Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : PSI ನೇಮಕಾತಿ ಹಗರಣದ ಆರೋಪಿಗಳಿಗೆ ಜಾಮೀನು ನೀಡಿದ ವಿಚಾರಕ್ಕೆ ಕಾಂಗ್ರೆಸ್ ಗರಂ ಆಗಿದೆ. ಪ್ರಭಾವಿಗಳನ್ನು ರಕ್ಷಿಸುವ ಸಲುವಾಗಿ PSI ಹಗರಣದ ತನಿಖೆ ಕೆಲವೇ ಜನರ ಬಂಧನಕ್ಕೆ ಸೀಮಿತವಾಗಿತ್ತು. ಈಗ ಬಂಧಿತ ಆರೋಪಿಗಳಿಗೆ ಜಾಮೀನು ದೊರಕಿದೆ. ಆಡಿಯೋ ಒಂದರಲ್ಲಿ ಆರೋಪಿಗಳಿಗೆ ಜಾಮೀನು ಸಿಗಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಗೃಹಸಚಿವರು ಒಪ್ಪಿದ್ದರು. ಇದು ವೈಫಲ್ಯವೋ, ಉದ್ದೇಶಪೂರ್ವಕ ಸಹಕಾರವೋ ಆರಗ ಜ್ಞಾನೇಂದ್ರ ಅವರೇ ಎಂದು ಪ್ರಶ್ನಿಸಿದೆ. https://twitter.com/INCKarnataka/status/1611234744880205824 https://kannadanewsnow.com/kannada/human-beings-do-not-have-the-same-rule-as-dogs-it-is-not-right-to-say-this-in-the-mouths-of-statesmen-g-t-devegowda/ https://kannadanewsnow.com/kannada/a-foreigner-meets-a-hindu-girl-gets-beaten-up-serious/
ದಕ್ಷಿಣಕನ್ನಡ : ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಹಿಂದೂ ಯುವತಿಯನ್ನ ಅನ್ಯಕೋಮಿನ ಯುವಕನೊಬ್ಬ ಭೇಟಿಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/cold-wave-turns-deadlier-in-kanpur-25-dead-in-a-day-due-to-heart-attack-and-brain-stroke-deets-here/ ಇನ್ ಸ್ಟಾಗ್ರಾಂ ಮೂಲಕ ಇಬ್ಬರಿಗೂ ಪರಿಚಯವಾಗಿದ್ದು, ಹಲವು ದಿನಗಳ ಕಾಲ ಇವರು ಫೋನ್ ಮೂಲಕ ಮಾತನಾಡುತ್ತಿದ್ದರು. ಬಳಿ ಭೇಟಿಯಾಗೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್ ನಲ್ಲಿ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನೊಬ್ಬ ಸುಬ್ರಹ್ಮಣ್ಯದ ಹಿಂದೂ ಹುಡುಗಿ ಜತೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ ಭೇಟಿಯಾಗಿದ್ದಾರೆ. https://kannadanewsnow.com/kannada/cold-wave-turns-deadlier-in-kanpur-25-dead-in-a-day-due-to-heart-attack-and-brain-stroke-deets-here/ ಈ ವಿಚಾರ ತಿಳಿದು ಕುಮಾರಧಾರ ಬಳಿ ಒಂದು ಗುಂಪಿನಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಹಲ್ಲೆ ನಡೆಸಿದ್ದಾರೆ. ಯುವಕನ ತಲೆ ಗಂಭೀರ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. https://kannadanewsnow.com/kannada/cold-wave-turns-deadlier-in-kanpur-25-dead-in-a-day-due-to-heart-attack-and-brain-stroke-deets-here/ ,
BIGG NEWS: ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ; ಮುತ್ಸದ್ದಿಗಳ ಬಾಯಲ್ಲಿ ಈ ರೀತಿ ಮಾತು ಸರಿಯಲ್ಲ; ಜಿ.ಟಿ ದೇವೇಗೌಡ
ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ನಾಯಿ ಮರಿ ಹೋಲಿಸಿದ ವಿಚಾರವಾಗಿ ಶಾಸಕ ಜಿ.ಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. https://kannadanewsnow.com/kannada/number-of-devotees-who-have-not-stopped-even-after-4-days-of-siddeshwara-swamijis-demise-people-who-came-for-darshan-on-the-full-moon-background-of-banada/ ನಾಯಿಗೆ ನಾರಾಯಣಸ್ವಾಮಿ ಎಂದು ಹೇಳುತ್ತಾರೆ. ನಮ್ಮ ಆದಿಚುಂಚನಗಿರಿ ಸ್ವಾಮೀಜಿ ಎರಡು ನಾಯಿ ಸಾಕಿದ್ದಾರೆ. ಆ ನಾಯಿಗಳು ದೊಡ್ಡವರು ಬಂದಾಗ ನಮಸ್ಕಾರ ಮಾಡುತ್ತವೆ. ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಮಾತನಾಡಯವವರು ಇತಿ ಮಿತಿ ಅರ್ಥ ಮಾಡಿಕೊಳ್ಳಲ್ಲ. ಅವರವರ ಕ್ಷೇತ್ರ ನೋಡಿಕೊಳ್ಳಲಾಗದವರು ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಿಟಿಡಿ ಪರೋಕ್ಷ ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಮುತ್ಸದ್ದಿಗಳ ಬಾಯಲ್ಲಿ ಈ ರೀತಿ ಮಾತು ಸರಿಯಲ್ಲ ಎಂದರು.
ಬೆಂಗಳೂರು : ವಿಧಾನಸೌಧದಲ್ಲೇ ಲಂಚ ನಡೆಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹಣ ಸಿಕ್ಕಿರುವ ಪ್ರಕಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಬಳಿ ಹಣ ಪತ್ತೆಯಾಗಿದೆ. ಅವನು ವಿಧಾನಸೌಧದಲ್ಲಿ ಯಾರಿಗೆ ಹಣ ಕೊಡಲು ತಂದಿದ್ದನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಒಂದು ಮುಖ್ಯಮಂತ್ರಿಗಳಿಗೆ ಲಂಚ ಕೊಡಲು ತಂದಿದ್ದನು, ಇಲ್ಲವಾದಲ್ಲಿ ಲೋಕೋಪಯೋಗಿ ಸಚಿವರಿಗೆ ಹಣ ಕೊಡಲು ಬಂದಿರಬೇಕು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ಕೋಮುವಾದದ ಬೀಜ ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಲ್ಯಾಬ್ “ನಿಂದಲೇ ಉತ್ಪತ್ತಿಯಾಗುತ್ತಿದೆ ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಹರೇಕಳ ಕಡವಿನ ಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್…
ನವದೆಹಲಿ: ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಕುಡಿದ ವ್ಯಕ್ತಿಯೊಬ್ಬ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಹತ್ತು ದಿನಗಳ ನಂತರ, ಅಂತಹುದೇ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಎರಡನೇ ಘಟನೆಯಲ್ಲಿ ಮತ್ತೊಬ್ಬ ಕುಡುಕ ವ್ಯಕ್ತಿ ಮಹಿಳಾ ಸಹ-ಪ್ರಯಾಣಿಕಿಯ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ವರದಿಯಾಗಿದೆ. ಆ ವ್ಯಕ್ತಿ ಲಿಖಿತವಾಗಿ ಕ್ಷಮೆಯಾಚಿಸಿದ ನಂತರ ಆತನ ವಿರುದ್ಧ ಯಾವುದೇ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವರದಿಗಳು ಸೂಚಿಸಿವೆ. ಈ ಘಟನೆಯು ಡಿಸೆಂಬರ್ 6, 2022 ರಂದು ಪ್ಯಾರಿಸ್‌ನಿಂದ ದೆಹಲಿಗೆ ಹೊರಟಿದ್ದ ಏರ್-ಇಂಡಿಯಾ ವಿಮಾನದಲ್ಲಿ ಸಂಭವಿಸಿದೆ. 26 ನವೆಂಬರ್ 2022 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ ವಿಭಾಗದಲ್ಲಿ ಮುಂಬೈ ನಿವಾಸಿಯೊಬ್ಬರು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ವರದಿಯಾದ ಸಮಯದಲ್ಲಿ ಈ ಘಟನೆ ನಡೆದಿದೆ. ಎರಡನೆಯ ಘಟನೆ, ಏರ್ ಇಂಡಿಯಾ ಫ್ಲೈಟ್ 142 ಮತ್ತು ವಿಮಾನದ ಪೈಲಟ್…
ಕೊಪ್ಪಳ : ಹೊಸ ಪಕ್ಷ ಘೋಷಣೆ ಮಾಡಿದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಗೆ ಆರಂಭದಲ್ಲೇ ಬಿಗ್ ಶಾಕ್ ಎದುರಾಗಿದ್ದು, ರೆಡ್ಡಿಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಹೌದು. ಗಾಲಿ ಜನಾರ್ಧನ ರೆಡ್ಡ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣದ ಎಲ್ಲಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್ಸ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ. ಜನಾರ್ಧನ ರೆಡ್ಡಿ ಆಪ್ತ ಸಹಾಯಕ ದಾಮೋದರ್ ರೆಡ್ಡಿ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ರಾಜ್ಯದಲ್ಲಿ ಮಾತ್ರ ಅಲ್ಲ, ಇಡಿ ದೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಒಂದು ಪ್ರಮುಖ ಪಕ್ಷವಾಗಿ ಬೆಳೆಯಲಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಇತ್ತೀಚೆಗೆ ಹೇಳಿದ್ದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಗ್ಗೆ ಬೇರೆ ಬೇರೆ ಪಕ್ಷಗಳ ನಾಯಕರು ಏನು ಮಾತಾಡುತ್ತಾರೆ, ಯಾವ ಟೀಕೆಗಳು ಮಾಡುತ್ತಾರೆ ಅನ್ನೋದರ ಬಗ್ಗೆ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಆದರೆ ಜನರ…
ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಿಧನ ಹೊಂದಿ ನಾಲ್ಕು ದಿನ ಕಳೆದರೂ ಜ್ಞಾನಯೋಗಾಶ್ರಮಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಬನ ಹುಣ್ಣಿಮೆ ಹಿನ್ನೆಲೆ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ನಡೆದ ಸ್ಥಳವನ್ನಿ ಭಕ್ತರು ವೀಕ್ಷಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳು ಅಗಲಿ ನಾಲ್ಕು ದಿನಗಳಾದ್ರೂ ಭಕ್ತರ ಸಂಖ್ಯೆ ಕಡಿಮೆ ಆಗುತ್ತಿಲ್ಲ.ಇದೀಗ ಸಿದ್ದೇಶ್ವರ ಸ್ವಾಮೀಜಿ ಇಲ್ಲದೆ ಜ್ಞಾನಯೋಗಾಶ್ರಮ ನೀರವಮೌನ ಆವರಿಸಿದೆ. https://kannadanewsnow.com/kannada/bjp-is-a-broker-says-bjp-mla-priyank-kharge/ ಅಲ್ಲಿಗೆ ಬಂದ ಭಕ್ತರು ಇಂದಿಗೂ ಸ್ವಾಮೀಜಿ ನೆನೆದು ಕಣ್ಣೀರು ಹಾಕಿ ಹೋಗುತ್ತಿದ್ದಾರೆ. ಜನವರಿ ೨ ರಂದು ಖ್ಯಾತ ಪ್ರವಚನಕಾರರು, ನಡೆದಾಡುವ ದೇವರಂದೆ ಇಡೀ ವಿಶ್ವದಾದ್ಯಂತ ಪ್ರಖ್ಯಾತಿಗೆ ಕಾರಣರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದರು. ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರು ನಾನಾ ಮೂಲೆಗಳಿಂದ ಆಗಮಿಸಿದ್ದರು.
ಕಾನ್ಪುರ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಶೀತಗಾಳಿಯಿಂದ ಗುರುವಾರ ಸುಮಾರು 25 ಜನರು ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ತೀವ್ರ ಶೀತದಿಂದ ರಕ್ತ ಹೆಪ್ಪುಗಟ್ಟುವಿಕೆಯ ರಕ್ತದೊತ್ತಡದ ಹಠಾತ್ ಹೆಚ್ಚಳವು ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ಗೆ ಕಾರಣವಾಗುತ್ತದೆ ಎಂದು ವೈದ್ಯರು ಪ್ರತಿಪಾದಿಸಿದರು. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಅಧ್ಯಾಪಕರೊಬ್ಬರು ಮಾತನಾಡಿ, ʻಈ ಶೀತ ವಾತಾವರಣದಲ್ಲಿ ಹೃದಯಾಘಾತವು ವಯಸ್ಸಾದವರಿಗೆ ಮಾತ್ರ ಸೀಮಿತವಾಗಿಲ್ಲ. ಹದಿಹರೆಯದವರು ಸಹ ಹೃದಯಾಘಾತಕ್ಕೆ ಒಳಗಾದ ಪ್ರಕರಣಗಳನ್ನು ನಾವು ಹೊಂದಿದ್ದೇವೆ. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ದೇಹವನ್ನು ಬೆಚ್ಚಗಿರಿಸುವ ಬಟ್ಟೆ ಧರಿಸಬೇಕು ಮತ್ತು ಸಾಧ್ಯವಾದಷ್ಟು ಮನೆಯೊಳಗೆ ಇರಬೇಕುʼ ಎಂದಿದ್ದಾರೆ. ಹೃದ್ರೋಗ ಸಂಸ್ಥೆಯ ನಿಯಂತ್ರಣ ಕೊಠಡಿಯ ಪ್ರಕಾರ, ʻಗುರುವಾರ 723 ಹೃದ್ರೋಗಿಗಳು ತುರ್ತು ಮತ್ತು ಒಪಿಡಿಗೆ ಬಂದಿದ್ದಾರೆ. ಈ ಪೈಕಿ 41 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಗಳನ್ನು ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಹೃದ್ರೋಗಿಗಳು ಚಳಿಯಿಂದ ಸಾವನ್ನಪ್ಪಿದ್ದಾರೆ. ಇದಲ್ಲದೆ, 15 ರೋಗಿಗಳನ್ನು ತುರ್ತು ಪರಿಸ್ಥಿತಿಯಲ್ಲಿ…
ಬೆಂಗಳೂರು : ಪಂಚಮಸಾಲಿ ಸಮುದಾಯಕ್ಕೆ 2 ಡಿ ಮೀಸಲಾತಿ ನೀಡುವುದಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಹೇಳಿತ್ತು. ಇದೀಗ ಪಂಚಮಸಾಲಿಯನ್ನು 2ಎ ಪ್ರವರ್ಗಕ್ಕೇ ಸೇರಿಸುವಂತೆ ಪಂಚಮಸಾಲಿ ಬಿಗಿ ಪಟ್ಟು ಹಿಡಿದಿದೆ. 24 ಗಂಟೆಯೊಳಗೆ 2ಎ ಸೇರ್ಪಡೆ ಘೋಷಣೆ ಮಾಡಿ ಜನವರಿ 12 ರೊಳಗೆ ಸರ್ಕಾರಿ ಆದೇಶ ಬರಬೇಕು. ಇಲ್ಲದಿದ್ದಲ್ಲಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಇವತ್ತು ಸಚಿವ ಮುರುಗೇಶ್ ನಿರಾಣಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ. ಹೋರಾಟಗಾರರ ಹೊಸ ಗಡುವು ರಾಜ್ಯ ಸರ್ಕಾರಕ್ಕೆ ಸಂಕಷ್ಟ ತಂದಿದ್ದು, ಸರ್ಕಾರದ ಮುಂದಿನ ನಡೆ ಏನು ಎಂಬುದು ಸದ್ಯಕ್ಕಿರುವ ಕುತೂಹಲವಾಗಿದೆ. ಪಂಚಮಸಾಲಿ ಮೀಸಲಾತಿ’ ಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಭಾರೀ ಪ್ರತಿಭಟನೆ ನಡೆಸಿದ್ದು, ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡುವುದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು, ಆದರೆ ಪಂಚಮಸಾಲಿ ಸಮುದಾಯದವರು 2 ಎ ಮೀಸಲಾತಿಗೆ ಪಟ್ಟು ಹಿಡಿದಿದ್ದಾರೆ. https://kannadanewsnow.com/kannada/siddhu-has-a-habit-of-hurting-religious-sentiments-siddaramaiah-slams-bjp-through-tweet/ https://kannadanewsnow.com/kannada/important-information-for-students-from-backward-classes-on-pupil-stipend/
ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ವೆಂಕಟೇಶ್ವರ ದೇಗುಲದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡದೇ ಬಂದ ಕಾರಣಕ್ಕೆ ಜುಟ್ಟು ಹಿಡಿದು ಹೊರಗೆ ತಳ್ಳಿದ ನೀಚಕೃತ್ಯ ಬೆಳಕಿಗೆ ಬಂದಿದೆ. https://kannadanewsnow.com/kannada/siddhu-has-a-habit-of-hurting-religious-sentiments-siddaramaiah-slams-bjp-through-tweet/ ಡಿಸೆಂಬರ್ 22 ರಂದು ವೆಂಕಟೇಶ್ವರ ದೇಗುಲಕ್ಕೆ ಬಂದ ಮಹಿಳೆ ಹೇಮಾವತಿ ಬಂದಿದ್ದರು ಆ ಸಂದರ್ಭದಲ್ಲಿ ನೀವು ಸ್ನಾನ ಮಾಡದೇ ದೇಗುಲಕ್ಕೆ ಪ್ರವೇಶಿಸಿದ್ದೀರಿ ಎಂದು ಆರೋಪಿಸಿ, ಆಕೆಯ ತಲೆ ಕೂದಲನ್ನು ಹಿಡಿದು ಎಳೆದು ಹೊರಗೆ ತಳ್ಳಿದ್ದು, ಕಬ್ಬಿಣದ ರಾಡ್ ಮೂಲಕ ಆಕೆ ಹೊಡೆಯಲಾಗಿದೆ. ಈ ವಿಚಾರ ಯಾರಿಗಾದ್ರೂ ಹೇಳಿದ್ರೆ ನಿಮ್ಮನ್ನ ಸುಮ್ಮನೆ ಬಿಡಲ್ಲ ಎಂದು ಕೂಡ ಜೀವ ಬೆದರಿಕೆ ಹಾಕಿದ್ದಾರೆ. https://kannadanewsnow.com/kannada/siddhu-has-a-habit-of-hurting-religious-sentiments-siddaramaiah-slams-bjp-through-tweet/ ಮುನಿಕೃಷ್ಣ ಹಲ್ಲೆಗೈದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಧರ್ಭದಲ್ಲಿ ಅರ್ಚಕರು ಮುನಿಕೃಷ್ಣ ಅವರನ್ನು ತಡೆದರು . ಈತ ನಡೆಸಿದ ಎಲ್ಲಾ ನೀಚಕೃತ್ಯ ದೇವಸ್ಥಾನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಆರೋಪಿ ಮುನಿಕೃಷ್ಣ ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/siddhu-has-a-habit-of-hurting-religious-sentiments-siddaramaiah-slams-bjp-through-tweet/