Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ಆ ಕಾರು ಹಲವು ಕನಿಸಿನಿಂದ ಖರೀದಿಸಲಾಗಿತ್ತು. ಅಷ್ಟೇ ಕಾಳಜಿಯಿಂದ ಸರ್ವಿಸ್ ಸೆಂಟರ್ ನಲ್ಲಿಯೇ ಸರ್ವಿಸ್ ಕೂಡ ಮಾಡಿಸಲಾಗಿತ್ತು. ಆದ್ರೇ.. ನಿನ್ನೆ ದಿಡೀರ್ ತಮ್ಮೂರಿಗೆ ದಂಪತಿ ಸಹಿತ ಮಕ್ಕಳೊಂದಿಗೆ ತೆರಳುವಾಗ ನಡು ರಸ್ತೆಯಲ್ಲೇ ಆಫ್ ಆಗಿದೆ. ಮುಂದಿನ ಡೋರ್ ಓಪನ್ ಮಾಡೋದಕ್ಕೆ ಕೂಡ ಆಗದ ಕಾರಣ, ಹಿಂಬದಿಯ ಡೋರ್ ಓಪನ್ ಆದಾಗ, ಅದರಿಂದ ಪತಿ, ಪತಿ ಪತ್ನಿ, ಮಕ್ಕಳು ಹೊರಬಂದು ಏನ್ ಆಗಿ ಎಂದು ನೋಡುವಷ್ಟರಲ್ಲಿ ಎಂಜಿನ್ ನಲ್ಲಿ ಹೊಗೆ ಬಂದು ಬೆಂಕಿಯೇ ಹೊತ್ತಿಕೊಂಡಿದೆ. ಕಾಲ ಕಾಲಕ್ಕೆ ಸರ್ವಿಸ್ ಕೂಡ ಮಾಡಿದ್ರು.. ನಡು ರಸ್ತೆಯಲ್ಲೇ ಕಾರ್ ಹೀಗೆ ಹೊತ್ತಿ ಕೊಂಡು ಉರಿದ್ರೇ.. ಇದಕ್ಕೆ ಹೊಣೆಯಾರು ಎಂಬುದೇ ನೊಂದವರ ಮಾತಾಗಿದೆ. https://kannadanewsnow.com/kannada/acb-issues-notice-to-mla-zameer-ahmed-to-appear-before-it/ ಈ ಬಗ್ಗೆ ಹಿರಿಯ ಪತ್ರಕರ್ತರಾದಂತ ಸತೀಶ್ ಆಂಜಿನಪ್ಪ ಹೊಸಕೋಟೆಯವರು ತಮಗಾದದ್ಧನ್ನು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿದ್ದಾರೆ. ಅದರ ಸಂಪೂರ್ಣ ಸಾರಾಂಶ ಈ ಕೆಳಗಿನಂತಿದೆ.. ಕನಸಿನ ಕಾರು ಕಣ್ಮುಂದೆ ಭಸ್ಮ..! ಕಾರಿಗೆ ಆಕಸ್ಮಿಕ ಬೆಂಕಿ.. ಸುಟ್ಟು ಕರಕಲಾದ ಕಾರು..! ಅದೃಷ್ಟವಶಾತ್…
ಬೆಂಗಳೂರು: ಜುಲೈ.5ರಂದು ನಡೆಸಿದ್ದಂತ ಎಸಿಬಿ ದಾಳಿಯಲ್ಲಿ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾದ ಹಿನ್ನಲೆಯಲ್ಲಿ, ಶಾಸಕ ಜಮೀರ್ ಅಹ್ಮದ್ ಖಾನ್ ಗೆ ( MLA Zameer Ahmad Khan ) ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ( ACB Notice ) ನೀಡಿದೆ. ಹೀಗಾಗಿ ಈಗ ಶಾಸಕ ಜಮೀರ್ ಅಹ್ಮದ್ ಗೆ ಸಂಕಷ್ಟ ಎದುರಾಗಿದೆ. ಈ ಸಂಬಂಧ ಬೆಂಗಳೂರಿನ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದು, ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ. https://kannadanewsnow.com/kannada/lalbagh-flower-show-based-on-varanata-dr-rajkumar-appu-special-will-be-inaugurated-by-shivanna-on-aug-5/ ಅಂದಹಾಗೇ ಜುಲೈ.5ರಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 87.54 ಕೋಟಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿತ್ತು. ದಾಳಿಯ ಬಳಿಕ ವಿಚಾರಣೆಗೆ ಹಾಜರಾಗುವಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಎಸಿಬಿ ಸೂಚಿಸಿತ್ತು. ಆದ್ರೇ ಬಕ್ರೀದ್ ಹಬ್ಬದ ಬಳಿಕ ವಿಚಾರಣೆಗೆ ಹಾಜರಾಗೋದಾಗಿ ತಿಳಿಸಿದ್ದರು. ಇದೀಗ ಹಬ್ಬದ ಬಳಿಕ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.…
ಹುಬ್ಬಳ್ಳಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಡಿ 18 ಲಕ್ಷ ಮನೆಗಳ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ತಗ್ಗು ಪ್ರದೇಶದಲ್ಲಿನ ಪ್ರವಾಹಕ್ಕೆ ಸಿಲುಕುವ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ವಿವಿಧ ಯೋಜನೆಗಳಲ್ಲಿ ಮನೆಗಳ ನಿರ್ಮಾಣ ಕೈಗೊಂಡಿದೆ. ಹಿಂದಿನ ಸರ್ಕಾರದ ತಾಂತ್ರಿಕ ತಪ್ಪಿನಿಂದ 18 ಲಕ್ಷ ಮನೆಗಳ ಮಂಜೂರಾತಿ ನಿಂತುಹೋಗಿತ್ತು. ಈಗ ಅವುಗಳನ್ನು ಸರಿಪಡಿಸಿ ಅಪ್ ಲೋಡ್ ಮಾಡಲಾಗಿದೆ. ಸರ್ಕಾರದಿಂದ ಸಮಾನ ಮೊತ್ತವನ್ನು ನೀಡಲಾಗುವುದು ಎಂದರು. https://kannadanewsnow.com/kannada/lalbagh-flower-show-based-on-varanata-dr-rajkumar-appu-special-will-be-inaugurated-by-shivanna-on-aug-5/ ಸಚಿವರಿಂದ ಪರಿಶೀಲನೆ ಬಹುತೇಕ ಎಲ್ಲಾ ಸಚಿವರು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ ಎಂದರು. ಅಕ್ರಮ ಸಿಲಿಂಡರ್ ರಿಫಿಲ್ಲಿಂಗ್ ಅಕ್ರಮ ಸಿಲಿಂಡರ್ ರಿಫಿಲ್ಲಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಈ ಬಗ್ಗೆ ದಾಳಿ ಮಾಡಿ ನಿಯಂತ್ರಣ ಮಾಡಲು ಸೂಚನೆ ನೀಡುವುದಾಗಿ ತಿಳಿಸಿದರು. ಪರಿಹಾರ ಕ್ರಮಗಳ ಕುರಿತು ಸೂಚನೆ ಬೀದರ್, ಬೆಳಗಾವಿ,…
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ದೇಶಾದ್ಯಂತ ಚುನಾವಣಾ ಪ್ರಚಾರ ನಡೆಯುತ್ತಿರುವ ನಡುವೆಯೇ, ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದೀಯ ಮಂಡಳಿ ಸಭೆ ಶನಿವಾರ ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಕರ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. “ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿ ಜಗದೀಪ್ ಧಂಕರ್” ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಬಿಜೆಪಿ ನಾಯಕರು ಸಭೆಗಾಗಿ ದೆಹಲಿಯ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದರು. ದೇಶದ ಮುಂದಿನ ಉಪರಾಷ್ಟ್ರಪತಿ ಚುನಾವಣೆಗೆ ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಕ್ಕೆ ಜುಲೈ 19 ಕೊನೆಯ ದಿನಾಂಕವಾಗಿದ್ದು, ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ…
ನವದೆಹಲಿ : ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ತನ್ನ ಅಭ್ಯರ್ಥಿಯನ್ನ ಘೋಷಿಸಿದ್ದು, ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. https://twitter.com/ANI/status/1548311671596204039?s=20&t=z_2nAlQYeqFHpbLjNTH1uw ಶನಿವಾರ ಸಂಜೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿಯ ಹೆಸರನ್ನ ಚರ್ಚಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಜಗದೀಪ್ ಧಂಕರ್ ಅವರ ಹೆಸರನ್ನ ಘೋಷಿಸಿದರು ಮತ್ತು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಿದ್ದರು. ಇನ್ನು ಮಧ್ಯಾಹ್ನ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ದರು. ಇದಕ್ಕೂ ಮೊದಲು, ಧಂಕರ್ ಶುಕ್ರವಾರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿದ್ದರು. ಅಂದ್ಹಾಗೆ, ಉಪರಾಷ್ಟ್ರಪತಿ ಚುನಾವಣೆಗೆ ಆಗಸ್ಟ್ 6, 2022 ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶವೂ ಹೊರಬೀಳಲಿದೆ. ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 11ರಂದು ಕೊನೆಗೊಳ್ಳುತ್ತದೆ.
ನವದೆಹಲಿ: ರಾಷ್ಟ್ರಪತಿ ಚುನಾವಣೆ ಬೆನ್ನಲ್ಲೇ ಘೋಷಣೆಯಾಗಿದ್ದಂತ ಉಪ ರಾಷ್ಟ್ರಪತಿ ಚುನಾವಣೆಗೆ ಇದೀಗ ಎನ್ ಡಿ ಎ ಪಕ್ಷದ ಅಭ್ಯರ್ಥಿಯಾಗಿ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಕಣಕ್ಕಿಳಿಸಲಾಗಿದೆ. https://kannadanewsnow.com/kannada/lalbagh-flower-show-based-on-varanata-dr-rajkumar-appu-special-will-be-inaugurated-by-shivanna-on-aug-5/ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು, ಎನ್ ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಉಪರಾಷ್ಟ್ರಪತಿ ಚುನಾವಣೆಗೆ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಕಣಕ್ಕೆ ಇಳಿಸುತ್ತಿರೋದಾಗಿ ತಿಳಿಸಿದ್ದಾರೆ. https://twitter.com/ANI/status/1548311671596204039
ನವದೆಹಲಿ: 18 ರಿಂದ 59 ವರ್ಷದೊಳಗಿನ ಜನರು ಉಚಿತವಾಗಿ ಕೋವಿಡ್ ಬೂಸ್ಟರ್ ಡೋಸ್ ಪಡೆಯಬಹುದು. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರದ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಕೋವಿಡ್ ಮುನ್ನೆಚ್ಚರಿಕೆ ಡೋಸ್ಗಳ ಸೇವನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೊಸ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಆರಂಭದಲ್ಲಿ, ಈ ಡೋಸ್ ಅನ್ನು 9 ತಿಂಗಳ ಅಂತರದಲ್ಲಿ ನೀಡಲಾಯಿತು. ಈಗ ಅದನ್ನು 6 ತಿಂಗಳ ನಂತರ ನೀಡಬಹುದು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ನಡೆಸಿದ ಅಧ್ಯಯನಗಳಲ್ಲಿ, ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಂಡ ಸುಮಾರು 6 ತಿಂಗಳ ನಂತರ ದೇಹದಲ್ಲಿ ಪ್ರತಿಕಾಯಗಳ ಮಟ್ಟವು ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ. ಆದರೆ ಬೂಸ್ಟರ್ ಡೋಸ್ ನೊಂದಿಗೆ ಪ್ರತಿರಕ್ಷಣಾ ಪ್ರತಿಕ್ರಿಯೆ ಹೆಚ್ಚಾಗುತ್ತದೆ. ಆದ್ದರಿಂದ, ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಕೋವಿಡ್ ಅನ್ನು ತಪ್ಪಿಸಲು ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು ಅಗತ್ಯ ಎಂದು ತಜ್ಞರು ನಂಬುತ್ತಾರೆ. ಉಚಿತ ಬೂಸ್ಟರ್ ಡೋಸ್ ಅನ್ನು…
ಬೆಂಗಳೂರು: ಈ ಬಾರಿಯ 212 ನೇ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ( Lal bag Flower Show ) ಕರ್ನಾಟಕ ರತ್ನ ಡಾ. ರಾಜಕುಮಾರ್ ( Dr Rajkumar ) ಹಾಗೂ ಡಾ. ಪುನೀತ್ ರಾಜಕುಮಾರ್ ರವರ ( Dr Puneeth Rajkumar ) ವಿಷಯ ಆಧಾರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಆಗಸ್ಟ್ 5ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಖ್ಯಾತ ಚಿತ್ರನಟರಾದ ಡಾ. ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂಬುದಾಗಿ ತಿಳಿಸಿದೆ. https://kannadanewsnow.com/kannada/1374-covid-19-positive-cases-3-deaths-reported-in-karnataka-today/ ಇನ್ನೂ ಈ ಹಿನ್ನಲೆಯಲ್ಲಿಯೇ ಇಂದು ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಆತ್ಮೀಯವಾಗಿ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಾನ ಕಲಾಸಂಘದ ಉಪಾಧ್ಯಕ್ಷರಾದ ವಾಸುದೇವ್, ತೋಟಗಾರಿಕೆ ಜಂಟಿ ನಿರ್ದೇಶಕರಾದ ಡಾ. ಎಂ ಜಗದೀಶ್ ಹಾಗೂ ಲಾಲ್ ಬಾಗ್ ತೋಟಗಾರಿಕೆ ಉಪನಿರ್ದೇಶಕರಾದ ಜಿ ಕುಸುಮ…
ನವದೆಹಲಿ : ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ICSE ) ನಾಳೆ ಸಂಜೆ 5 ಗಂಟೆಗೆ 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸುವುದಾಗಿ CISCE ಘೋಷಿಸಿದೆ. ವೈಯಕ್ತಿಕ ಅಭ್ಯರ್ಥಿಗಳು ಕೌನ್ಸಿಲ್‌ನ ವೆಬ್ಸೈಟ್ www.cisce.org ಅಥವಾ www.results.cisce.org ಗೆ ಭೇಟಿ ನೀಡುವ ಮೂಲಕ ಫಲಿತಾಂಶ ನೋಡಬೋದು. https://twitter.com/ANI/status/1548305761457303552?s=20&t=1AgBdsQ-O1Agja7zkQCicQ ಸಿಐಎಸ್‌ಇ ತರಗತಿ 10ನೇ ತರಗತಿ ಫಲಿತಾಂಶ ಪರಿಶೀಲಿಸುವುದು ಹೇಗೆ..? ಹಂತ 1: ಕೌನ್ಸಿಲ್‌ನ ವೆಬ್ಸೈಟ್ ಮುಖಪುಟದಲ್ಲಿ, ‘ಫಲಿತಾಂಶಗಳು 2022’ ಲಿಂಕ್ ಕ್ಲಿಕ್ ಮಾಡಿ ಹಂತ 2: ಐಸಿಎಸ್ಇ / ಐಎಸ್ಸಿ ವರ್ಷ 2022 ರ ಪರೀಕ್ಷಾ ಫಲಿತಾಂಶಗಳನ್ನ ಪ್ರವೇಶಿಸಲು, ಅಭ್ಯರ್ಥಿಯು ಕೋರ್ಸ್ ಆಯ್ಕೆಯಿಂದ ಅನ್ವಯವಾಗುವಂತೆ ಐಸಿಎಸ್ಇ ಆಯ್ಕೆ ಮಾಡಬೇಕು. ಹಂತ 3: ಐಸಿಎಸ್ಇ ವರ್ಷ 2022ರ ಪರೀಕ್ಷಾ ಫಲಿತಾಂಶಗಳನ್ನ ಪ್ರವೇಶಿಸಲು, ಅಭ್ಯರ್ಥಿಯು ಅವನ / ಅವಳ ವಿಶಿಷ್ಟ ಐಡಿ, ಸೂಚ್ಯಂಕ ಸಂಖ್ಯೆಯನ್ನ ನಮೂದಿಸಬೇಕು. ನಂತ್ರ ಪರದೆಯ ಮೇಲೆ ತೋರಿಸಿರುವಂತೆ ಕ್ಯಾಪ್ಚಾ ನಮೂದಿಸಿ. ಹಂತ 4: ಈಗ ಪರದೆಯ ಮೇಲೆ ಫಲಿತಾಂಶ ಕಾಣಿಸುತ್ತೆ.…
ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ಕಾರ್ಯದರ್ಶಿ ಗೆರ್ರಿ ಅರಾಥೂನ್ ಶನಿವಾರ ಐಸಿಎಸ್ಇ 10 ನೇ ತರಗತಿ ಫಲಿತಾಂಶಗಳನ್ನು ಜುಲೈ 17, ಭಾನುವಾರ ಪ್ರಕಟಿಸಲಾಗುವುದು ಎಂದು ಘೋಷಿಸಲಾಗುವುದು ಅಂತ ಹೇಳಿದ್ದಾರೆ. ಸಿಐಎಸ್ಸಿಇ 10 ನೇ ತರಗತಿ ಪರೀಕ್ಷೆಗಳು ಮೇ 20 ರಂದು ಮತ್ತು 12 ನೇ ತರಗತಿಯ ಪರೀಕ್ಷೆಗಳು ಜೂನ್ 13 ರಂದು ಮುಕ್ತಾಯಗೊಂಡಿದ್ದವು. ಅಧಿಕೃತ ಪ್ರಕಟಣೆಯ ಪ್ರಕಾರ, ಅಂತಿಮ ಫಲಿತಾಂಶವನ್ನು ಪಡೆಯಲು ಸೆಮಿಸ್ಟರ್ 1, 2 ಮತ್ತು ಪ್ರಾಜೆಕ್ಟ್ / ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಸೇರಿಸಲಾಗಿದೆ. ಪ್ರಾಂಶುಪಾಲರ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಕೌನ್ಸಿಲ್ನ ‘ಕೆರಿಯರ್ ಪೋರ್ಟಲ್’ಗೆ ಲಾಗಿನ್ ಆಗುವ ಮೂಲಕ ಶಾಲೆಗಳು ಫಲಿತಾಂಶಗಳನ್ನು ಪರಿಶೀಲಿಸಬಹುದು. ಹೆಚ್ಚುವರಿಯಾಗಿ, ವಿದ್ಯಾರ್ಥಿಗಳು ಎಸ್ಎಂಎಸ್ ಮೂಲಕ ಅಥವಾ ಡಿಜಿಲಾಕರ್ ಅಪ್ಲಿಕೇಶನ್ ಮೂಲಕವೂ ಅಂಕಗಳನ್ನು ಪಡೆಯಬಹುದು