Subscribe to Updates
Get the latest creative news from FooBar about art, design and business.
Author: KNN IT TEAM
ಶಿವಮೊಗ್ಗ: ಶಾಸಕ ಹಾಲಪ್ಪನವರಿಗೆ ಆಗಾಗ ಅತ್ಯಾಚಾರದ ಕೇಸಿನ ನೆನಪಾಗುತ್ತದೆ. ಅದಕ್ಕಾಗಿ ಅವರು ನನ್ನ ಮೇಲೆ ಸುಳ್ಳು ಅತ್ಯಾಚಾರದ ಕೇಸ್ ಹಾಕಲು ಮತ್ತು ಎಲ್ ಬಿ ಕಾಲೇಜಿನ ಗಲಾಟೆ ವೇಳೆ ನನ್ನ ಮೇಲೆ ಕೇಸ್ ಪ್ರಯತ್ನ ನೆಡೆಯುತ್ತಿದೆ ಎಂಬುದಾಗಿ ಸಾಗರ ಶಾಸಕ ಹರತಾಳು ಹಾಲಪ್ಪ ವಿರುದ್ಧ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದಾರೆ. ಇಂದು ಸಾಗರದ ಪತ್ರಿಕಾ ಭವನದಲ್ಲಿ ನೆಡೆದ ಸುದ್ದಿ ಗೊಷ್ಟಿಯಲ್ಲಿ ಮಾತನಾಡಿದ ಅವರು, ಎಲ್ ಬಿ ಕಾಲೇಜಿನ ಗಲಾಟೆಯಲ್ಲಿ ಶಾಸಕ ಹಾಲಪ್ಪನವರ ಪಾತ್ರ ಇದ್ದರು, ಅವರ ಮೇಲೆ ಪ್ರಕರಣ ದಾಖಲಾಗಿಲ್ಲ. ಎಲ್ ಬಿ ಕಾಲೇಜಿನ ನೆಡೆದ ಗಲಾಟೆಯ ಒಂದು ಘಂಟೆ ವಿಡಿಯೋ ನಮ್ಮ ಬಳಿ ಇದೆ ಎಂಬುದಾಗಿ ಸ್ಪೋಟಕ ಬಾಂಬ್ ಸಿಡಿಸಿದರು. ಕಚ್ಚೆಹರುಕ ಸಾಗರದ ಶಾಸಕ ಹಾಲಪ್ಪ ಶಾಸಕ ಹಾಲಪ್ಪನವರಿಗೆ ಆಗಾಗ ಅತ್ಯಾಚಾರದ ಕೇಸಿನ ನೆನಪಾಗುತ್ತದೆ. ಅದಕ್ಕಾಗಿ ಅವರು ನನ್ನ ಮೇಲೆ ಸುಳ್ಳು ಅತ್ಯಾಚಾರದ ಕೇಸ್ ಹಾಕಲು ಮತ್ತು ಎಲ್ ಬಿ ಕಾಲೇಜಿನ ಗಲಾಟೆ ವೇಳೆ ನನ್ನ ಮೇಲೆ…
ಹಾವೇರಿ: ರಾಜ್ಯದಲ್ಲಿ ಹೊಸ ಕೃಷಿ ನೀತಿಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.ಕೃಷಿ ಕ್ಷೇತ್ರವನ್ನು ಉದ್ಯಮವಾಗಿ ಬೆಳೆಸಲಾಗುವುದು. ರೈತಾಪಿ ಮಹಿಳೆಯರಿಗೆ, ಮಕ್ಕಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯದ ಪ್ರತಿ ತಾಲೂಕಿನಲ್ಲೂ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಶಿಗ್ಗಾಂವ ತಾಲೂಕು ಖುರ್ಸಾಪುರ ಗ್ರಾಮದಲ್ಲಿ ಶನಿವಾರ ನೂತನ ಜವಳಿ ಪಾರ್ಕ್ ಹಾಗೂ ಮೆ.ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಕಂಪನಿಯ ಆಂಕರ್ ಸಿದ್ಧ ಉಡುಪು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕಾಲ ಬದಲಾಗುತ್ತಿದ್ದು, ಕೃಷಿ ಭೂಮಿ ಸಂಕುಚಿತಗೊಳ್ಳುತ್ತಿದೆ. ರೈತ ಕುಟುಂಬಗಳು ಬೆಳೆಯುತ್ತಿದ್ದು, ಭೂಮಿ ಮೇಲೆ ಅವಲಂಬನೆ ಹೆಚ್ಚಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಭೂಮಿಯನ್ನು ದೊಡ್ಡದು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೃಷಿ ಅವಲಂಬನೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಹೊಸ ಕೃಷಿ ನೀತಿಯನ್ನು ಜಾರಿಗೊಳಿಸಲಾಗುದು.ಕೃಷಿಯನ್ನು ಒಂದು ಉದ್ಯಮವಾಗಿ ಬೆಳೆಸಲಾಗುವುದು. ರೈತಾಪಿ ಮಕ್ಕಳಿಗೆ ಶಿಕ್ಷಣ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗೆ ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ರೈತ ಮಕ್ಕಳಿಗೆ ವಿದ್ಯೆ ಮತ್ತು ಉದ್ಯೋಗ ಭವಿಷ್ಯದ ಎರಡು…
ಹಾವೇರಿ : ಮುಂದಿನ ಆಗಸ್ಟ್ 15 ರೊಳಗೆ ಶಿಗ್ಗಾಂವಿಯಲ್ಲಿ 10 ಸಾವಿರ ಜನರಿಗೆ ಉದ್ಯೋಗ ನೀಡುವ ಸಂಕಲ್ಪ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಶಿಗ್ಗಾಂವಿಯಲ್ಲಿ ಟೆಕ್ಸಟೈಲ್ ಪಾರ್ಕ್ ನ ವಿವಿಧ ಕಾಮಗಾರಿಗಳಿಗೆ, ಸಿದ್ದ ಉಡುಪು ಘಟಕದ ನಿರ್ಮಾಣ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ- 4 ರಿಂದ ಕಲ್ಯಾಣ ರಸ್ತೆ ಅಗಲೀಕರಣ ಹಾಗೂ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಎರಡು ಮೂರು ವರ್ಷಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಉದ್ಯೋಗ ನೀಡುವ ಉದ್ದಿಮೆಗಳು, ವಿಶೇಷವಾಗಿ ಹೆಣ್ಣಮಕ್ಕಳಿಗೆ ಉದ್ಯೋಗ ಒದಗಿಸುವ ಗಾರ್ಮೆಂಟ್ ಕಾಖಾನೆಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಶಿಗ್ಗಾವಿಯ ಟೆಕ್ಸ್ ಪೋರ್ಟ್ ನ ವತಿಯಿಂದ ಮೊದಲ ಹಂತದಲ್ಲಿ ಮೂರು ಸಾವಿರ ಹಾಗೂ ಎರಡನೇ ಹಂತದಲ್ಲಿ 5 ಸಾವಿರ ಉದ್ಯೋಗವನ್ನು ನೀಡಲಿದೆ. ಜವಳಿ ಪಾರ್ಕ್ ನಿಂದ ಒಟ್ಟು 10 ಸಾವಿರಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ. ಇದು ಸುಲಭದ ಮಾತಲ್ಲ. ಬೇರೆ ಯಾವ ಉದ್ಯಮಗಳಾಗಲಿ, ಸರ್ಕಾರದಿಂದಾಗಲಿ ಇದು ಸಾಧ್ಯವಿಲ್ಲ. ಈ ಉದ್ಯಮಗಳಿಗೆ ರಫ್ತು ಮಾಡುವ…
ಹುಬ್ಬಳ್ಳಿ : ಧಾರವಾಡ ಮತ್ತು ತುಮಕೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆಗೆ ಅಗತ್ಯವಿರುವ ಶಾಸನಗಳಿಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ತರಲಾಗುವುದು.ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದ ಮೂಲಕ ಮಾರುಕಟ್ಟೆಯನ್ನು ಗಳಿಸಿಕೊಳ್ಳಬಹುದು.ಕಠಿಣ ಪರಿಶ್ರಮದ ಮೂಲಕ ಕನ್ನಡಿಗರು ಉದ್ಯಮರಂಗದಲ್ಲಿ ಪ್ರಗತಿ ಸಾಧಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದಲ್ಲಿ ಸ್ವಯಂ ಶಿಸ್ತು ತರುವ ಈ ಸಂಸ್ಥೆಗೆ ಎನ್ ಎ ಬಿಎಲ್ ಮಾನ್ಯತೆ ದೊರೆತಿರುವುದು ಸಂತಸ ತಂದಿದೆ. ಮೆಕ್ಯಾನಿಕಲ್ ಹಾಗೂ ಕೆಮಿಕಲ್ ಪರೀಕ್ಷೆ ಸಹ ಆಗುತ್ತದೆ. ನೀರು, ಮಣ್ಣಿನ ಪರೀಕ್ಷೆ ಸಹಾ ಆಗುತ್ತದೆ. ಹುಬ್ಬಳ್ಳಿಯ ಕೆಎಂಟಿಆರ್‌ಸಿ ಅತ್ಯಾಧುನಿಕ ಉಪಕರಣಗಳ ಪೂರೈಕೆಗಾಗಿ 4 ಕೋಟಿ ರೂಪಾಯಿ ಕೋರಿ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದೆ.ಸರ್ಕಾರ ಹಣಕಾಸು ನೆರವನ್ನು ಒಂದು ವಾರದೊಳಗೆ ನೀಡಲು ವ್ಯವಸ್ಥೆ ಮಾಡಲಿದೆ ಎಂದು ಭರವಸೆ ನೀಡಿದರು. ಹುಬ್ಬಳ್ಳಿ ಧಾರವಾಡದಲ್ಲಿ…
ನವದೆಹಲಿ : ಮುಂಬರುವ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ 215 ಕ್ರೀಡಾಪಟುಗಳು ಮತ್ತು 107 ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ 322 ಸದಸ್ಯರ ಬಲಿಷ್ಠ ತಂಡವನ್ನ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಶನಿವಾರ ಪ್ರಕಟಿಸಿದೆ. ಈ ಕ್ರೀಡಾಕೂಟವು ಜುಲೈ 28ರಿಂದ ಆಗಸ್ಟ್ 8 ರವರೆಗೆ ಬ್ರಿಟಿಷ್ ನಗರದಲ್ಲಿ ನಡೆಯಲಿದೆ ಮತ್ತು ಭಾರತ ತಂಡವು ತನ್ನ ಗೋಲ್ಡ್ ಕೋಸ್ಟ್ 2018 ಸಿಡಬ್ಲ್ಯೂಜಿ ಪ್ರದರ್ಶನವನ್ನ ಸುಧಾರಿಸಲು ನೋಡುತ್ತಿದೆ. ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾತನಾಡಿ, “ನಾವು ನಮ್ಮ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದನ್ನ ಸಿಡಬ್ಲ್ಯೂಜಿಗೆ ಕಳುಹಿಸುತ್ತಿದ್ದೇವೆ. ನಮ್ಮ ಪ್ರದರ್ಶನವನ್ನ ಕಳೆದ ಆವೃತ್ತಿಗಿಂತ ಉತ್ತಮ ಪಡಿಸುವ ವಿಶ್ವಾಸ ನಮಗಿದೆ ಎಂದರು. “ಯಾವುದೇ ತಪ್ಪು ಮಾಡಬೇಡಿ, ಸ್ಪರ್ಧೆಯು ವಿಶ್ವದರ್ಜೆಯದಾಗಿರುತ್ತೆ. ಅದ್ರಂತೆ, ನಮ್ಮ ಕ್ರೀಡಾಪಟುಗಳು ಉತ್ತಮವಾಗಿ ತಯಾರಿ ನಡೆಸಿದ್ದಾರೆ ಮತ್ತು ಫಿಟ್ ಆಗಿದ್ದು, ಹೊರಡಲು ಸಿದ್ಧರಿದ್ದಾರೆ. ನಾವು ಅವರೆಲ್ಲರಿಗೂ ಶುಭ ಹಾರೈಸುತ್ತೇವೆ” ಎಂದರು.
ನವದೆಹಲಿ: ಮುಂಬರುವ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ 215 ಕ್ರೀಡಾಪಟುಗಳು ಮತ್ತು 107 ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ 322 ಸದಸ್ಯರ ತಂಡವನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಶನಿವಾರ ಪ್ರಕಟಿಸಿದೆ. ಈ ಕ್ರೀಡಾಕೂಟವು ಜುಲೈ 28 ರಿಂದ ಆಗಸ್ಟ್ 8 ರವರೆಗೆ ಬ್ರಿಟಿಷ್ ನಗರದಲ್ಲಿ ನಡೆಯಲಿದೆ. ಭಾರತ ತಂಡವು ತನ್ನ ಗೋಲ್ಡ್ ಕೋಸ್ಟ್ 2018 ಸಿಡಬ್ಲ್ಯೂಜಿ ಪ್ರದರ್ಶನವನ್ನು ಸುಧಾರಿಸಲು ನೋಡುತ್ತದೆ. ಅಲ್ಲಿ ಸಾಂಪ್ರದಾಯಿಕ ಶಕ್ತಿ ಕೇಂದ್ರಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂತರ ಮೂರನೇ ಸ್ಥಾನದಲ್ಲಿದೆ. https://kannadanewsnow.com/kannada/good-news-for-motorists-dgp-khadak-orders-stopping-unnecessary-vehicle-checking-in-state/ ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾತನಾಡಿ, “ನಾವು ನಮ್ಮ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದನ್ನು ಸಿಡಬ್ಲ್ಯೂಜಿಗೆ ಕಳುಹಿಸುತ್ತಿದ್ದೇವೆ ಮತ್ತು ಶೂಟಿಂಗ್ ಇಲ್ಲದೇ ಇರುವಂತಹ ಬಲಯುತ ಕ್ರೀಡೆಯೊಂದಿಗೆ, ಕಳೆದ ಆವೃತ್ತಿಯಿಂದ ನಮ್ಮ ಪ್ರದರ್ಶನವನ್ನು ಉತ್ತಮಪಡಿಸುವ ವಿಶ್ವಾಸ ನಮಗಿದೆ ಎಂದಿದ್ದಾರೆ. ಸಿಡಬ್ಲ್ಯೂಜಿ ಸಮಯದಲ್ಲಿ ಐದು ವಿಭಿನ್ನ ‘ಹಳ್ಳಿಗಳಲ್ಲಿ’ ಭಾರತೀಯ ಕ್ರೀಡಾಪಟುಗಳು ಉಳಿಯಲಿದ್ದಾರೆ, ಕ್ರಿಕೆಟಿಗರನ್ನು ಪ್ರತ್ಯೇಕವಾಗಿ ಇರಿಸಲಾಗುವುದು. https://kannadanewsnow.com/kannada/little-girl-touches-the-feet-of-army-personnel-makes-internet-teary-eyed/
ನವದೆಹಲಿ : ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಯಾಗಿದ್ದು, ಇದು ಇಲ್ಲದೇ ಯಾವುದೇ ಸರ್ಕಾರಿ ಮತ್ತು ಸರ್ಕಾರೇತರ ಕೆಲಸ ಮಾಡಲು ಸಾಧ್ಯವಿಲ್ಲ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಗ್ರಾಹಕರಿಗೆ ಆಧಾರ್ ಕಾರ್ಡ್ ನೀಡುವ ಸಂಸ್ಥೆ, ಕಾಲಕಾಲಕ್ಕೆ ಹಲವು ಸೌಲಭ್ಯಗಳನ್ನ ನೀಡುತ್ತಲೇ ಇರುತ್ತದೆ. ಇದೀಗ ಜನರ ಅನುಕೂಲಕ್ಕಾಗಿ ಯುಐಡಿಎಐ ಇಸ್ರೋ ಜೊತೆ ಒಪ್ಪಂದ ಮಾಡಿಕೊಂಡಿದ್ದು, ನೇರವಾಗಿ ಆಧಾರ್ ಬಳಕೆದಾರರಿಗೆ ಅನುಕೂಲವಾಗಲಿದೆ. ಇಸ್ರೋ ಜೊತೆ ಯುಐಡಿಎಐ ಒಪ್ಪಂದ ಆಧಾರ್ ಕಾರ್ಡ್‌ನ ವಿತರಣಾ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇಸ್ರೋ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದ್ರಿಂದಾಗಿ ಇನ್ಮುಂದೆ ನೀವು ನಿಮ್ಮ ಮನೆಯ ಸಮೀಪವಿರುವ ಆಧಾರ್ ಕೇಂದ್ರವನ್ನು ಪತ್ತೆ ಮಾಡಬಹುದು. ಈ ಒಪ್ಪಂದದ ಪ್ರಕಾರ, ಇಸ್ರೋ, ಯುಐಡಿಎಐ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಈ ಒಪ್ಪಂದದ ನಂತ್ರ ದೇಶದ ಯಾವುದೇ ಪ್ರದೇಶದಲ್ಲಿ ನಿಮ್ಮ ಮನೆಯಲ್ಲಿ ಕುಳಿತು ನೀವು ಹತ್ತಿರದ ಆಧಾರ್ ಕೇಂದ್ರದ ಬಗ್ಗೆ ಸುಲಭವಾಗಿ ಮಾಹಿತಿಯನ್ನ ಪಡೆಯಬಹುದು. UIDAI ಮಾಹಿತಿ…
ಬೆಂಗಳೂರು: ರಾಜ್ಯದ ಹೆದ್ದಾರಿ ಸೇರಿದಂತೆ ವಿವಿಧ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಪಾಸಣೆ ನೆಪದಲ್ಲಿ ವಾಹನಗಳನ್ನು ಪೊಲೀಸರು ತಡೆದು ತಪಾಸಣೆ ನಡೆಸುತ್ತಿದ್ದರು. ಇದರಿಂದ ಅನೇಕ ವಾಹನ ಸವಾರರಿಗೆ ಕಿರಿಕಿರಿ ಕೂಡ ಉಂಟಾಗುತ್ತಿತ್ತು. ಈ ಕಿರಿಕಿರಿ ತಪ್ಪಿಸೋ ನಿಟ್ಟಿನಲ್ಲಿ, ಈ ಕೂಡಲೇ ರಾಜ್ಯಾಧ್ಯಂತ ಅನಾವಶ್ಯಕ ವಾಹನ ತಪಾಸಣೆ ನಿಲ್ಲಿಸುವಂತೆ ಎಲ್ಲಾ ಎಸ್ಪಿಗಳಿಗೆ ಡಿಜಿಪಿ ಖಡಕ್ ಆದೇಶದಲ್ಲಿ ಸೂಚಿಸಿದ್ದಾರೆ. https://kannadanewsnow.com/kannada/who-is-responsible-for-this-man-wife-children-escape-unhurt-as-car-catches-fire-in-front-of-their-eyes/ ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಅನಾವಶ್ಯಕವಾಗಿ ವಾಹನಗಳ ದಾಖಲೆಗಳ ತಪಾಸಣೆ ನಡೆಸಲಾಗುತ್ತಿದೆ. ಆರ್ ಸಿ, ಫಿಟ್ನೆಸ್ ಸೇರಿದಂತೆ ವಿವಿಧ ದಾಖಲೆಗಳನ್ನು ಕೇಳುತ್ತಾ ಪೊಲೀಸರ ಕಿರಿಕಿರಿ ಉಂಟುಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ. https://kannadanewsnow.com/kannada/fire-breaks-out-on-the-third-floor-of-vidhana-soudha/ ವಾಹನಗಳ ಬಗ್ಗೆ ಅನುಮಾನವಿದ್ದಾಗ, ಡ್ರಿಂಕ್ ಅಂಡ್ ಡ್ರೈವ್ ಸಂಬಂಧದ ಪ್ರಕರಣದಲ್ಲಿ ವಾಹನಗಳ ತಪಾಸಣೆಯನ್ನು ಇನ್ಮುಂದೆ ನಡೆಸುವುದು. ಹೆದ್ದಾರಿಗಳು ಸೇರಿದಂತೆ ಯಾವುದೇ ರಸ್ತೆಗಳಲ್ಲಿ ಅನಗತ್ಯವಾಗಿ ವಾಹನ ತಡೆದು ನಿಲ್ಲಿಸಕೂಡದು ಎಂಬುದಾಗಿ ಪೊಲೀಸರಿಗೆ ಖಡಕ್ ಆಗಿ ಸೂಚಿಸಿದ್ದಾರೆ.
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ರೈತರಿಗೆ ಆರ್ಥಿಕ ನೆರವು ನೀಡಲು ಛತ್ತೀಸ್‌ಗಢ ಸರ್ಕಾರ ರೈತರಿಂದ ಹಸುವಿನ ಸಗಣಿ ಖರೀದಿಸುತ್ತಿದೆ ಅನ್ನೋದು ನಿಮಗೆ ಗೊತ್ತಿದೆ. ಸಧ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸರ್ಕಾರ, ಹಸುವಿನ ಸಗಣಿ ಮಾತ್ರವಲ್ಲ ಮೂತ್ರವನ್ನ ಖರೀದಿಸಲು ನಿರ್ಧರಿಸಿದೆ. ಹೌದು, ಛತ್ತೀಸ್‌ಗಢ ಸರ್ಕಾರವು ಈಗಾಗಲೇ ಗೋಧನ್ ನ್ಯಾಯ್ ಯೋಜನೆ ಅಡಿಯಲ್ಲಿ ರೈತರಿಂದ ಹಸುವಿನ ಸಗಣಿ ಸಂಗ್ರಹಿಸುತ್ತಿದೆ. ಪ್ರತಿ ಕೆ.ಜಿ ಸಗಣಿಗೆ 1.50 ರಿಂದ 2 ರೂಪಾಯಿ ನೀಡುತ್ತಿದೆ. ಈ ಕ್ರಮದಲ್ಲಿ ಗೋವಿನ ಸಗಣಿ ಜತೆಗೆ ಗೋಮೂತ್ರವನ್ನೂ ಖರೀದಿಸಲಾಗುವುದು. ಈ ಯೋಜನೆ ಶೀಘ್ರದಲ್ಲೇ ರಾಜ್ಯಾದ್ಯಂತ ಆರಂಭವಾಗಲಿದೆ. ಒಂದು ಲೀಟರ್ ಗೋಮೂತ್ರವನ್ನ 4 ರೂಪಾಯಿ ದರದಲ್ಲಿ ನೀಡಲಾಗುವುದು. ಛತ್ತೀಸ್‌ಗಢದ ಭೂಪೇಶ್ ಬಘೇಲ್ ಸರ್ಕಾರವು ರೈತರಿಗೆ ಸಹಾಯ ಮಾಡಲು ಗೋಧನ್ ನ್ಯಾಯ್ ಯೋಜನೆ ಯೋಜನೆಯನ್ನ ಪ್ರಾರಂಭಿಸಿದೆ. ಇದರ ಭಾಗವಾಗಿ ಗೋವಿನ ಸಗಣಿ ಖರೀದಿಸಲಾಗುತ್ತಿದೆ. ಇದರ ಜತೆಗೆ ಇನ್ನು ಮುಂದೆ ಗೋಮೂತ್ರವನ್ನೂ ಖರೀದಿಸುವುದಾಗಿ ಹೇಳಿ ರೈತರಿಂದ ಲೀಟರ್ʼಗೆ 4 ರೂ.ನಂತೆ ಗೋಮೂತ್ರ ಖರೀದಿಸಲು ಸರಕಾರ ಸಿದ್ಧತೆ ನಡೆಸಿದೆ.…
ಬೆಂಗಳೂರು: ಈ ಹಿಂದೆ ಹಲವು ಭಾರಿ ವಿಧಾನಸೌಧದ ಕೊಠಡಿಗಳಲ್ಲಿ ವಿವಿಧ ಕಾರಣಗಳಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಕೂಡ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿ ಉರಿದಿದೆ. https://kannadanewsnow.com/kannada/who-is-responsible-for-this-man-wife-children-escape-unhurt-as-car-catches-fire-in-front-of-their-eyes/ ವಿಧಾನಸೌಧದ ಮೂರನೇ ಮಹಡಿಯಲ್ಲಿರುವಂತ ರೂಂ ನಂ.334ರಲ್ಲಿ ಎಸಿ ಬ್ಲಾಸ್ ಗೊಂಡ ಪರಿಣಾಮದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿ ಹೊಂತಿಕೊಂಡಂತ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು, ಸಿಬ್ಬಂದಿ ಇರದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ. https://kannadanewsnow.com/kannada/acb-issues-notice-to-mla-zameer-ahmed-to-appear-before-it/ ವಿಷಯ ತಿಳಿದು ಸ್ಥಳದಲ್ಲಿದ್ದಂತ ಸಿಬ್ಬಂದಿಗಳೇ ಕೂಡಲೇ ನಂದಿಸಿದ್ದಾರೆ. ಹೀಗಾಗಿ ಇಡೀ ಕೊಠಡಿಗೆ ಬೆಂಕಿ ಆವರಿಸಿ, ಧಗಧಗಿಸಿ ಹೊತ್ತಿ ಉರಿಯಬೇಕಿದ್ದಂತ ಘಟನೆ ತಪ್ಪಿದೆ.