ ಆಂಡಿ ಜಾಸ್ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ನಾವು ನವೆಂಬರ್‌ನಲ್ಲಿ ಮಾಡಿದ ಕಡಿತಗಳ ಬಳಿಕ ಇಂದು 18,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಯೋಚಿಸಿದ್ದೇವೆ ಎಂದು ಹೇಳಿದ್ದಾರೆ. ಉದ್ಯೋಗ ಕಡಿತದ ನಿರ್ಧಾರ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಅರಿವಿಗೆ ಇದೆ. ಇದೇ ಕಾರಣಕ್ಕೆ ನಾವು ಈ ನಿರ್ಧಾರಗಳನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಅಮೆಜಾನ್ ಸಿಇಒ ಸ್ಪಷ್ಟಪಡಿಸಿದ್ದಾರೆ. https://twitter.com/amazonnews/status/1610804219178541057 ನಮ್ಮ ನಿರ್ಣಯದಿಂದ ತೊಂದರೆಗೆ ಸಿಲುಕುವ ಉದ್ಯೋಗಿಗಳನ್ನು ನಾವು ಬೆಂಬಲಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತ್ಯೇಕ ಪಾವತಿ, ಪರಿವರ್ತನೆಯ ಆರೋಗ್ಯ ವಿಮೆ ಪ್ರಯೋಜನಗಳು ಮತ್ತು ಬಾಹ್ಯ ಉದ್ಯೋಗ ನಿಯೋಜನೆ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ವಾರ್ಷಿಕ ಯೋಜನಾ ಪ್ರಕ್ರಿಯೆಯನ್ನು ನಾವು ಪೂರ್ಣಗೊಳಿಸಿಲ್ಲ, 2023 ರ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಂಜಾಬ್-ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ‘ಕೋಪಗೊಂಡ ಹೆಂಡತಿಯೊಂದಿಗೆ ಬದುಕುವುದು ಜೀವಮಾನದ ಚಿತ್ರಹಿಂಸೆಯಂತೆ’ ಎಂದು ಪತಿ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನ ಅಂಗೀಕರಿಸಿದೆ. ‘ಪತಿ ಪರವಾಗಿ ವಿಚ್ಛೇದನ ಪ್ರಕರಣ ದಾಖಲಿಸಿದ ಕೂಡಲೇ ಪತ್ನಿ ವರದಕ್ಷಿಣೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿರುವುದು ಆಕೆಯ ವರ್ತನೆಯನ್ನ ತೋರಿಸುತ್ತದೆ’ ಎಂದು ನ್ಯಾಯಾಲಯ ಹೇಳಿದೆ. ಏನು ವಿಷಯ.? ಅರ್ಜಿಯಲ್ಲಿ, ತಾನು ಅಮೃತಸರ ನಿವಾಸಿಯಾಗಿದ್ದು, 2011ರಲ್ಲಿ ವಿವಾಹವಾಗಿರುವುದಾಗಿ ಪತಿ ತಿಳಿಸಿದ್ದಾರೆ. ಮದುವೆಯಾಗಿ ಕೆಲವು ದಿನಗಳ ನಂತ್ರ ಹೆಂಡತಿಯ ಕೋಪದ ವರ್ತನೆಯು ಮುನ್ನೆಲೆಗೆ ಬರಲು ಪ್ರಾರಂಭಿಸಿತು ಮತ್ತು ಸಮಯ ಕಳೆದಂತೆ ಅವನ ಹೆಂಡತಿಯ ಕೋಪವು ಹೆಚ್ಚಾಯಿತು. ತನ್ನ ಮಗಳು ಹುಟ್ಟಿದ ನಂತ್ರ ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿತು ಎಂದು ಅರ್ಜಿದಾರರು ಹೇಳಿದರು. ಮೊದಲು ಅವನ ಹೆಂಡತಿ ಮನೆಕೆಲಸ ಮಾಡಲು ನಿರಾಕರಿಸಿದಳು. ಕ್ರಮೇಣ ಅವಳು ಸಾರ್ವಜನಿಕವಾಗಿ ಅರ್ಜಿದಾರ ಮತ್ತು ಅವನ ಕುಟುಂಬವನ್ನ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದಳು. ಪತ್ನಿಯ ಈ ಕೃತ್ಯದಿಂದ ಬೇಸತ್ತು ಅರ್ಜಿದಾರರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ, ಪತ್ನಿ ವರದಕ್ಷಿಣೆಗೆ…
‘ಅಣ್ಣಾಮಲೈ ಅವರ ಮತ್ತೊಂದು ಮುಖ ಬಹಿರಂಗ ಪಡಿಸುವಂತಹ ವಿಡಿಯೋ & ಆಡಿಯೋ ನನ್ನ ಬಳಿಯಿದೆ ಎಂದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ತಮಿಳು ನಟಿಯೊಬ್ಬರು ಗಂಭೀರ ಆರೋಪಿದ ವಿಚಾರ ಬೆಳಕಿಗೆ ಬಂದಿದೆ https://kannadanewsnow.com/kannada/mangaluru-cooker-blass-case-nia-raids-pa-engineering-college-detains-student-rihan/ ಇದೀಗ ಮುಂದಿನ ಚುನಾವಣೆಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾರೀ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ರೀತಿಯ ಪಕ್ಷವನ್ನು ಕಟ್ಟುತ್ತಿದ್ದಾರೆ. ಈ ಬೆನ್ನಲ್ಲೆ ತಮಿಳು ನಟಿ ಗಾಯತ್ರಿ ರಘುರಾಮ್ ಎಂಬವರು ಎರಡು ದಿನಗಳ ಹಿಂದೆ ಟ್ವೀಟ್ ಮಾಡುವ ಮೂಲಕ ಕರ್ನಾಟಕದಲ್ಲಿ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮೇಲೆ ಆರೋಪ ಮಾಡಿದ್ದಾರೆ. https://kannadanewsnow.com/kannada/mangaluru-cooker-blass-case-nia-raids-pa-engineering-college-detains-student-rihan/ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಳಪೆ ವ್ಯಕ್ತಿತ್ವವನ್ನು ಹೊಂದಿದರು. ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ . ಆ ಕುರಿತ ವಿಡಿಯೋ ಮತ್ತು ಆಡಿಯೋ ನನ್ನ ಬಳಿ ಇವೆ. ಅವುಗಳನ್ನು ಪೊಲೀಸರಿಗೆ ನೀಡಲು ನಾನು ಸಿದ್ದನಿದ್ದೇನೆ. ಈ ಎಲ್ಲಾ ಕಾರಣದಿಂದಾಗಿಯೇ…
ಮಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದಂತ ಆಟೋದಲ್ಲಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ಐಎ ಚುರುಕುಗೊಳಿಸಿದೆ. ಇಂದು ಈ ಸಂಬಂಧ ನಗರದಲ್ಲಿನ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಪ್ರಕರಣ ಸಂಬಂಧ ಪಿ.ಎ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ತಾಜುದ್ದೀನ್ ಶೇಖ್ ಎಂಬಾತನನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟಕ ಪ್ರಕರಣ ಸಂಬಂಧ ಉಗ್ರ ಶಾರಿಕ್ ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆತ ನೀಡಿದಂತ ಮಾಹಿತಿಯ ಆಧಾರ ಮೇಲೆ ಇಂದು ಪಿ ಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ 7 ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದ್ದಾರೆ. ಇದೀಗ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹಲವು ಮಹತ್ವದ ಮಾಹಿತಿಯನ್ನು ಕಲೆಹಾಕುವ ಕೆಲಸದಲ್ಲಿ ಎನ್ಐಎ ಅಧಿಕಾರಿಗಳು ನಿರತರಾಗಿರೋದಾಗಿ ತಿಳಿದು ಬಂದಿದೆ. ಶಾರಿಕ್ ನೀಡಿದಂತ ಮಾಹಿತಿಯ…
ಮಲಾವಿ (ಆಫ್ರಿಕಾ) : ಎರಡು ದಶಕಗಳಲ್ಲಿ ಮಲಾವಿಯಲ್ಲಿ ಏಕಾಏಕಿ ಕಾಲರಾ ಹೆಚ್ಚಳಗೊಂಡಿದ್ದು, ಆಗ್ನೇಯ ಆಫ್ರಿಕನ್ ದೇಶದ ಎಲ್ಲಾ ಜಿಲ್ಲೆಗಳಿಗೆ ರೋಗ ಹರಡುತ್ತಿದೆ. ಇದುವರೆಗೂ ರೋಗಕ್ಕೆ 643 ಜನರು ಸಾವನ್ನಪ್ಪಿದ್ದಾರೆ. ಉಷ್ಣವಲಯದ ಬಿರುಗಾಳಿ ಮತ್ತು ಚಂಡಮಾರುತಗಳಿಗೆ ಒಳಗಾಗುವ ಭೂಕುಸಿತ ರಾಷ್ಟ್ರವು ಮಾರ್ಚ್‌ನಲ್ಲಿ ನೀರಿನಿಂದ ಹರಡುವ ಅತಿಸಾರ ಕಾಯಿಲೆಯಿಂದ ಹೋರಾಡುತ್ತಿದೆ. ಇದರ ನಡುವೆ ಮಳೆಗಾಲದಿಂದಾಗಿ ಅಲ್ಲಿನ ಪರಿಸ್ಥತಿ ಮತ್ತಷ್ಟು ಹದಗೆಡಿಸಿತ್ತು. ಪ್ರವಾಹಗಳು ಜನರ ಸ್ಥಳಾಂತರಕ್ಕೆ ಕಾರಣವಾಗಿದ್ದು, ಅಸುರಕ್ಷಿತ ನೀರು, ಅಸ್ವಚ್ಛತೆಯಿಂದಾಗಿ ಅಲ್ಲಿನ ಜನರು ರೋಗಗಳಿಗೆ ತುತ್ತಾಗಿದ್ದಾರೆ. ಕಾಲರಾ ಸಾವಿನ ಪ್ರಮಾಣವು 3.4% ಕ್ಕೆ ಏರಿಕೆಯಾಗುತ್ತಿದ್ದು,ಪರಿಣಾಮವಾಗಿ ರಾಜಧಾನಿ ಲಿಲೋಂಗ್ವೆ ಮತ್ತು ರಾಷ್ಟ್ರದ ಹಣಕಾಸು ಮತ್ತು ವಾಣಿಜ್ಯ ಕೇಂದ್ರವಾದ ಬ್ಲಾಂಟೈರ್‌ನಲ್ಲಿ ಸರ್ಕಾರವು ಶಾಲೆಗಳನ್ನು ತೆರೆಯುವುದನ್ನು ವಿಳಂಬಗೊಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಏಪ್ರಿಲ್ 2001 ರಲ್ಲಿ ಪ್ರಾರಂಭವಾದ ಕಾಲರಾ ರೋಗವು ದೇಶದಲ್ಲಿ 968 ಜನರನ್ನು ಬಲಿ ಪಡೆದಿತ್ತು ಎಂದೇಳಿದೆ. ಕಾಲರಾ ರೋಗವು ಮಲಾವಿಯಲ್ಲಿ ಪ್ರಾರಂಭವಾಗುತ್ತಿದ್ದಂತೆ ಅದರ 29 ಜಿಲ್ಲೆಗಳ ಪೈಕಿ ನಾಲ್ಕು ಜಿಲ್ಲೆಗಳಲ್ಲಿ ನಿಯಂತ್ರಿಸಲಾಗಿದೆ ಎಂದು ಆರೋಗ್ಯ…