Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ದೆಹಲಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಎರಡನೇ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಮೊದಲ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನವನ್ನು ಜೂನ್ 2022 ರಲ್ಲಿ ಧರ್ಮಶಾಲಾದಲ್ಲಿ ನಡೆಸಲಾಯಿತು. ಈ ವರ್ಷ, ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನವು ಜನವರಿ 5-7 ರ ನಡುವೆ ನವದೆಹಲಿಯಲ್ಲಿ ನಡೆಯಲಿದೆ. ಮೂರು ದಿನಗಳ ಸಮ್ಮೇಳನವು ರಾಜ್ಯಗಳ ಸಹಭಾಗಿತ್ವದಲ್ಲಿ ತ್ವರಿತ ಮತ್ತು ನಿರಂತರ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವತ್ತ ಗಮನಹರಿಸುತ್ತದೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಇತರ ಹಿರಿಯ ಅಧಿಕಾರಿಗಳು ಮತ್ತು ಡೊಮೇನ್ ತಜ್ಞರನ್ನು ಒಳಗೊಂಡ 200 ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಲು ಇದು ಸಾಕ್ಷಿಯಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಹೇಳಿಕೆ ತಿಳಿಸಿದೆ. ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಮಾನವ ಅಭಿವೃದ್ಧಿಯ ಮೇಲೆ ಒತ್ತು ನೀಡುವ ಮೂಲಕ ಅಭಿವೃದ್ಧಿ…
ವೈರಲ್ ನ್ಯೂಸ್ : ಹೃದಯಾಘಾತದಿಂದ ಮೃತ ಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೀಗ ಇಂದೋರ್‌ನ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://twitter.com/AfrozJournalist/status/1611038354027732992?s=20 ಹೋಟೆಲ್ ಮಾಲೀಕರೊಬ್ಬರು ಜಿಮ್‌ನಲ್ಲಿ ಟ್ರೆಡ್‌ಮಿಲ್ ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಹೃದಯಾಘಾತಗೊಂಡು ಕುಸಿದು ಬಿದ್ದಿ ದ್ದಾರೆ. ಬಳಿಕ ಮೇಜಿನ ಮೇಲೆ ಒರಗಲು ಪ್ರಯತ್ನಿಸಿದ್ದಾರೆ. ಕೂಡಲೇ ಜಿಮ್‌ನಲ್ಲಿದ್ದ ಇತರರು ಓಡಿ ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. https://kannadanewsnow.com/kannada/kannada-sahitya-sammelana-2/ ಪೋಲೀಸರ ಪ್ರಕಾರ, ಇಂದೋರ್‌ನ ಹೋಟೆಲ್ ವೃಂದಾವನದ ಮಾಲೀಕ ಪ್ರದೀಪ್ ರಘುವಂಶಿ ಅವರು ಪ್ರತಿದಿನ ಎರಡು ಗಂಟೆಗಳ ಕಾಲ ಗೋಲ್ಡ್ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ವ್ಯಾಯಾಮ ಮಾಡೋದಕ್ಕೆ ಟ್ರೆಡ್‌ಮಿಲ್ ಬಳಸಿರೋದ್ರಿಂದ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. https://kannadanewsnow.com/kannada/kannada-sahitya-sammelana-2/
ಹಾವೇರಿ : ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಚಾಲನೆ ಸಿಕ್ಕಿದೆ. ಹೌದು. ಏಲಕ್ಕಿ ನಗರಿ ಹಾವೇರಿಯಲ್ಲಿ ಕನ್ನಡ ಕಹಳೆ ಮೊಳಗಿದ್ದು, ಇಂದಿನಿಂದ ಮೂರು ದಿನ ಅಕ್ಷರ ಜಾತ್ರೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಅವರು ಇಂದು 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಇಂದಿನಿಂದ ಮೂರು ದಿನ ಸಮ್ಮೇಳನ ನಡೆಯಲಿದೆ. ಈ ವೇಳೆ ಮಾತನಾಡಿದ ಹೆಬ್ಬಾರ್ ನೆಲ, ಜಲ ಭಾಷೆ ವಿಚಾರದಲ್ಲಿ ರಾಜಿಯೇ ಇಲ್ಲ ಎಂದರು. ಸಿಎಂ ಸೇರಿ ಅತಿಥಿಗಳ ಭಾಷಣಕ್ಕೆ ಸಮಯ ನಿಗದಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸಾಹಿತಿಗಳ ಭಾಷಣಕ್ಕೂ ಸಮಯ ನಿಗದಿ ಮಾಡಲಿ ಎಂದರು. ನಾವು ಬಹಳ ಸಂತೋಷದಿಂದ ಇವತ್ತಿನ ಕಾರ್ಯಕ್ರಮದ ಧ್ವಜಾರೋಹಣ ಮಾಡಿದ್ದೇವೆ. ನಿಗದಿ ಮಾಡಿದ ಏಳು ಗಂಟೆ ಸಮಯಕ್ಕೆ ಧ್ವಜಾರೋಹಣ ಮಾಡಿದ್ದೇವೆ ಎಂದರು. ಹಾವೇರಿಯ…
ಹಾವೇರಿ : ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳ ಸಮ್ಮಿಲನ ಎಂದು ಸಮ್ಮೇಳನಾಧ್ಯಕ್ಷ ದೊಡ್ಡ ರಂಗೇಗೌಡ ಹೇಳಿದರು. ಇಂದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಾಗಿದ್ದು, ಭುವನೇಶ್ವರ ತಾಯಿಗೆ ಆರತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಮ್ಮೇಳನಾಧ್ಯಕ್ಷ ದೊಡ್ಡ ರಂಗೇಗೌಡ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ದೊಡ್ಡ ರಂಗೇಗೌಡ ಸಮ್ಮೇಳನವನ್ನು ಜಾತ್ರೆ ಎಂದು ಎಲ್ಲರೂ ಹೇಳುತ್ತಾರೆ, ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳ ಸಮ್ಮಿಲನವಾಗಿದೆ. ನೆಲ, ಜಲ, ಭಾಷೆ ವಿಚಾರವಾಗಿ ಸಮ್ಮೇಳನ ಪ್ರಭಾವ ಬೀರಲಿದೆ ಎಂದರು. ಏಲಕ್ಕಿ ನಗರಿ ಹಾವೇರಿಯಲ್ಲಿ ಕನ್ನಡ ಕಹಳೆ ಮೊಳಗಿದ್ದು, ಇಂದಿನಿಂದ ಮೂರು ದಿನ ಅಕ್ಷರ ಜಾತ್ರೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಅವರು ಇಂದು 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಇಂದಿನಿಂದ ಮೂರು ದಿನ ಸಮ್ಮೇಳನ ನಡೆಯಲಿದೆ. ಈ ವೇಳೆ ಮಾತನಾಡಿದ ಹೆಬ್ಬಾರ್ ನೆಲ, ಜಲ ಭಾಷೆ ವಿಚಾರದಲ್ಲಿ…
ಬೆಂಗಳೂರು : ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ದಾವಣಗೆರೆಯ 2 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮಲ್ಲಿಕಾರ್ಜುನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜ.5 ಕ್ಕೆ ಮುಂದೂಡಿತ್ತು, ನಿನ್ನೆ ಕೋರ್ಟ್ ವಿಚಾರನೆ ನಡೆಸಿ ಮಲ್ಲಿಕಾರ್ಜುನ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಾಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ಸ್ವೀಕರಿಸಿದ ಕೋರ್ಟ್ ಜ,2 ಕ್ಕೆ ವಿಚಾರಣೆ ಮುಂದೂಡಿತ್ತು. ನಂತರ ನಿರೀಕ್ಷಣಾ ಜಾಮೀನಿನ ಆದೇಶವನ್ನು ಜ.5 ಕ್ಕೆ ಕಾಯ್ದಿರಿಸಿತ್ತು. ಕಾಂಗ್ರೆಸ್ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಒಡೆತನದ ಕಲ್ಲೇಶ್ವರ ಮಿಲ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಜಿಂಕೆ, ಕಾಡು ಹಂದಿ ಸೇರಿ ಇತರೆ ಪ್ರಾಣಿಗಳನ್ನು ಅಕ್ರಮವಾಗಿ ಇಡಲಾಗಿದೆ ಎಂದು ಶಂಕಿಸಿ…
ಬೆಂಗಳೂರು: ಬ್ರಹ್ಮ ರಥೋತ್ಸವದ ನಿಮಿತ್ತ ಇಂದು(ಶುಕ್ರವಾರ) ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸಾರಕ್ಕಿ ಮಾರ್ಕೆಟ್ ಜಂಕ್ಷನ್‌ನಿಂದ ಬನಶಂಕರಿ ಟಿಟಿಎಂಸಿ ಜಂಕ್ಷನ್‌ವರೆಗೆ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ, ವಾಹನ ಬಳಕೆದಾರರಿಗೆ ಪರ್ಯಾಯ ರಸ್ತೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಅದರ ಸಂಪೂರ್ಣ ಪಟ್ಟಿ ಇಲ್ಲಿದೆ. ಕನಕಪುರ ರಸ್ತೆಯಿಂದ ನಗರಕ್ಕೆ ತೆರಳುವ ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಬಸ್‌ಗಳು ಸಾರಕ್ಕಿ ಸಿಗ್ನಲ್‌ನಲ್ಲಿ ಎಡ ತಿರುವು ಪಡೆದು ಇಲ್ಯಾಸ್ ನಗರ ಜಂಕ್ಷನ್, ಕೆಎಸ್ ಲೇಔಟ್ ಜಂಕ್ಷನ್ ಮತ್ತು ಸರ್ವಿಸ್ ರಸ್ತೆ ಮೂಲಕ ಬೇಂದ್ರೆ ವೃತ್ತವನ್ನು ಪ್ರವೇಶಿಸಿ ಯಾರಬ್ ನಗರ ಜಂಕ್ಷನ್ ಮೂಲಕ ಬನಶಂಕರಿ ಟಿಟಿಎಂಸಿ ತಲುಪಬೇಕು. ಕನಕಪುರ ರಸ್ತೆಯಿಂದ ನಗರಕ್ಕೆ ತೆರಳುವ ಲಘು ವಾಹನ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ಸಾರಕ್ಕಿ ಸಿಗ್ನಲ್, ಸಾರಕ್ಕಿ ಮಾರ್ಕೆಟ್ ಜಂಕ್ಷನ್ ಕಡೆಗೆ ಸಾಗಿ ಇಂದಿರಾಗಾಂಧಿ ವೃತ್ತದ ಕಡೆಗೆ ಬಲ ತಿರುವು ಪಡೆಯಬೇಕು. ನಗರ ಕೇಂದ್ರದಿಂದ ಕನಕಪುರ ರಸ್ತೆಗೆ ತೆರಳುವ ಎಲ್ಲಾ ವಾಹನಗಳು ಬನಶಂಕರಿ ಟಿಟಿಎಂಸಿಯಲ್ಲಿ ಬಲ…
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ 11:30 ಕ್ಕೆ ಹಾವೇರಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಹೆಲಿಕಾಪ್ಟರ್ ಮೂಲಕ ಇಂದು ಬೆಳಗ್ಗೆ 11:30 ಕ್ಕೆ ಹಾವೇರಿಗೆ ಆಗಮಿಸಲಿದ್ದು, ನಂತರ ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಸಿಎಂ ಬೊಮ್ಮಾಯಿ ಮಧ್ಯಾಹ್ನ ತುಮಕೂರು ಜಿಲ್ಲೆಯ ಶಿರಾದತ್ತ ಪ್ರಯಾಣ ಬೆಳೆಸಲಿದ್ದು, ಅಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. https://kannadanewsnow.com/kannada/kalaburagi-kidnap-case-victims-arrested/ https://kannadanewsnow.com/kannada/mangaluru-blast-case-suspected-student-rihan-sheikhs-house-was-arrested-by-nia-officials/ https://kannadanewsnow.com/kannada/kalaburagi-kidnap-case-victims-arrested/
ಕಲಬುರಗಿ : ಶಾಲಾ ಬಾಲಕನನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜ. 4 ರಂದು ಶಾಲಾ ಬಾಲಕನನ್ನು ಖದೀಮರು ಅಪಹರಿಸಿದ್ದರು, ನಂತರ ಬಾಲಕನ ತಂದೆಗೆ ಕರೆಮಾಡಿ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಬಾಲಕನ ತಂದೆ ದೂರಿನ ಹಿನ್ನೆಲೆ ಅಲರ್ಟ್ ಆದ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಗುರುನಾಥ್ ರಾಠೋಡ್ ಎನ್ನುವ ಸರ್ಕಾರಿ ಶಾಲಾ ಶಿಕ್ಷಕ ಗುರುನಾಥನ ಪುತ್ರ ಸುದರ್ಶನನನ್ನು ಆಟೋದಲ್ಲಿ ಅಪಹರಣ ಮಾಡಿದ್ದರು ನಂತರ ನಂತರ ಶಿಕ್ಷಕ ಗುರುನಾಥ್ಗೆ ಅಪಹರಣಕಾರರು ಕರೆ ಮಾಡಿದ್ದು, ನಿಮ್ಮ ಮಗ ಜೀವಂತ ಬೇಕಾದ್ರೆ ಹತ್ತು ಲಕ್ಷ ಹಣ ನೀಡಬೇಕು ಅಂತ ಬೇಡಿಕೆ ಇಟ್ಟಿದ್ದರು, ಹಣ ಕೊಡದೇ ಇದ್ದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು. ಆದ್ರೆ ಈ ಬಗ್ಗೆ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ಶಿಕ್ಷಕ ಗುರುನಾಥ್ ಮಾಹಿತಿ ನೀಡಿದ್ದರು. ಬಂಧಿತರನ್ನು ಅರುಣ್ ಭಜಂತ್ರಿ , ಲಕ್ಷಣ್ ಭಜಂತ್ರಿ ಎಂದು…
ಬಿಹಾರ: ಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ಮೇಲೆ ಕಲ್ಲು ತೂರಾಟ ನಡೆಸಿದ ಮೂವರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಮಂಗಳವಾರ ಕಲ್ಲು ತೂರಾಟ ನಡೆದಿದೆ. ಇದನ್ನು ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ರೈಲಿಗೆ ಕಲ್ಲು ಎಸೆದ ಅಪ್ರಾಪ್ತರನ್ನು ರೈಲ್ವೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಅವರನ್ನು ಬಂಧಿಸಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಪದೇ ಪದೇ ಕಲ್ಲು ತೂರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಹೌರಾ ಮತ್ತು ನ್ಯೂ ಜಲ್ಪೈಗುರಿ ರೈಲು ನಿಲ್ದಾಣಗಳ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಈ ಮಾರ್ಗದಲ್ಲಿ ವಾಣಿಜ್ಯ ಸೇವೆ ಜನವರಿ 1 ರಂದು ಪ್ರಾರಂಭವಾಯಿತು. https://kannadanewsnow.com/kannada/shocking-video-indore-man-dies-of-heart-attack-during-workout-in-gym-2/ https://kannadanewsnow.com/kannada/mangaluru-blast-case-suspected-student-rihan-sheikhs-house-was-arrested-by-nia-officials/ https://kannadanewsnow.com/kannada/shocking-video-indore-man-dies-of-heart-attack-during-workout-in-gym-2/ https://kannadanewsnow.com/kannada/mangaluru-blast-case-suspected-student-rihan-sheikhs-house-was-arrested-by-nia-officials/
ಉಡುಪಿ : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಶಂಕೆ ಹಿನ್ನೆಲೆ ವಿದ್ಯಾರ್ಥಿ ರಿಹಾನ್ ಶೇಖ್ ನನ್ನು ವಶಕ್ಕೆ ಪಡೆದುಕೊಂಡಿತ್ತು, ಇದೀಗ ಆತನ ಮನೆಯ ಮಹಜರು ನಡೆಸಲಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಲ್ಲಿ ಬೆಂಗಳೂರಿನ ಎನ್ ಐ ಎ ಆಧಿಕಾರಿಗಳಿಂದ ಮಹಜರು ಕಾರ್ಯ ನಡೆದಿದ್ದು, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಇದೇ ವೇಳೆ ರಿಹಾನ್ ಕುಟುಂಬದವರ ವಿಚಾರಣೆ ನಡೆಸಲಾಯಿತು. https://kannadanewsnow.com/kannada/case-of-finding-10-5-lakh-cash-in-vidhansouda-illegal-charge-against-the-police/ https://kannadanewsnow.com/kannada/akshara-jatre-at-elakki-nagari-haveri-minister-shivram-hebbar-hoisted-the-flag/