Author: KNN IT TEAM

ಬೆಂಗಳೂರು: ರಾಜ್ಯದಲ್ಲಿ ಈ ಹಿಂದಿನ ಎಲ್ಲಾ ದಾಖಲೆ ಮುರಿಯುವಂತೆ ಕೋವಿಡ್ ಸೋಂಕಿನ ( Covid19 Case ) ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಬರೋಬ್ಬರಿ 1,374 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯಿಂದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬಾಗಲಕೋಟೆ 03, ಬಳ್ಳಾರಿ 12, ಬೆಳಗಾವಿ 07, ಬೆಂಗಳೂರು ಗ್ರಾಮಾಂತರ 06, ಬೆಂಗಳೂರು ನಗರ 1234, ಚಿತ್ರದುರ್ಗ -02, ದಕ್ಷಿಣ ಕನ್ನಡ -19, ದಾವಣಗೆರೆ – 02, ಧಾರವಾಡ -33 ಕೋವಿಡ್ ಪ್ರಕರಣ ( Coronavirus Case ) ವರದಿಯಾಗಿದೆ. https://kannadanewsnow.com/kannada/vidyut-adalat-to-be-held-in-8-districts-under-bescom-today-2900-customers-participate/ ಗದಗ 01, ಹಾಸನ 08, ಕಲಬುರ್ಗಿ 09, ಕೋಲಾರ 07, ಕೊಪ್ಪಳ 01, ಮಂಡ್ಯ 02, ಮೈಸೂರು 22, ತುಮಕೂರು 01 ಮತ್ತು ಉಡುಪಿ 05 ಸೇರಿದಂತೆ 1,374 ಮಂದಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 39,85,376ಕ್ಕೆ ಏರಿಕೆಯಾಗಿದೆ.…

Read More

ನವದೆಹಲಿ : ಬ್ರಹ್ಮಾಂಡದ ಸ್ಪಷ್ಟ ಚಿತ್ರಣವನ್ನ ತೋರಿಸುವ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಹೊಸ ಸಾಧನೆಗೆ ನಾಂದಿಯಾಡಲಿದೆ. ಹೌದು, ಈ ಜೇಮ್ಸ್ ವೆಬ್ ಬ್ರಹ್ಮಾಂಡದ ವಿವಿಧ ಸ್ಥಳಗಳಲ್ಲಿ ಜೀವಿಗಳನ್ನ ಹುಡುಕುವ ಸಾಮರ್ಥ್ಯವನ್ನ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂದ್ರೆ, ಈ ದೂರದರ್ಶಕವು ಎಲ್ಲ ಕಡೆ ಕಣ್ಣುಗಳನ್ನ ತಿರುಗಿಸುತ್ತೆ, ಜೀವಿಗಳ ಚಿಹ್ನೆ ಕಂಡುಬಂದ ತಕ್ಷಣ ಭೂಮಿಯ ಮೇಲಿರುವ ವಿಜ್ಞಾನಿಗಳಿಗೆ ತಿಳಿಸುತ್ತದೆ. ಸೌರವ್ಯೂಹದ ಅನೇಕ ಸ್ಥಳಗಳಲ್ಲಿ ಜೀವನವನ್ನ ನಿರೀಕ್ಷಿಸಲಾಗಿದೆ. ಎಲ್ಲೆಲ್ಲಿ ನೀರಿನ ಪುರಾವೆ ಇದೆಯೋ ಅಲ್ಲೆಲ್ಲ ಬದುಕಿಗೆ ಆಶಾಕಿರಣವಿರಬಹುದು. ಮಂಗಳ ಮತ್ತು ಗುರುವಿನ ಚಂದ್ರ ಯುರೋಪಾದಲ್ಲಿರುವಂತೆ. ಮೇಲ್ಮೈ ಕೆಳಗೆ ಮತ್ತು ಮೇಲಿನ ಎರಡೂ ಸ್ಥಳಗಳಲ್ಲಿ ನೀರಿನ ಮೂಲದ ಪುರಾವೆಗಳು ಕಂಡುಬಂದಿವೆ. ಆದರೆ ಇಲ್ಲಿ ಬದುಕು ಕಾಣುವುದು ಕಷ್ಟ. ಯಾಕಂದ್ರೆ, ಇಲ್ಲಿಗೆ ಬರುವುದು ಕಷ್ಟ. ಅಂತಹ ಯಾವುದೇ ಲ್ಯಾಂಡರ್ ಅಥವಾ ರೋವರ್ ಸಹ ನಿರ್ಮಿಸಲಾಗಿಲ್ಲ, ಅದು ಅವುಗಳ ಮೇಲ್ಮೈಯಲ್ಲಿ ನೀರಿನ ಮೂಲಗಳನ್ನು ಕಂಡುಹಿಡಿಯಬಹುದು. ಸೂರ್ಯನನ್ನು ಹೊರತುಪಡಿಸಿ ಬೇರೆ ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಗ್ರಹಗಳಲ್ಲಿ ಅಂದರೆ ಬಹಿರ್ಗ್ರಹಗಳ…

Read More

ನವದೆಹಲಿ: 2.5 ಲಕ್ಷ ರೂ.ಗಳ ವಿನಾಯಿತಿ ಮಿತಿಗಿಂತ ಕಡಿಮೆ ಒಟ್ಟು ಆದಾಯವನ್ನು ಹೊಂದಿರುವ ತೆರಿಗೆದಾರರು ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ. ಆದಾಗ್ಯೂ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಒಟ್ಟು ಆದಾಯವು ಗರಿಷ್ಠ ವಿನಾಯಿತಿ ಮಿತಿಯನ್ನು ಮೀರಿದರೆ ಆದಾಯದ ರಿಟರ್ನ್ ಅನ್ನು ಸಲ್ಲಿಸಬೇಕಾಗಿದೆ. ಒಬ್ಬ ನಿವಾಸಿ ವ್ಯಕ್ತಿಯ ಆದಾಯವು ಹಣಕಾಸು ವರ್ಷದಲ್ಲಿನ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ, ಆ ವ್ಯಕ್ತಿಯು ತೆರಿಗೆ ರಿಟರ್ನ್ ಸಲ್ಲಿಸಬೇಕಾಗಿದೆ. ವ್ಯಕ್ತಿಗಳಿಗೆ ಗರಿಷ್ಠ ವಿನಾಯಿತಿ ಮಿತಿಗಳೆಂದರೆ: ⦁ ಒಬ್ಬ ವ್ಯಕ್ತಿಗೆ 2.5 ಲಕ್ಷ ರೂ. ⦁ ಹಿರಿಯ ನಾಗರಿಕರಿಗೆ 3 ಲಕ್ಷ ರೂ.ಗಳು (ವಯಸ್ಸು 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ಆದರೆ 80 ವರ್ಷಕ್ಕಿಂತ ಕಡಿಮೆ) ⦁ ರೆಸಿಡೆಂಟ್ ಸೂಪರ್ ಸೀನಿಯರ್ ಸಿಟಿಜನ್ (80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸು) ಗೆ 5 ಲಕ್ಷ ರೂ. ನಿಮ್ಮ ಒಟ್ಟು ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರಿದರೆ ಆದರೆ ವಿವಿಧ ಕಡಿತಗಳ ಕಾರಣದಿಂದಾಗಿ, ತೆರಿಗೆಗೆ ಒಳಪಡುವ ಆದಾಯವು 2.50 ಲಕ್ಷಕ್ಕಿಂತ…

Read More

ಹುಬ್ಬಳ್ಳಿ : ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಕರ್ನಾಟಕ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಉದ್ಯೋಗ ನೀತಿಯನ್ನು ಹೊರತರುತ್ತಿದೆ. ನಮ್ಮ ಯುವಕರು ಹಾಗೂ ಮಹಿಳೆಯರ ಕೈಗೆ ಉದ್ಯೋಗ ನೀಡಬೇಕು. ಮಹಿಳೆಯರು ಉದ್ದಿಮೆದಾರರಾಗಬೇಕು. ದೇಶದ ಅತ್ಯಂತ ಹೆಚ್ಚಿನ ರಫ್ತನ್ನು ಕರ್ನಾಟದಿಂದ ಮಾಡಲಾಗುತ್ತದೆ. ರಾಜ್ಯದಲ್ಲಿ ಬಹಳಷ್ಟು ಕೆಲಸಗಳಾಗುತ್ತಿದ್ದು, ಮೌನಕ್ರಾಂತಿಯಾಗುತ್ತಿದೆ. ಜಾಗತಿಕ ಮಟ್ಟದ ತಂತ್ರಜ್ಞಾನದ ಲಾಭವನ್ನು ಪಡೆಯಬೇಕು. ಟಯರ್ -2 ನಗರಗಳಲ್ಲಿ ಹೈಟೆಕ್ ಉದ್ಯಮಗಳನ್ನು ಸರ್ಕಾರ ಉತ್ತೇಜಿಸುತ್ತದೆ. ಸರ್ಕಾರ ಮತ್ತು ಉದ್ಯಮಿಯ ನಡುವೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು ವೇಗವರ್ಧಕವಾಗಿ ಕೆಲಸ ಮಾಡಿ, ವ್ಯವಸ್ಥೆಯಲ್ಲಿ ಸುಧಾರಣೆ, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ತರಬೇಕು. ಈ ಬದಲಾವಣೆಗಳು ಸಾಮಾಜಿಕ ಹೊಣೆಗಾರಿಕೆಯನ್ನೂ ತರಬೇಕು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯನ್ನು ಎಫ್‍ಕೆಸಿಸಿಐ ಹೊತ್ತುಕೊಳ್ಳಬೇಕು. ಆಸ್ತಿ ತೆರಿಗೆ ಸಮಸ್ಯೆಯಾಗಿರುವ ಬಗ್ಗೆ ನನ್ನ ಗಮನಕ್ಕೆ…

Read More

ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ( BESCOM ) ವ್ಯಾಪ್ತಿಯ 8 ಜಿಲ್ಲೆಗಳ 47 ತಾಲೂಕುಗಳಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್ ನಲ್ಲಿ2900 ಗ್ರಾಹಕರು ಭಾಗವಹಿಸಿದರು. ಗ್ರಾಹಕರಿಂದ ಸ್ವೀಕರಿಸಿರುವ 1045 ಮನವಿಗಳ ಪೈಕಿ 330 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ 715 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಗ್ರಾಮೀಣ ಭಾಗದ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪ್ರತಿ ತಿಂಗಳ ಮೂರನೇ ಶನಿವಾರದಂದು ವಿದ್ಯುತ್‌ ಅದಾಲತ್‌ ಆಯೋಜಿಸಲಾಗುತ್ತಿದ್ದು, ಜುಲೈ ತಿಂಗಳ ಅದಾಲತ್‌ 8 ಜಿಲ್ಲೆಗಳ 47 ತಾಲೂಕುಗಳ 89 ಹಳ್ಳಿಗಳಲ್ಲಿ ಇಂದು ನಡೆಯಿತು. https://kannadanewsnow.com/kannada/shimoga-todays-rainfall-and-reservoir-level/ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಪಿ. ರಾಜೇಂದ್ರ ಚೋಳನ್‌ ಅವರು ತುಮಕೂರು ಜಿಲ್ಲೆಯ ಬೆಳಮುಗ ಗ್ರಾಮದಲ್ಲಿ ನಡೆದ ವಿದ್ಯುತ್‌ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗಿಯಾದರು. ಬೆಸ್ಕಾಂನ ನಿರ್ದೇಶಕ ತಾಂತ್ರಿಕ ಡಿ ನಾಗಾರ್ಜುನ ಅವರು ದೊಡ್ಡಬಳ್ಳಾಪುರ ತಾಲೂಕಿನ ದಾಟಗಟ್ಟಮಡಗು ಗ್ರಾಮದಲ್ಲಿ ಅದಾಲತ್‌ ನಲ್ಲಿ…

Read More

ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ 2022-23 ನೇ ಸಾಲಿಗೆ ಉದ್ಯೋಗಿನಿ ಯೋಜನೆಯಡಿ ವ್ಯಾಪಾರ, ಹೈನುಗಾರಿಕೆ ಹಾಗೂ ಗುಡಿ ಕೈಗಾರಿಕೆ ಇತ್ಯಾದಿ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಸಹಾಯಧನ ನೀಡಲು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 55 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದ್ದು, ವಯಸ್ಸಿನ ದೃಢೀಕರಣಕ್ಕಾಗಿ ಚುನಾವಣಾ ಗುರುತಿನ ಚೀಟಿ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಅಥವಾ ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು. ಕುಟುಂಬದ ವಾರ್ಷಿಕ ಆದಾಯ ಎಸ್‍ಸಿ/ಎಸ್‍ಟಿ ರೂ.2 ಲಕ್ಷ, ವಿಶೇಷ ವರ್ಗ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ರೂ.1.50 ಲಕ್ಷ ಮೀರಬಾರದು. ವಿಧವರೆಯರು, ಸಂಕಷ್ಟಕ್ಕೊಳಗಾದ ಮಹಿಳೆಯರು, ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಇರುವುದಿಲ್ಲ. ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಸಾಲ ಮಂಜೂರಾಗಿ ಬಿಡುಗಡೆಯ ಮುನ್ನ ಫಲಾನುಭವಿಗಳಿಗೆ ಉದ್ಯಮಶೀಲತಾ ತರಬೇತಿ ನೀಡಲಾಗುವುದು. ನಿಗಧಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು…

Read More

ಬಾಗಲಕೋಟೆ: ಜಿಲ್ಲೆಯ ಕೆರೂರು ಗ್ರಾಮದಲ್ಲಿ ಜುಲೈ.15, 2022ರಂದು ವಿಪಕ್ಷ ನಾಯಕ ಸಿದ್ಧಾರಮಯ್ಯ ( Siddaramaiah ) ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದಂತ ಗಾಯಾಳುವಿಗೆ ಮಾನವೀಯತೆ ದೃಷ್ಠಿಯಿಂದ 2 ಲಕ್ಷ ಹಣ ನೀಡಿದ್ದರು. ಆದ್ರೇ.. ಆಗ ಮಹಿಳೆ ಮಾತ್ರ ನಮ್ಗೆ ಹಣ ಬ್ಯಾಡ್ರಿ, ನ್ಯಾಯ ಬೇಕ್ರಿ ಎಂಬುದಾಗಿ ಪರಿಹಾರದ ಹಣವನ್ನೇ ಸಿದ್ಧರಾಮಯ್ಯ ಕಾರ್ ಮೇಲೆ ಎಸೆದಿದ್ದರು. ಈ ಘಟನೆಯ ನಂತ್ರ ಇದೀಗ ಕುಟುಂಬಸ್ಥರು ಮಾಜಿ ಸಿಎಂ ಕ್ಷಮೆಯಾಚಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಎರಡು ಕೋಮುಗಳ ನಡುವೆ ಗುಂಪು ಘರ್ಷಣೆ ನಡೆದಿತ್ತು. ಈ ಪ್ರಕರಣದಲ್ಲಿ ಹಲವರು ಗಾಯಗೊಂಡಿದ್ದರು. ಈ ವಿಷಯ ತಿಳಿದು ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿದ್ದಂತವರನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಗ್ಯ ವಿಚಾರಿಸಿದ್ದರು. https://kannadanewsnow.com/kannada/dont-the-deputy-secretary-to-the-government-know-kannada/ ಈ ಸಂದರ್ಭದಲ್ಲಿ ಕುಳಗೇರಿ ಕ್ರಾಸ್ ಡಾಬಾ ಮಾಲೀಕ ಮೊಹಮ್ಮದ್ ಹನೀಫ್ ಹಲ್ಲೆಯಲ್ಲಿ ತೀವ್ರ ಗಾಯಗೊಂಡ ಕಾರಣ, ಸಿದ್ಧರಾಮಯ್ಯ ಮಾನವೀಯತೆಯ ದೃಷ್ಠಿಯಿಂದ 2 ಲಕ್ಷ ಹಣವನ್ನು ಚಿಕಿತ್ಸೆಗಾಗಿ ನೀಡಿದ್ದರು. ಹೀಗೆ ನೀಡಿದ್ದಂತ ಹಣವನ್ನು ಆಕೆಯ ಪತ್ನಿ ಮಾತ್ರ…

Read More

 ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ರಾಜ್ಯದಲ್ಲಿರುವ ದಲಿತರ ಪೈಕಿ ಹೆಚ್ಚು ಜನಸಂಖ್ಯೆಯಲ್ಲಿ ಮಾದಿಗರಿಗೆ ಕಾಂಗ್ರೆಸ್‌ನಲ್ಲಿ ಸರಿಯಾದ ರಾಜಕೀಯ ಸ್ಥಾನಮಾನ ದೊರಕುತ್ತಿಲ್ಲ ಎನ್ನುವ ಹೊತ್ತಿನಲ್ಲಿ ಈಗ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ನೀಡಲು ಬಿಜೆಪಿ ಸಿದ್ದವಾಗಿದೆ. ಹಿರಿಯ ಐಎಎಸ್ ಅಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಬಿಹೆಚ್ ಅವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಈ ಮೂಲಕ ತುಮಕೂರಿನ ಮತ್ತೊಂದು ಕ್ಷೇತ್ರದಲ್ಲಿ ಕಮಲ ಬಾವುಟವನ್ನು ಹಾರಿಸಲು ಬಿಜೆಪಿ ಸಿದ್ದವಾಗಿದ್ದು, ಎಲ್ಲವು ಅಂದುಕೊಂಡತೇ ಆದ್ರೆ, ಅನಿಲ್ ಕುಮಾರ್ ಬಿಹೆಚ್ ಡಾ.ಜಿ.ಪರಮೇಶ್ವರ ಅವರ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ಹೆಚ್ಚಳವಾಗಿದೆ. ಕೊರಟಗೆರೆಯಲ್ಲಿ ಮಾದಿಗ ಜಾತಿಯ ಮತಗಳೇ ನಿರ್ಣಾಕವಾಗಿದ್ದು, ಸಮುದಾಯದ ನಾಯಕರುಗಳು ಕೂಡ ಈ ಬಾರಿ ಮಾದಿಗರಿಗೆ ಓಟು ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಲ್ಲದೇ ಕಾಂಗ್ರೆಸ್‌ ಒಳಮೀಸಲಾತಿಗೆ ಸಂಬಂಧಪಟ್ಠಂತೆ ಮಾಡಿದ್ದೇ ಎನ್ನಲಾದ ಮೋಸ ಕೂಡ ಜಿಲ್ಲಾ ಮಾದಿಗ ಸಮುದಾಯದಲ್ಲಿ ಸಿಟ್ಟು ಮೂಡಿಸಿದ್ದು, ಪರಮೇಶ್ವರ್‌ ಅವರ ಮೇಲಿನ ಸಿಟ್ಟು ಕೂಡ…

Read More

ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ 2022-23ನೇ ಸಾಲಿನ ಉದ್ಯೋಗಿನಿ, ಕಿರುಸಾಲ, ಚೇತನಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ಉದ್ಯೋಗಿನಿ, ಕಿರುಸಾಲ ಅಭ್ಯರ್ಥಿಗಳು ಅರ್ಜಿಗಳನ್ನು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಚೇತನಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಅಭ್ಯರ್ಥಿಗಳು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ ಇಲ್ಲಿ ದಿನಾಂಕ:30.07.2022 ರೊಳಗೆ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು (ದ್ವಿಪ್ರತಿಗಳಲ್ಲಿ) ದಿನಾಂಕ:06.08.2022ರ ಒಳಗಾಗಿ ಸದರಿ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ. ಉದ್ಯೋಗಿನಿ ಮತ್ತು ಕಿರುಸಾಲ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆಯಾ ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಮಾಡಲಾಗುತ್ತದೆ. ಚೇತನಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

Read More

ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 318.30 ಮಿಮಿ ಮಳೆಯಾಗಿದ್ದು, ಸರಾಸರಿ 45.47 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 537.20 ಮಿಮಿ ಮಳೆ ದಾಖಲಾಗಿದೆ. https://kannadanewsnow.com/kannada/dont-the-deputy-secretary-to-the-government-know-kannada/ ಶಿವಮೊಗ್ಗ 16.80 ಮಿಮಿ., ಭದ್ರಾವತಿ 13.30 ಮಿಮಿ., ತೀರ್ಥಹಳ್ಳಿ 73.10 ಮಿಮಿ., ಸಾಗರ 74.10 ಮಿಮಿ., ಶಿಕಾರಿಪುರ 25.80 ಮಿಮಿ., ಸೊರಬ 41.50 ಮಿಮಿ. ಹಾಗೂ ಹೊಸನಗರ 73.70 ಮಿಮಿ. ಮಳೆಯಾಗಿದೆ. https://kannadanewsnow.com/kannada/heres-an-opportunity-for-your-nivesha-buying-desire-sites-are-available-here-at-lower-rates/ ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‍ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1791.65 (ಇಂದಿನ ಮಟ್ಟ), 50481.00 (ಒಳಹರಿವು), 2847.76 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1789.55. ಭದ್ರಾ: 186 (ಗರಿಷ್ಠ), 182.8 (ಇಂದಿನ ಮಟ್ಟ), 45180.00 (ಒಳಹರಿವು), 65654.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 161.10. ತುಂಗಾ: 588.24 (ಗರಿಷ್ಠ), 587.11 (ಇಂದಿನ ಮಟ್ಟ),…

Read More