Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ : ಈ ಜೀವನ ಪ್ರಮಾಣಪತ್ರವನ್ನ ಬ್ಯಾಂಕ್, ಅಂಚೆ ಕಚೇರಿ ಅಥವಾ ಪಿಂಚಣಿ ವಿತರಣಾ ಪ್ರಾಧಿಕಾರಗಳಿಗೆ ಸಲ್ಲಿಸಬೇಕು. ಆಗ ಮಾತ್ರ ನೀವು ಮಾಸಿಕ ಪಿಂಚಣಿಯನ್ನ ಪಡೆಯುತ್ತೀರಿ. ಆದ್ರೆ, ಈಗ ಪಿಂಚಣಿದಾರರು ಸಾಫ್ಟ್ವೇರ್ ಅಪ್ಲಿಕೇಶನ್ ಬಳಸಿ, ಡಿಜಿಟಲ್ ಜೀವನ ಪ್ರಮಾಣಪತ್ರವನ್ನ ಉತ್ಪಾದಿಸಲು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನ ಭದ್ರಪಡಿಸಬೇಕು. ಪಿಂಚಣಿ ವಿತರಣಾ ಅಧಿಕಾರಿಯ ಬಳಿಗೆ ಹೋಗುವ ಅಗತ್ಯವಿಲ್ಲ. ಇದು ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ. ಸ್ವಯಂಚಾಲಿತ ಪ್ರಕ್ರಿಯೆ.! ಐಡಿ ವಿಭಿನ್ನವಾಗಿದ್ದು, ನೀವು ನಿಮ್ಮ ಸಾಧನದಲ್ಲಿ ಜೀವನ್ ಪ್ರಮಾನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು ಮತ್ತು ದಾಖಲೆಗಾಗಿ ನೋಂದಾಯಿಸಬೇಕು ಅಥವಾ ನೀವು ಜೀವನ್ ಪ್ರಮಾನ್ ಕೇಂದ್ರಕ್ಕೆ ಹೋಗಿ ನೋಂದಾಯಿಸಬಹುದು. ಆಧಾರ್ ದೃಢೀಕರಣದ ಅಗತ್ಯವೂ ಇದ್ದು, ಬಯೋಮೆಟ್ರಿಕ್ಸ್ ನೀಡಬೇಕು. ಆಧಾರ್ ಪ್ಲಾಟ್ಫಾರ್ಮ್ ಬಳಸಿಕೊಂಡು ಆನ್ಲೈನ್ ಬಯೋಮೆಟ್ರಿಕ್ ದೃಢೀಕರಣವನ್ನ ಮಾಡಲಾಗುತ್ತದೆ. ದೃಢೀಕರಣದ ನಂತ್ರ ಜೀವನ್ ಪ್ರಮಾಣಪತ್ರ ಐಡಿ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಕಳುಹಿಸಲಾಗುತ್ತದೆ. ಈ ಸರ್ಟಿಫಿಕೇಟ್ ಐಡಿಗಳನ್ನ ಪಿಂಚಣಿದಾರರು ಮತ್ತು ಪಿಂಚಣಿ ವಿತರಣಾ ಏಜೆನ್ಸಿಗಳಿಗಾಗಿ ಲೈಫ್ ಸರ್ಟಿಫಿಕೇಟ್ ರೆಪೋಸಿಟರಿಯಲ್ಲಿ…
ಬೆಂಗಳೂರು: ಈ ಹಿಂದೆ ದಾಖಲಾಗಿದ್ದಂತ ಪ್ರಕರಣದಲ್ಲಿ, ಈಗ ಪೋಸ್ಕೋ ಕೇಸ್ ನಲ್ಲಿ ಜೈಲು ಪಾಲಾಗಿರುವಂತ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋರ್ಟ್ ನಿಂದ ಶ್ರೀಗಳ ವಿರುದ್ಧ ಬಾಡಿ ವಾರೆಂಟ್ ಜಾರಿಗೊಳಿಸಲಾಗದೆ. ಅಲ್ಲದೇ ಖುದ್ದು ಕೋರ್ಟ್ ಗೆ ಹಾಜರುಪಡಿಸುವಂತೆ ತಿಳಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಮುರುಘಾ ಶ್ರೀಗಳನ್ನು ಫೆಬ್ರವರಿ 9ರಂದು ಖುದ್ದು ಕೋರ್ಟ್ ಗೆ ಹಾಜರುಪಡಿಸುವಂತೆ ಚಿತ್ರದುರ್ಗ ಎಸ್ಪಿ ಪರುಶುರಾಮ್ ಗೆ ಬಾಡಿ ವಾರೆಂಟ್ ಜಾರಿಗೊಳಿಸಲಾಗಿದೆ. ಅಂದಹಾಗೆ ಮುರುಘಾ ಶ್ರೀಗಳ ವಿರುದ್ಧ 2009ರಲ್ಲಿ ಬೆಂಗಳೂರಿನ ಪಿ.ಎಸ್ ಪ್ರಕಾಶ್ ಎಂಬುವರು ತಿಪ್ಪಶೆಟ್ಟಿ ಮಠದ ಆಸ್ತಿ ದುರ್ಬಳಕೆ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 420, 405, 406, 418 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಕೇಸ್ ವಿಚಾರಣೆಗೆ ಮುರುಘಾ ಶ್ರೀಗಳು ನಿರಂತರವಾಗಿ ಗೈರು ಹಾಜರಾಗಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್, ಫೆಬ್ರವರಿ 9ರಂದು ಮುರುಘಾ ಶ್ರೀಗಳನ್ನು ಖುದ್ದು ವಿಚಾರಣೆಗೆ…
ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಚಿರತೆ ಕಣ್ಮರೆಯಾಗಿತ್ತು. ಆದರೆ ಇದೀಗ ಬೆಂಗಳೂರಿನಲ್ಲಿ ಮತ್ತೆ ಹೊಸ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮತ್ತೆ ಜನರಲ್ಲಿ ಆತಂಕ ಸೃಷ್ಟಿಸಿದೆ. https://kannadanewsnow.com/kannada/two-tractors-overturned-while-going-overtaking-in-bagalkot-three-killed-on-the-spot/ ರಸ್ತೆಯಲ್ಲಿ ಬೈಕಿನಲ್ಲಿ ಹೋಗುವಾಗ ಅಡ್ಡಗಟ್ಟುತ್ತಿರುವ ಚಿರತೆ ಹಾಗೂ ಮರಿಗಳನ್ನು ನೋಡಿ ಹೆದರಿ ಹೋಗಿದ್ದಾರೆ.ಕಳೆದ 5 ದಿನಗಳಿಂದ ನಾಗರಬಾವಿ ಸುತ್ತಾಮುತ್ತಾ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದಾಗಿ ಜನ ಹೊರಗಡೆ ಬರಲು ಹೆದರುತ್ತಿದ್ದಾರೆ. ಕಳೆದ ಮೂರು ದಿನದ ರಾತ್ರಿ ಬೈಕ್ ನಲ್ಲಿ ಬರುತ್ತಿರುವಾಗ ಚಿರತೆ ಕಂಡು ಬೈಕ್ ತಿರುಗಿಸಿ ಬೈಕ್ ಸವಾರ ಹಿಂದಕ್ಕೆ ಮರಳಿದ್ದಾರೆ.ನಾಗರಬಾವಿಯಿಂದ ಆರು ಕಿಮಿ ದೂರದಲ್ಲಿ ರಸ್ತೆ, ಮನೆಯ ಭಾಗಕ್ಕೆ ಚಿರತೆ ಪ್ರವೇಶ ಕೊಡುತ್ತಿದೆ. ಚಿರತೆ ಹೆಜ್ಜೆಯ ಜಾಡು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.ಈಗಾಗಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆಯನ್ನು ಮಾಡಿದ್ದು ಪಂಚಾಯತ್ ಸಿಬ್ಬಂದಿ ಈಗ ಜನರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಬೆಂಗಳೂರು: ಈಗಾಗಲೇ ನಗರ ಕೆಲ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ರಾಜ್ಯ ರಾಜಧಾನಿ ಜನತೆಯಲ್ಲಿ ಭಯ ಹುಟ್ಟಿಸಿತ್ತು. ಈ ಬೆನ್ನಲ್ಲೆ ನಾಗರಬಾವಿಯಲ್ಲಿಯೂ ಎರಡು ಮರಿಗಳೊಂದಿಗೆ ಇರುವಂತ ಚಿರತೆಯೊಂದು ಪ್ರತ್ಯಕ್ಷವಾಗಿ, ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಬೆಂಗಳೂರಿನ ನಾಗರಬಾವಿ ಬಳಿಯಲ್ಲಿ 2 ಮರಿ ಜೊತೆಗೆ ಚಿರತೆಯೊಂದು ಓಡಾಡುತ್ತಿರೋದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರೇ ಓಡಾಡದಂತೆ ಪಂಚಾಯ್ತಿಯಿಂದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಇನ್ನೂ ಚಿರತೆ ಪ್ರತ್ಯಕ್ಷವಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯಿಂದ ಸೆರೆಗೆ ಬೋನ್ ಇರಿಸಲಾಗಿದೆ. ಆದ್ರೇ ಈವರೆಗೂ ಬೋನಿಗೆ ಚಿರತೆ ಬಿದ್ದಿಲ್ಲ. 2 ಮರಿಗಳ ಜೊತೆಗೆ ಚಿರತೆ ಓಡಾಡುವುದನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಅಲ್ಲದೇ ಯಾವ ಸಂದರ್ಭದಲ್ಲಾದರೂ ಚಿರತೆ ದಾಳಿ ನಡೆಸೋ ಭೀತಿಯನ್ನು ಹುಟ್ಟು ಹಾಕಿದೆ. ಈಗಾಗಲೇ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿರುವಂತ ಚಿರತೆಯು, ಹೊತ್ತೊಯ್ದು ತಿಂದಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/india-deploys-its-largest-single-unit-of-women-peacekeepers-in-un-mission/ https://kannadanewsnow.com/kannada/haveri-sahitya-sammelana-writer-doddarangegowda-criticises-double-engine-government-in-conference-presidents-speech/
ಕೇರಳ: ‘ಸೀತಾ ರಾಮಂ’ ಕಲಾ ನಿರ್ದೇಶಕ ಸುನಿಲ್ ಬಾಬು ( ‘Sita Ramam’ art director Sunil Babu ) ಅವರು ಕೇರಳದಲ್ಲಿ ಗುರುವಾರ ಅಂದರೆ ಜನವರಿ 6 ರಂದು ನಿಧನರಾದರು. 50 ವರ್ಷದ ಕಲಾ ನಿರ್ದೇಶಕ ಗುರುವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಸುನಿಲ್ ಬಾಬು ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ, ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದರು. ಅವರು ಕಲಾ ನಿರ್ದೇಶಕ ಸಾಬು ಸಿರಿಲ್ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ತುಪಕ್ಕಿ’, ‘ಭೀಷ್ಮ ಪರ್ವಂ’, ‘ಮಹರ್ಷಿ’, ‘ಊಪಿರಿ’, ‘ಘಜಿನಿ’, ‘ಪ್ರೇಮಂ’, ‘ಛೋಟಾ ಮುಂಬೈ’ ಮುಂತಾದ ಚಿತ್ರಗಳಿಗೆ ಅವರು ಕೆಲಸ ಮಾಡಿದ್ದಾರೆ. ‘ಸಿಂಗ್ ಈಸ್ ಕಿಂಗ್’, ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’, ‘ಪಾ’, ‘ಸ್ಪೆಷಲ್ 26’ ಮುಂತಾದ ಬಾಲಿವುಡ್ ಚಿತ್ರಗಳಲ್ಲೂ ಅವರು ಕೆಲಸ ಮಾಡಿದ್ದಾರೆ. ಈ ಕುರಿತು ಇನ್ಟ್ಸಾ ಗ್ರಾಂನಲ್ಲಿ ಇದನ್ನು ನಂಬಲು ಕೂಡ ಸಾಧ್ಯವಾಗುತ್ತಿಲ್ಲ ಎಂಬುದಾಗಿ ನಟ ದುಲ್ಕರ್…
ಬಿಹಾರ : ರೈಲು ಹತ್ತುವಾಗ ಜಾರಿ ಬೀಳುತ್ತಿದ್ದ ವ್ಯಕ್ತಿಯನ್ನು RPF ಸಿಬ್ಬಂದಿ ರಕ್ಷಿಸಿರುವ ಘಟನೆ ಪೂರ್ಣಿಯಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತಂತೆ ರೈಲ್ವೆ ಸಚಿವಾಯವು ಟ್ವಿಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಬಿಹಾರದ ಪೂರ್ಣಿಯಾ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲನ್ನು ಹತ್ತಲು ಹೋಗುತ್ತಿದ್ದ ವೇಳೆ ಕಾಲು ಜಾರಿ ರೈಲಿನ ಕೆಳಗೆ ಬೀಳುತ್ತಿದ್ದನು. ಇದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಕೂಡಲೇ ತೆರಳಿ ಪ್ರಯಾಣಿಕನನ್ನು ರಕ್ಷಿಸಿರುವುದನ್ನು ನೋಡಬಹುದು. https://twitter.com/CA_NahiEngineer/status/1610697631336140801 ಘಟನೆ ಬಗ್ಗೆ ವಿವವರಿಸಿರುವ ರೈಲ್ವೆ ಸಚಿವಾಯ, ದಯವಿಟ್ಟು ಚಲಿಸುತ್ತಿರುವ ರೈಲನ್ನು ಹತ್ತಲು/ಡಿಬೋರ್ಡಿಂಗ್ ಮಾಡಲು ಪ್ರಯತ್ನಿಸಬೇಡಿ ಎಂದು ಮನವಿ ಮಾಡಿದೆ. ಇನ್ನು ಪ್ರಯಾಣಿಕನನ್ನು ರಕ್ಷಿಸಿದ RPF ಸಿಬ್ಬಂದಿಯ ಕೆಲಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/the-dog-is-a-regular-animal-those-who-do-not-have-the-rules-are-from-the-congress-ct-ravi-attacks-siddaramaiah/ https://kannadanewsnow.com/kannada/two-tractors-overturned-while-going-overtaking-in-bagalkot-three-killed-on-the-spot/ https://kannadanewsnow.com/kannada/mandya-mp-sumalatha-ambareesh-urges-people-to-speed-up-collection-of-mining-royalty/
ಬಾಗಲಕೋಟೆ: ಓವರ್ ಟೇಕ್ ಮಾಡಲು ಹೋದಾಗ ಎರಡು ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. https://kannadanewsnow.com/kannada/the-dog-is-a-regular-animal-those-who-do-not-have-the-rules-are-from-the-congress-ct-ravi-attacks-siddaramaiah/ ಬಾಗಲಕೋಟೆ ಜಿಲ್ಲೆಯ ಮೂದೋಳ ತಾಲೂಕಿನ ಕುಳಲಿ ಗ್ರಾಮದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ ಘಟನೆ ನಡೆದಿದೆ.,.20 ವರ್ಷದ ಗೋವಿಂದ್ ಪಾಟೀಲ್, 20 ವರ್ಷದ ಹನಮಂತ್ ಬೊಮ್ಮಕ್ಕನವರ್, 18 ವರ್ಷದ ಸದಾಶಿವ ಬೆಳಗಲಿ ಬಾಗಲಕೋಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಎರಡೂ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋದಾಗ ದುರ್ಘಟನೆ ಸಂಭವಿಸಿದೆ. ಮುಂದೆ ವೇಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್ ಗುದ್ದಿದ್ದರಿಂದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರ ಯಗೊಂಡಿದ್ದಾರೆ. ಗಾಯಾಳು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. https://kannadanewsnow.com/kannada/the-dog-is-a-regular-animal-those-who-do-not-have-the-rules-are-from-the-congress-ct-ravi-attacks-siddaramaiah/
ಮಂಡ್ಯ: ಸರ್ಕಾರ ನಿಗದಿಪಡಿಸಿರುವಂತೆ ಗಣಿಗಾರಿಕೆಗೆ ಸಂಬಂಧಿಸಿದ ರಾಜಧನ ಸಂಗ್ರಹಣೆ ಕೆಲಸವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚುರುಕುಗೊಳಿಸಬೇಕು ಎಂದು ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ಅವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆಸಿ ಮಾತನಾಡಿದರು. ರಾಜಧನ ಬಾಕಿ ಇರುವವರಿಗೆ ನೋಟೀಸ್ ಜಾರಿ ಮಾಡಿದ ನಂತರ ಇಲಾಖೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದರು. ಅಕ್ರಮ ಗಣಿಗಾರಿಕೆ ಕುರಿತು ಸಂಸದರು ಚರ್ಚಿಸಿದಾಗ ಹಿರಿಯ ಭೂ ವಿಜ್ಞಾನಿ ಪದ್ಮಜಾ ಅವರು ಮಾತನಾಡಿ ಅಕ್ರಮ ಗಣಿಗಾರಿಕೆ ತಡೆಯಲು ಸಿಬ್ಬಂದಿಗಳ ಕೊರತೆ ಇಲ್ಲ 11 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಮೂರು ಪಾಳಿಯಲ್ಲಿ ಹೋಮ್ ಗಾಡ್೯ ಹಾಗೂ ಭೂ ವಿಜ್ಞಾನಿಗಳನ್ನು ನಿಯೋಜಿಸಲಾಗಿದೆ. ಚೆಕ್ ಪೋಸ್ಟ್ ನಲ್ಲಿ ವಾಹನಗಳ ವಿವರವನ್ನು ದಾಖಲಿಸಿಕೊಂಡು ಪರಿಶೀಲಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಶಾಲೆಗಳ ಛಾವಣಿಗಳ ಮೇಲೆ ಸೋಲಾರ್ ಪ್ಯಾನಲ್ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆ, ವಸತಿ ಶಾಲೆ ಹಾಗೂ ಹಾಸ್ಟೆಲ್ ಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸುವುದರಿಂದ…
ಮೈಸೂರು : ಜಿಲ್ಲೆಯಲ್ಲಿ ಬೆದರಿಕೆ, ಜಗಳ , ಕೊಲೆ ಹೀಗೆ ಅನೇಕ ಪ್ರಕರಣಗಳಿಗೆ ಸಂಬಂಧ ಪಟ್ಟ ನಾಲ್ವರು ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/beware-do-you-have-kidney-problems-quit-these-bad-habits-today-kidney-health/ ಸತೀಶ್, ಮಧುಸೂದನ್,ಮಂಜುನಾಥ್, ಕುಮಾರ್ ಎಂಬ ರೌಡಿಶೀಟರ್‌ಗಳನ್ನು ಗಡಿಪಾಡು ಮಾಡಲಾಗಿದೆ.ಯರಗಹಳ್ಳಿಯ ರೌಡಿ ಸತೀಶ್, ವೀರನಗರೆಯ ಮಧುಸೂಧನ್ ಇಟ್ಟಿಗೆಗೂಡು ಬಡಾವಣೆಯ ರೌಡಿಶೀಟರ್ ಮಂಜುನಾಥ್, ಮಹದೇವಪುರ ರೌಡಿಶೀಟರ್ ಕುಮಾರ್ ಗಡಿಪಾರು ಮಾಡಲಾಗಿದೆ. https://kannadanewsnow.com/kannada/beware-do-you-have-kidney-problems-quit-these-bad-habits-today-kidney-health/ ಸತೀಶ್ ವಿರುದ್ಧ 5 ಪ್ರಕರಣ ಹಾಗೂ ಮಧುಸೂಧನ್ ವಿರುದ್ಧ 4 ಕೇಶ್ ಮಂಜುನಾಥ್ ವಿರುದ್ಧ 8, ಕುಮಾರ್ ವಿರುದ್ಧ 7 ಕೇಸ್‌ಗಳಿವೆ. ಬೆದರಿಕೆ, ಜಗಳ , ಕೊಲೆ ಯತ್ನ, ಶಾಂತಿಭಂಗ ಮಾಡುವುದು ಸಮಾಜದ ಸ್ವಾಸ್ತ್ಯ ಹಾಳುಮಾಡುತ್ತಿದ್ದ ಹಿನ್ನೆಲೆ ಗಡಿಪಾರು ಮಾಡಲಾಗುತ್ತಿದೆ ಎಂದು ಪೊಲೀಸ್‌ಆಯುಕ್ತ ರಮೇಶ್ ಬಾನೋತ್ ಆದೇಶ ನೀಡಿಲಾಗಿದೆ. https://kannadanewsnow.com/kannada/beware-do-you-have-kidney-problems-quit-these-bad-habits-today-kidney-health/
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಟೆಲಿಕಾಂ ಪ್ರಮುಖ ಸಂಸ್ಥೆ ರಿಲಯನ್ಸ್ ಜಿಯೋ (Reliance Jio )ಇಂದು ಗ್ವಾಲಿಯರ್, ಜಬಲ್ಪುರ್, ಲುಧಿಯಾನ ಮತ್ತು ಸಿಲಿಗುರಿ ಎಂಬ ನಾಲ್ಕು ನಗರಗಳಲ್ಲಿ ತನ್ನ 5G ಸೇವೆಗಳನ್ನು ಪ್ರಾರಂಭಿಸಿದೆ. ಈ ಮೂಲಕ ಜಿಯೋದ 5G ಸೇವೆ (Reliance Jio )ಗಳನ್ನು ಹೊಂದಿರುವ ಒಟ್ಟು ನಗರಗಳ ಸಂಖ್ಯೆ 72 ಆಗಿದೆ. ಜಿಯೋ 5ಜಿ ಸೇವೆಗಳು ಕ್ಷಿಪ್ರಗತಿಯಲ್ಲಿ ಹೊರಹೊಮ್ಮುತ್ತಿದೆ. ಇದು ಜಿಯೋ ಬಳಕೆದಾರರಿಗೆ ತಂತ್ರಜ್ಞಾನದ ರೂಪಾಂತರದ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಟೆಲ್ಕೊ ಪ್ರಮುಖರು ಹೇಳಿದ್ದಾರೆ. ಇನ್ನೂ ನಾಲ್ಕು ನಗರಗಳಲ್ಲಿ ಜಿಯೋ 5 ಜಿ ಸೇವೆಗಳನ್ನುಪ್ರಾರಂಭಿಸುವುದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಪಂಜಾಬಿನ ಬಳಕೆದಾರರಿಗೆ ಜಿಯೋ ಆಯ್ಕೆಯ ಆಪರೇಟರ್ ಆಗಿದೆ. ಜಿಯೋ 5ಜಿ ಸೇವೆಗಳ ಬಿಡುಗಡೆಯು ಈ ರಾಜ್ಯಗಳ ಜನರಿಗೆ ನಿರಂತರ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಜಿಯೋ ವಕ್ತಾರರು ತಿಳಿಸಿದ್ದಾರೆ. ಭೋಪಾಲ್ ಮತ್ತು ಇಂದೋರ್ ಸೇರಿದಂತೆ ಮಧ್ಯಪ್ರದೇಶದ ಎಲ್ಲಾ ದೊಡ್ಡ ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದ ಮೊದಲ…