Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ( PM Narendra Modi ) ಅವರ ಮುತುವರ್ಜಿಯಿಂದ ಅಭಿವೃದ್ದಿಗೊಂಡಿರುವ ಕಾಶಿಗೆ ಹೆಚ್ಚಿನ ಭಕ್ತರು ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದರು. ಹೀಗಾಗಿ ಕಾಶಿ ಯಾತ್ರೆಗೆ ಹೊರಟಿರುವಂತ ಯಾತ್ರಾರ್ಥಿಗಳಿಗೆ ರೂ.5,000 ಸಹಾಯಧವನ್ನು ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಜರಾಯಿ ಇಲಾಖೆಯ ವತಿಯಿಂದ ರಾಜ್ಯದಿಂದ ಕಾಶಿ ಯಾತ್ರೆ ( Kashi Yatra ) ಕೈಗೊಂಡ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಿ, ಡಿ.ಬಿ.ಟಿ ಮೂಲಕ ಆನ್‌ಲೈನ್ ಮೂಲಕ ಹಣ ವರ್ಗಾವಣೆಗೆ ಚಾಲನೆ ನೀಡಿ ಹಾಗೂ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸುವ ವೆಬ್ ಪೋರ್ಟಲ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇತ್ತೀಚೆಗೆ ಕಾಶಿಯನ್ನು ಮೋದಿಯವರು ನವೀಕರಣ ಮಾಡಿದ್ದಾರೆ. ಹಿಂದೆ ಕಾಶಿಗೆ ಹೋದರೆ ಅಲ್ಲಿನ ಅವ್ಯವಸ್ಥೆಯಿಂದ ಬೇಸರ ಉಂಟಾಗುತ್ತಿತ್ತು. ಆದರೆ ಈಗ ನೂರಕ್ಕೆ ನೂರು ಬದಲಾವಣೆ ಆಗಿದೆ. 23 ಘಾಟ್…
ಬೆಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ಕೇರಳ ಮೂಲದ ಮಸೂಕ್ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 22 kg 810 ಗ್ರಾಂ ತೂಕದ 10 ಲಕ್ಷ ಬೆಲೆಬಾಳುವ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. https://kannadanewsnow.com/kannada/flood-situation-in-the-district-bjp-leaders-in-goa-have-fun-masti/ ಕಲಾಸಿಪಾಳ್ಯ ಬಳಿಯ ಜಲಠಂಟೇಶ್ವರ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗಾ ಗಾಂಜಾ ಮಾರಾಟ ಮಾಡುತ್ತಿರುವುದು ಬಯಲಿಗೆ ಬಂದಿದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಮಹಿಳೆಯರು ಜೀವನದಲ್ಲಿ ಬಹಳಷ್ಟು ಕೆಲಸದ ಒತ್ತಡದ ಜಂಜಾಟದಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲು ಮರೆಯುತ್ತಾರೆ. ಅವರು ತಮ್ಮ ಆರೋಗ್ಯ ಮತ್ತು ದೇಹದ ಬಗ್ಗೆ ಎಷ್ಟು ಕಾಳಜಿ ವಹಿಸಬೇಕೋ ಅಷ್ಟು ಕಾಳಜಿ ವಹಿಸುವುದಿಲ್ಲ. ಸೌಂದರ್ಯವು ಬಾಹ್ಯ ಮಾತ್ರವಲ್ಲ, ಆಂತರಿಕವೂ ಸುಂದರವಾಗಿರಬೇಕು. ವ್ಯಕ್ತಿಯ ದೇಹವು ಆರೋಗ್ಯಕರವಾಗಿದ್ದಾಗ ಅವನ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. https://kannadanewsnow.com/kannada/breaking-news-monkeypox-is-a-concern-in-the-wake-of-coronavirus-in-the-country-centres-new-advisory-to-states-screening-testing/ ಬೆಳೆಯುತ್ತಿರುವ ಮಹಿಳೆಯರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಗಳಿಂದ ತಮಗಾಗಿ ಸಮಯವನ್ನು ತೆಗೆದುಕೊಳ್ಳಬೇಕು. ಕೆಲವು ಸರಳ ಯೋಗ ಭಂಗಿಗಳನ್ನಾದರೂ ಮಾಡಬೇಕಾಗಿದೆ. ದಿನನಿತ್ಯ ಯೋಗ ಮಾಡೋದ್ರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಜತೆಗೆನಿಮ್ಮ ದೇಹವನ್ನು ನಿಮ್ಮ ವಯಸ್ಸಿಗಿಂತ ತುಂಬಾ ಚಿಕ್ಕವರಾಗಿ ಕಾಣುವಂತೆ ಮಾಡುತ್ತದೆ. 40 ರಲ್ಲಿಯೂ ಸಹ, ನೀವು 25 ವರ್ಷ ವಯಸ್ಸಿನವರಾಗಿ ಕಾಣಬಹುದು. ಹಾಗಿದ್ರೆ ಯಾವ ಯೋಗಸಾನ ಮಾಡಬೇಕೆಂದು ಚಿಂತಿಸುತ್ತಿದ್ದೀರಾ? ಮಹಿಳೆಯರು ಮಾಡಬೇಕಾದ ಪ್ರಮುಖ ಯೋಗಾಸನಗಳು ಮಹಿಳೆಯರು ಪ್ರತಿದಿನ ಮಾಡಬಹುದಾದ 2 ಯೋಗ ಭಂಗಿಗಳು ಈ ಕೆಳಗಿನಂತಿವೆ. ಅವರು ಅನೇಕ ದೈಹಿಕ ಮತ್ತು ಮಾನಸಿಕ…
ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಬಾಹ್ಯಾಕಾಶ ಇಲಾಖೆ ಮತ್ತು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಪ್ರಮುಖ ಕೇಂದ್ರಗಳಲ್ಲಿ ಒಂದಾದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (NRSC) “ಭುವನ್ ಆಧಾರ್” ಪೋರ್ಟಲ್ ಪ್ರಾರಂಭಿಸಲು ಸಹಕರಿಸಿದೆ. ಆಧಾರ್ ಕಾರ್ಡ್‌ದಾರರು ಈ ಪೋರ್ಟಲ್ ಮೂಲಕ ಮೂರು ಪ್ರೀಮಿಯಂ ವೈಶಿಷ್ಟ್ಯಗಳನ್ನ ಪ್ರವೇಶಿಸಬಹುದು. ಅದ್ರಂತೆ, ಇದರಲ್ಲಿ ಸಾಮೀಪ್ಯ ವಿಶ್ಲೇಷಣೆ, ಹತ್ತಿರದ ಆಧಾರ್ ಕೇಂದ್ರಗಳಿಗೆ ಮಾರ್ಗ ನ್ಯಾವಿಗೇಶನ್ ಮತ್ತು ಆಧಾರ್ ಕೇಂದ್ರಗಳ ಜಿಯೋಸ್ಪೇಷಿಯಲ್ ಡಿಸ್ಪ್ಲೇ ಸೇರಿವೆ. https://twitter.com/UIDAI/status/1547469806982406144?s=20&t=D_ANVAccmglHj2FuKnR72Q ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ತಿಳಿದುಕೊಳ್ಳುವುದು ಹೇಗೆ? 1. https://bhuvan.nrsc.gov.in/aadhaar/ ಭೇಟಿ ನೀಡಿ ಮತ್ತು ಪರದೆಯ ಎಡಭಾಗದಲ್ಲಿ ನೀವು ನಾಲ್ಕು ಡ್ರಾಪ್-ಡೌನ್ ಆಯ್ಕೆಗಳನ್ನು ಪಡೆಯುತ್ತೀರಿ. 2. ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಹುಡುಕಲು ನೀವು ‘ಹತ್ತಿರದ ಕೇಂದ್ರಗಳು’ ಆಯ್ಕೆಯನ್ನು ಆಯ್ಕೆ ಮಾಡಬಹುದು, ಮತ್ತು ಈ ಆಯ್ಕೆಯನ್ನು ಆಯ್ಕೆ ಮಾಡುವ ಮೂಲಕ ನೀವು ನಿಮ್ಮ ಸ್ಥಳ ಅಥವಾ ನಗರವನ್ನು ನಮೂದಿಸುವ ಮೂಲಕ ನಿಮ್ಮ ಹತ್ತಿರದ…
ನವದೆಹಲಿ: 2003 ರಲ್ಲಿ ತನ್ನ ವಿರುದ್ಧ ದಾಖಲಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಎರಡು ವರ್ಷಗಳ ಶಿಕ್ಷೆಯನ್ನು ಪ್ರಶ್ನಿಸಿ ಜನಪ್ರಿಯ ಗಾಯಕ ದಲೇರ್ ಮೆಹಂದಿ ಸಲ್ಲಿಸಿದ್ದ ಅರ್ಜಿಯನ್ನು ಪಟಿಯಾಲ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ವರದಿಗಳ ಪ್ರಕಾರ, ನ್ಯಾಯಾಲಯವು ತೀರ್ಪು ಪ್ರಕಟಿಸಿದ ಕೂಡಲೇ ಮೆಹಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ದಲೇರ್ ಮೆಹಂದಿ ಮತ್ತು ಅವರ ಸಹೋದರ ಶಂಶೇರ್ ಸಿಂಗ್ ಅವರು ತಮ್ಮ ಗುಂಪಿನ ಸದಸ್ಯರ ಸೋಗಿನಲ್ಲಿ ಅಪಾರ ಪ್ರಮಾಣದ “ಪ್ಯಾಸೇಜ್ ಮನಿ” ಅನ್ನು ವಿಧಿಸುವ ಮೂಲಕ ಅಕ್ರಮವಾಗಿ ವಿದೇಶಕ್ಕೆ ಜನರನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. https://kannadanewsnow.com/kannada/are-you-thinking-of-buying-a-plot-of-land-in-malnad-if-so-heres-the-golden-opportunity/ ಪಟಿಯಾಲಾ ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ದೂರುದಾರರ ವಕೀಲ ಗುರ್ಮೀತ್ ಸಿಂಗ್, 2003 ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಮೆಹಂದಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದರು. ಗಾಯಕನನ್ನು ಪಂಜಾಬ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಪ್ರೊಬೆಷನರಿ ಮೇಲೆ ಬಿಡುಗಡೆಗಾಗಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ ಎಂದು ಅವರು ಹೇಳಿದರು. https://kannadanewsnow.com/kannada/incessant-rains-in-kodagu-district-another-house-collapsed-in-downtown-on-monday/
ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ, ಅಲ್ಲಿ ಬಿಜೆಪಿ ಮುಖಂಡರು ಮೋಜು ಮಸ್ತಿ ಮಾಡುತ್ತಿದ್ದಾರೆ. https://kannadanewsnow.com/kannada/man-steals-two-wheeler-parked-escapes-in-banglore/ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಗೋವಾದಲ್ಲಿ ಮೋಜು ಮಸ್ತಿ ಸದಸ್ಯರೊಂದಿಗೆ ಮೋಜು- ಮಸ್ತಿ ಮಾಡುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಯಾಗಿ ಬಿಜೆಪಿ ಶಾಸಕರು ಮತ್ತು ಸದಸ್ಯರು ಎಂಜಾಯ್ ಮಾಡುತ್ತಿದ್ದಾರೆ. ತೇರದಾಳ ಶಾಸಕ ಸಿದ್ದು ಸವದಿ ಸಹ ಸದಸ್ಯರ ಜೊತೆಗೆ ಗೋವಾದಲ್ಲಿ ಕಾಲ ಕಳೆಯುತ್ತಿದ್ದಾರೆ. https://kannadanewsnow.com/kannada/man-steals-two-wheeler-parked-escapes-in-banglore/ ನಾಳೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಮತ್ತ ಸದಸ್ಯರು ಗೋವಾ ರೆಸಾರ್ಟ್ ಗೆ ತೆರಳಿದ್ದಾರೆ. ಇಲ್ಲಿ ನಿರಂತರ ಮಳೆ, ಕೃಷ್ಣಾ ನದಿ ಪ್ರವಾಹ ಭೀತಿ ಉಂಟಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿಗತಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸಭೆ ನಡೆಸಿದ್ದಾರೆ. ಆದರೆ ಸಭೆಗೆ ಗೈರಾಗಿ ಶಾಸಕ ಸಿದ್ದು ಸವದಿ ಗೋವಾದಲ್ಲಿ ಕಾಲ ಕಳೆಯುತ್ತಿದ್ದಾರೆ.
ನವದೆಹಲಿ : ಮಂಕಿಪಾಕ್ಸ್ ಬೆದರಿಕೆಯನ್ನ ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಬೇಕಾದ ಪ್ರಮುಖ ಕ್ರಮಗಳನ್ನ ಪುನರುಚ್ಚರಿಸಿದ ಕೇಂದ್ರ ಸರ್ಕಾರ, ಗುರುವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮೇ 31ರಂದು ಸಚಿವಾಲಯವು ಕಳುಹಿಸಿದ ಪತ್ರವನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಸಾಂಕ್ರಾಮಿಕ ರೋಗದ ನಿರ್ವಹಣೆಯ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ, ಭಾರತದಲ್ಲಿ ಮಂಕಿಪಾಕ್ಸ್‌ನ ಯಾವುದೇ ಪ್ರಕರಣ ವರದಿಯಾಗಿಲ್ಲ. ಪ್ರವೇಶದ ಸ್ಥಳಗಳಲ್ಲಿ ಆರೋಗ್ಯ ತಪಾಸಣಾ ತಂಡಗಳು, ರೋಗ ಕಣ್ಗಾವಲು ತಂಡಗಳು, ಸಾಮಾನ್ಯ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಸೇರಿದಂತೆ ಎಲ್ಲಾ ಪ್ರಮುಖ ಮಧ್ಯಸ್ಥಗಾರರ ಓರಿಯೆಂಟೇಶನ್ ಮತ್ತು ಮರು-ಓರಿಯೆಂಟೇಶನ್ ಸೇರಿದಂತೆ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ಕಾರ್ಯದರ್ಶಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದರು. ಪ್ರವೇಶದ ಸ್ಥಳಗಳಲ್ಲಿ ಮತ್ತು ಸಮುದಾಯದಲ್ಲಿ ಶಂಕಿತ ಪ್ರಕರಣಗಳನ್ನು ಪರೀಕ್ಷಿಸಲು ಕೇಂದ್ರವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ರೋಗಿಯ ಪ್ರತ್ಯೇಕತೆ, ಆರೋಗ್ಯ ಕಾರ್ಯಕರ್ತರಿಗೆ ನಿರ್ದೇಶಿಸಲಾದ ತೀವ್ರ…
ಮಂಡ್ಯ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಶ್ರೀರಂಗಟಪ್ಟಣ ತಾಲೂಕಿನ ದೊಡ್ಡೇ ಗೌಡನ ಕೊಪ್ಪಲು ಬಳಿಯ ಪುರಾತನ ಪ್ರಸಿದ್ಧ ಕ್ಷೇತ್ರ ಗೌತಮ ಕ್ಷೇತ್ರ ಜಲಾವೃತ ಗೊಂಡಿದೆ. ಕಾವೇರಿ ನದಿ ತೀರದಲ್ಲಿರುವ ಗೌತಮ ಕ್ಷೇತ್ರದ ಮಠ ಜಲಾವೃತ ಗೊಂಡಿದ್ದರೂ, ಇಲ್ಲಿನ ಶ್ರೀಗಜಾನನ ಸ್ವಾಮೀಜಿ ಮಠದಲ್ಲೇ ಇರುವುದು ಆತಂಕ ಸೃಷ್ಟಿಸಿದೆ. https://kannadanewsnow.com/kannada/amrit-paul-subjected-to-narco-analysis-test-politicians-involvement-exposed-siddaramaiah/ ಕಾವೇರಿ ನದಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದಂತೆ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹೆಚ್ಚಾಗುವ ಸಾಧ್ಯತೆಗಳು ಇವೆ. ಗೌತಮ ಕ್ಷೇತ್ರದ ಸ್ವಾಮಿ ಕ್ಷೇತ್ರ ಬಿಟ್ಟು ಬರಲು ಒಪ್ಪುತ್ತಿಲ್ಲ. ಗಜಾನನ ಸ್ವಾಮೀಜಿ ಶ್ರೀರಂಗಪಟ್ಟಣದ ದೇವೇಗೌಡನ ಕೊಪ್ಪಲಿನಲ್ಲಿನ ಕ್ಷೇತ್ರ ಇದಾಗಿದೆ. ಪ್ರವಾಹ ಹೆಚ್ಚಾದ್ರೆ ನಡುಗಡ್ಡೆ ಮುಳುಗುವ ಸಾಧ್ಯತೆಯಿದೆ. ಸ್ವಾಮೀಜಿ ಅವರಿಗೆ ನಡುಗಡ್ಡೆ ಬಿಟ್ಟು ಬರಲು ತಾಲೂಕು ಆಡಳಿತ ಮಂಡಳಿ ಸೂಚನೆ ನೀಡಿದ್ದಾರೆ. ಆದರೂ ಕ್ಷೇತ್ರ ಬಿಟ್ಟು ಬರೋದಕ್ಕೆ ಸ್ವಾಮೀಜಿ ನಕಾರ ಎಂದಿದ್ದು ಇದೀಗಾ ಭಾರೀ ಚರ್ಚೆಗೆ ಗ್ರಾಸವಾಗಿದೆ. https://kannadanewsnow.com/kannada/amrit-paul-subjected-to-narco-analysis-test-politicians-involvement-exposed-siddaramaiah/ ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ, ನನಗೆ ಏನೂ ತೊಂದರೆ ಆಗಿಲ್ಲ, ಇಲ್ಲಿ ನಾನು ಸುರಕ್ಷಿತವಾಗಿದ್ದೇನೆ,…
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ( PSI Recruitment Scam ) ಸಿಐಡಿ ಅಧಿಕಾರಿಗಳಿಂದ ( CID Officer ) ಬಂಧಿತರಾಗಿರುವ ನೇಮಕಾತಿ ವಿಭಾಗದ ಎ.ಡಿ.ಜಿ.ಪಿ ಯಾಗಿದ್ದ ಅಮ್ರಿತ್ ಪೌಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಯಾರೆಲ್ಲ ರಾಜಕಾರಣಿಗಳು ಇರದಲ್ಲಿ ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗಲಿದೆ. “ಉಪ್ಪು ತಿಂದವರು ನೀರು ಕುಡಿಯಲಿ” ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. https://twitter.com/siddaramaiah/status/1547510963770773504 ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಪಿಎಸ್‌ಐ ನೇಮಕಾತಿ ‘ಅಕ್ರಮದಲ್ಲಿ ಅನೇಕ ಸಚಿವರು, ಅವರ ಆಪ್ತರು ಶಾಮೀಲಾಗಿರುವ ಸಂದೇಹಗಳಿವೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಬೇಕು ಎಂದರೆ ಪ್ರಮುಖ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು & ಅಮ್ರಿತ್ ಪೌಲ್ ಬರೆದ ಡೈರಿಯ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. https://twitter.com/siddaramaiah/status/1547511519000219648
ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ (State Bank of India) ಮತ್ತೊಮ್ಮೆ ಸಾಲದ ದರಗಳನ್ನ (MCLR) ಹೆಚ್ಚಿಸುವುದಾಗಿ ಘೋಷಿಸಿದೆ. ಅಂದ್ಹಾಗೆ, ಒಂದು ತಿಂಗಳ ಹಿಂದೆ ಅಂದ್ರೆ ಜೂನ್‌ನಲ್ಲಿ ಬ್ಯಾಂಕ್ ಅದನ್ನ ವಿಸ್ತರಿಸಿತ್ತು. ಈಗ ಮತ್ತೆ ವಿಸ್ತರಿಸಿದೆ. ಇನ್ನು ಇಂದು ಅದು 10 ಬಿಪಿಎಸ್ (ಶೇಕಡಾ 0.10) ಹೆಚ್ಚಳವನ್ನ ಘೋಷಿಸಿದೆ. ಏರಿಕೆಯಾದ ದರಗಳು ನಾಳೆಯಿಂದ ಅಂದರೆ ಜುಲೈ 15 ರಿಂದ ಜಾರಿಗೆ ಬರಲಿವೆ. ಕೇಂದ್ರೀಯ ಬ್ಯಾಂಕ್ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದಾಗಿನಿಂದ ಅನೇಕ ಬ್ಯಾಂಕುಗಳು ದರಗಳನ್ನ ಹೆಚ್ಚಿಸುತ್ತಿವೆ. ಅಂದ್ಹಾಗೆ, ರೆಪೊ ದರ ಈಗ ಶೇಕಡಾ 4.90 ರಷ್ಟಿದೆ. * ದರಗಳು ನಾಳೆಯಿಂದ ಜಾರಿಗೆ ಬರಲಿವೆ. * ಏರಿಕೆಯ ನಂತರ, ರಾತ್ರೋರಾತ್ರಿ, ಒಂದು ತಿಂಗಳು ಮತ್ತು ಮೂರು ತಿಂಗಳ ಎಂಸಿಎಲ್ಆರ್ ಶೇಕಡಾ 7.05 ರಿಂದ ಶೇಕಡಾ 7.15 ಕ್ಕೆ ಏರುತ್ತದೆ. * ಆರು ತಿಂಗಳ ಅವಧಿಯ ಸಾಲಗಳ ಎಂಸಿಎಲ್ಆರ್ ಶೇಕಡಾ 7.35 ರಿಂದ ಶೇಕಡಾ 7.45 ಕ್ಕೆ ಏರಿದೆ. * ಒಂದು…