Subscribe to Updates
Get the latest creative news from FooBar about art, design and business.
Author: KNN IT TEAM
ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ 2022-23ನೇ ಸಾಲಿನ ಉದ್ಯೋಗಿನಿ, ಕಿರುಸಾಲ, ಚೇತನಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. https://kannadanewsnow.com/kannada/karnataka-weather-report-orange-alert-issued-in-coastal-districts-for-3-more-days-of-heavy-rains-across-the-state/ ಆಸಕ್ತ ಉದ್ಯೋಗಿನಿ, ಕಿರುಸಾಲ ಅಭ್ಯರ್ಥಿಗಳು ಅರ್ಜಿಗಳನ್ನು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಚೇತನಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಅಭ್ಯರ್ಥಿಗಳು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ ಇಲ್ಲಿ ದಿನಾಂಕ:30.07.2022 ರೊಳಗೆ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು (ದ್ವಿಪ್ರತಿಗಳಲ್ಲಿ) ದಿನಾಂಕ:06.08.2022ರ ಒಳಗಾಗಿ ಸದರಿ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ. ಉದ್ಯೋಗಿನಿ ಮತ್ತು ಕಿರುಸಾಲ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆಯಾ ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಮಾಡಲಾಗುತ್ತದೆ. ಚೇತನಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಜಿಲ್ಲಾಧಿಕಾರಿಗಳ…
ಬೆಂಗಳೂರು : ರಾಜ್ಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://kannadanewsnow.com/kannada/question-on-caste-in-tns-periyar-university-ma-exam-sparks-row/ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸದ್ಯ ಕರಾವಳಿಯಲ್ಲಿ ಬಿರುಗಾಳಿಯ ವೇಗವು ಪ್ರತಿ ಘಂಟೆಗೆ 45-55 ಕಿ.ಮೀ ವರೆಗೂ ತಲುಪುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. https://kannadanewsnow.com/kannada/bigg-news-we-are-planning-to-implement-new-agriculture-policy-in-the-state-cm-bommai/ ದಕ್ಷಿಣ ಒಳನಾಡಿನಲ್ಲಿ ಇನ್ನು ಎರಡು ದಿನ ಮಳೆ ಇರಲಿದ್ದು ಆರೆಂಜ್ ಅಲರ್ಟ್ ಘೋಷಿಸಿದ್ದು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲೂ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋಅಲರ್ಟ್ ಘೋಷಿಸಲಾಗಿದೆ. https://kannadanewsnow.com/kannada/aircraft-carrying-dangerous-cargo-crashes-in-northern-greece/
ಚೆನ್ನೈ(ತಮಿಳುನಾಡು): ತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್ ಎಂಎ ಪರೀಕ್ಷೆಯಲ್ಲಿ ʻತಮಿಳುನಾಡಿಗೆ ಸೇರಿದ ಕೆಳ ಜಾತಿ ಯಾವುದುʼ ಎಂದು ಪ್ರಶ್ನೆ ಕೇಳಲಾಗಿದ್ದು, ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಮಾಡಿದೆ. ಈ ವಿಷಯವನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸುವುದಾಗಿ ವಾರ್ಸಿಟಿ ಹೇಳಿದೆ. 1880 ರಿಂದ 1947 ರವರೆಗಿನ ತಮಿಳುನಾಡಿನ ಸ್ವಾತಂತ್ರ್ಯ ಚಳವಳಿ ಕುರಿತು ಪ್ರಶ್ನೆ ಪತ್ರಿಕೆ ಭಾಗ ʻAʼ ನಲ್ಲಿ 1 ಅಂಕದ 15 ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಸರಣಿಯಲ್ಲಿನ 11 ನೇ ಪ್ರಶ್ನೆ ಹೀಗಿದೆ: “ತಮಿಳುನಾಡಿಗೆ ಸೇರಿದ ಕೆಳ ಜಾತಿ ಯಾವುದು (sic)? ಎಂದು ಕೇಳಲಾಗಿದೆ. ತಪ್ಪಿತಸ್ಥರ ವಿರುದ್ಧ ವಿವಿ ಕ್ರಮ ಕೈಗೊಳ್ಳಲಿದೆ ಎಂದು ಪೆರಿಯಾರ್ ವಿಶ್ವವಿದ್ಯಾಲಯದ ಪತ್ರಿಕಾ ಹೇಳಿಕೆ ತಿಳಿಸಿದೆ. Tamil Nadu | 1st-year MA History students of Periyar University in Salem got asked in the exam, “Which one is the lower caste that belongs to Tamil…
ಹಾವೇರಿ : ರಾಜ್ಯದಲ್ಲಿ ಹೊಸ ಕೃಷಿ ನೀತಿಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.ಕೃಷಿ ಕ್ಷೇತ್ರವನ್ನು ಉದ್ಯಮವಾಗಿ ಬೆಳೆಸಲಾಗುವುದು. ರೈತಾಪಿ ಮಹಿಳೆಯರಿಗೆ, ಮಕ್ಕಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯದ ಪ್ರತಿ ತಾಲೂಕಿನಲ್ಲೂ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಶಿಗ್ಗಾಂವ ತಾಲೂಕು ಖುರ್ಸಾಪುರ ಗ್ರಾಮದಲ್ಲಿ ಶನಿವಾರ ನೂತನ ಜವಳಿ ಪಾರ್ಕ್ ಹಾಗೂ ಮೆ.ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಕಂಪನಿಯ ಆಂಕರ್ ಸಿದ್ಧ ಉಡುಪು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕಾಲ ಬದಲಾಗುತ್ತಿದ್ದು, ಕೃಷಿ ಭೂಮಿ ಸಂಕುಚಿತಗೊಳ್ಳುತ್ತಿದೆ. ರೈತ ಕುಟುಂಬಗಳು ಬೆಳೆಯುತ್ತಿದ್ದು, ಭೂಮಿ ಮೇಲೆ ಅವಲಂಬನೆ ಹೆಚ್ಚಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಭೂಮಿಯನ್ನು ದೊಡ್ಡದು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೃಷಿ ಅವಲಂಬನೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಹೊಸ ಕೃಷಿ ನೀತಿಯನ್ನು ಜಾರಿಗೊಳಿಸಲಾಗುದು.ಕೃಷಿಯನ್ನು ಒಂದು ಉದ್ಯಮವಾಗಿ ಬೆಳೆಸಲಾಗುವುದು. ರೈತಾಪಿ ಮಕ್ಕಳಿಗೆ ಶಿಕ್ಷಣ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗೆ ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ರೈತ ಮಕ್ಕಳಿಗೆ ವಿದ್ಯೆ ಮತ್ತು ಉದ್ಯೋಗ…
ಬೆಂಗಳೂರು: ರಾಜ್ಯದ ಹೆದ್ದಾರಿ ಸೇರಿದಂತೆ ವಿವಿಧ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಪಾಸಣೆ ನೆಪದಲ್ಲಿ ವಾಹನಗಳನ್ನು ಪೊಲೀಸರು ತಡೆದು ತಪಾಸಣೆ ನಡೆಸುತ್ತಿದ್ದರು. ಇದರಿಂದ ಅನೇಕ ವಾಹನ ಸವಾರರಿಗೆ ಕಿರಿಕಿರಿ ಕೂಡ ಉಂಟಾಗುತ್ತಿತ್ತು. ಈ ಕಿರಿಕಿರಿ ತಪ್ಪಿಸೋ ನಿಟ್ಟಿನಲ್ಲಿ, ಈ ಕೂಡಲೇ ರಾಜ್ಯಾಧ್ಯಂತ ಅನಾವಶ್ಯಕ ವಾಹನ ತಪಾಸಣೆ ನಿಲ್ಲಿಸುವಂತೆ ಎಲ್ಲಾ ಎಸ್ಪಿಗಳಿಗೆ ಡಿಜಿಪಿ ಖಡಕ್ ಆದೇಶದಲ್ಲಿ ಸೂಚಿಸಿದ್ದಾರೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಅನಾವಶ್ಯಕವಾಗಿ ವಾಹನಗಳ ದಾಖಲೆಗಳ ತಪಾಸಣೆ ನಡೆಸಲಾಗುತ್ತಿದೆ. ಆರ್ ಸಿ, ಫಿಟ್ನೆಸ್ ಸೇರಿದಂತೆ ವಿವಿಧ ದಾಖಲೆಗಳನ್ನು ಕೇಳುತ್ತಾ ಪೊಲೀಸರ ಕಿರಿಕಿರಿ ಉಂಟುಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ. ವಾಹನಗಳ ಬಗ್ಗೆ ಅನುಮಾನವಿದ್ದಾಗ, ಡ್ರಿಂಕ್ ಅಂಡ್ ಡ್ರೈವ್ ಸಂಬಂಧದ ಪ್ರಕರಣದಲ್ಲಿ ವಾಹನಗಳ ತಪಾಸಣೆಯನ್ನು ಇನ್ಮುಂದೆ ನಡೆಸುವುದು. ಹೆದ್ದಾರಿಗಳು ಸೇರಿದಂತೆ ಯಾವುದೇ ರಸ್ತೆಗಳಲ್ಲಿ ಅನಗತ್ಯವಾಗಿ ವಾಹನ ತಡೆದು ನಿಲ್ಲಿಸಕೂಡದು ಎಂಬುದಾಗಿ ಪೊಲೀಸರಿಗೆ ಖಡಕ್ ಆಗಿ ಸೂಚಿಸಿದ್ದಾರೆ.
ಉತ್ತರ ಗ್ರೀಸ್; ಉತ್ತರ ಗ್ರೀಸ್‌ನ ಪ್ಯಾಲಿಯೊಚೋರಿ ಕವಾಲಾಸ್ ಬಳಿ ಪ್ರಯಾಣಿಸುತ್ತಿದ್ದ ದೊಡ್ಡ ಸರಕು ವಿಮಾನವೊಂದರಲ್ಲಿ ಜ್ವಾಲೆ ಕಾಣಿಸಿಕೊಂಡ ಪರಿಣಾಮ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಆಂಟೊನೊವ್ ಎಎನ್-12 ವಿಮಾನವು ಎಂಟು ಜನರೊಂದಿಗೆ ಅಪಾಯಕಾರಿ ಸರಕನ್ನು ಹೊತ್ತು ಸರ್ಬಿಯಾದಿಂದ ಜೋರ್ಡಾನ್‌ಗೆ ಹೊರಟಿತ್ತು. ತಾಂತ್ರಿಕ ದೋಷದ ಪರಿಣಾಮ ಹತ್ತಿರದ ಕವಾಲಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಅನುಮತಿ ಕೋರಿತ್ತು. ಆದ್ರೆ, ಗಮ್ಯಸ್ಥಾನ ತಲುಪುವಷ್ಟರಲ್ಲೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಭೂಮಿಗೆ ಅಪ್ಪಳಿಸಿ ಪತನಗೊಂಡಿದೆ. ಪ್ರತ್ಯಕ್ಷದರ್ಶಿಗಳು, ಆಂಟೊನೊವ್ ಎಎನ್-12 ವಿಮಾನವು ಬೆಂಕಿಗಾವುತಿಯಾಗಿ ನೆಲಕ್ಕಪ್ಪಳಿಸಿದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. 🔴#BREAKING : Il filmato del momento in cui l’aereo #Antonov ucraino si è schiantato a Paleochori Kavalas, nel nord della #Grecia. Il pilota aveva richiesto un atterraggio di emergenza dopo che 3 motori si sono guastati. pic.twitter.com/ZnGAJsQxYO…
ಹಾವೇರಿ : ರೈತಾಪಿ ಮಹಿಳೆಯರಿಗೆ, ಮಕ್ಕಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯದ ಪ್ರತಿ ತಾಲೂಕಿನಲ್ಲೂ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು. https://kannadanewsnow.com/kannada/sim-card-rules-how-many-sim-can-be-purchased-from-an-aadhaar-card-how-many-sims-are-there-in-your-hess-check-it-out-like-this/ ಶಿಗ್ಗಾಂವ ತಾಲೂಕು ಖುರ್ಸಾಪುರ ಗ್ರಾಮದಲ್ಲಿ ಶನಿವಾರ ನೂತನ ಜವಳಿ ಪಾರ್ಕ್ ಹಾಗೂ ಮೆ.ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಕಂಪನಿಯ ಆಂಕರ್ ಸಿದ್ಧ ಉಡುಪು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕಾಲ ಬದಲಾಗುತ್ತಿದ್ದು, ಕೃಷಿ ಭೂಮಿ ಸಂಕುಚಿತಗೊಳ್ಳುತ್ತಿದೆ. ರೈತ ಕುಟುಂಬಗಳು ಬೆಳೆಯುತ್ತಿದ್ದು, ಭೂಮಿ ಮೇಲೆ ಅವಲಂಬನೆ ಹೆಚ್ಚಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಭೂಮಿಯನ್ನು ದೊಡ್ಡದು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೃಷಿ ಅವಲಂಬನೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಹೊಸ ಕೃಷಿ ನೀತಿಯನ್ನು ಜಾರಿಗೊಳಿಸಲಾಗುದು.ಕೃಷಿಯನ್ನು ಒಂದು ಉದ್ಯಮವಾಗಿ ಬೆಳೆಸಲಾಗುವುದು. ರೈತಾಪಿ ಮಕ್ಕಳಿಗೆ ಶಿಕ್ಷಣ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗೆ ನಮ್ಮ ಸರ್ಕಾರ ಆದ್ಯತೆ ನೀಡಲಿದೆ. ರೈತ ಮಕ್ಕಳಿಗೆ ವಿದ್ಯೆ ಮತ್ತು ಉದ್ಯೋಗ ಭವಿಷ್ಯದ ಎರಡು ಅಸ್ತ್ರಗಳು. ಕೃಷಿಯ ಜೊತೆಗೆ ಇತರ ಉದ್ಯೋಗಾವಕಾಶಗಳನ್ನು ಕಲ್ಪಿಸಿ ರೈತರ ಮಕ್ಕಳಿಗೆ ಆರ್ಥಿಕ…
ನವದೆಹಲಿ : ಮಾರುಕಟ್ಟೆಯಲ್ಲಿ ಸಿಮ್ ಕಾರ್ಡ್ ಖರೀದಿಸೋಕೆ ನಿಮಗೆ ಐಡಿ ಪುರಾವೆ ಬೇಕು. ಇದಕ್ಕಾಗಿ ಜನ ಆಧಾರ್ ಕಾರ್ಡ್ ಸಲ್ಲಿಸುತ್ತಾರೆ. SIM ಕಾರ್ಡ್ ಪಡೆಯಲು, KYC ಮಾಡುವುದು ಅವಶ್ಯಕ. ಇದರ ನಂತ್ರವೇ ಟೆಲಿಕಾಂ ಕಂಪನಿಯು ನಮ್ಮ ಸಿಮ್ ಸಕ್ರಿಯಗೊಳಿಸುತ್ತದೆ. ಹಾಗಾಗಿ ಸಿಮ್ ಕಾರ್ಡ್ ಪಡೆಯಲು ನೀವು ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಹೆಸರಿನಲ್ಲಿ ಹಲವು ಸಿಮ್‌ಗಳು ಸಕ್ರಿಯವಾಗಿರುವಾಗಲೂ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅಚ್ಚರಿಯೆಂದ್ರೆ, ಅವ್ರಿಗೂ ಇದರ ಅರಿವಿಲ್ಲ. ಹಲವು ಬಾರಿ ಈ ಸಿಮ್ʼಗಳಿಂದ ಅಕ್ರಮ ಚಟುವಟಿಕೆಗಳೂ ನಡೆಯುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್‌ಗಳು ಸಕ್ರಿಯವಾಗಿವೆ ಅನ್ನೋದನ್ನ ಕಾಲಕಾಲಕ್ಕೆ ಪರಿಶೀಲಿಸುವುದು ಬಹಳ ಮುಖ್ಯ. ನೀವು ಸಹ ಇದರ ಬಗ್ಗೆ ತಿಳಿದುಕೊಳ್ಳಲು ಬಯಸಿದ್ರೆ, ಅದನ್ನ ಹೇಗೆ ಪರಿಶೀಲಿಸುವುದು? ಅನ್ನೋದನ್ನ ತಿಳಿಯೋಣಾ ಬನ್ನಿ. ಒಂದು ಆಧಾರ್‌ನಲ್ಲಿ ಎಷ್ಟು ಸಿಮ್‌ಗಳನ್ನು ಪಡೆಯಬಹುದು? ಸರ್ಕಾರದ ಟೆಲಿಕಾಂ ಇಲಾಖೆ ಮಾಡಿರುವ ನಿಯಮಗಳ ಪ್ರಕಾರ ಆಧಾರ್ ಕಾರ್ಡ್‌ನಲ್ಲಿ ಒಟ್ಟು…
ಬೆಂಗಳೂರು : ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ರಾಜ್ಯದ 1-8 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. https://kannadanewsnow.com/kannada/bigg-news-good-news-for-state-government-employees-cashless-treatment-scheme-to-be-launched-soon/ ಪ್ರಸ್ತುತ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ 1-8 ನೇ ತರಗತಿಯ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುತ್ತಿರುವ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೂ ವಿಸ್ತರಿಸಲು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ವರ್ಷದಲ್ಲಿ 100 ದಿನ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆ ವಿತರಿಸಲು, ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲು ಅನುಮತಿ ಕೋರಿ ಶಿಕ್ಷಣ ಇಲಾಖೆ ಅರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. https://kannadanewsnow.com/kannada/4-8-magnitude-earthquake-hits-manipur/
ಬೆಂಗಳೂರು: ಕೇಂದ್ರವು 2030 ರ ವೇಳೆಗೆ ಮಲೇರಿಯಾ(malaria)ವನ್ನು ನಿರ್ಮೂಲನೆ ಮಾಡುವ ಗುರಿಯನ್ನು ನೀಡಿದೆ. ಆದರೆ, ರಾಜ್ಯವನ್ನು 2025 ರ ಹೊತ್ತಿಗೆ ಮಲೇರಿಯಾ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ಅದನ್ನು ಸವಾಲಾಗಿ ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್(Sudhakar) ಶನಿವಾರ ಹೇಳಿದ್ದಾರೆ. ಮಲೇರಿಯಾ ಮತ್ತು ಇತರ ವಾಹಕಗಳಿಂದ ಹರಡುವ ರೋಗಗಳ ವಿರುದ್ಧ ಹೋರಾಡಲು ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಮಲೇರಿಯಾ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಿಗೆ ತೆರಳಿ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ, ಏಷ್ಯಾ ಪೆಸಿಫಿಕ್ ಲೀಡರ್ಸ್ ಮಲೇರಿಯಾ ಅಲಯನ್ಸ್ (ಎಪಿಎಲ್‌ಎಂಎ) ಮತ್ತು ಏಷ್ಯಾ ಪೆಸಿಫಿಕ್ ಮಲೇರಿಯಾ ಎಲಿಮಿನೇಷನ್ ನೆಟ್‌ವರ್ಕ್ (ಎಪಿಎಂಇಎನ್) ‘2025ರ ವೇಳೆಗೆ ಮಲೇರಿಯಾ ಮುಕ್ತ ಕರ್ನಾಟಕದತ್ತ ವೇಗವರ್ಧನೆ’ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವ ಸುಧಾಕರ್, “1980 ಮತ್ತು 1990 ರ ದಶಕದ ಮೊದಲು ಮಲೇರಿಯಾಕ್ಕೆ ಸರಿಯಾದ ಪರೀಕ್ಷಾ ಸೌಲಭ್ಯಗಳು ಇರಲಿಲ್ಲ. ಆದ್ರೆ, ಈಗ…