Author: KNN IT TEAM

ಹಾವೇರಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದೆ. ಜಿಲ್ಲೆಯ ಜನರ ಜೀವನಾಡಿ ವರದಾ ನದಿ ಸಂಪೂರ್ಣ ಭರ್ತಿಯಾಗಿದ್ದು, ತಾಲೂಕಿನ ಬೆಳವಿಗಿ ಹಾಗೂ ನೀರಲಗಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ. https://kannadanewsnow.com/kannada/husband-flees-with-3-kids-after-boiling-wifes-corpse-in-school-kitchen/ ಎರಡು ಗ್ರಾಮಗಳ ಸಂಪರ್ಕ ಸೇತುವೆ ಬಂದ್ ಆಗಿದೆ. ಅಪಾಯ ಮಟ್ಟದಲ್ಲಿ ನದಿ ನೀರು ಇರುವ ಕಾರಣ ಸಿಬ್ಬಂದಿ ಡಂಗೂರ ಸಾರುತ್ತಿದ್ದಾರೆ.ಬೆಳವಿಗಿ ಗ್ರಾಮ ಪಂಚಾಯತಿ ಸಿಬ್ಬಂದಿಯಿಂದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಯಾರು ನದಿ ಪಾತ್ರದಲ್ಲಿ ಹೋಗದಂತೆ ಡಂಗೂರು ಸಾರಿಸಿದ್ದಾರೆ.

Read More

ಬೆಳಗಾವಿ :  ಕೊಲ್ಹಾಪುರ ಜಿಲ್ಲೆ ಚಂದಗಡ ತಾಲೂಕಿನ  ಮಜರೆ ಕಾರವೆ ಗ್ರಾಮದ ಹಾಂಜಹೊಳ ನದಿ ಬಳಿಯಲ್ಲಿ  ಬೈಕ್‌ಗೆ ಡಿಕ್ಕಿ ತಪ್ಪಿಸಲು ನದಿಗೆ ಕಾರು ಹಾರಿದ್ದ ʻ ಘನಘೋರ ʼ ಘಟನೆ ಬೆಳಕಿಗೆ ಬಂದಿದೆ. ಅದೃಷವಶಾತ್‌ ಕಾರಿನಲ್ಲಿದ್ದ ದಂಪತಿ ಪಾರಾಗಿದ್ದಾರೆ. ಮಹಾರಾಷ್ಟ್ರದಿಂದ ಬೆಳಗಾವಿಯತ್ತ ಬರ್ತಿದ್ದ ಕಾರು ಇದಾಗಿತ್ತು. https://kannadanewsnow.com/kannada/barbaric-murder-in-bangalore/

Read More

ಬೆಂಗಳೂರು: ಪ್ರಾಪ್ತೆ ಜೊತೆ ಮದುವೆಯಾಗುವ ಉದ್ದೇಶದಿಂದ ಆಧಾರ್ ಕಾರ್ಡ್​​ನಲ್ಲಿ ಮಾಹಿತಿ ತಿರುಚಿದ ಆರೋಪದ ಮೇಲೆ ಮನು ಎಂಬ ಯುವಕನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಹಿನ್ನಲೆ: 2005ಯಲ್ಲಿ ಹುಟ್ಟಿದ ಯುವತಿಗೆ ಸಂಬಂಧಪಟ್ಟ ಮಾಹಿತಿಯನ್ನು ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲು ತೆರಳಿದ್ದ ವೇಳೆಯಲ್ಲಿ ಜನ್ಮ ದಿನಾಂಕ ತಿದ್ದಿರುವ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈಓ ನಡುವೆ ಸದ್ಯ ಯುವಕನ ವಿಚಾರಣೆ ನಡೆಯುತ್ತಿದ್ದು, ಆಧಾರ್ ಕಾರ್ಡ್ ತಿದ್ದಿದವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

Read More

ನವದೆಹಲಿ : ಲೋಕಸಭೆಯ ಸಚಿವಾಲಯವು ಸದನಗಳಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳಂತಹ ವಿವಿಧ ವಿಷಯಗಳ ಮೇಲೆ ಅನೇಕ ನಿಷೇಧಗಳನ್ನ ವಿಧಿಸಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಬಳಸಬಾರದ ಅಸಂಸದೀಯ ಪದಗಳನ್ನ ಬಹಿರಂಗಪಡಿಸಿ ಇದೀಗ ಅಧಿಸೂಚನೆ ಹೊರಡಿಸಿರುವ ಲೋಕಸಭೆ ಸೆಕ್ರೆಟರಿಯೇಟ್, ಇತ್ತೀಚೆಗೆ ಹೆಚ್ಚಿನ ನಿರ್ಬಂಧಗಳನ್ನ ವಿಧಿಸಿದೆ. ಸಂಸತ್ತಿನ ಆವರಣದಲ್ಲಿ ಧರಣಿ ಮತ್ತು ಪ್ರತಿಭಟನೆಗಳನ್ನ ಸಹ ನಿಷೇಧಿಸಲಾಗಿದ್ದು, ಈ ಕ್ರಮದಲ್ಲಿ ಇತ್ತೀಚೆಗೆ ನಿಷೇಧಾಜ್ಞೆ ಹೇರಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನಗಳಲ್ಲಿ ಯಾವುದೇ ಸದಸ್ಯರು ಕರಪತ್ರಗಳು ಮತ್ತು ಫಲಕಗಳನ್ನ ಪ್ರದರ್ಶಿಸಬಾರದು ಎಂದು ಮಾರ್ಗಸೂಚಿಗಳು ಹೇಳಿವೆ. ಸಂಸತ್ತಿನಲ್ಲಿ ಧರ್ಮ ಮತ್ತು ಪ್ರತಿಭಟನೆಗೆ ಅನುಮತಿ ನೀಡದಿರುವ ಬಗ್ಗೆ ವಿರೋಧ ಪಕ್ಷಗಳಿಂದ ಹಲವು ಟೀಕೆಗಳು ಬರುತ್ತಿವೆ. ಈ ನಿಷೇಧಕ್ಕೆ ವಿರೋಧ ಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ವಿರೋಧ ಪಕ್ಷದ ಸದಸ್ಯರು ಸಂಸತ್ತಿನ ಆವರಣದಲ್ಲಿ ಘೋಷಣೆಗಳನ್ನ ಕೂಗಿ ತಮ್ಮ ವಿರೋಧ ವ್ಯಕ್ತಪಡಿಸುತ್ತಾರೆ. ಅಲ್ಲದೇ ಕೆಲವೊಮ್ಮೆ ಸ್ಪೀಕರ್ ವೇದಿಕೆಯನ್ನ ಸುತ್ತುವರಿದು ಘೋಷಣೆಗಳನ್ನ ಕೂಗುತ್ತಾರೆ. ಹಾಗಾಗಿನೇ ಸಧ್ಯ ಸನ್ನಿವೇಶಗಳು ಈ ಬಾರಿಯ ಮಳೆಗಾಲದ ಸಭೆಗಳಲ್ಲಿ ಎದುರಾಗಬಾರದು ಎನ್ನುವ…

Read More

ಶಿವಮೊಗ್ಗ: ಕಚ್ಚೆ ಹರುಕ ಶಾಸಕ ಹಾಲಪ್ಪನಿಗೆ ( MLA Haratalu Halappa ) ಆಗಾಗ ಅತ್ಯಾಚಾರ ಕೇಸಿನ ನೆನಪಾಗುತ್ತದೆ. ಅದಕ್ಕಾಗಿ ಅವರು ನನ್ನ ಮೇಲೆ ಸುಳ್ಳು ಅತ್ಯಾಚಾರದ ಕೇಸ್ ಹಾಕಲು ಎಂಡಿಎಫ್ ಗಲಾಟೆ ಪ್ರತಿಭಟನೆ ವೇಳೆ ನನ್ನ ಮೇಲೆ‌ ಕೇಸ್ ಪ್ರಯತ್ನ ನಡೆದಿತ್ತು ಎಂಬುದಾಗಿ, ಶಾಸಕ ಹರತಾಳು ಹಾಲಪ್ಪ ವಿರುದ್ಧ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ( Farmer MLA Gopalakrishna Beluru ) ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ವೆಂಕಟೇಶಮೂರ್ತಿ ಅತ್ಯಾಚಾರ ಕೇಸ್’ಗೆ ಪ್ರತಿಯಾಗಿ ಅವರ ಆಫೀಸಿಗೆ ಹುಡುಗಿಯೊಬ್ಬಳಿಗೆ ನುಗ್ಗಿಸಿ ವೆಂಕಟೇಶ್’ಮೂರ್ತಿ ಮೇಲೆ ಕೇಸ್ ಹಾಕುವ ಪ್ರಯತ್ನ ಇದೇ ಶಾಸಕ ಹಾಲಪ್ಪ ಮಾಡಿದ್ದರು. ಎಂಡಿಎಫ್ ಗಲಾಟೆಯಲ್ಲಿ ಶಾಸಕ ಹಾಲಪ್ಪರ ಪಾತ್ರವಿದ್ದರೂ ಅವರ ಮೇಲೆ ಎಫ್’ಐಆರ್ ಏಕೆ ದಾಖಲಾಗಿಲ್ಲ. ಯಾವ ಶಕ್ತಿ ಅವರನ್ನು ಕಾಪಾಡಿರಬೇಕು. ನಮ್ಮ ಬಳಿ ಎಂಡಿಎಫ್’ನಲ್ಲಿ ನಡೆದ ಘಟನೆಯ ಒಂದು ಗಂಟೆಗಳ ವಿಡಿಯೋ ಇದೆ ಎಂದು ಹೇಳಿದರು. https://kannadanewsnow.com/kannada/home-minister-araga-jnanendra-said-that-strict-action-will-be-taken-to-prevent-illegal-supply-of-ganja-in-jails/ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂಡಿಎಫ್ ಗಲಾಟೆ ಎಫ್’ಐಆರ್ ದಾಖಲಿಸಲು…

Read More

ಬೆಂಗಳೂರು : ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ಮಾಡದಂತೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರ ತಡರಾತ್ರಿ ಕಾಯ್ದೆ ವಾಪಸ್ ಪಡೆದಿದೆ. ಆದೇಶ ಹಿಂಪಡೆದ ಪತ್ರದಲ್ಲಿ ಕನ್ನಡ ಹತ್ತಾರು ತಪ್ಪುಗಳು ಕಂಡುಬಂದಿವೆ. ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಬ್ಯಾನ್ ಆದೇಶ ವಾಪಸ್ ಪಡೆದ ಪತ್ರದಲ್ಲಿ ಕನ್ನಡದ ಕಗ್ಗೊಲೆ ಆಗಿದೆ. ಆದೇಶ ಹಿಂಪಡೆದ ಕುರಿತ ನಾಲ್ಕು ಸಾಲಿನ ಪತ್ರದಲ್ಲಿ ಹಲವು ವ್ಯಾಕರಣದ ತಪ್ಪುಗಳಿವೆ. ರಾಜ್ಯ ಸರ್ಕಾರದ ಆದೇಶದ ಪ್ರತಿಯಲ್ಲಿರುವ ತಪ್ಪುಗಳು ನಡವಳಿಗಳು (ನಡಾವಳಿಗಳು), ಪ್ರಸತ್ತಾವನೆ (ಪ್ರಸ್ತಾವನೆ), ಮೇಲೇ (ಮೇಲೆ) ಬಾಗ-1 (ಭಾಗ-), ಕರ್ನಾಟಾ (ಕರ್ನಾಟಕ) ಆಡಳಿದ (ಆಡಳಿತ) ಎಂಬ ತಪ್ಪುಗಳಿವೆ. ಸರ್ಕಾರದ ಸುತ್ತೋಲೆಯಲ್ಲೇ ಕಾಗುಣಿತ ದೋಷಗಳು ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ನಿಷೇಧ ವಾಪಸ್ ಆದೇಶ ಹಿಂಪಡೆದ ಪ್ರತಿಯಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಒಂದು ಪುಟ ಸುತ್ತೋಲೆಯಲ್ಲಿ 8 ಅಕ್ಷ ದೋಷಗಳು ಪತ್ತೆಯಾಗಿವೆ. ಹೀಗೆ ಕಾಗುಣಿತದ ತಪ್ಪುಗಳ ಸರಮಾಲೆಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ.

Read More

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲುಗಳಲ್ಲಿ ( parappana agrahara central jail ) ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದೆರಡು ಜೈಲುಗಳಲ್ಲಿ ಕೆಲವರು ಇದ್ದಾರೆ ಅದನ್ನು ಸರಿಪಡಿಸುತ್ತೇವೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುರುಗನ್ ಸಮಿತಿ ವರದಿ ಆಧಾರದಲ್ಲಿ ಪರಪ್ಪನ ಅಗ್ರಹಾರದಲ್ಲಿ 15 ಸಿಬ್ಬಂದಿ ಅಮಾನತು ಮಾಡಲಾಗಿದೆ. 30 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಇವಾಗ ಬಹುತೇಕ ಹೊಸ ಸಿಬ್ಬಂದಿಗಳು ಇದ್ದಾರೆ ಎಂದರು. https://kannadanewsnow.com/kannada/shimoga-power-outages-in-these-areas-of-the-city-on-july-18-and-19/ ಜೈಲು ಸಿಬ್ಬಂದಿ ಅಲರ್ಟ್ ಆಗಿದ್ದಾರೆ, ಎಲ್ಲವನ್ನು ಹಿಡಿಯುತ್ತಿದ್ದಾರೆ. ಫೋನ್, ನಿಷೇಧಿತ ವಸ್ತು ಬಳಕೆ ಮಾಡಿದರೆ ಎಫ್ ಐ ಆರ್ ಆಗುತ್ತಿದೆ. ಕೈದಿಗಳ ಶಿಕ್ಷೆ ಪ್ರಮಾಣ ಮುಗಿದ ಬಳಿಕ ಐದು ವರ್ಷ ಶಿಕ್ಷೆ ವಿಧಿಸುವ ಅವಕಾಶ ಇದೆ. ಸಿಬ್ಬಂದಿಯ ವಿರುದ್ಧವೂ ಎಫ್ ಐ ಆರ್ ದಾಖಲು ಮಾಡಲಾಗುತ್ತಿದೆ. ಈ ರೀತಿ ಬಿಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಎಚ್ಚರಿಕೆ ನೀಡಿದರು. ಪರಪ್ಪನ ಅಗ್ರಹಾರದಲ್ಲಿ 4 ಜಿ…

Read More

ಶಿವಮೊಗ್ಗ : ಜುಲೈ 18 ಮತ್ತು 19 ರಂದು ರೈಲ್ವೇ ಬ್ರಿಡ್ಜ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಫೀಡರ್-3 ಪುರಲೆ ಮತ್ತು ಫೀಡರ್-8 ಜಾವಳ್ಳಿ ವ್ಯಾಪ್ತಿಯ ಗುರುಪುರ, ಪುರಲೆ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಹಸೂಡಿ ರಸ್ತೆ, ವೆಂಕಟೇಶನಗರ, ಸುಬ್ಬಯ್ಯ ಆಸ್ಪತ್ರೆ, ಹೊಳೆಬೆನವಳ್ಳಿ, ಪಿಳ್ಳಂಗಿರಿ, ಜಾವಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಕೊಳೆರೋಗ ನಿಯಂತ್ರಣ ಕ್ರಮ ಶಿಕಾರಿಪುರ ತಾಲ್ಲೂಕಿನಲ್ಲಿ ಕಳೆದ 15 ರಿಂದ 20 ದಿನಗಳಿಂದ ಮುಂಗಾರು ಮಳೆ ಬೀಳುತ್ತಿದ್ದು ಪ್ರಸ್ತುತ ಅಡಿಕೆಯಲ್ಲಿ ಕಂಡು ಬರಬಹುದಾದ ಕೊಳೆರೋಗಕ್ಕೆ ಕೆಳಕಂಡಂತೆ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ. ಶೇ.1 ರಷ್ಟು ಬೋರ್ಡೋ ದ್ರಾವಣ(1 ಕೆ.ಜಿ ಮೈಲುತ್ತುತ್ತು 1 ಕೆ.ಜಿ ಸುಣ್ಣವನ್ನು 100 ಲೀ ನೀರಿನಲ್ಲಿ) ಸಿಂಪಡಿಸುವ ಮೂಲಕ ಕೊಳೆರೋಗ ಹಾನಿಯ ತೀವ್ರತೆಯನ್ನು ತಡೆಗಟ್ಟಬಹುದಾಗಿರುತ್ತದೆ. ಆದ್ದರಿಂದ ತಾಲ್ಲೂಕಿನಾದ್ಯಂತ ಅಡಿಕೆ ಬೆಳೆದಿರುವ ರೈತರು ಮಳೆಯ ಬಿಡುವನ್ನು ನೋಡಿಕೊಂಡು ಮೇಲಿನ ದ್ರಾವಣ ಸಿಂಪಡಿಸುವುದರ ಮೂಲಕ…

Read More

ವಿಜಯಪುರ : ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2022-23ನೇ ಸಾಲಿನಲ್ಲಿ ಸೇವಾ ಸಿಂಧು ಯೋಜನೆಯಡಿ ವಿದ್ಯಾರ್ಥಿ ರಿಯಾಯತಿ ಪಾಸ್ ಅರ್ಜಿ ಪಾರಂಭವಾಗಿದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳು ಸೇವಾ ಸಿಂಧು ಯೋಜನೆಯಡಿ ವಿದ್ಯಾರ್ಥಿ ರಿಯಾಯತಿ ಪಾಸ್‌ಗಳಿಗೆ ಅರ್ಜಿ ಸಲ್ಲಿಸಿ, ಅವಶ್ಯಕ ದಾಖಲೆಗಳನ್ನು ಹಾಗೂ ನಿಗದಿಪಡಿಸದ ಪಾಸ್ ದರವನ್ನು ಭರಣ ಮಾಡಿ ಪಾಸ್ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕೋರಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉಚಿತ ರಿಯಾಯತಿ ಬಸ್ ಪಾಸ್‌ಗಳನ್ನು ಪಡೆಯಲು ಕೋರಲಾಗಿದೆ. https://kannadanewsnow.com/kannada/denial-of-permission-for-cfi-girls-conference-protest-by-muslim-students-at-mangalore-city-hall/ ಅದರಂತೆ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜುಲೈ 16ರವರೆಗೆ ಉಚಿತವಾಗಿ ಪ್ರಯಾಣಿಸಲು ಹಾಗೂ ಆಗಸ್ಟ್-2022ರವರೆಗೆ ಎರಡು ತಿಂಗಳ ಪಾಸ್ ಮೊತ್ತವನ್ನು ಪಾವತಿಸಿ, ಬಸ್ ಪಾಸ್ ಅವಧಿಯನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಉಚಿತವಾಗಿ ಪ್ರಯಾಣಿಸಲು ನೀಡಿದ ಕಾಲಾವಕಾಶ ಮುಗಿದಿದ್ದು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಸ್ ಕೌಂಟರಗಳಿಗೆ ಸಂಪರ್ಕಿಸಿ, ತಮ್ಮ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಹೊಸ ಬಸ್ ಪಾಸ ಪಡೆದುಕೊಳ್ಳಬಹುದಾಗಿದೆ ಎಂದು…

Read More

ಮಂಗಳೂರು :   ಸಿಎಫೈಐ (CFI ) ಗರ್ಲ್ಸ್‌ ಕಾನ್ಫರೆನ್ಸ್‌ ಗೆ ಅನುಮತಿ ನಿರಾಕರಿಸಿದ್ದಕ್ಕೆ ಮಂಗಳೂರಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಧರಣೆ ನಡೆಸುತ್ತಿದ್ದಾರೆ. ಪ್ರೊಟೆಸ್ಟ್‌ ಮಾಡಿದ ವಿದ್ಯಾರ್ಥಿನಿಗಳನ್ನು ಖಾಕಿ ಪಡೆ ತರಾಟೆ ತೆಗೆದುಕೊಂಡಿದ್ದಾರೆ.  ಪ್ರತಿಭಟನೆ ವಿರುದ್ಧ ಕಮಿಷನರ್‌ ವಾರ್ನ್‌ ಮಾಡಿದ್ದರೂ ಬಳಿಕ ಮಿಲಾಗ್ರಿಸ್‌ ಬಳಿ  ಪೊಲೀಸ್‌ ಕಮಿಷನರ್‌ ಮತ್ತು ಸಿಎಫೈಐ ಮುಖಂಡರು ವಾಗ್ವಾದ ನಡೆಸಿದ್ರೂ, ಪ್ರತಿಭಟನೆಯ ಪಟ್ಟು ಹಿಡಿದು  ಸಿಎಫೈಐ ಮುಖಂಡರು ಮಂಗಳೂರಿನ ಮಿಲಾಗ್ರಿಸ್‌ ಬಳಿ ಜಾಗ ಖಾಲಿ ಮಾಡಿದರು.  ಸದ್ಯ ಪುರಭವನದಲ್ಲಿ ಪೊಲೀಸರು CFI ಸಮಾವೇಶ ನಡೆಸಲು ಅನುಮತಿ ನೀಡಲಾಗಿದೆ. ಪೊಲೀಸರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಸ್ಸ್‌ ಹತ್ತಿದ ವಿದ್ಯಾರ್ಥಿನಿಯರು ಪುರಭವನದತ್ತ ಮುಸ್ಲಿಂವಿದ್ಯಾರ್ಥಿನಿಯರು ತೆರಳಿದ್ದಾರೆ. CFI ರ್ಯಾಲಿಗೆ ಅವಕಾಶ ನಿರಾಕರಿಸಿದ್ದ ಮಂಗಳೂರು ಪೊಲೀಸರು ಪುರಭವನ ಬಳಿ ಸಮಾವೇಶ ನಡೆಸಲು ಅನುಮತಿ ನೀಡಲಾಗಿತ್ತು. ಆದರೂ ಯುವತಿಯರ ದಾರಿ ತಪ್ಪಿಸುತ್ತಿದ್ದೀರಾ? ಎಂದು ಸಿಎಫೈಐ ಮುಖಂಡರಿಗೆ  ಕಮಿಷನರ್‌ ಎನ್‌ ಶಶಿಕುಮಾರ್‌  ತರಾಟೆಗೆ ತೆಗೆದುಕೊಂಡಿದ್ದಾರೆ.

Read More