Subscribe to Updates
Get the latest creative news from FooBar about art, design and business.
Author: KNN IT TEAM
ಶಿವಮೊಗ್ಗ: ನಗರದ ತುಂಗಾ ನದಿ ತೀರದಲ್ಲಿ ಶಂಕಿತ ಉಗ್ರ ತಾರಿಕ್ ಸೇರಿದಂತೆ ಇತರರು ನಡೆಸಿದಂತ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಈ ಘಟನೆಯ ಹಿಂದೆ ಐಸಿಸ್ ಒಳಸಂಚು ಇರೋದನ್ನು ಎನ್ಐಎ ಅಧಿಕಾರಿಗಳ ತಂಡ ಪತ್ತೆ ಹಚ್ಚಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಇಂದು ರಾಜ್ಯದ 6 ಕಡೆಯಲ್ಲಿ ಟ್ರಯಲ್ ಬ್ಲಾಸ್ಟ್ ಸಂಬಂಧ ದಾಳಿ ಕೂಡ ನಡೆಸಿದೆ. ಶಿವಮೊಗ್ಗದಲ್ಲಿ ನಡೆದಿದ್ದಂತ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಕಾ ದಳದ ಅಧಿಕಾರಿಗಳು ಇಂದು ಚುರುಕುಗೊಳಿಸಿದ್ದಾರೆ. ಟ್ರಯಲ್ ಬ್ಲಾಸ್ಟ್ ಸಂಬಂಧ ಇಂದು ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 6 ಕಡೆಯಲ್ಲಿ ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಮಂಜುನಾಥ ಬಡವಾಣೆಯ ಶಂಕಿತರ ಮನೆಯ ಮೇಲೆ ದಾಳಿ ನಡೆಸಿರುವಂತ ಎನ್ಐಎ ಅಧಿಕಾರಿಗಳ ತಂಡವು, ಮನೆಯಲ್ಲಿ ಪೆನ್ ಡ್ರೈವ್ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಪತ್ತೆ ಹಚ್ಚಿ ವಶ ಪಡಿಸಿಕೊಂಡಿರೋದಾಗಿ ತಿಳಿದು ಬಂದಿದೆ. ಇನ್ನೂ ಶಿವಮೊಗ್ಗದ ತುಂಗಾ ತೀರದ ಬಾಂಬ್…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬಾದಾಮಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕೆಲವರು ಇದನ್ನು ಹಾಗೆಯೇ ತಿನ್ನಲು ಇಷ್ಟಪಟ್ಟ್ರರೆ, ಮತ್ತೆ ಕೆಲವರು ನೆನಸಿ, ಹುರಿದು ಸೇವಿಸುತ್ತಾರೆ. ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ತಿನ್ನುವುದು ಸರಿಯೋ ಇಲ್ಲವೋ ಎಂಬ ಗೊಂದಲ ಕೆಲವರಿಗೆ ಇರುತ್ತದೆ. ಈ ಬಗ್ಗೆ ಆಹಾರ ತಜ್ಞರ ಸಲಹೆ ತಿಳಿಯೋಣ. ಬಾದಾಮಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದರಲ್ಲಿ ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್ ಇ, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದಲ್ಲದೆ ತಾಮ್ರ, ವಿಟಮಿನ್ ಬಿ2 ಮತ್ತು ರಂಜಕವೂ ಇದರಲ್ಲಿದೆ. ನೆನೆಸಿದ ಬಾದಾಮಿ ತಿನ್ನುವುದು ಪ್ರಯೋಜನಕಾರಿಯೇ ಅಥವಾ ಇಲ್ಲವೇ? ಡಯೆಟಿಷಿಯನ್ ಪ್ರಕಾರ, ಒಣ ಹಣ್ಣುಗಳನ್ನು ತಿನ್ನುವುದರ ಮೂಲಕ ನಾವು ಬೆಳಿಗ್ಗೆ ಪ್ರಾರಂಭಿಸಬೇಕು. ಇದು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ನೆನೆಸಿದ ಬಾದಾಮಿಯನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಮುಖ್ಯ, ಏಕೆಂದರೆ ಇದು ಒಣ ಹಣ್ಣಿನಲ್ಲಿರುವ ಫೈಟಿಕ್ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಮತ್ತೊಂದೆಡೆ, ನೀವು ಅದನ್ನು ಕಚ್ಚಾ ರೂಪದಲ್ಲಿ ಸೇವಿಸಿದರೆ, ನಂತರ ಫೈಟಿಕ್ ಆಮ್ಲವನ್ನು ಕರುಳಿನಲ್ಲಿ ಬಿಡುಗಡೆ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ನಮ್ಮ ದೈನಂದಿನ ಜೀವನದಲ್ಲಿ ಚಹಾಕ್ಕೆ ಅಪಾರ ಮಹತ್ವವಿದೆ. ಬೆಳಿಗ್ಗೆ ಹೇಳುತ್ತಲೇ ಚಹಾ ಕುಡಿಯು ಆನೇಕ ಜನರಿದ್ದಾರೆ. ಇನ್ನು ಗಂಟೆಗೊಮ್ಮೆ ಚಹಾ ಕುಡಿಯುವವರೂ ಇದ್ದಾರೆ. ಕೆಲವರಿಗೆ ಚಹಾ ಚಟವಿರುತ್ತೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಚಹಾಗಳು ಮಾಡಲಾಗ್ತಿದ್ದು, ಶುಂಠಿ ಚಹಾ, ಗ್ರೀನ್ ಟೀ, ಮಸಾಲಾ ಚಹಾ, ತಂದೂರಿ ಚಹಾ ಮತ್ತು ಇತ್ಯಾದಿ. ಅದ್ರಂತೆ, ಪ್ರತಿದಿನ ಚಹಾ ಕುಡಿಯುವುದು ನಮ್ಮನ್ನ ಶಾಂತವಾಗಿಡುವುದು ಮಾತ್ರವಲ್ಲದೇ ಅತಿಯಾದ ಒತ್ತಡದಿಂದ ಸ್ವಲ್ಪ ಪರಿಹಾರವನ್ನ ನೀಡುತ್ತದೆ. ಹೆಚ್ಚು ಚಹಾ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿಯಾದರೂ, ಅನೇಕ ಜನರು ಚಹಾ ಕುಡಿದ ನಂತರ ಇತರ ಆಹಾರಗಳನ್ನ ತಿನ್ನುವ ಅಭ್ಯಾಸವನ್ನು ಹೊಂದಿದ್ದಾರೆ. ಆದಾಗ್ಯೂ, ಚಹಾ ಕುಡಿದ ನಂತರ, ಕೆಲವು ಆಹಾರ ಪದಾರ್ಥಗಳು ಜೀರ್ಣವಾಗುವುದನ್ನ ತಡೆಯುತ್ವೆ. ದೇಹವು ಆಹಾರದ ಪೌಷ್ಠಿಕಾಂಶದ ಮೌಲ್ಯವನ್ನ ಹೀರಿಕೊಳ್ಳುವುದನ್ನ ತಡೆಯುವ ಅಡೆತಡೆಗಳನ್ನ ಸೃಷ್ಟಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ತಜ್ಞರು ಕೆಲವು ಆಹಾರ ಪದಾರ್ಥಗಳನ್ನ ಚಹಾ ಕುಡಿದ ತಕ್ಷಣ ಸೇವಿಸಬಾರದು ಎಂದು ಹೇಳುತ್ತಾರೆ. ಚಹಾವು ಜೀವಸತ್ವಗಳು ಮತ್ತು ಖನಿಜಗಳ…
ಕಲಬುರ್ಗಿ: ಕೊಲೆ ಆರೋಪಿಯಾಗಿದ್ದಂತ ವ್ಯಕ್ತಿಯೊಬ್ಬನನ್ನು ಬಂಧಿಸೋದಕ್ಕೆ ಪೊಲೀಸರು ತೆರಳಿದ್ದರು. ಅವರ ಮೇಲೆ ತಪ್ಪಿಸಿಕೊಳ್ಳೋದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದಂತ ವ್ಯಕ್ತಿಯ ಕಾಲಿಗೆ ಗುಂಡೇಟು ನೀಡಿ, ಬಂಧಿಸಿರೋ ಘಟನೆ ಇಂದು ಕಲಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿಯ ಚೌಕ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಶಾಂತ್ ಎಂಬಾತನ ಮೇಲೆ ಹಾಡ ಹಗಲೇ ಕಲ್ಲು ಎತ್ತಿ ಹಾಕಿ ಮಂಜುನಾಥಸ್ವಾಮಿ ಎಂಬಾತ ಕೊಲೆ ಮಾಡಿದ್ದರು. ಇಂತಹ ಆರೋಪಿ ಕಲಬುರ್ಗಿಯ ಯುನಾನಿ ಆಸ್ಪತ್ರೆಯ ಆವರಣದಲ್ಲಿ ಇರೋ ಮಾಹಿತಿ ತಿಳಿದಂತ ಪೊಲೀಸರು ಬಂಧಿಸೋದಕ್ಕೆ ತೆರಳಿದ್ದರು. ಪೊಲೀಸರು ಬಂಧಿಸಲು ಬಂದಿರೋ ವಿಷಯವನ್ನು ಅರಿತಂತ ಕೊಲೆ ಆರೋಪಿ ಮಂಜುನಾಥಸ್ವಾಮಿ, ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಮಂಜುನಾಥಸ್ವಾಮಿಯ ಬಲಗಾಲಿಗೆ ಟೌಕ ಠಾಣೆಯ ಸಿಪಿಐ ರಾಜಶೇಖರ ಹಲಗೋದಿ, ಆತ್ಮರಕ್ಷಣೆಗಾಗಿ ಗುಂಡೇಟು ನೀಡಿ, ಬಂಧಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದಂತ ಕೊಲೆ ಆರೋಪಿ ಮಂಜುನಾಥಸ್ವಾಮಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದಲ್ಲದೇ ಮಾರಕಾಸ್ತ್ರಗಳ ದಾಳಿಯಿಂದ ಗಾಯಗೊಂಡಂತ ಪೊಲೀಸ್ ಪೇದೆಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ. https://kannadanewsnow.com/kannada/election-commission-announces-final-voters-list-for-221-assembly-constituencies-in-karnataka/ https://kannadanewsnow.com/kannada/bengaluru-mysuru-decadal-highway-to-be-inaugurated-by-february-end-nitin-gadkari/ https://kannadanewsnow.com/kannada/veera-brahmendras-kalajnana-is-becoming-a-reality-henna-leaked-from-tamarind-tree-people-rush-to-witness-awe/
ನವದೆಹಲಿ: ಜಿ-20ರ ವಿದೇಶಾಂಗ ಸಚಿವರ ಸಭೆಯು ( G20 Foreign Ministers Meet ) ಮಾರ್ಚ್ 2023ರಲ್ಲಿ ದೆಹಲಿಯಲ್ಲಿ ನಡೆಯಲಿದೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, 2023ರ ಮಾರ್ಚ್ ನಲ್ಲಿ ದೆಹಲಿಯಲ್ಲಿ ಜಿ-20ರ ವಿದೇಶಾಂಗ ಸಚಿವರ ಸಭೆ ನಡೆಯಲಿದೆ ಎನ್ನಲಾಗುತ್ತಿದೆ. ಆದ್ರೇ ಮಾರ್ಚ್ 2023ರ ಯಾವ ದಿನಾಂಕದಂದು ಎಂಬುದಾಗಿ ತಿಳಿದು ಬಂದಿಲ್ಲ. https://twitter.com/ANI/status/1610997143053172737 ಅಂದಹಾಗೇ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಕ್ಕೆ ಭೇಟಿಯ ಸಂದರ್ಭದಲ್ಲಿ ಜಿ-20ರ ವಿದೇಶಾಂಕ ಸಚಿವರ ಸಭೆಯನ್ನು ಭಾರತದಲ್ಲಿ ನಡೆಸೋದಕ್ಕೆ ನಿರ್ಧರಿಸಲಾಗಿತ್ತು. ಈ ಬೆನ್ನಲ್ಲೇ ಈಗ ಮಾರ್ಚ್ ನಲ್ಲಿ ದೆಹಲಿಯಲ್ಲಿ ಸಭೆ ನಡೆಯೋ ನಿರೀಕ್ಷೆಯಿದೆ ಎನ್ನಲಾಗಿದೆ. https://kannadanewsnow.com/kannada/bus-collides-with-stationary-lorry-in-koppal-over-10-passengers-injured/ https://kannadanewsnow.com/kannada/election-commission-announces-final-voters-list-for-221-assembly-constituencies-in-karnataka/ https://kannadanewsnow.com/kannada/bengaluru-mysuru-decadal-highway-to-be-inaugurated-by-february-end-nitin-gadkari/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಜಂಗಮ ಜಿಲ್ಲೆಯ ಪಾಲಕುರ್ತಿಯಲ್ಲಿ ವೀರ ಬ್ರಹ್ಮೇಂದ್ರ ಸ್ವಾಮಿ ಹೇಳಿದ ಭವಿಷ್ಯ ನಿಜವಾಗಿದೆ. ಹೌದು, ಅವ್ರು ತಮ್ಮ ಕಾಲಜ್ಞಾನದಲ್ಲಿ ಹೇಳಿದಂತೆ, ಹುಣಸೆ ಮರದಿಂದ ಹೆಂಡ ಸೋರಿಕೆಯಾಗ್ತಿದೆ. ಅಂದ್ಹಾಗೆ, ವೀರ ಬ್ರಹ್ಮೇಂದ್ರ ಸ್ವಾಮಿಗಳು “ನಂದಮಯ ಗುರುದ ನಂದಾಮಯ ಚಿಂತಚೆಟ್ಟುಕು ಕಲ್ಲು ಪರೇನಯ ಸತ್ಯ” ಎಂದಿದ್ದರು. ಅಂದ್ರೆ, ಹುಣಸೆ ಮರದಿಂದ ಹೆಂಡ ಸೋರಿಕೆಯಾಗುತ್ತೆ ಎಂದು ಹೇಳಿದ್ದರು. ಸಧ್ಯ ಅಂಧ್ರಪ್ರದೇಶದ ಪಾಲಕುರ್ತಿಯ ಗ್ರಾಮ ಪಂಚಾಯತ್ ಬಳಿಯ ಅಂಗಡಿ ಬಜಾರ್’ನಲ್ಲಿ, ಹುಣಸೆ ಮರದಿಂದ ಹೆಂಡ ಸೋರಿಕೆಯಾಗ್ತಿದೆ. ವಿಸ್ಮಯ ನೋಡಲು ಜನ ಮುಗಿ ಬಿದ್ದಿದ್ದಾರೆ. ಸಾಮಾನ್ಯವಾಗಿ ನಾವು ತಾಳೆ, ಈಜು, ಖರ್ಜೂರದ ಮರಗಳು ಮತ್ತು ತೆಂಗು, ಜೀರಿಗೆ ಮತ್ತು ಬೇವಿನ ಮರಗಳಿಗೆ ಹೆಂಡವನ್ನ ನೋಡುತ್ತೇವೆ. ಅನೇಕ ಜನರು ಈ ಮರಗಳಿಂದ ಹೆಂಡವನ್ನ ಕುಡಿಯಲು ಇಷ್ಟ ಪಡುತ್ತಾರೆ. ಬೇವಿನ ಹೆಂಡವನ್ನ ಆಯುರ್ವೇದ ಔಷಧಿಯಾಗಿಯೂ ಬಳಸಲಾಗುತ್ತದೆ. ಇದೆಲ್ಲದಕ್ಕೂ ವ್ಯತಿರಿಕ್ತವಾಗಿ ಹುಣಸೆ ಮರವು ಹೆಂಡವನ್ನ ಸೋರುವುದನ್ನ ನೀವು ಎಂದಾದರೂ ನೋಡಿದ್ದೀರಾ? ಇದರರ್ಥ ಯಾರೂ ಇಲ್ಲ. ಆದಾಗ್ಯೂ, ಪಾಲಕುರ್ತಿಯಲ್ಲಿ, ಹುಣಸೆ ಮರವು…
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ – 2023ಕ್ಕೆ ( Karnataka Assembly Election 2023 ) ರಾಜ್ಯ ಚುನಾವಣಾ ಆಯೋಗ ( Election Commission ) ಭರ್ಜರಿ ತಯಾರಿ ನಡೆಸಿದೆ. ಈ ಸಂಬಂಧ ಇಂದು 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. https://kannadanewsnow.com/kannada/we-will-get-majority-on-the-basis-of-report-card-jp-nadda/ ಈ ಕುರಿತಂತೆ ಟ್ವಿಟ್ ಮಾಡಿ ತಿಳಿಸಿರುವಂತ ರಾಜ್ಯ ಚುನಾವಣಾ ಆಯೋಗವು, ಕರ್ನಾಟಕ ವಿಧಾನಸಭಾ ಚುನಾವಣೆ – 2023 ರ 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಇರುವದನ್ನು http://nvsp.in ಜಾಲತಾಣಕ್ಕೆ ಭೇಟಿ ನೀಡಿ, ಖಚಿತಪಡಿಸಿಕೊಳ್ಳಲು ತಿಳಿಸಿದೆ. https://twitter.com/ceo_karnataka/status/1610973049989529606 ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದಂತ ಪಟ್ಟಿಯ ಅನುಸಾರ, ಪ್ರಸ್ತುತ ರಾಜ್ಯದಲ್ಲಿ ಒಟ್ಟು 5,05,48,553 ಮತದಾರರಿದ್ದಾರೆ. ಪುರುಷರು – 2,54,49,725 ಮಹಿಳೆಯರು – 2,50,94,326, ಇತರರು – 4,502 ಇದ್ದಾರೆ. https://twitter.com/ceo_karnataka/status/1610973100786741250 ರಾಜ್ಯದ ಪ್ರಸ್ತುತ ಅಂತಿಮ ಮತದಾರರ ಪಟ್ಟಿ ಬಿಡುಗಡೆ 7 ಲಕ್ಷ ಯುವ ಮತದಾರರು…
ಇಂದೋರ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಂತಹ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರಲ್ಲೂ ಈ ಸಮಸ್ಯೆ ಕಾಡುತ್ತಿದೆ.ಅಂತಹದ್ದೆ ಘಟನೆಯೊಂದು ಮಧ್ಯಪ್ರದೇಶದ ಇಂದೋರಿನಲ್ಲಿ ವರದಿಯಾಗಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೋಟೆಲ್ ಮಾಲೀಕರೋರ್ವರು ಕುಸಿದು ಸಾವನ್ನಪ್ಪಿದ್ದಾರೆ. ಇಂದೋರಿನಲ್ಲಿ ಈ ಘಟನೆ ನಡೆದಿದ್ದು , ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. https://twitter.com/Lucknowkibaat32/status/1610939077918089216 ವಿಡಿಯೋದಲ್ಲಿ ಟ್ರೆಡ್‌ಮಿಲ್‌ನಲ್ಲಿ ನಡೆದ ನಂತರ ವ್ಯಕ್ತಿ ಬೆವರುತ್ತಿರುವುದನ್ನು ಕಾಣಬಹುದು. ಅವನು ತನ್ನ ಜಾಕೆಟ್ ಅನ್ನು ತೆಗೆದಾಗ, ಅವನಿಗೆ ತಲೆತಿರುಗುವಿಕೆ ಪ್ರಾರಂಭವಾಗುತ್ತದೆ. ಕೂಡಲೇ ಹತ್ತಿರದಲ್ಲಿದ್ದ ಟೇಬಲ್‌ನಿಂದ ಸಹಾಯದಿಂದ ನಿಲ್ಲಲು ಪ್ರಯತ್ನಿಸುತ್ತಾರೆ. ಆದರೆ ನೆಲದ ಮೇಲೆ ಕುಸಿದು ಬೀಳುತ್ತಾರೆ. ತಕ್ಷಣ ಅಲ್ಲಿದ್ದ ಇತರ ವ್ಯಕ್ತಿಗಳು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವ್ಯಕ್ತಿಯೂ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಮೃತ ವ್ಯಕ್ತಿಯನ್ನು ಪ್ರದೀಪ್ (55) ಎಂದು ಗುರುತಿಸಲಾಗಿದೆ. ಈತ ಹೋಟೆಲ್ ಮಾಲೀಕನಾಗಿದ್ದು,ಈತ ಪ್ರತಿದಿನ ಜಿಮ್ ನಲ್ಲಿ ಎರಡು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. https://kannadanewsnow.com/kannada/good-news-the-modi-governments-wonderful-scheme-do-you-have-that-account-even-if-there-is-no-money-in-the-account-rs-10000-can-be-withdrawn-pmjdy/…
ರಾಮನಗರ :- ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅಥವಾ ರಾಷ್ಟ್ರಪತಿ ಮುರ್ಮು ಅವರು ಈ ಹೆದ್ದಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು. ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ವೈಮಾನಿಕ ಸಮೀಕ್ಷೆ ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಬಹಳ ಸುಂದರವಾಗಿ ನಿರ್ಮಾಣವಾಗಿದೆ. ಎರಡೂ ನಗರಗಳ ಮಧ್ಯೆ ಪ್ರಯಾಣದ ಅವಧಿಯನ್ನು 1.20 ಗಂಟೆಗೆ ಇಳಿಕೆಯಾಗಲಿದೆ. ಜತೆಗೆ, ಈ ಬಿಜಿಯೆಸ್ಟ್ ಹೆದ್ದಾರಿಯಾಗಿರುವುದರಿಂದ ಆರ್ಥಿಕ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ನೆರವು ನೀಡಲಿದೆ ಎಂದರು. ಈ ದಶಪಥ ಹೆದ್ದಾರಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು ಒಂದಷ್ಟು ಸಲಹೆ ನೀಡಿದ್ದಾರೆ. ಎಲ್ಲವನ್ನೂ ಪರಿಶೀಲನೆ ಮಾಡಲಾಗುವುದು. ಹೆದ್ದಾರಿ ಪೂರ್ಣಗೊಂಡರೆ 90 ನಿಮಿಷಗಳಲ್ಲಿ ಬೆಂಗಳೂರು – ಮೈಸೂರು ನಡುವೆ ಸಂಚಾರ ಮಾಡಬಹುದು.…
ನವದೆಹಲಿ : ಮೋದಿ ಸರಕಾರ ದೇಶದ ಜನತೆಗೆ ಹಲವು ಯೋಜನೆಗಳನ್ನ ನೀಡುತ್ತಿದ್ದು, ಮೋದಿ ಸರ್ಕಾರ ಆರ್ಥಿಕ ಬೆಳವಣಿಗೆಗೆ ಹಲವಾರು ಯೋಜನೆಗಳನ್ನ ಮಾಡುತ್ತಿದೆ. ಪ್ರಧಾನ ಮಂತ್ರಿ ಜನಧನ್ ಯೋಜನೆ ಮೋದಿ ಸರ್ಕಾರ ಪರಿಚಯಿಸಿದ ಯೋಜನೆಗಳಲ್ಲಿ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15, 2014 ರಂದು ಈ ಯೋಜನೆಯನ್ನ ಪ್ರಾರಂಭಿಸುವುದಾಗಿ ಘೋಷಿಸಿದರು. ಇನ್ನೀದು ಆಗಸ್ಟ್ 28 ರಂದು ಜಾರಿಗೆ ಬಂದಿತು. ಫಲಾನುಭವಿಗಳು ಈ ಯೋಜನೆಯಡಿ ಅಂಚೆ ಕಚೇರಿಗಳು, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನ ತೆರೆಯಬಹುದು. ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ. ಇದಲ್ಲದೇ, ಜನ್ ಧನ್ ಯೋಜನೆ ಖಾತೆಗಳನ್ನ ಸರ್ಕಾರದ ಯೋಜನೆಗಳಿಗೆ ಲಿಂಕ್ ಮಾಡಲಾಗುತ್ತಿದೆ ಮತ್ತು ಫಲಾನುಭವಿಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ. 10 ಸಾವಿರದವರೆಗೆ ಹಿಂಪಡೆಯಬಹುದು.! ಅಲ್ಲದೇ ಈ ಖಾತೆಯು ಹಲವು ಉಪಯೋಗಗಳನ್ನ ಹೊಂದಿದೆ. ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ನೀವು 10,000 ರೂಪಾಯಿವರೆಗೆ ಹಿಂಪಡೆಯಬಹುದು. ಇದಲ್ಲದೇ ರುಪೇ ಡೆಬಿಟ್ ಕಾರ್ಡ್ ಸೌಲಭ್ಯವನ್ನ ಒದಗಿಸಲಾಗಿದೆ. ಈ…