Author: KNN IT TEAM

ನವೆದೆಹಲಿ : ಭಾರತವು ತನ್ನ ಮೊದಲ ಮಂಕಿಪಾಕ್ಸ್ ಪ್ರಕರಣವನ್ನ ವರದಿ ಮಾಡುತ್ತಿದ್ದಂತೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಶುಕ್ರವಾರ ವೈರಸ್‌ನ ಆರಂಭಿಕ ಪತ್ತೆಗಾಗಿ ದೇಶಾದ್ಯಂತ 15 ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ ತರಬೇತಿ ನೀಡಿದೆ ಎಂದು ಘೋಷಿಸಿದೆ. “ಮಂಕಿಪಾಕ್ಸ್ ಪತ್ತೆಗೆ ದೇಶದ ಸನ್ನದ್ಧತೆಗೆ ಸಹಾಯ ಮಾಡಲು, ಭೌಗೋಳಿಕವಾಗಿ ಉತ್ತಮವಾಗಿ ವಿತರಿಸಲಾದ ಮತ್ತು ವ್ಯೂಹಾತ್ಮಕವಾಗಿ ನೆಲೆಗೊಂಡಿರುವ ದೇಶಾದ್ಯಂತದ 15 ವೈರಸ್ ರಿಸರ್ಚ್ ಮತ್ತು ಡಯಾಗ್ನೋಸ್ಟಿಕ್ ಪ್ರಯೋಗಾಲಯಗಳಿಗೆ ಈಗಾಗಲೇ ಪುಣೆಯ ಐಸಿಎಂಆರ್ -ಎನ್ಐವಿಯಿಂದ ರೋಗನಿರ್ಣಯ ಪರೀಕ್ಷೆಯಲ್ಲಿ ತರಬೇತಿ ನೀಡಲಾಗಿದೆ” ಎಂದು ಐಸಿಎಂಆರ್ ಟ್ವೀಟ್ ಮಾಡಿದೆ. https://twitter.com/ICMRDELHI/status/1547831254778646529?s=20&t=ZxN9QA7YBArKEiikkYcafw ಯುಎಇಯಿಂದ ಹಿಂದಿರುಗಿದ ಕೇರಳಿಗರೊಬ್ಬರು ಮಂಕಿಪಾಕ್ಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಭಾರತವು ಗುರುವಾರ ಎಚ್ಚರಿಕೆ ವಹಿಸಿದ್ದರಿಂದ ಇದು ಬಂದಿದೆ. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ರೋಗಲಕ್ಷಣವಿರುವ ವ್ಯಕ್ತಿಯ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಈ ಪ್ರಕರಣ ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ರೋಗದ ಹರಡುವಿಕೆಯನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು,…

Read More

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಹುಡುಗ ಮತ್ತು ಹುಡುಗಿ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಟೀ ಶರ್ಟ್‌ ಬೆಲೆ ಕುರಿತು ಇವರಿಬ್ಬರ ನಡುವೆ ವಾದ ಶುರುವಾಗಿತ್ತು. ಇದು ವಿಕೋಪಕ್ಕೆ ಹೋಗಿ ಹುಡುಗಿ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದಾಳೆ. https://kannadanewsnow.com/kannada/elon-musk-sent-warning-message-to-twitter-ceo-parag-agrawal/ ಇದರಿಂದ ಪರಯಾಣಿಕರಿಗೆ ಆಘಾತ ಉಂಟಾಗಿತ್ತು. ಇದೀಗ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೇಳೆ ಯುವತಿ 1,000 ರೂಪಾಯಿಗೆ ಟಿ-ಶರ್ಟ್ ಖರೀದಿಸಿರುವ ಬಗ್ಗೆ ತನ್ನ ಬಾಯ್‍ಫ್ರೆಂಡ್ ಬಳಿ ಹೇಳಿಕೊಂಡಿದ್ದಾಳೆ. ಇದಕ್ಕೆ ಯುವಕ ಈ ಟೀ ಶರ್ಟ್ ಬೆಲೆ ರೂಪಾಯಿಗಿಂತಲೂ ಹೆಚ್ಚಿಲ್ಲ ಎಂದು ಹೇಳಿದ್ದಾನೆ.ಇದರಿಂದ ಕೋಪಗೊಂಡು ಇವರ ನಡುವೆ ವಾಗ್ವದ ಶುರುವಾಗಿದೆ. ಇನ್ನು ನಂತರ ಯುವಕ ಇದು ಸಾರ್ವಜನಿಕ ಸ್ಥಳ ಎಂದು ಆಕೆಗೆ ವಾರ್ನಿಂಗ್ ಕೊಡುತ್ತಾನೆ. ಆದರೂ ಹಿಂಜರಿಯದೇ ಯುವತಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಬಳಿಕ ರೊಚ್ಚಿಗೆದ್ದು ಯುವಕ ಕೂಡ ಆಕೆಯ ಕೆನ್ನೆಗೆ ಬಾರಿಸಿದ್ದಾನೆ. https://twitter.com/mandar199325/status/1547098588110397440?ref_src=twsrc%5Etfw%7Ctwcamp%5Etweetembed%7Ctwterm%5E1547098588110397440%7Ctwgr%5E%7Ctwcon%5Es1_&ref_url=https%3A%2F%2Finformativemanmeet.com%2Feditors-pick%2Fgirl-slaps-boy-after-argument-in-delhi-metro-high-voltage-drama-caught-on-camera-watch%2F

Read More

ನವದೆಹಲಿ : ನೀವು ಚಾಲನಾ ಪರವಾನಗಿಯನ್ನು ಪಡೆಯಲು ಬಯಸಿದ್ರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ಜುಲೈ ತಿಂಗಳಿನಿಂದ ಚಾಲನಾ ಪರವಾನಗಿ ನೀಡುವ ನಿಯಮಗಳನ್ನ ಬದಲಾಯಿಸಲು ಕೇಂದ್ರ ರಸ್ತೆ ಮತ್ತು ಮೋಟಾರು ಸಾರಿಗೆ ಸಚಿವಾಲಯ ನಿರ್ಧರಿಸಿದೆ. ಈ ಹೊಸ ನಿಯಮದ ನಂತ್ರ ನೀವು ಈಗ ಡ್ರೈವಿಂಗ್ ಟೆಸ್ಟ್ ಇಲ್ಲದೇ ಚಾಲನಾ ಪರವಾನಗಿಯನ್ನ ಪಡೆಯಬಹುದು. ಇದರರ್ಥ ನೀವು ಇನ್ನು ಮುಂದೆ ಆರ್‌ಟಿಒ ಕಚೇರಿ ಸುತ್ತಬೇಕಿಲ್ಲ. ಹೊಸ ನಿಯಮದ ನಂತರ, ಚಾಲನಾ ಪರವಾನಗಿಗಳನ್ನು ಪಡೆಯಲು ಚಾಲನಾ ತರಬೇತಿ ಕೇಂದ್ರಗಳ ಪಾತ್ರವು ಈಗ ಪ್ರಮುಖವಾಗುತ್ತದೆ. ಈ ತರಬೇತಿ ಕೇಂದ್ರಗಳು ರಾಜ್ಯ ಸಾರಿಗೆ ಪ್ರಾಧಿಕಾರ ಅಥವಾ ಕೇಂದ್ರ ಸರ್ಕಾರದ ಅಡಿಯಲ್ಲಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಚಾಲನಾ ಪರವಾನಗಿಯನ್ನ ಪಡೆಯಲು ಬಯಸುವವರು, ಮೊದಲು ಅಂತಹ ತರಬೇತಿ ಕೇಂದ್ರಗಳಿಂದ ತರಬೇತಿ ಪಡೆದ ನಂತ್ರ ಪ್ರಮಾಣಪತ್ರವನ್ನ ಪಡೆಯಬೇಕಾಗುತ್ತದೆ. ಇದಕ್ಕಾಗಿ, ತಮ್ಮದೇ ಆದ ಚಾಲನಾ ಪರವಾನಗಿಯನ್ನ ಮಾಡಿಕೊಳ್ಳಬೇಕಾದವರು ಅಂತಹ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅದರ ನಂತರ, ಈ ಕೇಂದ್ರಗಳು ಅರ್ಜಿದಾರರ ಪರೀಕ್ಷೆಯನ್ನು ತೆಗೆದುಕೊಳ್ಳುತ್ತವೆ, ಇದು ಉತ್ತೀರ್ಣರಾಗಲು…

Read More

ಬೆಂಗಳೂರು : ಸರ್ಕಾರಿ ಕಚೇರಿಯಲ್ಲಿಇನ್ಮೇಲೆ ಖಾಸಗಿ ವ್ಯಕ್ತಿಗಳಿಗೆ ಮೊಬೈಲ್ ನಿಷೇಧ  ಮಾಡಲಾಗಿದೆ. ಮೊಬೈಲ್‌ನಲ್ಲಿ ಫೋಟೊ ವಿಡಿಯೋ ಬಳಸುವಂತಿಲ್ಲ.  ಖಾಸಗಿ ವ್ಯಕ್ತಿಗಳು ಮೊಬೈಲ್‌ ನಿಷೇಧಿಸುವಂತೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ತಾವು ಮಾಡುವ ಕೆಲಸ ಎಲ್ಲೂ ಹೊರ ಹೋಗುವ ಭಯ ಶುರುವಾಗಿದ್ದು. ಯಾವುದೇ ಒಬ್ಬ ವ್ಯಕ್ತಿ ಸರ್ಕಾರಿ ಕೆಲಸ ಆಗಬೇಕೆಂದ್ರ ಅಲ್ಲಿ ಮನವಿ ಮಾಡಿಕೊಳ್ಳಬೇಕಾಗಿದೆ. ಯಾವಾಗ ಅಲ್ಲಿ ಅಧಿಕಾರಿಗಳು ಹಣವನ್ನು  ಕೇಳಲು ಶುರು ಮಾಡುತ್ತಾರೆ ಆಗ ಖಾಸಗಿ ವ್ಯಕ್ತಿಗಳು ತನ್ನ ಮೊಬೈಲ್‌ನಲ್ಲಿ ವಿಡಿಯೋ, ಅಡಿಯೋ, ಪೋಟೋಗಳನ್ನು ತೆಗೆದುಕೊಂಡು ಸೋಷಿಯಲ್‌ ಮಿಡಿಯಾಗಳಲ್ಲಿ ವೈರಲ್‌ ಮಾಡುತ್ತಿರುವ ಹೆಚ್ಚಾಗಿ ಕಾಣಸಿಗುತ್ತದೆ. ಈ  ಬೆನ್ನಲ್ಲೇ ಕಡಿವಾಣ ಹಾಕೋದಕ್ಕೆ ಸರ್ಕಾರಿ ಕಚೇರಿಯಲ್ಲಿಇನ್ಮೇಲೆ ಖಾಸಗಿ ವ್ಯಕ್ತಿಗಳಿಗೆ ಮೊಬೈಲ್ ಬಳಕೆ ನಿರ್ಬಧಿಸಲು ಸರ್ಕಾರದಿಂದ ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ.

Read More

ಬೆಂಗಳೂರು: ರಾಜ್ಯಾಧ್ಯಂತ ಕೆಲ ದಿನಗಳಿಂದ ಸುರಿದಂತ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಹಲವೆಡೆ ರಸ್ತೆ, ಸೇತುವೆ ಕುಸಿತಗೊಂಡು ಸಂಪರ್ಕ ಕಡಿತಗೊಂಡು ಮೂಲ ಸೌಕರ್ಯ ಸಿಗದಂತೆ ಜನರು ಒದ್ದಾಡುವಂತೆ ಆಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ಮೂಲಭೂತ ಸೌಕರ್ಯ ಮರುಸ್ಥಾಪಿಸುವ ಕಾಮಗಾರಿಗೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. https://kannadanewsnow.com/kannada/people-demolishing-dwelling-houses-for-relief-in-the-state/ ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹಲವಾರು ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆಗಳು, ಸೇತುವೆ, ಶಾಲೆ, ಅಂಗನವಾಡಿ, ವಿದ್ಯುತ್ ಕಂಬಗಳು, ಸರ್ಕಾರ ಆಸ್ಪತ್ರೆಗಳು ಸೇರಿದಂತೆ ಇತರೆ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿಗಳು ವರದಿ ಮಾಡಿದ್ದಾರೆ. https://kannadanewsnow.com/kannada/fact-checker-mohammed-zubair-granted-bail-by-delhi-court-in-2018-tweet-case-he-stays-in-jail-in-another-case/ ಕೆಲವು ದಿನಗಳ ಹಿಂದೆ ನಾನು ಪ್ರವಾಸ ಮಾಡಿದ ಸಂದರ್ಭದಲ್ಲಿ ಜಿಲ್ಲೆಗಳಲ್ಲಿ ಹಾನಿಯನ್ನು ಸ್ವತಹ ವೀಕ್ಷಿಸಿರುತ್ತೇನೆ. ಈ ಹಿನ್ನಲೆಯಲ್ಲಿ ತ್ವರಿತಗತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಯಥಾಸ್ಥಿತಿಗೆ ತರಲು ಕಾಮಾಗಿರಿಗಳನ್ನು ಕೈಗೊಳ್ಳಲು ಕೂಡಲೇ 500 ಕೋಟಿ ರೂಗಳನ್ನು ಬಿಡುಗಡೆಗೊಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. https://kannadanewsnow.com/kannada/there-is-nothing-wrong-in-muslim-women-asking-for-peace-now-dk-shivakumar/

Read More

ವರದಿ : ವಸಂತ ಬಿ ಈಶ್ವರಗೆರೆ ಶಿವಮೊಗ್ಗ: ಭಾರೀ ಮಳೆಯಿಂದಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮನೆಗಳು ಕುಸಿತಗೊಂಡು ಹಾನಿಯಾಗಿವೆ. ಇದಕ್ಕಾಗಿ ಸರ್ಕಾರದಿಂದ ಪರಿಹಾರ ಕೂಡ ಘೋಷಿಸಿದೆ. ಆದ್ರೇ.. ಹಾನಿಯಾಗದೇ ಇರೋ ಮನೆಗಳನ್ನು ಜನರು ಪರಿಹಾರಕ್ಕಾಗಿ ಕೆಡವುತ್ತಿರೋ ಆಘಾತಕಾರಿ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ. ಈ ಹಿನ್ನಲೆಯಲ್ಲಿ ಉದ್ದೇಶಪೂರ್ವಕವಾಗಿ ಕೆಡವಿದ್ರೇ.. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. https://kannadanewsnow.com/kannada/wall-collapses-at-godown-in-delhis-alipur-5-dead-9-injured/ ಹೌದು.. ಈ ಸಂಬಂಧ ಸೊರಬ ತಾಲೂಕಿನ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಸೊರಬ ತಾಲೂಕಿನಲ್ಲಿ ಅತಿಯಾಗಿ ಮಳೆ ಬೀಳುತ್ತಿದ್ದು, ಸರ್ಕಾರದಿಂದ ಪರಿಹಾರ ಪಡೆಯಲು ಉತ್ತೇಶಪೂರ್ವಕವಾಗಿ ವಾಸದ ಮನೆಗಳನ್ನು ಕೆಡವುತ್ತಿರೋದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/fact-checker-mohammed-zubair-granted-bail-by-delhi-court-in-2018-tweet-case-he-stays-in-jail-in-another-case/ ಒಂದು ವೇಳೆ ವಾಸದ ಮನೆಗಳನ್ನು ಪರಿಹಾರಕ್ಕಾಗಿ ಉದ್ದೇಶಪೂರ್ವಕವಾಗಿ ಕೆಡವಿದ್ದು ತಿಳಿದು ಬಂದ್ರೇ, ಅಂತಹ ವ್ಯಕ್ತಿಗಳು, ಇದಕ್ಕೆ ಅವಕಾಶ ಮಾಡಿಕೊಡುವಂತ ಸಿಬ್ಬಂದಿಗಳ ವಿರುದ್ಧವೂ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ-2005ರ ಅಡಿಯಲ್ಲಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ. https://kannadanewsnow.com/kannada/https-kannadanewsnow-com-kannada-abbu-ammi-biryani-use-of-urdu-words-in-class-2-book-triggers-outrage-among-parents-in-rajasthan-breaking-news-%e0%b2%b6%e0%b3%8d%e0%b2%b0%e0%b3%80%e0%b2%b2%e0%b2%82/ ಅಂದಹಾಗೇ ಇದು…

Read More

ನವದೆಹಲಿ : ಪುರುಷನೊಂದಿಗೆ ಸಂಬಂಧ ಹೊಂದಿದ್ದ ಮತ್ತು ಅವನೊಂದಿಗೆ ಸ್ವಇಚ್ಛೆಯಿಂದ ವಾಸಿಸುತ್ತಿದ್ದ ಮಹಿಳೆ ಸಂಬಂಧವು ಹಳಸಿದರೆ ಅಥ್ವಾ ಹಾಳಾದ್ರೆ ಅತ್ಯಾಚಾರ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ. ಇನ್ನು ಅತ್ಯಾಚಾರ, ಅಸ್ವಾಭಾವಿಕ ಅಪರಾಧಗಳು ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊತ್ತಿರುವ ಅನ್ಸಾರ್ ಮೊಹಮ್ಮದ್ ಎಂಬಾತನಿಗೆ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರ ಪೀಠವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ವರದಿಗಳು ತಿಳಿಸಿವೆ. “ದೂರುದಾರರು ಸ್ವಇಚ್ಛೆಯಿಂದ ಅರ್ಜಿದಾರರೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಸಂಬಂಧವನ್ನ ಹೊಂದಿದ್ದಾರೆ. ಆದ್ದರಿಂದ, ಈಗ ಸಂಬಂಧವು ಹಾಳಾದ್ರೆ, ಐಪಿಸಿ ಸೆಕ್ಷನ್ 376 (2) (ಎನ್) ಅಡಿಯಲ್ಲಿ ಅಪರಾಧಕ್ಕಾಗಿ ಎಫ್ಐಆರ್ ದಾಖಲಿಸಲು ಇದು ಆಧಾರವಾಗುವುದಿಲ್ಲ” ಎಂದು ಬಾರ್ ಮತ್ತು ನ್ಯಾಯಪೀಠದ ವರದಿಯಲ್ಲಿ ತಿಳಿಸಲಾಗಿದೆ. ಮೇಲ್ಮನವಿಯನ್ನ ಪುರಸ್ಕರಿಸಿದ ನ್ಯಾಯಾಲಯ, ಅರ್ಜಿದಾರರಿಗೆ ಬಂಧನ ಪೂರ್ವ ಜಾಮೀನು ನಿರಾಕರಿಸುವ ರಾಜಸ್ಥಾನ ಹೈಕೋರ್ಟ್ ಆದೇಶವನ್ನ ರದ್ದುಗೊಳಿಸಿದೆ. ಸಕ್ಷಮ ಪ್ರಾಧಿಕಾರಕ್ಕೆ ತೃಪ್ತಿಯಾಗುವಂತೆ ಹಾಗೂ ಅರ್ಜಿದಾರರನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ…

Read More

ನವದೆಹಲಿ: ಟೆಸ್ಲಾ ಸಿಇಒ ಎಲೋನ್ ಮಸ್ಕ್ 44 ಬಿಲಿಯನ್ ಡಾಲರ್ ಟ್ವಿಟರ್ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ. ಇತ್ತೀಚೆಗೆ ಅದರ ಒಪ್ಪಂದದಿಂದ ಹಿಂದೆ ಸರಿಯುವ ಮೊದಲು, ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಅವರಿಗೆ ಒಂದು ಸಂದೇಶವನ್ನು ಕಳುಹಿಸಿದ್ದಾರೆ. https://kannadanewsnow.com/kannada/are-you-bored-of-married-life-heres-an-experts-advice-to-start-a-happy-life-again/ ಕಂಪನಿಯ ವಕೀಲರು ಟ್ವಿಟರ್ ಸ್ವಾಧೀನವನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದಾರೆ ಎಂದು ಹಣಕಾಸು ವಿವರಗಳ ಬಗ್ಗೆ ಮಾಹಿತಿ ಕೋರಿದ ನಂತರ ಕಂಪನಿಯ ವಕೀಲರು “ತೊಂದರೆ ಉಂಟುಮಾಡಲು” ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಸೋಷಿಯಲ್ ಮೀಡಿಯಾ ಕಂಪನಿ ಸಲ್ಲಿಸಿದ ಮೊಕದ್ದಮೆಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಜೂನ್ 28 ರಂದು ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಮತ್ತು ಸಿಎಫ್ಒ ನೆಡ್ ಸೆಗಲ್ ಅವರಿಗೆ ಮಸ್ಕ್ ಮೆಸೇಜ್ ಕಳುಹಿಸಿದ್ದು, “ನಿಮ್ಮ ವಕೀಲರು ಈ ಸಂಭಾಷಣೆಗಳನ್ನು ತೊಂದರೆಗೆ ಕಾರಣವಾಗಲು ಬಳಸುತ್ತಿದ್ದಾರೆ. ಅದು ನಿಲ್ಲಬೇಕು’ ಎಂದರು. ಟ್ವಿಟರ್ ಒಪ್ಪಂದಕ್ಕೆ ನೀವು ಹೇಗೆ ಹಣಕಾಸು ಒದಗಿಸುತ್ತೀರಿ ಎಂದು ಮಸ್ಕ್ ಅವರನ್ನು ಟ್ವಿಟರ್ ಕೇಳಿದ ನಂತರ ಮಸ್ಕ್ ಅವರು ಅಗರ್ವಾಲ್ ಮತ್ತು ಸೆಗಲ್ ಅವರಿಗೆ ಸಂದೇಶವನ್ನು…

Read More

ದೆಹಲಿ: ನಗರದ ಅಲಿಪುರದಲ್ಲಿ ಗೋಡೆ ಕುಸಿತಗೊಂಡು, ಐವರು ಸಾವನ್ನಪ್ಪಿ, 9 ಮಂದಿ ಗಾಯಗೊಂಡಿರುವಂತ ಭೀಕರ ಘಟನೆ ಇಂದು ನಡೆದಿದೆ. ದೆಹಲಿಯ ಅಲಿಪುರದ ಗೋಡೌನ್ ನಲ್ಲಿ ಗೋಡೆ ಕುಸಿತಗೊಂಡು ಭೀಕರದುರಂತವೊಂದು ಇಂದು ನಡೆದಿದೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/home-minister-araga-jnanendra-announces-appointment-letter-for-1222-fire-brigade-candidates-soon/ ಈ ವಿಷಯ ತಿಳಿದು ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗೋಡೆ ಕುಸಿತದಲ್ಲಿ ಹಲವರು ಸಿಲುಕಿರೋ ಶಂಕೆ ಇದೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. 9 ಮಂದಿ ಗಾಯಗೊಂಡಿರುವವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. https://twitter.com/ANI/status/1547872387932499968

Read More

ಮೈಸೂರು :  ಬಾಗಲಕೋಟೆಯಲ್ಲಿ ಮಹಿಳೆ ಹಣ ಎಸೆದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌  ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.  https://kannadanewsnow.com/kannada/good-news-for-sbi-customers-interest-rate-hike-on-fds-sbi-hikes-interest-rate/ ಯಾರು ಶಾಂತಿ ಕದಡುತ್ತಿದ್ದಾರೋ ಅವರು ಗಮನಿಸಬೇಕು. ರಾಜ್ಯದಲ್ಲಿ ಶಾಂತಿ ವಿಚಾರದ ಬಗ್ಗೆ ಸಿಎಂರನ್ನು ಪ್ರಶ್ನಿಸಿ. ʻಈಗ ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲʼ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. https://kannadanewsnow.com/kannada/good-news-for-sbi-customers-interest-rate-hike-on-fds-sbi-hikes-interest-rate/ ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಕೆಲ ಜನರಿಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿಜುಲೈ 15 ರಂದು, ಇಂದು ಸಿದ್ದರಾಮಯ್ಯ ಸಾಂತ್ವನ ಹೇಳಿ ಪರಿಹಾರ ನೀಡುವ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಮಹಿಳೆಯೊಬ್ಬರಿಗೆ 2 ಲಕ್ಷ ನೀಡಿ ಸಂದರ್ಭದಲ್ಲಿ ನನಗೆ ಹಣಬೇಡ ನನಗೆ ಶಾಂತಿ, ನಮಗೆ ನ್ಯಾಯ ಕೊಡಿ  ಎಂದು ಸಿದ್ದರಾಮಯ್ಯ ಅವರು ನೀಡಿದ ಹಣವನ್ನು ಏಕಾಏಕಿ ಕಾರಿನ ಮೇಲೆ ಎಸೆದು  ಹೈಡ್ರಾಮವನ್ನೇ ಸೃಷ್ಟಿಸಿದ್ದರು. https://kannadanewsnow.com/kannada/good-news-for-sbi-customers-interest-rate-hike-on-fds-sbi-hikes-interest-rate/

Read More