Subscribe to Updates
Get the latest creative news from FooBar about art, design and business.
Author: KNN IT TEAM
ವಾಷಿಂಗ್ಟನ್ (ಯುಎಸ್): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಅವರ ಮಾಜಿ ಪತ್ನಿ ಇವಾನಾ ಟ್ರಂಪ್(Ivana Trump) ಗುರುವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. 73 ವರ್ಷದ ಇವಾನಾ ಮ್ಯಾನ್‌ಹ್ಯಾಟನ್‌ನ 10 E. 64 ನೇ ಸೇಂಟ್‌ನಲ್ಲಿರುವ ತನ್ನ ಮನೆಯಲ್ಲಿ ನಿನ್ನೆ ಮಧ್ಯಾಹ್ನ 12:40ರ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಮೂಲಗಳ ಪ್ರಕಾರ, ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಆದ್ರೆ, ವೈದ್ಯಾಧಿಕಾರಿಗಳು ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎನ್ನಲಾಗಿದೆ. ಟ್ರಂಪ್ ದಂಪತಿಗೆ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಟ್ರಂಪ್ ಎಂಬ ಮೂವರು ಮಕ್ಕಳಿದ್ದಾರೆ. https://kannadanewsnow.com/kannada/good-news-good-news-for-kashi-yatra-pilgrims-rs-5000-subsidy-heres-the-information/ https://kannadanewsnow.com/kannada/good-news-online-application-invited-for-self-employment-direct-loan-heres-the-information/
ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ನೀಡದಿರಲು ಎನ್ ಇಪಿ ಸಮಿತಿ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ ಎನ್ನಲಾಗಿದೆ. https://kannadanewsnow.com/kannada/bigg-news-state-govt-orders-scrapping-of-funeral-scheme/ ಶಿಕ್ಷಣ ಇಲಾಖೆಯ ಆರ್ಥಿಕ ಸಂಕಷ್ಟದಿಂದ ಶಾಲಾ ವಿದ್ಯಾರ್ಥಿಗಳಿಗೆ ಈ ಬಾರಿ ಶೂ- ಸಾಕ್ಸ್, ಬೈಸಿಕಲ್ ನೀಡಲಾಗುತ್ತಿಲ್ಲ. ಈ ನಡುವೆ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಮೊಟ್ಟೆ ನೀಡದಿರಲು ಎನ್ಇಪಿ ಸಮಿತಿ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಮೊಟ್ಟೆ ಹಾಗೂ ಮಾಂಸದಿಂದ ಅನೇಕ ರೋಗಗಳು ಬರುತ್ತವೆ. ಹೀಗಾಗಿ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕು ಹೀಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಬಾರದು ಎಂದು ಎನ್ಇಪಿ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಹೇಳಲಾಗುತ್ತಿದೆ. https://kannadanewsnow.com/kannada/good-news-good-news-for-kashi-yatra-pilgrims-rs-5000-subsidy-heres-the-information/
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆಂದು 5 ಸಾವಿರ ನೀಡಲಾಗ್ತಿದ್ದ ಅಂತ್ಯ ಸಂಸ್ಕಾರ ಯೋಜನೆಯನ್ನ ರದ್ದುಗೊಳಿಸಿದೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. https://kannadanewsnow.com/kannada/good-news-good-news-for-kashi-yatra-pilgrims-rs-5000-subsidy-heres-the-information/ ಸಧ್ಯ ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಯೋಜನೆಯ ಅನುಷ್ಠಾನಕ್ಕೆ ಯಾವುದೇ ಅನುದಾನ ಲಭ್ಯವಿಲ್ಲದೇ ಕಾರಣ ಈ ಯೋಜನೆಯನ್ನ ರದ್ದುಗೊಳಿಸಿದೆ. ಅದ್ರಂತೆ, ಈ ಅಂತ್ಯಸಂಸ್ಕಾರ ಯೋಜನೆಯಡಿ 2021ರ ಆಗಸ್ಟ್ ಅಂತ್ಯಕ್ಕೆ ರಾಜ್ಯದ ಜಿಲ್ಲೆಗಳಲ್ಲಿ ಸ್ವೀಕೃತಗೊಂಡ ಅರ್ಜಿಗಳಿಗೆ ಮಾತ್ರ ಸೌಲಭ್ಯ ವಿತರಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿದೆ. ಅದ್ರಂತೆ ಸರ್ಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಜಯಲಕ್ಷ್ಮೀ, ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ 2021ರ ಆಗಸ್ಟ್ ತಿಂಗಳ ಅಂತ್ಯಕ್ಕೆ ಬಾಕಿ ಇದ್ದ ಅರ್ಜಿಗಳಿಗೆ 17.92 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಫಲಾನುಭವಿಗಳಿಗೆ ಮೂರು ತಿಂಗಳೊಳಗಾಗಿ ವಿತರಿಸಲು ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಪಿಡಿಪಿ ಖಾತೆಯಲ್ಲಿರಿಸಿ ಆದೇಶ ಹೊರಡಿಸಿದ್ದಾರೆ. ಅಂದ್ಹಾಗೆ, 2021-22 ನೇ ಸಾಲಿನ ಆಯ್ಯವ್ಯಯದಲ್ಲಿ ಅಂತ್ಯ ಸಂಸ್ಕಾರ ಯೋಜನೆಯ ಅನುಷ್ಠಾನಕ್ಕೆ ತರಲಾಗಿತ್ತು.
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ( PM Narendra Modi ) ಅವರ ಮುತುವರ್ಜಿಯಿಂದ ಅಭಿವೃದ್ದಿಗೊಂಡಿರುವ ಕಾಶಿಗೆ ಹೆಚ್ಚಿನ ಭಕ್ತರು ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದರು. ಹೀಗಾಗಿ ಕಾಶಿ ಯಾತ್ರೆಗೆ ಹೊರಟಿರುವಂತ ಯಾತ್ರಾರ್ಥಿಗಳಿಗೆ ರೂ.5,000 ಸಹಾಯಧವನ್ನು ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಜರಾಯಿ ಇಲಾಖೆಯ ವತಿಯಿಂದ ರಾಜ್ಯದಿಂದ ಕಾಶಿ ಯಾತ್ರೆ ( Kashi Yatra ) ಕೈಗೊಂಡ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಿ, ಡಿ.ಬಿ.ಟಿ ಮೂಲಕ ಆನ್‌ಲೈನ್ ಮೂಲಕ ಹಣ ವರ್ಗಾವಣೆಗೆ ಚಾಲನೆ ನೀಡಿ ಹಾಗೂ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸುವ ವೆಬ್ ಪೋರ್ಟಲ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇತ್ತೀಚೆಗೆ ಕಾಶಿಯನ್ನು ಮೋದಿಯವರು ನವೀಕರಣ ಮಾಡಿದ್ದಾರೆ. ಹಿಂದೆ ಕಾಶಿಗೆ ಹೋದರೆ ಅಲ್ಲಿನ ಅವ್ಯವಸ್ಥೆಯಿಂದ ಬೇಸರ ಉಂಟಾಗುತ್ತಿತ್ತು. ಆದರೆ ಈಗ ನೂರಕ್ಕೆ ನೂರು ಬದಲಾವಣೆ ಆಗಿದೆ. 23 ಘಾಟ್ ಗಳನ್ನು…
ದಾವಣಗೆರೆ : ನಿಗಮದಿಂದ 2022-23ನೇ ಸಾಲಿಗೆ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಹಿಂದುಳಿದ ವರ್ಗಗಳ ಅರ್ಜಿದಾರರುಗಳು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ. 2.00 ಲಕ್ಷಗಳ ವರೆಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದರಲ್ಲಿ ಗರಿಷ್ಠ ಶೇ 15 ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ. 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿರುತ್ತದೆ. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯ ಹೊರತುಪಡಿಸಿ) ಸೇರಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್.24 ಕೊನೆಯ ದಿನಾಂಕವಾಗಿದ್ದು, ಅರ್ಜಿಗಳನ್ನು ಸುವಿಧಾ ತಂತ್ರಾಂಶದ Suviಜಚಿ.ಞಚಿಡಿಟಿಚಿಣಚಿಞಚಿ.gov. ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಯನ್ನು ಅಥವಾ ನಿಗಮದ ಸಹಾಯವಾಣಿ ಸಂಖ್ಯೆ: 08192-230934 ವೆಬ್‍ಸೈಟ್…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆಂದು 5 ಸಾವಿರ ನೀಡಲಾಗ್ತಿದ್ದ ಅಂತ್ಯ ಸಂಸ್ಕಾರ ಯೋಜನೆಯನ್ನ ರದ್ದುಗೊಳಿಸಿದೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಧ್ಯ ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಯೋಜನೆಯ ಅನುಷ್ಠಾನಕ್ಕೆ ಯಾವುದೇ ಅನುದಾನ ಲಭ್ಯವಿಲ್ಲದೇ ಕಾರಣ ಈ ಯೋಜನೆಯನ್ನ ರದ್ದುಗೊಳಿಸಿದೆ. ಅದ್ರಂತೆ, ಈ ಅಂತ್ಯಸಂಸ್ಕಾರ ಯೋಜನೆಯಡಿ 2021ರ ಆಗಸ್ಟ್ ಅಂತ್ಯಕ್ಕೆ ರಾಜ್ಯದ ಜಿಲ್ಲೆಗಳಲ್ಲಿ ಸ್ವೀಕೃತಗೊಂಡ ಅರ್ಜಿಗಳಿಗೆ ಮಾತ್ರ ಸೌಲಭ್ಯ ವಿತರಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿದೆ. ಅದ್ರಂತೆ ಸರ್ಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಜಯಲಕ್ಷ್ಮೀ, ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ 2021ರ ಆಗಸ್ಟ್ ತಿಂಗಳ ಅಂತ್ಯಕ್ಕೆ ಬಾಕಿ ಇದ್ದ ಅರ್ಜಿಗಳಿಗೆ 17.92 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಫಲಾನುಭವಿಗಳಿಗೆ ಮೂರು ತಿಂಗಳೊಳಗಾಗಿ ವಿತರಿಸಲು ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಪಿಡಿಪಿ ಖಾತೆಯಲ್ಲಿರಿಸಿ ಆದೇಶ ಹೊರಡಿಸಿದ್ದಾರೆ. ಅಂದ್ಹಾಗೆ, 2021-22 ನೇ ಸಾಲಿನ ಆಯ್ಯವ್ಯಯದಲ್ಲಿ ಅಂತ್ಯ ಸಂಸ್ಕಾರ ಯೋಜನೆಯ ಅನುಷ್ಠಾನಕ್ಕೆ ತರಲಾಗಿತ್ತು.
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಡುರೊಂಟೊ ಎಕ್ಸ್ ಪ್ರೆಸ್ ರೈಲಿನಲ್ಲಿ ಗುಂಡಿನ ದಾಳಿಯಿಂದ ಗದ್ದಲ ಉಂಟಾಯಿದೆ. ಸಿಕಂದರಾಬಾದ್ʼನ ಹಜರತ್ ನಿಜಾಮುದ್ದೀನ್ ರೈಲಿನ ಎಸಿ ಬೋಗಿಯಲ್ಲಿ ಚಿತ್ರೀಕರಣ ನಡೆದಿದ್ದು, ಸಹಪ್ರಯಾಣಿಕರೊಂದಿಗೆ ಜಗಳವಾಡಿದ ವ್ಯಕ್ತಿ ಗುಂಡು ಹಾರಿಸಿದ್ದಾನೆ ಎನ್ನಲಾಗ್ತಿದೆ. ರೈಲ್ವೆ ಪೊಲೀಸರು ಶೂಟರ್ʼನನ್ನ ಸೇನಾಗೆ ಸೇರಿದ ಜವಾನ ಎಂದು ಗುರುತಿಸಿದ್ದಾರೆ. ಇನ್ನು ಸೇನಾ ಯೋಧನನ್ನ ಹಿಡಿದು ಕಾಗಜ್ ನಗರ ರೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದೆ. ರೈಲಿನಲ್ಲಿ ಗುಂಡಿನ ದಾಳಿ ನಡೆದ ನಂತ್ರ ಪ್ರಯಾಣಿಕರು ಆತಂಕದಲ್ಲಿದ್ದಾರೆ ಎನ್ನಲಾಗ್ತಿದೆ.
ಹಾವೇರಿ : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ಯಡಿ ನಿರುದ್ಯೋಗಿ ಯುವಕ , ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಹಾನಗಲ್‍ಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ- ಜಿಟಿಟಿಸಿ ಯಲ್ಲಿ ಉದ್ಯೋಗಾಧಾರಿತ ಉಚಿತ ತಾಂತ್ರಿಕ ಕೌಶಲ್ಯ ತರಬೇತಿಗಳನ್ನು ಆಯೋಜಿಸಲಾಗಿದೆ. ಈ ಯೋಜನೆಯಡಿ ಸಿಎನ್‍ಸಿ ಪ್ರೋಗ್ರಾಮಿಂಗ್, ಸಿಎನ್‍ಸಿ ಆಪರೇಟಿಂಗ್, ಕ್ಯಾಡ್-ಕ್ಯಾಮ್, ಡಾಟಾ ಎಂಟ್ರಿ ಆಪರೇಟರ್, ಟರ್ನರ್, ಮಿಲ್ಲರ್ ಮತ್ತು ಗ್ರೈಂಡರ್ ವೃತ್ತಿಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಲಾಗುವುದು. ಎಸ್‍ಎಸ್‍ಎಲ್‍ಸಿ, ಐಟಿಐ, ಡಿಪ್ಲೋಮಾ, ಅಥವಾ ಬಿ.ಇ ಪಾಸಾದ 16 ರಿಂದ 35 ವಯೋಮಿತಿಯೊಳಗಿನ ಎಲ್ಲ ವರ್ಗದ ಅಭ್ಯರ್ಥಿಗಳು ಈ ತರಬೇತಿಗಳನ್ನು ಪಡೆಯಲು ಅರ್ಹರಿರುತ್ತಾರೆ. ತರಬೇತಿ ಪಡೆಯಲು ಆದಾಯದ ಮಿತಿ ಇರುವುದಿಲ್ಲ. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಬಸ್ ಪಾಸ್ ಮರುಪಾವತಿ ಸೌಲಭ್ಯ ಇರುತ್ತದೆ. https://kannadanewsnow.com/kannada/good-news-for-people-of-bengaluru-bbmp-park-to-remain-open-from-5-am-to-8-pm/ ಜಿಟಿಟಿಸಿ ಸಂಸ್ಥೆಯು ಉನ್ನತ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಅಳವಡಿಸಿಕೊಂಡಿದ್ದು, ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರಿಂದ ಫಲಾನುಭವಿಗಳಿಗೆ ಆನ್‍ಜಾಬ್ ತರಬೇತಿ ನೀಡಲಾಗುವುದು.…
ಬೆಂಗಳೂರು: ಬಿಬಿಎಂಪಿ ( BBMP ) ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳನ್ನು ಬೆಳಗ್ಗೆ 5 ರಿಂದ ರಾತ್ರಿ 8 ರ ವರೆಗೆ ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡಲು ಬಿಬಿಎಂಪಿ ಆದೇಶಿಸಿದೆ. https://kannadanewsnow.com/kannada/applications-invited-for-setting-up-of-sheep-goat-unit/ ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ( BBMP Chief Commissioner Tushar Girinath ) ಅವರು, ಸುತ್ತೋಲೆ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳನ್ನು ವಾಯು ವಿಹಾರಕ್ಕೆಂದು ಪ್ರತಿ ದಿನ ಬೆಳಗ್ಗೆ 5.00 ರಿಂದ 10.00 ರವರೆಗೆ ಹಾಗೂ ಸಂಜೆ 4.00 ರಿಂದ ರಾತ್ರಿ 8.00 ರವರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು ಎಂದಿದ್ದಾರೆ. https://kannadanewsnow.com/kannada/applications-invited-from-children-of-ex-servicemen-for-scholarship-facility/ ಇನ್ನು ಮುಂದೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಸಮಯವನ್ನು ಮಾರ್ಪಡಿಸಿ ಬೆಳಗ್ಗೆ 5.00 ರಿಂದ ರಾತ್ರಿ 8.00 ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಉದ್ಯಾನವನಗಳ ನಿರ್ವಹಣೆಗಾಗಿ ಬೆಳಗ್ಗೆ 10 ರಿಂದ ಮದ್ಯಾಹ್ನ 1.30 ರವರೆಗೆ ಸಮಯವನ್ನು ನಿಗಧಿಪಡಿಸಿ ಆದೇಶಿಸಲಾಗಿದೆ. ಉದ್ಯಾನವನಗಳ ನಿರ್ವಹಣೆಯ ಸಮಯದಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ…
ಹಾವೇರಿ : ಪ್ರಸಕ್ತ 2022-23ನೇ ಸಾಲಿಗೆ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನ ಹಾಗೂ ಪುಸ್ತಕ ಅನುದಾನ(ಅಧಿಕಾರಿಗಳನ್ನು ಹೊರತುಪಡಿಸಿ) ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/applications-invited-for-setting-up-of-sheep-goat-unit/ ಒಂದನೇ ತರಗತಿಯಿಂದ ಅಂತಿಮ ಪದವಿ ಮತ್ತು ಡಿಪ್ಲೋಮಾ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳು ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಧಾರವಾಡ, ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆ ವ್ಯಾಪ್ತಿಯ ಮಾಜಿ ಸೈನಿಕರು,ಮಾಜಿ ಸೈನಿಕರ ಅವಲಂಬಿತರು ಉಪನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಶಾಲೆ, ಧಾರವಾಡ ಕಚೇರಿಂದ ನವೀಕರಿಸಲಾದ ಅರ್ಜಿಯನ್ನು ಶುಲ್ಕರಹಿತವಾಗಿ ಪಡೆದು, ಅಗತ್ಯ ದಾಖಲೆಯೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 15-10-2022 ರೊಳಗೆ ಹಾಗೂ ವೃತ್ತಿಪರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ದಿನಾಂಕ 15-11-2022ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.0836-2440176 ಸಂಪರ್ಕಿಸಲು ಕೋರಲಾಗಿದೆ. https://kannadanewsnow.com/kannada/applications-invited-for-loan-facility-under-various-schemes-under-self-employment-scheme/