Author: KNN IT TEAM

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟದಲ್ಲಿ ಅಕ್ಕಿ, ಬೇಳೆ ಮತ್ತು ತರಕಾರಿಗಳೊಂದಿಗೆ ಚಿಕನ್, ಮೊಟ್ಟೆ ಮತ್ತು ಸೀಸನಲ್‌ ಹಣ್ಣುಗಳನ್ನು ಏಪ್ರಿಲ್‌ವರೆಗೆ ಮಧ್ಯಾಹ್ನದ ಊಟದಲ್ಲಿ ನೀಡಲಾಗುವುದು ಎಂದು ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ. “ಹೆಚ್ಚುವರಿ ಪೌಷ್ಠಿಕಾಂಶ ಮೊಟ್ಟೆ, ಕೋಳಿ ಮತ್ತು ಹಣ್ಣುಗಳನ್ನು ಒಳಗೊಂಡಿರುತ್ತದೆ. ಇವುಗಳ ಮೂಲಕ ಅಪೌಷ್ಠಿಕತೆಯನ್ನು ಪರಿಹರಿಸಬಹುದು. ಹೀಗಾಗಿ, ವಾರಕ್ಕೊಮ್ಮೆ ಜನವರಿಯಿಂದ ಏಪ್ರಿಲ್ ವರೆಗೆ ನಾಲ್ಕು ತಿಂಗಳವರೆಗೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯಾದ್ಯಂತ ಶಾಲೆಗಳಲ್ಲಿ ದಾಖಲಾದ 11.6 ಮಿಲಿಯನ್ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಪಡೆಯುತ್ತಾರೆ. ಹೆಚ್ಚುವರಿ ಆಹಾರ ನೀಡಲು ₹371 ಕೋಟಿ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕೇಂದ್ರ ಮತ್ತು ರಾಜ್ಯಗಳು ಊಟದ ವೆಚ್ಚವನ್ನು 60:40 ಆಧಾರದ ಮೇಲೆ ಹಂಚಿಕೊಳ್ಳುತ್ತವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಮಧ್ಯಾಹ್ನದ ಊಟದ ಹಂಚಿಕೆಯನ್ನು ಹೆಚ್ಚಿಸಿತ್ತು. https://kannadanewsnow.com/kannada/mha-declares-the-resistance-front-trf-and-its-organisations-as-terror-outfits/ https://kannadanewsnow.com/kannada/kannada-sahitya-sammelana-cm-bommayi-joins-the-guest-speech-schedule/ https://kannadanewsnow.com/kannada/mha-declares-the-resistance-front-trf-and-its-organisations-as-terror-outfits/

Read More

ಹಾವೇರಿ : ಹಾವೇರಿ ನಗರದಲ್ಲಿ ಜನವರಿ 06, 07, ಮತ್ತು 08 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ದತೆ ನಡೆಸಲಾಗಿದೆ. ಇದೀಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಸೇರಿ ಅತಿಥಿಗಳಿಗೆ ಭಾಷಣ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಸಮಯ ನಿಗದಿಗೊಳಿಸಿದೆ. ಸಿಎಂ ಬೊಮ್ಮಾಯಿ ಸೇರಿ ಎಲ್ಲಾ ಅತಿಥಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಉದ್ಘಾಟನಾ ಭಾಷಣ ಮಾಡಲು ಮುಖ್ಯಮಂತ್ರಿಗಳಿಗೆ 30 ನಿಮಿಷ ಸಮಯ ನಿಗದಿ, ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರ ಭಾಷಣಕ್ಕೆ 45 ನಿಮಿಷ ನಿಗದಿ, ಬಿಎಸ್ವೈ, ಹೆಚ್ಡಿಕೆ ಸೇರಿ ಗಣ್ಯರಿಗೆ 10 ನಿಮಿಷ ಸಮಯ ನಿಗದಿ ಮಾಡಲಾಗಿದೆ. ಈ ಸಮಯದೊಳಗೆ ಭಾಷಣ ಮಾಡಿ ಮುಗಿಸಬೇಕೆಂಬ ನಿಯಮವನ್ನು ಕನ್ನಡ ಸಾಹಿತ್ಯ ಪರಿಷತ್ ತಂದಿದೆ. ಸಮ್ಮೇಳನ ನಡೆಯುವ ಹಿನ್ನೆಲೆ ಹಾವೇರಿ ಜಿಲ್ಲೆಯಾದ್ಯಂತ ಎಲ್ಲಾ ಪಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.ಹಾವೇರಿ ಜಿಲ್ಲೆಯಾದ್ಯಂತ ಎಲ್ಲಾ ಪಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ದಿನಾಂಕ: 06-01-2023…

Read More

ಬೆಂಗಳೂರು : ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ವಿಕಲಚೇತನ ವ್ಯಕ್ತಿ ಬಲಿಯಾದ ಘಟನೆ ನಾಯಂಡನಹಳ್ಳಿ ಜಂಕ್ಷನ್ ಬಳಿ ನಡೆದಿದೆ. ಮೃತನನ್ನು ದೊರೆಸ್ವಾಮಿ (45) ಎಂದು ಗುರುತಿಸಲಾಗಿದೆ. ನಾಯಂಡನಹಳ್ಳಿ ಜಂಕ್ಷನ್ ಬಳಿ ಬುಲೆಟ್ ಬೈಕ್ ನಲ್ಲಿ ಬಂದ ಸವಾರ ಡಿಕ್ಕಿ ಹೊಡೆದಿದ್ದಾನೆ. ಸದ್ಯ ಬೈಕ್ ಸವಾರನನ್ನು ಬ್ಯಾಟರಾಯನಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. https://kannadanewsnow.com/kannada/no-goons-no-land-mafia-in-up-yogi-adityanath-to-investors-in-mumbai/ https://kannadanewsnow.com/kannada/election-commission-announces-final-voters-list-for-221-assembly-constituencies-in-karnataka-2/

Read More

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಗೃಹ ಸಚಿವಾಲಯ ಗುರುವಾರ ನಿಷೇಧಿಸಿದೆ. ಕಳೆದ ಕೆಲವು ವರ್ಷಗಳಿಂದ ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರ ಮೇಲೆ ಹಾಗೂ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲಿನ ಹೆಚ್ಚಿನ ದಾಳಿಗಳ ಹಿಂದೆ TRF ಇತ್ತು. ಟಿಆರ್‌ಎಫ್ ಕಮಾಂಡರ್ ಸಜ್ಜದ್ ಗುಲ್ ಅವರನ್ನು ಭಾರತ ಸರ್ಕಾರ ಈಗಾಗಲೇ ಭಯೋತ್ಪಾದಕ ಎಂದು ಘೋಷಿಸಿದೆ. ಗುರುವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಯುಎಪಿಎಯ ಮೊದಲ ವೇಳಾಪಟ್ಟಿಯಡಿಯಲ್ಲಿ ಎಲ್ಇಟಿ ಜೊತೆಗೆ ನಿಷೇಧಿತ ಸಂಘಟನೆಗಳ ಪಟ್ಟಿಗೆ ಟಿಆರ್ಎಫ್ ಅನ್ನು ಸೇರಿಸಲಾಗಿದೆ. ಯುಎಪಿಎ ಅಡಿಯಲ್ಲಿ ಮೊದಲ ಶೆಡ್ಯೂಲ್‌ನ ಸರಣಿ ಸಂಖ್ಯೆ 5 ರಲ್ಲಿ ಪಟ್ಟಿ ಮಾಡಲಾದ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾದ ಪ್ರಾಕ್ಸಿ ಸಂಘಟನೆಯಾಗಿ 2019 ರಲ್ಲಿ ರೆಸಿಸ್ಟೆನ್ಸ್ ಫ್ರಂಟ್ ಅಸ್ತಿತ್ವಕ್ಕೆ ಬಂದಿದೆ ಎಂದು ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. https://kannadanewsnow.com/kannada/ring-road-in-four-cities-cm-bommai/ https://kannadanewsnow.com/kannada/no-goons-no-land-mafia-in-up-yogi-adityanath-to-investors-in-mumbai/ https://kannadanewsnow.com/kannada/ring-road-in-four-cities-cm-bommai/…

Read More

ಬೆಂಗಳೂರು: ರಾಯಚೂರು, ಕೊಪ್ಪಳ, ಗದಗ, ಶಿವಮೊಗ್ಗ ರಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಇದೇ ವರ್ಷದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ನಿನ್ನೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ರಾಯಚೂರು, ಕೊಪ್ಪಳ, ಗದಗ, ಶಿವಮೊಗ್ಗ ರಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಇದೇ ವರ್ಷದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ರಸ್ತೆಗಳ ಅಭಿವೃದ್ಧಿಗೆ ಭೂಸ್ವಾಧೀನ ಮಾಡಿಕೊಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಅದನ್ನು ನಿರ್ವಹಿಸಲು ಒಪ್ಪಿಗೆ ಸೂಚಿಸಲಾಗಿದೆ’ ಎಂದರು. ‘ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಶೇ 50ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ ಎಂದರು.ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯನ್ನು ಫೆಬ್ರುವರಿ ಅಂತ್ಯ ಅಥವಾ ಮಾರ್ಚ್ ನಲ್ಲಿ ಉದ್ಘಾಟಿಸಲಾಗುವುದು. ಎಸ್ ಟಿ ಆರ್ ಆರ್ ಅನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಹೊರ ವಲಯದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ..ಬೆಂಗಳೂರು ನಗರ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಗರ ಪ್ರದೇಶದಲ್ಲಿರುವ…

Read More

ಬೆಂಗಳೂರು : ಕೋರ್ಟ್ ಗೆ ಹಾಜರುಪಡಿಸಲೆಂದು ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿಯೇ ಮೃತಪಟ್ಟ ಘಟನೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೃತನನ್ನು ಆರೋಪಿ ವಿನೋದ್ ಎಂದು ಗುರುತಿಸಲಾಗಿದೆ. ಈತ 2017 ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆರೋಪಿಯಾಗಿದ್ದು, ವಿಚಾರಣೆಗೆ ಬರದೇ ಈತ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆ ಆರೋಪಿ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.ಈ ಹಿನ್ನೆಲೆ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದರು. ಇಂದು ಕೋರ್ಟ್ ಆತನನ್ನು ಕರೆ ತರಲು ಪೊಲೀಸರು ಸಿದ್ದತೆ ನಡೆಸಿದ್ದರು, ಆದರೆ ಅಷ್ಟರಲ್ಲೇ ವಿನೋದ್ ಠಾಣೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಭಕ್ತಿ ಗಾರ್ಡನ್ ನಿವಾಸಿ ವಿನೋದ್ (23) ಮೃತ ದುರ್ದೈವಿಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಲಾಕಪ್ಡೆತ್ ಆರೋಪ ಮಾಡಲಾಗಿದೆ. ಠಾಣೆ ಪೊಲೀಸರು, ಆತನನ್ನು ಠಾಣೆಯ ಸೆಲ್ನಲ್ಲಿಟ್ಟಿದ್ದಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ವೈದ್ಯಕೀಯ ವರದಿ ಬಳಿಕ ಮೃತನ ಸಾವಿಗೆ ನಿಖರ ಗೊತ್ತಾಗಲಿದೆ. ಪೊಲೀಸರ ಹಲ್ಲೆಯಿ೦ದಲೇ…

Read More

ಹಾವೇರಿ : ಹಾವೇರಿ ನಗರದಲ್ಲಿ ಇಂದಿನಿಂದ ಮೂರು ದಿನ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಬೆಳಗ್ಗೆ 10:30 ಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ನಂತರ ಅಧ್ಯಕ್ಷ ಭಾಷಣ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಸೇರಿ ಅತಿಥಿಗಳಿಗೆ ಭಾಷಣ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಸಮಯ ನಿಗದಿಗೊಳಿಸಿದೆ. ಸಿಎಂ ಬೊಮ್ಮಾಯಿ ಸೇರಿ ಎಲ್ಲಾ ಅತಿಥಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಉದ್ಘಾಟನಾ ಭಾಷಣ ಮಾಡಲು ಮುಖ್ಯಮಂತ್ರಿಗಳಿಗೆ 30 ನಿಮಿಷ ಸಮಯ ನಿಗದಿ, ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರ ಭಾಷಣಕ್ಕೆ 45 ನಿಮಿಷ ನಿಗದಿ, ಬಿಎಸ್ವೈ, ಹೆಚ್ಡಿಕೆ ಸೇರಿ ಗಣ್ಯರಿಗೆ 10 ನಿಮಿಷ ಸಮಯ ನಿಗದಿ ಮಾಡಲಾಗಿದೆ. ಈ ಸಮಯದೊಳಗೆ ಭಾಷಣ ಮಾಡಿ ಮುಗಿಸಬೇಕೆಂಬ ನಿಯಮವನ್ನು ಕನ್ನಡ ಸಾಹಿತ್ಯ ಪರಿಷತ್ ತಂದಿದೆ. ಹೌದು. ಜನವರಿ 06, 07, ಮತ್ತು 08 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ…

Read More

ಮುಂಬೈ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ತಮ್ಮ ರಾಜ್ಯವನ್ನು ಸುರಕ್ಷಿತ ಹೂಡಿಕೆಯ ತಾಣವೆಂದು ಘೋಷಿಸಿದ್ದಾರೆ. ಮುಂಬೈಗೆ ಭೇಟಿ ನೀಡಿದ ಯೋಗಿ ಪ್ರಮುಖ ಬಾಲಿವುಡ್ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಬಲವಾದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ, ಭಯವಿಲ್ಲದೆ ಮತ್ತು ಭೂಮಾಫಿಯಾ ಮುಕ್ತವಾಗಿದೆ ಎಂದು ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದರು. 2017ಕ್ಕಿಂತ ಮೊದಲು ದಿನಕ್ಕೊಂದು ಗಲಭೆಗಳು ನಡೆಯುತ್ತಿದ್ದುದನ್ನು ನೀವು ನೋಡಿರಬೇಕು, ಈಗ ರಾಜ್ಯದಲ್ಲಿ ಕಾನೂನು ಮತ್ತು ಪರಿಸ್ಥಿತಿ ತುಂಬಾ ಪ್ರಬಲವಾಗಿದೆ. ನಾವು ಭೂ ಮಾಫಿಯಾ ವಿರೋಧಿ ಕಾರ್ಯಪಡೆಯನ್ನು ರಚಿಸಿದ್ದೇವೆ ಮತ್ತು ಅವರ ಹಿಡಿತದಿಂದ 64,000 ಹೆಕ್ಟೇರ್ ಭೂಮಿಯನ್ನು ಖಾಲಿ ಮಾಡಿದ್ದೇವೆ. ಇಂದು ಯಾವುದೇ ಗೂಂಡಾಗಳು ಉತ್ತರ ಪ್ರದೇಶದಲ್ಲಿ ಯಾವುದೇ ಉದ್ಯಮಿ ಅಥವಾ ಗುತ್ತಿಗೆದಾರರಿಂದ ತೆರಿಗೆ ಸಂಗ್ರಹಿಸಲು ಅಥವಾ ಕಿರುಕುಳ ನೀಡಲು ಸಾಧ್ಯವಿಲ್ಲ” ಎಂದರು. ಫೆಬ್ರವರಿ 10-12 ರವರೆಗೆ ಲಕ್ನೋದಲ್ಲಿ ನಡೆಯಲಿರುವ 3 ದಿನಗಳ ‘ಯುಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023’ ಪ್ರಚಾರಕ್ಕಾಗಿ ಯೋಗಿ…

Read More

ಜಲ್ಪೈಗುರಿ (ಪಶ್ಚಿಮ ಬಂಗಾಳ): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದಿದ್ದು, ಗುರುತು ಪತ್ತೆ ಹಚ್ಚದಂತೆ ಆಕೆಯ ದೇಹವನ್ನು ಎರಡು ಭಾಗಗಳನ್ನಾಗಿ ಮಾಡಿ, ಕಾಲುವೆಗೆ ಎಸೆದಿರುವ ಘಟನೆ ಜಪಶ್ಚಿಮ ಬಂಗಾಳದ ಸಿಲಿಗುರಿ ಪಟ್ಟಣಲ್ಲಿ ನಡೆದಿದೆ. ತನ್ನ ಪತ್ನಿ ರೇಣುಕಾ ಖಾತುನ್ ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಿದ್ದಾಳೆ ಎಂದು ಶಂಕಿಸಿ, ಮೊಹಮ್ಮದ್ ಅನ್ಸಾರುಲ್ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ನಂತ್ರ, ಆಕೆಯ ಗುರುತನ್ನು ಪತ್ತೆ ಹಚ್ಚದಂತೆ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ ಗೋಣಿಚೀಲಗಳಲ್ಲಿ ಕಟ್ಟಿ ತೆಗೆದುಕೊಂಡು ಹೋಗಿ ಕಾಲುವೆಗೆ ಎಸೆದಿದ್ದಾನೆ. ಮಹಿಳೆ ನಾಪತ್ತೆಯಾದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದರು. ಪತ್ನಿ ನಾಪತ್ತೆಯಾದ 10 ದಿನಗಳ ನಂತರ ವಿಚಾರಣೆ ವೇಳೆ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಲೆ ಮತ್ತು ಮುಂಡವನ್ನು ಎರಡು ಬೇರೆ ಬೇರೆ ಗೋಣಿಚೀಲಗಳಲ್ಲಿ ಹಾಕಿ ಮಹಾನಂದಾ ಕಾಲುವೆಗೆ ಎಸೆದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. https://kannadanewsnow.com/kannada/shimoga-trail-bomb-blast-case-nia-raids-in-6-parts-of-the-state-arrest-of-two-suspected-terrorists/ https://kannadanewsnow.com/kannada/illegal-psi-recruitment-case-conditional-bail-granted-to-26-accused-psi-recruitment-scam-2/ https://kannadanewsnow.com/kannada/shimoga-trail-bomb-blast-case-nia-raids-in-6-parts-of-the-state-arrest-of-two-suspected-terrorists/ https://kannadanewsnow.com/kannada/illegal-psi-recruitment-case-conditional-bail-granted-to-26-accused-psi-recruitment-scam-2/

Read More

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ – 2023ಕ್ಕೆ ( Karnataka Assembly Election 2023 ) ರಾಜ್ಯ ಚುನಾವಣಾ ಆಯೋಗ ( Election Commission ) ಭರ್ಜರಿ ತಯಾರಿ ನಡೆಸಿದೆ. ಈ ಸಂಬಂಧ ಇಂದು 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.  ಈ ಕುರಿತಂತೆ ಟ್ವಿಟ್ ಮಾಡಿ ತಿಳಿಸಿರುವಂತ ರಾಜ್ಯ ಚುನಾವಣಾ ಆಯೋಗವು, ಕರ್ನಾಟಕ ವಿಧಾನಸಭಾ ಚುನಾವಣೆ – 2023 ರ 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಇರುವದನ್ನು http://nvsp.in ಜಾಲತಾಣಕ್ಕೆ ಭೇಟಿ ನೀಡಿ, ಖಚಿತಪಡಿಸಿಕೊಳ್ಳಲು ತಿಳಿಸಿದೆ. https://twitter.com/ceo_karnataka/status/1610973049989529606 ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದಂತ ಪಟ್ಟಿಯ ಅನುಸಾರ, ಪ್ರಸ್ತುತ ರಾಜ್ಯದಲ್ಲಿ ಒಟ್ಟು 5,05,48,553 ಮತದಾರರಿದ್ದಾರೆ. ಪುರುಷರು – 2,54,49,725 ಮಹಿಳೆಯರು – 2,50,94,326, ಇತರರು – 4,502 ಇದ್ದಾರೆ. https://twitter.com/ceo_karnataka/status/1610973100786741250 ರಾಜ್ಯದ ಪ್ರಸ್ತುತ ಅಂತಿಮ ಮತದಾರರ ಪಟ್ಟಿ ಬಿಡುಗಡೆ 7 ಲಕ್ಷ ಯುವ ಮತದಾರರು ಹೊಸದಾಗಿ…

Read More