Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 16 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಲಿದ್ದಾರೆ. ಸುಮಾರು 14,850 ಕೋಟಿ ರೂ.ಗಳ ವೆಚ್ಚದಲ್ಲಿ 296 ಕಿ.ಮೀ ಚತುಷ್ಪಥ ಎಕ್ಸ್ಪ್ರೆಸ್ವೇಯನ್ನು ನಿರ್ಮಿಸಲಾಗಿದೆ. ಎಕ್ಸ್ಪ್ರೆಸ್ವೇ ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ. ಮೋದಿ ಸರ್ಕಾರವು ಸಂಪರ್ಕ ಮತ್ತು ಮೂಲಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 2022-23ನೇ ಸಾಲಿನ ಆಯವ್ಯಯದಲ್ಲಿ 1.99 ಲಕ್ಷ ಕೋಟಿ ರೂ. 2013-14ರಲ್ಲಿ ಸುಮಾರು 30,300 ಕೋಟಿ ರೂ.ಗಳ ಹಂಚಿಕೆಗೆ ಹೋಲಿಸಿದರೆ ಇದು ಶೇ.550ರಷ್ಟು ಏರಿಕೆಯಾಗಿದೆ. ಕಳೆದ ಏಳು ವರ್ಷಗಳಲ್ಲಿ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದವು 91,287 ಕಿ.ಮೀ .ನಿಂದ (ಏಪ್ರಿಲ್ 2014 ರಂತೆ) ಸುಮಾರು 1,41,000 ಕಿ.ಮೀ.ಗೆ (ಡಿಸೆಂಬರ್ 31, 2021 ರಂತೆ) ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. https://twitter.com/narendramodi/status/1547943448585859072?ref_src=twsrc%5Etfw%7Ctwcamp%5Etweetembed%7Ctwterm%5E1547943448585859072%7Ctwgr%5E%7Ctwcon%5Es1_c10&ref_url=https%3A%2F%2Fnewsroompost.com%2Findia%2Fpm-modi-to-inaugurate-bundelkhand-expressway-today%2F5139347.html ಬುಂದೇಲ್ ಖಂಡ್ ಎಕ್ಸ್…
ಬೆಂಗಳೂರು : ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ಮಾಡದಂತೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರ ತಡರಾತ್ರಿ ಕಾಯ್ದೆ ವಾಪಸ್ ಪಡೆದಿದೆ. ಆದೇಶ ಹಿಂಪಡೆದ ಪತ್ರದಲ್ಲಿ ಕನ್ನಡ ಹತ್ತಾರು ತಪ್ಪುಗಳು ಕಂಡುಬಂದಿವೆ. https://kannadanewsnow.com/kannada/gst-rate-hike-on-daily-essential-items-from-july-18-what-will-get-costlier/ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಬ್ಯಾನ್ ಆದೇಶ ವಾಪಸ್ ಪಡೆದ ಪತ್ರದಲ್ಲಿ ಕನ್ನಡದ ಕಗ್ಗೊಲೆ ಆಗಿದೆ. ಆದೇಶ ಹಿಂಪಡೆದ ಕುರಿತ ನಾಲ್ಕು ಸಾಲಿನ ಪತ್ರದಲ್ಲಿ ಹಲವು ವ್ಯಾಕರಣದ ತಪ್ಪುಗಳಿವೆ. ರಾಜ್ಯ ಸರ್ಕಾರದ ಆದೇಶದ ಪ್ರತಿಯಲ್ಲಿರುವ ತಪ್ಪುಗಳು ನಡವಳಿಗಳು (ನಡಾವಳಿಗಳು), ಪ್ರಸತ್ತಾವನೆ (ಪ್ರಸ್ತಾವನೆ), ಮೇಲೇ (ಮೇಲೆ) ಬಾಗ-1 (ಭಾಗ-), ಕರ್ನಾಟಾ (ಕರ್ನಾಟಕ) ಆಡಳಿದ (ಆಡಳಿತ) ಎಂಬ ತಪ್ಪುಗಳಿವೆ. https://kannadanewsnow.com/kannada/davanagere-ukkadagatri-temple-completely-submerged/ ಸರ್ಕಾರದ ಸುತ್ತೋಲೆಯಲ್ಲೇ ಕಾಗುಣಿತ ದೋಷಗಳು ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ನಿಷೇಧ ವಾಪಸ್ ಆದೇಶ ಹಿಂಪಡೆದ ಪ್ರತಿಯಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಒಂದು ಪುಟ ಸುತ್ತೋಲೆಯಲ್ಲಿ 8 ಅಕ್ಷ ದೋಷಗಳು ಪತ್ತೆಯಾಗಿವೆ. ಹೀಗೆ ಕಾಗುಣಿತದ ತಪ್ಪುಗಳ ಸರಮಾಲೆಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ.
ನವದೆಹಲಿ: ಸೋಮವಾರದಿಂದ ಅಂದರೆ ಜುಲೈ 18 ರಿಂದ ಕೆಲವು ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳವಾಗಲಿದೆ. ಕಳೆದ ತಿಂಗಳು ನಡೆದ 47 ನೇ ಜಿಎಸ್ಟಿ ಕೌನ್ಸಿಲ್ ಸಭೆಯ ನಂತರ, ಹಲವಾರು ವಸ್ತುಗಳು ಮತ್ತು ಸೇವೆಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ. https://kannadanewsnow.com/kannada/rain-disrupts-funerals-in-shimoga-people-who-put-tarpaulin-and-cremate-bhavani/ ಈ ಕಾರಣದಿಂದಾಗಿ, ಜುಲೈ 18 ರಿಂದ ಕೆಲವು ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ. ಏಕೆಂದರೆ ಹೊಸ ಜಿಎಸ್ಟಿ ದರಗಳು ಆ ದಿನದಂದು ಜಾರಿಗೆ ಬರಲಿವೆ. ಈ ನಿಟ್ಟಿನಲ್ಲಿ ಕೆಲವು ವಸ್ತುಗಳ ಬೆಲೆಗಳು ಸಹ ಕಡಿಮೆಯಾಗಲಿವೆ ಎಂಬುದನ್ನೂ ಗಮನಿಸಬೇಕು. ಯಾವುದು ದುಬಾರಿಯಾಗಲಿದೆ? * ಮೊಸರು, ಲಸ್ಸಿ ಮತ್ತು ಬೆಣ್ಣೆ ಹಾಲು ಸೇರಿದಂತೆ ಕಾನೂನು ಮಾಪನಶಾಸ್ತ್ರ ಕಾಯ್ದೆಯ ಪ್ರಕಾರ ಪೂರ್ವ-ಪ್ಯಾಕೇಜ್ಡ್ ಮತ್ತು ಪೂರ್ವ-ಲೇಬಲ್ ಮಾಡಿದ ಚಿಲ್ಲರೆ ಪ್ಯಾಕ್ ಜುಲೈ 18 ರಿಂದ ಶೇಕಡಾ 5 ರ ದರದಲ್ಲಿ ಜಿಎಸ್ಟಿಯನ್ನು ಆಕರ್ಷಿಸುತ್ತದೆ. *ಚೆಕ್ಗಳನ್ನು ವಿತರಿಸಲು ಬ್ಯಾಂಕುಗಳು ವಿಧಿಸುವ ಶುಲ್ಕದ ಮೇಲೆ ಶೇಕಡಾ 18 ರಷ್ಟು ಜಿಎಸ್ಟಿ…
ದಾವಣಗೆರೆ : ತುಂಗಾ- ಭದ್ರಾ ನೀರಿನ ಮಟ್ಟ ಹೆಚ್ಚಾಗಿರುವ ಬೆನ್ನಲ್ಲೇ, ಇದೀಗ ಪ್ರಸಿದ್ಧ ಉಕ್ಕಡಗಾತ್ರಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. https://kannadanewsnow.com/kannada/river-cauvery-overflows-kote-ganapathi-temple-flooded/ ಉಕ್ಕಡಗಾತ್ರಿ ಸ್ನಾನಘಟ್ಟ, ಜವಳಘಟ್ಟ ಪ್ರದೇಶಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಪಕ್ಕದಲ್ಲಿರುವ 20ಕ್ಕೂ ಹೆಚ್ಚು ಅಂಗಡಿಗಳು ನೀರುಪಾಲಾಗಿದೆ. ಉಕ್ಕಡಗಾತ್ರಿ-ಪತೇಪುರ್ ನಡುವೆ ಸಂಪರ್ಕ ಕೇತ್ರ ಇದಾಗಿದ್ದು. ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸದಾ ಜನಜಂಗುಲಿಯಿಂದ ತುಂಬಿರುವ ದೇವಸ್ಥಾನ ಇಂದು ಮಳೆ ನೀರಿನಿಂದ ಅಮೃತಗೊಂಡಿದೆ. https://kannadanewsnow.com/kannada/river-cauvery-overflows-kote-ganapathi-temple-flooded/
ಶಿವಮೊಗ್ಗ: ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರೆದಿದೆ. ಹೀಗಾಗಿ ಪ್ರವಾಹದ ಭೀತಿ ಎದುರಾಗಿದ್ದು, ಜನರಿಗೆ ಆತಂಕ ಶುರುವಾಗಿದೆ. ಈಗಾಗಲೇ ಹಳ್ಳ, ನದಿ . ಕೆರೆ ತುಂಬಿ ತುಳುಕುತ್ತಿದ್ದು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. https://kannadanewsnow.com/kannada/river-cauvery-overflows-kote-ganapathi-temple-flooded/ ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕಸಾಬದಲ್ಲಿ ಭವಾನಿ ಎಂಬುಬರು ನಿಧನ ಹೊಂದಿದ್ದರು. ಇವರ ಅಂತ್ಯಕ್ರಿಯೆಗೆ ಮಳೆ ಅಡ್ಡಿಯಾಗಿದೆ. ಯಾಕೆಂದರೆ ರುದ್ರಭೂಮಿಯಲ್ಲಿ ಯಾವುದೇ ಶೆಡ್ ಹಾಕಿಲ್ಲ. ಹಾಗಾಗಿ ಅಂತ್ಯಸಂಸ್ಕಾರ ಮಾಡೋದು ಕಷ್ಟವಾಗಿದೆ. ಜನರೇ ಟಾರ್ಪಲ್ ಹಾಕಿ ಅಂತ್ಯಕ್ರಿಯೆ ಮಾಡಿದ್ದಾರೆ. ಪ್ರತಿವರ್ಷ ಮಳೆ ಬಂದರೆ, ಇದೇ ರೀತಿ ಆಗುತ್ತದೆ. ಹೀಗಾಗಿ ಅಧಿಕಾರಿಗಳಿಗೆ ಶೆಡ್ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ: KRS ಡ್ಯಾಂನಿಂದ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕಾವೇರಿ ನದಿ ಭೋರ್ಗರೆತ ಮುಂದುವರೆದಿದೆ. https://kannadanewsnow.com/kannada/biden-says-he-holds-saudi-crown-prince-responsible-for-khashoggis-murder/ ಶ್ರೀರಂಗಪಟ್ಟಣದ ಕೋಟೆವರೆಗೂ ನೀರು ನುಗ್ಗಿದ್ದು, ಈಶಾನ್ಯ ದಿಕ್ಕಿನ ಕೋಟೆ ಗಣಪತಿ ದೇವಸ್ಥಾನಕ್ಕೆ ಜಲಾವೃತವಾಗಿದೆ.ದೇವಸ್ಥಾನದ ಒಳಭಾಗಕ್ಕೆ ನೀರು ನುಗ್ಗಿದೆ.ಹೀಗಾಗಿ ಭಕ್ತರು ಮೆಟ್ಟಿಲು ಬಳಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.ಹೈದರಾಲಿ, ಟಿಪ್ಪು ಕಾಲದ ಕಾರಗೃಹವೂ ಜಲಾವೃತಗೊಂಡಿದೆ. 1895ರಲ್ಲಿ ಕಾರಗೃಹ ಪತ್ತೆ ಮಾಡಿದ್ದ ಥಾಮಸ್ ಇನ್ ಮನ್, ಬಳಿಕ ಥಾಮಸ್ ಇನ್ ಮನ್ ಕಾರಾಗೃಹ ಎಂದು ನಾಮಕರಣ ಮಾಡಲಾಗಿತ್ತು. ನದಿ ನೀರು ಹೆಚ್ಚಾದ್ರೆ ಕಾರಗೃಹ, ಕೋಟೆ ಧಕ್ಕೆ ಸಾಧ್ಯತೆ ಇದೆ.
ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. https://kannadanewsnow.com/kannada/quarrel-between-two-teachers-in-tumkur-the-villagers-locked-the-school-because-they-could-not-see-the-commotion/ ಕಲುಬರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೂವಿನಹಳ್ಳಿ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತವಾದ ಸ್ಥಳಕ್ಕೆಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರನ್ನು ಜಗನ್ನಾಥ (35), ಮೆಹಬೂಬ್ ಅಲಿ (45) ಹಾಗೂ ಶಾದಿಪುರ ಗ್ರಾಮದ ಶ್ರೀಕಾಂತ್ (30) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಅಮರ್ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರು : ಶಾಲೆಗೆ ತಡವಾಗಿ ಆಗಮಿಸುವ ವಿಚಾರಕ್ಕೆ ಶಿಕ್ಷಕಿಯರಿಬ್ಬರ ನಡುವೆ ಗಲಾಟೆ ಮಾಡಿದ್ದಕ್ಕಾಗಿ ಗ್ರಾಮಸ್ಥರಿಂದ ತುಮಕೂರಿನ ಚಿಕ್ಕ ಸಾರಂಗಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನೇ ಬಂದ್ ಮಾಡಿದ ನಡೆದ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/heavy-rain-in-davangere-15-houses-in-harihars-ganga-nagar-flooded/ ಶಾಲೆಗೆ ತಡವಾಗಿ ಆಗಮಿಸುವ ವಿಚಾರಕ್ಕಾಗಿ ಬೆಳ್ಳಂಬೆಳಗ್ಗೆ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ಎಂಬ ಶಿಕ್ಷಕಿಯರಿಬ್ಬರು ಪಾಠ ಮಾಡಬೇಕಾದರೇ ಮಕ್ಕಳೆದುರು ನಡುವೆ ಕಿತ್ತಾಟ ನಡೆಸುತ್ತಿದ್ದರು. ಇದನ್ನುಕಂಡ ಗಲಾಟೆ ನಿಯಂತ್ರಿಸಲಾಗದೇ ಬೇಸತ್ತು, ಗ್ರಾಮಸ್ಥರಿಂದಲೇ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಬಂದ್ ಮಾಡಿ ಮನೆಗೆ ತೆರಳಿದ್ದಾರೆ. ಹಾಗಾಗಿ ಶಾಲೆಗೆ ಬಂದ ಮಕ್ಕಳು ಮತ್ತೆ ಮನೆಗಳತ್ತ ತೆರಳಿದ್ದಾರೆ. https://kannadanewsnow.com/kannada/heavy-rain-in-davangere-15-houses-in-harihars-ganga-nagar-flooded/
ವಾಷಿಂಗ್ಟನ್: ಪೋಸ್ಟ್ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಹತ್ಯೆಗೆ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಕಾರಣ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ. https://kannadanewsnow.com/kannada/kolar-complete-bandh-in-protest-against-price-hike-of-essential-commodities/ 2018 ರಲ್ಲಿ ಖಶೋಗಿಯ ಹತ್ಯೆಯ ನಂತರ ತಾನು ಪರೈಯಾ ಎಂದು ಕರೆದಿದ್ದ ದೇಶದೊಂದಿಗಿನ ಸಂಬಂಧವನ್ನು ಮರುಹೊಂದಿಸುವ ಪ್ರವಾಸದಲ್ಲಿ, ಎಂಬಿಎಸ್ ಎಂದು ಕರೆಯಲ್ಪಡುವ ಯುವರಾಜನು ಕೊಲೆಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದ್ದಾನೆ. ತಾನು ಹೊಣೆಗಾರರನ್ನು ಹೊಣೆಗಾರರನ್ನಾಗಿ ಮಾಡಿದ್ದೇನೆ ಎಂದು ಬೈಡನ್ ಹೇಳಿದರು. “ಖಶೋಗಿ ಹತ್ಯೆಗೆ ಸಂಬಂಧಿಸಿದಂತೆ, ನಾನು ಅದನ್ನು ಸಭೆಯ ಮೇಲ್ಭಾಗದಲ್ಲಿ ಎತ್ತಿದೆ. ಆ ಸಮಯದಲ್ಲಿ ನಾನು ಅದರ ಬಗ್ಗೆ ಏನು ಯೋಚಿಸಿದೆ ಮತ್ತು ಅದರ ಬಗ್ಗೆ ಈಗ ನನ್ನ ಅಭಿಪ್ರಾಯವೇನು ಎಂಬುದನ್ನು ಸ್ಪಷ್ಟಪಡಿಸಿದ್ದೇನೆ” ಎಂದು ತಿಳಿಸಿದ್ದಾರೆ. https://kannadanewsnow.com/kannada/kolar-complete-bandh-in-protest-against-price-hike-of-essential-commodities/ “ನಾನು ಅದನ್ನು ಚರ್ಚಿಸುವಲ್ಲಿ ನೇರವಾಗಿ ಮತ್ತು ನೇರವಾಗಿದ್ದೆ. ನಾನು ನನ್ನ ದೃಷ್ಟಿಕೋನವನ್ನು ಸ್ಫಟಿಕವಾಗಿ ಸ್ಪಷ್ಟಪಡಿಸಿದ್ದೇನೆ. ಮಾನವ ಹಕ್ಕುಗಳ ವಿಷಯದಲ್ಲಿ ಅಮೆರಿಕದ ಅಧ್ಯಕ್ಷರು ಮೌನವಾಗಿರುವುದು ನಾವು ಯಾರು ಮತ್ತು ನಾನು ಯಾರು ಎಂಬುದರೊಂದಿಗೆ ಅಸಮಂಜಸವಾಗಿದೆ ಎಂದು…
ಬೆಂಗಳೂರು: ರಾಜ್ಯ ಸರ್ಕಾರದಿಂದ 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಸಮುದಾಯದ 50 ಸಾವಿರ ಅಭ್ಯರ್ಥಿಗಳಿಗೆ ಖಾಸಗಿ ತರಬೇತಿ ಸಂಸ್ಥೆಗಳಿಂದ ಸ್ಪರ್ಧಾತ್ಮಕ ತರಬೇತಿ ನೀಡಲು ಅನುಮತಿಸಿದೆ. ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿಯ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಈ ಸಂಬಂಧ ನಡವಳಿಗಳನ್ನು ಹೊರಡಿಸಿದ್ದು, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ 50,000 ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ನೀಡಲಾಗುವುದು ಎಂದು ಘೋಷಿಸಲಾಗಿದೆ. ಈ ಯೋಜನೆಯ ಅನುಷ್ಠಾನಗೊಳಿಸಲು ಹಾಗೂ ಮೊದಲ ಹಂತದಲ್ಲಿ 15,000 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಷರತ್ತುಗಳೊಂದಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಯುಪಿಎಸ್ಸಿ, ಕೆಎಎಸ್, ಬ್ಯಾಂಕಿಂಗ್, ಗ್ರೂಪ್-ಸಿ, ಎಸ್ಎಸ್ಸಿ, ಆರ್ ಆರ್ ಬಿ,…