Author: KNN IT TEAM

ಮಡಿಕೇರಿ : ರಾಜ್ಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಈ ನಡುವೆ ಕೊಡಗು ಜಿಲ್ಲೆಯಲ್ಲಿ ಭಾರೀ ಶಬ್ದದೊಂದಿಗೆ ಭೂಕುಸಿತ ಉಂಟಾಗಿರುವ ಘಟನೆ ನಡೆದಿದೆ. https://kannadanewsnow.com/kannada/good-news-good-news-for-the-people-of-the-state-prices-of-nandini-products-reduced-nandini-product-price/ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗ ಜನಜೀವನ ಅಸ್ವಸ್ತಗೊಂಡಿದ್ದು, ನಿನ್ನೆ ಭಾರೀ ಶಬ್ದವೊಂದು ಕೇಳಿಸಿದ ನಂತರ ಭೂಕುಸಿತ ಉಂಟಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. 2 ನೇ ಮೊಣ್ಣಂಗೇರಿ ಗ್ರಾಮದಲ್ಲಿ  ಸುಮಾರು 5 ಎಕರೆಯಷ್ಟು ಭೂಮಿ ಕೊಚ್ಚಿ ಬಂದಿದೆ. ಭೂಕುಸಿತಕ್ಕೂ ಮೊದಲು‌ ಭಾರೀ ಶಬ್ಧವೊಂದು ಕೇಳಿಬಂದಿದ್ದು,  ಜನರು ಭಯಭೀತರಾಗಿದ್ದಾರೆ. https://kannadanewsnow.com/kannada/job-alert-department-of-health-and-family-welfare-invites-applications-for-medical-and-paramedical-posts/

Read More

ಬೆಂಗಳೂರು : ಕೆಎಂಎಫ್ ನಿಂದ ನಂದಿನಿ ಉತ್ಪನ್ನಗಳಾದಂತ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರವನ್ನು ಹೆಚ್ಚಿಸಿ ಆದೇಶಿಸಲಾಗಿತ್ತು. ಇದೀಗ ಈ ದರಗಳನ್ನು ಕೊಂಚ ಕಡಿಮೆ ಮಾಡಿದೆ. ಈ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ. ಈ ಬಗ್ಗೆ ಕರ್ನಾಟಕ ಹಾಲು ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ದಿನಾಂಕ 18-07-2022ರಿಂದ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ ಎಸ್ ಟಿ ವಿಧಿಸಿದ ಕಾರಣ, ಜಿಎಸ್ಟಿ ದರದಂತೆ ಪರಿಷ್ಕೃತ ದರವನ್ನು ಹೊರಡಿಸಲಾಗಿತ್ತು. ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರವನ್ನು ಹಿಂಪಡೆದು, ಗ್ರಾಹಕರ ಹಿತ ದೃಷ್ಟಿಯಿಂದ ದಿನಾಂಕ 19-07-2022ರಿಂದ ಜಾರಿಗೆ ಬರುವಂತೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರಗಳನ್ನು ಈ ಕೆಳಗಿನಂತೆ ಮರುಪರಿಷ್ಕರಿಸಲಾಗಿದೆ. ಹೀಗಿದೆ ಪರಿಷ್ಕೃತ ನಂದಿನ ಉತ್ಪನ್ನಗಳ ದರ ಪಟ್ಟಿ

Read More

ಪಶ್ಚಿಮ ಆಫ್ರಿಕಾ: ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಹೆಚ್ಚು ಸಾಂಕ್ರಾಮಿಕ ಎಬೋಲಾ ಮಾದರಿಯ ಕಾಯಿಲೆಯಾದ ಮಾರ್ಬರ್ಗ್ ವೈರಸ್‌(Marburg virus)ನ ಮೊದಲ ಎರಡು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಪರೀಕ್ಷಾ ಫಲಿತಾಂಶಗಳನ್ನು ಸೆನೆಗಲ್ ಪ್ರಯೋಗಾಲಯದಿಂದ ಪರಿಶೀಲಿಸಿದ ನಂತರ ಇದು ಅಧಿಕೃತವಾಗಿ ದೃಢಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮೊದಲ ಪ್ರಕರಣ 26 ವರ್ಷದ ಪುರುಷನಲ್ಲಿ ಕಂಡುಬಂದಿತ್ತು. ಇವರು ಜೂನ್ 26 ರಂದು ಆಸ್ಪತ್ರೆಗೆ ದಾಖಲಾದ ಒಂದು ದಿನದ ನಂತರ ನಿಧನರಾದರು. ಎರಡನೇ ಪ್ರಕರಣವು, 51 ವರ್ಷದ ಪುರುಷನಲ್ಲಿ ಕಂಡುಬಂದಿದ್ದು, ಜೂನ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಅದೇ ದಿನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ವೈರಸ್‌ ಪಶ್ಚಿಮ ಆಫ್ರಿಕಾದಲ್ಲಿ ಎರಡನೇ ಬಾರಿಗೆ ರೋಗ ಪತ್ತೆಯಾಗಿದೆ. ಮಾರ್ಬರ್ಗ್ ವೈರಸ್ ಎಂದರೇನು? ಮಾರ್ಬರ್ಗ್ ವೈರಸ್ ಕಾಯಿಲೆ (MVD), ಇದನ್ನು ಮೊದಲು ಮಾರ್ಬರ್ಗ್ ಹೆಮರಾಜಿಕ್ ಜ್ವರ ಎಂದು ಕರೆಯಲಾಗುತ್ತಿತ್ತು. WHO ಪ್ರಕಾರ, ಇದು ತೀವ್ರವಾದ ಮತ್ತು ಆಗಾಗ್ಗೆ ಕಾಣಿಸಿಕೊಳ್ಳುವ ಮಾರಣಾಂತಿಕ ಹೆಮರಾಜಿಕ್ ಜ್ವರವಾಗಿದೆ. ಮಾರ್ಬರ್ಗ್ ಎಬೋಲಾದಂತೆ ಫಿಲೋವೈರಸ್ ಆಗಿದೆ. ಈ…

Read More

ಚಿಕ್ಕಬಳ್ಳಾಪುರ : ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/karnataka-weather-report-yellow-alert-issued-in-9-districts-for-2-more-days-of-heavy-rains-in-the-state/ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2022-23ನೇ ಸಾಲಿನ ಆರ್.ಓ.ಪಿ ಅನುಮೋದನೆಯಂತೆ. (31-03-2023ರ ಅಂತ್ಯದವರೆಗೆ) ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಗುತ್ತಿಗೆ ಆಧಾರದಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ನೇಮಕಾತಿ ಅಧಿಸೂಚನೆ ವಿವರಗಳನ್ನು https://chikkaballapur.nic.in ವೆಬ್‌ಸೈಟ್‌ನಲ್ಲಿ ಲಗತ್ತಿಸಲಾಗಿದ್ದು, ಆನ್‌ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/students-to-note-student-concessional-bus-passes-to-be-issued/

Read More

ಬೆಂಗಳೂರು : ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಇನ್ನೂ ಎರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://kannadanewsnow.com/kannada/delhi-gang-selling-new-born-babies-busted-7-arrested-police/ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ದಕ್ಷಿಣ ಒಳನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. https://kannadanewsnow.com/kannada/bigg-news-immediate-relief-to-farmers-who-suffered-crop-losses-due-to-heavy-rains-revenue-minister-r-ashoka/ ಇಂದು ಉತ್ತರ ಒಳನಾಡಿನ ಬೆಳಗಾವಿ, ಬೀದರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಳವಾಗುವ ಸಾಧ್ಯತೆಯಿದ್ದು, ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40 ಕಿ.ಮೀ ನಿಂದ 50 ಕಿ.ಮೀ ಇದೆ. ಈ ವೇಗವು 48 ಗಂಟೆಗಳ ಅವಧಿಯಲ್ಲಿ 60 ಕಿ.ಮೀ. ತಲುಪುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ…

Read More

ದೆಹಲಿ: ನವಜಾತ ಶಿಶುಗಳನ್ನು ದತ್ತು ನೀಡುವ ನೆಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ಅನ್ನು ದೆಹಲಿ ಪೊಲೀಸರು ಬೇಧಸಿದ್ದು, ಐವರು ಮಹಿಳೆಯರು ಸೇರಿದಂತೆ ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಇದರೊಂದಿಗೆ ಎರಡೂವರೆ ತಿಂಗಳ ಮಗುವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳನ್ನು ಬಬ್ಲು ಶಾ (28), ಬರ್ಖಾ (28), ವೀಣಾ (55), ಮಧು ಶರ್ಮಾ (50), ಜ್ಯೋತಿ (32), ಪವನ್ (45), ಮತ್ತು ಸಲ್ಮಿ ದೇವಿ ಎಂದು ಗುರುತಿಸಲಾಗಿದೆ. ಇವರನ್ನು ಕ್ರೈಂ ಬ್ರಾಂಚ್‌ನ ತಂಡವೊಂದು ಬಂಧಿಸಿದೆ. ಖಚಿತ ಮಾಹಿತಿ ಮೇರೆಗೆ ಉತ್ತಮ್‌ನಗರದ ಆಟೋ ಸ್ಟ್ಯಾಂಡ್ ಬಳಿ ಬಲೆ ಬೀಸಿದ್ದು, ಗಂಡು ಮಗುವನ್ನು ಮಾರಾಟ ಮಾಡಲು ಬಂದಿದ್ದ ನಾಲ್ವರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಂಡು ಮಗುವೊಂದನ್ನು 6.5 ಲಕ್ಷಕ್ಕೆ ಮಾರಾಟ ಮಾಡುವಾಗ ಈ ಗ್ಯಾಂಗ್‌ ತಗಲಾಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. https://kannadanewsnow.com/kannada/good-news-good-news-for-education-department-employees-state-govt-orders-promotion-to-fda/ https://kannadanewsnow.com/kannada/bigg-news-dengue-cases-on-the-rise-in-bengaluru-more-than-350-people-infected-in-a-month/

Read More

ವಿಜಯಪುರ : ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2022-23ನೇ ಸಾಲಿನಲ್ಲಿ ಸೇವಾ ಸಿಂಧು ಯೋಜನೆಯಡಿ ವಿದ್ಯಾರ್ಥಿ ರಿಯಾಯತಿ ಪಾಸ್ ಅರ್ಜಿ ಪಾರಂಭವಾಗಿದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳು ಸೇವಾ ಸಿಂಧು ಯೋಜನೆಯಡಿ ವಿದ್ಯಾರ್ಥಿ ರಿಯಾಯತಿ ಪಾಸ್‌ಗಳಿಗೆ ಅರ್ಜಿ ಸಲ್ಲಿಸಿ, ಅವಶ್ಯಕ ದಾಖಲೆಗಳನ್ನು ಹಾಗೂ ನಿಗದಿಪಡಿಸದ ಪಾಸ್ ದರವನ್ನು ಭರಣ ಮಾಡಿ ಪಾಸ್ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕೋರಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉಚಿತ ರಿಯಾಯತಿ ಬಸ್ ಪಾಸ್‌ಗಳನ್ನು ಪಡೆಯಲು ಕೋರಲಾಗಿದೆ. ಅದರಂತೆ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜುಲೈ 16ರವರೆಗೆ ಉಚಿತವಾಗಿ ಪ್ರಯಾಣಿಸಲು ಹಾಗೂ ಆಗಸ್ಟ್-2022ರವರೆಗೆ ಎರಡು ತಿಂಗಳ ಪಾಸ್ ಮೊತ್ತವನ್ನು ಪಾವತಿಸಿ, ಬಸ್ ಪಾಸ್ ಅವಧಿಯನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಉಚಿತವಾಗಿ ಪ್ರಯಾಣಿಸಲು ನೀಡಿದ ಕಾಲಾವಕಾಶ ಮುಗಿದಿದ್ದು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಸ್ ಕೌಂಟರಗಳಿಗೆ ಸಂಪರ್ಕಿಸಿ, ತಮ್ಮ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಹೊಸ ಬಸ್ ಪಾಸ ಪಡೆದುಕೊಳ್ಳಬಹುದಾಗಿದೆ ಎಂದು ಕಲ್ಯಾಣ…

Read More

ಮುಂಬೈ (ಮಹಾರಾಷ್ಟ್ರ) : ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಸೋಮವಾರ ‘ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಷನ್’ಗಳನ್ನು ಆಚರಿಸುವ ವಾರದ ಆರಂಭದ ಮುನ್ನಾದಿನವೇ ತ್ರಿವರ್ಣ ದೀಪಗಳಿಂದ ಕಂಗೊಳಿಸಿದೆ. ಸೋಮವಾರ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ” ಆಚರಣೆಯ ಅಂಗವಾಗಿ ಆಯೋಜಿಸಲಾದ ವಿವಿಧ ಚಟುವಟಿಕೆಗಳೊಂದಿಗೆ “ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಷನ್ಸ್” ಕಾರ್ಯಕ್ರಮದ ಸಾಂಪ್ರದಾಯಿಕ ವಾರಕ್ಕೆ ಸೆಂಟ್ರಲ್ ರೈಲ್ವೆ ಸ್ಮರಣೀಯ ಆರಂಭವನ್ನು ನೀಡಿದೆ. ಅನಂತ್ ಲಕ್ಷ್ಮಣ್ ಗುರವ್ ಮತ್ತು ಮೋತಿಲಾಲ್ ಶಂಕರ್ ಘೋಂಗಡೆ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು 7 ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳು ಐತಿಹಾಸಿಕ ಪಂಜಾಬ್ ಮೇಲ್ ಅನ್ನು ಕೇಂದ್ರ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಲಹೋಟಿ, ಮುಂಬೈ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಲಭ್ ಗೋಯೆಲ್ ಅವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿದರು. Maharashtra | Mumbai’s Chhatrapati Shivaji Maharaj Terminus illuminated with tri-colour lights on…

Read More

ಬೆಂಗಳೂರು : ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಈ ಬಾರಿ ಶೀಘ್ರ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. https://kannadanewsnow.com/kannada/bigg-news-all-schools-madarsas-in-the-state-to-be-hoisted-from-august-11-education-minister-b-c-nagesh/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಅತಿವೃಷ್ಟಿಯಾಗಿದ್ದು, ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆ ಸಂಪೂರ್ಣವಾಗಿ ನಿಂತ ಬಳಿಕ ಸಮೀಕ್ಷೆ ಪೂರ್ಣಗೊಳಿಸಿ ಕೇಂದ್ರಕ್ಕೆವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರದಿಂದ ಶೀಘ್ರ ಪರಿಹಾರ ಹಣ ನೀಡಲಾಗುವುದು. ನಂತರ ಕೇಂದ್ರದಿಂದ ಬರುವ ಹಣವನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/good-news-good-news-for-the-farming-community-an-ambulance-to-the-doorstep-for-the-protection-of-cattle/

Read More

ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು, ಪಿಯು ಕಾಲೇಜುಗಳು ಹಾಗೂ ಮದರಸಾಗಳಲ್ಲೂ ಆಗಸ್ಟ್ 11 ರಿಂದ 17 ರವರೆಗೆ ರಾಷ್ಟ್ರಧ್ವಜಾರೋಹಣ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. https://kannadanewsnow.com/kannada/good-news-good-news-for-the-farming-community-an-ambulance-to-the-doorstep-for-the-protection-of-cattle/ ಭಾರತ ಸ್ವಾತಂತ್ರ್ಯದ ಅಮೃ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಹಾಊ ಮದರಸಾಗಳಲ್ಲಿ ಧ್ವಜಾರೋಹಣದ ಅಭಿಯಾನದ ಜೊತೆಗೆ ರಾಷ್ಟ್ರಭಕ್ತಿ ಮೂಡಿಸುವ ಸ್ವಾತಂತ್ರ್ಯದ ತ್ಯಾಗ, ಬಲಿದಾನ, ಸ್ಮರಣೆಯ ಗೀತೆ, ಗಾಯನ, ಕ್ವಿಚ್, ಪ್ರಬಂಧ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-news-not-satisfied-with-99-9-per-cent-jee-topper-ready-for-2nd-session-again-do-you-know-the-reason/ https://kannadanewsnow.com/kannada/bigg-news-major-surgery-from-state-government-to-administrative-machinery-7-ias-officers-transferred/

Read More