Subscribe to Updates
Get the latest creative news from FooBar about art, design and business.
Author: KNN IT TEAM
BREAKING NEWS : ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ಪೊಲೀಸರಿಂದ ನಟೋರಿಯಸ್ ರೌಡಿಶೀಟರ್ ಮೇಲೆ ಫೈರಿಂಗ್!
ಮಂಗಳೂರು : ಮಂಗಳೂರು ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ನಗರದ ಅಸೈಗೋಳಿ ಬಳಿ ಪೊಲೀಸರು ನಟೋರಿಯಸ್ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ಮಾಡಿರುವ ಘಟನೆ ನಡೆದಿದೆ. https://kannadanewsnow.com/kannada/bigg-breaking-news-covid-19-cases-in-the-country-rise-slightly-again-20528-cases-detected-in-24-hours/ 15ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿರುವ ಮುಕ್ತಾರ್, ಪ್ರಕರಣವೊಂದರಲ್ಲಿ ಬಂಧಿಸಿ ಕಾರಿನ ಮಹಜರಿಗೆ ಹೋಗಿದ್ದ ವೇಳೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮುಕ್ತಾರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ರೌಡಿಶೀಟರ್ ಮುಕ್ತಾರ್ ಹಲವು ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ. ಸದ್ಯ ಬಂಧಿಸಿದ್ದ ಪೊಲೀಸರು ಪ್ರಕರಣವೊಂದರ ಮಹಜರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪರಾರಿಯಾಗಲು ಯತ್ನಿಸಿದ್ದ. https://kannadanewsnow.com/kannada/indigo-flights-precautionary-landing-in-karachi-all-passengers-safe/
ನವದೆಹಲಿ : ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 20,528 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 20,528 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 49 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 525709 ಕ್ಕೆ ಏರಿಕೆಯಾಗಿದೆ. ಕೋವಿಡ್-19 | ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 20,528 ಹೊಸ ಪ್ರಕರಣಗಳು ಮತ್ತು 49 ಸಾವುಗಳು ದಾಖಲಾಗಿವೆ. ಸಕ್ರಿಯ ಪ್ರಕರಣ 1,43,449 ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇಲ್ಲಿಯವರೆಗೆ 199.98 ಕೋಟಿ ಒಟ್ಟು ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. https://twitter.com/ANI/status/1548515544097181696
ದೆಹಲಿ: ಶಾರ್ಜಾದಿಂದ ಹೈದರಾಬಾದ್‌ಗೆ ಹೊರಟ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. “ಶಾರ್ಜಾದಿಂದ ಹೈದರಾಬಾದ್‌ಗೆ ಹೊರಟಿದ್ದ ಇಂಡಿಗೋ ವಿಮಾನ 6E 1406 ದಲ್ಲಿ ಪೈಲಟ್ ತಾಂತ್ರಿಕ ದೋಷವನ್ನು ಗಮನಿಸಿದರು. ಈ ವೇಳೆ ಎಚ್ಚೆತ್ತುಕೊಂಡ ಅವರು ಕೂಡಲೇ ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಿ, ಮುನ್ನೆಚ್ಚರಿಕೆಯಾಗಿ ವಿಮಾನವನ್ನು ಕರಾಚಿಯಲ್ಲಿ ಲ್ಯಾಂಡ್ ಮಾಡಲಾಯಿತು. ಪ್ರಯಾಣಿಕರೆಲ್ಲರೂ ಸೇಫ್ ಆಗಿದ್ದು, ಅವರನ್ನು ಮತ್ತೊಂದು ವಿಮಾನದಲ್ಲಿ ಹೈದರಾಬಾದ್‌ಗೆ ಕಳುಹಿಸಲಾಗುತ್ತಿದೆ” ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಎರಡು ವಾರಗಳಲ್ಲಿ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಿದ ಎರಡನೇ ಭಾರತೀಯ ವಿಮಾನಯಾನ ಸಂಸ್ಥೆ ಇದಾಗಿದೆ. ಈ ತಿಂಗಳ ಆರಂಭದಲ್ಲಿ, ಸ್ಪೈಸ್‌ಜೆಟ್ ವಿಮಾನವು ದೆಹಲಿಯಿಂದ ದುಬೈಗೆ ಹೋಗುವಾಗ ಪಾಕಿಸ್ತಾನದ ನಗರದಲ್ಲಿ ಅಸಮರ್ಪಕ ಸೂಚಕ ದೀಪದ ಕಾರಣ ನಿಗದಿತವಾಗಿ ನಿಲ್ಲಿಸಿತು. ನಂತ್ರ, 138 ಪ್ರಯಾಣಿಕರು ನಂತರ ಭಾರತದಿಂದ ಕಳುಹಿಸಲಾದ ಬದಲಿ ವಿಮಾನದಲ್ಲಿ ದುಬೈಗೆ ತೆರಳಿದ್ದರು.…
ಸೆರ್ಬಿಯಾ: ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ (Grandmaster R Praggnanandhaa) ಅವರು ಸೆರ್ಬಿಯಾದಲ್ಲಿ ಶನಿವಾರ ನಡೆದ ಪ್ಯಾರಾಸಿನ್ ಓಪನ್ ‘ಎ’ ಚೆಸ್ ಟೂರ್ನಮೆಂಟ್ 2022 ರಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. 16 ವರ್ಷ ವಯಸ್ಸಿನ ಪ್ರಗ್ನಾನಂದ ಅಜೇಯರಾಗಿ ಉಳಿದಿದ್ದು, ಅರ್ಧ ಪಾಯಿಂಟ್‌ಗಳ ಮುಂದೆ ಮುಗಿಸಿದರು. ಅಲೆಕ್ಸಾಂಡರ್ ಪ್ರೆಡ್ಕೆ ಅವರು ಅಲಿಶರ್ ಸುಲೇಮೆನೋವ್ ಮತ್ತು ಭಾರತದ ಎಎಲ್ ಮುತ್ತಯ್ಯ ಅವರಿಗಿಂತ 7.5 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದು, ಇಬ್ಬರೂ 7 ಅಂಕಗಳನ್ನು ಗಳಿಸಿದರು. ಸುಲೇಮೆನೋವ್ ಉತ್ತಮ ಟೈ-ಬ್ರೇಕ್ ಸ್ಕೋರ್ ಆಧಾರದ ಮೇಲೆ ಮೂರನೇ ಸ್ಥಾನವನ್ನು ಪಡೆದರು. ಯಂಗ್ ಇಂಡಿಯನ್ ಇಂಟರ್‌ನ್ಯಾಶನಲ್ ಮಾಸ್ಟರ್ ವಿ ಪ್ರಣವ್ ಅಂತಿಮ ಸುತ್ತಿನಲ್ಲಿ ಪ್ರೆಡ್ಕೆ ಕೈಯಲ್ಲಿ ಸೋಲಿನ ನಂತರ 6.5 ಅಂಕಗಳೊಂದಿಗೆ ಕೊನೆಗೊಂಡರು. ಭಾರತದ ಜಿಎಂ ಅರ್ಜುನ್ ಕಲ್ಯಾಣ್ (6.5 ಅಂಕ) ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪ್ರಗ್ನಾನಂದ ಜುಲೈ 28 ರಿಂದ ಚೆನ್ನೈ ಬಳಿ ನಡೆಯಲಿರುವ 44 ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಬಲಿಷ್ಠ ಭಾರತ ‘ಬಿ’ ತಂಡದ…
ಮಡಿಕೇರಿ: ಭಾರೀ ಮಳೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಕುಸಿಯುವ ಸಾಧ್ಯತೆ ಇರುವುದರಿಂದ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ನ್ನು ಸಂಪೂರ್ಣ ಬಂದ್ ಮಾಡಲಾಗಿದೆ. https://kannadanewsnow.com/kannada/bigg-news-heres-the-most-important-information-for-those-going-to-see-jog-falls/ ಮಡಿಕೇರಿ ನಗರದ ಡಿಸಿ ಕಛೇರಿ ಬಳಿ ತಡೆಗೋಡೆ ಕುಸಿಯುವ ಆತಂಕ ಎದುರಾದ ಹಿನ್ನೆಲೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ನ್ನು ನಿನ್ನೆ ರಾತ್ರಿಯಿಂದಲೇ ಸಂಪೂರ್ಣ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಡಿಕೇರಿ ಟೋಲ್ ಗೇಟ್ ಬಳಿಯೇ ಹೆದ್ದಾರಿ ಬಂದ್ ಮಾಡಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಪರಿಣಾಮ ಮಡಿಕೇರಿ ಮತ್ತು ಮಂಗಳೂರು ನಡುವಿನ ಸಂಚಾರ ಸಂಪೂರ್ಣ ಕಡಿತಗೊಂಡಿದೆ. https://kannadanewsnow.com/kannada/watch-tamil-nadus-napier-bridge-painted-like-a-chess-board-ahead-of-olympiad/
ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಕುಸಿದಿದ್ದು, ಜೋಗಫಾಲ್ಸ್ ಗೆ ಹೋಗುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಮಾಹಿತಿ ನೀಡಿದೆ. https://kannadanewsnow.com/kannada/watch-tamil-nadus-napier-bridge-painted-like-a-chess-board-ahead-of-olympiad/ ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಗೇರುಸೊಪ್ಪ ಗ್ರಾಮದಿಂದ ಸಿದ್ದಾಪುರ ತಾಲ್ಲೂಕಿನ ಮಾವಿನಗುಂಡಿ ಗ್ರಾಮದವರೆಗೆ ರಸ್ತೆ ಸಂಚಾರ ನಿಷೇಧಿಸಲಾಗಿದೆ. ಹೊನ್ನಾವರದಿಂದ ಸಿದ್ದಾಪುರ, ಜೋಗ, ಸಾಗರ ಕಡೆಗೆ ಹೋಗುವ ವಾಹನಗಳು ಹೊನ್ನಾವರ, ಕುಮಟಾ, ಸಂತೆಗುಳಿ ಮಾರ್ಗವಾಗಿ ಸಿದ್ದಾಪುರ ತಲುಪುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. https://kannadanewsnow.com/kannada/bigg-news-bjp-workers-brutal-murder-in-belagavi-people-shocked/
ಚೆನ್ನೈ (ತಮಿಳುನಾಡು): 44ನೇ ಫಿಡೆ ಚೆಸ್ ಒಲಿಂಪಿಯಾಡ್ ಜುಲೈ 28ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಆರಂಭವಾಗಲಿದೆ. ಇದೀಗ ನಗರದ ನೇಪಿಯರ್ ಬ್ರಿಡ್ಜ್‌ನಿಂದ ಚೆಸ್ ಬೋರ್ಡ್‌ನಂತೆ ಬಣ್ಣ ಬಳಿದಿರುವ ವಿಡಿಯೋ ಇಂಟರ್ ನೆಟ್‌ನಲ್ಲಿ ವೈರಲ್ ಆಗ್ತಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡ ವಿಡಿಯೋದಲ್ಲಿ, ನೇಪಿಯರ್ ಬ್ರಿಡ್ಜ್ ಚೆಸ್ ಬೋರ್ಡ್‌ನಂತೇ ಚಿತ್ರಿಸುವುದನ್ನು ನೋಡಬಹುದು. ವಿಡಿಯೋದ ಶೀರ್ಷಿಕೆಯಲ್ಲಿ “ಭಾರತದ ಚೆಸ್ ರಾಜಧಾನಿ ಚೆನ್ನೈ, ಗ್ರ್ಯಾಂಡ್ ಚೆಸ್ ಒಲಿಂಪಿಯಾಡ್ 2022 ಅನ್ನು ಆಯೋಜಿಸಲು ಸಿದ್ಧವಾಗಿದೆ. ಐಕಾನಿಕ್ ನೇಪಿಯರ್ ಸೇತುವೆಯನ್ನು ಚೆಸ್ ಬೋರ್ಡ್‌ನಂತೆ ಅಲಂಕರಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ. Chennai the Chess Capital of India is all set to host the grand, Chess Olympiad 2022.The iconic Napier Bridge is decked up like a Chess Board.Check it out 😊 #ChessOlympiad2022 #ChessOlympiad #Chennai pic.twitter.com/wEsUfGHMlU — Supriya Sahu IAS (@supriyasahuias) July 16, 2022 ಈ…
ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನೊರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದದೆ. https://kannadanewsnow.com/kannada/bigg-news-another-write-off-on-price-rise-on-common-man-from-tomorrow-gst-on-milk-products-foodgrains/ ಹಿಡಕಲ್ ಡ್ಯಾಂ ಗ್ರಾಮದ ಬಿಜೆಪಿ ಕಾರ್ಯಕರ್ತ ಪರಶುರಾಮ್ ಹಲಕರ್ಣಿ (32) ಕೊಲೆಯಾದ ವ್ಯಕ್ತಿ. ಮೃತ ಪರಶುರಾಮ್ ಹಲಕರ್ಣಿ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿನಾಗಿದ್ದನು. ಈತನನ್ನು ಗ್ರಾಮದ ಹನುಮಂತ ದೇವಸ್ಥಾನದ ಬಳಿ ಮೂವರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಆರೋಪಿಗಳಾದ ಮಂಜುನಾಥ ಪುಟಜನೆ ಕೆಂಪಣ್ಣ ನೆಸರಗಿ ಪೋಲಿಸರಿಗೆ ಶರಣಾಗಿದ್ದಾರೆ. ಮತ್ತೊಬ್ಬ ಆರೋಪಿ ಬಸವರಾಜ್ ಗಳಾತೆ ಪರಾರಿಯಾಗಿದ್ದಾನೆ. ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/good-news-good-news-for-borrowers-applications-invited-for-loan-facility-under-various-schemes/
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ನಿಮಗೆ ಪ್ರತಿದಿನ ಮೊಸರು ಖರೀದಿಸುವ ಅಭ್ಯಾಸವಿದೆಯೇ? ಹಾಗಾದ್ರೆ, ಇನ್ಮುಂದೆ ನಿಮ್ಮ ಜೇಬಿನ ಭಾರ ಹೆಚ್ಚಿಸಿಕೊಳ್ಳಲೇ ಬೇಕಾಗುತ್ತೆ. ಯಾಕಂದ್ರೆ, ನಾಳೆಯಿಂದ ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಮೊಸರಿನ ಬೆಲೆ ಹೆಚ್ಚಾಗಲಿದೆ. ಕೇವಲ ಇದೊಂದೇ ಅಲ್ಲ, ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಮಜ್ಜಿಗೆ, ಪನ್ನೀರ್ ಮತ್ತು ಲಸ್ಸಿಯಂತಹ ಹಾಲಿನ ಉತ್ಪನ್ನಗಳು ಜಿಎಸ್ಟಿಯಿಂದಾಗಿ ಬೆಲೆಗಳಲ್ಲಿ ಹೆಚ್ಚಳವನ್ನ ಕಾಣುವ ಸಾಧ್ಯತೆಯಿದೆ. https://kannadanewsnow.com/kannada/good-news-good-news-for-borrowers-applications-invited-for-loan-facility-under-various-schemes/ ಇನ್ನು ಹವಾಮಾನವು ತಂಪಾಗಿದೆ ಅಂತಾ ನೀವು ಯಾವುದೇ ಟೂರ್ ಹೊಡೆಯಲು ಯೋಜಿಸಿದ್ದೀರಾ? ಆದಾಗ್ಯೂ, ನಿಮ್ಮ ಬಜೆಟ್ ಸ್ವಲ್ಪ ಪರಿಷ್ಕರಿಸಿ. ಇನ್ಮುಂದೆ ನೀವು 1,000 ರೂ.ಗಿಂತ ಕಡಿಮೆ ಕೋಣೆಯನ್ನು ತೆಗೆದುಕೊಂಡರೂ ಸಹ, ನೀವು ಶೇಕಡಾ 12ರಷ್ಟು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಜಿಎಸ್ಟಿ ಮಂಡಳಿಯು ತನ್ನ 47ನೇ ಸಭೆಯಲ್ಲಿ ದರಗಳನ್ನ ಹೆಚ್ಚಿಸಲು ತೆಗೆದುಕೊಂಡ ಇತ್ತೀಚಿನ ನಿರ್ಧಾರದ ಫಲಿತಾಂಶ ಇದಾಗಿದೆ. ಕೆಲವು ಸರಕುಗಳಿಗೆ ಹೊಸ ದರಗಳನ್ನ ಅನ್ವಯಿಸಲಾಗಿದೆ. ಇತರ ಕೆಲವು ವಸ್ತುಗಳನ್ನ ವಿಭಿನ್ನ ಸ್ಲ್ಯಾಬ್ ದರಕ್ಕೆ ಪರಿವರ್ತಿಸಲಾಯಿತು. ಇದು ಅವುಗಳನ್ನ ಬೆಲೆಗಳನ್ನ ಹೆಚ್ಚಿಸುತ್ತದೆ.…
ವಾಷಿಂಗ್ಟನ್: ಹೆಚ್ಚಾಗಿ ಮದ್ಯ ಸೇವಿಸೋದ್ರಿಂದ ವಯಸ್ಕರಿಗಿಂತ ಯುವಜನತೆ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ. ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ಅಧ್ಯಯನದ ಪ್ರಕಾರ, ಹೆಚ್ಚಾಗಿ ಮದ್ಯ ಸೇವನೆ ಮಾಡೋದ್ರಿಂದ 40 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು ವಯಸ್ಕರಿಗಿಂತ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದು ತಿಳಿಸಿದೆ. ಈ ವರದಿಯು ಭೌಗೋಳಿಕ ಪ್ರದೇಶ, ವಯಸ್ಸು, ಲಿಂಗ ಮತ್ತು ವರ್ಷದಿಂದ ಮದ್ಯದ ಅಪಾಯವನ್ನು ವರದಿ ಮಾಡುವ ಮೊದಲ ಅಧ್ಯಯನ ಇದಾಗಿದೆ. ಜಾಗತಿಕ ಆಲ್ಕೋಹಾಲ್ ಸೇವನೆಯ ಶಿಫಾರಸುಗಳು ವಯಸ್ಸು ಮತ್ತು ಸ್ಥಳವನ್ನು ಆಧರಿಸಿರಬೇಕು ಎಂದು ಅದು ಸೂಚಿಸುತ್ತದೆ. ಇಲ್ಲಿ 15-39 ವರ್ಷ ವಯಸ್ಸಿನ ಪುರುಷರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಗುರಿಪಡಿಸಲಾಗಿದೆ. ಅವರು ವಿಶ್ವಾದ್ಯಂತ ಹಾನಿಕಾರಕ ಆಲ್ಕೊಹಾಲ್ ಸೇವನೆಯ ಅಪಾಯವನ್ನು ಹೊಂದಿರುತ್ತಾರೆ. ಹೀಗಾಗಿ ಅವರು ಆಲ್ಕೋಹಾಲ್ ಸೇವನೆ ಮಾಡದೇ ಅದರಿಂದ ದೂರ ಇರುವುದೇ ಒಳ್ಳೆಯದು. 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಕಡಿಮೆ ಆಲ್ಕೋಹಾಲ್ ಸೇವನೆ ಮಾಡೋದ್ರಿಂದ ಕೆಲವು ಪ್ರಯೋಜನಗಳನ್ನು…