Author: KNN IT TEAM

ಹಾವೇರಿ : ಪ್ರಸಕ್ತ ಸಾಲಿಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ವತಿಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಅಡಿ ಕುರಿ, ಮೇಕೆ ಘಟಕ ಸ್ಥಾಪನೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 18 ರಿಂದ 60 ವರ್ಷದೊಳಗಿನವರಾಗಿರಬೇಕು. ಸಂಘಗಳು ಇಲ್ಲದಿರುವ ತಾಲೂಕುಗಳಲ್ಲಿಯ ಕುರಿ, ಮೇಕೆ ಸಕಾಣಿಕೆದಾರರು ಅರ್ಜಿ ಸಲ್ಲಿಸಬಹುದು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. https://kannadanewsnow.com/kannada/applications-invited-for-loan-facility-under-various-schemes-under-self-employment-scheme/ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಕುರಿ ಘಟಕ-03, ಮೇಕೆ ಘಟಕ-02 ಸೇರಿ ಐದು ಹಾಗೂ ಗಿರಿಜನ ಉಪ ಉಪಯೋಜನೆಯಡಿ ಕುರಿ ಘಟಕ-02 ಹಾಗೂ ಮೇಕೆ ಘಟಕ ಒಂದು ಸೇರಿ ಮೂರು ಘಟಕ ಸ್ಥಾಪನೆ ಗುರಿ ನಿಗಧಿಪಡಿಸಲಾಗಿದೆ. ಆಸಕ್ತರು ನಿಗಧಿತ ಅರ್ಜಿ ನಮೂನೆಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಹಾವೇರಿ…

Read More

ಹಾವೇರಿ : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಸುವಿಧಾ ತಂತ್ರಾಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ಯೋಜನೆಯಡಿ ಗರಿಷ್ಠ ರೂ.ಎರಡು ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದ್ದು, ಗರಿಷ್ಠ ಶೇ.15 ರಷ್ಟು ಸಹಾಯಧನ, ಉಳಿಕೆಮೊತ್ತ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು. https://kannadanewsnow.com/kannada/bangaloreans-kengeris-electric-crematorium-temporarily-shuts-down-for-90-days/ ಅಭ್ಯರ್ಥಿಗಳು ಹಿಂದುಳಿದ ವರ್ಗ 1, 2ಎ, 3ಎ ಮತ್ತು 3ಬಿಗೆ( ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅಲೆಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಗಳಗಳು ಹೊರತುಪಡಿಸಿ) ಸೇರಿದವರಾಗಿರಬೇಕು. 18 ರಿಂದ ವರ್ಷದೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ.98,000/- ಹಾಗೂ ನಗರ ಪ್ರದೇಶದವರಿಗೆ ರೂ.1.20 ಲಕ್ಷದೊಳಗಿರಬೇಕು. ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್‍ನಲ್ಲಿರುವಂತೆ ಹೆಸರು, ಜಾತಿ ಮತ್ತು ಆದಾಯ ಪ್ರಮಣಪತ್ರ, ಬ್ಯಾಂಕ್ ಪಾಸ್ ಹೊಂದಾಣಿಕೆಯಾಗಬೇಕು.…

Read More

ಬೆಂಗಳೂರು : ದೇಶದಲ್ಲಿ130 ಕೋಟಿ ಜನರ ಮಾರುಕಟ್ಟೆ ಬೇರೆ ಯಾವ ದೇಶದಲ್ಲಿಯೂ ಸಿಗುವುದಿಲ್ಲ. ಜನರ ಬೇಕು ಬೇಡಿಕೆಗಳನ್ನು ಈಡೇರಿಸಲು ಜನರಿಗೆ ಕೌಶಲ್ಯ ಬೇಕು. ಆ ಕೌಶಲ್ಯದ ಉಪಯೋಗವೇ ದೇಶದ ಭವಿಷ್ಯವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದರು. ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕೌಶಲ್ಯ ನೈಸರ್ಗಿಕವಾಗಿ ದೇವರು ಕೊಟ್ಟಿರುವಂತಹ ವರ. ಅದಕ್ಕೆ ನಾವು ಜ್ಞಾನವನ್ನು ಜೋಡಿಸಬೇಕು. ಪ್ರತಿಯೊಬ್ಬರಲ್ಲಿ ವಿಭಿನ್ನವಾದ ಕೌಶಲ್ಯಗಳಿರುತ್ತವೆ. ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು. ನಾನು ಪ್ರತಿಯೊಬ್ಬ ಮನುಷ್ಯನಲ್ಲಿರುವ ಗುಣಾತ್ಮಕವಾದ ಕೌಶಲ್ಯವನ್ನು ಗುರುತಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಯಾರೂ ಜ್ಞಾನ, ಕೌಶಲ್ಯವನ್ನುಕದಿಯಲು ಸಾಧ್ಯವಿಲ್ಲ. ಇವತ್ತಿನ ಪೈಪೋಟಿಯ ಕಾಲದಲ್ಲಿ ನಿಮ್ಮ ಕೌಶಲ್ಯಕ್ಕೆ ಜ್ಞಾನವನ್ನು ಸೇರಿಸಿದರೆ ಅದಕ್ಕೆ ಬೆಲೆ ಬರುತ್ತದೆ ಎಂದು ಹೇಳಿದರು. https://kannadanewsnow.com/kannada/bangaloreans-kengeris-electric-crematorium-temporarily-shuts-down-for-90-days/ ನಮ್ಮ ಜನಸಂಖ್ಯೆ ಮಾರಕ, ಬಹಳ ದೊಡ್ಡ ಭಾರ ಎಂದು ಹಿಂದೆ ಮಾತನಾಡುತ್ತಿದ್ದರು. ಈ ದೇಶದಲ್ಲಿ 46% ಯವಕರಿದ್ದಾರೆ. ಅವರಿಗೆ…

Read More

ಬೆಂಗಳೂರು : ದೇಶಾದ್ಯಂತ ಭಾರತ್‌ ಜೋಡೊ ಯಾತ್ರೆ ನಡೆಸಲು ‌ಕಾಂಗ್ರೆಸ್‌ ಮುಂದಾಗಿದ್ದು, ಈ ಹಿಂದೆ ಅಗಸ್ಟ್‌ 2ರಂದು ಯಾತ್ರೆ ನಡೆಸಲು ನಿರ್ಧರಿಸಿತ್ತು. ಆದ್ರೆ, ಈಗ ಅಕ್ಟೋಬರ್‌ಗೂ ಮುನ್ನವೇ ಯಾತ್ರೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ 6 ತಿಂಗಳುಗಳ ಕಾಲ ಜೋಡೋ ಯಾತ್ರೆ ನಡೆಯಲಿದ್ದು, ತಮಿಳುನಾಡಿನಿಂದ ಆರಂಭವಾಗಲಿದೆ. ಅದ್ರಂತೆ, ರಾಹುಲ್‌ ಗಾಂಧಿ ದೇಶಾದ್ಯಂತ 3,500 ಕಿಲೋ ಮೀಟರ್‌ ನಡೆಯಲು ಯೋಜಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ಇಂದು ಭಾರತ್‌ ಜೋಡೊ ಯಾತ್ರೆಗೆ ಎಐಸಿಸಿಯಿಂದ ಸಂಯೋಜಕರ ನೇಮಕ ಮಾಡಲಾಗಿದ್ದು, ಕರ್ನಾಟಕದ ಸಂಯೋಜಕರಾಗಿ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್‌ ನೇಮಕ ಮಾಡಲಿದೆ. ಅದ್ರಂತೆ, ಕರ್ನಾಟಕದಲ್ಲಿ ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ 15 ದಿನಗಳಲ್ಲಿ 12 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದ್ದು, ಈ ಮೂಲಕ ರಾಹುಲ್‌ 15 ದಿನ ರಾಜ್ಯ ಸುತ್ತಲಿದ್ದಾರೆ.

Read More

ಬೆಂಗಳೂರು: ನಗರದಲ್ಲಿನ ಕೆಂಗೇರಿ ವಿದ್ಯುತ್ ಚಿತಾಗಾರ ಉನ್ನತೀಕರಣಕ್ಕಾಗಿ 90 ದಿನಗಳ‌ ಕಾಲ ತಾತ್ಕಾಲಿಕ ಸ್ಥಗಿತಗೊಳಿಸಲಾಗುತ್ತಿದೆ ಎಂಬುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ. https://kannadanewsnow.com/kannada/sandalwood-actor-anant-nag-and-three-others-receive-honorary-doctorates-from-bangalore-university/ ಈ ಬಗ್ಗೆ ಬಿಬಿಎಂಪಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿತ್ತು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕೆಂಗೇರಿ ವಿದ್ಯುತ್ ಚಿತಾಗಾರಲ್ಲಿರುವ Horizontal Coil Mounting ವಿನ್ಯಾಸದಿಂದ Vertical Coil Mounting ವಿನ್ಯಾಸಕ್ಕೆ ಬದಲಿಸುವ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 15-07-2022 ರಿಂದ 14-10-2022(90 ದಿನಗಳು) ವರೆವಿಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದೆ. https://kannadanewsnow.com/kannada/lalit-modi-announces-new-beginning-with-sushmita-sen/ ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗಾಗಿ ತರುವ ಸಾರ್ವಜನಿಕರು ಸಮೀಪದಲ್ಲಿರುವ ಪೀಣ್ಯ ಅಥವಾ ಸುಮ್ಮ‌ನಹಳ್ಳಿ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.

Read More

ನವದೆಹಲಿ: ಲಲಿತ್ ಮೋದಿ ಬಾಲಿವುಡ್‌ ನಟಿ  ಸುಶ್ಮಿತಾ ಸೇನ್ ಅವರೊಂದಿಗಿನ ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ( Lalit Modi, former IPL chairman ) ಇಂದು ನಟಿ ಸುಶ್ಮಿತಾ ಸೇನ್ ( actor Sushmita Sen ) ಅವರನ್ನು ತಮ್ಮ ಬೆಟರ್ ಹಾಫ್ ಎಂದು ಘೋಷಿಸುವ ರಹಸ್ಯ ಟ್ವೀಟ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ, ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗಿನ ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಲಲಿತ್ ಮೋದಿ ಅವರು 2010ರಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ತನಿಖೆಯ ನಡುವೆಯೇ ಭಾರತವನ್ನು ತೊರೆದಿದ್ದರು. ಅಂದಿನಿಂದ ಅವರು ಲಂಡನ್ ನಲ್ಲಿದ್ದಾರೆ. ಸುಶ್ಮಿತಾ ಸೇನ್ 1994 ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಅವರು 1996ರ ದಸ್ತಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಬಿವಿ ನಂ.1, ಡೋ ನಾಟ್ ಡಿಸ್ಟರ್ಬ್, ಮೈನ್ ಹೂನ್ ನಾ,…

Read More

ನವದೆಹಲಿ: ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ( Lalit Modi, former IPL chairman ) ಇಂದು ನಟಿ ಸುಶ್ಮಿತಾ ಸೇನ್ ( actor Sushmita Sen ) ಅವರನ್ನು ತಮ್ಮ ಬೆಟರ್ ಹಾಫ್ ಎಂದು ಘೋಷಿಸುವ ರಹಸ್ಯ ಟ್ವೀಟ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ, ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗಿನ ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಲಲಿತ್ ಮೋದಿ ಅವರು 2010ರಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ತನಿಖೆಯ ನಡುವೆಯೇ ಭಾರತವನ್ನು ತೊರೆದಿದ್ದರು. ಅಂದಿನಿಂದ ಅವರು ಲಂಡನ್ ನಲ್ಲಿದ್ದಾರೆ. https://twitter.com/LalitKModi/status/1547587779852259329 ಸುಶ್ಮಿತಾ ಸೇನ್ 1994 ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಅವರು 1996ರ ದಸ್ತಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಬಿವಿ ನಂ.1, ಡೋ ನಾಟ್ ಡಿಸ್ಟರ್ಬ್, ಮೈನ್ ಹೂನ್ ನಾ, ಮೈನೆ ಪ್ಯಾರ್ ಕ್ಯುನ್ ಕಿಯಾ ಮತ್ತು ತುಮ್ಕೊ ನಾ ಭೂಲ್ ಪಾಯೆಂಗೆ ಮತ್ತು ನೋ…

Read More

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಣಾಮ, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳು (Vector Borne Diseases) ಸಮುದಾಯದಲ್ಲಿ ಹರಡುವ ಆತಂಕವಿದೆ. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಪ್ರತಿ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ರೋಗ ನಿಯಂತ್ರಣ ಮಾಡಬೇಕು ಎಂದು ಸೂಚಿಸಿದ್ದಾರೆ. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದಾಗಿ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಜಪಾನೀಸ್‌ ಎನ್ಸಫಲೈಟಿಸ್‌, ಆನೆಕಾಲು ಮೊದಲಾದ ರೋಗಗಳು ಹರಡುವ ತೀವ್ರ ಸಾಧ್ಯತೆ ಇದೆ. ಇದಕ್ಕಾಗಿ ಪ್ರತಿ ಜಿಲ್ಲಾಡಳಿತವು ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಸೂಚನೆ ನೀಡಲಾಗಿದೆ. ಪ್ರವಾಹ ಪೀಡಿತ ಅಥವಾ ಭಾರಿ ಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ರಾಪಿಡ್‌ ರೆಸ್ಪಾನ್ಸ್‌…

Read More

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಬ್ರಿಟನ್ ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವ್ರ ಉತ್ತರಾಧಿಕಾರಿಯ ಆಯ್ಕೆಗಾಗಿ ನಡೆಯುತ್ತಿರುವ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟಿಷ್ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅಗ್ರಸ್ಥಾನದಲ್ಲಿದ್ದಾರೆ. ಈ ಮೂಲಕ ಭಾರತೀಯ ಮೂಲದ ಸುನಕ್‌ ಬ್ರಿಟಿಷ್‌ ಪ್ರಧಾನಿ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ. ಅಂದ್ಹಾಗೆ, ಒಬ್ಬ ಅಭ್ಯರ್ಥಿಯನ್ನ ತೆಗೆದುಹಾಕಲಾಗಿದ್ದು ಎಂದು ರಾಯಿಟರ್ಸ್ ವರದಿ ಮಾಡಿದೆ. https://twitter.com/ANI/status/1547585910526844929?s=20&t=rOlAlYFz90VDZlZczHXAaA ಬ್ರಿಟನ್ನ ಮುಂದಿನ ಪ್ರಧಾನಿಯನ್ನ ನಿರ್ಧರಿಸಲು ಕನ್ಸರ್ವೇಟಿವ್ ಸಂಸದರು ಗುರುವಾರ ನಡೆಸಿದ ಇತ್ತೀಚಿನ ಸುತ್ತಿನ ಮತದಾನದಲ್ಲಿ ಮಾಜಿ ಹಣಕಾಸು ಸಚಿವ ರಿಶಿ ಸುನಕ್ ಅಗ್ರಸ್ಥಾನದಲ್ಲಿದ್ರೆ, ಬುಕ್ ಮೇಕರ್ ನೆಚ್ಚಿನ ಪೆನ್ನಿ ಮೊರ್ಡಾಂಟ್ ನಂತರದ ಸ್ಥಾನ ಪಡೆದಿದ್ದಾರೆ. ಸುನಕ್ 101 ಟೋರಿ ಸಂಸದರ ಬೆಂಬಲವನ್ನ ಗೆದ್ದರು. ಇನ್ನು ನಂತ್ರ ಮೊರ್ಡಾಂಟ್ 83, ಲಿಜ್ ಟ್ರಸ್ 64, ಕೆಮಿ ಬಡೆನೋಚ್ 49, ಟಾಮ್ ಟುಗೆಂಧಟ್ 32 ಮತ್ತು ಸುಯೆಲ್ಲಾ ಬ್ರೇವರ್ಮನ್ 27 ಮತಗಳನ್ನ ಪಡೆದು ಕೊನೆಯ ಸ್ಥಾನಕ್ಕೆ ಕುಸಿದಿದ್ದಾರೆ.

Read More

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳಯಿಂದ ಮನೆಹಾನಿ, ಬೆಳೆನಷ್ಟ ಹಾಗೂ ಜೀವಹಾನಿ ಮುಂತಾದವುಗಳಿಂದ ಸಂತ್ರಸ್ತರಾದ ಕುಟುಂಬಗಳಿಗೆ ತಕ್ಷಣದ ಕ್ರಮವಾಗಿ ನಿಗಧಿಪಡಿಸಿದ ಪರಿಹಾರಧನ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ॥ ಕೆ.ಸಿ.ನಾರಾಯಣಗೌಡ ಅವರು ಹೇಳಿದರು. ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿದರು.ಈವರೆಗೆ ಜಿಲ್ಲೆಯಲ್ಲಿ ಸುಮಾರು 246 ಮನೆಗಳು ಬಾಗಶಃ ಹಾಗೂ 26 ಮನೆಗಳು ಸಂಪೂರ್ಣ ಕುಸಿದಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೆ ಒರ್ವ ವ್ಯಕ್ತಿ ಮರಣ ಹೊಂದಿರುವ ಬಗ್ಗೆಯೂ ಮಾಹಿತಿ ಪಡೆಕೊಳ್ಳಲಾಗಿದ್ದು, ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಪರಿಹಾರಧನ ನೀಡುವಂತೆ ಸೂಚಿಸಲಾಗಿದ್ದು, ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದರು. ಮಹಿಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಆಯಾ ತಾಲೂಕಿನ ಕಂದಾಯಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ತಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸುವಂತೆ ಸೂಚಿಸಿದರು. ಶಿವಮೊಗ್ಗ ನಗರದ…

Read More