Author: KNN IT TEAM

ಬೆಂಗಳೂರು: ಅನ್ಯರ ಖಾಸಗಿ ಬದುಕಿನ ಕುರಿತು ಲಘುವಾಗಿ ಮಾತನಾಡುವ ಕೀಳುಮಟ್ಟದ ರಾಜಕಾರಣವನ್ನು ಕುಮಾರಸ್ವಾಮಿ ಅವರು ಯಾವತ್ತೂ ಮಾಡಿಲ್ಲ. ಆದರೆ ಈ ಸ್ಯಾಂಟ್ರೊ ರವಿ ಯಾರು? ಆತನಿಗೂ ಸರ್ಕಾರಕ್ಕೂ ಏನು ಸಂಬಂಧ? ಅಂತಹ ಡೀಲ್ ಗಿರಾಕಿಗಳಿಗೆ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಏನು ಕೆಲಸ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಕೇಳುವುದು ಸಾರ್ವಜನಿಕರ ಹಕ್ಕು ಎಂದು ಜೆಡಿಎಸ್ ಟ್ವಿಟ್ ನಲ್ಲಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ಗುಡುಗಿದೆ. https://twitter.com/JanataDal_S/status/1610967124507492352 ಈ ಕುರಿತಂತೆ ಇಂದು ಸರಣಿ ಟ್ವಿಟ್ ಮಾಡಿದ್ದು, ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಬದಲು, ಸಂಬಂಧವಿಲ್ಲದಂತೆ ಅನಗತ್ಯ ಮಾತುಗಳನ್ನಾಡುವ ಬಿಸಿ ಪಾಟೀಲ್ ಅವರಿಗೆ ಸವಾಲು. ಯಾವ ಪುರುಷಾರ್ಥಕ್ಕಾಗಿ ಕೋರ್ಟ್ ನಿಂದ ಸ್ಟೇ ಪಡೆದುಕೊಂಡ್ರಿ? ಆ ದಲಿತ ಸಮುದಾಯಕ್ಕೆ ಸೇರಿದ ಹೆಣ್ಣುಮಗಳು ನೀಡಿದ ದೂರಿನ ಬಗ್ಗೆ, ಸರ್ಕಾರ ಕೆಡವಿ ಅದೇನೋ ಮಹಾತ್ಕಾರ್ಯ ಮಾಡಿದಂತೆ ಬೀಗಿದ ಬಾಂಬೆ ಶೂರರಲ್ಲಿ ಉತ್ತರವಿದೆಯಾ ಎಂದು ಪ್ರಶ್ನಿಸಿದೆ. https://twitter.com/JanataDal_S/status/1610967122255155202 ಸ್ಯಾಂಟ್ರೊ ರವಿಯಂಥವರಿಗೆ ದಿನನಿತ್ಯದ ಸರ್ಕಾರಿ ಆಡಳಿತದಲ್ಲಿ ಮೂಗು ತೂರಿಸುವ ಅವಕಾಶ ನೀಡಿರುವ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬುಧವಾರ ತಡವಾಗಿ ಬಂದ ವರದಿಗಳ ಪ್ರಕಾರ, 235 ಮಿಲಿಯನ್‌ಗಿಂತಲೂ ಹೆಚ್ಚು ಟ್ವಿಟರ್ ಖಾತೆಗಳ ಡೇಟಾ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಸ್ಟೇಮ್ಯಾಡ್ ಎಂದು ಕರೆದುಕೊಳ್ಳುವ ಹ್ಯಾಕರ್ ಗೂಗಲ್ ಸಿಇಒ ಸುಂದರ್ ಪಿಚೈ, ಸ್ಪೇಸ್‌ಎಕ್ಸ್, ಸಿಬಿಎಸ್ ಮೀಡಿಯಾ, ಎನ್‌ಬಿಎ, ಡಬ್ಲ್ಯುಎಚ್‌ಒ ಮತ್ತು ಹೆಚ್ಚಿನ ಖಾತೆಗಳನ್ನು ಒಳಗೊಂಡಂತೆ 200 ಮಿಲಿಯನ್ ಬಳಕೆದಾರರ ವೈಯಕ್ತಿಕ ಡೇಟಾವನ್ನು ಸೋರಿಕೆಯಾಗಿದೆ ಎನ್ನಲಾಗುತ್ತಿದೆ. https://twitter.com/RockHudsonRock/status/1610554406805671936 ಇಸ್ರೇಲಿ ಸೈಬರ್ ಗುಪ್ತಚರ ಸಂಸ್ಥೆ ಹಡ್ಸನ್ ರಾಕ್ ಇದನ್ನು ಅತ್ಯಂತ ಮಹತ್ವದ ಸೋರಿಕೆ ಎಂದು ಕರೆದಿದೆ. ಡೇಟಾಬೇಸ್ ಒಟ್ಟು 235 ಮಿಲಿಯನ್ ಖಾತೆಗಳನ್ನು ಹೊಂದಿದೆ. ಕಳೆದ ತಿಂಗಳು ಹ್ಯಾಕರ್ ಸುಮಾರು 400 ಮಿಲಿಯನ್ ಟ್ವಿಟರ್ ಬಳಕೆದಾರರ ಡೇಟಾವನ್ನು ಕದ್ದು ಮಾರಾಟಕ್ಕೆ ಇಟ್ಟಿರುವುದಾಗಿ ಹೇಳಿಕೊಂಡಿದ್ದ. ಹಡ್ಸನ್ ರಾಕ್ ಪ್ರಕಾರ, ಡೇಟಾಬೇಸ್ ಇ-ಮೇಲ್‌ಗಳು ಮತ್ತು ಉನ್ನತ-ಪ್ರೊಫೈಲ್ ಬಳಕೆದಾರರ ಫೋನ್ ಸಂಖ್ಯೆಗಳನ್ನು ಒಳಗೊಂಡಂತೆ ವಿನಾಶಕಾರಿ ಪ್ರಮಾಣದ ಮಾಹಿತಿಯನ್ನು ಒಳಗೊಂಡಿದೆ. ಹಡ್ಸನ್ ರಾಕ್ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ನ ಹಲವಾರು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ನಾನು 400 ಮಿಲಿಯನ್…

Read More

ಬೆಳಗಾವಿ: ಇಲ್ಲಿನ ಹತ್ತರಕಿ ಟೋಲ್ ಬಳಿಯಲ್ಲಿ ಕೆ ಎಸ್ ಆರ್ ಟಿಸಿ ಬಸ್ ವೊಂದರಲ್ಲಿ ( KSRTC Bus ) ಕಾಣಿಸಿಕೊಂಡ ಬೆಂಕಿ, ಕ್ಷಣ ಮಾತ್ರದಲ್ಲಿ ಇಡೀ ಬಸ್ಸಿಗೆ ವ್ಯಾಪಿಸಿದೆ. ನಡು ರಸ್ತೆಯಲ್ಲೇ ಬಸ್ ಹೊತ್ತಿ ಉರಿದಿರುವಂತ ಘಟನೆ ನಡೆದಿದೆ. ಆದ್ರೇ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಬೆಳಗಾವಿಯ ಸಂಕೇಶ್ವರ ಡಿಪೋಗೆ ಸೇರಿದಂತೆ ಬಸ್, ಸಂಕೇಶ್ವರದಿಂದ ಬೆಳಗಾವಿಗೆ ತೆರಳುತ್ತಿತ್ತು. ರಾಷ್ಟ್ರೀಯ ಹೆದದ್ರಿ 4ರ ಹತ್ತರಕಿ ಟೋಲ್ ಬಳಿಯಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದಂತ ಚಾಲಕ ಹಾಗೂ ನಿರ್ವಾಹಕರು ಕೂಡಲೇ ಬಸ್ ನಲ್ಲಿದ್ದಂತ ಪ್ರಯಾಣಿಕರನ್ನೆಲ್ಲಾ ಕೆಳಗೆ ಇಳಿಸಿದ್ದಾರೆ. ಪ್ರಯಾಣಿಕರು ಕೆಳಗೆ ಇಳಿದ ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಬಸ್ಸಿಗೆ ಬೆಂಕಿ ಆವರಿಸಿದೆ. ಈ ಮೂಲಕ ನಡು ರಸ್ತೆಯಲ್ಲಿಯೇ ಹೊತ್ತಿ ಉರಿದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು, ಬಸ್ ನ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/hampi-mysuru-selected-for-swadesh-darshan-2-0-project-of-union-tourism-ministry/ https://kannadanewsnow.com/kannada/when-is-sankranti-january-14th-or-15-what-day-should-it-be-celebrated-heres-the-information/…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಘಟನೆ ಮಾಸುವ ಮುನ್ನವೆ ಅಂತಹದ್ದೆ ಮತ್ತೊಂದು ಘಟನೆ ವರದಿಯಾಗಿದೆ. ಡಿಸೆಂಬರ್ 6 ರಂದು ಪ್ಯಾರಿಸ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಎನ್ನಲಾಗಿದೆ. ಪ್ರಯಾಣಿಕ ಲಿಖಿತವಾಗಿ ಕ್ಷಮೆಯಾಚಿಸಿದ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ವಿಮಾನವು ಡಿಸೆಂಬರ್ 6 ರಂದು ಬೆಳಿಗ್ಗೆ 9:40 ರ ಸುಮಾರಿಗೆ ದೆಹಲಿಯಲ್ಲಿ ಇಳಿಯಿತು. ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕನೋರ್ವ  ಮಹಿಳಾ ಪ್ರಯಾಣಿಕರ ಹೊದಿಕೆ ಮೇಲೆ ಮೂತ್ರ ವಿಸರ್ಜಿಸಿದ್ದರು ಮಹಿಳಾಯುವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದೂರಿದ್ದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಪುರುಷ ಪ್ರಯಾಣಿಕನು ವಿಮಾನದಿಂದ ಕೆಳಗಿಳಿದ ಕೂಡಲೇ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅವರನ್ನು ಬಂಧಿಸಿತು. ಆದರೆ ಇಬ್ಬರು ಪ್ರಯಾಣಿಕರು ಪರಸ್ಪರ ರಾಜಿ ಮಾಡಿಕೊಂಡರು. ಲಿಖಿತ ಕ್ಷಮೆಯಾಚನೆ ಮಾಡಿದ ಹಿನ್ನೆಲೆಯಲ್ಲಿ ಪ್ರಯಾಣಿಕನ್ನು…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : 2024ರ ಜನವರಿ 1ಕ್ಕೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಘೋಷಿಸಿದ್ದು, ಅಂದು ದೇವಸ್ಥಾನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತ್ರಿಪುರಾದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. “ರಾಹುಲ್ ಗಾಂಧಿ ಪದೇ ಪದೇ ಅಯೋಧ್ಯೆ ರಾಮಮಂದಿರವನ್ನ ಲೇವಡಿ ಮಾಡುತ್ತಾರೆ. ಅಲ್ಲಿ ನಿರ್ಮಾಣ ಮಾಡುತ್ತಿದ್ದಾರಾದ್ರೂ ಪೂರ್ಣಗೊಳ್ಳುವ ದಿನಾಂಕವನ್ನ ಹೇಳುವುದಿಲ್ಲ ಎನ್ನುತ್ತಿದ್ದರು. ಆದ್ರೆ, ಈಗ ನಾನು ಹೇಳುತ್ತಿದ್ದೇನೆ. ರಾಹುಲ್ ಬಾಬಾ, ಎಚ್ಚರಿಕೆಯಿಂದ ಆಲಿಸಿ. ನಿಮ್ಮ ಕಿವಿಗಳನ್ನ ತೆರೆಯಿರಿ. ಜನವರಿ 1, 2024 ರೊಳಗೆ ರಾಮಮಂದಿರವು ಪೂರ್ಣಗೊಳ್ಳುತ್ತದೆ” ಎಂದರು. https://kannadanewsnow.com/kannada/home-remedies-for-migraine/ https://kannadanewsnow.com/kannada/discount-on-insurance-policy-discount-on-insurance-premium-if-you-take-covid-vaccine-is-this-offer-better/ https://kannadanewsnow.com/kannada/shimoga-applications-invited-for-differently-abled-students-salary/ https://kannadanewsnow.com/kannada/hampi-mysuru-selected-for-swadesh-darshan-2-0-project-of-union-tourism-ministry/

Read More

ಶಿವಮೊಗ್ಗ : 2022-23 ನೇ ಸಾಲಿಗೆ ವಿಕಲಚೇತನ ವಿದ್ಯಾರ್ಥಿವೇತನ ಯೋಜನೆಯನ್ನು ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟಲ್(ಎಸ್‍ಎಸ್‍ಪಿ) ನಲ್ಲಿ ಜಾರಿಗೊಳಿಸಿದ್ದು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 1 ರಿಂದ 10 ನೇ ತರಗತಿವರೆಗೆ(ಪ್ರಿ ಮೆಟ್ರಿಕ್) ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಅರ್ಜಿಗಳನ್ನು ಎಸ್‍ಎಸ್‍ಪಿ https://ssp.karnataka.gov.in ಮೂಲಕ ಮತ್ತು ಎಸ್‍ಎಸ್‍ಎಲ್‍ಸಿ ನಂತರದ(ಪೋಸ್ಟ್ ಮೆಟ್ರಿಕ್) ವಿದ್ಯಾರ್ಥಿಗಳು ಎಸ್‍ಎಸ್‍ಪಿ https://ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಿ ಹಾರ್ಡ್ ಕಾಪಿಯನ್ನು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯುಗಳಿಗೆ, ನಗರ ಸ್ಥಳೀಯ ಸಂಸ್ಥೆಗಲಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯು.ಆರ್.ಡಬ್ಲ್ಯುಗಳಿಗೆ ಹಾಗೂ ತಾಲ್ಲೂಕು ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯುಗಳಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜನವರಿ 15 ಕಡೆಯ ದಿನ. ಅರ್ಜಿ ಸಲ್ಲಿಸುವ ವೇಳೆ ತಾಂತ್ರಿಕ ತೊಂದರೆ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 1902 ನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಆಲ್ಕೊಳ ಸರ್ಕಲ್, ಬಿಎಸ್‍ಎನ್‍ಎಲ್ ಕಚೇರಿ ಪಕ್ಕ, ಸಾಗರ ರಸ್ತೆ, ಶಿವಮೊಗ್ಗ ದೂ.ಸಂ: 08182-295234/251676 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ…

Read More

ತ್ರಿಪುರ: ಜನವರಿ 1, 2024ರೊಳಗೆ ಅಯೋಧ್ಯೆ ರಾಮ ಮಂದಿರ ( Ayodhya Ram Mandir ) ಸಾರ್ವನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಹೀಗಾಗಿ ನಿಮ್ಮ ಪ್ರವಾಸದ ಟಿಕೆಟ್ ಗಳನ್ನು ಬುಕ್ ಮಾಡಿಕೊಂಡು ಇಟ್ಟುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತ್ರಿಪುರಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, 2024 ರ ಜನವರಿ 1 ರೊಳಗೆ ಅಯೋಧ್ಯೆಯ ರಾಮಮಂದಿರಕ್ಕೆ ತಮ್ಮ ಟಿಕೆಟ್ಗಳನ್ನು ಕಾಯ್ದಿರಿಸುವಂತೆ ಜನರನ್ನು ಆಹ್ವಾನಿಸಿದರು. ದೇಶದ ಸ್ವಾತಂತ್ರ್ಯದ ನಂತರ ರಾಮ ಮಂದಿರ ವಿವಾದವನ್ನು ಹಳಿತಪ್ಪಿಸಲು ಕಾಂಗ್ರೆಸ್ಸಿಗರು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಮ್ಯುನಿಸ್ಟರು ಮೂರು ದಶಕಗಳ ಕಾಲ ತ್ರಿಪುರ ರಾಜ್ಯವನ್ನು ಆಳಿದರು. ಆದರೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಿಲ್ಲ ಎಂದು ಹೇಳಿದರು. ಕಾಂಗ್ರೆಸ್ ದೇಶದಿಂದ ನಿರ್ಗಮಿಸಿದ್ದರೆ, ಕಮ್ಯುನಿಸ್ಟರು ಜಗತ್ತನ್ನು ತೊರೆದಿದ್ದಾರೆ. ಈಶಾನ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಮಾರ್ಚ್ 2023ರಲ್ಲಿ ನಿಗದಿಯಾಗಿವೆ ಎಂದರು. https://kannadanewsnow.com/kannada/what-money-did-cm-bommai-get-in-vidhana-soudha-reply-congress-question-in-a-tweet/ https://kannadanewsnow.com/kannada/hampi-mysuru-selected-for-swadesh-darshan-2-0-project-of-union-tourism-ministry/ https://kannadanewsnow.com/kannada/when-is-sankranti-january-14th-or-15-what-day-should-it-be-celebrated-heres-the-information/

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೋವಿಡ್ ಸಾಂಕ್ರಾಮಿಕ ರೋಗವು ನಿಮ್ಮನ್ನು ತಲುಪದಂತೆ ನೀವು ಕೊರೊನಾ ಲಸಿಕೆ ಮೂರನೇ ಡೋಸ್ ತೆಗೆದುಕೊಂಡಿದ್ದೀರಾ? ಆದಾಗ್ಯೂ, ವಿಮಾ ಕಂಪನಿಗಳು ನಿಮಗಾಗಿ ಉತ್ತಮ ಕೊಡುಗೆಯನ್ನ ನೀಡುತ್ತಿವೆ. ನೀವು ಹೊಸ ಜೀವ ವಿಮಾ ಪಾಲಿಸಿ, ಆರೋಗ್ಯ ವಿಮಾ ಪಾಲಿಸಿ ಅಥವಾ ಟರ್ಮ್ ಇನ್ಶುರೆನ್ಸ್’ನ್ನ ಖರೀದಿಸಿದ್ರೆ ಅಥವಾ ನೀವು ಹಳೆಯ ಪಾಲಿಸಿಯನ್ನ ನವೀಕರಿಸಿದರೆ (ಪಾಲಿಸಿ ನವೀಕರಣ) ಪ್ರೀಮಿಯಂನಲ್ಲಿ ನೀವು ರಿಯಾಯಿತಿಯನ್ನ ಪಡೆಯಬಹುದು. ‘ಮೂರನೇ ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡವರಿಗೆ ವಿಮಾ ಕಂತುಗಳಲ್ಲಿ ರಿಯಾಯಿತಿ’ ಆಫರ್ ಇನ್ನೂ ಜಾರಿಯಲ್ಲಿಲ್ಲ ಮತ್ತು ಪ್ರಸ್ತುತ ಪರಿಗಣನೆಯಲ್ಲಿದೆ. ಕೆಲವೇ ದಿನಗಳಲ್ಲಿ ವಿಮಾ ಕಂಪನಿಗಳು ಈ ಪ್ರಸ್ತಾಪವನ್ನ ಜಾರಿಗೆ ತರಬಹುದು ಎಂದು ರಾಷ್ಟ್ರೀಯ ಮಾಧ್ಯಮ ವರದಿಗಳು ಸೂಚಿಸುತ್ತವೆ. IRDAI ಸಲಹೆ.! ವಾಸ್ತವವಾಗಿ, ವಿಮಾ ನಿಯಂತ್ರಕ IRDAI ಈ ಹಿಂದೆ ಕೋವಿಡ್-19 ಲಸಿಕೆಯನ್ನ 3 ಡೋಸ್ ಪಡೆದ ಪಾಲಿಸಿದಾರರಿಗೆ ಸಾಮಾನ್ಯ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ನವೀಕರಣದ ಮೇಲೆ ರಿಯಾಯಿತಿಯನ್ನ ನೀಡಲು ವಿಮಾದಾರರಿಗೆ ಸೂಚಿಸಿದೆ. ವಿಮಾ ಕಂಪನಿಗಳು ಆ ಸಲಹೆಯನ್ನ…

Read More

ಶಿವಮೊಗ್ಗ: ನಗರದಲ್ಲಿ ಈಗಾಗಲೇ ಟ್ರಯಲ್ ಬ್ಲಾಸ್ಟ್ ಘಟನೆ ಸಂಬಂಧ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಈ ಬೆನ್ನಲ್ಲೇ ಇಂದು ಮತ್ತೊಬ್ಬ ಶಂಕಿತ ಉಗ್ರನನ್ನು ಎನ್ಎಐ ವಶಕ್ಕೆ ಪಡೆದಿದೆ.  ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ನಡೆದಿದ್ದಂತ ಟ್ರಯಲ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ಐಎ ಚುರುಕುಗೊಳಿಸಿದೆ. ಇಂದು ಬಂಧಿತ ಉಗ್ರ ಶಾರಿಕ್ ನೀಡಿದಂತ ಮಾಹಿತಿ ಮೇರೆಗೆ ಮತ್ತೊಬ್ಬ ಶಂಕಿತ ಉಗ್ರ ಯಾಸೀನ್ ಎಂಬಾತನನ್ನು ಬಂಧಿಸಿದೆ. ಬಂಧಿತ ಶಂಕಿತ ಉಗ್ರ ಯಾಸೀನ್ ನನ್ನು ಎನ್ಐಎ ಅಧಿಕಾರಿಗಳ ತಂಡವು ವಿಚಾರಣೆ ನಡೆಸುತ್ತಿದೆ. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಸೇರಿದಂತೆ ಟ್ರಯಲ್ ಬ್ಲಾಸ್ಟ್ ಬಗ್ಗೆಯೂ ವಿಚಾರಣೆಯನ್ನು ನಡೆಸುತ್ತಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/good-news-good-news-for-farmers-in-the-country-pm-kisan-money-doubled-annadatas-income-doubled/ https://kannadanewsnow.com/kannada/what-money-did-cm-bommai-get-in-vidhana-soudha-reply-congress-question-in-a-tweet/ https://kannadanewsnow.com/kannada/hampi-mysuru-selected-for-swadesh-darshan-2-0-project-of-union-tourism-ministry/

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲಸದ ಹೊರೆ ಮತ್ತು ದಿನನಿತ್ಯದ ಓಡಾಟದಿಂದಾಗಿ ಜನರು ಸಾಮಾನ್ಯವಾಗಿ ಒತ್ತಡ ಮತ್ತು ಇತರ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಸಮಸ್ಯೆಗಳಲ್ಲಿ ತಲೆನೋವು ಕೂಡ ಒಂದು. ಕೆಲವೊಮ್ಮೆ ತಲೆನೋವು ಸಹಜ. ಆದರೆ ನಿತಂತರವಾಗಿ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಮೈಗ್ರೇನ್ ಗೆ ಕಾರಣವಾಗುತ್ತದೆ. ಹಾಗಾಗಿ ಕಾಳಜಿ ವಹಿಸುವುದು ಅಗತ್ಯವಾಗಿದೆ. ಮೈಗ್ರೇನ್ ನೋವು ಸಾಕಷ್ಟು ಅಸಹನೀಯವಾಗಿರುತ್ತದೆ. ಇದು ಮೊಬೈಲ್-ಲ್ಯಾಪ್‌ಟಾಪ್‌ನ ಅತಿಯಾದ ಬಳಕೆ ಇತ್ಯಾದಿಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಜನರು ಮೈಗ್ರೇನ್ ನೋವನ್ನು ತೊಡೆದುಹಾಕಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದಕ್ಕೆ ಮನೆಯಲ್ಲಿ ಸಿಗುವ ಕೆಲವು ಮನೆಮದ್ದುಗಳಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ದಾಲ್ಚಿನ್ನಿ ಆಹಾರಕ್ಕೆ ಮಸಾಲೆಯಾಗಿ ಬಳಸುವ ದಾಲ್ಚಿನ್ನಿ ಮೈಗ್ರೇನ್ ಸಮಸ್ಯೆಯಲ್ಲೂ ತುಂಬಾ ಪರಿಣಾಮಕಾರಿಯಾಗಿದೆ. ಮೈಗ್ರೇನ್ ನಿವಾರಣೆಗೆ ನೀವು ದಾಲ್ಚಿನ್ನಿ ಬಳಸಬಹುದು. ಇದಕ್ಕಾಗಿ ಎರಡು ಚಮಚ ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು 20-25 ನಿಮಿಷಗಳ ಕಾಲ ಹಣೆಯ ಮೇಲೆ ಇರಿಸಿ. ಹೀಗೆ ಮಾಡುವುದರಿಂದ ಮೈಗ್ರೇನ್ ನೋವಿನಿಂದ ತ್ವರಿತ…

Read More