Author: KNN IT TEAM

ಮಂಡ್ಯ : ಸಂಕ್ರಾಂತಿ ಹಬ್ಬದ ಅಂಗವಾಗಿ ಮದ್ದೂರು ಕ್ಷೇತ್ರದ ಪ್ರತಿಯೊಂದು ಮನೆಗೂ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಾಗೀನ, ಸೀರೆ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ವಿತರಣೆ ಮಾಡಲಾಗುತ್ತಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಉದಯ್ ತಿಳಿಸಿದರು. ಮದ್ದೂರು ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಗುರುವಾರ ಮದ್ದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಗೆ ಬಾಗೀನ, ಸೀರೆ ಮತ್ತು ಕ್ಯಾಲೆಂಡರ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಕುಟುಂಬಕ್ಕೂ ಬಾಗಿನ ನೀಡಬೇಕು ಎಂದು ತಿರ್ಮಾನಿಸಲಾಗಿತ್ತು. ಆ ಸಮಯದಲ್ಲಿ ಉದಯಯಾನ ಎಂಬ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿ ಶ್ರಮಿಕರಿಗೆ, ಆಟೋ, ಕ್ಯಾಬ್ ಚಾಲಕರಿಗೆ, ಕಾರ್ಮಿಕರಿಗೆ, ಅಂಗವಿಕಲರಿಗೆ ಸೇರಿದಂತೆ ಇತರರಿಗೆ ಆಹಾರ್ ಕಿಟ್ ಜತೆಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಆದ್ದರಿಂದ ಆ ಸಂದರ್ಭದಲ್ಲಿ ನೀಡಲಾಗದ ಬಾಗಿನವನ್ನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು. ಸೇವೆ ಮಾಡುವುದು ನನ್ನ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ದೂರುದ ಸ್ಥಳಗಳಿಗೆ ತೆರಳಲು ರೈಲಿನ ಪ್ರಯಾಣ ಉತ್ತಮ. ಕಡಿಮೆ ವೆಚ್ಚ, ಆರಾಮದಾಯಕವಾಗಿರುತ್ತದೆ. ಕೆಲವೊಮ್ಮೆ ಜನರು ಟಿಕೆಟ್ ಇಲ್ಲದೆ ಅನೇಕರು ಪ್ರಯಾಣ ಮಾಡುತ್ತಾರೆ. ಕೆಲವೊಮ್ಮೆ ಸಿಕ್ಕಿ ಬೀಳುತ್ತಾರೆ. ಆದರೆ ನಾವಿಂದು ನಿಮಗೆ ಹೇಳ ಹೊರಟಿರುವ ವಿಷಯ ನಿಮ್ಮನ್ನು ಅಚ್ಚರಿ ಮೂಡಿಸಬಹುದು. ನಾವಿಂದೂ ವಿಶೇಷವಾದ ರೈಲಿನ ಬಗ್ಗೆ ಹೇಳುತ್ತಿದ್ದೇವೆ. ಈ ರೈಲಿನಲ್ಲಿ ಪ್ರಯಾಣ ಮಾಡಲು ಯಾವುದೆ ಟಿಕೆಟ್ ಅವಶ್ಯಕತೆಯಿಲ್ಲ. ಈ ರೈಲಿನಲ್ಲಿ ಯಾವುದೆ ಟಿಟಿಇ ಇರುವುದಿಲ್ಲ. ಭಾರತದಲ್ಲಿದೆ ಉಚಿತ ರೈಲು. ಇದು ಕಳೆದ 75 ವರ್ಷಗಳಿಂದ ಓಡಾಡುತ್ತಿದೆ. ಉಚಿತ ರೈಲು ಭಾರತದ ಈ ಉಚಿತ ರೈಲು ಇಂದಿನಿಂದಲ್ಲ ಸುಮಾರು 75 ವರ್ಷಗಳಿಂದ ಜನರನ್ನು ಉಚಿತವಾಗಿ ಪ್ರಯಾಣಿಸುತ್ತಿದೆ. ಈ ರೈಲು ಪಂಜಾಬ್ ಮತ್ತು ಹಿಮಾಚಲದ ಗಡಿಯಲ್ಲಿ ಚಲಿಸುತ್ತದೆ. ಭಾಕ್ರಾ-ನಂಗಲ್ ರೈಲು ಎಂದು ಪ್ರಸಿದ್ಧವಾಗಿದೆ. ಈ ರೈಲು ಭಾಕ್ರಾ ಮತ್ತು ನಂಗಲ್ ನಡುವೆ ಚಲಿಸುತ್ತದೆ. ಭಾಕ್ರಾ-ನಂಗಲ್ ಅಣೆಕಟ್ಟನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಬಂದಾಗ ಅವರು ಈ ರೈಲನ್ನು ಬಳಸುತ್ತಾರೆ. ಈ ರೈಲಿನಲ್ಲಿ…

Read More

ಶಿವಮೊಗ್ಗ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ 2022-23 ನೇ ಸಾಲಿಗೆ ಅನುಷ್ಟಾನಗೊಳಿಸುತ್ತಿರುವ ನೇರಸಾಲ ಯೋಜನೆ, ಉದ್ಯಮಶೀಲತೆ(ಐಎಸ್‍ಬಿ) ಯೋಜನೆ ಮತ್ತು ದ್ವಿಚಕ್ರ ವಾಹನ ಯೋಜನೆಗಳಡಿ ಸೌಲಭ್ಯ ಪಡೆಯಲು ಕರೆಯಲಾಗಿದ್ದ ಅರ್ಜಿ ಅವಧಿಯನ್ನು ಜನವರಿ 16 ರವರೆಗೆ ವಿಸ್ತರಿಸಲಾಗಿದೆ. ಅರ್ಹ ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮುಖಾಂತರ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ. ವಿಕಲಚೇತನ ವಿದ್ಯಾರ್ಥಿವೇತಕ್ಕೆ ಅರ್ಜಿ ಆಹ್ವಾನ 2022-23 ನೇ ಸಾಲಿಗೆ ವಿಕಲಚೇತನ ವಿದ್ಯಾರ್ಥಿವೇತನ ಯೋಜನೆಯನ್ನು ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟಲ್(ಎಸ್‍ಎಸ್‍ಪಿ) ನಲ್ಲಿ ಜಾರಿಗೊಳಿಸಿದ್ದು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 1 ರಿಂದ 10 ನೇ ತರಗತಿವರೆಗೆ(ಪ್ರಿ ಮೆಟ್ರಿಕ್) ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಅರ್ಜಿಗಳನ್ನು ಎಸ್‍ಎಸ್‍ಪಿ https://ssp.karnataka.gov.in ಮೂಲಕ ಮತ್ತು ಎಸ್‍ಎಸ್‍ಎಲ್‍ಸಿ ನಂತರದ(ಪೋಸ್ಟ್ ಮೆಟ್ರಿಕ್) ವಿದ್ಯಾರ್ಥಿಗಳು ಎಸ್‍ಎಸ್‍ಪಿ https://ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಿ ಹಾರ್ಡ್ ಕಾಪಿಯನ್ನು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯುಗಳಿಗೆ, ನಗರ ಸ್ಥಳೀಯ ಸಂಸ್ಥೆಗಲಲ್ಲಿ ಕಾರ್ಯ ನಿರ್ವಹಿಸುತ್ತಿರುವ…

Read More

ಬೆಂಗಳೂರು: ಮೆಕ್‌ಡೊನಾಲ್ಡ್ಸ್‌ ಆಹಾರಪ್ರಿಯರಿಗಾಗಿ ನೂತನವಾಗಿ ಐಕಾನಿಕ್‌ “ಚಿಕನ್‌ ಬಿಗ್‌ ಮ್ಯಾಕ್‌” ನನ್ನು ಪರಿಚಯಿಸುತ್ತಿದ್ದು, ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಇದರ ರಾಯಭಾರಿಯಾಗಿದ್ದಾರೆ. ಮೆಕ್‌ಡೊನಾಲ್ಡ್ಸ್‌ ಎಂದರೆ ಪ್ರತಿಯೊಬ್ಬರಿಗೂ ಪ್ರಿಯಾದ್ದೆ, ಇವರ ಗ್ರಾಹಕರಿಗಾಗಿಯೇ ಇದೀಗ ಹೊಸ ಸೆಗ್ಮೆಂಟ್‌ ಬಿಡುಗಡೆ ಮಾಡಿದೆ. ಚಿಕನ್‌ ಬಿಗ್‌ ಮ್ಯಾಕ್‌ನ ಮತ್ತೊಂದು ವಿಶೇಷವೆಂದರೆ, ಸೆಹ್ವಾಗ್‌ ಅವರ ತಮಾಷೆಯ ಕ್ಷಣಗಳನ್ನು ಸವಿಯುವಂತೆ ಮಾಡುತ್ತದೆ. ೨೫ ಸೆಕೆಂಡ್‌ಗಳ ಟಿವಿಸಿ ಚಿಕನ್‌ ಬಿಗ್‌ ಮ್ಯಾಕ್‌ನಲ್ಲಿ ಸೆಹ್ವಾಗ್‌ ಅವರ ವಿನೋದಮಯ ಕ್ಷಣಗಳು ಬಂದು ಹೋಗಲಿದೆ. ಸೆಹ್ವಾಗ್‌ ಅವರು ಪ್ರತಿಯೊಬ್ಬ ಕ್ರಿಕೆಟ್‌ ಅಭಿಮಾನಿಗೆ ಅಚ್ಚುಮೆಚ್ಚು. ಅವರ ವಿನೋಧಮಯ ಕ್ಷಣಗಳನ್ನು ಚಿಕನ್‌ ಬಿಗ್‌ ಮ್ಯಾಕ್‌ ಖರೀದಿ ವೇಳೆ ಕಣ್ತುಂಬಿಕೊಳ್ಳಬಹುದು. ಮೆಕ್‌ಡೋನಾಲ್ಡ್ಸ್‌ನ ಮಾರುಕಟ್ಟೆ ಮತ್ತು ಸಂವಹನ ಹಿರಿಯ ನಿರ್ದೇಶಕ ಆರ್‌. ಪಿ. ಅರವಿಂದ್‌, ಭಾರತದಲ್ಲಿ ಹೊಸ ಮೆನುವನ್ನು ಸೇರ್ಪಡೆ ಮಾಡುತ್ತಿರುವುದು ಹೆಚ್ಚು ಖುಷಿ ನೀಡಿದೆ. ಅದರಲ್ಲೂ ಈ ನೂತನ ಚಿಕನ್‌ ಬಿಗ್‌ ಮ್ಯಾಕ್‌ಗೆ ಸೆಹ್ವಾಗ್‌ ಅವರು ರಾಯಭಾರಿಯಾಗಿರುವುದು ಇನ್ನಷ್ಟು ಸಂತಸವೆನಿಸುತ್ತದೆ. ಭಾರತದ ಎಲ್ಲಾ ಮೆಕ್‌ಡೊನಾಲ್ಡ್ಸ್‌ ಶಾಖೆಯಲ್ಲೂ ಈ ನೂತನ ಚಿಕನ್‌ ಬಿಗ್‌…

Read More

ಕಲಬುರಗಿ: ವೀರಶೈವ- ಲಿಂಗಾಯತದಲ್ಲಿ ಒಡಕು ತರಲು ಯತ್ನಿಸಿದವರ ಅದರಲ್ಲೂ ಹಿಂದೂ ಧರ್ಮ ಒಡೆಯಲು ಮುಂದಾದವರ ಬಾಯಿಂದ ಮಾತ್ರ ನಾಯಿಮರಿ- ನರಿ ಶಬ್ದಗಳ ಬಳಕೆ ಸಾಧ್ಯವೆಂದು ಬಿಜೆಪಿ ರಾಜ್ಯ ವಕ್ತಾರರು ಆಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಸಿದ್ದರಾಮಯ್ಯ ಏಕ ವಚನದಲ್ಲಿ ಮಾತನಾಡಿದ್ದರು. ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಮರಿ ಎಂಬಿತ್ಯಾದಿ ಟೀಕಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ಸಂಸ್ಕಾರ ಇಲ್ಲದ ನಾಲಿಗೆ ಹಾಗೂ ಸಂಸ್ಕಾರ ಹೀನ ಮನುಷ್ಯ ಎಂಬುದು ಸಾಬೀತುಪಡಿಸುತ್ತದೆ ಎಂದು ತೇಲ್ಕೂರ ತಿರುಗೇಟು ನೀಡಿದ್ದಾರೆ. ಈ ಹಿಂದೆ ತುರ್ತು ಪರಿಸ್ಥಿತಿ ವಿರುದ್ಧ ಮಾತನಾಡಿದ್ದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸೇರಿದ ನಂತರ ಆ ಕುರಿತಂತೆ ಯಾವುದೇ ಮಾತನಾಡುತ್ತಿಲ್ಲ. ಅಂದರೆ ಅವರ ಸಮಯ ಸಾಧಕತನ ಎತ್ತಿ ತೋರಿಸುತ್ತದೆ. ಸುಳ್ಳು, ಕುಟಿಲತನ, ಸಹಾಯ ಮಾಡಿದವರ ಬೆನ್ನಿಗೆ ಚೂರಿ ಹಾಕುವುದು ಅವರ ಮೂರು ಗುಣಗಳು ಎಂದು…

Read More

ಬೆಂಗಳೂರು: ನಿನ್ನೆ ವಿಧಾನಸೌಧಕ್ಕೆ ಆಗಮಿಸಿದ್ದಂತ ಎಇ ಜಗದೀಶ್ ಎಂಬುವರ ಬಳಿಯಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ಈ ಸಂಬಂಧ ನಗದು ಜಪ್ತಿ ಮಾಡಿದ್ದಂತ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಇಂದು ವಿಚಾರಣೆ ವೇಳೆ ಪತ್ತೆಯಾದ ನಗದು ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ, ಎಇ ಜಗದೀಶ್ ಅನ್ನು ಬಂಧಿಸಿದ್ದಾರೆ. ಎಇ ಜಗದೀಶ್ ಬಳಿಯಲ್ಲಿ ವಿಧಾನಸೌಧದಲ್ಲಿ ಪೊಲೀಸರು ತಪಾಸಣೆ ನಡೆಸುವಂತ ಸಂದರ್ಭದಲ್ಲಿ ನಿನ್ನೆ 10.5 ಲಕ್ಷ ನಗದು ಪತ್ತೆಯಾಗಿತ್ತು. ವಿಧಾನಸೌಧ ಪೊಲೀಸರು ಆ ಹಣವನ್ನು ಜಪ್ತಿ ಮಾಡಿ, ಸೂಕ್ತ ದಾಖಲೆಯೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಇಂದು ವಿಧಾನಸೌಧ ಪೊಲೀಸ್ ಠಾಣೆಯ ವಿಚಾರಣಾಧಿಕಾರಿಯ ಮುಂದೆ ತಮ್ಮ ವಕೀಲರೊಂದಿಗೆ ಹಾಜರಾದಂತ ಎಇ ಜಗದೀಶ್, ಪತ್ತೆಯಾದಂತ 10.5 ಲಕ್ಷ ನಗದು ಸಂಬಂಧ ಸರಿಯಾದ ಸಮರ್ಪಕ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿಯೇ ಅವರನ್ನು ವಿಧಾನಸೌಧ ಪೊಲೀಸರು ಬಂಧಿಸಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/veera-brahmendras-kalajnana-is-becoming-a-reality-henna-leaked-from-tamarind-tree-people-rush-to-witness-awe/ https://kannadanewsnow.com/kannada/bengaluru-mysuru-decadal-highway-to-be-inaugurated-by-february-end-nitin-gadkari/

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ವಿದೇಶಕ್ಕೆ ಹೋಗುವ ಭಾರತೀಯ ನಾಗರಿಕರು ಈಗ ತಮ್ಮ ಜೇಬುಗಳನ್ನ ಹೆಚ್ಚು ಸಡಿಲಗೊಳಿಸಬೇಕಾಗಬಹುದು. ಯುಎಸ್ ಅಧ್ಯಕ್ಷ ಜೋ ಬಿಡನ್ ನೇತೃತ್ವದ ಆಡಳಿತವು H1-B ವೀಸಾಗಳ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಪ್ರಸ್ತಾಪವು ಭಾರತೀಯ ವೃತ್ತಿಪರರ ಮೇಲೆ ಹೆಚ್ಚು ಪರಿಣಾಮ ಬೀರುವ ನಿರೀಕ್ಷೆಯಿದೆ. ಯಾಕಂದ್ರೆ, ಈಗ ಅವರು ವಿದೇಶಕ್ಕೆ ಹೋಗಲು ಹೆಚ್ಚು ಹಣವನ್ನ ಖರ್ಚು ಮಾಡಬೇಕಾಗುತ್ತದೆ. US ಪೌರತ್ವ ಮತ್ತು ವಲಸೆ ಸೇವೆಗಳು (USCIS) ಬುಧವಾರ (ಜನವರಿ 5) H-1B ವೀಸಾದ ಅರ್ಜಿ ಶುಲ್ಕವನ್ನು US $ 460 ರಿಂದ US $ 780 ಗೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಇದಲ್ಲದೆ, ಬಿಡೆನ್ ಆಡಳಿತವು ಎಲ್ -1 ವರ್ಗದ ವೀಸಾದ ಶುಲ್ಕವನ್ನು US $460 ರಿಂದ US $1,385 ಗೆ ಹೆಚ್ಚಿಸಲು ತಯಾರಿ ನಡೆಸುತ್ತಿದೆ. ಆದ್ರೆ, O-1 ವೀಸಾದ ಅರ್ಜಿ ಶುಲ್ಕವನ್ನ US $460 ರಿಂದ US $1,055 ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. H1-B…

Read More

ಶಿವಮೊಗ್ಗ: ನಗರದ ತುಂಗಾ ನದಿ ತೀರದಲ್ಲಿ ಶಂಕಿತ ಉಗ್ರ ತಾರಿಕ್ ಸೇರಿದಂತೆ ಇತರರು ನಡೆಸಿದಂತ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಈ ಘಟನೆಯ ಹಿಂದೆ ಐಸಿಸ್ ಒಳಸಂಚು ಇರೋದನ್ನು ಎನ್ಐಎ ಅಧಿಕಾರಿಗಳ ತಂಡ ಪತ್ತೆ ಹಚ್ಚಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಇಂದು ರಾಜ್ಯದ 6 ಕಡೆಯಲ್ಲಿ ಟ್ರಯಲ್ ಬ್ಲಾಸ್ಟ್ ಸಂಬಂಧ ದಾಳಿ ಕೂಡ ನಡೆಸಿದೆ. ಶಿವಮೊಗ್ಗದಲ್ಲಿ ನಡೆದಿದ್ದಂತ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಕಾ ದಳದ ಅಧಿಕಾರಿಗಳು ಇಂದು ಚುರುಕುಗೊಳಿಸಿದ್ದಾರೆ. ಟ್ರಯಲ್ ಬ್ಲಾಸ್ಟ್ ಸಂಬಂಧ ಇಂದು ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 6 ಕಡೆಯಲ್ಲಿ ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಮಂಜುನಾಥ ಬಡವಾಣೆಯಲ್ಲಿ ಉಜೇರ್ ಫರ್ಹಾನ್ ಬೇಗ್ ಹಾಗೂ ಉಡುಪಿಯ ರೇಶಾನ್ ತಾಜುದ್ದೀನ್ ಶೇಕ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಈ ಇಬ್ಬರು ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದಂತ ಶಂಕಿತರು ಎನ್ನಲಾಗುತ್ತಿದೆ. ಶಿವಮೊಗ್ಗದ ಮಂಜುನಾಥ ಬಡಾವಣೆಯ ಶಂಕಿತನ ಮನೆಯ ಮೇಲೆ ದಾಳಿ…

Read More

ನವದೆಹಲಿ : ದೆಹಲಿ-ಎನ್ಸಿಆರ್ ಮತ್ತು ಜಮ್ಮು-ಕಾಶ್ಮೀರ ಸೇರಿ ಅಫ್ಘಾನಿಸ್ತಾನದಲ್ಲಿ ಭೂಕಂಪನದ ಅನುಭವವಾಗಿದೆ. ಕಾಶ್ಮೀರ ಕಣಿವೆಯಲ್ಲಿ ರಾತ್ರಿ 7:59ರ ಸುಮಾರಿಗೆ ಪ್ರಬಲ ಭೂಕಂಪನದ ಅನುಭವವಾಯಿತು. ಇನ್ನು ತೀವ್ರತೆ ಇನ್ನೂ ತಿಳಿದುಬಂದಿಲ್ಲ. ಅಫ್ಘಾನಿಸ್ತಾನದ ಫೈಜಾಬಾದ್ನಲ್ಲಿ 5-9 ತೀವ್ರತೆಯ ಭೂಕಂಪ ಸಂಭವಿಸುತ್ತಿದ್ದಂತೆ ರಾಷ್ಟ್ರ ರಾಜಧಾನಿಯಲ್ಲಿ ಹೆಪ್ಪುಗಟ್ಟಿದ ತಾಪಮಾನದ ನಡುವೆ ದೆಹಲಿಯಲ್ಲಿ ಇಂದು ಭೂಕಂಪನದ ಅನುಭವವಾಗಿದೆ. ನೋಯ್ಡಾದ ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದೆ. ಇಂದು ಸಂಜೆ 7.55 ಕ್ಕೆ ಅಫ್ಘಾನಿಸ್ತಾನದ ಫೈಜಾಬಾದ್ನ ದಕ್ಷಿಣ ಭಾಗದಲ್ಲಿ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ಸಿಎಸ್) ದೃಢಪಡಿಸಿದೆ. ಇನ್ನು ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದಲ್ಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಇಲ್ಲಷ್ಟೇ ಅಲ್ಲದೇ ಸಂಜೆ ಪಾಕಿಸ್ತಾನದಲ್ಲಿ ಭೂಕಂಪನದ ಅನುಭವವಾಗಿದೆ. ಭೂಕಂಪವು ರಿಕ್ಟರ್ ಮಾಪಕದಲ್ಲಿ 5.8 ರಷ್ಟಿತ್ತು ಎಂದು ಹೇಳಲಾಗಿದೆ. https://kannadanewsnow.com/kannada/g20-foreign-ministers-to-meet-in-delhi-in-march-2023/ https://kannadanewsnow.com/kannada/g20-foreign-ministers-to-meet-in-delhi-in-march-2023/ https://kannadanewsnow.com/kannada/do-you-have-the-habit-of-drinking-tea-and-eating-this-food-dont-miss-this-story-read-this-story/

Read More

ನವದೆಹಲಿ : ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು,ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ನಡುಗಿದಂತಹ ಅನುಭವಗಳಾಗಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ಉಲ್ಲೇಖಿಸಿದೆ. https://twitter.com/ANI/status/1611008253621862403 ಈ ಸುದ್ದಿ ಈಗ ತಾನೆ ಬಂದಿದೆ. ಹೆಚ್ಚಿನ ಮಾಹಿತಿ ಸಿಕ್ಕ ಕೂಡಲೇ ಅಪ್ ಡೇಟ್ ಮಾಡಲಾಗುವುದು. ಪುನಃ ನಮ್ಮ ಪೇಜಿಗೆ ಭೇಟಿ ನೀಡಿ.

Read More