Subscribe to Updates
Get the latest creative news from FooBar about art, design and business.
Author: KNN IT TEAM
ಹಾವೇರಿ: ದೇವಗಿರಿ ಬ್ಯಾಂಕ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ 30 ದಿನಗಳ “ಮಹಿಳೆಯರ ಬ್ಯೂಟಿ ಪಾರ್ಲರ್” ತರಬೇತಿಗೆ ( free beauty parlor training ) ಹಾವೇರಿ ಜಿಲ್ಲೆಯ ನಿರುದ್ಯೋಗಿ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/scanned-copy-problem-of-ii-pu-answer-sheets-pu-board-launches-helpline/ ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು. ದಿನಾಂಕ 11-8-2022 ರಿಂದ 9-9-2022 ವರೆಗೆ ತರಬೇತಿ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜಾತಿ ಮತ್ತು ಆದಾಯ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಬಿಪಿಎಲ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರದ ಝೆರಾಕ್ಸ್ ಪ್ರತಿಗಳನ್ನು ತರಬೇಕು. ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ. https://kannadanewsnow.com/kannada/monsoon-parliament-session-all-party-meeting-on-july-17-vp-naidu-ls-speaker-birla-to-meet-floor-leaders/ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನಿರ್ದೇಶಕರು, ವಿಜಯ ಬ್ಯಾಂಕ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ದೇವಗಿರಿ, ಹಾವೇರಿ ದೂರವಾಣಿ ಸಂಖ್ಯೆ 08375-249160 ಸಂಪರ್ಕಿಸಲು ಕೋರಲಾಗಿದೆ.
ನವದೆಹಲಿ : ಆದಾಯ ಗುಪ್ತಚರ ನಿರ್ದೇಶನಾಲಯ (DRI) ಮೊಬೈಲ್ ಕಂಪನಿ ಒಪ್ಪೋ ಇಂಡಿಯಾದ ಆವರಣದಲ್ಲಿ ಶೋಧ ನಡೆಸಿದ್ದು, ಕಂಪನಿಯಿಂದ 4,389 ಕೋಟಿ ರೂ.ಗಳ ಕಸ್ಟಮ್ಸ್ ಸುಂಕ ವಂಚನೆಯನ್ನು ಪತ್ತೆಹಚ್ಚಿದೆ ಎಂದು ಬುಧವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಪ್ಪೋ ಇಂಡಿಯಾ ಚೀನಾ ಮೂಲದ ಗುವಾಂಗ್ಡಾಂಗ್ ಒಪ್ಪೊ ಮೊಬೈಲ್ ಟೆಲಿಕಮ್ಯುನಿಕೇಷನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ಮನಿ ಲಾಂಡರಿಂಗ್ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಚೀನಾದ ಸ್ಮಾರ್ಟ್ಫೋನ್ ತಯಾರಕ ವಿವೋ ಮತ್ತು ಸಂಬಂಧಿತ ಸಂಸ್ಥೆಗಳ ವಿರುದ್ಧ ಭಾರತದಾದ್ಯಂತ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ ಕೆಲವು ದಿನಗಳ ನಂತ್ರ ಈ ಶೋಧಗಳು ನಡೆದಿವೆ. ತೆರಿಗೆಗಳನ್ನು ತಪ್ಪಿಸಲು ಕಂಪನಿಯ ಭಾರತೀಯ ವಿಭಾಗವು ತನ್ನ ವಹಿವಾಟಿನ ಸುಮಾರು 50 ಪ್ರತಿಶತವನ್ನ ಚೀನಾಕ್ಕೆ 62,476 ಕೋಟಿ ರೂ. ಕಳುಹಿಸಿದೆ ಎಂದು ಇಡಿ ಹೇಳಿದೆ. ಚೀನಾದ ಗುವಾಂಗ್ಡಾಂಗ್ ಒಪ್ಪೊ ಮೊಬೈಲ್ ಟೆಲಿಕಮ್ಯುನಿಕೇಷನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಮೆಸರ್ಸ್ ಒಪ್ಪೊ ಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಇನ್ನು ಮುಂದೆ ಇದನ್ನು ಒಪ್ಪೊ ಇಂಡಿಯಾ…
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ( Karnataka Second PU Exam ) ಫಲಿತಾಂಶ ಪ್ರಕಟಗೊಂಡ ನಂತ್ರ, ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅವಕಾಶ ನೀಡಿತ್ತು. ಆದ್ರೇ ಅನೇಕ ವಿದ್ಯಾರ್ಥಿಗಳಿಗೆ ಸ್ಕ್ಯಾನ್ಡ್ ಪ್ರತಿಯನ್ನು ಪಡೆಯಲು ಸಮಸ್ಯೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಪಿಯು ಮಂಡಳಿಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಾಯವಾಣಿ ಆರಂಭಿಸಿದೆ. https://kannadanewsnow.com/kannada/there-has-been-a-huge-increase-in-the-number-of-corona-cases-in-the-state-today/ ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಏಪ್ರಿಲ್-ಮೇ 2022ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 18-06-2022ರಂದು ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ 15-07-2022ರವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/monsoon-parliament-session-all-party-meeting-on-july-17-vp-naidu-ls-speaker-birla-to-meet-floor-leaders/ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿ ಡೌನ್ ಲೋಡ್ ಮಾಡಿಕೊಂಡ ನಂತ್ರ, ಪರಿಶೀಲನೆ ಮಾಡುವಾಗ ಯಾವುದೇ ಪುಟ ಸ್ಕ್ಯಾನ್ ಆಗಿಲ್ಲದಿದ್ದಲ್ಲಿ ಅಥವಾ ಯಾವುದೇ ರೀತಿಯ ನ್ಯೂನ್ಯತೆಗಳು ಕಂಡು ಬಂದಲ್ಲಿ jdexam.dpue@gmail.com ಗೆ…
ನವದೆಹಲಿ: ಜುಲೈ 18 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ( Monsoon session of Parliament ) ಸುಗಮ ಕಾರ್ಯನಿರ್ವಹಣೆಯನ್ನು ಬಯಸಿ, ಸರ್ಕಾರವು ಜುಲೈ.17ರ ಭಾನುವಾರ ಬೆಳಿಗ್ಗೆ ಸರ್ವಪಕ್ಷಗಳ ಸಭೆಯನ್ನು ( all-party meeting ) ಕರೆದಿದೆ. ಈ ಮೂಲಕ ಉಭಯ ಸದನಗಳ ಅಧ್ಯಕ್ಷರು ವಿವಿಧ ಪಕ್ಷಗಳ ನಾಯಕರನ್ನು ಸಹ ಭೇಟಿಯಾಗಲಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ಸದನ ನಾಯಕರ ಸಭೆಯನ್ನು ಕರೆದಿದ್ದು, ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಭಾನುವಾರ ಸಂಜೆ ವಿವಿಧ ಪಕ್ಷಗಳ ನಾಯಕರನ್ನು ಭೇಟಿಯಾಗಲಿದ್ದಾರೆ. https://kannadanewsnow.com/kannada/there-has-been-a-huge-increase-in-the-number-of-corona-cases-in-the-state-today/ ಮೂಲಗಳ ಪ್ರಕಾರ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಭಾನುವಾರ ಬೆಳಿಗ್ಗೆ ಕಾರ್ಯಸೂಚಿಯನ್ನು ಚರ್ಚಿಸಲು ಮತ್ತು ಸಂಸತ್ ಅಧಿವೇಶನದ ಸುಗಮ ಕಾರ್ಯನಿರ್ವಹಣೆಗಾಗಿ ಅವರ ಬೆಂಬಲವನ್ನು ಕೋರಲು ಎಲ್ಲಾ ಪಕ್ಷಗಳ ಸಾಂಪ್ರದಾಯಿಕ ಸಭೆಯನ್ನು ಕರೆದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿರುವರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮಾಡಿದಂತೆ ಈ ಸಭೆಯಲ್ಲಿ ಭಾಗವಹಿಸಬಹುದು. ಬಿರ್ಲಾ…
ನವದೆಹಲಿ : ನುಸ್ರತ್ ಮಿರ್ಜಾ ಎನ್ನುವ ಪಾಕಿಸ್ತಾನಿ ಪತ್ರಕರ್ತನ ಹೇಳಿಕೆಗಳು ಭಾರತದ ರಾಜಕೀಯದಲ್ಲಿ ಕೋಲಾಹಲವನ್ನ ಸೃಷ್ಟಿಸಿವೆ. ಈ ವಿಚಾರದಲ್ಲಿ ವಿವಾದ ಹೆಚ್ಚಾದ ಬೆನ್ನಲ್ಲೇ ಸ್ವತಃ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸ್ಪಷ್ಟನೆ ನೀಡಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ಮಾಡಲಾಗ್ತಿದೆ. ನಾನು ಅವರಿಗೆ ಕರೆ ಮಾಡಿಲ್ಲ, ಭೇಟಿನೂ ಮಾಡಿಲ್ಲ ಎಂದು ಹೇಳಿದ್ದಾರೆ. ಇನ್ನು ಮಾಧ್ಯಮಗಳ ಒಂದು ವಿಭಾಗದಲ್ಲಿ ಸುಳ್ಳಿನ ಕಂತೆ ನಡೆಯುತ್ತಿದೆ. ಇದರಲ್ಲಿ ಬಿಜೆಪಿಯ ಅಧಿಕೃತ ವಕ್ತಾರರೂ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ. ಉಪರಾಷ್ಟ್ರಪತಿಯವರು ವಿದೇಶಿ ಅತಿಥಿಗಳನ್ನ ಆಹ್ವಾನಿಸುವ ಪ್ರಕ್ರಿಯೆಯು ಸರ್ಕಾರದ ಸಲಹೆಯ ಮೇರೆಗೆ ನಡೆಯುತ್ತದೆ ಮತ್ತು ಮುಖ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಒಳಗೊಂಡಿರುತ್ತದೆ ಎಂದು ಅವರು ತಮ್ಮ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ. ನಾನು ಈ ವ್ಯಕ್ತಿಯನ್ನು ಎಂದಿಗೂ ಆಹ್ವಾನಿಸಿಲ್ಲ ಅಥವಾ ಭೇಟಿಯಾಗಿಲ್ಲ ಎಂದು ಅನ್ಸಾರಿ ಹೇಳಿದರು. ನಾನು 11 ಡಿಸೆಂಬರ್ 2010 ರಂದು ಭಯೋತ್ಪಾದನೆ ಕುರಿತ ಸಮಾವೇಶವನ್ನ ಉದ್ಘಾಟಿಸಿದ್ದೆ ಎಂದು ಹಮೀದ್ ಅನ್ಸಾರಿ ಹೇಳಿದರು. ಸಾಮಾನ್ಯ ಅಭ್ಯಾಸದಂತೆ, ಅತಿಥಿ ಪಟ್ಟಿಯನ್ನ ಸಂಘಟಕರು ಸಿದ್ಧಪಡಿಸಿದ್ದಾರೆ. ನಾನು…
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1,231 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇಂದು ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗಿದೆ. https://kannadanewsnow.com/kannada/good-news-for-government-employees-in-the-state-online-system-for-loan-sanction-on-life-insurance-policy/ ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ತಲಾ ಮೂವರಿಗೆ, ತುಮಕೂರು, ಉಡುಪಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ತಲಾ 7 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದು ತಿಳಿಸಿದೆ. https://kannadanewsnow.com/kannada/mandya-university-covers-entire-district-minister-dr-c-n-ashwathnarayan/ ಬಳ್ಳಾರಿ 05, ಬೀದರ್ 04, ಚಿತ್ರದುರ್ಗ 04, ದಕ್ಷಿಣ ಕನ್ನಡ 09, ಧಾರವಾಡ 19, ಕೋಲಾರ 11, ಮೈಸೂರು 13, ರಾಮನಗರ 5 ಮತ್ತು ಬೆಂಗಳೂರು ನಗರ 1,124 ಸೇರಿದಂತೆ 1,231 ಮಂದಿಗೆ ಹೊಸದಾಗಿ ಕೊರೋನಾ ದೃಢಪಟ್ಟಿರೋದಾಗಿ ಹೇಳಿದೆ. https://kannadanewsnow.com/kannada/good-news-for-people-of-shimoga-airport-to-be-inaugurated-in-december/ ಇಂದು 1231…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಹೆಣ್ಣು ಮಕ್ಕಳ ಸಬಲಿಕರಣಕ್ಕಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಸೇರಿ ಹಲವು ಯೋಜನೆಗಳನ್ನ ನಡೆಸ್ತಿದೆ. ಅದ್ರಲ್ಲಿ ಒಂದು ಈ “CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ”. ಈ ಯೋಜನೆಯಡಿ ಸರ್ಕಾರ, ಒಂದೇ ಹೆಣ್ಣು ಮಗು ಹೊಂದಿರುವ ಪೋಷಕರಿಗೆ 12 ಸಾವಿರ ಸ್ಕಾಲರ್‌ಶಿಪ್ ನೀಡ್ತಿದೆ. ಆರ್ಥಿಕವಾಗಿ ಹಿಂದುಳಿದ, ಸರಿಯಾದ ಶಿಕ್ಷಣ ಪಡೆಯಲಾಗದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಬಹುಪಾಲು ಶುಕ್ಷಣ ವಂಚಿತರಾಗುತ್ತಾರೆ. ಹಾಗಾಗಿ ಇದನ್ನ ತಪ್ಪಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ನಡೆಸ್ತಿದೆ. ಅದ್ರಂತೆ, ನೀವು ಕೂಡ ಹೆಣ್ಣು ಮಗುವಿನ ಪೋಷಕರಾಗಿದ್ರೆ, ಈ ಯೋಜನೆಯ ಲಾಭ ಪಡೆಯಬೋದು. ಇದನ್ನ ಕೇಂದ್ರ ಸರ್ಕಾರ ಜಾರಿ ಮಾಡಿದ್ದು, CBSE (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಮೆರಿಟ್ ಆಧಾರ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿ ಸ್ಕಾಲರ್‌ಶಿಪ್ ನೀಡುತ್ತೆ. ವಿದ್ಯಾರ್ಥಿ ವೇತನ ಹೇಗೆ ಹಂಚಿಕೆ ಮಾಡಲಾಗುತ್ತೆ..? ನಿರ್ದಿಷ್ಟ ವರ್ಷದ ವಿದ್ಯಾರ್ಥಿ ವೇತನಗಳ ಸಂಖ್ಯೆಯು ವೇರಿಯಬಲ್ ಆಗಿದ್ದು, 60% ಅಥವಾ ಅದಕ್ಕಿಂತ…
ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸರ್ಕಾರಿ ನೌಕರರ ( Government Employees ) ಜೀವ ವಿಮಾ ಪಾಲಿಸಿಗಳ ( life insurance policy ) ಮೇಲೆ ಸಾಲ ಮಂಜೂರಾತಿ ಮತ್ತು ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಆನ್ ಲೈನ್ ಮೂಲಕ ಇತ್ಯರ್ಥದ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. https://kannadanewsnow.com/kannada/microsoft-cuts-1800-jobs-as-part-of-realignment-twitter-lays-off-30-staff-from-recruiting-team/ ಈ ಬಗ್ಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದು, ಇಲಾಖೆಯ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಾಫ್ಟ್ ವೇರ್ ನ ಅಭಿವೃದ್ಧಿಕಾರ್ಯ ಮುಗಿದಿದೆ. ಅಲ್ಲದೇ ಈ ಸಾಫ್ಟ್ ವೇರ್ ಬಳಕೆ ಬಗ್ಗೆ ತರಬೇತಿ ಕೂಡ ನೀಡಲಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/mandya-university-covers-entire-district-minister-dr-c-n-ashwathnarayan/ ಇನ್ನೂ ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ ಇತ್ಯರ್ಥಗೊಳಿಸಲು ಪ್ರಾಯೋಗಿಕ ಪರೀಕ್ಷೆಗಾಗಿ ಬೆಂಗಳೂರು…
ಮೇಲುಕೋಟೆ: ಮಂಡ್ಯದಲ್ಲಿರುವ ಏಕೀಕೃತ ವಿಶ್ವವಿದ್ಯಾಲಯನ್ನು ಮೇಲ್ದರ್ಜೆಗೇರಿಸಿ, ಇಡೀ ಮಂಡ್ಯ ಜಿಲ್ಲೆಯ ಪದವಿ ಕಾಲೇಜುಗಳನ್ನೆಲ್ಲ ಇದರ ವ್ಯಾಪ್ತಿಗೆ ತಂದು ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಹೇಳಿದರು. ಪಾಂಡವಪುರ ತಾಲ್ಲೂಕು ಬಿಜೆಪಿ ಹಾಗೂ ಪಾಂಡವಪುರ ಪರಿವರ್ತನಾ ಟ್ರಸ್ಟ್, ಬುಧವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ ಅವರು ಜಿಲ್ಲೆಗೊಂದು ವಿವಿ ಬೇಕು ಎನ್ನುವ ಬೇಡಿಕೆ ಮಂಡಿಸಿದರು. https://kannadanewsnow.com/kannada/microsoft-cuts-1800-jobs-as-part-of-realignment-twitter-lays-off-30-staff-from-recruiting-team/ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ‘ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಪಕ್ಷ ಒಂದಾದರೂ ವಿವಿ ಇರಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ಇದರಂತೆ, ಮಂಡ್ಯ ಜಿಲ್ಲೆಗೂ ವಿ.ವಿ.ಯನ್ನು ಮಂಜೂರು ಮಾಡಲಾಗುವುದು’ ಎಂದರು. ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣವು ಸಾಧ್ಯವಾದಷ್ಟೂ ಹತ್ತಿರದಲ್ಲೇ ಮತ್ತು ಕೈಗೆಟುಕುವಂತೆ ಸಿಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಹೀಗಾಗಿ, ಮಂಡ್ಯದ ಏಕೀಕೃತ ವಿ.ವಿ.ಯನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯ ಕ್ರಮ ಕೈಗೊಂಡು, ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.…
BIGG NEWS : ‘ಅನುಕಂಪದ ನೇಮಕಾತಿ ನೀತಿ’ಯಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ ; ಈಗ ಯಾರಿಗೆ ಕೆಲ್ಸ ಸಿಗುತ್ತೆ ಗೊತ್ತಾ?
ನವದೆಹಲಿ : ಅನುಕಂಪದ ಆಧಾರದ ಮೇಲೆ ನಡೆಯಲಿರುವ ನೇಮಕಾತಿಗಳ ಕುರಿತು ಸರಕಾರ ಮಹತ್ವದ ಘೋಷಣೆ ಮಾಡಿದೆ. ವಾಸ್ತವವಾಗಿ, ಕೇಂದ್ರ ಗೃಹ ಸಚಿವಾಲಯವು ಅನುಕಂಪದ ನೇಮಕಾತಿ ನೀತಿಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದೆ. ಸರ್ಕಾರದ ಈ ದೊಡ್ಡ ನಿರ್ಧಾರದ ನಂತ್ರ ಇದೀಗ ಕೇಂದ್ರ ಅರೆಸೇನಾ ಪಡೆಗಳ ನೌಕರರ ಕುಟುಂಬಗಳಿಗೂ ಉದ್ಯೋಗ ಸಿಗಲಿದೆ. ಇದಕ್ಕಾಗಿ MHA ಅನುಕಂಪದ ನೇಮಕಾತಿಗಳ ಪರಿಷ್ಕೃತ ನೀತಿಯನ್ನ ಅನುಮೋದಿಸಿದೆ. ಈ ಜನರು ಅನುಕಂಪದ ನೇಮಕಾತಿಯ ಪ್ರಯೋಜನ ಲಭ್ಯ ಈ ತಿದ್ದುಪಡಿಗೆ ಒಪ್ಪಿಗೆ ದೊರೆತ ನಂತ್ರ ಸೇವಾವಧಿಯಲ್ಲಿ ಪ್ರಾಣ ಕಳೆದುಕೊಂಡ ನೌಕರರ ಬಂಧುಗಳಿಗೆ ಹಾಗೂ ವೈದ್ಯಕೀಯ ಕಾರಣದಿಂದ ನಿವೃತ್ತಿಯಾಗುವ ನೌಕರರ ಬಂಧುಗಳಿಗೆ ಅನುಕಂಪದ ನೇಮಕಾತಿಯನ್ನ ನೀಡಲಾಗುವುದು. ಸರ್ಕಾರದ ಈ ಹೊಸ ನೀತಿಯಿಂದ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಭಯೋತ್ಪಾದಕರ ದಾಳಿ, ಘರ್ಷಣೆ ಇತ್ಯಾದಿಗಳಲ್ಲಿ ಪ್ರಾಣ ಕಳೆದುಕೊಳ್ಳುವ ಕೇಂದ್ರ ಅರೆಸೇನಾ ಪಡೆಗಳ ಸಿಬ್ಬಂದಿಯನ್ನೂ ಪರಿಷ್ಕೃತ ನೀತಿಯಲ್ಲಿ ಸೇರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಈ ನಿರ್ಧಾರದಿಂದ ಸೈನಿಕರ ಕುಟುಂಬಗಳಿಗೆ ದೊಡ್ಡ…