Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ಕೇಂದ್ರ ಸರ್ಕಾರವು ಪ್ಯಾಕ್ ಮಾಡಿದ ಉತ್ಪನ್ನಗಳಾದ ಮಜ್ಜಿಗೆ, ಹಾಗೂ ಲಸ್ಸಿ ಮೇಲೆ 5% ಜಿಎಸ್‌ಟಿ ಹೇರಿರುವ ಹಿನ್ನೆಲೆಯಲ್ಲಿ ಇಂದಿನಿಂದ ಅನ್ವಯವಾಗುವಂತೆ ಕೆಎಂಎಫ್ ತನ್ನ ಉತ್ಪನ್ನಗಳಾದ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರಗಳನ್ನು ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರ ಜುಲೈ 13 ರಂದು ಹೊರಡಿಸಿದ್ದ ಆದೇಶದಲ್ಲಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿಗೂ 5% ಜಿಎಸ್‌ಟಿ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ(ಜುಲೈ 18) ಅನ್ವಯವಾಗುವಂತೆ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಪ್ಯಾಕ್‌ಗಳ ದರ ಪರಿಷ್ಕರಿಸಲಾಗಿದೆ. ಅಂದಹಾಗೇ ಮೊಸರು 200 ಗ್ರಾ ರೂ.10 ರಿಂದ 12 ರೂ ಆಗಲಿದೆ. 500 ಗ್ರಾಮ, ರೂ.22 ರಿಂದ 24 ರೂ ಆಗಲಿದೆ. ಮಜ್ಜಿಗೆ ಸ್ಯಾಚೆ 200 ಮಿಲಿ ರೂ.7 ಇದ್ದದ್ದು 8 ರೂ ಆಗಲಿದೆ. ಟೆಟ್ರಾ ಪ್ಯಾಕ್ 10ರೂ ನಿಂದ 11 ರೂ ಗೆ ಏರಿಕೆಯಾಗಲಿದೆ. ಪೆಟ್ ಬಾಟಲ್ ರೂ.12 ರಿಂದ 13 ರೂ ಗೆ ಹೆಚ್ಚಳವಾಗಲಿದೆ. ಇನ್ನೂ ಲಸ್ಸಿ 200 ಮಿಲಿ ಸ್ಯಾಚೆ ರೂ.10ರಿಂದ…
ದೆಹಲಿ: ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಉಮೇದುದಾರರಾಗಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಕಣದಲ್ಲಿದಲ್ಲಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಎನ್‌ಡಿಎ ಅಧಿಕಾರದಲ್ಲಿರುವುದು ಹಾಗೂ ಹಲವು ಪ್ರಾದೇಶಿಕ ಪಕ್ಷಗಳು ಬುಡಕಟ್ಟು ಸಮುದಾಯದ ಅಭ್ಯರ್ಥಿ ಎಂಬ ಕಾರಣಕ್ಕೆ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಅವರು ಭಾರಿ ಬಹುಮತದೊಂದಿಗೆ ಆಯ್ಕೆಯಾಗುವುದು ಖಚಿತವಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 10,86,431 ಲಕ್ಷ ಮತಗಳು ಇದ್ದು, ಈ ಪೈಕಿ ಅರ್ಧಕ್ಕಿಂತ ಹೆಚ್ಚು ಪಡೆದವರು ಆಯ್ಕೆಯಾಗುತ್ತಾರೆ. ಪ್ರಾದೇಶಿಕ ಪಕ್ಷಗಳ ಬೆಂಬಲ ಘೋಷಣೆ ಬಳಿಕ ಎನ್‌ಡಿಎ ಅಭ್ಯರ್ಥಿ ಬಳಿ ಈಗಾಗಲೇ 6.67 ಲಕ್ಷ ಮತಗಳು ಇವೆ. ಹೀಗಾಗಿ ದ್ರೌಪದಿ ಮುರ್ಮು ಅವರು ಮೂರನೇ ಎರಡರಷ್ಟು ಬಹುಮತದೊಂದಿಗೆ ಆಯ್ಕೆಯಾದೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಾರೆ ದ್ರೌಪದಿ ಗೆದ್ದರೆ ರಾಷ್ಟ್ರಪತಿ ಹುದ್ದೆಗೇರಿದ ಬುಡಕಟ್ಟು ಸಮುದಾಯದ…
ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾದಲ್ಲಿ ವ್ಯಕ್ತಿಯೊಬ್ಬ ತಳ್ಳಿಕೊಂಡು ಹೋಗುತ್ತಿರುವ ಕಸದ ಬಂಡಿಯಲ್ಲಿ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳು ಕಂಡುಬಂದಿವೆ. ಈ ದೃಶ್ಯವನ್ನು ಅಲ್ಲಿನ ಜನರು ವಿಡಿಯೋ ಮಾಡಿದ್ದು, ವ್ಯಕ್ತಿಯ ಮೇಲೆ ಆಕ್ರೋಶಗೊಂಡಿರುವ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಎಸೆದ ವಸ್ತುಗಳ ಕಸದ ರಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳು ಕಂಡುಬಂದಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮುನ್ಸಿಪಲ್ ಕಾರ್ಪೊರೇಷನ್ ಉದ್ಯೋಗಿ ಕೆಲಸ ಕಳೆದುಕೊಂಡಿದ್ದಾರೆ. ವಿಡಿಯೋದಲ್ಲಿ, ವ್ಯಕ್ತಿ ಕಸದ ಬಂಡಿ ತಳ್ಳಿಕೊಂಡು ಹೋಗುತ್ತಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳು ಕಂಡುರುತ್ತವೆ. ಇದನ್ನು ಕಂಡ ಅಲ್ಲಿನ ಸ್ಥಳೀಯರು ಅವನನ್ನೇ ಹಿಂಬಾಲಿಸಿ ʻಹೀಗೆ ಮಾಡುತ್ತಿರುವುದು ಸರಿನಾ?ʼ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ…
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ 4:30 ಕ್ಕೆ ನವದೆಹಲಿಯ ಡಾ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ನೇವಲ್ ಇನ್ನೋವೇಶನ್ ಮತ್ತು ಇಂಡಿಜನೈಸೇಶನ್ ಆರ್ಗನೈಸೇಶನ್ (NIIO) ಸೆಮಿನಾರ್ ‘ಸ್ವಾವ್ಲಾಂಬನ್’ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆತ್ಮನಿರ್ಭರ ಭಾರತ್‌ನ ಪ್ರಮುಖ ಆಧಾರ ಸ್ತಂಭ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುತ್ತಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯವು ಈವೆಂಟ್‌ನ ವಿವರಗಳನ್ನು ಇಂದು ತಿಳಿಸಿದೆ. ಈ ಪ್ರಯತ್ನವನ್ನು ಮುಂದುವರಿಸಲು, ಕಾರ್ಯಕ್ರಮದ ಸಮಯದಲ್ಲಿ, ಪ್ರಧಾನ ಮಂತ್ರಿಗಳು ಭಾರತೀಯ ನೌಕಾಪಡೆಯಲ್ಲಿ ಸ್ಥಳೀಯ ತಂತ್ರಜ್ಞಾನದ ಬಳಕೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿರುವ ‘SPRINT ಸವಾಲುಗಳನ್ನು’ ಅನಾವರಣಗೊಳಿಸಲಿದ್ದಾರೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿ, NIIO, ಡಿಫೆನ್ಸ್ ಇನ್ನೋವೇಶನ್ ಆರ್ಗನೈಸೇಶನ್ (DIO) ಜೊತೆಯಲ್ಲಿ ಸುಮಾರು 75 ಹೊಸ ಸ್ಥಳೀಯ ತಂತ್ರಜ್ಞಾನಗಳು/ಉತ್ಪನ್ನಗಳನ್ನು ಭಾರತೀಯ ನೌಕಾಪಡೆಗೆ ಸೇರಿಸುವ ಗುರಿಯನ್ನು ಹೊಂದಿದೆ. ಈ ಸಹಯೋಗದ ಯೋಜನೆಯನ್ನು SPRINT (iDEX, NIIO ಮತ್ತು TDAC ಮೂಲಕ R&D ನಲ್ಲಿ ಪೋಲ್-ವಾಲ್ಟಿಂಗ್ ಅನ್ನು ಬೆಂಬಲಿಸುವುದು) ಎಂದು ಹೆಸರಿಸಲಾಗಿದೆ. ಸೆಮಿನಾರ್ ರಕ್ಷಣಾ…
ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯತ್ ಗಳ, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳ ನಿಯಂತ್ರಣ ) ಮಾದರಿ ಉಪವಿಧಿ 2015ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಅದರ ಹಿನ್ನಲೆಯಲ್ಲಿಯೇ ಕೈಗಾರಿಕಾ ಕಟ್ಟಗಳಿಗೆ ಬಿಡಬೇಕಾಗಿರುವಂತ ಖಾಲಿ ಜಾಗವನ್ನು ನಿಗದಿ ಪಡಿಸಿದೆ. https://kannadanewsnow.com/kannada/udaipur-two-students-killed-after-bike-hits-divider-in-manipal/ ಈ ಸಂಬಂಧ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಮಾದರಿ ಉಪ ವಿಧಿಗಳು 2015ರ 18ನೇ ಉಪವಿಧಿಯ ಖಂಡ (4)ಕ್ಕೆ ತಿದ್ದುಪಡಿಯನ್ನು ತರಲಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/shimoga-citizens-protest-against-road-chaos/ ತಿದ್ದುಪಡಿ ಅಧಿಸೂಚನೆಯಂತೆ ಕೈಗಾರಿಕಾ ಕಟ್ಟಡಗಳಿಗೆ ಬಿಡಬೇಕಾಗಿರುವಂತ ಖಾಲಿ ಜಾಗದ ಕನಿಷ್ಠ ಅಳತೆಯನ್ನು ಈ ಕೆಳಕಂಡಂತೆ ನಿಗದಿ ಪಡಿಸಿದೆ. 255 ಚದರ ಮೀಟರ್ ಗಳವರೆಗಿನ ಪ್ಲಾಟುಗಳಿಗೆ ಮುಂಭಾಗದಲ್ಲಿ 3 ಮೀಟರ್, ಎಡಬದಿ, ಬಲಬದಿ ಹಾಗೂ ಹಿಂಬದಿಯಲ್ಲಿ 1.5 ಮೀಟರ್ ಬಿಡಬೇಕು. 510…
ಉಡುಪಿ: ಮಳೆಯಿಂದಾಗಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ, ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ಉಡುಪಿಯ ಬೈಂದೂರು ಬಳಿಯಲ್ಲಿ ನಡೆದಿದೆ. https://kannadanewsnow.com/kannada/corona-virus-claimed-944-lives-in-the-state-today-one-person-succumbed-to-the-infection/ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣೆ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಈ ಪರಿಣಾಮ ವಿದ್ಯಾರ್ಥಿಗಳಾದಂತ ಕಲ್ಲೂರು ತರುಣ್ ಕುಮಾರ್ ರೆಡ್ಡಿ(19) ಹಾಗೂ ಆದಿತ್ಯ ರೆಡ್ಡಿ (18) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. https://kannadanewsnow.com/kannada/shimoga-citizens-protest-against-road-chaos/ ಆಂಧ್ರಪ್ರದೇಶ ಮೂಲದವರಾಗಿದ್ದಂತ ಈ ಇಬ್ಬರು ವಿದ್ಯಾರ್ಥಿಗಳು ಮಣಿಪಾಲ ಕಾಲೇಜಿನಲ್ಲಿ ಓದುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಇಂದು ಸಹ ಕೊರೋನಾ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 944 ಮಂದಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದಾನೆ. https://kannadanewsnow.com/kannada/chitradurga-seer-mla-receive-death-threats-doctor-arrested-in-chikkaballapur/ ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬಾಗಲಕೋಟೆ, ಬೀದರ್, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ತಲಾ ಮೂವರಿಗೆ, ಬಳ್ಳಾರಿ, ಬೆಳಗಾವಿ, ಕೋಲಾರ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಐವರಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. https://kannadanewsnow.com/kannada/2023-assembly-elections-will-be-my-last-election-siddaramaiah/ ಬೆಂಗಳೂರು ಗ್ರಾಮಾಂತರ 11, ದಕ್ಷಿಣ ಕನ್ನಡ 16, ಧಾರವಾಡ 17, ಉತ್ತರ ಕನ್ನಡ 11, ಬೆಂಗಳೂರು ನಗರ 799 ಸೇರಿದಂತೆ ರಾಜ್ಯಾಧ್ಯಂತ 944 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3986320ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 670 ಸೇರಿದಂತೆ 3938620 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 7569 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
ಶಿವಮೊಗ್ಗ : ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿ 18 ನೇ ವಾರ್ಡ್ ವಿನೋಬನಗರ ಪೃಥ್ವಿ ಮ್ಯಾನ್ಷನ್ ಎದುರಿನ ಶುಭ ಮಂಗಳ ಮಂಟಪಕ್ಕೆ ಹೋಗುವ ಮುಖ್ಯ ರಸ್ತೆಯ ಅಭಿವಸ್ಥೆಯ ವಿರುದ್ಧ, ಭಾನುವಾರ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಆಡಳಿತಗಳ ವಿರುದ್ಧ ಪ್ರತಿಭಟನೆ ನಡೆಸಿದರು. https://kannadanewsnow.com/kannada/chitradurga-seer-mla-receive-death-threats-doctor-arrested-in-chikkaballapur-2/ ಮುಖ್ಯ ರಸ್ತೆಯಲ್ಲಿ ಗುಂಡಿ-ಗೊಟರು ಬಿದ್ದಿವೆ. ಜೊತೆಗೆ ಹಲವೆಡೆ ರಸ್ತೆ ಒತ್ತುವರಿಯಾಗಿದೆ. ಪಾದಚಾರಿಗಳ ಹೋರಾಟಕ್ಕೆ ಪುಟ್’ಪಾತ್ ಇಲ್ಲವಾಗಿದೆ. ಇದರಿಂದ ಜನ-ವಾಹನ ಸಂಚಾರ ದುಸ್ತರವಾಗಿದೆ. ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಸಮೀಪದಲ್ಲಿಯೇ ಸ್ಮಾರ್ಟ್ ಸಿಟಿವತಿಯಿಂದ ನಡೆಯುತ್ತಿರುವ ಕಾಮಗಾರಿಗಳು ಕೂಡ ಅಪೂರ್ಣವಾಗಿವೆ ಎಂದು ನಿವಾಸಿಗಳು ದೂರಿದ್ದಾರೆ. https://kannadanewsnow.com/kannada/chitradurga-seer-mla-receive-death-threats-doctor-arrested-in-chikkaballapur/ ಇಷ್ಟೆಲ್ಲ ಅವ್ಯವಸ್ಥೆಯಿದ್ದರೂ ಕೂಡ ಆಡಳಿತ ನಾಗರೀಕರ ಅಹವಾಲು ಕೇಳುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಸಂಪೂರ್ಣ ನಿರ್ಲಕ್ಷವಹಿಸಿದೆ. ಸೋಮವಾರ ಕೂಡ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಸ್ಥಳಕ್ಕೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಆಗಮಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ. https://kannadanewsnow.com/kannada/2023-assembly-elections-will-be-my-last-election-siddaramaiah/ ಪ್ರತಿಭಟನೆಯಲ್ಲಿ ಶರತ್, ಚಂದ್ರಶೇಖರ್, ಪುನೀತ್, ರಾಜೇಶ್, ಗಿರೀಶ್,…
ಶಿವಮೊಗ್ಗ : ಜಿಲ್ಲೆಯ ಪ್ರಸಿದ್ಧ ಭದ್ರಾ ಜಲಾಶಯಕ್ಕೆ ( Badra Dam ) ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಡ್ಯಾಂನಿಂದ ಹೊರಬಿಟ್ಟಿರುವ ಜಲರಾಶಿ ಸೊಬಗು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ದೌಡಾಯಿಸಿದ್ದರು. ಈ ಹಿನ್ನಲೆಯಲ್ಲಿ ಭದ್ರಾ ಜಲಾಶಯ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಕಿರಿಕಿರಿ ಅನುಭವಿಸಿದಂತ ಘಟನೆ ನಡೆಯಿತು. https://kannadanewsnow.com/kannada/chitradurga-seer-mla-receive-death-threats-doctor-arrested-in-chikkaballapur/ ಇಂದು ವಾರಾಂತ್ಯ ದಿನವಾದ ಕಾರಣ, ಜಿಲ್ಲೆಯ ತರೀಕೆರೆ ತಾಲೂಕಿನ ಬಿ ಆರ್ ಪಿ ಸಮೀಪದಲ್ಲಿರುವಂತ ಭದ್ರಾ ಜಲಾಶಯ ನೋಡೋದಕ್ಕೆ ನೂರಾರು ಪ್ರವಾಸಿಗರು ಆಗಮಿಸಿದ್ದರು. ತರೀಕೆರೆ-ಶಿವಮೊಗ್ಗ ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ, ಭದ್ರಾ ಜಲಾಶಯದ ನೀರಿನ ನೋಟವನ್ನು ಸವಿಯುತ್ತಾ ನಿಂತ ಕಾರಣ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಕಂಡು ಬಂದಿತು. https://kannadanewsnow.com/kannada/will-not-contest-2023-assembly-elections-from-chamundeshwari-siddaramaiah/ ಟ್ರಾಫಿಕ್ ಜಾಮ್ ನಿಂದಾಗಿ ಆ್ಯಂಬುಲೆನ್ಸ್ ಕೂಡ ಕೆಲ ಕಾಲ ಜಾಮ್ ನಲ್ಲಿ ಸಿಲುಕುವಂತೆ ಆಯ್ತು. ಸ್ಥಳದಲ್ಲಿದ್ದಂತ ಸ್ಥಳೀಯರು, ಪ್ರವಾಸಿಗರೇ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಇನ್ನೂ ಸ್ಥಳದಲ್ಲಿ ಸೂಕ್ತ ಭದ್ರತಾ ಸಿಬ್ಬಂದಿಗಳ ಕೊರತೆ, ವಾಹನಗಳ ನಿಲುಗಡೆಗೆ…
ಚಿತ್ರದುರ್ಗ: ಜಿಲ್ಲೆಯ ಸ್ವಾಮೀಜಿಗಳು ಹಾಗೂ ಇಬ್ಬರು ಬಿಜೆಪಿ ಶಾಸಕರಿಗೆ ಕೊಲೆ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಂತ ಪೊಲೀಸರು, ಇದೀಗ ಈ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರದ ವೈದ್ಯರೊಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. https://kannadanewsnow.com/kannada/will-contest-only-2023-assembly-elections-this-will-be-my-last-election-siddaramaiah/ ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂದುಳಿದ ಮಠಗಳಲ್ಲಿ ಒಂದಾದಂತ ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಳಲ್ಕೆರೆಯ ಶಾಸಕ ಎಂ ಚಂದ್ರಪ್ಪ ಹಾಗೂ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಜುಲೈ.14ರಂದು ಕೆ ಎಸ್ ಪಿ ಆಪ್ ಮೂಲಕ ಕೊಲೆ ಬೆದರಿಕೆ ಸಂದೇಶ ಬಂದಿತ್ತು. https://kannadanewsnow.com/kannada/will-not-contest-2023-assembly-elections-from-chamundeshwari-siddaramaiah/ ಈ ಸಂಬಂಧ ಸ್ವಾಮೀಜಿ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದರೇ, ಶಾಸಕ ಎಂ.ಚಂದ್ರಪ್ಪ ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಬೆದರಿಕೆ ಸಂದೇಶ ಕಳುಹಿಸಿದಂತ ಚಿಕ್ಕಬಳ್ಳಾಪುರದ ವೈದ್ಯ ಡಾ.ತಿಪ್ಪೇರುದ್ರಸ್ವಾಮಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. https://kannadanewsnow.com/kannada/2023-assembly-elections-will-be-my-last-election-siddaramaiah/ ಬಂಧಿತ ವೈದ್ಯ ಡಾ.ತಿಪ್ಪೇರುದ್ರಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಕ್ಲಿನಿಕ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು.…