Subscribe to Updates
Get the latest creative news from FooBar about art, design and business.
Author: KNN IT TEAM
ಶಿವಮೊಗ್ಗ: ಈಗಾಗಲೇ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಿಂದಾಗಿ ನಗರದ ಜನತೆ ಬೆಚ್ಚಿಬಿದ್ದಿದ್ದರು. ಈ ಘಟನೆ ಹಸಿಯಾಗಿರೋ ಮುನ್ನವೇ ಮತ್ತೊಬ್ಬನನ್ನು ಹತ್ಯೆಗೆ ಸಂಚು ರೂಪಿಸಿದ್ದಂತ ಮೂವರು ಸಂಚುಕೋರರನ್ನು ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/name-important-information-for-tur-growers-online-training-on-pest-management-tomorrow/ ಶಿವಮೊಗ್ಗ ನಗರದಲ್ಲಿ ರೌಡಿ ಶೀಟರ್ ಅನಿಲ ಆಲಿಯಾಸ್ ಅಂಬು ಎಂಬಾತನನ್ನು ಹತ್ಯೆಗೆ ಸಂಚು ರೂಪಿಸಿದ್ದಂತ ಮಾಹಿತಿ ಆಧರಿಸಿ, ವಿಘ್ನೇಶ್, ಚಂದನ್ ಮತ್ತು ಕಿರಣ್ ಕುಮಾರ್ ಎಂಬ ಮೂವರನ್ನು ದೊಡ್ಡಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/haveri-applications-invited-from-sportspersons-for-water-adventure-sports-equipment-facility/ ಅಂದಹಾಗೇ ಈ ಮೂವರು ಆರೋಪಿಗಳು ವಿನೋಬ ನಗರ ಪೊಲೀಸ್ ಚೌಕಿಯಲ್ಲಿ ರೌಡಿ ಶೀಟರ್ ಅಣ್ಣಪ್ಪ ಆಲಿಯಾಸ್ ಹೊನ್ನಪ್ಪ ಆಲಿಯಾಸ್ ಹಂದಿ ಅಣ್ಣಿ ಹತ್ಯೆ ಸಂಬಂಧ ಬಂಧಿಸಲಾಗಿದ್ದಂತ ಆರೋಪಿಗಳ ವಿಚಾರಣೆಯ ವೇಳೆಯಲ್ಲಿ, ರೌಡಿ ಶೀಟರ್ ಅನಿಲ ಹತ್ಯೆಯ ಸಂಚು ಬಂಯಲಾಗಿತ್ತು. ಈ ಹಿನ್ನಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಗಲಕೋಟೆ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದರೈತರ ಉಪಯೋಗಕ್ಕಾಗಿ ಜುಲೈ 19 ರಂದು ಮಧ್ಯಾಹ್ನ 3.30 ರಿಂದ 4.30 ಗಂಟೆಯವರೆಗೆ ಗೂಗಲ್ ಮೀಟ್ ಮೂಲಕ ಹೆಸರು ಮತ್ತು ತೊಗರಿ ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. https://kannadanewsnow.com/kannada/accident-relief-scheme-applications-invited-for-registration/ ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು https://meet.google.com/arh-uspd-qru ಗೂಗಲ್ ಮೀಟ್ ಲಿಂಕ್‍ನ್ನು ಒತ್ತಿ ತರಬೇತಿಗೆ ಹಾಜರಾಗುವುದು. ರೈತರು ಈ ಆನ್‍ಲೈನ್ ತರಬೇತಿಯ ಸದುಪಯೋಗವನ್ನು ಪಡೆಯಬೇಕೆಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/haveri-applications-invited-from-sportspersons-for-water-adventure-sports-equipment-facility/
ಹಾವೇರಿ : ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಸೌಲಭ್ಯಕ್ಕಾಗಿ ನಿರ್ವಾಹಕ ಮತ್ತು ಕ್ಲೀನರ್ ಗಳ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ. ನೋಂದಣಿಯಾದ ಫಲಾನುಭವಿಗಳು ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ. ಐದು ಲಕ್ಷ ಹಾಗೂ ಅಪಘಾತದಿಂದ ಶಾಶ್ವತ ದುರ್ಬಲತೆಹೊಂದಿದಾಗ ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ಗರಿಷ್ಠ ರೂ. ಎರಡು ಲಕ್ಷದವರೆಗೆ ಪರಿಹಾರ ನೀಡಲಾಗುವುದು. https://kannadanewsnow.com/kannada/congress-suffering-from-fear-of-defeat-cm-bommai/ ಅಭ್ಯರ್ಥಿಗಳು ರಾಜ್ಯದ ನಿವಾಸಿಯಾಗಿರಬೇಕು ಹಾಗೂ 20 ರಿಂದ 70 ವರ್ಷದೊಳಗಿರಬೇಕು. ಮೋಟಾರು ವಾಹನಗಳ ಕರ್ನಾಟಕ ನಿಯಮಗಳು, 1989 ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನೀಡಲಾಗಿರುವ ಊರ್ಜಿತ ನಿರ್ವಾಹಕ ಪರವಾನಿಗೆಯನ್ನು ಹೊಂದಿರಬೇಕು. ವಾಣಿಜ್ಯ ಸಾರಿಗೆ ವಾಹನ, ಸಂಸ್ಥೆಯಲ್ಲಿ ಹಿಂದಿನ 12 ತಿಂಗಳಿನಲ್ಲಿ ತೊಂಬತ್ತು ದಿನಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸಬೇಕು. ಒಮ್ಮೆ ನೋಂದಣಿಯಾದನಂತರ ನೀಡಲಾದ ಗುರುತಿನ ಚೀಟಿಯು ಮೂರು ವರ್ಷಗಳವರೆಗೂ ಊರ್ಜಿತದಲ್ಲಿರುತ್ತದೆ. ನಂತರ ನವೀಕರಣ ಶುಲ್ಕದೊಂದಿಗೆ ಮತ್ತು ಇತರೆ ನಿಗಧಿಪಡಿಸಿದ ದಾಖಲೆಗಳನ್ನು ನೋಂದಣಾಧಿಕಾರಿಗಳಿಗೆ ಸಲ್ಲಿಸಿ ನವೀಕರಿಸಬೇಕು. https://kannadanewsnow.com/kannada/haveri-applications-invited-from-sportspersons-for-water-adventure-sports-equipment-facility/ ನಿರ್ವಾಹಕ ಮತ್ತು ಕ್ಲೀನರ್‍ಗಳ ನೋಂದಣಿಯಾದ ನಂತರ…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಸಂಸ್ಥೆಯು ಕಾಗ್ನಿಜೆಂಟ್ ಆಫ್ ಕ್ಯಾಂಪಸ್ ಡ್ರೈವ್ ಮೂಲಕ ವಿವಿಧ ಹುದ್ದೆಗಳನ್ನ ಭರ್ತಿ ಮಾಡಲು ಪ್ರಾರಂಭಿಸಿದೆ. ಐಟಿ ಪ್ರೋಗ್ರಾಮರ್ ಅನಾಲಿಸ್ಟ್ ಟ್ರೈನಿ ಮತ್ತು ಐಟಿ ಪ್ರೋಗ್ರಾಮರ್ ಟ್ರೈನಿ ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಬಿಇ, ಬಿ.ಟೆಕ್, ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಅಂದ್ಹಾಗೆ, 2020, 2021, 2022 ಬಾರ್ ಪದವೀಧರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಆಯ್ಕೆ ಪ್ರಕ್ರಿಯೆಗೆ ಬಂದಾಗ, ಆಯ್ಕೆ ಪ್ರಕ್ರಿಯೆಯು ಆರಂಭಿಕ ಸ್ಕ್ರೀನಿಂಗ್, ತಾಂತ್ರಿಕ, SME ಸಂದರ್ಶನ ಮತ್ತು HR ಚರ್ಚೆಯನ್ನು ಆಧರಿಸಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಯುಜಿ ಮತ್ತು ಪಿಜಿ ಅಭ್ಯರ್ಥಿಗಳಿಗೆ ವಾರ್ಷಿಕ 4 ಲಕ್ಷ ಮತ್ತು ಮೂರು ವರ್ಷದ ಯುಜಿ ಅಭ್ಯರ್ಥಿಗಳಿಗೆ ವಾರ್ಷಿಕ 2.52 ಲಕ್ಷಗಳು ಸಂಬಳ ನೀಡಲಾಗುವುದು. ಅರ್ಜಿಗಳಿಗೆ ಕೊನೆಯ ದಿನಾಂಕ ಜುಲೈ 24, 2022 ಆಗಿದ್ದು, ಸಂಪೂರ್ಣ ವಿವರಗಳಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ https://app.joinsuperset.com/company/cognizant/pwd.html ಪರಿಶೀಲಿಸಬಹುದು.
ನವದೆಹಲಿ : 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭರವಸೆ ನೀಡಿತ್ತು. 2017-18 ಮತ್ತು 2021-22ರ ಆರ್ಥಿಕ ವರ್ಷಗಳ ನಡುವೆ ರೈತರ ಆದಾಯ ದುಪ್ಪಟ್ಟಾಗಿದೆ ಎಂದು ಎಸ್ಬಿಐ ರಿಸರ್ಚ್ ಈಗ ವರದಿಯಲ್ಲಿ ಹೇಳಿಕೊಂಡಿದೆ. ಎಸ್ಬಿಐ ರಿಸರ್ಚ್ ಪ್ರಕಾರ, ಕಳೆದ ಐದು ಹಣಕಾಸು ವರ್ಷಗಳಲ್ಲಿ ರೈತರ ಆದಾಯವು 1.3 ರಿಂದ 1.7 ಪಟ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ, ಆಹಾರ ಧಾನ್ಯಗಳ ರಫ್ತು ಸಹ 50 ಬಿಲಿಯನ್ ಡಾಲರ್ʼಗೆ ಏರಿದೆ. ಕೆಲವು ರಾಜ್ಯಗಳಲ್ಲಿ, ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರ ಆದಾಯವು ದುಪ್ಪಟ್ಟಾಗಿದೆ ಎಂದು ವರದಿ ಹೇಳಿದೆ. ಇದರಲ್ಲಿ ಮಹಾರಾಷ್ಟ್ರದ ಸೋಯಾಬೀನ್ ರೈತರು ಮತ್ತು ಕರ್ನಾಟಕದ ಹತ್ತಿ ರೈತರು ಸೇರಿದ್ದಾರೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಕೃಷಿಗೆ ಸಂಬಂಧಿಸಿದ ಜನರ ಆದಾಯದ ದತ್ತಾಂಶವನ್ನು ಸಹ ಬಿಡುಗಡೆ ಮಾಡಿದೆ. ಇದು ಆರು ವರ್ಷಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಸಂಬಂಧಿಸಿದ ಜನರ ಆದಾಯವು ಶೇಕಡಾ 59ರಷ್ಟು ಹೆಚ್ಚಾಗಿದ್ದು, 10,218 ರೂ.ಗೆ…
ಹಾವೇರಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ್ಕೆ ನೇರ ಸಂದರ್ಶನ ಜುಲೈ 21 ರಂದು ಗುರುವಾರ ಸವಣೂರ ಪಟ್ಟಣದ ಕೀರ್ತಿ ಬಿ.ಎ.ಮತ್ತು ಬಿಕಾಂ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. https://kannadanewsnow.com/kannada/congress-suffering-from-fear-of-defeat-cm-bommai/ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐಟಿಐ(ಯಾವುದೇ ಟ್ರೆಡ್), ಬಿ.ಎ., ಬಿಕಾಂ,ಬಿ.ಎಸಿ ವಿದ್ಯಾರ್ಹತೆಯು 18 ರಿಂದ30 ವರ್ಷದೊಳಗಿನ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರು ಕನಿಷ್ಠ ಮೂರು ಬಯೋಡಾಟಾ,ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಸ್ಕ್ ಧರಿಸಬೇಕು ಜಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. https://kannadanewsnow.com/kannada/haveri-applications-invited-from-sportspersons-for-water-adventure-sports-equipment-facility/ ಹೆಚ್ಚಿನಮಾಹಿತಿಗಾಗಿ ಮೊ.82176 13553, 83101 17846 ಹಾಗೂ 94819 30137ನ್ನು ಸಂಪರ್ಕಿಸಲು ಕೋರಲಾಗಿದೆ.
ಹಾವೇರಿ: ಪರಿಶಿಷ್ಟ ಜಾತಿ ಉಪಯೋಜನೆಯಡಿ 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಐದು ಕ್ರೀಡಾ ಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಲ ಸಾಹಸ ಕ್ರೀಡಾ ಉಪಕರಣ ಸೌಲಭ್ಯಕ್ಕಾಗಿ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/former-west-indies-captain-denesh-ramdin-announces-retirement-from-international-cricket/ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮೂಲಕ ಜಲ ಸಾಹಸ ಕ್ರೀಡೆಯಲ್ಲಿ ತರಬೇತಿ ಪಡೆದು ಪ್ರಮಾಣಪತ್ರ ಹೊಂದಿರುವ ಅಥವಾ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ಹೊಂದಿರುವ ಸ್ಪರ್ಧಾತ್ಮಕ ಸಾಹಸ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿರುವ, ಪದಕ ವಿಜೇತ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. https://kannadanewsnow.com/kannada/congress-suffering-from-fear-of-defeat-cm-bommai/ ಆಸಕ್ತರು ನಿಗಧಿತ ಅರ್ಜಿ ನಮೂನೆಯನ್ನು ಹಾವೇರಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಯೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 05-08-2022ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08375-296443 ಸಂಪರ್ಕಿಸಲು ಕೋರಲಾಗಿದೆ.
ಬೆಂಗಳೂರು : ಕಾಂಗ್ರೆಸ್ ( Congress Party ) ಸೋಲಿನ ಭೀತಿಯಿಂದ ನರಳುತ್ತಿದೆ. ಕೆಳಮಟ್ಟದ ರಾಜಕೀಯವನ್ನು ಎಲ್ಲೆಡೆ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. https://kannadanewsnow.com/kannada/former-west-indies-captain-denesh-ramdin-announces-retirement-from-international-cricket/ ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ( President Election 2022 ) ಅಭ್ಯರ್ಥಿಗೆ ಜೆ.ಡಿ.ಎಸ್ ( JDS ) ಮುಖ್ಯಸ್ಥರು ಬೆಂಬಲ ವ್ಯಕ್ತಪಡಿದ್ದಾರೆ. ಕೆಲವು ವಿಚಾರಗಳಲ್ಲಿಯಾದಾರು ಕಾಂಗ್ರೆಸ್ ಒಳ್ಳೆಯ ತತ್ವಗಳನ್ನು ಪಾಲಿಸಬೇಕು. ರಾಷ್ಟ್ರೀಯ ಒಗ್ಗಟ್ಟಿನ ತತ್ವವನ್ನು ಪಾಲಿಸಬೇಕು ಎಂದು ಅಭಿಪ್ರಾಯ ಪಟ್ಟರು. https://kannadanewsnow.com/kannada/major-surgery-on-administrative-machinery-by-state-government-6-ias-officers-transferred/
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ವೆಸ್ಟ್ ಇಂಡೀಸ್ನ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ರಾಮ್ದಿನ್ ( Former West Indies captain and wicketkeeper-batter Denesh Ramdin ) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ( international cricket ) ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಮೂಲಕ ರಾಮ್ದಿನ್ 74 ಟೆಸ್ಟ್, 139 ಏಕದಿನ ಮತ್ತು 71 ಟಿ 20 ಪಂದ್ಯಗಳನ್ನು ಆಡಿದ ನಂತರ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಅವರು 5734 ಅಂತರರಾಷ್ಟ್ರೀಯ ರನ್ ಗಳನ್ನು ಗಳಿಸುವಾಗ ನಾಲ್ಕು ಟೆಸ್ಟ್ ಶತಕಗಳು ಮತ್ತು 2 ಏಕದಿನ ಶತಕಗಳನ್ನು ಗಳಿಸಿದರು. ಅವರು 2015 ರಲ್ಲಿ ಜೇಸನ್ ಹೋಲ್ಡರ್ ಅವರನ್ನು ಬದಲಾಯಿಸುವ ಮೊದಲು ಅವರು ವಿಂಡೀಸ್ ತಂಡದ ಎಲ್ಲಾ ಸ್ವರೂಪಗಳಲ್ಲಿ ನಾಯಕರಾಗಿದ್ದರು. ಆದಾಗ್ಯೂ, ರಾಮ್ದಿನ್ ಫ್ರಾಂಚೈಸಿ ಕ್ರಿಕೆಟ್ ಆಡುವುದನ್ನು ಮುಂದುವರಿಸಲಿದ್ದಾರೆ. https://kannadanewsnow.com/kannada/good-news-for-the-people-of-the-state-prices-of-nandina-products-reduced/ ಅವರು ತಮ್ಮ ನಿವೃತ್ತಿಯ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ರಾಮ್ದಿನ್, “ನಾನು ಅಂತಾರಾಷ್ಟ್ರೀಯ…
ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ( IAS Officer Transfer ) ಮಾಡಿ ಆದೇಶ ಹೊರಡಿಸಿದೆ. https://kannadanewsnow.com/kannada/good-news-for-the-people-of-the-state-prices-of-nandina-products-reduced/ ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಕಮೀಷನರ್ ಆಗಿದ್ದಂತ ಐಎಎಸ್ ಅಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಅವರನ್ನು ಹಿಂದುಳಿದ ವರ್ಗಾಗಗಳ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ. ಈ ಹುದ್ದೆಯಲ್ಲಿದ್ದಂತ ಮೇಜರ್ ಮಣಿವಣ್ಣನ್ ಪಿ ಅವರನ್ನು ವರ್ಗಾವಣೆ ಮಾಡಿದೆ. https://kannadanewsnow.com/kannada/good-news-for-self-employed-aspirants-applications-invited-for-free-two-wheeler-repair-training/ ಇನ್ನೂ ಬೆಸ್ಕಾಂ ಎಂ.ಡಿಯಾಗಿದ್ದಂತ ರಾಜೇಂದ್ರ ಚೋಳನ್.ಪಿ ಅವರನ್ನು ವರ್ಗಾವಣೆ ಮಾಡಿ, ಬೆಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ. ಬೆಸ್ಕಾಂ ಎಂಡಿಯಾಗಿ ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಮಹಂತೇಶ್ ಬೀಳಗಿ ಅವರನ್ನು ನೇಮಿಸಿದೆ. 2012ರ ಐಎಎಸ್ ಅಧಿಕಾರಿ ಶ್ರೀನಿವಾಸ್ ಕೆ ಅವರು ಹುದ್ದೆಯ ನಿರೀಕ್ಷೆಯಲ್ಲಿದ್ದರು. ಅವರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ನೇಮಿಸಿದೆ. ಈ ಹುದ್ದೆಯಲ್ಲಿದ್ದಂತ ಸಂಗಪ್ಪ ಅವರನ್ನು ವರ್ಗಾವಣೆ ಮಾಡಿದೆ. ಗದಗ ಜಿಲ್ಲಾಧಿಕಾರಿಯಾಗಿದ್ದಂತ ಸುಂದರೀಶ್ ಬಾಬು ಎಂ ಅವರನ್ನು, ಕೊಪ್ಪಳ…