Author: KNN IT TEAM

ಮಹಾರಾಷ್ಟ್ರ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಮುಂಬೈನ ಅವರ ನಂದನವನ ಬಂಗಲೆಯಲ್ಲಿ ಬಾಲಕಿಯ ನಡುವಿನ ಸಂವಾದದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿರುವ ಅನ್ನದಾ ದಾಮ್ರೆ ಎಂಬ ಬಾಲಕಿ, ʻಅಸ್ಸಾಂನಲ್ಲಿ ಪ್ರವಾಹ ಉಂಟಾದಾಗ ನೀವು ಜನರಿಗೆ ಸಹಾಯ ಮಾಡಲು ನೀರಿನಲ್ಲಿ ಅಲೆದಾಡಿದ್ದೀರಿ. ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುವ ಮೂಲಕ ನಾನು ಮುಖ್ಯಮಂತ್ರಿಯಾಗಬಹುದೇ?ʼ ಎಂದು ಪ್ರಶ್ನಿಸಿದ್ದಾಳೆ. #WATCH | After meeting Maharashtra CM Eknath Shinde at his Nandanvan bungalow in Mumbai, a girl Annada Damre requested him to take her to Guwahati during Diwali vacation and also asked if she could become the CM by helping flood-affected people just like he did? (Source: CMO) pic.twitter.com/WSdUN16jHq — ANI (@ANI) July 18, 2022 ಇದಕ್ಕೆ ಉತ್ತರಿಸಿದ ಏಕನಾಥ್…

Read More

ಅಸ್ಸಾಂ: ಪರಾರಿಯಾದ ನಾಯಕ ಪರೇಶ್ ಅಸೋಮ್ ಅಲಿಯಾಸ್ ಪರೇಶ್ ಬರುವಾ ನೇತೃತ್ವದ ಭಯೋತ್ಪಾದಕ ಗುಂಪು ಉಲ್ಫಾ (ಐ) ಅನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಮಾಡಿದ ಆರೋಪದ ಮೇಲೆ ಅಸ್ಸಾಂನಲ್ಲಿ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಉಲ್ಫಾ ಗುಂಪನ್ನು ಬೆಂಬಲಿಸಿದ ಆರೋಪದ ಮೇಲೆ ತಂಗ್ಲಾ ಕಾಲೇಜಿನ ವಿದ್ಯಾರ್ಥಿ ಪ್ರಮೋದ್ ಕಲಿತಾ (22) ಎಂಬಾತನನ್ನು ಉದಲ್ಗುರಿ ಜಿಲ್ಲಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇಂಗ್ಲಿಷ್ ಮತ್ತು ಅಸ್ಸಾಮಿ ಭಾಷೆಯಲ್ಲಿನ ತನ್ನ ಪೋಸ್ಟ್‌ನಲ್ಲಿ, ʻಉದಲಗುರಿಯ ಬೋರಂಗಬರಿಯ ನಿವಾಸಿ ಕಲಿತಾ, ಉಲ್ಫಾ-I ಮತ್ತು ಗುಂಪಿನ ನಾಯಕ ಪರೇಶ್ ಬರುವಾಗಾಗಿ ತನ್ನ ಪ್ರಾಣವನ್ನು ಅರ್ಪಿಸಲು ಸಿದ್ಧನಿದ್ದೇನೆ. ನಾನು ಯಾವಾಗಲೂ ಉಲ್ಫಾವನ್ನು ಬೆಂಬಲಿಸುತ್ತೇನೆʼ ಎಂದು ಬರೆದುಕೊಂಡಿದ್ದಾನೆ. ಬಂಧಿತನ ವಿರುದ್ಧ ಕಲೈಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಮತ್ತು ಕಲಿತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ…

Read More

ಬೆಂಗಳೂರು : ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಸಂಪೂರ್ಣ ಭಿಕ್ಷಾಟನೆ ನಿರ್ಮೂಲನೆ ಮಾಡಲು ಭಿಕ್ಷಾಟನೆ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. https://kannadanewsnow.com/kannada/bigg-news-rowdy-sheeter-hundi-anni-murder-case-in-shimoga-accused-surrender-to-police/ ಭಿಕ್ಷಾಟನೆ ನಿರ್ಮೂಲನೆ ಕುರಿತಂತೆ ಗೃಹ ಸಚಿವ ಅರಗಜ್ಞಾನೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಜೊತೆಗೆ ಮಹತ್ವದ ಸಭೆ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಸಂಪೂರ್ಣವಾಗಿ ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-news-government-offices-must-compulsorily-deal-in-kannada-dr-t-s-nagabharana/ ಭಿಕ್ಷಾಟನೆ ಮಾಫಿಯಾ ನಿಯಂತ್ರಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಿಸಿ, ಬಾಲಗೃಹ, ಸರ್ಕಾರೇತರ ಸಂಸ್ಥೆಗಳು, ವಸತಿ ಮಂದಿಗಳಲ್ಲಿ ಪುನವರ್ಸತಿ ಕಲ್ಪಿಸಲು ನಿರ್ಧರಿಸಲಾಗಿದೆ. ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ. ಇನ್ನು ಭಿಕ್ಷಾಟನೆ ನಿಯಂತ್ರಿಸಲು ಬೆಂಗಳೂರಿನಲ್ಲಿ 8 ಪೊಲೀಸ್ ವಿಭಾಗಗಳಲ್ಲಿ ತಂಡಗಳನ್ನು ರಚಿಸಿ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ. ಮಕ್ಕಳನ್ನು ಭಿಕ್ಷಾಟನೆಗಾಗಿ ಬೀದಿಗೆ ಬಿಡುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು…

Read More

ಶಿವಮೊಗ್ಗ : ಕಳೆದ ವಾರ ಶಿವಮೊಗ್ಗ ನಗರದಲ್ಲಿ  ರೌಡಿಶೀಟರ್ ಹಂದಿ ಅಣ್ಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು  ಪೊಲೀಸರಿಗೆ ಶರಣಾಗಿದ್ದಾರೆ. ಕಳೆದ ವಾರ ನಟೋರಿಯಸ್‌ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಹತ್ಯೆ ಮಾಡಿದ ಆರೋಪಿಗಳು ಚಿಕ್ಕಮಗಳೂರು ಎಸ್ ಪಿ ಅಕ್ಷಯ್ ಮುಂದೆ ಶರಣಾಗಿದ್ದಾರೆ. ಕಳೆದ ವಾರ ಶಿವಮೊಗ್ಗ ನಗರದಲ್ಲಿ ಇನೋವಾ ಕಾರಿನಲ್ಲಿ ಬಂದ ಆರೋಪಿಗಳು ಹಂದಿ ಅಣ್ಣಿಯನ್ನು ಲಾಂಗಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಹಂದಿ ಅಣ್ಣಿ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದ.  

Read More

ಬೆಳಗಾವಿ :  ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸಬೇಕು. ಯಾವುದೇ ಮಾಹಿತಿ, ಹಾಗೂ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ಅಧಿಕಾರಿಗಳು ಸರ್ಕಾರಿ ಕೆಲಸ ನಿರ್ವಹಣೆಯ ಜೊತೆಗೆ ಕನ್ನಡವನ್ನು ಬೆಳೆಸಲು ನಿರಂತರ ಶ್ರಮಿಸಬೇಕು ಎಂದು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಟಿ.ಎಸ್.ನಾಗಾಭರಣ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜು.18) ನಡೆದ ಕನ್ನಡ ಅನುಷ್ಠಾನದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರಿಗೆ ಕನ್ನಡದಲ್ಲಿ ಸುಲಭವಾಗಿ ಮಾಹಿತಿ ಸಿಗುವಂತೆ ಇಲಾಖೆಯ ಜಾಲತಾಣಗಳು ಕನ್ನಡಲ್ಲಿ ಇರಬೇಕು. ಸರ್ಕಾರಿ ಇಲಾಖೆಯ ವೆಬ್ ಸೈಟ್ ಗಳಲ್ಲಿ ಸಂಬಂಧಿಸಿದ ಇಲಾಖೆಯ ಲೋಗೋ ಕಡ್ಡಾಯವಾಗಿರಬೇಕು. 30 ದಿನಗಳ ಒಳಗಾಗಿ ಬಾಕಿ ಇರುವ ವೆಬ್ ಸೈಟ್ ಕನ್ನಡದಲ್ಲಿ ಚಾಲನೆ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಿಕ್ಷಣ, ಕಚೇರಿ ವ್ಯವಹಾರಗಳು, ಪತ್ರ ವ್ಯವಹಾರಗಳು ಎಲ್ಲವೂ ಕನ್ನಡದಲ್ಲಿಯೇ ಇರಬೇಕು. ಕನ್ನಡ ಪ್ರಥಮ ಭಾಷೆಯಾಗಿ ಅಥವಾ ಐಚ್ಛಿಕ ಭಾಷೆಯಾಗಿ ಶಿಕ್ಷಣ ನೀಡಬೇಕು ಹಾಗೂ ಪ್ರತಿ ಖಾಸಗಿ…

Read More

ಬೆಳಗಾವಿ : ಇತ್ತೀಚಿನ ಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾಗೂ ಮನೆಹಾನಿಯನ್ನು ನಿಖರವಾಗಿ ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅತಿವೃಷ್ಟಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಚಿಕ್ಕೋಡಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು‌ ಮಾತನಾಡಿದರು. ಇತ್ತೀಚಿನ ಮಳೆಯಿಂದ 877 ಹೆಕ್ಟೇರ್ ಪ್ರದೇಶ ಜಲಾವೃತಹೊಂಡಿರುವುದರಿಂದ ನೀರು ಸರಿದ ಬಳಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಇದಲ್ಲದೇ ಹಾನಿಗೊಳಗಾಗಿರುವ ಒಟ್ಟಾರೆ 775  ಮನೆಗಳಿಗೂ  ಕೂಡ ಮಾರ್ಗಸೂಚಿ ಪ್ರಕಾರ ತಕ್ಷಣವೇ ಪರಿಹಾರವನ್ನು ನೀಡಬೇಕು ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಇದುವರೆಗೆ ಎಲ್ಲ ಜಲಾಶಯಗಳು ಸರಾಸರಿ ಶೇ.60 ರಷ್ಟು ಮಾತ್ರ ಭರ್ತಿಯಾಗಿರುತ್ತವೆ. ಆಲಮಟ್ಟಿ ಜಲಾಶಯದಿ‌ಂದ ಕೂಡ ಪರಿಸ್ಥಿತಿ ಆಧರಿಸಿ 1.25 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಸಂಭವನೀಯ ಪ್ರವಾಹ ಹಿನ್ನೆಲೆಯಲ್ಲಿ ರಚಿಸಲಾಗಿರುವ ತಂಡಗಳು ಹಾಗೂ ನೋಡಲ್ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು.…

Read More

ದೆಹಲಿ: ಸಾಕು ಪ್ರಾಣಿಯಾದ ಮೇಕೆಯೊಂದನ್ನು ಮಾಲೀಕ ಮಾರಾಟ ಮಾಡಿದ್ದು, ಈ ವೇಳೆ ಮೇಕೆ ಮಾಲೀಕನ ಹೆಗಲ ಮೇಲೆ ತನ್ನ ಮುಖವನ್ನಿಟ್ಟು ಅಳುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಈ ವಿಡಿಯೋ ನೋಡಿದವರ ಕಣ್ಣಂಚಲ್ಲಿ ನೀರು ತರಿಸುತ್ತಿದೆ. ವಿಡಿಯೋದಲ್ಲಿ, ಮಾಲೀಕ ಬೇರೊಬ್ಬರಿಗೆ ಮೇಕೆಯನ್ನು ಮಾರಾಟ ಮಾಡುತ್ತಿದ್ದಾನೆ. ಈ ವೇಳೆ ಮೇಕೆ ಮಾಲೀಕನ ಹೆಗಲ ಮೇಲೆ ತನ್ನ ಮುಖವನ್ನಿಟ್ಟು ಅಳುತ್ತಿರುವ ದೃಶ್ಯವನ್ನು ನೋಡಬಹುದು. Goat brought to be sold hugs owner, cries like human 💔😭 pic.twitter.com/k5LwYRKDqW — Ramasubramanian V. Harikumar 💎 (@Ram_Vegan) July 15, 2022 ಈ ವೀಡಿಯೊವನ್ನು @ram_vegan ಎನ್ನುವವರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಈ ಪೋಸ್ಟ್ ನ್ನು ಶೇರ್‌ ಮಾಡಿದ್ದಾರೆ. ವೀಡಿಯೊವನ್ನು ಚಿತ್ರೀಕರಿಸಿದ ಸ್ಥಳವನ್ನು ಟ್ವಿಟರ್ ಬಳಕೆದಾರರು ಬಹಿರಂಗಪಡಿಸಿಲ್ಲ. ಆದಾಗ್ಯೂ, ಈದ್ ಉಲ್ ಅಧಾ ಸಮಯದಲ್ಲಿ ಮೇಕೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತಂದಾಗ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ…

Read More

ಬೆಂಗಳೂರು : ಮೈಸೂರು ದಸರಾ ಮಹೋತ್ಸವ 2022 ರ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. https://kannadanewsnow.com/kannada/us-restaurant-sells-dosa-as-naked-crepe-for-rs-1400-and-its-a-hard-pass-for-desis/ ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದಸರಾ ಮಹೋತ್ಸವ ಕುರಿತಂತೆ ಸಭೆ ನಡೆಸಲಿದ್ದು, ಇಂದು ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು, ಡಿಸಿ ಭಾಗಿಯಾಗಲಿದ್ದಾರೆ. https://kannadanewsnow.com/kannada/good-news-good-news-for-the-people-of-the-state-prices-of-nandini-products-reduced-nandini-product-price/ ಈ ಬಾರಿ ಮೈಸೂರು ದಸರಾ ಮಹೋತ್ಸವ ಹೇಗೆ ನಡೆಸಬೇಕು? ಮೈಸೂರು ದಸರಾ ಉದ್ಘಾಟಕರಾಗಿ ಯಾರನ್ನು ಆಹ್ವಾನಿಸಬೇಕು ಎಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎನ್ನಲಾಗಿದೆ.

Read More

ಬಳ್ಳಾರಿ : ಹಂಪಿ ಎಕ್ಸ್ ಪ್ರೆಸ್ ರೈಲಿನ ಗಾಲಿಗಳಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ನಡೆದಿದೆ. https://kannadanewsnow.com/kannada/us-restaurant-sells-dosa-as-naked-crepe-for-rs-1400-and-its-a-hard-pass-for-desis/ ತಾಂತ್ರಿಕ ದೋಷದ ಹಿನ್ನಲೆ ಹಂಪಿ ಎಕ್ಸ್‌ಪ್ರೆಸ್‌ ರೈಲಿನ ಗಾಲಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ  ರೈಲಿನ ಎಂಜಿನ್ ಸ್ಟಾರ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಹಿಂದಿನ ಗಾಲಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ರೈಲ್ವೆ ಸಿಬ್ಬಂದಿ ದೋಷವನ್ನು ಸರಿಪಡಿಸಿದ ನಂತರ ರೈಲು ಸಂಚಾರ ಆರಂಭಿಸಲಾಗಿದೆ. ರೈಲುಗಳ ಗಾಲಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ಹುಬ್ಬಳ್ಳಿಯಿಂದ ಮೈಸೂರಿಗೆ ತೆರಳುತ್ತಿದ್ದ ಹಂಪಿ ಎಕ್ಸಪ್ರೇಸ್ ರೈಲು‌ 2 ಗಂಟೆ ತಡವಾಗಿ ನಿರ್ಗಮಿಸಿದೆ. https://kannadanewsnow.com/kannada/good-news-good-news-for-the-people-of-the-state-prices-of-nandini-products-reduced-nandini-product-price/

Read More

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಭಾರತೀಯ ತಿನಿಸುಗಳಿಗೆ ಎಲ್ಲರೂ ಮನಸೋಲುವುದು ಖಚಿತ. ವಿದೇಶಗಳಲ್ಲೂ ಸಹ ಇಲ್ಲಿನ ತಿನಿಸುಗಳನ್ನು ಸವಿಯಲು ಜನ ಹಿಂದೆಮುಂದೆ ನೋಡಲ್ಲ. ಆದ್ರೆ, ವಿವಿಧ ಭಕ್ಷ್ಯಗಳ ಬೆಲೆ ಎಲ್ಲಿಗೂ ಇಲ್ಲಿಗೂ ಅಜಗಜಾಂತರ. ನೀವು ವಿದೇಶಕ್ಕೆ ಹೋಗಿ ಭಾರತೀಯ ಭಕ್ಷ್ಯಗಳನ್ನು ಆರ್ಡರ್‌ ಮಾಡಿದ್ರೆ, ನೀವು ಮೂರ್ಚೆ ಹೋಗೋದು ಗ್ಯಾರಂಟಿ. ಇದಕ್ಕೆ ಕಾರಣ ಅವುಗಳ ಬೆಲೆ… ಹೌದು, ಕೆಲವೊಂದು ರೆಸ್ಟೊರೆಂಟ್‌ಗಳಲ್ಲಿ ತಿನ್ನುವ ಆಹಾರಗಳ ಬೆಲೆ ನೋಡಿದ್ರೆ, ತಿನ್ಬೇಕು ಅನ್ನೋ ಮನಸ್ಸೇ ಆಗಲ್ಲ. ಇಲ್ಲೊಂದು ರೆಸ್ಟೊರೆಂಟ್‌ನಲ್ಲೂ ಕೂಡ ಗ್ರಾಹಕರಿಗೆ ಇದೇ ರೀತಿಯ ಅನುಭವವಾಗಿದೆ. ಯುಎಸ್ ನ ಇಂಡಿಯನ್ ಕ್ರೆಪ್ ಕಂ ಎಂಬ ರೆಸ್ಟೊರೆಂಟ್‌ನಲ್ಲಿ ಭಾರತೀಯ ತಿನಿಸುಗಳಾದ ಸಾದಾ ದೋಸೆ ಮತ್ತು ಮೆದು ವಡೆಯನ್ನು “ನೇಕೆಡ್ ಕ್ರೆಪ್ಸ್” ಮತ್ತು “ಡಂಕ್ಡ್ ಡೋನಟ್ ಡಿಲೈಟ್” ಎಂಬ ವಿಲಕ್ಷಣ ಹೆಸರಿನಿಂದ ಹೆಸರಿಸಲಾಗಿದೆ. ಮೆನುವಿನಲ್ಲಿ “ನೇಕೆಡ್ ಕ್ರೆಪ್ಸ್” ಮತ್ತು “ಡಂಕ್ಡ್ ಡೋನಟ್ ಡಿಲೈಟ್” ಎಂಬ ಹೆಸರು, ಬೆಲೆ ನೋಡಿ ದಂಗಾಗಿದ್ದಾರೆ. ಇಲ್ಲಿ, “ಸ್ಮಾಶ್ಡ್ ಪೊಟಾಟೊ ಕ್ರೇಪ್” $18.69 (ರೂ. 1,491), “ನೇಕೆಡ್…

Read More