Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ, ʻಬಡವರ ಹೊಟ್ಟೆ ಮೇಲೆ ಹೊಡೆಯೋ ಕೆಲಸ ʼ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇದೀಗ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಮಾಡಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯೋ ಕೆಲಸ ಮಾಡುತ್ತಿದ್ದಾರೆ. ಮಧ್ಯಮ ವರ್ಗ ಹಾಗೂ ಬಡ ವರ್ಗಗಳಿಗೆ ಇದರಿಂದ ಹೊರೆಯಾಗ್ತಿದೆ. ಎಲ್ಲಾ ವಸ್ತುಗಳ ಮೇಲೆ ದುಬಾರಿ 5 % ಬೆಲೆ ಮಾಡಿದ್ದಾರೆ. ಏರಿಕೆ ವಿರುದ್ಧ ವಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಜರಾತ್: ರಾಜ್ಯದ ದಾಹೋದ್ ಜಿಲ್ಲೆಯ ಮಂಗಲ್ ಮಹುದಿ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲು ಹಳಿತಪ್ಪಿದ ಕಾರಣ ಇಂದು ಗುಜರಾತ್‌ನಲ್ಲಿ ರೈಲು ಸಂಚಾರ ಸದ್ಯ ಸ್ಥಗಿತಗೊಂಡಿದೆ. ವರದಿಗಳ ಪ್ರಕಾರ, ಮಂಗಲ್ ಮಹುದಿ-ಲಿಮ್ಖೇಡಾ ನಿಲ್ದಾಣಗಳ ನಡುವೆ ರೈಲಿನ 16 ಬೋಗಿಗಳು ಹಳಿತಪ್ಪಿದ್ದು, ಇದರಿಂದಾಗಿ ವಿದ್ಯುತ್ ಪೂರೈಕೆಗೆ ಹಾನಿಯಾಗಿದೆ. ಇನ್ನೂ, ಹಳಿತಪ್ಪಿದ ಪರಿಣಾಮ ಮುಂಬೈ-ದೆಹಲಿ ನಡುವೆ ಸಂಚರಿಸುವ ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರೈಲ್ವೇ ಮೂಲಗಳು, ವಡೋದರಾದಿಂದ ಬಂದ ಗೂಡ್ಸ್ ರೈಲು ಉತ್ತರದ ಕಡೆಗೆ ಹೋಗುತ್ತಿದ್ದಾಗ ಹಳಿತಪ್ಪಿದಾಗ ಕೆಲವು ಬೋಗಿಗಳ ಚಕ್ರಗಳು ಬೇರ್ಪಟ್ಟು ಮುರಿದು ಬಿದ್ದವು. ಬೋಗಿಗಳು ಒಂದರ ಮೇಲೊಂದು ಬಿದ್ದಿದ್ದರಿಂದ ಓವರ್ ಹೆಡ್ ವಿದ್ಯುತ್ ಸರಬರಾಜು ಮಾರ್ಗಕ್ಕೆ ಹಾನಿಯಾಗಿದೆ. Gujarat | A goods train derailed near Mangal Mahudi railway station in Dahod district at around 1 am earlier today. Rail traffic movement disrupted. Further details are awaited. pic.twitter.com/ankjEtB3fl…
ಮಧ್ಯಪ್ರದೇಶ: ಧಾರ್ ಜಿಲ್ಲೆಯ ಖಾಲ್ಘಾಟ್ ಸಂಜಯ್ ಸೇತು ಎಂಬಲ್ಲಿ ಮಹಾರಾಷ್ಟ್ರ ರೋಡ್ವೇಸ್ ಬಸ್ ಉರುಳಿಬಿದ್ದ ಪರಿಣಾಮ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ. https://kannadanewsnow.com/kannada/bomb-disposal-squad-school-inspection-no-suspicious-objects-were-found/ ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಾಗಳಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಅವರು ಮಾತನಾಡಿ, 12 ಜನರು ಪ್ರಾಣ ಕಳೆದುಕೊಂಡಿದ್ದು, 15 ಜನರನ್ನು ಇದುವರೆಗೆ ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು. https://twitter.com/ANI_MP_CG_RJ/status/1548911864134107137?ref_src=twsrc%5Etfw%7Ctwcamp%5Etweetembed%7Ctwterm%5E1548911864134107137%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Findia%2F12-dead-as-maharashtra-roadways-bus-falls-off-bridge-madhya-pradeshs-dhar-district-5576785.html
ನವದೆಹಲಿ: ಅಂತರ್ಜಾಲವು ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವಿಷಯವನ್ನು ವೈರಲ್ ಮಾಡುವ ಸ್ಥಳವಾಗಿದೆ. ಅದು ಉಲ್ಲಾಸದ ವೀಡಿಯೊಗಳಾಗಿರಲಿ ಅಥವಾ ಮಾನವೀಯತೆಯ ತುಣುಕುಗಳಾಗಲಿ ಹರಿ ಬಿಡುತ್ತಿರುತ್ತಾರೆ. ಇಂತಹದ್ದೇ ಒಂದು ಮಾನವೀಯತೆ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ನಂಬಿಕೆಯಿಡುವುದು ಕಷ್ಟವಾಗಿರುವ ಈ ಜಗತ್ತಿನಲ್ಲಿ ಈ ವಿಡಿಯೋ ನೋಡಿದ ನಂತ್ರ ನಮ್ಮನ್ನು ನಂಬುವಂತೆ ಮಾಡುತ್ತಾದೆ. ಒಬ್ಬ ಸ್ವಿಗ್ಗಿ ಸವಾರ ಹಾಗೂ ಜೊಮ್ಯಾಟೊ ಬ್ಯಾಗ್ ಹೊತ್ತ ಅವನ ಪ್ರತಿಸ್ಪರ್ಧಿಯ ನಡುವಿನ “ಸುಂದರ ಸ್ನೇಹ”ಕ್ಕೆ ವೃತ್ತಿಪರ ಜೀವನ ಪೈಪೋಟಿ ಅಡ್ಡಿಯಾಗಲಿಲ್ಲ. ದೆಹಲಿಯ ಬಿರು ಬಿಸಿಲಿನಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ಜೊಮ್ಯಾಟೋ ಡೆಲಿವರಿ ಮ್ಯಾನ್ಗೆ ಸ್ವಿಗ್ಗಿ ಸವಾರ ಹೇಗೆ ಸಹಾಯ ಮಾಡಿದ ಎಂಬುದನ್ನು ಆನ್ ಲೈನ್ ನಲ್ಲಿ ವೈರಲ್ ಆಗುತ್ತಿರುವ ವೀಡಿಯೊ ತೋರಿಸುತ್ತದೆ. ಈ ವಾರದ ಆರಂಭದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ತುಣುಕುಗಳು ಮೋಟಾರ್ಸೈಕಲ್ ಸವಾರಿ ಮಾಡುತ್ತಿದ್ದ ಸ್ವಿಗ್ಗಿ ಡೆಲಿವರಿ ಏಜೆಂಟ್ ತನ್ನ ಕೈಯನ್ನು ಚಾಚಿ, ಜೊಮ್ಯಾಟೊ ಸವಾರನು ಆತನ ಕೈ ಹಿಡಿದುಕೊಂಡು ತೆರಳುವುದನ್ನು ನೋಡಬಹುದು. ಇನ್ಸ್ಟಾಗ್ರಾಮ್ ಬಳಕೆದಾರ ಸಣ್ಣಾ ಅರೋರಾ ಎಂಬವರು…
ಜೌನ್‌ಪುರ (ಉತ್ತರ ಪ್ರದೇಶ): ಜೌನ್‌ಪುರದ ಕೊತ್ವಾಲಿ ಪ್ರದೇಶದಲ್ಲಿ ಮಹಿಳೆಯೊಬ್ಬರ ಮನೆಯೊಳಗೆ ಶೌಚಾಲಯದ ಗುಂಡಿಯನ್ನು ಅಗೆಯುವಾಗ ಬ್ರಿಟಿಷರ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಣ್ಯ ಪತ್ತೆಯಾಗಿರುವ ಘಟನೆ ಕಳೆದ ವಾರ ನಡೆದಿದೆ. ಆದ್ರೆ, ಮಹಿಳೆ ನೂರ್ ಜಹಾನ್ ಅವರ ಕುಟುಂಬ ಸದಸ್ಯರು ಮತ್ತು ಕಾರ್ಮಿಕರು ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ವಾರಾಂತ್ಯದಲ್ಲಿ ಪೊಲೀಸರು ಮಾಹಿತಿ ಪಡೆದು ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ನಾಣ್ಯಗಳು (1889-1912 ರ ನಡುವೆ) ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿವೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಕಾರ್ಮಿಕರನ್ನು ವಿಚಾರಣೆ ನಡೆಸುತ್ತಿದ್ದು, ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇಮಾಮ್ ಅಲಿ ರೈನಿ ಅವರ ಪತ್ನಿ ನೂರ್ ಜಹಾನ್ ಅವರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಕಂದಕವನ್ನು ಅಗೆಯುತ್ತಿದ್ದರು. ಅಗೆಯುವ ಸಮಯದಲ್ಲಿ, ತಾಮ್ರದ ಪಾತ್ರೆಯಲ್ಲಿ ಹಲವಾರು ನಾಣ್ಯಗಳು ಪತ್ತೆಯಾಗಿವೆ. ಈ ವಿಷಯವಾಗಿ ಕಾರ್ಮಿಕರ ನಡುವೆ ಜಗಳವಾಗಿದೆ. ಮರುದಿನ ಮತ್ತೆ ಬಂದ ಕಾರ್ಮಿಕರು ಮತ್ತೆ ಅಗೆಯಲು ಪ್ರಾರಂಭಿಸಿದರು. ಈ ವೇಳೆ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಡೆತನದ ಸ್ಕೂಲ್ ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಪ್ರತಿಕ್ರಿಯೆ ನೀಡಿದ್ದಾರೆ. https://kannadanewsnow.com/kannada/heavy-rains-in-chikmagalur-traffic-suspended-due-to-collapse-of-kogre-bridge/ ಇಂದು ಶಾಲೆಗೆ ಬೆಳಗ್ಗೆ ಇ-ಮೇಲ್ ಬಂದ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.ಮಕ್ಕಳನ್ನು ಸೇಫ್ ಯೂನಿಟ್ ಗಳಿಗೆ ಶಿಫ್ಟ್ ಮಾಡಲಾಗಿದೆ.ಶಾಲೆಯನ್ನು ಪರಿಶೀಲನೆ ನಡೆಸಲಾಗಿದೆ ಎಂದರು. https://kannadanewsnow.com/kannada/heavy-rains-in-chikmagalur-traffic-suspended-due-to-collapse-of-kogre-bridge/ ಬಹುತೇಕ ಮುಕ್ತಾಯವಾಗಿದ್ದು, ಪಾರ್ಕಿಂಗ್ ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.ಪರಿಶೀಲನೆ ವೇಳೆ ಯಾವುದೇ ಶಂಕಿತ ವಸ್ತುಗಳು ಪತ್ತೆಯಾಗಿಲ್ಲ.ಈ ಬಗ್ಗೆ ಕೇಸ್ ದಾಖಲು ಮಾಡಿಕೊಳ್ಳಲಾಗುತ್ತೆ.ಯಾರು ಮಾಡಿದ್ದಾರೆ, ಕಾರಣ ಏನು ಎಂಬ ಬಗ್ಗೆ ತನಿಖೆ ಮಾಡಲಾಗುತ್ತೆ.ಸದ್ಯದ ಮಾಹಿತಿ ಪ್ರಕಾರ ಇದೊಂದು ಶಾಲೆಗೆ ಮಾತ್ರ ಬೆದರಿಕೆ ಮೇಲ್ ಬಂದಿದೆ. ಎಂದು ಹೇಳಿದ್ದಾರೆ.
ನವದೆಹಲಿ: ಇಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ಆರಂಭವಾಗಿದ್ದು, ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ( Prime Minister Narendra Modi) ಅವರು ಮೊದಲಿಗೆ ತಮ್ಮ ಮತ ಚಲಾಯಿಸಿದ್ದಾರೆ. #WATCH Prime Minister Narendra Modi votes to elect new President, in Delhi#PresidentialElection pic.twitter.com/pm9fstL46T — ANI (@ANI) July 18, 2022 ಭಾರತದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ರಾಷ್ಟ್ರಪತಿ ಚುನಾವಣೆ ಇಂದು ನಡೆಯುತ್ತಿದ್ದು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ. ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಇಂದು ಮತ ಚಲಾಯಿಸಲಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ಮತದಾನ ಪ್ರಾರಂಭವಾದ್ದು, ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಲಿದೆ. ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸಂಸದರು ಮತ್ತು ಶಾಸಕರು ಮತ ಚಲಾಯಿಸುತ್ತಿದ್ದಾರೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ಇನ್ನೂ, ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇಂದಿನಿಂದ…
ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಇಂದಿನಿಂದ ದ್ವೀಪ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ದೇಶವು ಸಾಮಾಜಿಕ ಅಶಾಂತಿ ಮತ್ತು ದುರ್ಬಲ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ ಎಂದಿರುವ ವಿಕ್ರಮಸಿಂಘೆ, ಇಂದಿನಿಂದ ಜಾರಿಗೆ ಬರುವಂತೆ ದ್ವೀಪ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಸಾಧಾರಣ ಗೆಜೆಟ್ ಅನ್ನು ಬಿಡುಗಡೆ ಮಾಡಿದರು. ಸಾರ್ವಜನಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆ ಮತ್ತು ಸಮುದಾಯದ ಜೀವನಕ್ಕೆ ಅಗತ್ಯವಾದ ಸರಬರಾಜು ಮತ್ತು ಸೇವೆಗಳ ನಿರ್ವಹಣೆಯ ಹಿತಾಸಕ್ತಿಗಳಿಗಾಗಿ ಶ್ರೀಲಂಕಾದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಗೆಜೆಟ್ ಅಧಿಸೂಚನೆ ಹೇಳುತ್ತದೆ ಎಂದು ಸ್ಥಳೀಯ ಮಾಧ್ಯಮ ಔಟ್‌ಲೆಟ್ ಡೈಲಿ ಮಿರರ್ ವರದಿ ಮಾಡಿದೆ. ಸಂವಿಧಾನದ ಪರಿಚ್ಛೇದ 40(1)(C) ರ ಪ್ರಕಾರ, ವಿಕ್ರಮಸಿಂಘೆ ಅವರು ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆಯ ಸೆಕ್ಷನ್ 2 (ಅಧ್ಯಾಯ 40) ರ ಮೂಲಕ ಅವರಿಗೆ ನೀಡಲಾದ ಅಧಿಕಾರಗಳ ಕಾರಣದಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. 1959 ರ ಕಾಯಿದೆ ಸಂಖ್ಯೆ 8, 1978 ರ ಕಾನೂನು ಸಂಖ್ಯೆ…
ಚಿಕ್ಕಮಗಳೂರು: ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಮುಂದುವರೆದಿದೆ. ವರುಣನ ಆರ್ಭಟಕ್ಕೆ ಕೊಗ್ರೆ ಸೇತುವೆ ಕುಸಿತ ಸಂಚಾರ ಬಂದ್ ಆಗಿದೆ. https://kannadanewsnow.com/kannada/all-the-children-are-safe-dont-be-afraid-dk-shivakumars-daughter-aishwarya/ ಶೃಂಗೇರಿ ಯಿಂದ ಹೊರನಾಡು ಸಂಪರ್ಕಿಸುವ ಬೈಪಾಸ್ ರಸ್ತೆ ಸ್ಥಗಿತಗೊಂಡಿದೆ. ಕಳೆದ ವರ್ಷವೂ ಕುಸಿತವಾಗಿದ್ದ ಸೇತುವೆ.ತಾತ್ಕಾಲಿಕವಾಗಿ ಲಘುವಾಹನಕ್ಕೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಈಗ ವರುಣಾಘಾತಕ್ಕೆ ಆ ಸೇತುವೆಯೂ ಕುಸಿತಗೊಂಡಿದೆ.ಮಲೆನಾಡಿನಲ್ಲಿ ಮುಂದುವರೆದ ಮಳೆ ನದಿ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಕುಸಿತಗೊಂಡಿದೆ. ಕೊಗ್ರೆ ಹೊರನಾಡು ಮಧ್ಯೆ ಹಲವು ಗ್ರಾಮಗಳ ಜನ್ರಿಗೆ ಸಮಸ್ಯೆ ತಂದಿಟ್ಟ ಸೇತುವೆ ಕುಸಿದಿದೆ. ಆಟೊ ಬೈಕ್ ಕಾಲ್ನಡಿಗೆ ಕಿರು ಸೇತುವೆ ಯಲ್ಲಿ ಮಾತ್ರ ಅವಕಾಶ ನೀಡಲಾಗಿದೆ.
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಮಾನ್ಸೂನ್ ಎಂಟ್ರಿಯಾಗ್ತಿದ್ದಂತೆ ಅನೇಕ ಗಂಭೀರ ರೋಗಗಳನ್ನು ಸಹ ತನ್ನೊಂದಿಗೆ ತರುತ್ತದೆ. ಈ ರೋಗಗಳು ಮಳೆ, ಕೊಳಕು, ಕೀಟಗಳು ಅಥವಾ ಸೊಳ್ಳೆಗಳಿಂದ ನೀರು ನಿಲ್ಲುವುದರಿಂದ ಉಂಟಾಗುತ್ತವೆ. ಮಳೆಗಾಲದಲ್ಲಿ ಅತಿಯಾದ ಮಳೆಯಿಂದಾಗಿ, ಕೆಲವು ಸ್ಥಳಗಳಲ್ಲಿ ನೀರು ನಿಂತು ಒಂದಲ್ಲ ಒಂದು ಅವಾಂತರ ಎದುರಾಗುತ್ತಲೇ ಇರುತ್ತದೆ. https://kannadanewsnow.com/kannada/monsoon-session-of-parliament-to-begin-today-centre-to-introduce-24-bills/ ಈ ಕಾರಣದಿಂದಾಗಿ ಕೊಳೆ, ಸೊಳ್ಳೆಗಳು ಅಥವಾ ಕೀಟಗಳ ಸಂತಾನೋತ್ಪತ್ತಿಯ ಸಾಧ್ಯತೆ ಹೆಚ್ಚು. ಈ ಋತುವಿನಲ್ಲಿ ಸೋಂಕು ಸಹ ಹೆಚ್ಚಾಗುತ್ತದೆ. ಮಕ್ಕಳಿಂದ ಹಿಡಿದು ವಯಸ್ಕರು ಮತ್ತು ವೃದ್ಧರವರೆಗೆ ಎಲ್ಲರೂ ಈ ರೋಗಗಳು ಅಟ್ಯಾಕ್ ಆಗುತ್ತದೆ . ಈ ರೋಗಗಳಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ, ಜೆಇ, ಮಲೇರಿಯಾ, ಮೆದುಳಿನ ಮಲೇರಿಯಾ, ಟೈಫಾಯಿಡ್, ಹಳದಿ ಜ್ವರ ಸೇರಿವೆ. ಪ್ರಸ್ತುತ, ಟೈಫಾಯಿಡ್ ತೆಲಂಗಾಣದಲ್ಲಿ ಗದ್ದಲವನ್ನೇ ಸೃಷ್ಠಿಸಿತ್ತು. ಇದಕ್ಕಾಗಿ ಆರೋಗ್ಯ ಇಲಾಖೆ ಪ್ರಸಿದ್ಧ ಬೀದಿ ಆಹಾರ ಪಾನಿ ಪುರಿಯನ್ನು ದೂಷಿಸಿದೆ. ತೆಲಂಗಾಣದಲ್ಲಿ, ಜೂನ್ನಲ್ಲಿ 2752 ಟೈಫಾಯಿಡ್ ಪ್ರಕರಣಗಳು ವರದಿಯಾಗಿದ್ದು, ಮೇ ತಿಂಗಳಲ್ಲಿ 2,700 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ, ಕಾಲರಾ…