Author: KNN IT TEAM

ಚೆನ್ನೈ: ಪ್ಯಾನ್ ಇಂಡಿಯಾ ನಿರ್ದೇಶಕ ಮಣಿರತ್ನಂ ಅವರಿಗೆ ಸೋಮವಾರ ಕೋವಿಡ್ ಪಾಸಿಟಿವ್ ಬಂದಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಣಿರತ್ನಂ ಕಳೆದ ವಾರ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಪೊನ್ನಿಯಿನ್ ಸೆಲ್ವನ್’ನ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಜುಲೈ 8 ರಂದು ಚೆನ್ನೈನಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಬಿಡುಗಡೆ ಸಮಾರಂಭದಲ್ಲಿ ಜಯಂ ರವಿ, ಕಾರ್ತಿ, ವಿಕ್ರಮ್ ಪ್ರಭು, ತ್ರಿಶಾ ಮತ್ತು ಎಆರ್ ರೆಹಮಾನ್ ಸೇರಿದಂತೆ ಸಿಬ್ಬಂದಿ ಮತ್ತು ಮಾಧ್ಯಮದವರು ಭಾಗವಹಿಸಿದ್ದರು. ಈ ಮೊದಲು ಮಣಿರತ್ನಂ ಅವರು ತಮ್ಮ ಮಗ ನಂದನ್ ಅವರೊಂದಿಗೆ ವಿದೇಶದಿಂದ ಮರಳಿದ ನಂತರ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಕ್ಕಾಗಿ ಸುದ್ದಿಯಲ್ಲಿದ್ದರು https://kannadanewsnow.com/kannada/watching-bharachukki-falls-on-a-smuggled-route-tourists-punished-by-police/ https://kannadanewsnow.com/kannada/police-case-against-those-who-forced-girls-to-remove-bra-at-kerala-neet-exam-centre/

Read More

ಬೆಂಗಳೂರು :  ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಒಕ್ಕಲಿಗರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/water-breaks-out-at-ramakolli-in-kodagu-hill-breaches-over-25-acres/ ಜುಲೈ 17 ರಂದು ನಡೆದ ಒಕ್ಕಲಿಗರ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗ ಸಮುದಾಯದ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಶ ಒದಗಿಬಂದಿದೆ. ಮುಂದಿನ ಚುನಾವಣೆಯಲ್ಲಿ ಒಕ್ಕಲಿಗರ ಸಮುದಾಯವು ಈ ಅವಕಾಶ ತಪ್ಪಿಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಈ ಮೂಲಕ ತಾವೂ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. https://kannadanewsnow.com/kannada/bigg-news-indian-rupee-hits-record-low-again-rises-to-rs-80-against-us-dollar/ ಇನ್ನು ಕಾಂಗ್ರೆಸ್ ನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಾವೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ಸಮಯದಲ್ಲೇ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. https://kannadanewsnow.com/kannada/early-morning-violence-in-silicon-city/

Read More

ಮಡಿಕೇರಿ :  ತಾಲೂಕು ಮದೆಗ್ರಾಮದ ಸೆಕೆಂಡ್‌ ಮೊಣ್ಣಂಗೇರಿಯ ರಾಮಕೊಲ್ಲಿ ಎಂಬಲ್ಲಿ ಭೂಮಿಯ ಒಳಗಿಂದ ಭಾರೀ ಸದ್ದು ಕೇಳಿ ಬರುತ್ತಿದ್ದು, 25 ಎಕರೆಯಷ್ಟು ಪ್ರದೇಶದಲ್ಲಿ ಜಲ ಸ್ಪೋಟ ಸಂಭವಿಸಿದೆ.  ಕೆಸರು ಮಿಶ್ರಿತ ನೀರು ಬೆಟ್ಟ ಪ್ರದೇಶಗಳಿಂದ ಹರಿದು ಬರುತ್ತಿದೆ.  30ಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಜನರನ್ನು ಬೇರೆಗೆ ಸ್ಥಳಾಂತರ ಮಾಡಲಾಗಿದೆ. https://kannadanewsnow.com/kannada/watching-bharachukki-falls-on-a-smuggled-route-tourists-punished-by-police/

Read More

ಕೊಪ್ಪಳ: ತುಂಗಭದ್ರ ಡ್ಯಾಂನಿಂದ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಹಿನ್ನೆಲೆಯಲ್ಲಿ ನಡುಗಡ್ಡೆ ಪ್ರದೇಶ ನವಬೃಂದಾವನ ಗಡ್ಡಿ ಸಂಪರ್ಕ ಕಡಿತಗೊಂಡಿದೆ. https://kannadanewsnow.com/kannada/early-morning-violence-in-silicon-city/ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನವಬೃಂದಾವನ ಗಡ್ಡಿ ಸಂಚಾರ ಬಂದ್‌ ಆಗಿದೆ. ಹೀಗಾಗಿ ನವಬೃಂದಾವನ ಗಡ್ಡೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಉತ್ತರಾಧಿಮಠದಿಂದ ಮಹೋತ್ಸವ ನಡೆಯಬೇಕಿತ್ತು.ನದಿಗೆ ಅಪಾರ ಪ್ರಮಾಣ ನೀರು ಬಿಟ್ಟಿದ್ದರಿಂದ ಎರಡು ಧಾರ್ಮಿಕ ಕಾರ್ಯಕ್ರಮಗಳು ರದ್ದುಗೊಳಿಸಲಾಗಿದೆ. ಇದೀಗ ಭಕ್ತರಿಲ್ಲದೆ ಶಾಂತವಾಗಿರೋ ನವಬೃಂದಾವನ.ಡ್ರೋಣ್ ಕ್ಯಾಮರಾದಲ್ಲಿ ನವಬೃಂದಾವನ ನಡುಗಡ್ಡೆ ದೃಶ್ಯ ಸೆರೆಯಾಗಿದೆ.

Read More

ನವದೆಹಲಿ : ಭಾರತೀಯ ರೂಪಾಯಿ ಮತ್ತೊಂದು ದಾಖಲೆಯ ಕುಸಿತವನ್ನು ಕಂಡಿದೆ. ಈ ವಾರದ ಸೆಂಟ್ರಲ್ ಬ್ಯಾಂಕ್ ಸಭೆಗಳ ಮೇಲೆ ಮತ್ತು ಯುಎಸ್ ಫೆಡರಲ್ ರಿಸರ್ವ್‌ನ ಮೇಲೆ ವ್ಯಾಪಾರಿಗಳು ಗಮನಹರಿಸುವುದರಿಂದ, ರೂಪಾಯಿಯು ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 80ರೂ.ಗೆ ಮುಟ್ಟಿದೆ. ಕಚ್ಚಾತೈಲದ ಬೆಲೆ ಏರಿಕೆ, ಹೆಚ್ಚುತ್ತಿರುವ ವ್ಯಾಪಾರ ಕೊರತೆ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರ ನಿರಂತರ ಹೊರಹರಿವು ಕೆಲವು ಸಮಯದಿಂದ ರೂಪಾಯಿಯನ್ನು ಒತ್ತಡದಲ್ಲಿರಿಸಿದೆ.  ಇದು ಈ ವರ್ಷ ಯುಎಸ್ ಡಾಲರ್ ವಿರುದ್ಧ ಸುಮಾರು ಶೇಕಡಾ 7 ರಷ್ಟು ಕುಸಿದಿದೆ. ಡಿಸೆಂಬರ್ 31, 2014 ರಿಂದ ಭಾರತೀಯ ರೂಪಾಯಿ ಸುಮಾರು 25 ಪ್ರತಿಶತದಷ್ಟು ಕುಸಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 18 ರಂದು ಲೋಕಸಭೆಯಲ್ಲಿ ಹೇಳಿದರು. ರಷ್ಯಾ-ಉಕ್ರೇನ್ ಸಂಘರ್ಷ, ಕಚ್ಚಾತೈಲದ ಬೆಲೆ ಏರಿಕೆ ಮತ್ತು ಜಾಗತಿಕ ಹಣಕಾಸು ಪರಿಸ್ಥಿತಿಗಳ ಬಿಗಿತದಂತಹ ಜಾಗತಿಕ ಅಂಶಗಳು ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ್ದರು. ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರು 2022-23 ರಲ್ಲಿ ಇದುವರೆಗೆ ಭಾರತೀಯ…

Read More

ಚಾಮರಾಜನಗರ : ಕಳೆದ ಹತ್ತು ದಿನಗಳಿಂದ ಸುರಿದ ಭಾರೀ ಮಳೆಯ ಆರ್ಭಟಕ್ಕೆ ಭರಚುಕ್ಕಿ ಫಾಲ್ಸ್‌ ಮೈದುಂಬಿ ಹರಿಯುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಂದ ಜಲಪಾತದಲ್ಲಿ ಹೊರ ಹರಿವು ಹೆಚ್ಚಳವಾಗಿರುವ ಕಾರಣಕ್ಕಾಗಿ, ಯಾರು ಫಾಲ್ಸ್‌ ಬಳಿ ತೆರಳದಂತೆ    ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಚರಿಕೆ ನೀಡಲಾಗಿತ್ತು. ಇದೀಗ  ಒಂದಷ್ಟು ಪ್ರವಾಸಿಗರು  ಕಳ್ಳದಾರಿಯಲ್ಲಿ ಭರಚುಕ್ಕಿ ಫಾಲ್ಸ್‌ ವೀಕ್ಷಣೆ ಮಾಡಿದ್ದಾರೆ. ವೀಕ್ಷಣೆ ಮಾಡಿದ ಪ್ರವಾಸಿಗರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ ನೀಡಲಾಗಿದೆ.

Read More

ಕೊಲ್ಲಂ (ಕೇರಳ): ದೇಶದಲ್ಲಿ ಭಾನುವಾರ ನಡೆದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ನಡೆದಿತ್ತು. ಈ ವೇಳೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ತಪಾಸಣೆ ವೇಳೆ ಯುವತಿಯರಿಗೆ ಒಳಉಡುಪು ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಒತ್ತಾಯಿಸಲಾಗಿತ್ತು. ಈ ಬಗ್ಗೆ ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ, ಇಂತಹ ಸೂಚನೆ ನೀಡಿದವರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 354 [ಹೆಣ್ಣಿನ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ] ಮತ್ತು 509 [ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ] ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲ್ಲಂ ಜಿಲ್ಲೆಯ ಆಯುರ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ನೀಟ್ ಪರೀಕ್ಷೆಗೆ ಹಾಜರಾಗುವ ವೇಳೆ ಅವಮಾನಕರ ಅನುಭವವನ್ನು ಎದುರಿಸಿದ ಬಾಲಕಿಯ ದೂರು ನೀಡಿದ್ದಳು. ಮಹಿಳಾ ಅಧಿಕಾರಿಗಳ ತಂಡವು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ…

Read More

ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಪುಂಡರು ಅಟ್ಟಹಾಸ ಮೆರದಿದ್ದಾರೆ. ರಾಬರಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೊಲೀಸರಿಗೆ ಕಿಮ್ಮತ್ತು ನೀಡದೆ ಬೆಂಗಳೂರಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಜುಲೈ 18 ರ ಬೆಳಗ್ಗೆ 6 ಗಂಟೆಗೆ ಲಾಂಗ್ ತೋರಿಸಿ ದರೋಡೆ ಮಾಡಿರೋದು ಬೆಳಕಿಗೆ ಬಂದಿದೆ. ಡಿ.ಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಗೋಕುಲ‌ ಲೇಔಟ್ ನಲ್ಲಿ ಘಟನೆ ನಡೆದಿದೆ. ನಡೆದುಕೊಂಡು ಬರ್ತಿದ್ದ ಯುವಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಮೊಬೈಲ್ ಹಾಗೂ ಹಣ ಕಿತ್ತು ಪರಾರಿಯಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಈ ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ನವದೆಹಲಿ : ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 15,528 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 15,528 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 25 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 5,25,785 ಕ್ಕೆ ಏರಿಕೆಯಾಗಿದೆ. ಕೋವಿಡ್-19 | ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 15,528 ಹೊಸ ಪ್ರಕರಣಗಳು ಮತ್ತು 25 ಸಾವುಗಳು ದಾಖಲಾಗಿವೆ. 1,43,654 ಸಕ್ರಿಯ ಪ್ರಕರಣಗಳಿವೆ. India records 15,528 new COVID19 cases today; Active caseload at 1,43,654 pic.twitter.com/VgTiwGrYp6 — ANI (@ANI) July 19, 2022

Read More

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 15,528 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 15,528 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 525785 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಇಂದು 15,528 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣ 1,43,654 https://twitter.com/ANI/status/1549242788679929862

Read More