Author: KNN IT TEAM

ಲಾಸ್ ಏಂಜಲೀಸ್: ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕಾರಣ ವ್ಯಕ್ತಿಯೊಬ್ಬ ತನ್ನ ಐದು ಮಕ್ಕಳೂ ಸೇರಿದಂತೆ ಕುಟುಂಬದ ಏಳು ಜನರನ್ನು ಗುಂಡಿಕ್ಕಿ ಕೊಂದು ತಾನೂ ಸಾವಿಗೆ ಶರಣಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಬುಧವಾರ ಮನೆಯಲ್ಲಿ ಒಂದೇ ಕುಟುಂಬದ ಮೂವರು ವಯಸ್ಕರು ಮತ್ತು ಐದು ಮಕ್ಕಳ ಶವಗಳನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇವರೆಲ್ಲರೂ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಯಲ್ಲಿ ಏಳು ಮಂದಿಯನ್ನು ಕೊಂದ ನಂತರ ಆರೋಪಿ 42 ವರ್ಷದ ಮೈಕೆಲ್ ಹೈಟ್ ತಾನೂ ಕೂಡ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಮೃತರನ್ನು ಮೈಕೆಲ್ ಹೈಟ್ ಅವರ ಪತ್ನಿ, ಆಕೆಯ ತಾಯಿ ಮತ್ತು ದಂಪತಿಯ ಐದು ಮಕ್ಕಳು ಎನ್ನಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಡಿಸೆಂಬರ್ 21 ರಂದು ಮೈಕೆಲ್ ಹೈಟ್ ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿಸಲ್ಲಿಸಿದ್ದಾರೆ. ಇದೇ ಈ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. https://kannadanewsnow.com/kannada/jk-inalienable-part-of-india-govt-slams-pakistan/ https://kannadanewsnow.com/kannada/contractor-santop-patil-suicide-case-trouble-for-eshwarappa-again/ https://kannadanewsnow.com/kannada/jk-inalienable-part-of-india-govt-slams-pakistan/ https://kannadanewsnow.com/kannada/contractor-santop-patil-suicide-case-trouble-for-eshwarappa-again/

Read More

ಬೆಂಗಳೂರು : ವಿಧಾನಸೌಧದಲ್ಲಿ ಪತ್ತೆಯಾದ ಹಣಕ್ಕೂ ಸಚಿವ ಸಿಸಿ ಪಾಟೀಲ್ ಗೂ ಸಂಬಂಧ ಇದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಆರೋಪಕ್ಕೆ ಸಚಿವ ಸಿಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದೆ. ಪೊಲೀಸರು ತನಿಖೆ ಮಾಡಿದ್ರೆ ಗೊತ್ತಾಗುತ್ತದೆ, ಹಣ ಕೊಡುವುದಾದರೆ ನನಗೆ ನೇರವಾಗಿ ಕೊಡ್ತಾ ಇದ್ದರು ಎಂದು ಕಾಂಗ್ರೆಸ್ ಆರೋಪಕ್ಕೆ ಸಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಏನಿದು ಕಾಂಗ್ರೆಸ್ ಆರೋಪ ಜಗದೀಶ್ ನಿನ್ನೆ ಸಂಜೆ 5.30 ಸುಮಾರಿಗೆ 10 ಲಕ್ಷದೊಂದಿಗೆ ವಿಧಾನಸೌಧಕ್ಕೆ ಬರುತ್ತಾರೆ. ಅದೇ ಸಮಯದಲ್ಲಿ ವಿಧಾನಸೌಧದಲ್ಲಿ ಸಚಿವ ಸಿಸಿ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿರುತ್ತಾರೆ. ಸಚಿವರ ಹೊರತಾಗಿ ವಿಧಾನಸೌಧದ ಕೆಲಸದ ಅವಧಿ ಮುಗಿದು ಬಹುತೇಕ ಖಾಲಿಯಾಗಿರುತ್ತದೆ. ಈ ಹಣಕ್ಕೂ, ಆ ಸಚಿವರಿಗೂ ಸಂಬಂಧವಿದೆಯೇ? ಸರ್ಕಾರ ರಹಸ್ಯ ಕಾಪಾಡುತ್ತಿರುವುದೇಕೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. https://kannadanewsnow.com/kannada/contractor-santop-patil-suicide-case-trouble-for-eshwarappa-again/ https://kannadanewsnow.com/kannada/odisha-cm-patnaik-inaugurates-countrys-biggest-hockey-stadium-in-rourkela/

Read More

ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು 370 ನೇ ವಿಧಿಯು ಸಂಪೂರ್ಣವಾಗಿ ಭಾರತದ ವಿಷಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ಪುನರುಚ್ಚರಿಸಿದೆ. ಜಮ್ಮು ಮತ್ತು ಕಾಶ್ಮೀರದ ಕುರಿತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಟ್ವೀಟ್‌ಗಳಿಗೆ ಎಂಇಎ ಪ್ರತಿಕ್ರಿಯಿಸಿದೆ. ಸಾಪ್ತಾಹಿಕ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ MEA ವಕ್ತಾರ ಅರಿಂದಮ್ ಬಾಗ್ಚಿ, “ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಅವಿಭಾಜ್ಯ ಅಂಗವಾಗಿದೆ ಎಂದು ನಾವು ಪುನರುಚ್ಚರಿಸಿದ್ದೇವೆ. 370 ನೇ ವಿಧಿಯು ಸಂಪೂರ್ಣವಾಗಿ ಭಾರತ ಮತ್ತು ನಮ್ಮ ಸಂವಿಧಾನದ ವಿಷಯವಾಗಿದೆ ಮತ್ತು ಇದು ಸಾರ್ವಭೌಮ ವಿಷಯವಾಗಿದೆ. ಇದರಲ್ಲಿ ಅವರ ಸ್ಥಾನ ಏನು ಎಂಬುದು ನಮಗೆ ಕಾಣುತ್ತಿಲ್ಲ” ಎಂದಿದ್ದಾರೆ. We’ve reiterated that J&K is an inalienable & integral part of India. Article 370 is entirely a matter of India as…

Read More

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪಗೆ ಮತ್ತೆ ಸಂಕಷ್ಟ ಬಂದಿದೆ. ಈ ಪ್ರಕರಣದಲ್ಲಿ ಸಲ್ಲಿಸಿರುವ ಬಿ ರಿಪೋರ್ಟ್‍ನ ಸಂಪೂರ್ಣ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ನೀಡುವಂತೆ ಆದೇಶಿಸಿದೆ. 42ನೇ ವಿಶೇಷ ನ್ಯಾಯಾಲಯ ಆದೇಶಿಸಿದ್ದು ಜನವರಿ 31ರೊಳಗೆ ಎಲ್ಲಾ ಸಾಕ್ಷ್ಯಗಳನ್ನು ಕೋರ್ಟ್‍ಗೆ ಸಲ್ಲಿಸಿ ಎಂದು ಸೂಚನೆ ನೀಡಿದೆ.ಈ ಹಿಂದೆ ಕುಟುಂಬಸ್ಥರು ಬಿ ರಿಪೋರ್ಟ್ ಪ್ರಶ್ನಿಸಿ, ಕೋರ್ಟ್ ಮೊರೆ ಹೋಗಿದ್ದರು. https://kannadanewsnow.com/kannada/fire-breaks-out-in-bus-carrying-tourists-near-chamundi-hill/ ಆ ಸಂದರ್ಭದಲ್ಲಿ ದಾಖಲಾತಿ ನೀಡಿದ್ದ ಉಡುಪಿ ಪೊಲೀಸರು ಸಂಪೂರ್ಣ ದಾಖಲಾತಿ ಸಲ್ಲಿಕೆಗೆ ಹಿಂದೇಟು ಹಾಕಿದ್ದರು. ಇದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ನ್ಯಾಯಾಲಯದ ಹೊಸ ಆದೇಶ ಹೊರಡಿಸಿದೆ.ಕೆಲವೊಂದು ಸಾಕ್ಷ್ಯಗಳಲ್ಲಿ ಸಂತೋಷ್ ಪಾಟೀಲ್ ಮಾಜಿ ಸಚಿವ ಈಶ್ವರಪ್ಪ ಪಿಎಗೆ ಹಣ ನೀಡಿರುವುದು ವಾಟ್ಸಪ್ ಚಾಟ್‍ನಲ್ಲಿ ಬಹಿರಂಗವಾಗಿದೆ. ಸಂತೋಷ್ ಪಾಟೀಲ್ ಮಾಜಿ ಸಚಿವ ಈಶ್ವರಪ್ಪ ಪಿಎ ಜೊತೆ ನಡೆಸಿರುವ ವಾಟ್ಸಪ್ ಚಾಟ್ ಪ್ರತಿ ಕೂಡ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಮೂಲಕ ಈಶ್ವರಪ್ಪಗೆ ಸಂತೋಷ್…

Read More

ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಒಂದು ಗದ್ದೆಗೆ ಪಲ್ಟಿ ಹೊಡೆದು 32 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ಪೇಟೆ ತಾಲೂಕಿನ ಮುರುಕನಹಳ್ಳಿ ಬಳಿ ಚನ್ನರಾಯಪಟ್ಟಣ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಗದಗದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, ಪಕ್ಕದ ಗದ್ದೆಗೆ ಉರುಳಿದೆ. ಪರಿಣಾಮ ಬಸ್ನಲ್ಲಿದ್ದ 32 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಗೊಂಡವರಿಗೆ ಕೆಆರ್ ಪೇಟೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. https://kannadanewsnow.com/kannada/odisha-cm-patnaik-inaugurates-countrys-biggest-hockey-stadium-in-rourkela/ https://kannadanewsnow.com/kannada/another-leopard-that-fell-to-boni-in-mandya-people-who-sighed/

Read More

ಬಲೂಚಿಸ್ತಾನ : ಭಾನುವಾರ ಕ್ವೆಟ್ಟಾದ 50 ವರ್ಷದ ಸರ್ದಾರ್ ಹಾಜಿ ಜಾನ್ ಮೊಹಮ್ಮದ್ ಅವರು ತಮ್ಮ ‘60ನೇ’ ಮಗುವನ್ನು ಸ್ವಾಗತಿಸಿದರು. https://kannadanewsnow.com/kannada/watch-hotelier-dies-of-heart-attack-while-working-out-at-gym-shocking-video/ ಮೊಹಮ್ಮದ್‌ಗೆ ಮೂವರು ಹೆಂಡತಿಯರಿದ್ದಾರೆ ಮತ್ತು ಅವರು ಹೆಚ್ಚಿನ ಮಕ್ಕಳನ್ನು ಹೊಂದಲು ಯೋಜಿಸಿದ್ದಾರೆ. ಅವನ ಹೆಂಡತಿಯರೂ ಅದನ್ನೇ ಬಯಸುತ್ತಾರೆ. ಈಗ ಮೂರು ಮಹಿಳೆಯರನ್ನು ವಿವಾಹವಾಗಿದ್ದಾನೆ ಅವನು ಬಹುದೊಡ್ಡ  ಕುಟುಂಬ ಹೊಂದಿದ ವ್ಯಕ್ತಿ ಎಂಬುದಕ್ಕೆ ಹೆಸರುವಾಸಿಯಾಗಿದ್ದಾನೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಅವರ ಐದು ಮಕ್ಕಳು ಅಲ್ಲಾಗೆ ಪ್ರಿಯರಾಗಿದ್ದಾರೆ, ಉಳಿದ 55 ಮಂದಿ ಇನ್ನೂ ಜೀವಂತವಾಗಿದ್ದಾರೆ ಮತ್ತುಆರೋಗ್ಯವಂತಾಗಿದ್ದಾರೆ ಎಂದು ಹೇಳಿಕೊಂಡಿದ್ದಾನೆ. https://kannadanewsnow.com/kannada/watch-hotelier-dies-of-heart-attack-while-working-out-at-gym-shocking-video/ ತಾನು ಇಷ್ಟಕ್ಕೆ ಮಕ್ಕಳನ್ನು ಪಡೆಯುವುದನ್ನು ನಿಲ್ಲಿಸುವುದಿಲ್ಲ ಮತ್ತು ‘ಅಲ್ಲಾ ಇಚ್ಛೆಯಿದ್ದಲ್ಲಿ ಇನ್ನಷ್ಟು ಮಕ್ಕಳನ್ನು ಪಡೆಯುವೆ ́ ಎಂದು ಅವರು ಹೇಳಿದ್ದಾರೆ. ಇದನ್ನು ಸಾಧಿಸಲು, ಅವರು ನಾಲ್ಕನೇ ಬಾರಿಗೆ ಮದುವೆಯಾಗುವ ಬಗ್ಗೆ ಸೂಚನೆ ನೀಡಿದಂತಾಗಿದೆ. ಸರ್ದಾರ್ ಜಾನ್ ಮೊಹಮ್ಮದ್ ಖಾನ್ ಖಿಲ್ಜಿ, ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಪೂರ್ವ ಬೈಪಾಸ್ ಬಳಿ ವಾಸಿಸುತ್ತಿದ್ದಾರೆ. ಅವರು ಅದೇ ನೆರೆಹೊರೆಯಲ್ಲಿ ಕ್ಲಿನಿಕ್ ಹೊಂದಿರುವ…

Read More

ರೂರ್ಕೆಲಾ(ಒಡಿಶಾ): ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್(Naveen Patnaik) ಅವರು ಗುರುವಾರ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣವಾದ ಒಡಿಶಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣ(Birsa Munda International Hockey Stadium)ವನ್ನು ಉದ್ಘಾಟಿಸಿದರು. ಜನವರಿ 13 ರಿಂದ ಪ್ರಾರಂಭವಾಗುವ FIH ಪುರುಷರ ಹಾಕಿ ವಿಶ್ವಕಪ್ 2023 ರ ಮೊದಲು ಸೌಲಭ್ಯವನ್ನು ತೆರೆಯುವುದಾಗಿ ಪಟ್ನಾಯಕ್ ಘೋಷಿಸಿದರು. ಇಡೀ ರಾಷ್ಟ್ರಕ್ಕೆ ಈ ಕ್ರೀಡಾಂಗಣ ಒಡಿಶಾದ ಕೊಡುಗೆಯಾಗಿದೆ ಎಂದು ಪಟ್ನಾಯಕ್ ಹೇಳಿದ್ದಾರೆ. The World Cup Village at Rourkela was inaugurated by Hon’ble Chief Minister of Odisha Shri Naveen Patnaik today. He met the Indian Hockey team and encouraged them for the upcoming FIH Odisha Hockey Men’s World Cup 2023 Bhubaneswar-Rourkela.#IndiaKaGame #HockeyIndia pic.twitter.com/gyZXK4gaYS — Hockey India (@TheHockeyIndia) January 5, 2023 44 ಪಂದ್ಯಗಳ ಪೈಕಿ 20 ಪಂದ್ಯಗಳಿಗೆ ರೂರ್ಕೆಲಾ…

Read More

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅನಾಹುತವೊಂದು ತಪ್ಪಿದೆ. ಚಾಮುಂಡಿಬೆಟ್ಟ ದ ಬಸ್‌ ನಿಲ್ದಾಣದ ಸಮೀಪ ಸುಮಾರು 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅವಘಡ  ಸಂಭವಿಸುವುದು ತಪ್ಪಿದೆ. https://kannadanewsnow.com/kannada/head-on-collision-between-truck-and-bus-in-bagalkot-student-dies-on-the-spot/ ಗುಜರಾತ್ ನಿಂದ ಬಸ್‍ನಲ್ಲಿ ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬಂದಿದ್ದರು. ಆದರೆ ಬೆಟ್ಟದ ಸಮೀಪ ಇರುವ ಬಸ್ ನಿಲ್ದಾಣದಲ್ಲಿ ಡಿಸೇಲ್ ಲೀಕೇಜ್ ನಿಂದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನ ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದ ಹಾಗೆ ಹೊಗೆ ಬರಲಾರಂಭಿಸಿದೆ. ಬಳಿಕ ಪೈಪ್ ನಿಂದ ಬೆಂಕಿ ಕಾಣಿಸಿಕೊಂಡಿದೆ.ಇದನ್ನು ಗಮನಿಸಿದ ಚಾಲಕ ಕೂಡಲೇ ಬೆಂಕಿಯ ಸಂಪರ್ಕದ ವಯರ್ ಗಳನ್ನು ಕಟ್ ಮಾಡಿದ್ದಾರೆ. ಇತ್ತ ಪ್ರವಾಸಿಗರನ್ನು ತಕ್ಷಣವೇ ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಪರಿಣಾಮ ಪ್ರಯಾಣಿಕರು ದೊಡ್ಡ ಅವಘಡದಿಂದ ಪಾರಾಗಿದ್ದಾರೆ.

Read More

ಮಂಡ್ಯ : ಮಂಡ್ಯದಲ್ಲಿ ಇಂದು ಮತ್ತೊಂದು ಚಿರತೆ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಪಾಂಡವಪುರ ತಾಲೂಕಿನ  ಚಿಕ್ಕಕೊಪ್ಪಲಿನಲ್ಲಿ ಇಂದು ಬೋನಿಗೆ ಚಿರತೆ ಬಿದ್ದಿದೆ. ಡಿ.12 ಹಾಗೂ 27 ರಂದು ಎರಡು ಚಿರತೆಗಳನ್ನು ಸೆರೆಹಿಡಿಯಲಾಗಿತ್ತು, ಇದೀಗ ಮತ್ತೊಂದು ಚಿರತೆ ಸೆರೆಹಿಡಿಯಲಾಗಿದೆ. ಪಾಂಡವಪುರ ತಾಲೂಕಿನ ರೈತ ಶಿವರಾಮ್ ತೋಟದಲ್ಲಿ ಅಡಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಡುವ ಮೂಲಕ ಸೆರೆ ಹಿಡಿದಿದ್ದಾರೆ. ಗ್ರಾಮದ ಜನರ ಮನವಿ ಮೇರೆಗೆ ಬೋನ್ ಇಟ್ಟಿದ ಅರಣ್ಯ ಇಲಾಖೆ  ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. https://kannadanewsnow.com/kannada/kannada-sahitya-sammelana-2/ https://kannadanewsnow.com/kannada/head-on-collision-between-truck-and-bus-in-bagalkot-student-dies-on-the-spot/

Read More

ಬಾಗಲಕೋಟೆ: ಕ್ಯಾಂಟರ್‌ ಲಾರಿ ಹಾಗೂ ಕೆಎಸ್‌ ಆರ್‌ ಟಿಸಿ ಬಸ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಈ ಅವಘಡದಲ್ಲಿ ಸುಮಾರು 14 ಮಂದಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆಯ ಗದ್ದನಕೇರಿ ಬಳಿ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿ ರಾಹುಲ್ ಪಾಟೀಲ್ ಸಾವನ್ನಪ್ಪಿದ್ದಾನೆ. ಬಸ್‌ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿತ್ತು. ಈ ವೇಳೆ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಕ್ಯಾಂಟರ್‌ ಲಾರಿ ಹೊರಟಿತ್ತು. ಆದರೆ ಕ್ಯಾಂಟರ್‌ ಲಾರಿ ಚಾಲಕ ಅತೀ ವೇಗದಿಂದ ಬಂದು ಬಸ್‌ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮವಾಗಿ ಪಿಯುಸಿ ವಿದ್ಯಾರ್ಥಿ ರಾಹುಲ್‌ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಾಲಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/kannada-sahitya-sammelana/

Read More