Author: KNN IT TEAM

ಕಲಬುರಗಿ: ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ ರಾಜ್ಯ ಅನ್ನೋ ಬಿರುದು ಸಿಕ್ಕಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. https://kannadanewsnow.com/kannada/construction-of-ram-temple-at-ramdevara-betta-dc-asked-to-submit-official-proposal/ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷ ಎಂದಿದ್ದಾರೆ. ಬಿಜೆಪಿ ವಿಧಾನಸೌಧೌವನ್ನು ದೊಡ್ಡ ಶಾಪಿಂಗ್‌ ಮಾಲ್‌ ಮಾಡಿದ್ದಾರೆ. ಈ ಶಾಪಿಂಗ್‌ ಮಾಲ್‌ ನಲ್ಲಿ ವರ್ಗಾವಣೆ, ಪೋಸ್ಟಿಂಗ್‌ ಕಾಮಗಾರಿ ನಡೆಯುತ್ತದೆ. ಉದ್ಯೋಗ ಖರೀದಿ ಮಾಡಬಹುದು ಎಂದು ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ಉತ್ತಮ ಸೇಲ್ಸ್‌ ಮ್ಯಾನ್ ಗಳಿದ್ದಾರೆ. ಮಂತ್ರಿಗಳು , ಶಾಸಕರು, ಅಧಿಕಾರಿಗಳೇ ಸೇಲ್ಸ್‌ ಮ್ಯಾನ್‌ ಗಳಾಗಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ. https://kannadanewsnow.com/kannada/construction-of-ram-temple-at-ramdevara-betta-dc-asked-to-submit-official-proposal/

Read More

ಬೆಂಗಳೂರು : ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2022-23 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈ ಹಿಂದೆ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳ ಹಿತದೃಷ್ಟಿ ಹಿನ್ನೆಲೆ ಅರ್ಜಿ ಸಲ್ಲಿಸುವ ಅವಧಿಯನ್ನು 31:01:2023 ರವರೆಗೆ ವಿಸ್ತರಿಸಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಲಾಗಿದೆ. ಜ.31 ರವರೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಮತ್ತು ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ ವಿಳಾಸ ಹಾಗೂ ಹೆಚ್ಚಿನ ಮಾಹಿತಿಗಾಗಿ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಸಂಬಂಧಿಸಿದ ಹಾಗೂ…

Read More

ಮಹಾರಾಷ್ಟ್ರ: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಗುರುವಾರ (ಜನವರಿ 5) ರಾತ್ರಿ ವೈದ್ಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಆರೋಪಿ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಘಟನೆ ಕುರಿತು ಮಾತನಾಡಿದ ಯವತ್ಮಾ ಪೊಲೀಸ್ ವರಿಷ್ಠಾಧಿಕಾರಿ, “ಆರೋಪಿ ಸೂರಜ್ ಠಾಕೂರ್ ಯವತ್ಮಾಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿ ಎರಡು ದಿನಗಳ ಹಿಂದೆ ತನ್ನ ಬಳಿ ಚಾಕುವನ್ನು ಇಟ್ಟುಕೊಂಡಿದ್ದಾನೆ. ಚಿಕಿತ್ಸೆ ನೀಡಲು ವೈದ್ಯರು ಬಂದಾಗ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ. Maharashtra | Accused Suraj Thakur was admitted at Yavatmal Medical College Hospital. The accused had stabbed himself two days ago. He’s a mentally unstable person. While the doctor was on rounds, the accused attacked him with a knife. Accused arrested: SP, Yavatmal — ANI…

Read More

ಬೆಂಗಳೂರು :  ಮಾಜಿ ಸಿಎಂ  ಸಿದ್ದರಾಮಯ್ಯ ದಿನನಿತ್ಯ  ವಿವಾದಾತ್ಮಕ ಹೇಳಿಕೆ ನೀಡುವ ಬಗ್ಗೆ  ಕೇಸರಿ ಪಡೆ ಕೆಂಡಾಮಂಡಲಾಗಿದ್ದು ಟಿಟ್ಟರ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ಕಾಲೆಳೆದಿದ್ದಾರೆ. ಬಿಜೆಪಿ ಟ್ಟಿಟ್ಟರ್‌ನಲ್ಲಿ  ʻಸನಾತನ ಹಿಂದೂ ಧರ್ಮೀಯರು ಕೊಲೆಗಡುಕರು ʼಎನ್ನುವ ಮೂಲಕ 100ಕೋಟಿ ಹಿಂದೂಗಳಿಗೆ ಸಿದ್ದರಾಮಯ್ಯ ಅವಮಾನ ಮಾಡಿರುವುದು ಅವರ ವಿಕೃತಿಗೆ ಹಿಡಿದ ಕೈಗನ್ನಡಿ, ಪದೇಪದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅವರ ಈ ಚಾಳಿಯಿಂದ ಅವರ ಮಾನಸಿಕ ಆರೋಗ್ಯದ ಬಗ್ಗೆ ನಮಗೆ ಚಿಂತೆಯಿದೆ, ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ ಎಂದು ಬಿಜೆಪಿ ಕಾಲೆಳೆದಿದ್ದಾರೆ https://twitter.com/BJP4Karnataka/status/1610931737512611846?s=20&t=W3OZiYwkKKSZB_ChOcurhg

Read More

ಬೆಂಗಳೂರು: ವಿಧಾನಸೌಧಕ್ಕೆ ಆಗಮಿಸಿದ್ದಂತ ಎಇ ಜಗದೀಶ್ ಎಂಬುವರ ಬಳಿಯಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ಈ ಸಂಬಂಧ ನಗದು ಜಪ್ತಿ ಮಾಡಿದ್ದಂತ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ನಿನ್ನೆ ವಿಚಾರಣೆ ವೇಳೆ ಪತ್ತೆಯಾದ ನಗದು ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ, ಎಇ ಜಗದೀಶ್ ಅನ್ನು ಬಂಧಿಸಿದ್ದಾರೆ. ಇನ್ನೂ, ಕೂಡ ಜಗದೀಶ್ ಸಿಕ್ಕಿರುವ ಹಣದ ಬಗ್ಗೆ ಮಾಹಿತಿ ನೀಡದೇ ಇರುವ ಕಾರಣ ಹಣದ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ. ಈ ಹಿನ್ನೆಲೆ ಇಂದು ಜಗದೀಶ್ ನನ್ನು ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆ ಇದ್ದು, ನಂತರ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಜಗದೀಶ್ ಪರ ವಕೀಲ ರಾಜು ವಡೇಕರ್ ಟ್ವೀಟ್ ಘಟನೆ ಕುರಿತು ಜಗದೀಶ್ ಪರ ವಕೀಲ ರಾಜು ವಡೇಕರ್ ಟ್ವೀಟ್ ಮಾಡಿದ್ದು, ಡಿಸಿಪಿ ಅಣತಿಯಂತೆ ಜಗದೀಶ್ ರನ್ನು ಪೊಲೀಸರು ಅಕ್ರಮವಾಗಿ ಕೂಡಿ ಹಾಕಿದ್ದಾರೆ, ನಮ್ಮ ಮನವಿಯನ್ನು ಕೂಡ ಸ್ವೀಕರಿಸಲಿಲ್ಲ ಎಂದು ಕಿಡಿಕಾರಿದ್ದಾರೆ. ವಕೀಲರ ಮನವಿಯನ್ನು ಸ್ವೀಕರಿಸಲು…

Read More

ಕಲಬುರಗಿ  : ಜಿಲ್ಲೆಯ ಆಳಂದ ಬಸ್‌ ಡಿಪ್ಪೋ ದ ಬಳಿ ಇಬ್ಬರು ಮಕ್ಕಳ ಜತೆ ಬಾವಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘೋರ ದುರಂತ ಘಟನೆ ಬೆಳಕಿಗೆ ಬಂದಿದೆ.  https://kannadanewsnow.com/kannada/the-seed-of-communalism-is-being-produced-from-the-lab-of-hindutva-on-the-coast-itself-siddaramaiah-created-controversy/ ಸಿದ್ದು ಮಹಾಮಲ್ಲಪ್ಪ (35), ಶ್ರೇಯಾ(11), ಮನೀಶ್‌(12) ಆತ್ಮಹತ್ಯೆಗೈದವರು ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬಾವಿಯಿಂದ ಮಕ್ಕಳ ಮೃತದೇಹ ಹೊರಗೆ ತೆಗೆಯಾಗಿದೆ. ತಂದೆ ಸಿದ್ದು ಮಹಾಮಲ್ಲಪ್ಪ ಶವಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮೃತ ದುರ್ಧೈವಿಗಳು ಆಳಂದ ಪೊಟ್ಟಣದ ಶರಣ ನಗರ ನಿವಾಸಿಗಳು ಎಂದು ಗುರುತಿಸಲಾಗಿದೆ.  ಈ ಘಟನೆ ಸಂಬಂದ  ಆಳಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. https://kannadanewsnow.com/kannada/the-seed-of-communalism-is-being-produced-from-the-lab-of-hindutva-on-the-coast-itself-siddaramaiah-created-controversy/

Read More

ರಾಮನಗರ: ರಾಮನಗರದ ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಮಮಂದಿರ ನಿರ್ಮಾಣಕ್ಕೆ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. https://kannadanewsnow.com/kannada/contractor-santop-patil-suicide-case-trouble-for-eshwarappa-again/ ಮಂದಿರ ಅಭಿವೃದ್ಧಿ ಸಮಿತಿ ರಚಿಸಿ, ಸೂಕ್ತ ಪ್ರಸ್ತಾವನೆ ಸಲ್ಲಿಸಲು ರಾಮನಗರ ಡಿಸಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್​ಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಂದ ರಾಮನಗರ ಡಿಸಿಗೆ ಪತ್ರ ಬಂದಿದೆ.ರಾಮದೇವರಬೆಟ್ಟದಲ್ಲಿ ರಾಮಮಂದಿರ ಸಂಬಂಧ ಪ್ರಸ್ತಾಪಿತ 19 ಎಕರೆಯ ಭೂದಾಖಲೆಗಳ ಸಂಪೂರ್ಣ ‌ಮಾಹಿತಿ ಕಲೆ ಹಾಕಿ, ತಮ್ಮ ಸ್ಪಷ್ಟ ಅಭಿಪ್ರಾಯದ ಮೂಲಕ ಅಗತ್ಯ ಪ್ರಸ್ತಾಪನೆಯನ್ನು ತ್ವರಿತವಾಗಿ ಕಳಿಸುವಂತೆ ಸೂಚಿಸಲಾಗಿದೆ.

Read More

ದಕ್ಷಿಣಕನ್ನಡ : ” ಕೋಮುವಾದದ ಬೀಜ  ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಲ್ಯಾಬ್‌ “ನಿಂದಲೇ ಉತ್ಪತ್ತಿಯಾಗುತ್ತಿದೆ  ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. https://kannadanewsnow.com/kannada/mandya-police-fight-for-site/ ಹರೇಕಳ ಕಡವಿನ ಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಬಿಜೆಪಿಯವರು  ಜನರಿಗೆ ಕೊಟ್ಟ ಭರವಸೆ ಮರೆತು ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಬಿಜೆಪಿಯವರಿಗೆ ಅಸಮಾನತೆಯ ಸಮಾಜ ಬೇಕಿದೆ. ಕೋಮುವಾದದ ಬೀಜ  ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಲ್ಯಾಬ್‌”ನಿಂದಲೇ ಉತ್ಪತ್ತಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ. https://kannadanewsnow.com/kannada/mandya-police-fight-for-site/ ಈಗಿನ ಮುಖ್ಯಮಂತ್ರಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿ, ಆರ್ ಎಸ್ ಎಸ್ ಮುಖ್ಯಮಂತ್ರಿಯಲ್ಲ. ಅಲ್ಪಸಂಖ್ಯಾತರ ಕೊಲೆಯಾದ ಮನೆಗೇ ಹೋಗುವುದಿಲ್ಲ. ಸರಕಾರದ ಖಜಾನೆ ಜನರ ತೆರಿಗೆಯಿಂದ ಬರುವ ಆದಾಯವನ್ನು ಒಂದೇ ಕಡೆಗೆ ಪರಿಹಾರ ನೀಡಿ. ಆರ್ ಎಸ್ ಎಸ್ ನವರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯ…

Read More

ಮಧ್ಯಪ್ರದೇಶ: ಮಧ್ಯಪ್ರದೇಶದ ರೇವಾದಲ್ಲಿ ಭಾರೀ ಅಪಘಾತ ಸಂಭವಿಸಿದೆ. ತರಬೇತಿ ಪಡೆಯುತ್ತಿದ್ದ ವಿಮಾನವೊಂದು ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದಿದ್ದು, ವಿಮಾನದಲ್ಲಿದ್ದ ಪೈಲಟ್ ಮತ್ತು ಟ್ರೈನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಹಿರಿಯ ಪೈಲಟ್ ಸಾವನ್ನಪ್ಪಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಖಾಸಗಿ ತರಬೇತಿ ಕಂಪನಿಯ ವಿಮಾನವು ದೇವಾಲಯದ ಗೋಪುರ ಮತ್ತು ವಿದ್ಯುತ್ ಕೇಬಲ್‌ಗಳಿಗೆ ಡಿಕ್ಕಿ ಹೊಡೆದ ನಂತರ ಪತನಗೊಂಡಿದೆ ಎಂದು ವರದಿಯಾಗಿದೆ. Madhya Pradesh | A pilot died while another was injured after a plane crashed into a temple in Rewa district during the training: Rewa SP Navneet Bhasin pic.twitter.com/KumJTAlALs — ANI (@ANI) January 6, 2023 ಚೌರ್ಹತಾ ಪೊಲೀಸ್ ಠಾಣಾ ವ್ಯಾಪ್ತಿಯ ಉಮ್ರಿ ಗ್ರಾಮದ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಪೈಲಟ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ ಮತ್ತು ಇಬ್ಬರು ಪೈಲಟ್‌ಗಳಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಂಜಯ್…

Read More

ಬೆಂಗಳೂರು : ಸೈಟ್ ಗಾಗಿ ಮಂಡ್ಯ ಪೊಲೀಸರ  ಫೈಟ್ ನಡೆದಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರೇ ನ್ಯಾಯಕ್ಕಾಗಿ ಅಲೆದಾಟ ನಡೆಸಿದ್ದಾರೆ. ಅಂಬರೀಶ್ ಆಪ್ತ,ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್  ವಿರುದ್ಧ ಪೊಲೀಸರು ಅನ್ಯಾಯದ ಆರೋಪ ಮಾಡಿದ್ದು, ಅಮರಾವತಿ ಡೆವಲಪರ್ಸ್ ವಿರುದ್ದ ಪೊಲೀಸರು ಆಕ್ರೋಶ ಹೊರ ಹಾಕಿದ್ದಾರೆ. ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ಬಳಿ ಸೈಟ್ ಗಾಗಿ ಫೈಟ್ ಮಾಡಲಾಗಿದೆ. ಕಳೆದ 12 ವರ್ಷಗಳಿಂದ ನಿವೇಶನಕ್ಕಾಗಿ ಪೊಲೀಸರು ಪರದಾಡುತ್ತಿದ್ದಾರೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಇರುವ ಲೇಔಟ್ ಮಾಡಿ ನಿವೇಶನ ಕೊಡುವುದಾಗಿ ಹೇಳಿದ್ದ ಅಮರಾವತಿ ಚಂದ್ರಶೇಖರ್ ಒಂದು ಸೈಟ್ ಗೆ 4 ಲಕ್ಷ ,20 ಸಾವಿರದಂತೆ 508 ಸೈಟ್ ಕೊಡುವುದಾಗಿ ಅಮರಾವತಿ ಚಂದ್ರಶೇಖರ್ ತಿಳಿಸಿದ್ದರು. 2009ರಲ್ಲಿ ಮುಂಗಡ ಹಣ ಪಡೆದು 508 ಸೈಟ್ ಗೆ ಬುಕ್ ಈಗಾಗಲೇ ಮುಂಗಡವಾಗಿ ಶೇ 90 ರಷ್ಟು ಹಣ ಪಡೆದುಕೊಂಡಿರೊ ಚಂದ್ರಶೇಖರ್ 2 ವರ್ಷಗಳಿಂದ ಸೈಟ್ ಕೊಡದೆ ಪೊಲೀಸರನ್ನ ಅಲೆದಾಡಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ನೂರಾರು ಜನ…

Read More