Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ರಾಜ್ಯದಲ್ಲಿ ಹಿಜಾಬ್, ಹಲಾಲ್ ವಿವಾದದ ಬಳಿಕ ಮತ್ತೊಂದ ವಿವಾದ ಶುರುವಾಗುವ ಲಕ್ಷಣಗಳು ಕಂಡುಬರುತ್ತಿದ್ದು, ಮದರಸಾಗಳಲ್ಲಿನ ಪಠ್ಯ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. https://kannadanewsnow.com/kannada/bless-me-too-dkshi-expressed-his-desire-to-become-the-cm-of-ramanagara-as-well/ ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿದ್ದು, ಮದರಸಾಗಳಲ್ಲಿ ಮಕ್ಕಳಿಗೆ ಇತಿಹಾಸ, ಹಾಗೂ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಪಾಠ ಬೋಧನೆ ಇಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮದರಸಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಮದರಸಾಗಳಲ್ಲಿ ಪಠ್ಯ ಬದಲಾವಣೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. https://kannadanewsnow.com/kannada/bigg-news-state-government-cancels-nomination-of-12-chairpersons-of-urban-development-authority/ ಮದರಸದಲ್ಲಿ ಶಿಕ್ಷಣ ಮಕ್ಕಳಿಗೆ ಬೆಳವಣಿಗೆ ಪೂರಕವಾಗಿಲ್ಲ ಎಂದು ಕೆಲ ಪೋಷಕರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಎಲ್ಲ ಮಕ್ಕಳನ್ನು ಶಿಕ್ಷಣ ಇಲಾಖೆಯ ಎನ್ರೂಲ್ ಮೆಂಟ್ ವ್ಯಾಪ್ತಿಗೆ ತರಬೇಕು. ಎಲ್ಲ ಮಕ್ಕಳು ಸಮಾಜ, ವಿಜ್ಞಾನ, ಗಣಿತ, ಇತಿಹಾಸ ಕಲಿಯುವುದು ಕಡ್ಡಾಯವಾಗಿದ್ದು, ಮದರಸಾಗಳಲ್ಲೂ ಮಕ್ಕಳು ಸಮಾಜ, ವಿಜ್ಞಾನ, ಗಣಿತ, ಇತಿಹಾಸ ಕಲಿಸುವಂತೆ ಶಿಕ್ಷಣ ಇಲಾಖೆಗೆ ಬೇಡಿಕೆ ಬಂದಿದೆ ಎಂದು ತಿಳಿಸಿದ್ದಾರೆ.
ರಾಮನಗರ : ನಿನ್ನೆ ತಡರಾತ್ರಿ ರಾಮನಗರದಲ್ಲಿ ನಡೆದ ಕರಗ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮಾತನಾಡಿ ʻಸಿಎಂ ಆಗುವ ಆಸೆʼಯನ್ನುಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ನೀವು ಎಲ್ಲಾರಿಗೂ ಅವಕಾಶ ಮಾಡಿಕೊಟ್ಟಿದ್ದೀರಿ, ದೇವೇಗೌಡ, ಕುಮಾರಣ್ಣಗೆ ಅವಕಾಶ ಮಾಡಿಕೊಟ್ಟಿದ್ದೀರಿ ನಾನು ಒಕ್ಕಲಿಗನೇ ನನಗೂ ಅವಕಾಶ ಮಾಡಿಕೊಡಿ ಎಂದು ಡಿಕೆಶಿ ಕುಮಾರ್ ಒಕ್ಕೊರಲಿನಿಂದ ಮನವಿ ಮಾಡಿದ್ದಾರೆ. ಇಲ್ಲಿ ಯಾರೋ ಹುಡುಗ ನನಗೆ ಹೂವಿನ ಹಾರ ಹಾಕ್ತಿದ್ದರು, ನನಗೆ ಹೂವಿನ ಹಾರ ಬೇಡ ನನಗೆ ಇಲ್ಲಿನ ಅಭ್ಯರ್ಥಿ ಯನ್ನು ಗೆಲ್ಲಿಸಿ ನಿಮ್ಮೂರಿನ ಮಗನನ್ನು ನಿಲ್ಲಿಸಿದ್ದೇವೆ , ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ರಾಮನಗರದಲ್ಲಿ ಸಿಎಂ ಆಗುವ ಆಸೆಯನ್ನು ಡಿಕೆಶಿವಕುಮಾರ್ ಮನವಿ ಮಾಡಿದ್ದಾರೆ.
ಬೆಂಗಳೂರು : ಇತ್ತೀಚೆಗಷ್ಟೇ ಕೆಲವು ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಯನ್ನು ರದ್ದುಪಡಿಸಿದ್ದ ರಾಜ್ಯ ಸರ್ಕಾರ ಇದೀಗ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದೆ. https://kannadanewsnow.com/kannada/3-doctors-barred-from-duty-after-woman-delivers-outside-delhi-hospital/ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ.ಕೆ ಅವರು ಅಧಿಸೂಚನೆ ಹೊರಡಿಸಿದ್ದು, ಇಂದು ಒಟ್ಟು 12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದ್ದಾರೆ. https://kannadanewsnow.com/kannada/bigg-news-spoken-english-class-to-be-held-in-government-schools-from-this-year-education-department/
ದೆಹಲಿ: ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಲು ಬಂದ ಮಹಿಳೆಯನ್ನು, ದಾಖಲಿಸಿಕೊಳ್ಳಲು ನಿರಾಕರಿಸಲಾಗಿದ್ದು, ಆಕೆ ಆಸ್ಪತ್ರೆ ಹೊರಗೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ ನಡೆದಿದೆ. ಸುದ್ದಿ ತಿಳಿದ ದೆಹಲಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು ಮೂರು ವೈದ್ಯರನ್ನು ಕರ್ತವ್ಯದಿಂದ ನಿರ್ಬಂಧಿಸಿದ್ದು, ಇತರ ಐವರಿಗೆ ಶೋಕಾಸ್ ನೋಟಿಸ್ ನೀಡಿದೆ. ಮಹಿಳೆಗೆ ಹೆರಿಗೆ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಸಫ್ದರ್‌ಜಂಗ್ ಆಸ್ಪತ್ರೆಯಿಂದ ವರದಿ ಕೇಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಕೆಲವು ಮಹಿಳೆಯರು ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯ ಸುತ್ತ ಸೀರೆಯಿಂದ ಮರೆ ಮಾಡಿ ನಿಂತಿರುವುದು ಕಂಡು ಬಂದಿದೆ. ಈ ಸ್ಥಳದಲ್ಲಿ ಕೆಲವು ನರ್ಸ್‌ಗಳೂ ಕಾಣಿಸಿಕೊಂಡಿದ್ದಾರೆ. सफदरजंग अस्पताल कैंपस के अंदर सड़क पर…
ರಾಮನಗರ: ಕುಮಾರಸ್ವಾಮಿ ಸುಕ್ಷೇತ್ರ ರಾಮನಗರದಲ್ಲಿ ನಿಂತು ಡಿ.ಕೆ ಶಿವಕುಮಾರ್ ನೇರ ಸವಾಲ್ ಹಾಕಿದ್ದಾರೆ. ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ ಕಳೆದ ದಿನ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮ ನಡೆದಿತ್ತು. https://kannadanewsnow.com/kannada/drugs-party-case-at-star-hotel-siddhant-kapoor-in-trouble/ ರಾಮನಗರ ಕಾಂಗ್ರೆಸ್ ವತಿಯಿಂದ ನಗರದ ಶ್ರೀರಾಮ ಥಿಯೇಟರ್ ಬಳಿ ಆಯೋಜಿಸಲಾಗಿತ್ತು.ಈ ವೇಳೆ ಮಾತನಾಡಿ ಅವರು, ಕುಮಾರಸ್ವಾಮಿ ಗೂ ಅವಕಾಶ ನೀಡಿದ್ದೀರಿ. ದೇವೇಗೌಡರಿಗೂ ಅವಕಾಶ ನೀಡಿದ್ದೀರಿ. ಆದರೆ ನೀವು ಈಗ ನನಗೂ ಅವಕಾಶ ಕೊಡಿ . ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ. ಹೀಗಾಗಿ ನನಗೆ ಯಾವ ಹೂವಿನ ಹಾರ ಬೇಡ. ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ ಎಂದು ಹೇಳಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರ ಬುಧವಾರ ಕಚ್ಚಾ ತೈಲದ ಮೇಲಿನ ವಿಂಡ್ಫಾಲ್ ತೆರಿಗೆಯನ್ನು ಪ್ರತಿ ಟನ್ಗೆ 23,250 ರೂ.ಗಳಿಂದ 17,000 ರೂ.ಗೆ ಇಳಿಸಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ಇತ್ತೀಚಿನ ಕುಸಿತದ ನಡುವೆ ಈ ಕ್ರಮ ಬಂದಿದೆ. https://kannadanewsnow.com/kannada/nitya-menons-wedding-with-a-popular-malayalam-actor-fixed/?utm_medium=push ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚುತ್ತಿರುವ ಜಾಗತಿಕ ಕಚ್ಚಾ ಬೆಲೆಗಳಿಂದಾಗಿ ದೇಶೀಯ ಕಚ್ಚಾತೈಲ ಉತ್ಪಾದಕರು ಸಂಗ್ರಹಿಸುತ್ತಿರುವ ಅನಿರೀಕ್ಷಿತ ಲಾಭವನ್ನು ಗಣನೆಗೆ ತೆಗೆದುಕೊಂಡು, ಕೇಂದ್ರವು ಜುಲೈ 1 ರಂದು ಕಚ್ಚಾ ತೈಲದ ಮೇಲೆ ಪ್ರತಿ ಟನ್ಗೆ 23,250 ರೂ.ಗಳ ಸೆಸ್ ವಿಧಿಸಿತ್ತು. ದೇಶೀಯ ಕಚ್ಚಾ ಉತ್ಪಾದಕರು ಕಚ್ಚಾತೈಲವನ್ನು ದೇಶೀಯ ಸಂಸ್ಕರಣಾಗಾರಗಳಿಗೆ ಅಂತರರಾಷ್ಟ್ರೀಯ ಸಮಾನ ಬೆಲೆಗಳಲ್ಲಿ ಮಾರಾಟ ಮಾಡುತ್ತಾರೆ. ಅನಿರೀಕ್ಷಿತ ಅಥವಾ ಅನಿರೀಕ್ಷಿತವಾಗಿ ದೊಡ್ಡ ಲಾಭದ ಮೇಲೆ ವಿಧಿಸುವ ತೆರಿಗೆಯನ್ನು ವಿಂಡ್ ಫಾಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಹೊಸ ದರಗಳು ಇಂದಿನಿಂದ ಅಂದರೆ ಬುಧವಾರದಿಂದ ಜಾರಿಗೆ ಬರಲಿವೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ. ಇದಲ್ಲದೆ, ಇತ್ತೀಚೆಗೆ ರಫ್ತುಗಳ ಮೇಲೆ ಡೀಸೆಲ್ ಮೇಲೆ ಪ್ರತಿ ಲೀಟರ್ಗೆ 13 ರೂ.ಗಳಂತೆ ವಿಧಿಸಲಾದ…
ಬೆಂಗಳೂರು : ಕನ್ನಡ ಮಾಧ್ಯಮ ಶಾಲೆಗಳನ್ನು ( Kannada Medium School ) ಉಳಿಸಿ, ಬೆಳೆಸಲು ಕನ್ನಡ ಮಾಧ್ಯಮದ ಜೊತೆಗೆ ಉದ್ದೇಶಿತ ‘ಸರ್ಕಾರಿ ಮಾದರಿ ಶಾಲೆ’ಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ‘ಸ್ಪೋಕನ್ ಇಂಗ್ಲೀಷ್’ ( Spoken English ) ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. https://kannadanewsnow.com/kannada/nitya-menons-wedding-with-a-popular-malayalam-actor-fixed/ ಪ್ರಸಕ್ತ ವರ್ಷದಿಂದಲೇ ರಾಜ್ಯದ ಶಾಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸಲು ತಯಾರಿ ಮಾಡಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂವಹನ ಹಾಗು ಶಿಕ್ಷಣ ಪಡೆಯುವ ಉದ್ದೇಶದಿಂದ ಪ್ರಸಕ್ತ ವರ್ಷದಿಂದಲೇ ಇಂಗ್ಲೀಷ್ ಸ್ಪೋಕನ್ ಕ್ಲಾಸ್ ಶುರು ಮಾಡಲು ಮುಂದಾಗಿದೆ. ಸರ್ಕಾರಿ ಶಾಲೆಗಳಲ್ಲಿರುವ ಇಂಗ್ಲೀಷ್ ಶಿಕ್ಷಕರಿಗೆ ಈ ಬಗ್ಗೆ ವಿಶೇಷ ತರಬೇತಿ ಹಾಗು ಕೌಶಲ್ಯ ಹೆಚ್ಚಿಸಲು ಸಿದ್ಧತೆ ಮಾಡಲಾಗುತ್ತಿದೆ. https://kannadanewsnow.com/kannada/good-news-good-news-for-economically-weaker-women-applications-invited-for-subsidy-under-udyogini-scheme-2/ ಖಾಸಗಿ ಶಾಲೆಗಳು ಮತ್ತು ಇಂಗ್ಲೀಷ್ ಮಾಧ್ಯಮ ಶಿಕ್ಷಣದ ವ್ಯಾಮೋಹ ಬಹಳಷ್ಟು ಜನರಲ್ಲಿದೆ. ಗುಣಮಟ್ಟ ಹೇಗಾದರೂ ಇರಲಿ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕು ಎನ್ನುವ ಆಸೆ ಪಾಲಕರಲ್ಲಿ ಇದೆ. ರಾಜ್ಯದಲ್ಲಿನ ಕೆಪಿಎಸ್ ಶಾಲೆಗಳಲ್ಲೂ ಕೂಡ ಇಂಗ್ಲೀಷ್ ಮಾಧ್ಯಮಕ್ಕೆ ಮಕ್ಕಳನ್ನು…
ಬೆಂಗಳೂರು: ಸ್ಟಾರ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾಂತ್ ಕಪೂರ್ ಗೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪೆಡ್ಲರ್ ಗಳ ಮಾಹಿತಿ ಪಡೆಯಲು ಹಲಸುರು ಪೊಲೀಸ ರಿಂದ ನೋಟಿಸ್ ಜಾರಿ ಮಾಡಿದ್ದಾರೆ. https://kannadanewsnow.com/kannada/navyashree-demands-rs-50-lakh-rajkumar-takale-alleges/ ವಾಟ್ಸ್ ಆಪ್ ಹಾಗೂ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಸಿದ್ಧಾಂತ್ ಕಪೂರ್ ಒಂದು ಬಾರಿ ವಿಚಾರಣೆ ಮಾಡಿ ಪೊಲೀಸರು ಕಳುಹಿಸಿದ್ದರು. ಸದ್ಯ ಸಿದ್ಧಾಂತ್ ಕಪೂರ್ ಅನ್ನು ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಯುತ್ತಿದೆ. ನಟಿ ಶ್ರದ್ಧಾ ಕಪೂರ್ ಸಹೋದರನಿಗೆ ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. https://kannadanewsnow.com/kannada/navyashree-demands-rs-50-lakh-rajkumar-takale-alleges/ ಪಾರ್ಟಿಯಲ್ಲಿ ಅಂದು ನೀರಿನಲ್ಲಿ ಯಾರೋ ಏನೋ ಬೆರೆಸಿ ಕೊಟ್ಟಿದ್ದರು ಎಂದಿದ್ದ ಸಿದ್ಧಾಂತ್ ಕಪೂರ್. ಪಾರ್ಟಿ ನಡೆದ ದಿನ ಮಾಡಿಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿದ್ದು ಸಾಬೀತಾಗಿತ್ತು. ಈ ಹಿನ್ನೆಲೆ ಮತ್ತೊಮ್ಮೆ ವಿಚಾರಣೆ ನಡೆಸಲು ಪೊಲೀಸರು ತಯಾರು ನಡೆಸಿದ್ದಾರೆ.
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಸೆಲೆಬ್ರಿಟಿಗಳ ಮದುವೆ, ವೈಯಕ್ತಿಕ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಿರುತ್ತದೆ. ಭಾರತೀಯ ಚಿತ್ರರಂಗದಲ್ಲಿ ಇದೀಗ ಸಾಲು ಸಾಲು ನಟ ನಟಿಯರು ಈ ವರ್ಷದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದರಲ್ಲೂ ನಯನತಾರಾ-ವಿಘ್ನೇಶ್ ಶಿವನ್ ರಿಂದ ಹಿಡಿದು ಆಲಿಯಾ ಭಟ್-ರಣಬೀರ್ ಕಪೂರ್ ವರೆಗೆ, ಅನೇಕ ಸೆಲೆಬ್ರಿಟಿಗಳು ಈ ವರ್ಷ ಮದುವೆಯಾಗಿದ್ದಾರೆ. https://kannadanewsnow.com/kannada/pm-modi-interacts-with-indian-contingent-bound-for-cwg/ ಇದೀಗ, ನಿತ್ಯಾ ಮೆನನ್ ಈ ಪಟ್ಟಿಗೆ ಸೇರುವ ಸಾಧ್ಯತೆಯಿದೆ ಎಂದು ಭಾರೀ ಸುದ್ದಿಯಾಗುತ್ತಿದೆ. ವರದಿಗಳ ಪ್ರಕಾರ, ನಟಿ ಮಲಯಾಳಂನ ಜನಪ್ರಿಯ ನಟನೊಂದಿಗೆ ಸಂಬಂಧದಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲು ಸಜ್ಜಾಗಿದ್ದಾರೆ. ಅಧಿಕೃತ ಪ್ರಕಟಣೆಗಾಗಿ ಇನ್ನೂ ಕಾಯಲಾಗುತ್ತಿದೆ. https://kannadanewsnow.com/kannada/pm-modi-interacts-with-indian-contingent-bound-for-cwg/ ನಿತ್ಯಾ ಮೆನನ್ ಕೊನೆಯದಾಗಿ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅವರ ಭೀಮ್ಲಾ ನಾಯಕ್ ನಲ್ಲಿ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡರು. ಅವರ ಅಭಿನಯವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ ಮದುವೆಯ ಊಹಾಪೋಹಕ್ಕೆ ಕಾರಣ ನಟಿ ತನ್ನ ಮದುವೆಯ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ…
ಹೈದರಾಬಾದ್: ಆನ್‌ಲೈನ್ ಲೋನ್ ಆ್ಯಪ್‌ಗಳ ಸಂಘಟಕರು ಎರವಲು ಪಡೆದ ಹಣವನ್ನು ಮರುಪಾವತಿಸುವಂತೆ ಕಿರುಕುಳ ನೀಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ವರದಿಯ ಪ್ರಕಾರ, ಇಲ್ಲಿನ ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ಅಗ್ನಿಶಾಮಕ ಸಿಬ್ಬಂದಿ ತ್ವರಿತ ಸಾಲದ ಅಪ್ಲಿಕೇಶನ್‌ಗಳಿಂದ ಸಾಲ ಪಡೆದಿದ್ದರು. ಆದರೆ, ಕೆಲವು ಹಣಕಾಸಿನ ಸಮಸ್ಯೆಗಳಿಂದ ಅದನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಅವರ ಶವ ಮಂಗಳವಾರ ರೈಲ್ವೆ ನಿಲ್ದಾಣದ ಬಳಿಯ ಹಳಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ ಅಗ್ನಿಶಾಮಕ ಸಿಬ್ಬಂದಿಯ ಕುಟುಂಬ ಸದಸ್ಯರ ಪ್ರಕಾರ, ಆ್ಯಪ್‌ಗಳ ಏಜೆಂಟ್‌ಗಳು ಹಣವನ್ನು ಮರುಪಾವತಿ ಮಾಡದಿದ್ದಕ್ಕೆ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. https://kannadanewsnow.com/kannada/renowned-former-athlete-pt-usha-to-take-oath-as-rajya-sabha-mp-today/ https://kannadanewsnow.com/kannada/sri-lanka-crisis-senior-indian-official-injured-in-night-assault-near-colombo/