Author: KNN IT TEAM

ಬೆಂಗಳೂರು: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್‌ ನನ್ನು ಕದ್ದು ಕಳ್ಳ ಪರಾರಿಯಾಗಿರುವ ಘಟನೆ ಜಯನಗರ 24ನೇ ಮುಖ್ಯರಸ್ತೆಯಲ್ಲಿ ನಡೆದಿದೆ. https://kannadanewsnow.com/kannada/heavy-rains-in-koppal-gangavathi-kampli-bridge-submerged/ ಆ ಕಡೆ..ಈ ಕಡೆ ನೋಡಿ ಅಂಗಡಿ ಮುಂದೆ ನಿಲ್ಲಿಸಿದ ಬೈಕ್ ಕದ್ದಿದ್ದಾನೆ. ಗಾಡಿ ಕದ್ದ 40 ನಿಮಿಷದಲ್ಲಿ ಅಪಘಾತ ಸಂಭವಿಸಿದೆ.ಸ್ನೇಹಿತರೊಂದಿಗೆ ತ್ರಿಬಲ್ ರೈಡ್ ಹೋಗಿ ಆಕ್ಸಿಡೆಂಟ್ ಮಾಡಿದ್ದನು. ಆಕ್ಸಿಡೆಂಟ್ ನಿಂದ ಶುರುವಾದ ಜಗಳ ಬಿಡಿಸಲು ಹೋದ ಸಂಚಾರಿ ಪೊಲೀಸ್ ಪೇದೆ. https://kannadanewsnow.com/kannada/heavy-rains-in-koppal-gangavathi-kampli-bridge-submerged/ ವಾಹನ ತಪಾಸಣೆ ವೇಳೆ, ಆಕ್ಸಿಡೆಂಟ್ ಮಾಡಿದ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಗಾಡಿ ಕಳವಾಗಿರೋದು ಅನ್ನೊದು ಕನ್ಫರ್ಮ್‌ ಆಗ್ತಿದ್ದಂತೆ ಕಳ್ಳರು ಕಾಲ್ಕಿತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಜಯನಗರ ಪೊಲೀಸರಿಗೆ ಬೈಕ್‌ ಅನ್ನು ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Read More

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿಯ ಸಮೀಪದಲ್ಲಿ ಹೊಸದಾಗಿ ಲೇಔಟ್ ( Layout ) ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮೀಣ ಜನತೆ, ನಗರ ವಾಸಿಗಳ ನಿವೇಶ ಕೊಳ್ಳುವಂತ ಕನಸು ಈಡೇರಿಸುವ ನಿಟ್ಟಿನಲ್ಲಿ, ಕಡಿಮೆ ದರದಲ್ಲಿ ಸೈಟ್ ಗಳು ಲಭ್ಯವಾಗಲಿವೆ. ಹಾಗಿದ್ದರೇ.. ಮಲೆನಾಡಿನಲ್ಲಿ ನಿವೇಶನ ಖರೀದಿಸಬೇಕು ಎನ್ನುವ ಯೋಜನೆಯಲ್ಲಿದ್ದವರು ತಡಮಾಡದೇ.. 9809386666, 7996796336 ಈ ಸಂಖ್ಯೆಗಳಿಗೆ ಕರೆ ಮಾಡಿ.. ಹೌದು.. ಸಾಗರದ ತಾಲೂಕಿನಿಂದ ತ್ಯಾಗರ್ತಿಗೆ ಹೋಗುವಂತ ರಾಜ್ಯ ಹೆದ್ದಾರಿಯ ಸಮೀಪವೇ ಸುರಭಿ ಎಸ್ ಆರ್ ರೆಸಿಡೆನ್ಸಿಯಲ್ ( Surabhi S R Residential ) ಎನ್ನುವಂತ ಲೇಔಟ್ ಒಂದನ್ನು ಮಲ್ನಾಡ್ ಡೆವೆಲಪರ್ಸ್ ನಿಂದ ( Malnad Developers ) ನಿರ್ಮಾಣ ಮಾಡಲಾಗುತ್ತಿದೆ. 9 ಎಕರೆ 20 ಗುಂಟೆ ಜಾಗದಲ್ಲಿ, ನಿರ್ಮಿಸುತ್ತಿರುವಂತ ಲೇಔಟ್, ತ್ಯಾಗರ್ತಿ ಬಸ್ ನಿಲ್ದಾಣದಿಂದ ( Tyagarthi Bus Stop ) ಕೆಲವೇ ದೂರದಲ್ಲಿದೆ. https://kannadanewsnow.com/kannada/delhi-high-court-dismisses-plea-for-postponement-of-neet-ug-exam/ ಮೂಲ ಸೌಕರ್ಯದ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳದಂತ ಮಲ್ನಾಡ್ ಡೆವೆಲಪರ್ಸ್, ಕುಡಿಯುವ ನೀರಿನ ( Drinking Water…

Read More

ಧಾರವಾಡ :  ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತಿದ್ದಂತೆ ಆಳ್ನಾವರ ತಾಲೂಕಿನ  ಕಂಬಾರಗಣವಿ ಗ್ರಾಮಕ್ಕೆ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಹೆಚ್ಚಾಗಿದೆ. https://kannadanewsnow.com/kannada/cauvery-in-kodagu-is-flowing-above-danger-level-balamuri-temple-likely-to-be-flooded-if-rains-increase/ ಕಂಬಾರ ಗಣವಿ ಗ್ರಾಮಕ್ಕೆ ಸಂಪರ್ಕ ಮಾಡೋದಕ್ಕೆ  ಇರೋದು ಇದೊಂದೆ ಏಕೈಕ ಮಾರ್ಗ ಆಗಿತ್ತು. ಮಳೆಯ ಆರ್ಭಟದಿಂದ  ಅಕ್ಕಪಕ್ಕ ಗುಡ್ಡಗಳಿಂದ ಹರಿದು ಬರುತ್ತಿರುವ ನೀರು  ಸೇತುವೆ ಮೇಲೆ ರಭಸವಾಗಿ ಹರಿಯುತ್ತಿದೆ. https://kannadanewsnow.com/kannada/cauvery-in-kodagu-is-flowing-above-danger-level-balamuri-temple-likely-to-be-flooded-if-rains-increase/ ಹಾಗಾಗಿ ಕುಂಬಾರಗಣವಿಗೆ ಬಸ್‌ ಸಂಚಾರ ಸ್ಥಗಿತ ಮಾಡಲಾಗಿದ್ದು, ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ. ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯ  ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Read More

ಕೊಪ್ಪಳ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದವರೆದಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ 1 ಲಕ್ಷ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ತುಂಗಭದ್ರಾ ಭೋರ್ಗರೆತಕ್ಕೆ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆ ಆಗಿದೆ. https://kannadanewsnow.com/kannada/health-benefits-of-eating-elaichi-banana/ ಬಳ್ಳಾರಿ- ಕೊಪ್ಪಳ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಂಗಾವತಿ- ಕಂಪ್ಲಿ ಸೇತುವ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯ ಹಾಗೂ ನದಿಯ ಭೋರ್ಗರೆಯುತ್ತಿದೆ. https://kannadanewsnow.com/kannada/health-benefits-of-eating-elaichi-banana/

Read More

ಕೊಡಗು :  ಜಿಲ್ಲೆಯಲ್ಲಿ ಭಾರೀ ಮಳೆಗೆ ಕ್ಷಣಕ್ಷಣಕ್ಕೂ ʻ ಕಾವೇರಿ ನದಿ ಅಪಾಯದ ಮಟ್ಟʼ ಮೀರಿ ಹರಿಯುತ್ತಿದೆ. ಪ್ರವಾಹ ಭೀತಿ ಹೆಚ್ಚಾಗಿದ್ದು,  ಮಳೆ ತೀವ್ರಗೊಂಡಲ್ಲಿ ಗ್ರಾಮಗಳು  ಜಲಾವೃತ  ಸಾಧ್ಯತೆಗಳಿವೆ. ಈ ಹಿಂದೆ  2018ರಲ್ಲಿ  ಬಲಮುರಿ ದೇವಸ್ಥಾನ ಸಂಪೂರ್ಣ ಮುಳಗಡೆಯಾಗಿತ್ತು. ಈಗಾಗಲೇ ನದಿ ನೀರು ಗ್ರಾಮದ ಸುತ್ತ ಆವರಿಸಿಕೊಂಡಿತ್ತು. ಹೀಗಾಗಿ ನದಿಯ ಪಕ್ಕಾ ಯಾರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ. https://kannadanewsnow.com/kannada/health-benefits-of-eating-elaichi-banana/

Read More

ನವದೆಹಲಿ: ಅಕ್ರಮ ಫೋನ್ ಕದ್ದಾಲಿಕೆ ಮತ್ತು ಸ್ಟಾಕ್ ಎಕ್ಸ್ಚೇಂಜ್ನ ಉದ್ಯೋಗಿಗಳ ಗೂಢಚರ್ಯೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ( Enforcement Directorate – ED ) ಮಾಜಿ ಎನ್ಎಸ್ಇ ಉನ್ನತ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ( Chitra Ramakrishna ) ಅವರನ್ನು ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಗುರುವಾರ ವರದಿ ಮಾಡಿದೆ. https://kannadanewsnow.com/kannada/delhi-high-court-dismisses-plea-for-postponement-of-neet-ug-exam/ ಈ ಹಿಂದೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ, ರಾಮಕೃಷ್ಣ ಮತ್ತು ರವಿ ನಾರಾಯಣ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿತ್ತು. ಸಿಬಿಐ ಅವರ ವಿರುದ್ಧ ಪ್ರಕರಣ ದಾಖಲಿಸಿದ ಒಂದು ವಾರದ ನಂತರ ಇದು ಬಂದಿದೆ. https://kannadanewsnow.com/kannada/incessant-rains-in-kodagu-district-another-house-collapsed-in-downtown-on-monday/ ನರೇನ್ ಮತ್ತು ರಾಮಕೃಷ್ಣ ಅವರು ಈಗ ನಿವೃತ್ತ ಮುಂಬೈ ಪೊಲೀಸ್ ಆಯುಕ್ತ ಪಾಂಡೆ ಅವರು ಸ್ಥಾಪಿಸಿದ ಕಂಪನಿಯೊಂದರಲ್ಲಿ ಸ್ಟಾಕ್ ಮಾರ್ಕೆಟ್ ಉದ್ಯೋಗಿಗಳ ಫೋನ್ ಕರೆಗಳನ್ನು ಕಾನೂನುಬಾಹಿರವಾಗಿ ಅಡ್ಡಗಟ್ಟುವ ಮೂಲಕ ಅವರ ಮೇಲೆ…

Read More

ನವದೆಹಲಿ : ರಫ್ತುಗಳನ್ನ ಹೆಚ್ಚಿಸಲು ಮತ್ತು ಜವಳಿ ಉದ್ಯಮದಲ್ಲಿ ಉದ್ಯೋಗವನ್ನ ಸೃಷ್ಟಿಸುವ ಪ್ರಯತ್ನದಲ್ಲಿ ಉಡುಪುಗಳು / ಗಾರ್ಮೆಂಟ್ಸ್ ಮತ್ತು ಮೇಡ್-ಅಪ್‌ಗಳ ರಫ್ತಿಗಾಗಿ ಜವಳಿ ಸಚಿವಾಲಯವು ಘೋಷಿಸಿದ ಅದೇ ದರಗಳೊಂದಿಗೆ ರಾಜ್ಯ ಮತ್ತು ಕೇಂದ್ರ ತೆರಿಗೆಗಳು ಮತ್ತು ಲೆವಿಗಳ (ROSCTL) ರಿಯಾಯಿತಿ ಯೋಜನೆಯನ್ನ ಮಾರ್ಚ್ 31, 2024 ರವರೆಗೆ ಮುಂದುವರಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಅಧಿಕಾರ ನೀಡಿದೆ. ಎಇಪಿಸಿ (ಉಡುಪು ರಫ್ತು ಉತ್ತೇಜನಾ ಮಂಡಳಿ) ಅಧ್ಯಕ್ಷ ನರೇನ್ ಗೋಯೆಂಕಾ, “ROSCTL ಒಂದು ದೂರದೃಷ್ಟಿಯ ಮತ್ತು ಬೆಳವಣಿಗೆ ಆಧಾರಿತ ಯೋಜನೆಯಾಗಿದ್ದು, ಇದು ಸ್ಥಿರವಾದ ಮತ್ತು ಊಹಿಸಬಹುದಾದ ನೀತಿ ಆಡಳಿತವನ್ನ ಒದಗಿಸಿದೆ, ಇದು ರಫ್ತು ಮತ್ತು ಉದ್ಯೋಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೆಚ್ಚ ದಕ್ಷತೆ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನ ಸುಧಾರಿಸಲು ಸಹಾಯ ಮಾಡಿತು. ಇದು ಡೊಮೇನ್‌ನಲ್ಲಿ ನವೋದ್ಯಮಗಳು ಮತ್ತು ಉದ್ಯಮಿಗಳನ್ನ ಉತ್ತೇಜಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ಎಂಎಸ್ಎಂಇಗಳು ಉಡುಪು ರಫ್ತು ವ್ಯವಹಾರಕ್ಕೆ ಸೇರಲು ಕಾರಣವಾಗಿದೆ” ಎಂದಿದೆ. 2017 ರಲ್ಲಿ…

Read More

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಬಾಳೆ ಹಣ್ಣು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಎಲ್ಲರೂ ಮನೆಯಲ್ಲೂ ಬಾಳೆಹಣ್ಣು ತಪ್ಪುವುದಿಲ್ಲ. ಪ್ರತಿನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಜೀರ್ಣಕ್ರಿಯೆಗೂ ಕೂಡ ಒಳ್ಳೆಯದಾಗುತ್ತದೆ. https://kannadanewsnow.com/kannada/beef-exports-are-on-the-rise-in-hagaribommanahalli/ ಅದರಲ್ಲೂ ಏಲಕ್ಕಿ ಬಾಳೆಹಣ್ಣು ತುಂಬಾ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಇದರಲ್ಲಿ ಜಾಸ್ತಿ ಪೌಷ್ಠಿಕಾಂಶದ ಅಂಶಗಳು ಇರುತ್ತದೆ. ಕ್ಕ ಮಕ್ಕಳಿಗೆ ನೀಡಲು ಏಲಕ್ಕಿ ಬಾಳೆಹಣ್ಣು ಉತ್ತಮವಾಗಿದೆ. ಈ ಬಾಳೆಹಣ್ಣುಗಳು ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಲ್ಲಿ ಅಧಿಕವಾಗಿದೆ. ಅಧಿಕ ರಕ್ತದೊತ್ತಡವು ಹೆಚ್ಚಿನ ಜನರನ್ನು ಕಾಡುತ್ತಿದೆ. ಇಲ್ಲಿದೆ ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ಪ್ರಯೋಜನೆಗಳು https://kannadanewsnow.com/kannada/beef-exports-are-on-the-rise-in-hagaribommanahalli/ *ಏಲಕ್ಕಿ ಬಾಳೆಹಣ್ಣು ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ. * ಕೆಲವರಿಗೆ ಮಲಬದ್ಧತೆ ಜಾಸ್ತಿ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ಏಲಕ್ಕಿ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಆರಾಮ್‌ ಮಾಡುತ್ತದೆ. *ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಎರಡು ಬಲಗೊಳಿಸುತ್ತದೆ. *ಏಲಕ್ಕಿ ಬಾಳೆಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಕಂಡುಬರುತ್ತವೆ. ಹೊಟ್ಟೆಯ ಅಲ್ಸರ್‌ ಸಮಸ್ಯೆಗೆ…

Read More

ನವದೆಹಲಿ: ಜುಲೈ 17 ರಂದು ನಡೆಯಲಿರುವ 2022 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಹಲವಾರು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (National Eligibility cum Entrance Test-Undergraduate-NEET-UG) ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಪ್ರಾರಂಭಿಸಿತು. ಅಲ್ಲದೇ ಅರ್ಜಿಯ ವಿಚಾರಣೆ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಅರ್ಜಿಯನ್ನು ವಜಾಗೊಳಿಸಿದೆ. https://kannadanewsnow.com/kannada/sri-lankan-president-gotabaya-rajapaksa-departs-for-singapore-from-maldives/ ನೀಟ್-ಯುಜಿ 2022 ( NEET UG exam ) ಅನ್ನು ಮುಂದೂಡುವ ಮನವಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್, 15 ವಿದ್ಯಾರ್ಥಿಗಳು ಪರೀಕ್ಷೆಯನ್ನು ಮರುನಿಗದಿಗೊಳಿಸಲು ಹೇಗೆ ಪ್ರಯತ್ನಿಸಬಹುದು ಎಂಬುದನ್ನು ಕಾದು ನೋಡಬೇಕಿದೆ. https://twitter.com/ANI/status/1547521542455971840 ಒಟ್ಟಾರೆಯಾಗಿ ಜುಲೈ 17 ರಂದು ನಡೆಯಬೇಕಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (ನೀಟ್-ಯುಜಿ) ಮುಂದೂಡಲು ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮತ್ತು ಇತರರಿಗೆ ನಿರ್ದೇಶನ ನೀಡುವಂತೆ ಕೋರಿ 15 ವೈದ್ಯಕೀಯ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

Read More

ಕೊಡಗು : ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ನಿಲ್ಲದ ಮಳೆಯ ಅವಾಂತರ ಸೃಷ್ಠಿಯಾಗುತ್ತಿದ್ದು, ವಿದ್ಯುತ್‌ ಕಂಬ, ರಸ್ತೆ ಸಂಪರ್ಕ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಬೆನ್ನಲ್ಲೆ ಸೋಮವಾರ ಪೇಟೆಯಲ್ಲಿ ಮತ್ತೊಂದು ಮನೆ ಕುಸಿತಗೊಂಡಿದೆ. https://kannadanewsnow.com/kannada/ladies-beware-dont-ignore-this-change-in-the-breasts-do-you-know-why-heres/ ಧಾರಾಕಾರ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಮನೆ ಕುಸಿದು ಬಿದಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ ಪರೀಶೀಲನೆ ನಡೆಸಿದರು.  ಮಹದೇವಪ್ಪ ಎಂಬುವರಿಗೆ ಸೇರಿದ ಮನೆ ಎಂಬ ಮಾಹಿತಿ ಲಭ್ಯವಾಗಿದೆ.   

Read More